Saturday, February 14, 2026
Saturday, February 14, 2026
Home Blog Page 1760

ಸಾಮಾನ್ಯ ಶೀತ ಕೆಮ್ಮು ಕೊರೋನ ಅಲ್ಲ-ಡಾ.ಬಾಲರಾಜ್

0

ರಾಜ್ಯದಲ್ಲಿ ಮನೆ-ಮನೆಗಳಲ್ಲಿ ಜನ ಶೀತ, ಕೆಮ್ಮು ,ಮೈಕೈ ನೋವು, ಜ್ವರದಿಂದ ಬಳಲುತ್ತಿದ್ದಾರೆ. ಹವಾಮಾನದ ಬದಲಾವಣೆಯಿಂದ ಉಂಟಾಗಿರುವ ಈ ಸಮಸ್ಯೆಗೂ ಕೊರೋನಾ ಲಕ್ಷಣಗಳಿಗೂ ಸಾಮ್ಯತೆ ಇರುವದರಿಂದ ಕೆಲವರು ಆತಂಕಪಡುವುದು ಕಂಡುಬರುತ್ತಿದೆ. ಆದರೆ, ಎಲ್ಲ ಜ್ವರ, ಗಂಟಲು ನೋವುಗಳು ಕೊರೋನಾ ಅಲ್ಲ.

ಹೆಚ್ಚಾಗಿ ಸಾಮಾನ್ಯ ಶೀತ, ಜ್ವರವೇ ಆಗಿರುತ್ತದೆ. ಆದ್ದರಿಂದ ಯಾರೂ ಆತಂಕಪಡಬೇಕಾಗಿಲ್ಲ ಎಂದು ತಜ್ಞ ವೈದ್ಯರು ಸಲಹೆ ನೀಡಿದ್ದಾರೆ.

“ಶೀತ, ಕೆಮ್ಮು, ಮೈಕೈ ನೋವು ಕಾಣಿಸಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಹತ್ತರಲ್ಲಿ ಏಳು ಜನರಿಗೆ ಈ ರೀತಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಇವು ಕೊರೋನಾದ ಸೌಮ್ಯ ಲಕ್ಷಣಗಳಾಗಿವೆ. ಕೋವಿಡ್ ಸಂಪರ್ಕಿ ತರ ಸಂಪರ್ಕಕ್ಕೆ ಬಾರದವರಲ್ಲೂ ಈ ರೀತಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಕೆಲವರು ಪರೀಕ್ಷೆ ಮಾಡಿಸಿಕೊಳ್ಳುತ್ತಾರೆ. ಇನ್ನು ಕೆಲವರು ಪರೀಕ್ಷೆ ಮಾಡಿಸುವುದಿಲ್ಲ. ಪರೀಕ್ಷೆ ಮಾಡಿಸಿದಾಗ ಅನೇಕ ಜನರಲ್ಲಿ ಪಾಸಿಟಿವ್ ಬಂದಿದೆ.

ಈ ರೀತಿಯ ಲಕ್ಷಣಗಳು ಇರುವವರಿಗೆ ಸಾಮಾನ್ಯವಾಗಿ ಶೀತ, ಕೆಮ್ಮಿಗೆ ನೀಡುವ ಮಾತ್ರೆ, ಔಷಧ ನೀಡಲಾಗುತ್ತದೆ. ಇವರು ಮೂರರಿಂದ ನಾಲ್ಕು ದಿನಗಳಲ್ಲಿ ಗುಣಮುಖರಾಗುತ್ತಾರೆ ಎಂದು ಕಿಮ್ಸ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ಪ್ರಾಧ್ಯಾಪಕರಾದ ಡಾ. ಕೆ. ಪಿ. ಬಾಲರಾಜ್ ಅವರು ಹೇಳಿದ್ದಾರೆ.

ಹೆಚ್ಚಿನವರು ಕೊರೋನಾ ಎರಡು ಡೋಸ್ ಲಸಿಕೆ ಪಡೆದಿರುವುದರಿಂದ ಸೋಂಕು ಹೆಚ್ಚಾಗಿ ಉಲ್ಬಣಗೊಳ್ಳುತ್ತಿಲ್ಲ. ಈ ರೀತಿಯ ಲಕ್ಷಣವುಳ್ಳ ಬಹಳಷ್ಟು ಜನರಿಗೆ ಸಾಮಾನ್ಯ ನೆಗಡಿ, ಕೆಮ್ಮು, ಶೀತಕ್ಕೆ ಔಷಧ ಪಡೆದುಕೊಂಡ ಕೂಡಲೇ ಕಡಿಮೆಯಾಗುತ್ತದೆ. ಆದ್ದರಿಂದ ಹೆಚ್ಚಿನವರು ಕೊರೋನಾ ಪರೀಕ್ಷೆ ಮಾಡಿಕೊಳ್ಳಬೇಕು ಎನ್ನುವುದರೊಳಗೆ ಗುಣಮುಖರಾಗುತ್ತಿದ್ದಾರೆ ಎಂದು ಬಾಲರಾಜ್ ಅವರು ಹೇಳಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಸ್ಮಾರ್ಟ್ ಸಿಟಿ ಕಾಮಗಾರಿ ಹೊಣೆಗಾರಿಕೆಯಿಂದ ಕೂಡಿದೆ

0

ಸ್ಮಾರ್ಟ್ ಸಿಟಿ ಕಾಮಗಾರಿಗಳು ಹಾಗೂ ನಿರ್ವಹಣೆ ವೈಜ್ಞಾನಿಕವಾಗಿದೆ. ಹಣಕಾಸು ನಿರ್ವಹಣೆ ಹಾಗೂ ಗುಣಮಟ್ಟ ಚಾಲನೆಯಲ್ಲಿ ಯಾವುದೇ ವ್ಯತ್ಯಯವಾಗಿರುವುದಿಲ್ಲ ಎಂದು ಸ್ಮಾರ್ಟ್ ಸಿಟಿ ಲಿ. ವ್ಯವಸ್ಥಾಪಕ ನಿರ್ದೇಶಕ ಚಿದಾನಂದ ಎಸ್.ವಟಾರೆ ತಿಳಿಸಿದ್ದಾರೆ.
ಸ್ಮಾರ್ಟ್ ಸಿಟಿಗೆ ಸಂಬಂಧಿಸಿದಂತೆ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುವ ಆಕ್ಷೇಪಗಳ ಬಗ್ಗೆ ವಿವರಣೆ ನೀಡಿರುವ ಅವರು, ಸ್ಮಾರ್ಟ್ ಸಿಟಿ ಕಾಮಗಾರಿಗಳು ಹಾಗೂ ನಿರ್ವಹಣೆ ವೈಜ್ಞಾನಿಕವಾಗಿದ್ದು, ವಿವರಣಾತ್ಮಕ ಯೋಜನಾ ವರದಿ (ಡಿ.ಪಿ.ಆರ್) ತಯಾರಿಕಾ ಹಂತದಿಂದ ತಾಂತ್ರಿಕ ಪರಿಣಿತರೇ ಈ ಯೋಜನೆಯಲ್ಲಿ ತೊಡಗಿಕೊಂಡಿರುತ್ತಾರೆ. ಡಿ.ಪಿ.ಆರ್. ಅನ್ನು ಪ್ರತಿಷ್ಟಿತ ಟಾಟಾ ಕನ್ಸಲ್ಟಿಂಗ್ ಇಂಜಿನಿಯರ್ ಇವರು ತಯಾರಿಸಿರುವುದಲ್ಲದೇ ಯೋಜನಾ ಸಮಾಲೋಚಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ನಂತರ ಯೋಜನೆಗಳ ಅಂದಾಜು ಪಟ್ಟಿ ತಯಾರಿಸಿ ಸೂಕ್ತ ಪ್ರಾಧಿಕಾರದಿಂದ ಆಡಳಿತಾತ್ಮಕ ಮಂಜೂರಾತಿ, ತಾಂತ್ರಿಕ ಮಂಜೂರಾತಿ ಪಡೆದು, ಕೆ.ಟಿ.ಪಿ.ಪಿ ಕಾಯಿದೆಯನ್ವಯ ಟೆಂಡರ್ ಕರೆದು ಅರ್ಹ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಗಿರುತ್ತದೆ.
ಮಂಜೂರಾದ ಅಂದಾಜು ಪಟ್ಟಿಯ ಪರಿಮಾಣದ ಪ್ರಕಾರ ಅನುಷ್ಠಾನಗೊಳಿಸಲಾಗುತ್ತಿದ್ದು, ಈ ಹಂತದಲ್ಲಿ ಯೋಜನಾ ಸಮಾಲೋಚಕರ ತಾಂತ್ರಿಕ ಪರಿಣಿತರು, ಸ್ಮಾರ್ಟ್ ಸಿಟಿಯ ಇಂಜಿನಿಯರುಗಳು ನಿರಂತರವಾಗಿ ಕಾಮಗಾರಿ ನಿರ್ವಹಣೆಯ ಮೇಲ್ವಿಚಾರಣೆ ನಡೆಸುತ್ತಿರುತ್ತಾರೆ. ಪ್ರತಿ ಕಾಮಗಾರಿ ಸ್ಥಳದಲ್ಲಿ ಗುಣಮಟ್ಟ ಪರಿಶೀಲನಾ ಲ್ಯಾಬ್‍ಗಳನ್ನು ಸ್ಥಾಪಿಸಲಾಗಿದೆ. ಯಾವುದೇ ಸಾಮಗ್ರಿಗಳ ಬಳಕೆಗೆ ಮೊದಲು ಗುಣಮಟ್ಟ ಪರಿಶೀಲಿಸಿ ದೃಢೀಕರಿಸಿಕೊಂಡ ನಂತರವೇ, ಕಾಮಗಾರಿಗೆ ಬಳಸಲ್ಪಡುತ್ತದೆ. ಕಾಮಗಾರಿಗಳ ಬೆಲೆ ತಯಾರಿಸುವಾಗ ಗುತ್ತಿಗೆದಾರರು ಯೋಜನಾ ಸಮಾಲೋಚಕರು ಹಾಗೂ ಸ್ಟಾರ್ಟ್‍ಸಿಟಿ ಇಂಜಿನಿಯರುಗಳೊಂದಿಗೆ ಜಂಟಿ ಆಳತೆ ಪರಿಶೀಲನೆ ಮಾಡಲಾಗುತ್ತದೆ. ಮೇಲಾಗಿ ಕಾಮಗಾರಿ ಪೂರ್ಣಗೊಂಡ ನಂತರವೂ ನಿರ್ವಹಣಾ ಅವಧಿಯಲ್ಲಿ ಯಾವುದೇ ಲೋಪ ದೋಷಗಳಿಗೆ ಗುತ್ತಿಗೆದಾರರೇ ಜವಾಬ್ದಾರನ್ನಾಗಿಸಲು ಅವಕಾಶ ಕಲ್ಪಿಸಿಕೊಳ್ಳಲಾಗಿದೆ. ಆದ್ದರಿಂದ ಸ್ಮಾರ್ಟ್ ಸಿಟಿ ಕಾಮಗಾರಿಗಳ ನಿರ್ವಹಣೆಯ ಯಾವುದೇ ಹಂತದಲ್ಲಿ ಅವೈಜ್ಞಾನಿಕ ಅಥವಾ ಗುಣಮಟ್ಟದಲ್ಲಿ ವ್ಯತ್ಯಯ ಆಗಿರುವುದಿಲ್ಲ.
ಹಣಕಾಸು, ಲೆಕ್ಕ ಪತ್ರಗಳ ನಿರ್ವಹಣೆಯನ್ನೂ ಒಳಗೊಂಡಂತೆ ಸ್ಮಾರ್ಟ್ ಸಿಟಿಯ ಎಲ್ಲಾ ವ್ಯವಹಾರಗಳನ್ನು ಪರಿಶೀಲಿಸಲು ನಾಲ್ಕು ಹಂತದ ಪರಿಶೋಧನಾ ವ್ಯವಸ್ಥೆ ಇರುತ್ತದೆ. ಪ್ರಾಥಮಿಕವಾಗಿ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಅಧಿಕಾರಿಗಳು ಎಲ್ಲಾ ಹಣಕಾಸು ವ್ಯವಹಾರಗಳ ಪೂರ್ವ ಲೆಕ್ಕ ಪರಿಶೋಧನೆ ಮಾಡಿ ದಾಖಲೆಗಳನ್ನು ನಿರ್ವಹಿಸುತ್ತಾರೆ. ಜಂಟಿ ಅಳತೆ ಪರಿಶೀಲನೆ ನಂತರ ಗುತ್ತಿಗೆದಾರರ ಬಿಲ್ಲುಗಳನ್ನು ಮೊದಲ ಹಂತದಲ್ಲಿ ಸ್ಟಾರ್ಟ್ ಸಿಟಿ ಯೋಜನಾ ಸಮಾಲೋಚಕರಾದ ಮೆ. ಟಾಟಾ ಕನ್ಸಲ್ಟಿಂಗ್ ಇಂಜಿನಿಯರ್ ಅವರಿಂದ ನೈಜವಾಗಿ ಅನುಷ್ಠಾನಗೊಂಡ ಪ್ರಮಾಣಕ್ಕೆ ಅನುಗುಣವಾಗಿ ಗುಣಮಟ್ಟ ದೃಢೀಕರಣದೊಂದಿಗೆ ಪರಿಶೀಲಿಸಿ ನೀಡಿದ ನಂತರವೇ ಲೆಕ್ಕ ಶಾಖೆಯ ಅಧಿಕಾರಿಗಳು ಬಿಲ್ಲನ್ನು ಆಮೂಲಾಗ್ರವಾಗಿ ಪರಿಶೀಲಿಸಿ ನಿಯಮಾನುಸಾರ ಪಾವತಿಗೆ ಶಿಫಾರಸ್ಸು ಮಾಡುತ್ತಾರೆ.
ಎರಡನೇ ಹಂತದಲ್ಲಿ ಸ್ಮಾರ್ಟ್ ಸಿಟಿಯ ಆಂತರಿಕ ಲೆಕ್ಕ ಪರಿಶೋಧಕರು ಕಂಪನಿಯ ಲೆಕ್ಕ ಪತ್ರಗಳನ್ನು ತ್ರೈಮಾಸಿಕ ಅವಧಿಯಲ್ಲಿ ಪರಿಶೀಲನೆ ಮಾಡಿ ಒಟ್ಟಾರೆ ವಾರ್ಷಿಕ ವರದಿಯನ್ನು ಸ್ಮಾರ್ಟ್ ಸಿಟಿಯ ಅಧಿಕೃತ ಆಡಿಟ್ ಕಮಿಟಿಯಲ್ಲಿ ಮಂಡಿಸಿ, ಸದರಿ ಸಮತಿಯ ಶಿಫಾರಸಿನ ಮೇರೆಗೆ ಮಂಡಳಿಯ ಅನುಮೋದನೆ ಪಡೆಯಲಾಗುತ್ತದೆ. ಮೂರನೇ ಹಂತದಲ್ಲಿ, ಮಹಾಲೇಖಪಾಲರಿಂದ ನಿಯುಕ್ತಿಗೊಳಿಸಲ್ಪಟ್ಟ ಶಾಸನಬದ್ಧ ಲೆಕ್ಕ ಪರಿಶೋಧಕರು ವಾರ್ಷಿಕ ಲೆಕ್ಕಪತ್ರಗಳ ವರದಿಯನ್ನು ವಿವರವಾಗಿ ಪರಿಶೀಲಿಸಿ ಮಹಾಲೇಖಪಾಲರಿಗೆ ದೃಢೀಕರಣಕ್ಕಾಗಿ ಸಲ್ಲಿಸಲಾಗುತ್ತದೆ. ನಾಲ್ಕನೇ ಹಂತದಲ್ಲಿ ಕರ್ನಾಟಕದ ಮಹಾಲೇಖಪಾಲರ (ಸಿಎಜಿ) ಆಡಿಟ್ ತಂಡವು, ಪರಿಶೀಲನೆ ನಡೆಸಿ, ಅವರು ಲೆಕ್ಕ ಪರಿಶೋಧನಾ ವರದಿ ಹಾಗೂ ದೃಢೀಕರಣ ಪತ್ರ ನೀಡುತ್ತಾರೆ. ನಂತರ ವಾರ್ಷಿಕ ವರದಿಯನ್ನು ಸ್ಮಾರ್ಟ್ ಸಿಟಿ ಬೋರ್ಡಿಗೆ ಮಂಡಿಸಿ ಅನುಮೋದನೆ ಪಡೆದು ವಾರ್ಷಿಕ ವರದಿಯ ಪುಸ್ತಕವನ್ನು ಸಹ ಪ್ರಚುರ ಪಡಿಸಲಾಗುತ್ತದೆ.
ಕಳೆದ ನಾಲ್ಕು ವರ್ಷಗಳಲ್ಲಿ ಮೇಲ್ಕಂಡ ಯಾವುದೇ ಹಂತದ ಲೆಕ್ಕ ಪರಿಶೋಧನೆಯಲ್ಲಿ ಹಣಕಾಸು ನಿರ್ವಹಣೆಯೂ ಸೇರಿದಂತೆ ಕಂಪನಿಯ ಯಾವುದೇ ವ್ಯವಹಾರಗಳ ಬಗ್ಗೆ ಆಕ್ಷೇಪಣೆಗಳು ವ್ಯಕ್ತವಾಗಿರುವುದಿಲ್ಲ. ಆದ್ದರಿಂದ ಯಾವುದೇ ಹಂತದಲ್ಲಿ ಹಣಕಾಸು ನಿರ್ವಹಣೆ ಹಾಗೂ ಗುಣಮಟ್ಟ ಚಾಲನೆಯಲ್ಲಿ ಯಾವುದೇ ವ್ಯತ್ಯಯವಾಗಿರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಉತ್ತರಪ್ರದೇಶ ಚುನಾವಣೆ: ಓಬಿಸಿ ಓಲೈಕೆಗೆ ಬಿಜೆಪಿ ಜಾಣನಡೆ

0

ಉತ್ತರಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ಸ್ವಾಮಿ ಪ್ರಸಾದ ಮೌರ್ಯ ಸೇರಿ ಓಬಿಸಿಯ ಕೆಲವು ಪ್ರಮುಖ ನಾಯಕರು ಬಿಜೆಪಿಗೆ ವಿದಾಯ ಹೇಳಿದರು ಓಬಿಸಿ ಮತಗಳನ್ನು ಸೆಳೆಯಲು ತಂತ್ರ ರೂಪಿಸಿರುವ ಬಿಜೆಪಿಯು ಇದೇ ಸಮುದಾಯದ ಹೆಚ್ಚಿನ ಮುಖಂಡರಿಗೆ ಟಿಕೆಟ್ ನೀಡಿದೆ. ಮತ್ತೊಂದೆಡೆ ,ಗೋರಖ್ ಪುರದಿಂದಲೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸ್ಪರ್ಧಿಸುವುದು ಅಧಿಕೃತವಾಗಿದೆ.
ಸಮಾಜವಾದಿ ಪಕ್ಷವು ಎಂದಿಗೂ ದಲಿತ ವಿರೋಧಿ ನೀತಿಯನ್ನೇ ಅನುಸರಿಸುತ್ತಿದೆ. ಸರಕಾರಿ ಉದ್ಯೋಗದಲ್ಲಿರುವ ದಲಿತರಿಗೆ ಬಡ್ತಿ ನೀಡುವ ವಿವೇಕವು ಇಂದಿಗೂ ಬಾಕಿ ಇರುವುದು ಇದಕ್ಕೆ ನಿದರ್ಶನವಾಗಿದೆ. ಇದು ಎಸ್ ಪಿಯ ದಲಿತ ವಿರೋಧಿ ನೀತಿಗೆ ಹಿಡಿದ ಕನ್ನಡಿಯಲ್ಲವೇ ಎಂದು ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿಯವರು ತಿಳಿಸಿದ್ದಾರೆ.
ಬಿಜೆಪಿಯು ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದೆ.107 ಜನರಿಗೆ ಟಿಕೆಟ್ ಘೋಷಿಸಿದೆ. ಯೋಗಿ ಆದಿತ್ಯನಾಥ್ ಹಾಗೂ ಉಪ ಮುಖ್ಯಮಂತ್ರಿ ಕೇಶವಪ್ರಸಾದ್ ಮೌರ್ಯ ಅವರ ಕ್ಷೇತ್ರ ಹೊರತುಪಡಿಸಿದರೆ ಉಳಿದ 105 ಅಭ್ಯರ್ಥಿಗಳ ಭವಿಷ್ಯವು ಮೊದಲ ಹಾಗೂ ಎರಡನೇ ಹಂತದ ಮತದಾನದ ವೇಳೆ ನಿರ್ಧಾರವಾಗಲಿದೆ. ಮೊದಲ ಹಂತದಲ್ಲಿ 57 ಕ್ಷೇತ್ರಗಳಿಗೆ ಫೆಬ್ರುವರಿ 10 ಹಾಗೂ ಎರಡನೇ ಹಂತದಲ್ಲಿ 58 ಕ್ಷೇತ್ರಗಳಿಗೆ ಫೆಬ್ರವರಿ 14ರಂದು ಮತದಾನ ನಡೆಯಲಿದೆ.
ಒಟ್ಟಿನಲ್ಲಿ ಓಬಿಸಿ ಸಮುದಾಯದ ಹಲವು ನಾಯಕರು ರಾಜೀನಾಮೆ ನೀಡಿದರೂ ಓಬಿಸಿ ಸಮುದಾಯದ ಹೆಚ್ಚಿನ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ ಮೂಲಕ ಬಿಜೆಪಿಯು ಜಾಣ ನಡೆ ಅನುಸರಿಸಿದೆ. ಫೆಬ್ರುವರಿ 10 ರಿಂದ ಮಾರ್ಚ್ ಮೂರರ ಅವಧಿಯಲ್ಲಿ ಉತ್ತರಪ್ರದೇಶ 403 ಕ್ಷೇತ್ರಗಳಿಗೆ ಏಳು ಹಂತದಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ತಿಳಿದುಬಂದಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಭಾರತ- ಚೀನ ನಡುವೆ ಭರ್ಜರಿ ವ್ಯಾಪಾರ

0

ಭಾರತ ಮತ್ತು ಚೀನಾ ನಡುವೆ 2021ರಲ್ಲಿ 125 ಶತಕೋಟಿ ಡಾಲರ್ ದ್ವೀಪಕ್ಷೀಯ ವ್ಯಾಪಾರ ನಡೆದಿದೆ.

ಪೂರ್ವ ಲಡಾಕ್ ಭಾಗದಲ್ಲಿ ಗಡಿ ಸಂಘರ್ಷದ ಪರಿಣಾಮ ಸಂಬಂಧ ಹದಗೆಟ್ಟಿದ್ದರ ಹೊರತಾಗಿಯೂ, ಉಭಯ ದೇಶಗಳ ನಡುವಣ ವ್ಯಾಪಾರದಲ್ಲಿ ದಾಖಲೆಯ ಶೇ.43.3 ರಷ್ಟು ಏರಿಕೆಯಾಗಿದೆ. ಚೀನಾದ ಜೊತೆಗೆ ಭಾರತದ ವ್ಯಾಪಾರ ಕೊರತೆಯು 69 ಶತಕೋಟಿ ಡಾಲರ್ ಗೆ ಜಿಗಿದಿದೆ ಎಂದು ಚೀನದ ಸರ್ಕಾರಿ ಮಾಧ್ಯಮ ಗ್ಲೋಬಲ್ ಟೈಮ್ಸ್ ವರದಿ ತಿಳಿಸಿದೆ.

ಚೀನಾ 2021ರ ಜನವರಿ ರಿಂದ ಡಿಸೆಂಬರ್ ಅವಧಿಯಲ್ಲಿ 97. 52 ಶತಕೋಟಿ ಡಾಲರ್ ಮೌಲ್ಯದ ರಫ್ತು ಮಾಡಿತ್ತು.

ಇದೇ ಸಂದರ್ಭದಲ್ಲಿ ಭಾರತವು ಚೀನಾಕ್ಕೆ 2.08 ಲಕ್ಷ ಕೋಟಿ ರೂಪಾಯಿ ಮೌಲ್ಯದ ಸರಕು ಮತ್ತು ಸೇವೆಗಳನ್ನು ರಫ್ತು ಮಾಡಿತ್ತು. ಚೀನಾಕ್ಕೆ ಈ ರಫ್ತಿನಲ್ಲಿ ಶೇ. 34.2 ಏರಿಕೆಯಾಗಿತ್ತು.

ಕೊರೋನಾ ಎರಡನೆಯ ಅಲೆಯ ಅಬ್ಬರದ ನಂತರ ಭಾರತೀಯ ಔಷಧ ಕಂಪನಿಗಳಿಗೆ ಕಚ್ಚಾ ಸಾಮಗ್ರಿಗಳಿಗೆ ಚೀನಾದಿಂದ ಆಮದು ಹೆಚ್ಚಳ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಉಂಟಾಗಿತ್ತು. ಇದರ ಪರಿಣಾಮ 2021ರಲ್ಲಿ ಚೀನಾದಿಂದ ಆಮದು ದಾಖಲೆ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದು ತಜ್ಞರು ಹೇಳಿದ್ದಾರೆ.

ಭಾರತವು ಕಳೆದೊಂದು ದಶಕದಿಂದ ಚೀನಾ ಜೊತೆಗೆ ತನ್ನ ವ್ಯಾಪಾರ ಕೊರತೆ ಹೆಚ್ಚುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದೆ. ಆದ್ದರಿಂದ ಭಾರತದ ಐಟಿ ಮತ್ತು ಔಷಧ ಉತ್ಪನ್ನಗಳಿಗೆ ಮಾರುಕಟ್ಟೆಯನ್ನು ತೆರೆಯುವಂತೆ ಚೀನಾಕ್ಕೆ ಒತ್ತಾಯಿಸಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಕಾರು ಸ್ಕೂಟರುಗಳ ಮಾರಾಟ ಇಳಿಕೆ

0

ಕಳೆದ ಡಿಸೆಂಬರ್ ತಿಂಗಳಿನಲ್ಲಿ ಪ್ರಯಾಣಿಕರ ಕಾರುಗಳ ಮಾರಾಟದಲ್ಲಿ ಶೇ.13ರಷ್ಟು ಇಳಿಕೆಯಾಗಿದೆ. ಒಟ್ಟು 2,19,421 ಕಾರುಗಳು ಮಾರಾಟವಾಗಿತ್ತು ಎಂದು ಕೈಗಾರಿಕಾ ಮಂಡಳಿ ಸಿಯಾಮ್ ತಿಳಿಸಿದೆ.
2020ರ ಡಿಸೆಂಬರ್ ತಿಂಗಳಿನಲ್ಲಿ 2,52,998 ಕಾರುಗಳು ಮಾರಾಟ ವಾಗಿತ್ತು.

ಡಿಸೆಂಬರ್ನಲ್ಲಿ ದ್ವಿಚಕ್ರ ವಾಹನಗಳ ಮಾರಾಟ ಕೂಡ ಇಳಿಮುಖವಾಗಿದೆ. ಒಟ್ಟು 10,06,062 ದ್ವಿಚಕ್ರ ವಾಹನಗಳು ಮಾರಾಟವಾಗಿದೆ. ಶೇ.11 ರಷ್ಟು ತಗ್ಗಿದೆ.
2020 ರ ಡಿಸೆಂಬರ್ ನಲ್ಲಿ 11,27,917 ದ್ವಿಚಕ್ರ ವಾಹನಗಳು ಮಾರಾಟವಾಗಿತ್ತು.

ಸ್ಕೂಟರ್ ಮಾರಾಟದಲ್ಲಿ ಶೇ.24 ರಷ್ಟು ಇಳಿಕೆಯಾಗಿದೆ. 2,46,080 ಸ್ಕೂಟರ್ ಗಳು ಬಿಕರಿಯಾಗಿವೆ. 2020ರ ಡಿಸೆಂಬರ್ ತಿಂಗಳಿನಲ್ಲಿ 3,23,757 ಸ್ಕೂಟರ್ ಗಳು ಮಾರಾಟವಾಗಿತ್ತು.

ಹೀಗಿದ್ದರೂ ವಾಣಿಜ್ಯೋದ್ದೇಶದ ವಾಹನಗಳ ಮಾರಾಟದಲ್ಲಿ ಏರಿಕೆಯಾಗಿದೆ. ಅಕ್ಟೋಬರ್-ಡಿಸೆಂಬರ್ ಈ ಮೂರು ತಿಂಗಳಿನಲ್ಲಿ 1,94,712 ವಾಹನಗಳು ಮಾರಾಟವಾಗಿವೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಪ್ರೊ.ಕಬಡ್ಡಿ ಲೀಗ್ ದಬಾಂಗ್ ಗೆಲುವು ಯೋಧಾ ಜಯಭೇರಿ

0

ವಿಜಯ್ ಅವರ ಅಲ್ ರೌಂಡ್ ಪ್ರದರ್ಶನದ ಬಲದಿಂದ ದಬಾಂಗ್ ದಿಲ್ಲಿ ತಂಡ ಪ್ರೊ ಕಬ್ಬಡ್ಡಿ ಲೀಗ್ ಎಂಟನೇ ಆವೃತ್ತಿಯ 55ನೇ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ವಿರುದ್ಧ ರೋಚಕ ಗೆಲುವು ಸಾಧಿಸಿ ಸತತ ಎರಡು ಸೋಲುಗಳಿಂದ ಹೊರ
ಬಂದಿತು.
ವೈಟ್ ಫೀಲ್ಡ್ ನ ಶೆರಟಾನ್ ಗ್ರ್ಯಾಂಡ್ ಹೋಟೆಲ್ ನ ಸಭಾಂಗಣದಲ್ಲಿ ದಬಾಂಗ್ ಮತ್ತು ಸ್ಟೀಲರ್ಸ್ ತಂಡದ ನಡುವೆ ಪೈಪೋಟಿ ನಡೆಯಿತು.
ಮೊದಲ ಪಂದ್ಯದಲ್ಲಿ ದಬಾಂಗ್ ತಂಡ 28-25 ಅಂಕಗಳ ಅಂತರದಿಂದ
ಸ್ಟೀಲರ್ಸ್ ತಂಡಕ್ಕೆ ಸೋಲುಣಿಸಿತು.
ಈ ಜಯದೊಂದಿಗೆ ದಿಲ್ಲಿ ತಂಡ ಒಟ್ಟಾರೆ 37 ಅಂಕ ಕಲೆಹಾಕಿತು. ಅತ್ತ ಸಾಂಫಿಕ ಹೋರಾಟ ನೀಡಿದರೂ ಹರಿಯಾಣ ಸ್ಟೀಲರ್ಸ್ ತಂಡ ಐದನೇ ಸೋಲಿಗೆ ಒಳಗಾಯಿತು.
ಜಿದ್ದಾಜಿದ್ದಿಯಿಂದ ಕೂಡಿದ್ದ ಎರಡನೇ ದಿನದ ಪಂದ್ಯದಲ್ಲಿ ಯು.ಪಿ.ಯೋಧಾ ತಂಡ 39-33 ಅಂಕಗಳ ಅಂತರದಿಂದ ತೆಲುಗು ಟೈಟನ್ಸ್ ತಂಡವನ್ನು ಸೋಲಿಸಿತು. ಟೈಟನ್ ಪರ ರಜ್ನೀಶ್ (9) ಏಕಾಂಗಿ ಹೋರಾಟ ನೀಡಿದರೆ, ಗೆದ್ದ ತಂಡದ ಪರ ಪ್ರದೀಪ್ ನರ್ವಾಲ್ ಸೂಪರ್ 10 ಸಾಧನೆ ಮಾಡಿದರು. ಜೊತೆಗೆ ಶ್ರೀಕಾಂತ್, ಸುರೇಂದರ್ ಮತ್ತು ನಿತೇಶ್ ತಲಾ 7 ಅಂಕಗಳಿಸಿ ಮಿಂಚಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಉಕ್ಕು ಉತ್ಪಾದನಾ ಕ್ಷೇತ್ರ:ಉದ್ಯಮಿ ಅದಾನಿ ಪ್ರವೇಶ

0

ಬಿಲಿಯನೇರ್ ಉದ್ಯಮಿ ಗೌತಮಿ ಅದಾನಿ ನೇತೃತ್ವದ ಅದಾನಿ ಸಮೂಹವು ದಕ್ಷಿಣ ಕೊರಿಯಾದ ಉತ್ಪಾದಕ ಪೋಸ್ಕೋ ಕಂಪನಿಯ ಜೊತೆಗೆ ಸಹಭಾಗಿತ್ವದಲ್ಲಿ ಗುಜರಾತಿನಲ್ಲಿ ಉಕ್ಕಿನ ಉತ್ಪಾದನೆ ನಡೆಸಲು ಸಜ್ಜಾಗಿದೆ.

ಒಟ್ಟು 37 ಸಾವಿರ ಕೋಟಿ ರೂಪಾಯಿ ಹೂಡಿಕೆಯಾಗಲಿದೆ. ಜೊತೆಗೆ ಅದಾನಿ ಗ್ರೂಪ್, ನೇರವಾಗಿ ಟಾಟಾ ಸ್ಟೀಲ್, ಜೆಎಸ್ ಡಬ್ಲ್ಯೂ ಸ್ಟೀಲ್ ಹಾಗೂ ಅರ್ಸೆಲರ್ ಮಿತ್ತಲ್ ನಿಪ್ಪೊನ್ ಸ್ಟೀಲ್ ಜೊತೆಗೆ ಪೈಪೋಟಿ ನಡೆಸಲಿದೆ.

” ಪೋಸ್ಕೋ ವಿಶ್ವದ ಅತ್ಯಾಧುನಿಕ ಸ್ಟೀಲ್ ತಯಾರಿಕಾ ಕಂಪನಿಯಾಗಿದೆ. ಇದು ಉಕ್ಕಿನ ಉತ್ಪಾದನೆಯಲ್ಲಿ ಪರಿಣತಿಯನ್ನು ಹೊಂದಿದೆ. ಜೊತೆಗೆ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ” ಎಂದು ಗೌತಮ್ ಅದಾನಿ ಅವರು ತಿಳಿಸಿದ್ದಾರೆ.

ಅದಾನಿ ಗ್ರೂಪ್ ಪ್ರಸ್ತುತ ನವೀಕರಿಸಬಹುದಾದ ಇಂಧನ, ಹೈಡ್ರೋಜನ್, ಲಾಜಿಸ್ಟಿಕ್ಸ್, ಬಂದರು, ವಿಮಾನ ನಿಲ್ದಾಣ ನಿರ್ಮಾಣ, ರಸ್ತೆ ಮೂಲ ಸೌಕರ್ಯ ವಲಯದಲ್ಲಿದೆ. ಈಗ ಉಕ್ಕಿನ ವ್ಯವಹಾರಕ್ಕೂ ಪ್ರವೇಶಿಸುತ್ತಿದೆ.

ಪೋಸ್ಕೋ ಮಹಾರಾಷ್ಟ್ರದಲ್ಲಿ ಪೋಸ್ಕೋ ಮಹಾರಾಷ್ಟ್ರ ಎಂಬ ಘಟಕವನ್ನು ಹೊಂದಿದೆ. ಹೆಚ್ಚುವರಿಯಾಗಿ ಪುಣೆ, ದೆಹಲಿ, ಚೆನ್ನೈ, ಅಹಮದಾಬಾದ್ ನಲ್ಲಿ ಸಂಸ್ಕರಣ ಘಟಕಗಳನ್ನು ಒಳಗೊಂಡಿದೆ.

ಭಾರತ ಸರ್ಕಾರ ಮೂಲಸೌಕರ್ಯ ವಲಯದ ಮೇಲೆ ವ್ಯಾಪಕ ಹೂಡಿಕೆ ಮಾಡುತ್ತಿರುವುದರಿಂದ ಉಕ್ಕು ಉತ್ಪಾದನೆಗೂ ಭಾರಿ ಬೇಡಿಕೆ ಸೃಷ್ಟಿಯಾಗಿದೆ.

ಈ ನಡುವೆ ರಿಲಯನ್ಸ್ ಇಂಡಸ್ಟ್ರೀಸ್ ಕೂಡ ಗುಜರಾತಿನಲ್ಲಿ ಉಕ್ಕು ಉತ್ಪಾದನೆಗೆ 5.67 ಲಕ್ಷ ಕೋಟಿ ರೂಪಾಯಿ ಹೂಡಿಕೆಗೆ ಒಪ್ಪಂದ ಮಾಡಿಕೊಂಡಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಲಸಿಕೆ ಪಡೆಯದವರು ಕೂಡಲೇ ಲಸಿಕೆ ಪಡೆಯಿರಿ- ಡಾ.ಅಶೋಕ್

0

ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಕೋವಿಡ್ ಬಗ್ಗೆ ಭದ್ರಾವತಿ ತಾಲೂಕು ವೈದ್ಯಾಧಿಕಾರಿ ಡಾ. ಅಶೋಕ್ ಅವರು ಸಾಧಾರಣ, ಸಣ್ಣ ಪ್ರಮಾಣದ ಜ್ವರ, ಮೈಕೈನೋವು, ಶೀತ, ಕೆಮ್ಮು ಇದ್ದರೆ ವೈದ್ಯರನ್ನು ಕೂಡಲೇ ಸಂಪರ್ಕಿಸಿ ಚಿಕಿತ್ಸೆ ಪಡೆಯುವುದು ಒಳಿತು ಎಂದು ತಿಳಿಸಿದ್ದಾರೆ.

ಆರೋಗ್ಯದಲ್ಲಿ ಸ್ವಲ್ಪ ಮಟ್ಟಿನ ಏರುಪೇರಾದರೂ ಅದನ್ನ ನಿರ್ಲಕ್ಷ್ಯ ಮಾಡದೇ ಚಿಕಿತ್ಸೆ ಪಡೆಯಬೇಕು. ಸಣ್ಣಪುಟ್ಟ ಸಮಸ್ಯೆ ಇದ್ದರೆ ಎಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿ ಚಿಕಿತ್ಸೆ ನೀಡಲಾಗುವುದು ಅವಶ್ಯವಿದ್ದಲ್ಲಿ ಮಾತ್ರ ಆಸ್ಪತ್ರೆಗೆ ದಾಖಲು ಮಾಡಲಾಗುವುದು ವೈದ್ಯರನ್ನು ಸಂಪರ್ಕಿಸಬೇಕು ಎಂದು ತಿಳಿಸಿದ್ದಾರೆ.

‘ಪ್ರತಿಯೊಬ್ಬರೂ ಕೋವಿಡ್ ಲಸಿಕೆ ತೆಗೆದುಕೊಳ್ಳಬೇಕು. ಲಸಿಕೆ ಪಡೆಯದವರು ಕೂಡಲೇ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ಲಸಿಕೆ ಪಡೆಯಲು ಮುಂದಾಗಬೇಕು’ ಎಂದು ಡಾ.ಅಶೋಕ್ ಅವರು ಜನರಿಗೆ ಸಲಹೆ ನೀಡಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಪ್ರೊ ಕಬಡ್ಡಿ ಲೀಗ್ ಬುಲ್ಸ್ ಅಗ್ರಸ್ಥಾನದಲ್ಲಿ ಪ್ಯಾಂಥರ್ಸ್ ಗೆ ಹ್ಯಾಟ್ರಿಕ್

0

ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ ಶೆರಟಾನ್ ಗ್ರ್ಯಾಂಡ್ ಹೋಟೆಲ್ ಮೈದಾನದಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಲೀಗ್ ಪಂದ್ಯಾವಳಿಯು ಶುಕ್ರವಾರ 4 ತಂಡಗಳ ನಡುವೆ ಪಂದ್ಯ ನಡೆಯಿತು.

ಪೈರೇಟ್ಸ್ ವಿರುದ್ಧ ಪ್ಯಾಂಥರ್ಸ್ ಗೆ ಹ್ಯಾಟ್ರಿಕ್ ಗೆಲುವು
ಜೈಪುರ್ ಪಿಂಕ್ ಪ್ಯಾಂಥರ್ಸ್ (38) ಮತ್ತು ಪಟ್ನಾ ಪೈರೇಟ್ಸ್ (28) ತಂಡಗಳ ನಡುವೆ ಪಂದ್ಯ ನಡೆಯಿತು. ಪಟ್ನಾ ವಿರುದ್ಧ ಜೈಪುರ್ ರೋಚಕ ಜಯ ಸಾಧಿಸಿತು.
ಜೈಪುರ್ ಪರ ಆಲ್ ರೌಂಡರ್ ದೀಪಕ್ ಹೂಡ 10 ಅಂಕಗಳ ಗಳಿಸುವುದರೊಂದಿಗೆ ಇವರ ಉತ್ತಮ ಆಟ ಪ್ರದರ್ಶನದಿಂದ ತಂಡವು ಮೊದಲರ್ಧದಲ್ಲಿಯೇ 18-12 ಅಂಕಗಳ ಅಂತರವನ್ನು ಜೈಪುರ್ ಕಾಯ್ದುಕೊಂಡಿತು. ನಂತರವೂ ಅದೇ ತರಹ ಆಟದ ಲಯ ಮುಂದುವರೆಸಿ 10 ಅಂಕಗಳ ಅಂತರದಿಂದ ಗೆಲುವು ಸಾಧಿಸಿತು.

ಬುಲ್ಸ್ ಗೆ ಮಣಿದ ಜಯಂಟ್ಸ್
ಬೆಂಗಳೂರು ಬುಲ್ಸ್ (46) ಮತ್ತು ಗುಜರಾತ್ ಜಯಂಟ್ಸ್(37) ತಂಡಗಳ ನಡುವೆ ಪಂದ್ಯ ನಡೆಯಿತು.ಗುಜರಾತ್ ವಿರುದ್ಧ ಬೆಂಗಳೂರು ಭರ್ಜರಿ ಜಯ ಸಾಧಿಸಿದೆ.
ಬೆಂಗಳೂರು ತಂಡದ ಆಪತ್ಭಾಂದವ ಪವನ್ ಶೆರಾವತ್ 19 ಅಂಕ ಮತ್ತು ಭರತ್ 9 ಅಂಕಗಳನ್ನು ಗಳಿಸಿ ಅವರ ಮಿಂಚಿನ ರೈಡಿಂಗ್ ಮೂಲಕ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ.
ಇದರಿಂದ ಪ್ರೊ ಕಬಡ್ಡಿಯ 8ನೆಯ ಲೀಗ್ ನಲ್ಲಿ ನಡೆದ ಒಟ್ಟು 54 ಪಂದ್ಯಗಳಲ್ಲಿ ಬೆಂಗಳೂರು ಬುಲ್ಸ್ ತಂಡವು 10 ಪಂದ್ಯಗಳನ್ನ ಆಡಿದ್ದು ಆ 10 ಪಂದ್ಯಗಳಿಂದ 38 ಶ್ರೇಯಾಂಕವನ್ನು ಸಂಪಾದಿಸಿದೆ.ಇದರಿಂದ ಪವನ್ ಬಳಗವು 12 ತಂಡಗಳಿರುವ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಅಪಘಾತಕ್ಕೆ ಸಿಕ್ಕ ಮಗುವಿಗೆ ನೆರವಾದ ಆರಗ ಜ್ಞಾನೇಂದ್ರ

0

ಬಿ ಆರ್ ಪಿ ಯಲ್ಲಿ ಮುತ್ತಿನಕೊಪ್ಪ ಬಳಿ ದಂಪತಿಗಳಿದ್ದ ಬೈಕ್ ಒಂದು, ಪುಟಾಣಿ ಮಗುವಿಗೆ ಡಿಕ್ಕಿ ಹೊಡೆಯಿತು. ಇದರ ಪರಿಣಾಮವಾಗಿ ಮಗು ತೀವ್ರ ಗಾಯಗೊಂಡಿತ್ತು.

ಇದೇ ಸಂದರ್ಭದಲ್ಲಿ ವಾಹನದಲ್ಲಿ ಮಾನ್ಯ ಗೃಹಸಚಿವ ಆರಗ ಜ್ಞಾನೇಂದ್ರ ಅವರು ಬೆಂಗಳೂರಿನಿಂದ ಹಿಂದಿರುಗುತ್ತಿದ್ದರು.

ಸಂವೇದನಾಶೀಲ ವ್ಯಕ್ತಿತ್ವದ ಆರಗಜ್ಞಾನೇಂದ್ರ ಅವರು ಗಾಯಗೊಂಡ ಮಗುವನ್ನು ಬಿಆರ್ ಪಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ.

ಸಚಿವರು ಇಂತಹ ಕ್ಲಿಷ್ಟ ಸಂದರ್ಭದಲ್ಲಿ ಮೆರೆದ ಮಾನವೀಯತೆಯನ್ನು ಎಲ್ಲರೂ ಪ್ರಶಂಸಿದ್ದಾರೆ.