Sunday, February 15, 2026
Sunday, February 15, 2026
Home Blog Page 1747

ಚೀನಾ ವಶದಲ್ಲಿದ್ದ ಭಾರತೀಯ ಶ್ರೀರಾಮ್ ‌ಮರಳಿಭಾರತಕ್ಕೆ

0

ಅರುಣಾಚಲ ಪ್ರದೇಶ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಅಪಹರಿಸಿತ್ತು ಎನ್ನಲಾಗಿದ್ದ ಶ್ರೀರಾಮ್ ಮಿರಮ್ ತರೋನ್ ನನ್ನು ಚೀನಾ ಸೇನೆಯು, ಭಾರತೀಯ ಸೇನೆಗೆ ಹಸ್ತಾಂತರಿಸಿದೆ. ಭಾರತ, ಚೀನಾ ಸೇನೆಯ ಸಂವಹನ ಕೇಂದ್ರವಾಗಿರುವ ವಾಛಾ ದಮಾಯಿ ನಲ್ಲಿ ಗುರುವಾರ ಯುವಕನನ್ನು ಒಪ್ಪಿಸಿದ್ದಾರೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಅವರು ತಿಳಿಸಿದ್ದಾರೆ.

ಸದ್ಯಕ್ಕೆ ಯುವಕನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ಜನವರಿ 18ರಂದು ಯುವಕ ಕಣ್ಮರೆಯಾಗಿದ್ದ. ವಾಸ್ತವ ಗಡಿ ನಿಯಂತ್ರಣ ರೇಖೆ ಬಳಿಯಿಂದ ಯುವಕ ನಾಪತ್ತೆಯಾಗಿದ್ದ ಕಾರಣ, ಅಪಹರಣ ವಾಗಿರುವ ಅನುಮಾನ ಮೂಡಿತ್ತು. ಯುವಕನ ಜೊತೆಗಿದ್ದ ಆತನ ಸ್ನೇಹಿತ ಕೂಡ ಚೀನಾ ಸೈನಿಕರು ಕರೆದೊಯ್ದಿದ್ದಾರೆ ಎಂದು ಆತ ಹೇಳಿಕೆಯನ್ನು ನೀಡಿದ್ದಾನೆ. ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ ರಕ್ಷಣಾ ಸಚಿವಾಲಯ ಸೇನಾಧಿಕಾರಿಗಳು ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಧನ್ಯವಾದಗಳು ಎಂದು ರಿಜಿಜು ಅವರು ಮಾಧ್ಯಮ ಮಿತ್ರರಿಗೆ ತಿಳಿಸಿದ್ದಾರೆ.

ಕೋಡೂರಿನಲ್ಲಿ ಟವರೇರಿ ಆತ್ಮಹತ್ಯೆಗೆ ಪ್ರಯತ್ನ

0

ಹೊಸನಗರ ತಾಲ್ಲೂಕಿನ ಕೆರೆಹಳ್ಳಿ ಹೋಬಳಿ ಶಾಂತಪುರ ಕೃಷ್ಣಮೂರ್ತಿ ಬಿನ್ ಹುಚ್ಚನಾಯ್ಕ
ಸರ್ವೆ ನಂಬರ್ 14ರಲ್ಲಿ ಸುಮಾರು 1994-95 ರಿಂದ ಒಂದು ನೀವೆಶನದಲ್ಲಿ ಸಣ್ಣ ಗುಡಿಸಿಲಿನಲ್ಲಿ ವಾಸಿಸುತ್ತಿದ್ದಾರೆ. ರಾತ್ರೋರಾತ್ರಿ ಬಲವಂತದಿಂದ ಡಿ. ಕೆ. ಮಂಜುನಾಥ್ ಅವರು ಮನೆ ಬಿಡಿಸಿ ಕಳುಹಿಸಿ ಮನೆಯನ್ನು ಕೆಡವಿ ನೆಲಸಮ ಮಾಡಿ ಜಾಗ ಕಬಳಿಸಿದ್ದಲ್ಲದೆ ತೊಡೆ ತಟ್ಟಿ ಬೆದರಿಕೆ ಹಾಕಿದ್ದರಿಂದ ನೊಂದು ಕೃಷ್ಣಮೂರ್ತಿ ಬಿನ್ ಹುಚ್ಚನಾಯ್ಕ್ ಕೋಡೂರಿನ ಏರ್ಟೆಲ್ ಟವರ್ ಹತ್ತಿ ಆತ್ಮಹತ್ಯೆಗೆ ಯತ್ನಿಸಿದರು.ಆಗ ಗ್ರಾಮಸ್ಥರು, ಪೋಲಿಸ್ ಅಧಿಕಾರಿಗಳು, ಫೈರ್ ಎಂಜಿನ್ ಅಧಿಕಾರಿಗಳು ಹಾಗೂ ಗ್ರಾಮಸ್ಥರು ನ್ಯಾಯ ದೊರಕಿಸಿ ಕೊಡುವುದಾಗಿ ಭರವಸೆ ಕೊಟ್ಟರು. ಇದಾದ ನಂತರ ಕೃಷ್ಣಮೂರ್ತಿಯವರು ಟವರ್ ಇಂದ ಕೆಳಗಿಳಿದು ಬಂದರು.
ತಹಶೀಲ್ದಾರ್ ಹಾಗೂ ಪೋಲಿಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನ್ಯಾಯ ದೊರಕಿಸಿ ಕೊಡುತ್ತೆವೆಂದು ಸಮಾಧಾನ ಪಡಿಸಿದರು.
ಸ್ಥಳದಲ್ಲಿ ತಹಶೀಲ್ದಾರ್ ರಾಜೀವ್
ಸರ್ಕಲ್ ಇನ್ಸ್‌ಪೆಕ್ಟರ್ ಮಧುಸೂದನ್
ಸಬ್ ಇನ್ಸ್‌ಪೆಕ್ಟರ್ ಶಿವಾನಂದ್
ಕೋಡೂರಿನ ಗ್ರಾಮಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುನಂದ,
ಉಪಾಧ್ಯಕ್ಷ ಜಯಪ್ರಕಾಶ್ ಶೆಟ್ಟಿ,
ಸದಸ್ಯರು ಕಲಗೋಡು ಉಮೇಶ್, ಸವಿತ ಕೆ ಎಸ್
ಹಾಗೂ ಹಲವಾರು ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ : ಸೌಜನ್ಯ
ಶ್ರೀ ಆದರ್ಶ ಶಾಕೊಳ್ಳಿ

ಪೋಲಿಸರಿಗೆ ಬಾಡಿವೋರ್ನ್ ಕ್ಯಾಮರಾ: ದಾಖಲಾತಿ ಕೇಳಿದ ಕೋರ್ಟ್

0

ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಗಾಗಿ ಬಾಡಿವೋರ್ನ್ ಕ್ಯಾಮರಾ ಖರೀದಿಗೆ ಹೊರಡಿಸಿರುವ ಕಾರ್ಯಾದೇಶ ಹಾಗೂ ಅದಕ್ಕೆ ಸಂಬಂಧಿಸಿದ ದಾಖಲೆಯನ್ನು ಸಲ್ಲಿಸುವಂತೆ ಸರಕಾರಕ್ಕೆ ಹೈಕೋರ್ಟ್ ಸೂಚಿಸಿದೆ. ಇದರೊಂದಿಗೆ ಒಂದು ವಾರ ಗಡುವು ನೀಡಿದೆ.
ಬಾಡಿವೋರ್ನ್ ಕ್ಯಾಮೆರಾವನ್ನು ಪೊಲೀಸ್ ಸಿಬ್ಬಂದಿ ಧರಿಸಿದರೆ, ಅವರ ಕರ್ತವ್ಯ ನಿರ್ವ ಹಣೆಯನ್ನು ಪೊಲೀಸ್ ಠಾಣೆಯಿಂದಲೇ ಹಿರಿಯ ಅಧಿಕಾರಿಗಳು ಮೆಲ್ವಿಚಾರಣೆ ನಡೆಸಬಹುದು. ಪೋಲಿಸರ ಭ್ರಷ್ಟಾಚಾರವನ್ನು ತಪ್ಪಿಸಬಹುದು. ಕಾನೂನು ಉಲ್ಲಂಘನೆ ಪ್ರಕರಣಗಳಲ್ಲಿ ಪೋಲಿಸರ ಮೇಲೆ ತಪ್ಪಿತಸ್ಥರೇ ತಿರುಗಿ ಬಿದ್ದಿರುವ ಘಟನೆಗಳೂ ಸಾಕಷ್ಟಿವೆ. ಕ್ಯಾಮರಾ ಧರಿಸುವುದರಿಂದ ಪ್ರಾಮಾಣಿಕ ಪೊಲೀಸರಿಗೆ ರಕ್ಷಣೆ ಸಿಗಲಿದೆ.
ವಕೀಲೆ ಗೀತಾ ಮಿಶ್ರಾ ಸಲ್ಲಿಸಿರುವ ಪಿಐಎಲ್ ಹೈಕೋರ್ಟ್ ಸಿಜೆ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ಸರ್ಕಾರಿ ವಕೀಲರು, ಬಾಡಿವೋರ್ನ್ ಕ್ಯಾಮೆರಾ ಖರೀದಿಗಾಗಿ ಹೊರಡಿಸಿರುವ ಕಾರ್ಯಾದೇಶ ಮತ್ತು ಇತರ ದಾಖಲೆಗಳು ಸಿದ್ಧ ಇವೆ. ಆದರೆ, ತಾಂತ್ರಿಕ ಸಮಸ್ಯೆಯಿಂದ ಇ-ಫೈಲಿಂಗ್ ಮಾಡಲಾಗಲಿಲ್ಲ. ಒಂದು ವಾರ ಕಾಲಾವಕಾಶ ನೀಡಿದರೆ ಎಲ್ಲಾ ಅಗತ್ಯ ಮಾಹಿತಿ ಸಲ್ಲಿಸಲಾಗುವುದು ಎಂದರು.
ಈ ಮನವಿ ಪುರಸ್ಕರಿಸಿದ ನ್ಯಾಯಪೀಠ, ವಿಚಾರಣೆಯನ್ನು ಫೆಬ್ರವರಿ 7ಕ್ಕೆ ಮುಂದೂಡಿ, ಇದೇ ಕೊನೆಯ ಅವಕಾಶ. ಮತ್ತು ಸಮಯ ನೀಡುವುದಿಲ್ಲ ಎಂದು ಆದೇಶ ಹೊರಡಿಸಿದೆ.

ಓಬಿಸಿ ಪರ ಸಾಧಿಸುವವರಿಗೆ’ಉತ್ತರ’ ಪ್ರದೇಶ

0

ಉತ್ತರಪ್ರದೇಶದ ವಿಧಾನ ಸಭೆ ಚನಾವಣೆಯಲ್ಲಿ ಇತರೆ ಹಿಂದುಳಿದ ವರ್ಗ ನಿರ್ಣಾಯಕವಾಗಿದೆ. ಈ ಪಕ್ಷಗಳೂ ಕಸರತ್ತು ತೀವ್ರಗೊಳಿಸಿವೆ.

‘ಸಾಮಾಜಿಕ ನ್ಯಾಯ’ ಪರಿಕಲ್ಪನೆಯ ಪದಕ್ಕೆ ಉತ್ತರಪ್ರದೇಶ ಮತ್ತು ಬಿಹಾರದಲ್ಲಿ ಎಲ್ಲಿಲ್ಲದ ಮಹತ್ವ ಇದೆ. ಒಬಿಸಿ ಮೀಸಲು ಪ್ರತಿಪಾದಿಸಿದ ಮಂಡಲ್ ಕಮಿಷನ್ ವರದಿ ಮೂಲಕ ಈ ಎರಡೂ ರಾಜ್ಯಗಳಲ್ಲಿ ಅಗಾಧ ರಾಜಕೀಯ ಪರಿವರ್ತನೆಗಳು ಘಟಿಸಿದವು. ಈ ಆಂದೋಲನದ ಜ್ವಾಲೆಯಲ್ಲಿಯೇ ಮೂಲಾಯಂ ಸಿಂಗ್ ಯಾದವ್ ಅಭ್ಯುದಯಕ್ಕೆ ಬಂದರು. 1990 ದಶಕದಲ್ಲಿ ಸಮಾಜವಾದಿ ಪಾರ್ಟಿ ಕಟ್ಟಿ ಯಶಸ್ಸಿನ ಉತ್ತಂಗ ತಲುಪಿದರು. ಅಲ್ಲಿಂದ ಇಲ್ಲಿಯವರೆಗೆ ಒಬಿಸಿ ಮತ ಬ್ಯಾಂಕ್ ಪ್ರತ್ಯೇಕತೆಯ ಅಸ್ಮಿತೆಯನ್ನು ಕಾಯ್ದುಕೊಂಡಿದೆ.

2017ರ ವಿಧಾನಸಭೆ ಹಾಗೂ 2019 ರ ಲೋಕಸಭೆ ಚುನಾವಣೆಗಳಲ್ಲಿ ಒಬಿಸಿ ಸಮುದಾಯಗಳ ಒಲವು ಗಿಟ್ಟಿಸುವಲ್ಲಿ ಯಶಸ್ವಿಯಾದದ್ದರಿಂದಲೇ ಬಿಜೆಪಿ ಭರ್ಜರಿ ಗೆಲುವು ಸಾಧಿಸಿತ್ತು. ಈ ಸಾರಿ ಕೂಡ ಒಬಿಸಿ ಮತಗಳ ಸುತ್ತ ನಡೆಯುತ್ತಿರುವ ಮಹಾಸಮರ ಎನಿಸಿದೆ.

ಶಾಲಾ ಚಟುವಟಿಕೆ:ಶೀಘ್ರ ಕೇಂದ್ರದಿಂದಮಾರ್ಗಸೂಚಿ

0

ಕೊರೋನಾ ಸಾಂಕ್ರಾಮಿಕ ದಿಂದಾಗಿ ಕಳೆದ ಎರಡು ವರ್ಷಗಳಿಂದ ದೇಶದಾದ್ಯಂತ ಸರಿಯಾಗಿ ನಡೆದ ಶಾಲಾ ಶೈಕ್ಷಣಿಕ ಚಟುವಟಿಕೆಗಳನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಹೊಸ ಪಠ್ಯಕ್ರಮ, ಕಲಿಕಾ ಅವಧಿ, ಬೋಧನಾ ಸೂತ್ರ ದೊಂದಿಗೆ ಎಲ್ಲಾ ರಾಜ್ಯಗಳಲ್ಲಿ ಶಾಲೆಗಳನ್ನು ತೆರೆಯಲು ಕೇಂದ್ರ ಸರ್ಕಾರವು ಮಾರ್ಗಸೂಚಿಯನ್ನು ಶೀಘ್ರವೇ ಪ್ರಕಟಿಸಲಿದೆ.

ಆನ್ ಲೈನ್ ಕ್ಲಾಸ್ ಗಳಲ್ಲೇ ಮಗ್ನರಾಗಿರುವ ವಿದ್ಯಾರ್ಥಿಗಳನ್ನು ಮುಂಚಿನಂತೆ ಶಾಲಾ ವಾತಾವರಣಕ್ಕೆ ಒಗ್ಗಿಸಲು ಅಗತ್ಯವಾದ ಪಠ್ಯಕ್ರಮ ಮಾದರಿಯೊಂದನ್ನು ಜಾರಿಗೆ ತರುವ ಮೂಲಕ ಹಂತಹಂತವಾಗಿ ಶಾಲೆಗಳನ್ನು ಪೂರ್ಣರೂಪದಲ್ಲಿ ತೆರೆಯಲಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಬಗ್ಗೆ ಶಿಕ್ಷಣ ತಜ್ಞರು, ತಜ್ಞ ವೈದ್ಯರು, ಕೇಂದ್ರ ಶಿಕ್ಷಣ ಸಚಿವಾಲಯದ ಅಧಿಕಾರಿಗಳ ಮಟ್ಟದಲ್ಲಿ ಈಗಾಗಲೇ ಮಹತ್ವದ ಸಭೆ ನಡೆದಿದೆ. ಮಾರ್ಗಸೂಚಿಯನ್ನು ಸಿದ್ಧಪಡಿಸುವಲ್ಲಿ ಶಿಕ್ಷಣತಜ್ಞರು ನಿರತರಾಗಿದ್ದಾರೆ. ಓಮಿಕ್ರಾನ್ ತೀವ್ರ ಪ್ರಸರಣವನ್ನು ಗಮನದಲ್ಲಿರಿಸಿಕೊಂಡು ಮತ್ತು ಮುಂದಿನ ದಿನಗಳಲ್ಲಿ 10 ರಿಂದ 15 ವರ್ಷದ ಮಕ್ಕಳಿಗೆ ಕೊರೋನಾ ಲಸಿಕೆ ಅಭಿಯಾನ ಆರಂಭವಾಗುವ ಸಾಧ್ಯತೆಯನ್ನು ಕೂಡ ಪರಿಗಣಿಸಿ ಹೊಸ ಶಿಕ್ಷಣ ಮಾರ್ಗಸೂಚಿಯು ಪ್ರಕಟವಾಗಲಿದೆ ಎಂದು ತಿಳಿದುಬಂದಿದೆ. ಇತ್ತೀಚೆಗೆ ಖ್ಯಾತ ವೈರಾಣು ತಜ್ಞ ಚಂದ್ರಕಾಂತ್ ಲಹರಿಯಾ, ಸಾರ್ವಜನಿಕ ನೀತಿ ತಜ್ಞಿ ಯಾಮಿನಿ ಅಯ್ಯರ್ ಸೇರಿದಂತೆ ಅನೇಕ ಗಣ್ಯರು ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಅವರನ್ನು ಭೇಟಿ ಮಾಡಿ, ಶಾಲೆಗಳನ್ನು ಹಂತ ಹಂತವಾಗಿ ತೆರೆಯುವ ಸಂಬಂಧ ಕ್ರಮಕೈಗೊಳ್ಳಲು ಒತ್ತಾಯಿಸಿದ್ದರು.

ಮಹಾರಾಷ್ಟ್ರ ದಲ್ಲಿ ಎಲ್ಲಾ ತರಗತಿಗಳಿಗೆ ಶಾಲೆಗಳನ್ನು ತೆರೆಯಲಾಗಿದೆ. ಫೆಬ್ರವರಿ 1 ರಿಂದ ತಮಿಳುನಾಡಿನಲ್ಲಿ ಕೂಡ ಎಲ್ಲ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಬೌದ್ಧಿಕ ತರಗತಿಗಳು ಆರಂಭಿಸಲಾಗುತ್ತಿದೆ. ಜೊತೆಗೆ ಫೆಬ್ರವರಿ 1 ರಿಂದ ಹರಿಯಾಣದಲ್ಲಿ 10ರಿಂದ 12ನೇ ತರಗತಿಯವರೆಗೆ ಆಫ್ಲೈನ್ ತರಗತಿಗಳನ್ನು ಆರಂಭಿಸಲಾಗುತ್ತಿದೆ

ಪರಪ್ಪನ ಅಗ್ರಹಾರ ಜೈಲು ಹಗರಣ: ತನಿಖೆಗೆ ಸರ್ಕಾರದ ಆದೇಶ

0

ಪರಪ್ಪನ ಅಗ್ರಹಾರ ಜೈಲಿನಲ್ಲಿ ಹಣ ನೀಡಿದವರಿಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಪ್ರಕರಣದ ಬಗ್ಗೆ ಕೂಲಂಕಷ ತನಿಖೆ ನಡೆಸಿ ಎರಡು ದಿನಗಳಲ್ಲಿ ಸಂಪೂರ್ಣ ವರದಿ ನೀಡುವಂತೆ ಸರ್ಕಾರ ಸೂಚಿಸಿದೆ.
ಸೋಮಶೇಖರ್ ಬುವರ ಜೈಲಿಗೆ ಭೇಟಿ ನೀಡಿ ಪ್ರಕರಣದ ಬಗ್ಗೆ ತನಿಖೆ ಕೈಗೊಂಡರು. ಈ ಮಧ್ಯೆ, ಜೈಲಿಗೆ ಪ್ರಧಾನ ಅಧೀಕ್ಷಕ ರಂಗನಾಥ್ ಅವರು ಸೋಮಶೇಖರ್ ಅವರಿಗೆ ಪ್ರಾಥಮಿಕ ವರದಿ ಸಲ್ಲಿಸಿದ್ದಾರೆ.
ಅಷ್ಟೇ ಅಲ್ಲದೆ, ಕಾರಾಗೃಹ ಎಡಿಜಿಪಿ ಅಲೋಕ್ ಮೋಹನ್ ಅವರು ಕೂಡ ಘಟನೆ ಬಗ್ಗೆ ವರದಿ ಸಲ್ಲಿಸಿದ್ದಾರೆ ಎನ್ನಲಾಗಿದೆ.
ಜೈಲಿನಲ್ಲಿ ಕೈದಿಗಳು ಗಾಂಜಾ ಮತ್ತು ಮೊಬೈಲ್ ಬಳಸಿರುವುದರ ಬಗ್ಗೆ ಸಂಬಂಧ 19 ಮಂದಿ ವಿರುದ್ಧ 12ಎಫ್ಐಆರ್ ದಾಖಲಾಗಿದೆ. ಕೃತ್ಯಕ್ಕೆ ಸಹಕರಿಸಿದ್ದರು ಎನ್ನಲಾದ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಅಲ್ಲದೆ ಹಲವು ವರ್ಷಗಳಿಂದಲೂ ಇದೇ ಕೇಂದ್ರಗಳ ಕಾರ್ಯನಿರ್ವಹಿಸುತ್ತಿದ್ದ 52 ಸಿಬ್ಬಂದಿಗಳನ್ನು ವರ್ಗಾವಣೆ ಮಾಡಲಾಗಿದೆ. ಇನ್ನು ಮುಖ್ಯ ಅಧೀಕ್ಷಕ ಹಾಗೂ ಅಧೀಕ್ಷಕ ರಂತಹ ಅಧಿಕಾರಿಗಳನ್ನು ಹೊರತುಪಡಿಸಿ ಎಲ್ಲಾ ಸಿಬ್ಬಂದಿಗಳು ಮೊಬೈಲ್ ಬಳಸುವುದನ್ನು ನಿಷೇಧಿಸಲಾಗಿದೆ.
ಈ ಹಿಂದೆ ಬೆಂಗಳೂರು ಸೆಂಟ್ರಲ್ ಜೈಲ್ ಅಧೀಕ್ಷಕರಾಗಿ ಅನುಭವ ಹೊಂದಿರುವ ಬೆಳಗಾವಿ ಜೈಲಿನ ಹಾಲಿ ಡಿಐಜಿ ಸೋಮಶೇಖರ್ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಲಾಗಿದೆ.
ಆರು ಪುಟಗಳಷ್ಟು ಪ್ರಾಥಮಿಕ ವರದಿ ಸಲ್ಲಿಸಲಾಗಿದ್ದು, ಈ ವರದಿಯಲ್ಲಿ 20 ಪ್ರಮುಖ ಅಂಶಗಳನ್ನು ಉಲ್ಲೇಖಿಸಲಾಗಿದೆ. ಅಲ್ಲದೆ, 2019ರಲ್ಲಿ ಜೆಸಿಬಿ ನಾರಾಯಣ ಬಿಡುಗಡೆಯಾಗಿರುವ ದಿನಾಂಕವನ್ನು ಇದರಲ್ಲಿ ಉಲ್ಲೇಖಿಸಲಾಗಿದೆ. ಜೈಲಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳಲಾಗದಿರಲು ಕೆಲ ಸಿಬ್ಬಂದಿಗಳ ಪಿತೂರಿಯೇ ಕಾರಣ ಎನ್ನಲಾಗಿದೆ ಎಂದು ತಿಳಿದುಬಂದಿದೆ.

ಆರು ತಿಂಗಳ ಅವಧಿಜನತೆಯ ಅಗತ್ಯಕ್ಕೆಸದಾ ಸ್ಪಂದಿಸಿದಸರ್ಕಾರ- ಸಿಎಂ ಬೊಮ್ಮಾಯಿ

0

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ ಶುಕ್ರವಾರ 6 ತಿಂಗಳು ತುಂಬಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಸಾಧನೆ ತಿಳಿಸುವ ಪುಸ್ತಕ ಬಿಡುಗಡೆಯಾಗಲಿದೆ ಎಂದು ತಿಳಿದುಬಂದಿದೆ.
ಜನ ಕಲ್ಯಾಣ ಮಾಡಲು ಯಾವುದೇ ಸಮಯ, ಸಂದರ್ಭದಲ್ಲಿ ಕಾಯುವ ಅಗತ್ಯವಿರುವುದಿಲ್ಲ. ನಮ್ಮದು ಸ್ಪಂದನಶೀಲ ಸರ್ಕಾರ. ಈ ಕೆಲಸ ನಿರಂತರ ನಡೆಯುತ್ತದೆ. ಸರ್ಕಾರ ಆರು ತಿಂಗಳು ಪೂರೈಸಿದ್ದರಿಂದ ಪಕ್ಷಿನೋಟ ತಿಳಿಸುವ ಪುಸ್ತಕ ಬಿಡುಗಡೆಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ನಮ್ಮದು ಸೃಜನಶೀಲ ಸರ್ಕಾರ. ಅದಕ್ಕೆ 100 ದಿನ ಆರು ತಿಂಗಳು ಅಥವಾ ಯಾವುದೂ ಮುಖ್ಯವಲ್ಲ. ನಿರಂತರವಾಗಿ ಜನರ ಅಗತ್ಯಗಳಿಗೆ ಸ್ಪಂದಿಸುವ ಕೆಲಸ ಮಾಡಲಾಗುತ್ತಿದೆ. ಜೋಳ ಖರೀದಿಗೆ ಅವಕಾಶ ಕೇಳಿದಾಗ ಅದಕ್ಕೆ ಅನುವು ಮಾಡಿಕೊಡಲಾಗಿದೆ. ಹಾಗೆಯೇ ರಾಗಿ ಖರೀದಿ ಮುಂದುವರಿಸಲು ಬೇಡಿಕೆಯಿದೆ. ಅದಕ್ಕೆ ಸಂಪುಟ ಉಪ ಸಮಿತಿಯಲ್ಲಿ ಚರ್ಚಿಸಿ ರೈತರಿಗೆ ಅನುಕೂಲ ಕಲ್ಪಿಸಲಾಗುವುದು ಎಂದರು.
ಕಳೆದ ವರ್ಷ ಜುಲೈ 28ರಂದು ರಾಜ್ಯದ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಅಧಿಕಾರ ಸ್ವೀಕರಿಸಿದ್ದರು. ಅದಾದ ಬಳಿಕ ಮಕ್ಕಳಿಗೆ ವಿದ್ಯಾನಿಧಿ ಸೇರಿದಂತೆ ಹಲವಾರು ಜನಪ್ರಿಯ ಕಾರ್ಯಕ್ರಮ ಜಾರಿಗೊಳಿಸಿದ್ದಾರೆ. ಈ ಅವಧಿಯಲ್ಲಿ ಆಡಳಿತದಲ್ಲಿ ಸುಧಾರಣೆ ತರುವುದೂ ಸೇರಿದಂತೆ ರಾಜ್ಯದ ಸಮಗ್ರ ಅಭಿವೃದ್ಧಿಗೆ ನೀಲನಕ್ಷೆ ರೂಪಿಸಲಾಗಿದೆ.

ಪುಣೆಯ ಸಂಗೀತ ಮಹೋತ್ಸವಕ್ಕೆ ಹರ್ಲಾಪುರ್ ಸಹೋದರರು ಆಯ್ಕೆ

0

ಪುಣೆಯ ಸಂಗೀತ ಮಹೋತ್ಸವಕ್ಕೆ ಹರ್ಲಾಪುರ್ ಸಹೋದರರು ಆಯ್ಕೆ
ಶಿವಮೊಗ್ಗ: ಭಾರತ ರತ್ನ ಪಂಡಿತ್ ಭೀಮ್ ಸೇನ್ ಜೋಷಿ ಅವರ ಜನ್ಮಶತಾಬ್ಧಿಯ ಪ್ರಯುಕ್ತ ಪುಣೆಯ ಸಂಗೀತಾರ್ಯ ಪಂಡಿತ್ ಡಿ.ವಿ. ಕಾಣೆಬುವ ಪ್ರತಿಷ್ಠಾನ ಸಂಸ್ಥೆ ಜ.31ರಂದು ನಡೆಸುವ ಪೂರ್ಣಹುತಿ ಸಂಗೀತ ಮಹೋತ್ಸವಕ್ಕೆ ಶಿವಮೊಗ್ಗದ ಹರ್ಲಾಪುರ ಸಹೋದರರು ಆಯ್ಕೆಯಾಗಿದ್ದಾರೆ.
ಪ್ರತಿಷ್ಠಿತ ಸಂಗೀತ ಸಂಸ್ಥೆ ನಡೆಸುವ ಈ ಮಹೋತ್ಸವದಲ್ಲಿ ಹರ್ಲಾಪುರ್ ಸಹೋದರರಾದ ನಿಶಾದ್ ಮತ್ತು ನೌಶಾದ್ ಅವರ ಜುಗಲ್ಬಂದಿ ನಡೆಯಲಿದೆ.

ಅಂಬೇಡ್ಕರ್ ಶಾಲೆಗೆ ಅರ್ಜಿ ಆಹ್ವಾನ

ರಾಗಿಗುಡ್ಡದ ಅಂಬೇಡ್ಕರ್ ಪರಿಶಿಷ್ಟ ಜಾತಿ/ವರ್ಗದ ಬಾಲಕಿಯರ ವಸತಿ ವಿದ್ಯಾಶಾಲೆಗೆ ಐದನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಶಾಲೆಯಲ್ಲಿ ಉಚಿತ ಶಿಕ್ಷಣ, ಊಟ ವಸತಿ ಹಾಗೂ ಇತರೆ ಸೌಲಭ್ಯಗಳಿವೆ. ಮಾ.3 ರಂದು ಪ್ರವೇಶ ಪರೀಕ್ಷೆ ನಡೆಯಲಿದೆ. ಜನವರಿ 28ರಿಂದ ಫೆಬ್ರವರಿ 19 ರವರೆಗೆ ಅರ್ಜಿ ವಿತರಣೆ ಮಾಡಲಾಗುವುದು ಆಸಕ್ತರು ಹೆಚ್ಚಿನ ಮಾಹಿತಿಗಾಗಿ 9448718996 ಅಥವಾ 9845143155 ನಂಬರಿಗೆ ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಲಾಗಿದೆ.

ಗುರುಗುಹ ಸಂಗೀತ ಮಹಾವಿದ್ಯಾಲಯ
ಶಿವಮೊಗ್ಗ : ಗುರುಗುಹ ಸಂಗೀತ ಮಹಾವಿದ್ಯಾಲಯದಿಂದ ಮಾತೆಯರಿಗೆ ಉಚಿತ ದೇವರನಾಮ ಶಿಬಿರವನ್ನು ಏರ್ಪಡಿಸಲಾಗಿದೆ. ಪುರಂದರ ದಾಸರ ಆರಾಧನೋತ್ಸವದ ಅಂಗವಾಗಿ ಈ ಶಿಬಿರ ನಡೆಯಲಿದೆ. ಆಸಕ್ತ ಮಹಿಳೆಯರು 9480915777 ಅಥವಾ 9448241149 ನಂಬರುಗಳಿಗೆ ಸಂಪರ್ಕಿಸಬಹುದು.

ಒಲಂಪಿಯನ್ ಚೋಪ್ರಾ ಗೆ ಪದ್ಮಶ್ರೀ

0

ಭಾರತೀಯ ಸೇನೆಯಲ್ಲಿ 4ನೇ ರಜಪೂತನ್ ರೈಫಲ್ಸ್ ನಲ್ಲಿ ಸುಬೇದಾರ್ ಆಗಿರುವ ನೀರಜ್ ಚೋಪ್ರಾ ,ಈಗಾಗಲೇ ಟೋಕಿಯೋ ಒಲಂಪಿಕ್ ಸ್ಟಾರ್ ಆಗಿದ್ದಾರೆ. ಹೆಮ್ಮೆ ಪಡುವಂಥ ಇನ್ನೂ ಒಂದು ಸಂಗತಿ ಎಂದರೆ ಕೇಂದ್ರ ಸರ್ಕಾರ ಚೋಪ್ರಾ ಅವರಿಗೆ ಪದ್ಮಶ್ರೀ ಪುರಸ್ಕಾರ ನೀಡಿದೆ.

ಜಾವೆಲಿನ್ ಥ್ರೋ ನಲ್ಲಿ ಸುವರ್ಣ ಪದಕ ಗೆದ್ದು ಭಾರತಕ್ಕೆ ಕೀರ್ತಿ ತಂದ ನೀರಜ್ ಅವರ ಮುಡಿಗೆ ಈ ಬಾರಿ ಪದ್ಮ ಪುರಸ್ಕಾರ.

ಕ್ರೀಡೆಯಲ್ಲಿ 2016 ರಲ್ಲಿ ರಿಯೋ ಪ್ಯಾರಾ ಒಲಂಪಿಕ್ಸ್ ನಲ್ಲಿ ಚಿನ್ನದ ಪದಕ ಪಡೆದ
ದೇವೇಂದ್ರ ಪೂಜಾರಿಯಾ ಅವರಿಗೆ ಪದ್ಮಭೂಷಣ ಲಭಿಸಿದೆ.
ಪದ್ಮಶ್ರೀ ಪಡೆದ ಇತರ ಕ್ರೀಡಾಕಲಿಗಳೆಂದರೆ

ಭಾರತ ಮಹಿಳಾ ಹಾಕಿ ತಂಡದ ವಂದನಾ ಕಟಾರಿಯಾ.
ಕೇರಳದ ಶಂಕರನಾರಾಯಣ ಮೆನನ್ ಚಾಂಡಿಲ್ ಮತ್ತು ಗೋವಾದ ಬ್ರಹ್ಮಾನಂದ ಸಂಕವಾಳಕರ್,
ಪ್ರಮೋದ್ ಭಾಗವತ್ ಹಾಗೂ ಅವನಿ ಲೇಖರಾ. ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರೊಂದಿಗೆ ಹೋರಾಡಿ ವೀರಮರಣವನ್ನಪ್ಪಿದ
ಕರ್ನಾಟಕದ ಕಾಶೀರಾಯ ಬೊಮ್ಮನಹಳ್ಳಿ ಅವರಿಗೆ “ಶೌರ್ಯಚಕ್ರ” ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಘೋಷಿಸಿದೆ.

ಮಂದಗತಿಯಲ್ಲಿರುವ 15 – 17 ವರ್ಷದವರ ಲಸಿಕಾಕರಣ

0

ರಾಜ್ಯದಲ್ಲಿ 15 ರಿಂದ 17 ವರ್ಷ ವಯೋಮಾನದವರ ಕೋವಿಡ್ ಲಸಿಕಾಕರಣ ಮಂದಗತಿಯಲ್ಲಿ ಸಾಗುತ್ತಿದೆ. ಜನವರಿ 3ರಿಂದ ಆರಂಭವಾಗಿರುವ ಪ್ರಕ್ರಿಯೆಯಲ್ಲಿ 24 ದಿನದಲ್ಲಿ ಕೇವಲ ಶೇ. 68 ಮಾತ್ರ ಲಸಿಕಾಕರಣ ಸಾಧ್ಯವಾಗಿದೆ.

ಸರ್ಕಾರ ಪ್ರತಿದಿನ ಐದು ಲಕ್ಷ ಮಂದಿಗೆ ಲಸಿಕೆ ಹಾಕುವ ಗುರಿಯನ್ನು ಹೊಂದಿತ್ತು, ಸರ್ಕಾರ ಅಂದುಕೊಂಡ ರೀತಿಯಲ್ಲೇ ಲಸಿಕಾಕರಣ ಪ್ರಕ್ರಿಯೆ ಸಾಗಿದ್ದರೆ ಒಂದೇ ವಾರದಲ್ಲಿ ಮುಗಿಯುತ್ತಿತ್ತು. ಇದುವರೆಗೆ 31.75 ಲಕ್ಷ ಫಲಾನುಭವಿಗಳ ಪೈಕಿ ಇರುವವರಿಗೆ 21.82 ಲಕ್ಷ ಮಂದಿಗೆ ಲಸಿಕೆ ನೀಡಲಾಗಿದೆ.

28 ದಿನಗಳ ಬಳಿಕ ಎರಡನೇ ಡೋಸ್ ನೀಡಬೇಕಾದ ಸಮಯ ಬಂದರೂ ಮೊದಲನೇ ಡೋಸ್ ನೀಡುವ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ.

15 ರಿಂದ 17 ವರ್ಷ ವಯೋಮಾನದವರು ಕೋವಿಡ್ ಲಸಿಕಾಕರಣ ಪ್ರಕ್ರಿಯೆಯಲ್ಲಿ ಗದಗ ಜಿಲ್ಲೆ ಶೇ.99 ರಷ್ಟು ಪೂರೈಸಿದೆ. ಕೊಡಗು ಶೇ.92 , ಉಡುಪಿ ಶೇ.87, ದಕ್ಷಿಣ ಕನ್ನಡ ಶೇ.81, ಕಲ್ಬುರ್ಗಿ ಶೇ.54, ಬಿಬಿಎಂಪಿ ಶೇ.57, ರಾಯಚೂರು ಶೇ.58, ಬೀದರ್ ಶೇ.60, ಕೊಪ್ಪಳ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಶೇ.63 ರಷ್ಟು ಲಸಿಕಾಕರಣ ಪ್ರಕ್ರಿಯೆ ನಡೆದಿದೆ.