Sunday, February 15, 2026
Sunday, February 15, 2026
Home Blog Page 1746

ಸದೃಢ ಕರ್ನಾಟಕನಿರ್ಮಿಸಲು ಪ್ರಧಾನಿ ಸಲಹೆ- ಸಿಎಂ ಬೊಮ್ಮಾಯಿ

0

ಪ್ರಧಾನ ಮಂತ್ರಿಯವರು ಸದೃಢ ಕರ್ನಾಟಕ ನಿರ್ಮಿಸಲು ಸಲಹೆ ನೀಡಿದ್ದಾರೆ. ಅದರಂತೆ ಗುರಿ ತಲುಪಲು ನಾವು ದಿನದ 24 ಗಂಟೆಯೂ ಕೆಲಸ ಮಾಡಲು ನಿರ್ಧರಿಸಿದ್ದೇವೆ. ಸಾಮಾಜಿಕ ನ್ಯಾಯ ಪಾಲನೆ ಜೊತೆಗೆ ಎಲ್ಲರೂ ಸ್ವಾಭಿಮಾನ ಜೀವನ ನಡೆಸಲು ಬೇಕಾದ ವ್ಯವಸ್ಥೆ ಕಲ್ಪಿಸುವುದು ನಮ್ಮ ಸಂಕಲ್ಪ ಎಂದು ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ತಿಳಿಸಿದ್ದಾರೆ.

ಬೆಂಗಳೂರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆರು ತಿಂಗಳಿನಲ್ಲಿ ಕಾರ್ಯನಿರ್ವಹಣೆ, ಸಾಧನೆಯ ಮಾಹಿತಿಯುಳ್ಳ ‘ಭವ್ಯ ಭವಿಷ್ಯಕ್ಕಾಗಿ ಭರವಸೆಯ ಹೆಜ್ಜೆಗಳು’ ಕೈಪಿಡಿಯನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಬಿಡುಗಡೆಗೊಳಿಸಿದರು.

ಸಮರ್ಥ ಸಚಿವರು, ಪ್ರಗತಿಪರ ಶಾಸಕರು ಮತ್ತು ಸರ್ಕಾರದ ಆಶಯಕ್ಕೆ ಪೂರಕವಾಗಿ ಕಾರ್ಯ ನಿರ್ವಹಿಸುವ ಅಧಿಕಾರಿಗಳ ತಂಡದೊಂದಿಗೆ ಸದೃಢ ಕರ್ನಾಟಕ ನಿರ್ಮಾಣಕ್ಕಾಗಿ ದಿನದ 24 ಗಂಟೆಯೂ ಚಿಂತನೆ ನಡೆಸಿ ಕಾರ್ಯೋನ್ಮುಖ ವಾಗುವ ಭರವಸೆಯನ್ನು ಮಾನ್ಯ ಮುಖ್ಯಮಂತ್ರಿಯವರು ತಿಳಿಸಿದ್ದಾರೆ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಸ್ಥಾನದಿಂದ ಚಿಂತಿಸಿ ಸರ್ವರು ಸಮಾನವಾಗಿ ಸ್ವಾಭಿಮಾನದಿಂದ ಸ್ವಾವಲಂಬಿ ಜೀವನ ನಡೆಸುವಂತ ಆಗುವ ನಿಟ್ಟಿನಲ್ಲಿ ಸರ್ಕಾರ ಲಕ್ಷ್ಯ ಹರಿಸಲಿದೆ ಎಂದು ಮಾನ್ಯ ಮುಖ್ಯಮಂತ್ರಿ ಅವರು ತಿಳಿಸಿದ್ದಾರೆ

ಜಿಲ್ಲಾ ಸರ್ಜನ್ ಗಳಿಗೆ ಅಂಗಾಂಗ ಕಸಿ ತಂತ್ರಜ್ಞಾನ ತರಬೇತಿ- ಡಾ.ಸುಧಾಕರ್

0


ದೇಶದಲ್ಲಿ ಸುಮಾರು 2 ಲಕ್ಷ ಅಂಗಾಂಗ ಕಸಿಗೆ ಬೇಡಿಕೆಯಿದೆ. ಹಾಗಾಗಿ ರಕ್ತದಾನ ಮಾಡುವಂತೆಯೇ ಸತ್ತ ನಂತರ ಅಂಗಾಂಗ ದಾನ ಮಾಡುವುದು ಅಗತ್ಯ. ಈ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಬೇಕಿದೆ ಎಂದರು.
ಕೇಂದ್ರ ಆರೋಗ್ಯ ಸಚಿವರು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಕೋವಿಡ್ ನಿರ್ವಹಣೆ ಕುರಿತು ಮಾಹಿತಿ ಪಡೆದಿದ್ದಾರೆ.
ಸ್ಪರ್ಶ್ ಆಸ್ಪತ್ರೆಯಲ್ಲಿ ಅಂಗಾಂಗ ಕಸಿ ಆಸ್ಪತ್ರೆಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮನೆ ಐಸೋಲೇಶನ್ ನಲ್ಲಿರುವವರ ಮೇಲೆ ಹೆಚ್ಚು ನಿಗಾ, ಇ- ಸಂಜೀವಿನಿಯಲ್ಲಿ ಎರಡನೇ ಸ್ಥಾನದಲ್ಲಿರುವುದು, ಅದಕ್ಕೂ ಹೆಚ್ಚಾಗಿ ಆಪ್ತಮಿತ್ರ ಮೂಲಕ ಟೆಲಿ ಟ್ರಯಾಜಿಂಗ್ ಮೊದಲಾದ ಮಾಹಿತಿ ಪಡೆದಿದ್ದಾರೆ. ಬಹಳ ಯಶಸ್ವಿಯಾಗಿ ದೂರವಾಣಿ ಮೂಲಕ ನಿರ್ವಹಣೆ ಮಾಡುತ್ತಿರುವುದು ವಿಶೇಷವಾಗಿದೆ. ಶೇ.95ರಷ್ಟು ಸೋಂಕಿತರು ಮನೆಯಲ್ಲಿದ್ದರೂ ಆತಂಕವಿಲ್ಲ. ಶೇ.4ರಷ್ಟು ಜನರು ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದರು.
ರಾಜ್ಯದಲ್ಲಿ ಮರಣ ಪ್ರಮಾಣ ಶೇ.0.005ರಷ್ಟಿದೆ. ಇದು ಅಧಿಕವಾಗಿಲ್ಲ. ಸಹ ಅಸ್ವಸ್ಥತೆ ಸೇರಿದಂತೆ ಸಾವಿಗೆ ಹಲವು ಕಾರಣಗಳಿವೆ. ಇದಕ್ಕಾಗಿ ಡೆತ್ ಆಡಿಟ್ ನಡೆಸಲಾಗುತ್ತಿದೆ. ಆರೋಗ್ಯ ಕ್ಷೇತ್ರದ ವಿಷನ್ ವರದಿಯನ್ನು ಮುಖ್ಯಮಂತ್ರಿಗಳೇ ಬಿಡುಗಡೆ ಮಾಡಲಿದ್ದಾರೆ. ದೂರದೃಷ್ಟಿಯನ್ನೊಳಗೊಂಡ ವಿಷನ್ ವರದಿ ಇದಾಗಿದ್ದು, ದೇಶದಲ್ಲೇ ಮೊದಲ ಬಾರಿಗೆ ಈ ರೀತಿ ವರದಿ ತಯಾರಾಗಿದೆ ಎಂದರು.

ಪ್ರೊ ಕಬಡ್ಡಿ ಲೀಗ್ ಪಲ್ಟನ್ ಭಾರೀ ಜಯ

0

ವೈಟ್ ಫೀಲ್ಡ್ ನ ಶರಟಾನ್ ಗ್ರ್ಯಾಂಡ್ ಹೋಟೆಲ್ ಸಭಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಪುಣೇರಿ ತಂಡ ಪ್ರಥಮಾರ್ಧದಲ್ಲಿ 5 ಟ್ಯಾಕಲ್ ,2ಆಲೌಟ್, ಮತ್ತು 13 ರೇಡಿಂಗ್ ಸೇರಿ 21 ಅಂಕ ಕಲೆಹಾಕಿ ಮೂರು ಅಂಕಗಳ ಮುನ್ನಡೆ ಗಳಿಸಿತು.
ಮೋಹಿತ್ ಗೇಯಟ್ (14ಅಂಕ) ಮತ್ತು ಅಸ್ಲಾಂ ಇನಾಮ್ದಾರ್ (12 ಅಂಕ) ಅವರ ಮಿಂಚಿನ ರೇಡಿಂಗ್ ನೆರವಿನಿಂದ ಪುಣೇರಿ ಪಲ್ಟನ್ ತಂಡ ಪ್ರೊ ಕಬಡ್ಡಿ ಲೀಗ್ ನ 8ನೇ ಆವೃತ್ತಿಯ 79ನೇ ಪಂದ್ಯದಲ್ಲಿ ಯು.ಪಿ. ಯೋಧಾ ತಂಡದ ವಿರುದ್ಧ 44-38 ಅಂಕಗಳಿಂದ ಗೆಲುವು ಸಾಧಿಸಿತು.
ಇದು ನಿತಿನ್ ತೋಮರ್ ಬಳಗಕ್ಕೆ ದೊರೆತ ಹ್ಯಾಟ್ರಿಕ್ ಜಯವಾಗಿದೆ.
ಇದೇ ವೇಳೆ ರೇಡಿಂಗ್ ನಲ್ಲಿ 13 ಅಂಕ ಸಂಪಾದಿಸಿದ ಯೋಧಾ ತಂಡ ಟ್ಯಾಕಲ್ ನಲ್ಲಿ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು.
ಮೊದಲಾರ್ಧದ ಮುನ್ನಡೆಯಿಂದ ದೊರೆತ ಆತ್ಮವಿಶ್ವಾಸದಲ್ಲಿ ದ್ವಿತೀಯಾರ್ಧ ಆರಂಭಿಸಿದ ಪುಣೇರಿ ಆಟಗಾರರು ಮತ್ತೆ ಸಂಘಟಿತ ಪ್ರದರ್ಶನ ನೀಡುವಲ್ಲಿ ಮೇಲುಗೈ ಸಾಧಿಸಿದರು.
ಯೋಧಾ ಪರ ಏಕಾಂಗಿ ಹೋರಾಟ ನಡೆಸಿದ ಸುರೇಂದರ್ 16 ಅಂಕ ಗಳಿಸಿದರು.
ಆದರೆ ತಂಡದ ಸೋಲು ತಪ್ಪಿಸಲು ಅವರಿಂದಲೂ ಸಾಧ್ಯವಾಗಲಿಲ್ಲ.
ಇದುವರೆಗೆ ಆಡಿದ 14 ಪಂದ್ಯಗಳ ಪೈಕಿ ತಲಾ 7 ಗೆಲುವು, ಸೋಲುಗಳಿಂದ ಒಟ್ಟಾರೆ 37 ಅಂಕ ಕಲೆಹಾಕಿರುವ ಪಲ್ಟನ್ ತಂಡ ಅಂಕಪಟ್ಟಿಯಲ್ಲಿ ಸದ್ಯ ಎಂಟನೇ ಸ್ಥಾನದಲ್ಲಿದೆ.
ಅಷ್ಟೇ ಪಂದ್ಯಗಳಲ್ಲಿ 5 ಜಯ, 6 ಸೋಲು ಮತ್ತು ಮೂರು ಟೈ ಸಾಧಿಸಿರುವ ಯೋಧಾ ತಂಡ ಒಟ್ಟಾರೆ 40 ಅಂಕಗಳೊಂದಿಗೆ 7ನೇ ಸ್ಥಾನಕ್ಕೆ ತೃಪ್ತಿ ಪಡೆದುಕೊಂಡಿದೆ.
ಇಂದಿನ ಪಂದ್ಯ
ಪಟನಾ ಪೈರೇಟ್ಸ್ ಮತ್ತು ತಮಿಳ್ ತಲೈವಾಸ್
ಪಂದ್ಯ ಆರಂಭ : ರಾತ್ರಿ 7.30

ಕೇಂದ್ರದ ಸಾಲದ ವೆಚ್ಚ ಏರಿಕೆ

0

ಕೋವಿಡ್ -19 ಬಿಕ್ಕಟ್ಟಿನ ಪರಿಣಾಮ ಭಾರೀ ಪ್ರಮಾಣದ ಸಾಲ ಪಡೆದಿರುವ ಕೇಂದ್ರ ಸರ್ಕಾರಕ್ಕೆ ಅದರ ಬಡ್ಡಿಯ ವೆಚ್ಚದಲ್ಲಿ ಶೇ.15 ಏರಿಕೆಯಾಗುವ ಸಾಧ್ಯತೆ ಇದೆ.
ನವೆಂಬರ್ ತನಕ ಸರ್ಕಾರ ಬಡ್ಡಿ ಪಾವತಿಗೆ 4.6ಲಕ್ಷ ಕೋಟಿ ರೂ.ಪಾವತಿಸಿದೆ. ಈ ಹಿಂದಿನ ಹಣಕಾಸು ನೀತಿಗಳೂ ಬಡ್ಡಿದರ ಹೆಚ್ಚಳಕ್ಕೆ ಕಾರಣವಾಗಿದೆ.
ಪ್ರಸಕ್ತ ಸಾಲಿನಲ್ಲಿ ತೈಲ ಬಾಂಡ್ ಗಳಿಗೆ 29,281 ಕೋಟಿ ರೂ. ಗಳನ್ನು ಸರಕಾರ ಪಾವತಿಸಿದೆ.ಯುಪಿಎ ಸರ್ಕಾರ ತೈಲ ಕಂಪನಿಗಳಿಗೆ ಸಬ್ಸಿಡಿ ನೀಡಲು ಬಾಂಡ್ ಗಳನ್ನು ಬಿಡುಗಡೆಗೊಳಿಸಿತ್ತು. ಪ್ರತಿವರ್ಷ ಸರಕಾರ ಇದಕ್ಕಾಗಿ 9,990 ಕೋಟಿ ರೂ. ಪಾವತಿಸಬೇಕಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಮುಂಬರುವ 2022-23ರ ಸಾಲಿನಲ್ಲಿ ಸಾಲದ ಬಡ್ಡಿ ದರದ ಬಾಬ್ತು 9.30 ಲಕ್ಷ ಕೋಟಿ ರೂ.ಗೂ ಪಾವತಿಸಬೇಕಾಗಿದ್ದು, ಹಳೆಯ ಅಂದಾಜಿಗೆ ಹೋಲಿಸಿದರೆ ಶೇ.15 ಹೆಚ್ಚಳವಾದಂತಾಗಿದೆ. ಹೀಗಾಗಿ 2021-22ರಲ್ಲಿ ಸಂಗ್ರಹವಾದ ತೆರಿಗೆಯಲ್ಲಿ ಶೇ.45 ಪಾಲು ಸಾಲದ ಬಡ್ಡಿ ತೀರಿಸಲು ಬೇಕಾಗುತ್ತದೆ ಎಂದು ಹಣಕಾಸು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಎನ್ ಡಿಎ ಸರ್ಕಾರ ಸಾರ್ವಜನಿಕ ಬ್ಯಾಂಕ್ ಗಳಿಗೆ ಬಂಡವಾಳ ಮರುಪೂರಣ ನೀಡಲು 3.1 ಲಕ್ಷ ಕೋಟಿ ರೂ.ಗಳ ಬಾಂಡ್ ಗಳನ್ನು 2017ರಲ್ಲಿ ಬಿಡುಗಡೆಗೊಳಿಸಿತ್ತು.
ಅದಕ್ಕೆ ಬಡ್ಡಿ 19,000 ಕೋಟಿ ರೂ. ನೀಡಬೇಕಾಗುತ್ತದೆ.
2021 ರಲ್ಲಿ ಸರ್ಕಾರದ ಕಂದಾಯದಲ್ಲಿ ಶೇ.28ರಷ್ಟು ಸಾಲದ ಬಡ್ಡಿ ತೀರಿಸಲು ಖರ್ಚಾಗಿತ್ತು. ಹೀಗಾಗಿ ಸಾಲದ ವೆಚ್ಚ ತಗ್ಗಿಸುವುದು ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ. ಹೆಚ್ಚುತ್ತಿರುವ ಸಾಲ ಮತ್ತು ಬಡ್ಡಿ ದರದ ಬಗ್ಗೆ ಆರ್ಥಿಕ ತಜ್ಞರು ಎಚ್ಚರಿಸಿದ್ದಾರೆ

ಅಮೆರಿಕ ಶೇ 6.9 ಆರ್ಥಿಕ ಪ್ರಗತಿ

0

ಅಮೆರಿಕದ ಆರ್ಥಿಕತೆ ಕಳೆದ ನಾಲ್ಕನೇ ತ್ರೈಮಾಸಿಕದಲ್ಲಿ (ಅಕ್ಟೋಬರ್-ಡಿಸೆಂಬರ್) ಶೇ.6.9 ಬೆಳವಣಿಗೆ ದಾಖಲಿಸಿದೆ.
2021ರಲ್ಲಿ ಆರ್ಥಿಕತೆ ಬೆಳವಣಿಗೆ ದಾಖಲಿಸಿರುವುದರಿಂದ ಫೆಡರಲ್ ರಿಸರ್ವ್ ತನ್ನ ಬಡ್ಡಿದರಗಳನ್ನು ಮಾರ್ಚ್ ನಲ್ಲಿ ಏರಿಸಲು ಮುಂದಾಗಿದೆ. ಆರ್ಥಿಕತೆಗೆ ಇನ್ನು ಉನ್ನತ ಮಟ್ಟದ ಹಣಕಾಸು ನೆರವು ನೀಡಬೇಕಾದ ಅಗತ್ಯವಿಲ್ಲ ಎಂದು ಫೆಡರಲ್ ರಿಸರ್ವ್ ಮುಖ್ಯಸ್ಥ ಜೇರೋಮ್ ಪೊವೆಲ್ ತಿಳಿಸಿದ್ದಾರೆ.
ಕಳೆದ 1984ರಿಂದ ಇಲ್ಲಿಯವರೆಗಿನ ಅವಧಿಯಲ್ಲೇ ಗರಿಷ್ಠ ಆರ್ಥಿಕ ಬೆಳವಣಿಗೆಯನ್ನು ಅಮೆರಿಕ ದಾಖಲಿಸಿದೆ.
ಕಳೆದ ನಾಲ್ಕು ದಶಕದಲ್ಲೆ ಉತ್ತಮ ಪ್ರಗತಿ ಉಂಟಾಗಿದೆ. ಸರಕು ಮತ್ತು ಸೇವೆಗಳ ವಹಿವಾಟು ವೃದ್ಧಿಸಿದೆ. 2021ರಲ್ಲಿ ವಾರ್ಷಿಕವಾಗಿ ಜಿಡಿಪಿ ಶೇ.5.7ವೃದ್ದಿಸಿದೆ.2020ರಲ್ಲಿ ಕೋವಿಡ್ ಬಿಕ್ಕಟ್ಟಿನಿಂದಾಗಿ ಇದು ಶೇಕಡ 3.4ಕ್ಕೆ ಅಂದರೆ ಕಳೆದ 74 ವರ್ಷಗಳಲ್ಲಿಯೇ ಭಾರಿ ಕುಸಿತಕ್ಕೆ ಈಡಾಯಿತು. ಇದೀಗ ಮತ್ತೆ ಬೆಳವಣಿಗೆ ಹಂತವನ್ನು ಕಾಣುತ್ತಿದೆ.

ಅಮೆರಿಕದಲ್ಲಿ ಕಳೆದವಾರ ನಿರುದ್ಯೋಗ ಭತ್ಯೆಗೆ 2.60 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದರು. ಇದಕ್ಕೂ ಹಿಂದಿನ ವಾರಕ್ಕೆ ಹೋಲಿಸಿದರೆ ಇಳಿಕೆಯಾಗಿದೆ. ಹೀಗಿದ್ದರೂ, ಅಮೆರಿಕದಲ್ಲಿ ಹಣದುಬ್ಬರ ಶೇ.6ರ ಏರುಗತಿಯಲ್ಲಿದ್ದು, ಫೆಡರಲ್ ರಿಸರ್ವ್ ನ ಶೇ.2ರ ಗುರಿಗಿಂತ ಮೇಲಿದೆ. ಆದರೆ ಫೆಡರಲ್ ರಿಸರ್ವ್ ಬಡ್ಡಿ ದರ ಇಳಿಸಲು ಮುಂದಾಗಿರುವುದು ಜಾಗತಿಕ ಷೇರು ಮಾರುಕಟ್ಟೆಯನ್ನು ತಲ್ಲಣಗೊಳಿಸಿದೆ.
ಅಭಿವೃದ್ಧಿಶೀಲ ದೇಶಗಳಿಂದ ಹೂಡಿಕೆ ಹೊರಹೋಗುವ ನಿರೀಕ್ಷೆಯಿದೆ ಎಂದು ತಿಳಿದುಬಂದಿದೆ.

ಆಸ್ಟ್ರೇಲಿಯನ್ ಓಪನ್ ಟೆನ್ನಿಸ್;ಆಶ್ಲೀ- ಬಾರ್ಟಿ ‌ಮಹಿಳೆಯರ ಫೈನಲ್ಸ್ ಗೆ

0

ಆಸ್ಟ್ರೇಲಿಯನ್ ಓಪನ್ ಹಾಲಿ ಆವೃತ್ತಿಯ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿಗಾಗಿ ಸೆಣಸಾಡಲು ಅಗ್ರಶ್ರೇಯಾಂಕದ ಸ್ಥಳೀಯ ಪ್ರತಿಭೆ ಆಶ್ಲೀ, ಅಮೆರಿಕದ ಡೇನಿಯಲ್ ಕಾಲಿನ್ಸ್ ಮೊದಲ ಗ್ರ್ಯಾ ನ್ ಸ್ಲಾಮ್ ಪ್ರಶಸ್ತಿಯ ಕನಸು ಕಾಣುತ್ತಿದ್ದರೆ, ಎರಡನೇ ಸೆಮಿಫೈನಲ್ ನಲ್ಲಿ ಜಯ ಗಳಿಸಿರುವ ಕಾಲಿನ್ಸ್ ಮೊದಲ ಗ್ರ್ಯಾನ್ ಸ್ಲಾಮ್ ಟ್ರೋಫಿಯ ನಿರೀಕ್ಷೆಯಲ್ಲಿದ್ದಾರೆ.

ರಾಡ್ ಲೇವರ್ ಅರೇನಾದಲ್ಲಿ ನಡೆದ 2ಸೆಮಿಸ್ಟರ್ ಪಂದ್ಯಗಳು ಕ್ಷಿಪ್ರಗತಿಯಲ್ಲಿ ಮುಕ್ತಾಯ ಕಂಡಿದೆ. ಮೊದಲ ಪಂದ್ಯದಲ್ಲಿ ಆಶ್ಲೀ, ಅಮೆರಿಕದ ಮ್ಯಾಡಿಸನ್ ಕೀಸ್ ಗೆ 6-1,6-3 ನೇರ ಸೆಟ್ ಗಳಿಂದ ಸೋಲಿಸಿದರೇ, ಎರಡನೇ ಪಂದ್ಯದಲ್ಲಿ ಪೋಲೆಂಡ್ ನ ಇಗಾ ಸ್ವಿಯಾಟೆಕ್ ವಿರುದ್ಧ ಕಾಲಿನ್ಸ್ 6-4,6-1 ನೇರ ಸೆಟ್ ಗಳ ಸುಲಭ ಜಯ ದಾಖಲಿಸಿದರು. ಇವರಿಬ್ಬರ ನಡುವೆ ಶನಿವಾರ ಫೈನಲ್ ನಡೆಯಲಿದೆ. ಸ್ಥಳೀಯ ಆಟಗಾರ್ತಿ ಬಾರ್ಟಿ ಪ್ರಶಸ್ತಿ ಫೇವರಿಟ್ ಎನಿಸಿಕೊಂಡಿದ್ದಾರೆ.

ವಿಶ್ವದ ಅಗ್ರಶ್ರೇಯಾಂಕದ ಆಟಗಾರ್ತಿ ಬಾರ್ಟಿ ಮತ್ತು 51 ನೇ ಶ್ರೇಯಾಂಕದ ಕೀಸ್ ನಡುವಿನ ಪಂದ್ಯ ಕೇವಲ ಒಂದು ಗಂಟೆ ಎರಡು ನಿಮಿಷಗಳಲ್ಲಿ ಮುಕ್ತಾಯಗೊಂಡಿತು. ಪಂದ್ಯದ ಆರಂಭದಿಂದಲೂ ಮೇಲುಗೈ ಸಾಧಿಸಿದ್ದ 25 ವರ್ಷದ ಬಾರ್ಟಿ, ಸ್ಥಳೀಯ ಅಭಿಮಾನಿಗಳ ಬೆಂಬಲದೊಂದಿಗೆ ಸುಲಭ ಜಯಕ್ಕೆ ಪಾತ್ರರಾದರು. ಇಷ್ಟಲ್ಲದೆ ಈ ಮೂಲಕ 42 ವರ್ಷಗಳ ನಂತರ ಆಸ್ಟ್ರೇಲಿಯನ್ ಓಪನ್ ಫೈನಲ್ ಪ್ರವೇಶ ಪಡೆದ ಆಸ್ಟ್ರೇಲಿಯಾದ ಆಟಗಾರ್ತಿ ಎನಿಸಿಕೊಂಡರು. 2019 ರ ಫ್ರೆಂಚ್ ಓಪನ್ ಮತ್ತು 2021ರ ವಿಂಬಲ್ಡನ್ ಪ್ರಶಸ್ತಿಗಳ ಒಡತಿಯಾಗಿರುವ ಬಾರ್ಟಿ ತಮಗೆ ದೊರಕಿದ ಆರು ಬ್ರೇಕ್ ಪಾಯಿಂಟ್ ಅವಕಾಶಗಳಲ್ಲಿ ನಾಲ್ಕನ್ನು ತಮ್ಮ ಪರವಾಗಿಸಿಕೊಂಡರು. ಅವರ ಚಾಕಚಕ್ಯತೆ ಮತ್ತು ಬಲವಾದ ಮುಂಗೈ ಹೊಡೆತಗಳಿಗೆ 2017ರ ಯುಎಸ್ ಓಪನ್ ರನ್ನರ್ ಅಪ್ ಮ್ಯಾಡಿಸನ್ ನಿರುತ್ತರರಾದರು. ಒಂದು ಡಬಲ್ ಫಾಲ್ಟ್ ಎಸ ಗದೆ, ಶರವೇಗದಲ್ಲಿ 5 ಏಸ್ ಗಳನ್ನು ಸಿಡಿಸಿದ ಆಸ್ಟ್ರೇಲಿಯಾದ ತರುಣಿಗೆ ಅರ್ಹ ಜಯ ಲಭಿಸಿತು.

ಅಪರಾಧ ಪ್ರಕರಣ ನಿಯಂತ್ರಿಸಲು ಹತ್ತು ಅಂಶಗಳ ಕಾರ್ಯಕ್ರಮ- ಲಕ್ಷ್ಮೀಪ್ರಸಾದ್

0

ಪೊಲೀಸ್ ಇಲಾಖೆಯನ್ನು ಜನಸ್ನೇಹಿಯಾಗಿ ಸುವುದರ ಜೊತೆಗೆ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳಿಗೆ ಮತ್ತಷ್ಟು ಕಡಿವಾಣ ಹಾಕಿ ಶಾಂತಿ-ಸುವ್ಯವಸ್ಥೆ ಮುಂದುವರಿಸಿಕೊಂಡು ಹೋಗಲು ಜಿಲ್ಲಾ ಪೊಲೀಸ್ ಇಲಾಖೆ 10 ಅಂಶಗಳ ಕಾರ್ಯಕ್ರಮವನ್ನು ಹಾಕಿಕೊಂಡಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿ ಪ್ರಸಾದ್ ಅವರು ತಿಳಿಸಿದ್ದಾರೆ.

ಶಿವಮೊಗ್ಗ ಪ್ರೆಸ್ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಲಕ್ಷ್ಮಿ ಪ್ರಸಾದ್ ಅವರು ಮಾತನಾಡುತ್ತಿದ್ದರು. ” ಹತ್ತು ಅಂಶಗಳ ಕಾರ್ಯಕ್ರಮಗಳ ಮೂಲಕ ರಾಬರಿ, ಕಳ್ಳತನ ಮತ್ತು ಅಪಘಾತಗಳನ್ನು ಶೇ.10 ರಷ್ಟು ಕಡಿಮೆ ಮಾಡುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಹೇಳಿದರು.

ಪೊಲೀಸ್ ಠಾಣೆಗಳನ್ನು ಜನಸ್ನೇಹಿಯಾಗಿ ಸಲು ಸಾರ್ವಜನಿಕರೊಂದಿಗೆ ಹೇಗೆ ವರ್ತಿಸಬೇಕು?, ದೂರು ನೀಡಲು ಬರುವ ಮಹಿಳೆಯರು, ವಯೋವೃದ್ಧರು ಹಾಗೂ ಮಕ್ಕಳೊಂದಿಗೆ ಹೇಗೆ ವರ್ತಿಸಬೇಕು ಎಂಬುದರ ಬಗ್ಗೆ ಪೊಲೀಸರಿಗೆ ತರಬೇತಿ ನೀಡಲಾಗುತ್ತದೆ. ಬಿಟ್ ಪೋಲಿಸ್, ನಗರದಲ್ಲದೆ ಪ್ರತಿ ಹಳ್ಳಿಗಳಲ್ಲೂ ನಡೆಸಲು ನಿರ್ಧರಿಸಲಾಗಿದೆ. ಇದನ್ನು ಇನ್ನು ಆರು ತಿಂಗಳಲ್ಲಿ ಪರಿಣಾಮಕಾರಿಯಾಗಿ ಜಾರಿ ಮಾಡಲಾಗುತ್ತದೆ ಎಂದು ತಿಳಿಸಿದರು.

ಅಪರಾಧ ಕೃತ್ಯಗಳಲ್ಲಿ ಭಾಗಿಯಾದವರು ಜಾಮೀನಿನ ಮೇಲೆ ಬಹಳ ಬೇಗ ಹೊರಬರುವುದು, ಕಡಿಮೆ ಶಿಕ್ಷೆ ಅನುಭವಿಸಿ ಹೊರ ಬಂದು ಯಥಾಪ್ರಕಾರವಾಗಿ ಸಮಾಜ ವಿದ್ರೋಹಿ ಕೃತ್ಯಗಳನ್ನು ನಡೆಸಿ ಸಮಾಜ ಕರಾಗುವುದು ನಡೆದಿದೆ. ಅಂಥವರ ವಿರುದ್ಧ ಕಠಿಣ ಸೆಕ್ಷನ್ ಗಳನ್ನು ಹಾಕಿ ಅಧಿಕ ಶಿಕ್ಷೆಗೆ ಗುರಿಯಾಗುವಂತೆ ಮಾಡುವ ಕಡೆಗೂ ಆದ್ಯತೆ ನೀಡಿ ಕೆಲಸ ಮಾಡಲಾಗುತ್ತದೆ. ಶಾಲೆ ಬಿಟ್ಟು ಬಾರ್ ಬೆಂಡಿಂಗ್, ಗಾರೆ ಹಾಗೂ ಇತರೆ ಕೂಲಿಕೆಲಸ ಹೋಗುತ್ತಿರುವ ಬಹಳಷ್ಟು ಮಕ್ಕಳು ಬಹಳ ಬೇಗ ಮಾದಕ ವ್ಯಸನಗಳ ಕೂಪಕ್ಕೆ ಬೀಳುತ್ತಿದ್ದಾರೆ. ಇದನ್ನು ತಪ್ಪಿಸುವ ಸಲುವಾಗಿ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಅವರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಾಕಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದರು.

ಶಾಲೆ, ಕಾಲೇಜುಗಳಲ್ಲಿ ಮಕ್ಕಳು ಎದುರಿಸುವ ಸಮಸ್ಯೆಗಳನ್ನು ಅರಿಯುವುದು, ಸಮಾಜದಲ್ಲಿ ಪೊಲೀಸ್ ಇಲಾಖೆ ಗೌರವ, ವಿಶ್ವಾಸ ಹಾಗೂ ನಂಬಿಕೆ ವೃದ್ಧಿಸುವ ಮತ್ತು ಅವರ ಸಮಸ್ಯೆಗಳನ್ನು ಹೇಳಿಕೊಳ್ಳುವ ಸಲುವಾಗಿ ಶಾಲೆ ಕಾಲೇಜುಗಳ ಶಿಕ್ಷಕರು, ವರ್ತಕರು, ಕಾರ್ಮಿಕರು, ಹಣ್ಣು ಮಾರುವವರು ಮತ್ತು ಆಟೋ ಚಾಲಕರು ಸೇರಿದಂತೆ ಎಲ್ಲ ವರ್ಗಗಳ ವಾಟ್ಸಪ್ ಗ್ರೂಪ್ ಗಳಲ್ಲಿ ಪೊಲೀಸರಿಂದ ಸೇರಿಸಲಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ಅವರು ತಿಳಿಸಿದ್ದಾರೆ.

ಭಾರತ ಆರ್ಥಿಕ ಪ್ರಗತಿಯ ಹಾದಿಯಲ್ಲಿದೆ

0

ಭಾರತದ ಆರ್ಥಿಕತೆ ಬೆಳವಣಿಗೆಯ ಹಾದಿಯಲ್ಲಿದೆ ಎಂದು ವೇದಾಂತ ಸಮೂಹದ ಅಧ್ಯಕ್ಷ ಅನಿಲ್ ಅಗರ್ವಾಲ್ ತಿಳಿಸಿದ್ದಾರೆ.
2300 ವರ್ಷಗಳ ಹಿಂದೆ ಚಾಣಕ್ಯ ಆರ್ಥಿಕ ಪ್ರಗತಿಯು ದೇಶಕ್ಕೆ ಅಭ್ಯುದಯ ತರುತ್ತದೆ ಎಂದಿದ್ದ. ಇವತ್ತು ಭಾರತ ಸಂಶೋಧನೆ ಮತ್ತು ಡಿಜಿಟಲೀಕರಣದ ಬಲದಿಂದ ಅಭಿವೃದ್ಧಿಪಥದಲ್ಲಿ ಮುನ್ನಡೆಯುತ್ತಿದೆ ಎಂದರು.
ಸಂಶೋಧನೆ ಮತ್ತು ಡಿಜಿಟಲೀಕರಣ ಮತ್ತು ಸರ್ಕಾರದ ಸುಧಾರಣೆ ಕ್ರಮಗಳ ಪರಿಣಾಮದ ಬೆಳವಣಿಗೆಗೆ ಪೂರಕ ಸಂಪನ್ಮೂಲ ಸೃಷ್ಟಿಯಾಗಿದೆ ಎಂದು ತಿಳಿಸಿದ್ದಾರೆ.
ಹಾಲಿ ಉತ್ಪಾದಕ ವಲಯದ ಕಂಪನಿಗಳು ಹಾಗೂ ಸರ್ಕಾರಿ ಕಂಪನಿಗಳು ಪೂರ್ಣಪ್ರಮಾಣದಲ್ಲಿ ಉತ್ಪಾದನೆಯಲ್ಲಿ ತೊಡಗಿಸಿಕೊಳ್ಳುವಂತೆ ನೋಡಿಕೊಳ್ಳಬೇಕು. ಇದರಿಂದ ಒಟ್ಟಾರೆ ಉತ್ಪಾದನೆಯನ್ನು 2-3 ಪಟ್ಟು ವೃದ್ದಿಸಬಹುದು. ಇದು ಉದ್ಯೋಗವಕಾಶ ಹೆಚ್ಚಿಸಬಲ್ಲದು ಎಂದರು.
ಇಡೀ ಜಗತ್ತು ಭಾರತಕ್ಕೆ ಭೇಟಿನೀಡಲು ಬಯಸುತ್ತಿದೆ. ಹೀಗಾಗಿ ಪ್ರವಾಸೋದ್ಯಮ ಹತ್ತುಪಟ್ಟು ಬೆಳೆಯುವ ನಿರೀಕ್ಷೆ ಇದೆ. ದೇಶಕ್ಕೆ 10,000 ವರ್ಷಗಳ ಇತಿಹಾಸ ಇದೆ ಎಂದು ಅವರು ಹೇಳಿದರು. ಮೂಲಸೌಕರ್ಯ ಮತ್ತು ರಿಯಲ್ ಎಸ್ಟೇಟ್ ವಲಯಕ್ಕೆ ಉತ್ತೇಜನ ನೀಡಬೇಕು. ಸಂಸ್ಕೃತಿ, ಕಲೆ ಮತ್ತು ಕರಕುಶಲ ಕ್ಷೇತ್ರಗಳಿಗೂ ಪ್ರೋತ್ಸಾಹ ನೀಡಬೇಕು ಎಂದು ಸಲಹೆ ನೀಡಿದರು.

ಸಂಸ್ಕೃತಿ ಮತ್ತು ಸಂಸ್ಕೃತ ಉಳಿಸಿದ ಮತ್ತೂರು-ಬಿ.ವೈ.ರಾಘವೇಂದ್ರ

0

ಸಂಸ್ಕೃತಿ ಮತ್ತು ಸಂಸ್ಕೃತವನ್ನು ಉಳಿಸಿದ ಕೀರ್ತಿ ಮತ್ತುರಿನ ಹಿರಿಯರಿಗೆ ಸಲ್ಲುತ್ತದೆ ಎಂದು ಸಂಸದ ಬಿ. ವೈ. ರಾಘವೇಂದ್ರ ಅವರು ತಿಳಿಸಿದ್ದಾರೆ.

ಶಿವಮೊಗ್ಗ ತಾಲೂಕಿನ ಮತ್ತೂರು ಗ್ರಾಮದಲ್ಲಿ ತುಂಗಾ ನದಿಗೆ ತಡೆಗೋಡೆ ನಿರ್ಮಾಣ ಕಾರ್ಯದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಅವರು ಬಾಗಿನ ಅರ್ಪಿಸಿ ಮಾತನಾಡುತ್ತಿದ್ದರು.

ಮತ್ತೂರು ಗ್ರಾಮ ನಮ್ಮ ದೇಶದ ಆಸ್ತಿ. ತುಂಗಾ ನದಿಯ ದಂಡೆಗಳು ಮಳೆಗಾಲದಲ್ಲಿ ಹೆಚ್ಚು ಹಾನಿಗೊಳಗಾಗಿತ್ತು. ಈ ಕಾರಣದಿಂದ ತಡೆಗೋಡೆ ನಿರ್ಮಿಸುವ ಕೆಲಸ ಚಾಲನೆ ದೊರೆಯುತ್ತಿದೆ ಎಂದು ರಾಘವೇಂದ್ರ ಅವರು ಹೇಳಿದರು.

ಆದಷ್ಟು ಶೀಘ್ರದಲ್ಲೇ ಕಾಮಗಾರಿ ಮುಗಿದು. ಇಲ್ಲಿನ ಜನರಿಗೆ ಉಪಯೋಗವಾಗಲಿ. ನಾನು ಇಲ್ಲಿ ಕೇವಲ ಸೇತುವೆಯಾಗಿ ಕಾರ್ಯನಿರ್ವಹಿಸಿದ್ದೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಪ್ರಾಂತ್ಯ ಕಾರ್ಯ ವಾಹ ಪಟ್ಟಾಭಿರಾಮ್, ಕುಮದ್ವತಿ ಸಂಸ್ಥೆಯ ಮುಖ್ಯಸ್ಥೆ ತೇಜಸ್ವಿನಿ ರಾಘವೇಂದ್ರ, ಭಾನುಪ್ರಕಾಶ್, ಶಿವನಂಜಪ್ಪ, ಮಹೇಶ್ ಇನ್ನಿತರರು ಉಪಸ್ಥಿತರಿದ್ದರು.

ರಾಷ್ಟ್ರೀಯ ಪ್ರಶಸ್ತಿ ಯಾರಿಗೆ ಸಂದರೂ ಗೌರವಿಸುವುದನ್ನ ಕಲಿಯೋಣ- ಕರಣ್ ಸಿಂಗ್

0

ಕಾಂಗ್ರೆಸ್ ಮುಖಂಡ ಗುಲಾಮ್ ನಬಿ ಆಜಾದ್ ಅವರಿಗೆ ಪ್ರತಿಷ್ಠಿತ ” ಪದ್ಮಭೂಷಣ” ಪ್ರಶಸ್ತಿ ಲಭಿಸಿದ ವಿಷಯದಲ್ಲಿ ಕಾಂಗ್ರೆಸ್ ಒಳಗೆ ಎದ್ದಿರುವ ವಿವಾದ ಕುರಿತು ಕಾಂಗ್ರೆಸ್ ಮತ್ತೊಬ್ಬ ಹಿರಿಯ ನಾಯಕ ಕರಣ್ ಸಿಂಗ್ ಅವರು ಸಾಂತ್ವನ ಹೇಳಿದ್ದಾರೆ.

ರಾಷ್ಟ್ರೀಯ ಪ್ರಶಸ್ತಿಗಳು ಯಾರಿಗೆ ಲಭಿಸಿದರೂ ಗೌರವಾರ್ಹ. ನಮ್ಮ ಪಕ್ಷದ ಮುಖಂಡನಿಗೆ ಈಗ ಅಗೌರವ ಬಂದಿರುವುದರಿಂದ ಅವರನ್ನು ಅಭಿನಂದಿಸಬೇಕು ಎಂದು ಹೇಳಿದ್ದಾರೆ. ಆಜಾದ್ ಗೆ ಪದ್ಮ ಪ್ರಶಸ್ತಿ ಪಕ್ಷದೊಳಗೆ ಭಾರೀ ವಿವಾದವನ್ನು ಸೃಷ್ಟಿಸಿದೆ. ಪಶ್ಚಿಮ ಬಂಗಾಳದ ಮಾಜಿ ಸಿಎಂ ಬುದ್ಧದೇವ್ ಭಟ್ಟಾಚಾರ್ಜಿ ಪದ್ಮ ಪ್ರಶಸ್ತಿ ತಿರಸ್ಕರಿಸುವುದನ್ನು ಉಲ್ಲೇಖಿಸಿದ್ದ ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್, ಬುದ್ಧದೇವ್ ಅಜಾದಿ ಬಯಸಿದ್ದರು. ಗುಲಾಮಿತನವನ್ನ‌ಲ್ಲ ಎಂದು ಟಾಂಗ್ ನೀಡಿದ್ದರು. ಇದಕ್ಕೆ ಉತ್ತರಿಸಿರುವ ಕರಣ್ ಸಿಂಗ್, ಇಂತಹ ಕುಹಕ ಗಳಿಂದ ಪಕ್ಷ ಬೆಳೆಯುವುದಿಲ್ಲ. ಪ್ರಶಸ್ತಿ ಯಾರಿಗೆ ಸಂದರೂ ಸರಿಯೇ ಅದನ್ನು ಗೌರವಿಸುವುದು ಕಲಿಯಬೇಕು. ರಾಷ್ಟ್ರಪ್ರಶಸ್ತಿಗಳು ವಿಷಯದಲ್ಲಿ ರಾಜಕೀಯ ಬೆರೆಸಬಾರದು ಎಂದು ತಿಳಿಸಿದ್ದಾರೆ.