Saturday, February 14, 2026
Saturday, February 14, 2026
Home Blog Page 1761

ಶಿಕ್ಷಣಕ್ಷೇತ್ರವು ತಂತ್ರಜ್ಞಾನ-ಅನ್ವೇಷಣೆಗಳನ್ನ ಬಳಸಬೇಕು- ಡಾ.ಅಶ್ವತ್ಥನಾರಾಯಣ

0

ಬೆಂಗಳೂರು, ಶಿಕ್ಷಣ ಕ್ಷೇತ್ರದಲ್ಲಿ ಸಮಗ್ರ ಸುಧಾರಣೆ ತಂದರೆ ಉಳಿದ ಕ್ಷೇತ್ರಗಳು ತಮ್ಮಿಂದ ತಾವೇ ಸರಿ ಹೋಗುತ್ತವಲ್ಲದೆ, ಇಡೀ ದೇಶ ಅಭಿವೃದ್ಧಿ ಹೊಂದುತ್ತದೆ. ಆದ್ದರಿಂದ ಶಿಕ್ಷಣ ಕ್ಷೇತ್ರವು ಸಂಪೂರ್ಣ ವೃತ್ತಿಪರವಾಗಬೇಕಾಗಿದ್ದು, ತಂತ್ರಜ್ಞಾನ ಮತ್ತು ಅನ್ವೇಷಣೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಬೆಂಗಳೂರು ಉತ್ತರ ವಲಯವು ಏರ್ಪಡಿಸಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಸುಧಾರಣೆ ಕುರಿತ ಸಂವಾದ ಮತ್ತು ಸರಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗಕ್ಕೆ ಗುರುತಿನ ಚೀಟಿ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಶುಕ್ರವಾರ ಮಾತನಾಡಿದರು.

ಸ್ವಾತಂತ್ರ್ಯೋತ್ಸವದ 75ನೇ ವರ್ಷಾಚರಣೆ ಅಂಗವಾಗಿ ನಾಲ್ಕು ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳೇ ಉಪಗ್ರಹವನ್ನು ತಯಾರಿಸಲು ಅವಕಾಶ ಮಾಡಿಕೊಡಲಾಗಿದೆ. ಈ ಮೂಲಕ ನವೋದ್ಯಮ ಮತ್ತು ನಾವೀನ್ಯತೆಗಳಿಗೆ ಒತ್ತು ಕೊಡುವ ಗುರಿ ಇದೆ. ಇಸ್ರೇಲ್ ಹೇಗೆ `ನವೋದ್ಯಮಗಳ ರಾಷ್ಟ್ರ’ವಾಗಿದೆಯೋ ಹಾಗೆ ನಾವು ಕೂಡ ಸಾಧನೆ ಮಾಡಬೇಕು ಎಂದು ಅವರು ಉತ್ತೇಜಿಸಿದರು.

ದೇಶದಲ್ಲಿ ಮೂರೂವರೆ ದಶಕಗಳ ನಂತರ ಹೊಸ ಶಿಕ್ಷಣ ನೀತಿ ಜಾರಿಯಾಗಿದೆ. ಕಲೆ, ವಿಜ್ಞಾನ ಮತ್ತು ವಾಣಿಜ್ಯ ಶಿಕ್ಷಣ ಕ್ರಮಗಳೇನೇ ಇರಲಿ, ಗುಣಮಟ್ಟದ ಬೋಧನೆ ಮುಖ್ಯವಾಗಿದೆ. ಇದರ ಜತೆಗೆ ಗಣಿತದ ಬೋಧನೆ ಕೂಡ ಅತ್ಯುತ್ತಮವಾಗಿ ಇರಬೇಕು. ಅದರಲ್ಲೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವೇ ಮಾದರಿಯಾಗಿರಬೇಕು. ಭಾರತದಲ್ಲಿ ಅತ್ಯುತ್ತಮ ಶಿಕ್ಷಣ ಪಡೆದುಕೊಂಡವರೇ ಇವತ್ತು ಇಡೀ ಅಮೆರಿಕದ ಬೆನ್ನೆಲುಬಾಗಿದ್ದಾರೆ ಎಂದು ಅವರು ಹೇಳಿದರು.

ಮುಂದುವರಿದ ದೇಶಗಳಲ್ಲಿ ಅಂಕಗಳಿಗೆ ಯಾವ ಬೆಲೆಯೂ ಇಲ್ಲ. ಅಲ್ಲಿ ಒಂದು ಮಗು ಶಾಲೆಗೆ ಬಂದ ಕೂಡಲೇ ಅದನ್ನು ದೇಶದ ಆಸ್ತಿ ಎಂದು ಪರಿಗಣಿಸುತ್ತಾರೆ. ನಮ್ಮಲ್ಲೂ ಇಂತಹ ಪ್ರಜ್ಞೆ ಬರಬೇಕಾಗಿದೆ. ದೇಶವನ್ನು ಕಟ್ಟುವುದೆಂದರೆ ಶೇ.95ರಷ್ಟು ಗಮನ ನಮ್ಮ ಮಕ್ಕಳ ಪರಿಪೂರ್ಣ ವ್ಯಕ್ತಿತ್ವದ ಕಡೆಗೆ ಇರಬೇಕು. ಎನ್ಇಪಿ ಇದನ್ನೆಲ್ಲ ಸಾಕಾರಗೊಳಿಸಲಿದೆ ಎಂದು ಅವರು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಪ್ರೌಢ ಶಿಕ್ಷಣ ಇಲಾಖೆಯ ಉಪನಿರ್ದೇಶಕ ನಾರಾಯಣ, ಬಿಇಒಗಳಾದ ಉಮಾದೇವಿ, ಜಯಪ್ರಕಾಶ್, ಮಂಜುನಾಥ್ ಮುಂತಾದವರು ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ರಾಜ್ಯದಲ್ಲಿ ಕೋವಿಡ್ ತಡೆರಹಿತ ಓಟ

0

ಕರ್ನಾಟಕದಲ್ಲಿ ಸೋಂಕಿನ ಆರ್ಭಟ ಮುಂದುವರೆದಿದೆ. ಇದುವರೆಗೆ 2.21 ಲಕ್ಷ ಪರೀಕ್ಷೆ ನಡೆಸಲಾಗಿದೆ. 28,723 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. 14 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 1,41, 337ಕ್ಕೆ ಏರಿಕೆಯಾಗಿದೆ.

ರಾಜ್ಯದ ಸೋಂಕಿನ ಪ್ರಮಾಣ ಶೇ. 12.98 ರಷ್ಟಿದೆ. ಸಾವಿನ ಪ್ರಮಾಣ ಶೇ. 0.04 ರಷ್ಟಿದೆ. ಇದುವರೆಗೆ 31,411 ಜನರು ಮೃತಪಟ್ಟಿದ್ದಾರೆ.

3105 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಟ್ಟು ಬಿಡುಗಡೆಯಾದವರ ಸಂಖ್ಯೆ ಲಕ್ಷಕ್ಕೆ ಏರಿಕೆಯಾಗಿದೆ. ಬೆಂಗಳೂರು ನಗರದಲ್ಲಿ 20,121 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಉಳಿದಂತೆ ಬಳ್ಳಾರಿ 400, ಬೆಂಗಳೂರು ಗ್ರಾಮಾಂತರ 418, ಮಂಡ್ಯ 554, ದಕ್ಷಿಣಕನ್ನಡ 639, ಧಾರವಾಡ 338, ಹಾಸನ 654, ಕಲ್ಬುರ್ಗಿ 338, ಕೋಲಾರ 502, ಮೈಸೂರು 803, ತುಮಕೂರು 796, ಉಡುಪಿ 497 ಉತ್ತರ ಕನ್ನಡ ಜಿಲ್ಲೆಯಲ್ಲಿ 301 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಬೆಂಗಳೂರಿನಲ್ಲಿ 7, ಬೆಂಗಳೂರು ಗ್ರಾಮಾಂತರ 3, ಮೈಸೂರು 2, ಮಂಡ್ಯ, ಚಿಕ್ಕಬಳ್ಳಾಪುರದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಕೋವಿಡ್ ನಿಯಂತ್ರಣ: ಧರಣಿ ಇತ್ಯಾದಿಗೆ ಅನುಮತಿ ಬೇಡ ಕೋರ್ಟ್ ಸೂಚನೆ

0

ಕೋವಿಡ್ ನಿಯಂತ್ರಿಸಲು 2022ರ ಜನವರಿ 4 ರಂದು ಜಾರಿಗೊಳಿಸಿರುವ ಪ್ರಮಾಣಿಕೃತ ಕಾರ್ಯಸೂಚಿ ಜಾರಿಯಲ್ಲಿರುವ ತನಕ ಯಾವುದೇ ರಾಲಿ, ಧರಣಿ, ಪ್ರತಿಭಟನೆ ಅಥವಾ ರಾಜಕೀಯ ಸಮಾವೇಶಕ್ಕೆ ಅನುಮತಿ ನೀಡಬಾರದು ಎಂದು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.

ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ನ ಪಾದಯಾತ್ರೆ ನಿರ್ಬಂಧ ಕೋರಿದ್ದ ಬೆಂಗಳೂರಿನ ತಿಂಡ್ಲು ವಾಸಿ ಎ.ವಿ. ನಾಗೇಂದ್ರ ಪ್ರಸಾದ್ ಸಲ್ಲಿಸಿದ್ದ ಪಿಐಎಲ್ ಅನ್ನು ನ್ಯಾಯಪೀಠ ವಿಲೇವಾರಿ ಮಾಡಿತು. ಅರ್ಜಿ ಕುರಿತು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾ. ಸೂರಜ್ ಗೋವಿಂದರಾಜ್ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಸರ್ಕಾರ ಮತ್ತು ಕೆಪಿಸಿಸಿ ಹೇಳಿಕೆ ದಾಖಲಿಸಿಕೊಂಡ ಪೀಠ ಜನವರಿ 12ರಂದು ಕೋರ್ಟ್ ಹೊರಡಿಸಿದ್ದ ಆದೇಶ ಪರಿಗಣಿಸಿ ರಾಮನಗರ ಸೇರಿ ಪಾದಯಾತ್ರೆ ಸಾಗುವ ಮಾರ್ಗದಲ್ಲಿ ಅಂತರ ಜಿಲ್ಲಾ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಪಾದಯಾತ್ರೆ ನಿಷೇಧ ಆದೇಶ ಕಟ್ಟುನಿಟ್ಟಿನ ಜಾರಿಗೆ ಎಲ್ಲಾ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಆದೇಶಿಸಲಾಗಿತ್ತು.

ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಸಾರಿಗೆ ಆಯುಕ್ತರಿಗೂ ಸೂಚಿಸಲಾಗಿತ್ತು ಎಂದು ಸರ್ಕಾರ ಮಾಹಿತಿ ನೀಡಿದೆ. ಕೆಪಿಸಿಸಿ ಕೂಡ ಸ್ವಯಂಪ್ರೇರಿತವಾಗಿ ಪಾದಯಾತ್ರೆ ಅನುಮಾನತು ಪಡಿಸಿದೆ. ಆದ್ದರಿಂದ, ಅರ್ಜಿ ವಿಚಾರಣೆ ಅಗತ್ಯವಿಲ್ಲ ಎಂದು ಆದೇಶಿಸಿ ಅರ್ಜಿ ಇತ್ಯರ್ಥ ಪಡಿಸಿದೆ.

ಕೊರೋನಾ ವೇಳೆ ಧರಣಿ, ಪ್ರತಿಭಟನೆ ಹಾಗೂ ಮೆರವಣಿಗೆ ನಡೆಸಬಾರದೆಂದು ನಿರ್ದೇಶಿಸಿ ಜನವರಿ 4 ರಂದು ಹೊರಡಿಸಿರುವ ಎಸ್ ಒಪಿ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಎಸ್ ಒಪಿ ಜಾರಿಯಲ್ಲಿರುವ ವರೆಗೂ ರಾಜ್ಯದ್ಯಂತ ರಾಲಿ, ಮೆರವಣಿಗೆ ಅಥವಾ ರಾಜಕೀಯ ಪಕ್ಷದ ಸಮಾವೇಶಕ್ಕೆ ಅನುಮತಿ ನೀಡಬಾರದು ಎಂದು ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿತು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಕಳೆದ ವರ್ಷ ಭಾರತದ ರಫ್ತು ಹೆಚ್ವಳವಾಗಿದೆ

0

2021ರ ಡಿಸೆಂಬರ್ ನಲ್ಲಿ ದೇಶದ ರಫ್ತು ಶೇ.38.91 ಹೆಚ್ಚಳವಾಗಿದೆ ಎಂದು ಸರ್ಕಾರ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ.

ಡಿಸೆಂಬರ್ನಲ್ಲಿ 37.9 ಒಂದು ಶತಕೋಟಿ ಡಾಲರ್ ಮೌಲ್ಯದ ರಫ್ತು ದೇಶದಲ್ಲಿ ನಡೆದಿದೆ. ಇಂಜಿನಿಯರಿಂಗ್, ಜವಳಿ ಮತ್ತು ರಾಸಾಯನಿಕ ಉತ್ಪನ್ನಗಳ ರಫ್ತು ಗಣನೀಯ ಪ್ರಮಾಣದಲ್ಲಿ ಚೇತರಿಸಿತ್ತು. ಹೀಗಿದ್ದರೂ ಸಹ ಇದೇ ವೇಳೆ ಆಮದು ಕೂಡ 4.4 ಲಕ್ಷ ಕೋಟಿ ರು ಏರಿಕೆಯಾಗಿದ್ದರಿಂದ ವ್ಯಾಪಾರ ಕೊರತೆಯು 1.65 ಲಕ್ಷ ಕೋಟಿ ರೂ.ಗೆ ಹೆಚ್ಚಳವಾಗಿತ್ತು.

ಪೆಟ್ರೋಲ್ ಮತ್ತು ಕಚ್ಚಾತೈಲ ಬಂಗಾರದ ಆಮದು ಕೂಡ ಡಿಸೆಂಬರ್ ತಿಂಗಳಿನಲ್ಲಿ ಏರಿಕೆಯಾಗಿದೆ. ಡಿಸೆಂಬರ್ ನಲ್ಲಿ 34,928 ಕೋಟಿ ರೂ. ಮೌಲ್ಯದ ಚಿನ್ನವನ್ನು ಆಮದು ಮಾಡಿಕೊಂಡಿದ್ದು, ಡಿಸೆಂಬರ್ನಲ್ಲಿ 2.79 ಲಕ್ಷ ಕೋಟಿ ರೂ ಮೌಲ್ಯದ ಸರಕುಗಳು ರಫ್ತಾಗಿತ್ತು.

ಫೆಡರೇಷನ್ ಆಫ್ ಇಂಡಿಯನ್ ಎಕ್ಸ್ ಪೋರ್ಟ್ ಆರ್ಗನೈಸೇಷನ್ ನ ಅಧ್ಯಕ್ಷ ಎ. ಶಕ್ತಿವೇಲು ಅವರು ಭಾರತದ ರಫ್ತು ಇದೇ ವೇಗದಲ್ಲಿ ವೃದ್ಧಿಸಿದ ಪ್ರಸಕ್ತ ಸಾಲಿನಲ್ಲಿ ಒಟ್ಟಾರೆ 400 ಶತಕೋಟಿ ಡಾಲರ್ ಗುರಿ ಸಾಧಿಸಬಹುದು ಎಂದು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಬಂದೋಬಸ್ತ್ ಕರ್ತವ್ಯದಲ್ಲಿದ್ದ ಪೋಲಿಸರಿಗೆ ಕೋವಿಡ್ ಸೋಂಕು

0

ಕಾಂಗ್ರೆಸ್ ನ ಮೇಕೆದಾಟು ಪಾದಯಾತ್ರೆಯ ಬಂದೋಬಸ್ತ್ ಗೆ ಹೋಗಿದ್ದ ಹಲವು ಪೊಲೀಸರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಕೋಲಾರದ ರಾಮನಗರ ಜಿಲ್ಲೆಯಲ್ಲೂ ಎರಡು ದಿನದಲ್ಲಿ 250 ಪ್ರಕರಣಗಳು ದಾಖಲಾಗಿದೆ.

ಪಾದಯಾತ್ರೆಯಲ್ಲಿ ಭಾಗಿಯಾಗಿ ಜಿಲ್ಲೆಗಳಿಗೆ ಮರಳಿದ ಕಾರ್ಯಕರ್ತರಿಂದ ಇನ್ನಷ್ಟು ವೇಗವಾಗಿ ಕೋವಿಡ್ ಹರಡುವ ಶಂಕೆ ವ್ಯಕ್ತವಾಗಿದೆ.

ಪಾದಯಾತ್ರೆ ಮುಗಿದ ಬೆನ್ನಲ್ಲೇ ಕನಕಪುರ, ರಾಮನಗರ ಗಳಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಿದೆ.
ಬಂದೋಬಸ್ತಿಗಾಗಿ ಬಂದಿದ್ದ ಕೋಲಾರ ಪೊಲೀಸರು ಸೋಂಕಿಗೆ ಒಳಗಾಗಿದ್ದಾರೆ. ಹಲವು ನಾಯಕರು ತಪಾಸಣೆಗೆ ಒಳಗಾಗಿದ್ದಾರೆ. ಅದರಲ್ಲಿ ಪಾಸಿಟಿವ್ ಬಂದಿರುವುದು ವರದಿಯಿಂದ ದೃಢವಾಗಿದೆ. ಪಾದಯಾತ್ರೆಗೆ ಹೋಗಿದ್ದ ಅನೇಕ ಕಾರ್ಯಕರ್ತರು ತಪಾಸಣೆಗೆ ಹಿಂದೇಟು ಹಾಕಿದ್ದಾರೆ.

ಮೇಕೆದಾಟು ಪಾದಯಾತ್ರೆಯ ಬಳುವಳಿ ಎಂಬಂತೆ ರಾಮನಗರ ಜಿಲ್ಲೆಯಲ್ಲಿ ಸೋಂಕು ಸ್ಪೋಟಗೊಂಡಿದೆ. ಎರಡೇ ದಿನಗಳ ತಪಾಸಣೆಯಲ್ಲಿ ಸುಮಾರು 250 ಪ್ರಕರಣಗಳು ಬೆಳಕಿಗೆ ಬಂದಿದೆ. ಒಂದು ತಿಂಗಳ ಹಿಂದಷ್ಟೇ ಒಂದು ಪ್ರಕರಣ ಗಳು ಇರಲಿಲ್ಲ. ಆದರೆ ಈಗ ನಿತ್ಯವೂ ಅನೇಕ ಪ್ರಕರಣಗಳು ದಾಖಲಾಗುತ್ತಿದೆ. ಎರಡನೇ ಅಲೆಯಲ್ಲಿ ಕೊನೆಯ ಹಂತದಲ್ಲಿ ಇದ್ದ ಪಾಸಿಟಿವ್ ದರ, ಮೂರನೇ ಅಲೆಯ ಆರಂಭದಲ್ಲಿಯೇ ಕಂಡುಬರುತ್ತದೆ. ಶೇ. 7.8 ರಷ್ಟು ಪಾಸಿಟಿವ್ ದರ ಜಿಲ್ಲೆಯಲ್ಲಿ ಕಂಡು ಬರುತ್ತಿದೆ. ಪಾದಯಾತ್ರೆ ಹಾದುಬಂದ ಕನಕಪುರ ಮತ್ತು ರಾಮನಗರ ತಾಲೂಕುಗಳಲ್ಲಿ ಕ್ರಮವಾಗಿ 87 ಮತ್ತು 100 ಮಂದಿಗೆ ಸೋಂಕು ತಗುಲಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಶಿವಮೊಗ್ಗದ ಸೂಕ್ತಸ್ಥಳದಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣ

0

ದಿ.ದೇವರಾಜ ಅರಸ್ ಟ್ರಕ್ ಟರ್ಮಿನಲ್ ಅಧ್ಯಕ್ಷ ಡಿ.ಎಸ್.ವೀರಯ್ಯ ಅವರು ಜಿಲ್ಲೆಯಲ್ಲಿ ಸುಸಜ್ಜಿತವಾದ ಟ್ರಕ್ ಟರ್ಮಿನಲ್ ನಿರ್ಮಿಸುವುದು ಅವಶ್ಯಕವಾಗಿದೆ. ಶಿವಮೊಗ್ಗ ಸುತ್ತ ಸೂಕ್ತ ಜಾಗವನ್ನು ಗುರುತಿಸಿದಲ್ಲಿ ಟರ್ಮಿನಲ್ ನಿರ್ಮಾಣಕ್ಕೆ ಮತ್ತು ಅಭಿವೃದ್ಧಿಗೆ ಅನುದಾನ ಒದಗಿಸಲಾಗುವುದು ಎಂದು ಶಿವಮೊಗ್ಗದಲ್ಲಿ ತಿಳಿಸಿದ್ದಾರೆ.

ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದಂತಹ ಸಭೆಯಲ್ಲಿ ಮಾತನಾಡಿದ ಅವರು ರಾಜ್ಯದ ಕೆಲವೆಡೆ ಸುಸಜ್ಜಿತವಾದ ಟ್ರಕ್ ಟರ್ಮಿನಲ್ ಗಳ ಸ್ಥಾಪನೆಯಾಗಿದೆ. ಟ್ರಕ್ ಟರ್ಮಿನಲ್ ಗಳ ಸ್ಥಾಪನೆಯಿಂದ ಅಪಘಾತಗಳು ಕಡಿಮೆಯಾಗುತ್ತದೆ. ವಾಯು ಮಾಲಿನ್ಯ ಮತ್ತು ದಟ್ಟಣೆ ಕೂಡ ಕಡಿಮೆಯಾಗುತ್ತದೆ. ಜೊತೆಗೆ ಉದ್ಯೋಗವಕಾಶ ದೊಂದಿಗೆ ಮಿನಿ ಟೌನ್ ಶಿಪ್ ನಿರ್ಮಾಣ ಆಗುತ್ತದೆ. ಹೀಗೆ ಟ್ರಕ್ ಟರ್ಮಿನಲ್ ನಿಂದ ಹಲವು ಅನುಕೂಲ ಇವೆ ಎಂದು ಡಿ.ಎಸ್. ವೀರಯ್ಯ ಅವರು ತಿಳಿಸಿದರು.

ಸಭೆಯಲ್ಲಿ ಮಾತನಾಡಿದ ಶಿವಮೊಗ್ಗ ನೂತನ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಅವರು ‘ತಾಲೂಕು ಅಧಿಕಾರಿಗಳು ಮತ್ತು ಆರ್ ಐ ಪಿ ಎ ಗಳ ಸಭೆ ಕರೆದು ಜಾಗ ಲಭ್ಯತೆ ಬಗ್ಗೆ ಪರಿಶೀಲಿಸಲಾಗುವುದು. ಎನ್.ಹೆಚ್ ಬಳಿ ಅದರಲ್ಲೂ ಶಿವಮೊಗ್ಗ ಸುತ್ತಮುತ್ತ ಜಾಗ ನೋಡುತ್ತೇವೆ. ಭೂಮಿ ಖರೀದಿಗೆ ಅವಕಾಶ ಮಾಡಿಕೊಟ್ಟರೆ ಒಳಿತಾಗುತ್ತದೆ’ ಎಂದು ಹೇಳಿದರು.

ಈ ಸಭೆಯಲ್ಲಿ ಸೂಡಾ ಅಧ್ಯಕ್ಷ ಜ್ಯೋತಿಪ್ರಕಾಶ್, ಕೆಐಎಎಡಿಬಿ ಕಾರ್ಯಪಾಲಕ ಎಂಜಿನಿಯರ್ ನಾರಾಯಣಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ನಾಗೇಂದ್ರ.ಎಫ್. ಹೊನ್ನಳಿ, ಸೂಡ ಆಯುಕ್ತ ಕೊಟ್ರೇಶ್ ಹಾಗೂ ಶಿವಮೊಗ್ಗ ತಹಶೀಲ್ದಾರ್ ನಾಗರಾಜ್ ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಅಮರಜೀವಿಗಳ ನೆನಪು.

0

ನಮ್ಮ ದೇಶದಲ್ಲಿ ನಾವು ನಿಶ್ಚಿಂತರಾಗಿ ಇದ್ದೇವೆಂದರೆ ಅದರ ಪೂರ್ಣ ಶ್ರೇಯಸ್ಸು ನಮ್ಮ ಸೈನಿಕರಿಗೇ ಸಲ್ಲಬೇಕು. ಏಕೆಂದರೆ ಅವರು ತಮ್ಮ ಜೀವಿತದ ಪ್ರತೀಕ್ಷಣವನ್ನೂ ನಮ್ಮ ರಕ್ಷಣೆ ಅಂದರೆ ದೇಶದ ಭದ್ರತೆಗೆ ಮುಡಿಪಾಗಿಟ್ಟಿರುವುದು.
ಇಂದು ಭಾರತೀಯ ಸೇನೆ ಸ್ವತಂತ್ರವಾಗಿ ಕಾರ್ಯನಿರ್ವಹಣೆ ಪಡೆದ ನೆನಪಿನ ದಿನವಾಗಿದೆ.
1949 ರ ಜನವರಿ15 ನಮ್ಮ ಸೇನಾ ಇತಿಹಾಸದಲ್ಲಿ ಮರೆಯಲಾಗದ ದಿನ.
ಬ್ರಿಟಿ಼ಷ ಅಧಿಪತ್ಯದ ಕೊನೆಯ‌ ಮುಖ್ಯ ಕಮಾಂಡರ ಜನರಲ್‌ ಫ್ರಾಂನ್ಸಿಸ್ ಬುಚರ್‌ ಅವರು ಸೇನಾದಂಡವನ್ನ ಭಾರತದ ಫ್ರಥಮ ಸೇನಾ ಮುಖ್ಯಸ್ಥ
ಫೀಲ್ಢ್ ಮಾರ್ಷಲ್‌ ಕೊಡಂಡೇರ ಕಾರಿಯಪ್ಪ ಅವರಿಗೆ ಹಸ್ತಾಂತರಿಸಿದರು.

ಹೀಗಾಗಿ ಪ್ರತಿವರ್ಷವೂ ಜನವರಿ 15 ,ಸೇನಾ ದಿನವನ್ನ ನಾವು ಆಚರಿಸಿಕೊಂಡು ಬರುತ್ತಿದ್ದೇವೆ. ನಮಗಾಗಿ ಅಸಂಖ್ಯ ಸೈನಿಕರು ತಮ್ಮಜೀವ ತೆತ್ತಿದ್ದಾರೆ.ಅವರ ನಿಸ್ವಾರ್ಥದ ಸೇವೆಯನ್ನ ನಾವು ನೆನೆಯಬೇಕು. ಸೈನ್ಯದಲ್ಲಿ ಅನುಪಮ ಸೇವೆ ಸಲ್ಲಿಸಿದ ಸಾಧಕರಿಗೆ ಸತ್ಕರಿಸುವ
ಹೆಮ್ಮಯ ದಿನವೂ ಹೌದು. ಒಂದು ಕ್ಷಣ ನಮ್ಮ ನೆನಪಿನ ಹಿನ್ನೋಟ ಮಾಡಿಕೊಳ್ಳೋಣ. ೧೯೬೨ ರಲ್ಲಿ ಭಾರತದೊಂದಿಗೆ ಗಡಿ ಸಂಬಂಧ ಯುದ್ಧವನ್ನ ಚೀನಾ ಸಾರಿತು.ನಮ್ಮ ಭಾರತೀಯ ಸೇನೆ ಜೀವಪಣಕ್ಕಿಟ್ಟು ಕಾದಾಡಿತು.ಬಾಂಗ್ಲಾದೇಶ ಕಾರಣದಿಂದ
ಪಾಕಿಸ್ತಾನ ನಮ್ಮ ಮೇಲೆ
ಯುದ್ಧಸಾರಿ ಬಂತು.
ಹೀಗೆ ಮತ್ತೆ ಯುದ್ದ.ಮತ್ತೆ ಜೀವಾರ್ಪಣೆ. ಇನ್ನೊಮ್ಮೆ ಕಾರ್ಗಿಲ್ ಯುದ್ದ ನಡೆಯಿತು.ನಮ್ಮ ಸೈನಿಕರು ಹತರಾದದ್ದು ಸಾವಿರ ಸಂಖ್ಯೆಯಲ್ಲಿ. ಇಂತಹ ಯುದ್ಧಗಳಲ್ಲಿ
ಜೀವದ ಹಂಗು ತೊರೆದು ಹೋರಾಡುವ ಅವರ ತ್ಯಾಗಕ್ಕೆ ನಾವು ಬೆಲೆಕಟ್ಟಲಾಗುವುದಿಲ್ಲ.
ಅಂತಹ ಸೈನಿಕರ ಬಲಿದಾನದಿಂದ ನಾವು ಸುರಕ್ಷಿತರಾಗಿದ್ದೇವೆ.
ಪ್ರತೀವರ್ಷ ನಮ್ಮ ಅಮರ ಸೈನಿಕರನ್ನ ನೆನೆದು ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವುದು
ನಮ್ಮ ಆದ್ಯ ಕರ್ತವ್ಯವೂ ಹೌದು.
ಜೈ ಜವಾನ್.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಕೋರೋನ ಸಂದರ್ಭ: ಕಾಂಗ್ರೆಸ್ ಪಾದಯಾತ್ರೆ ತಪ್ಪು ನಿರ್ಧಾರ-ಆರಗ

0

ಕಾಂಗ್ರೆಸ್ ನ ಪಾದಯಾತ್ರೆ ತಡೆಯಲು ಯಾವುದೇ ಷಡ್ಯಂತ್ರ ನಡೆಸಲಿಲ್ಲ. ವೈಫಲ್ಯಕ್ಕೆ ಕಾಂಗ್ರೆಸ್ನವರು ಏನು ಬೇಕಾದರೂ ಮಾತನಾಡಬಹುದು. ಮೊದಲಿಗೆ ಕೊರೋನಾ ಸಂದರ್ಭದಲ್ಲಿ ಪಾದಯಾತ್ರೆ ಮಾಡಲು ನಿರ್ಧರಿಸಿದ್ದು ಮಹಾತಪ್ಪು” ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಅವರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

“ರಾಜಕೀಯ ಲಾಭಕ್ಕಾಗಿ ಪಾದಯಾತ್ರೆ ಮಾಡಲು ಹೊರಟ ಕಾಂಗ್ರೆಸ್ ನಾಯಕರಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚಾಯಿತು. ಜನರಿಗೆ ನೆರವಾಗುವ ದಕ್ಕಿಂತ ಸ್ವಾರ್ಥ ಉದ್ದೇಶವೇ ಪ್ರಧಾನವಾಗಿತ್ತು. ನೀರಿನ ವಿಚಾರ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಮುಂದಾಗಿದ್ದು ನಾಚಿಕೆಗೇಡಿನ ಸಂಗತಿ” ಎಂದು ಆರಗ ಜ್ಞಾನೇಂದ್ರ ಅವರು ಟೀಕಿಸಿದ್ದಾರೆ.

ಸರ್ಕಾರ ಮೇಕೆದಾಟು ಕೈ ಬಿಟ್ಟಿಲ್ಲ. ಎಲ್ಲರ ಉದ್ದೇಶ ಯೋಜನೆ ಆರಂಭವಾಗಬೇಕು ಎಂಬುದಾಗಿದೆ. ಆದರೂ ಆ ಪಕ್ಷವನ್ನು ಆಂತರಿಕ ರಾಜಕೀಯ ಮೇಲಾಟಕ್ಕೆ ಪಾದಯಾತ್ರೆ ನಡೆದಿದೆ ಆರೋಪಿಸಿದ್ದಾರೆ.

ಕೊರೋನಾ ನಿಯಮ ಉಲ್ಲಂಘಿಸಿದ ಶಾಸಕ ರೇಣುಕಾಚಾರ್ಯ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂಬ ಪ್ರಶ್ನೆಗೆ, ‘ಕಾಯ್ದೆ ಎಲ್ಲರಿಗೂ ಒಂದೇ. ಇಲ್ಲಿ ಯಾರೂ ದೊಡ್ಡವರಲ್ಲ ಎಂದಷ್ಟೇ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಅವರು ಮಾಧ್ಯಮ ಮಿತ್ರರಿಗೆ ತಿಳಿಸಿದ್ದಾರೆ.

ಶಬರಿಮಲೈ ; ಭಕ್ತರಿಂದ ಮಕರ ಜ್ಯೋತಿ ದರ್ಶನ

0

ಕೇರಳದ, ಶಬರಿಮಲೆಯಲ್ಲಿ ಅಯ್ಯಪ್ಪ ಭಕ್ತರು ಮಕರಜ್ಯೋತಿ ದರ್ಶನವನ್ನು ಕಣ್ತುಂಬಿಕೊಂಡರು.

ಇಲ್ಲಿನ ಪೊನ್ನಂಬಲಮೇಡು ಬೆಟ್ಟದಲ್ಲಿ ಸಂಜೆ ಸುಮಾರು 6.30 ರಿಂದ 6.45ರ ವರೆಗೆ ಜ್ಯೋತಿ ದರ್ಶನವಾಯಿತು. ದೇವಾಲಯದಲ್ಲಿ ಮಹಾಮಂಗಳಾರತಿ ಬೆನ್ನಲ್ಲೇ ಪ್ರತ್ಯಕ್ಷವಾದ ಜ್ಯೋತಿಯನ್ನು ಕಂಡು ಭಕ್ತರು ಪುನೀತರಾದರು.

ದೇವಾಲಯದ ಆವರಣದಲ್ಲಿ ನೆರೆದಿರುವ ಭಕ್ತರು “ಸ್ವಾಮಿಯೇ ಶರಣಂ ಅಯ್ಯಪ್ಪ” ಎಂದು ಉದ್ಗರಿಸುತ್ತಿದ್ದರು.

ಕೊರೊನಾ ಸೋಂಕು ಹೆಚ್ಚಿರುವ ಹಿನ್ನೆಲೆಯಲ್ಲಿ ತಿರುವಾಂಕೂರು ದೇವಸ್ಥಾನಂ ಮಂಡಳಿಯು ಸಾಮಾಜಿಕ ಅಂತರ, ಕಡ್ಡಾಯ ಲಸಿಕೆ ಪ್ರಮಾಣಪತ್ರ ಸೇರಿ ಹಲವು ಷರತ್ತುಗಳನ್ನು ವಿಧಿಸಿತ್ತು. ಇದರ ನಡುವೆಯೂ ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಭಕ್ತರು ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗಿಯಾಗಿದ್ದರು ಎಂದು ಮಂಡಳಿ ಮೂಲಗಳಿಂದ ತಿಳಿದುಬಂದಿದೆ.

ಜನವರಿ 20ರ ವರೆಗೆ ದೇವಾಲಯವು ಭಕ್ತರಿಗೆ ಮುಕ್ತವಾಗಿರಲಿದೆ. ದಿನನಿತ್ಯವೂ 250 ಮಂದಿಗೆ ಮಾತ್ರ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಜ್ಯೋತಿ ದರ್ಶನದೊಂದಿಗೆ ವಾರ್ಷಿಕ ಶಬರಿಮಲೆ ಯಾತ್ರೆ ಸಂಪನ್ನಗೊಂಡಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಪ್ರೊ ಕಬಡ್ಡಿ ಲೀಗ್: ವಾರಿಯರ್ಸ್ ಸುಲಭ ಜಯ

0

ದಿನನಿತ್ಯದ ಜೀವನಕ್ಕೆ ತೊಂದರೆ ಉಂಟಾಗದ ರೀತಿಯಲ್ಲಿ ಮತ್ತು ಆರ್ಥಿಕತೆಗೆ ಧಕ್ಕೆಯಾಗದ ಹಾಗೆ ಕೊರೋನಾ ನಿರ್ಬಂಧಗಳನ್ನು ಜಾರಿಗೊಳಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಲಹೆ ನೀಡಿದ್ದಾರೆ.

ಓಮಿಕ್ರಾನ್ ಆರ್ಭಟದಿಂದಾಗಿ ದೇಶಾದ್ಯಂತ ಕೋವಿಡ್-19 ಸೋಂಕಿತರ ಸಂಖ್ಯೆ ಭಾರಿ ಏರಿಕೆ ಕಾಣುತ್ತಿರುವ ಆತಂಕದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ವರ್ಚುವಲ್ ಸಭೆ ನಡೆಸಿದ್ದಾರೆ.

“ಸ್ಥಳೀಯ ಮಟ್ಟದಲ್ಲಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿ ನಿರ್ಬಂಧಗಳನ್ನು ಜಾರಿ ಮಾಡಿ. ಜನರ ಬದುಕಿಗೆ ತೊಂದರೆಯಾಗದಂತೆ ಎಚ್ಚರ ವಹಿಸಿ” ಎಂದು ಪ್ರಧಾನಿಯವರು ಸಲಹೆ ನೀಡಿದ್ದಾರೆ.

ಜಿಲ್ಲೆಗಳಲ್ಲಿ ಕೊರೋನಾ ಸೋಂಕು ಪ್ರಸರಣ ಸ್ಥಿತಿಗತಿ ಬಗ್ಗೆ ಪರಿಶೀಲಿಸಿ, ಪ್ರದೇಶವಾರು ಕಂಟೈನ್ಮೆಂಟ್ ವಲಯಗಳನ್ನು ನಿರ್ಮಿಸುವುದು ಮುಖ್ಯವಾಗಿದೆ. ಮಹಾನಗರಗಳಂತೆಯೇ ಎಲ್ಲ ಜಿಲ್ಲೆಗಳಲ್ಲಿ ಕೊರೋನಾ ಪರಿಸ್ಥಿತಿ ಇಲ್ಲ. ಆದ್ದರಿಂದ ಜನರ ನಿತ್ಯದ ಸಾಮಾಜಿಕ ಹಾಗೂ ಆರ್ಥಿಕ ಚಟವಟಿಕೆಗಳು ಕೊರೋನಾ ನೆಪದಲ್ಲಿ ಭಾದೆಗೊಳಪಡುವುದು ಬೇಡ. ವಿಶೇಷವಾಗಿ ಮನೆ ಬಾಗಿಲಿಗೆ ತೆರಳಿ ಕೊರೋನಾ ಲಸಿಕೆ ಹಾಕುವುದು ಹೆಚ್ಚಾಗಬೇಕು. ಇದರಿಂದ ಲಸಿಕೆ ಅಭಿಯಾನವೂ ಶೇ.100 ರಷ್ಟು ಯಶಸ್ವಿಯಾಗಲು ಸಾಧ್ಯ. ಆಸ್ಪತ್ರೆಗಳ ಮೇಲೆ ಒತ್ತಡ ಕಡಿಮೆ ಮಾಡಲು ಸೌಮ್ಯ ರೋಗಲಕ್ಷಣ ಉಳ್ಳವರಿಗೆ ಹೋಮ್ ಐಸೋಲೇಷನ್ ಹೆಚ್ಚಿನ ಪ್ರಮಾಣದಲ್ಲಿ ಆಗಲಿ ಎಂದು ಪ್ರಧಾನಿ ನಿರ್ದೇಶನ ನೀಡಿದ್ದಾರೆ.

“ಸೋಂಕು ತಗಲದಂತೆ ಮುನ್ನೆಚ್ಚರಿಕೆ ವಹಿಸಬೇಕು. ಮಾಸ್ಕ್ ಗಳನ್ನು ಸರಿಯಾಗಿ ದರಿಸಬೇಕು. ಸಾಮಾಜಿಕ ಅಂತರ ಪಾಲನೆ ಬಹುಮುಖ್ಯ. ಕೇವಲ ಕೊರೋನಾ ಹೆಚ್ಚಾಗುತ್ತಿದೆ ಎಂದು ಭಯದಲ್ಲಿ ಮುಳುಗುವುದು ಬೇಡ. ಯಾವುದೇ ರೂಪಾಂತರಿ ಆದರೂ ಲಸಿಕೆಯು ಪರಿಣಾಮಕಾರಿಯಾಗಿ ನಿಗ್ರಹಿಸುತ್ತದೆ ಎಂದು ವಿಶ್ವಾದ್ಯಂತ ತಜ್ಞ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಲಸಿಕೆ ಬಗ್ಗೆ ಅಪಪ್ರಚಾರಕ್ಕೆ ಕಿವಿಗೊಡಬೇಡಿ ಎಂದು ಮೋದಿಜಿ ಅವರು ಜನರಿಗೆ ಕೊರೋನಾ ಪ್ರಸರಣದ ಕುರಿತು ತಿಳಿಹೇಳಿದ್ದಾರೆ.

ಈ ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ, ಆರೋಗ್ಯ ಸಚಿವ ಮನ್ಸುಖ್ ಮಂಡಾವಿಯ ಉಪಸ್ಥಿತರಿದ್ದರು.