Sunday, February 9, 2025
Sunday, February 9, 2025

ದೇಶದ ಅಭ್ಯುದಯದಲ್ಲಿ ವೈದ್ಯರ ಪಾತ್ರ ಗಣನೀಯ

Date:

ದೇಶದ ಅಭ್ಯುದ್ಯಯಕ್ಕೆ ಮತ್ತು ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಶಿಕ್ಷಕರು ಮತ್ತು ವೈದ್ಯರು ಅತ್ಯಂತ ಮಹತ್ವದ ಪಾತ್ರ ವಹಿಸುತ್ತಾರೆ. ಇವರನ್ನು ಗೌರವಿಸುವುದು ಸಮಾಜದ ಕರ್ತವ್ಯ ಎಂದು ಮಾಗಡಿ ರೋಟರಿ ಸಂಸ್ಥೆ ಅಧ್ಯಕ್ಷ ಕೆ.ಎಚ್‌.ಶಂಕರ್‌ ಅಭಿಪ್ರಾಯಪಟ್ಟರು.

ಮಾಗಡಿ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ದಿನದ ಪ್ರಯುಕ್ತ ವೈದ್ಯರನ್ನು ಸನ್ಮಾನಿಸಿ ಮಾತನಾಡಿದ ಅವರು, ಕೋವಿಡ್‌ ಸಂದರ್ಭದಲ್ಲಿ ನಾವೆಲ್ಲರೂ ಮನೆಯಿಂದ ಹೊರಗೆ ಬರಲು ಭಯ ಪಡುತ್ತಿದ್ದೇವೆ. ಆದರೆ, ಯಾವುದೇ ಭಯ, ಭೀತಿ, ಆತಂಕವಿಲ್ಲದೆ ವೈದ್ಯರು ಕೋವಿಡ್‌ ಸೋಂಕಿತ ರೋಗಿಗಳಿಗೆ ಅಗತ್ಯ ಚಿಕಿತ್ಸೆ ಕೊಟ್ಟು ಅವರನ್ನು ಗುಣಮುಖರಾಗುವಂತೆ ಸೇವೆಯಲ್ಲಿ ನಿರತರಾಗಿದ್ದಾರೆ. ಅವರನ್ನು ಗೌರವಿಸುವುದು ನಾಗರಿಕರಾದ ನಮ್ಮೆಲ್ಲರ ಕರ್ತವ್ಯವಾಗಿದ್ದು, ವೈದ್ಯರ ದಿನದ ಪ್ರಯುಕ್ತ ವೈದ್ಯರೆಲ್ಲರನ್ನು ಸನ್ಮಾನಿಸಲು ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದರು.

ವೈದ್ಯೋ ಹರಿ ನಾರಾಯಣ ಎಂಬಂತೆ ವೈದ್ಯರು ರೋಗಿಗಳ ಪಾಲಿಗೆ ದೇವರೇ ಆಗಿರುತ್ತಾರೆ. ಸರ್ಕಾರಿ ಆಸ್ಪತ್ರೆ ಕೇವಲ ಬಡವರಿಗಾಗಿ ಮಾತ್ರವಲ್ಲದೆ, ಶ್ರೀಮಂತರು ಸಹ ತಮ್ಮ ಆರೋಗ್ಯವನ್ನು ಪರೀಕ್ಷೆ ಮಾಡಿಸಿಕೊಳ್ಳಬೇಕೆಂಬ ವಾತಾವರಣವನ್ನು ವೈದ್ಯರು ಸೃಷ್ಠಿಸಿದ್ದಾರೆ. ಇಲ್ಲಿನ ವೈದ್ಯರ ಅವಿರತ ನಿಸ್ವಾರ್ಥ ಸೇವೆ ಅನನ್ಯವಾದುದು ಎಂದರು.

ಸರ್ಕಾರಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ರಾಜೇಶ್‌ ಮಾತನಾಡಿ, ಸರ್ಕಾರ ಸರ್ಕಾರಿ ಆಸ್ಪತ್ರೆಯನ್ನು ಕೇವಲ ಬಡರಿಗೆ ಮಾತ್ರ ತೆರೆದಿಲ್ಲ, ಶ್ರೀಮಂತರೂ ಸಹ ಇಲ್ಲಿನ ಸೇವೆಯನ್ನು ಪಡೆದುಕೊಳ್ಳುವಂತ ವಾತಾವರಣ ಸರ್ಕಾರ ನಿರ್ಮಿಸಿದೆ. ಸರ್ಕಾರ ಆಸ್ಪತ್ರೆಗಳಿಗೆ ಸಾಕಷ್ಟು ಅನುದಾನ ಹಾಗೂ ಸೌಲಭ್ಯಗಳನ್ನು ನೀಡಿದೆ. ಜೊತೆಗೆ ಸಮಾಜ ಸೇವಕರು, ಮುಖಂಡರು ಸಹ ಆಸ್ಪತ್ರೆಯ ಉನ್ನತೀಕರಣಕ್ಕೆ ಸಹಕಾರ ನೀಡಿದ್ದಾರೆ ಎಂದು ತಿಳಿಸಿದರು.

ರೋಟರಿ ಸಂಸ್ಥೆಯ ಕಾರ್ಯದರ್ಶಿ ಮುನಿಯಪ್ಪ, ವೃತ್ತಿಪರ ಸೇವಾ ಅಧ್ಯಕ್ಷ ನರಸಿಂಹಯ್ಯ, ರೋಟರಿಯನ್‌ ಗಳಾದ ವೇಣುಗೋಪಾಲ್‌, ಎಲ್‌.ಪ್ರಭಾಕರ್‌, ಮನು, ದಕ್ಷಿಣಮೂರ್ತಿ, ಗಣೇಶ್‌, ನಾಗೇಶ್‌, ಡಾ, ಮಂಜುನಾಥ್‌, ಆಸ್ಪತ್ರೆಯ ಡಾ. ನಾಗನಾಥ್‌, ಡಾ. ರಾಕೇಶ್‌, ಡಾ.ರಫೀಕ್‌, ಡಾ. ವಿವೇಕಾನಂದ ಡಾ. ಮುದೊಳೆ, ಡಾ. ಚಂದ್ರಲೇಖಾ ಡಾ. ರಶ್ಮಿ,, ಡಾ.ನವೀನ್‌, ನರ್ಸ್‌ ಪದ್ಮಾ, ಗುಣಶೇಖರ್‌ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಶಿವಮೊಗ್ಗ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕೆಲವು ಮೆಲುಕುಗಳು

ಲೇ: ಗೋಪಾಲ್ ಯಡಗೆರೆ.ಹಿರಿಯ ವರದಿಗಾರರು. ಕನ್ನಡಪ್ರಭ. ಶಿವಮೊಗ್ಗ Klive Special Article ...

Warrant Officer Manjunath ಸ್ಕೈ ಡೈವಿಂಗ್ ಸಂದರ್ಭದಲ್ಲಿ‌ ಪ್ಯಾರಾಚ್ಯೂಟ್ ತೆರೆಯದೇ ಏರ್ ಫೋರ್ಸ್ ಅಧಿಕಾರಿ ಮಂಜುನಾಥ್ ಮರಣ

Warrant Officer Manjunath ಸ್ಕೈ ಡೈವಿಂಗ್ ವೇಳೆ ಪ್ಯಾರಚ್ಯೂಟ್ ತೆರೆಯದೆ ಏರ್ಫೋರ್ಸ್...

Guarantee scheme ರಾಜ್ಯ ಗ್ಯಾರಂಟಿ ಯೋಜನೆಗಳ ಬಗ್ಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷರ ಮೆಚ್ಚುಗೆ

Guarantee scheme ಮಹಿಳೆಯರನ್ನು ಪ್ರಮುಖ ಫಲಾನುಭವಿಗಳನ್ನಾಗಿ ಕೇಂದ್ರೀಕರಿಸಿ ರಾಜ್ಯದಲ್ಲಿ ಜಾರಿಗೊಳಿಸಿರುವ ಐದು...

DC Shivamogga ಕೈಗಾರಿಕಾ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯ‌ಕ್ಕೆ ಒತ್ತು‌ ನೀಡಲಾಗುವುದು- ಗುರುದತ್ತ ಹೆಗಡೆ

DC Shivamogga ಕೈಗಾರಿಕಾ ಪ್ರದೇಶಗಳಲ್ಲಿ ಕುಡಿಯುವ ನೀರು, ಬೀದಿ ದೀಪ,...