Sunday, February 15, 2026
Sunday, February 15, 2026
Home Blog Page 1748

ಬಜೆಟ್ ನತ್ತಮಧ್ಯಮ ವರ್ಗದ ಚಿತ್ತ

0

ದೇಶದ ಮಧ್ಯಮ ವರ್ಗ ಈ ಸಲ ಕೇಂದ್ರ ಬಜೆಟ್ ನಿಂದ ಹಲವಾರು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ಮತ್ತೊಂದು ಕಡೆ, ಆರ್ಥಿಕ ಸವಾಲಿದುರು ತಮ್ಮ ಬೇಡಿಕೆಗಳು ಈಡೇರಬಹುದೇ ಎಂಬ ಪ್ರಶ್ನೆಯೂ ಅವರಲ್ಲಿದೆ.
ಹೀಗಿದ್ದರೂ, ಕೆಲವೊಂದು ಬೇಡಿಕೆಗಳನ್ನು ಸರಕಾರ ಪರಿಗಣಿಸಬೇಕಾಗಿದೆ ಎಂಬ ಸನ್ನಿವೇಶ ಸೃಷ್ಟಿಯಾಗಿದೆ.
ಈ ಕುರಿತು ಸಮೀಕ್ಷೆಯೊಂದನ್ನು ನಡೆಸಲಾಗಿದೆ. ಮಧ್ಯಮವರ್ಗದ ಸುಮಾರು ಎರಡು ಸಾವಿರ ಜನರನ್ನು ಬಜೆಟ್ ನಿರೀಕ್ಷೆಗಳ ಬಗ್ಗೆ ಸಂದರ್ಶಿಸಲಾಯಿತು. ಮಧ್ಯಮ ವರ್ಗದ ಜನತೆ ದೇಶದ ನಗರ ಮತ್ತು ಗ್ರಾಮೀಣ ಪ್ರದೇಶದ ಬಹುತೇಕ ಬೇಡಿಕೆಯ ಬೆನ್ನೆಲುಬು. ಭಾರತದ ಜಿಡಿಪಿಯಲ್ಲಿ ವೆಚ್ಚದ ಪಾಲು ಐದರಲ್ಲಿ ಮೂರು ಭಾಗ. ಇದರಲ್ಲಿ ಬಹುಪಾಲು ಮಧ್ಯ ವರ್ಗದ ಜನತೆಯ ವೆಚ್ಚಗಳಿಂದಲೇ ಬರುತ್ತದೆ.
ಕೋವಿಡ್ ನ ಎರಡು ಅಲೆಗಳ ಹೊಡಿ ತದನಂತರ ಭಾರತದ ಮಧ್ಯಮ ವರ್ಗದ ಜನಸಂಖ್ಯೆ ಇಳಿಕೆಯಾಗಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಏಕೆಂದರೆ ಅವರನ್ನು ಅನೇಕ ಮಂದಿ ತಮ್ಮ ಉಳಿತಾಯದ ಚೂರುಪಾರು ಹಣವನ್ನೂ ಖರ್ಚು ಮಾಡಬೇಕಾದ ಸನ್ನಿವೇಶ ಬಂದಿದೆ. ಲಕ್ಷಾಂತರ ಮಂದಿ ಮತ್ತೆ ಕಡುಬಡವರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಸರಕಾರದ ಪ್ರಕಾರ ಸುಮಾರು 30 ಕೋಟಿ ಮಂದಿ ಮಧ್ಯಮ ವರ್ಗದ ಜನತೆಯಾಗಿದ್ದಾರೆ. ಆದರೆ, ಕೋವಿಡ್ ನ ಎರಡು ಅಲೆಗಳ ಹೊಡೆತದ ಪರಿಣಾಮ ಮಧ್ಯಮವರ್ಗದ ಜನಸಂಖ್ಯೆಯಲ್ಲಿ ಮೂರನೇ ಒಂದರಷ್ಟು ಜನರು ಕಡಿಮೆಯಾಗಿದ್ದಾರೆ. ಸ್ವಂತ ಕಾರು ಹೊಂದಿರುವವರು, ಆದಾಯ ತೆರಿಗೆ ಕಟ್ಟುವವರು, ಉದ್ಯೋಗ ಭದ್ರತೆ ಇರುವವರು, ಪಿಂಚಣಿ ಪಡೆಯುವವರು, ಸಾಮಾಜಿಕ ಭದ್ರತೆ ಯೋಜನೆಗಳಲ್ಲಿ ಹೂಡಿಕೆ ಮಾಡುವವರು, ಮಧ್ಯಮ ವರ್ಗದ ಜನರಾಗಿದ್ದಾರೆ. ಅವರ ಕೈಯಲ್ಲಿ ಖರ್ಚು ಮಾಡುವ ಸಾಮರ್ಥ್ಯ ಹೆಚ್ಚಿದರೆ ಆರ್ಥಿಕ ಅಭಿವೃದ್ಧಿ ಸಾಧ್ಯ.

ರಾಜ್ಯದಲ್ಲಿ ಮುಂದುವರೆದ ಕೋವಿಡ್ ಆರ್ಭಟ

0

ರಾಜ್ಯದಲ್ಲಿ ಕೋವಿಡ್ ಸೋಂಕಿನ ಆರ್ಭಟ ಮುಂದುವರಿದಿದೆ. ಬುಧವಾರ 48,905 ಕೇಸು ಪತ್ತೆಯಾಗಿದೆ. 39 ಮಂದಿ ಮೃತಪಟ್ಟಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 3.57 ಲಕ್ಷಕ್ಕೆ ಏರಿಕೆಯಾಗಿದೆ.
ಬೆಂಗಳೂರು ನಗರದಲ್ಲಿ 8, ದಕ್ಷಿಣ ಕನ್ನಡ ಮತ್ತು ಹಾಸನದಲ್ಲಿ ತಲಾ 4, ಮೈಸೂರು 3, ಉತ್ತರ ಕನ್ನಡ, ಮಂಡ್ಯ, ಕಲಬುರಗಿ ಮತ್ತು ಚಿಕ್ಕಬಳ್ಳಾಪುರದಲ್ಲಿ ತಲಾ 2, ಬೆಳಗಾವಿ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ದಾವಣಗೆರೆ, ಗದಗ, ಕೊಪ್ಪಳ, ರಾಯಚೂರು, ಶಿವಮೊಗ್ಗ, ಉಡುಪಿ ಮತ್ತು ವಿಜಯಪುರದಲ್ಲಿ ತಲಾ ಒಬ್ಬ ಸೋಂಕಿತರು ಮೃತಪಟ್ಟಿದ್ದಾರೆ.
ಬುಧವಾರ 47,907 ಜನರಿಗೆ ಆರ್ ರಾಪಿಡ್ ಆಂಟಿಜೆನ್ ಹಾಗೂ 1,69,323 ಜನರಿಗೆ ಆರ್ ಟಿಪಿಸಿಆರ್ ಪರೀಕ್ಷೆ ನಡೆಸಲಾಗಿದೆ.
ರಾಜ್ಯದಲ್ಲಿ ಸೋಂಕಿನ ಪ್ರಮಾಣ ಶೇ.22.51ರಷ್ಟಿದ್ದು, ಸಾವಿನ ಪ್ರಮಾಣ ಶೇ.0.07ರಷ್ಟಿದೆ. ಬೆಂಗಳೂರು ನಗರದಲ್ಲಿ 22,427 ಗರಿಷ್ಟ ಸೋಂಕು ಕಂಡುಬಂದಿದೆ. ಮೈಸೂರು 2,797, ತುಮಕೂರು 2,645, ಮಂಡ್ಯ 2,186, ಹಾಸನ 2,016, ಕೋಲಾರ 1,547, ಧಾರವಾಡ 1,523, ಉಡುಪಿಯಲ್ಲಿ 1,392, ಬಳ್ಳಾರಿಯಲ್ಲಿ 1,141, ಕಲಬುರಗಿ 1007 ಕೇಸುಗಳು ದಾಖಲಾಗಿದೆ.

ಟಾಟಾ ತೆಕ್ಕೆಗೆ ಏರ್ ಇಂಡಿಯಾ

0

ಕೇಂದ್ರ ಸರ್ಕಾರ ಸಾರ್ವಜನಿಕ ವಲಯದ ಏರ್ ಇಂಡಿಯಾವನ್ನು ಟಾಟಾ ಸಮೂಹಕ್ಕೆ ಹಸ್ತಾಂತರಿಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
ಸರ್ಕಾರ ಕಳೆದ ವರ್ಷ ಅಕ್ಟೋಬರ್ 8ರಂದು ಏರ್ ಇಂಡಿಯಾ ಪೈಲೆಟ್ಸ್ ಗಿಲ್ಡ್ ಮತ್ತು ಇಂಡಿಯನ್ ಕಮರ್ಷಿಯಲ್ ಪೈಲೆಟ್ಸ್ ಅಸೋಸಿಯೇಷನ್, ಪೈಲೆಟ್ ಗಳಿಗೆ ನೀಡಬೇಕಿರುವ ಬಾಕಿ ಮತ್ತು ದಲ್ಲಿ ಹಲವು ಕಡಿತಗಳನ್ನು ಮಾಡಿದರೆ ಕಾನೂನು ಕ್ರಮದ ಮೊರೆ ಹೋಗಲಾಗುವುದು ಎಂದು ಎಚ್ಚರಿಸಿವೆ.
ಇದರೊಂದಿಗೆ 69 ವರ್ಷದ ನಂತರ ಏರ್ ಇಂಡಿಯಾ ಮತ್ತೆ ಟಾಟಾ ಸಮೂಹದ ತೆಕ್ಕೆಗೆ ಮರಳಿದಂತಾಗಿದೆ.
2003-04ರಿಂದ ಕೇಂದ್ರದ ಮೊದಲ ಖಾಸಗೀಕರಣ ಇದಾಗಿದೆ. ಏರ್ ಇಂಡಿಯಾ 102 ದೇಶಿ ಮತ್ತು ಅಂತರಾಷ್ಟ್ರೀಯ ತಾಣಗಳಿಗೆ ಹಾರಾಟ ನಡೆಸುತ್ತಿದೆ.

ಈ ಬಾರಿಯೂ ಸರಳ ಬಜೆಟ್ ತಯಾರಿ

0

ಈ ವರ್ಷವೂ ಕೇಂದ್ರ ಬಜೆಟ್ ಪರಿಸರ ಸ್ನೇಹಿಯಾಗಿರಲಿದೆ. ಸೀಮಿತ ಸಂಖ್ಯೆಯಲ್ಲಿ ಬಜೆಟ್ ಪ್ರತಿಗಳು ಮುದ್ರಣ ವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಜೆಟ್ ದಾಖಲೆಗಳ ಮುದ್ರಣ ವೆಚ್ಚ ಅತ್ಯಂತ ಕನಿಷ್ಠ ಮಟ್ಟದಲ್ಲಿರಲಿದೆ.
ಬಹುತೇಕ ಆಯವ್ಯಯ ಡಿಜಿಟಲ್ ರೂಪದಲ್ಲಿ ಎಲ್ಲರಿಗೂ ದೊರೆಯಲಿದೆ ಎಂದು ತಿಳಿದುಬಂದಿದೆ. ಕೆಲವು ವರ್ಷಗಳ ಹಿಂದೆ
ಬಜೆಟ್ ಪ್ರತಿಗಳ ಮುದ್ರಣದ ಪ್ರಕ್ರಿಯೆ ದೊಡ್ಡಮಟ್ಟದಲ್ಲಿ ಇರುತ್ತಿತ್ತು. ಕನಿಷ್ಠ ಎರಡು ವಾರ ಮುದ್ರಣದ ಸಿಬ್ಬಂದಿ, ನಾರ್ತ್ ಬ್ಲಾಕ್ ನ ಕಚೇರಿಯಲ್ಲಿ ಇರಬೇಕಾಗುತ್ತಿತ್ತು. ನಂತರದ ಹಂತಗಳಲ್ಲಿ ಬಜೆಟ್ ಪ್ರತಿಗಳ ಮುದ್ರಣವನ್ನು ಕಡಿತಗೊಳಿಸಲಾಯಿತು. ಹೀಗಾಗಿ ಬಜೆಟ್ ಪ್ರತಿಗಳ ಮುದ್ರಣಕ್ಕೆ ಮುನ್ನ ನಡೆಯುವ ಹಲ್ವ ತಯಾರಿಸುವ ಕಾರ್ಯಕ್ರಮ ಈಗ ಕೇವಲ ಸಾಂಕೇತಿಕವಾಗಿ ನಡೆಯುತ್ತದೆ.
ಈಗ ಕೆಲವೇ ಸಿಬ್ಬಂದಿ ಮಾತ್ರ ಎರಡು ವಾರಗಳ ಕಾಲ ಕಡ್ಡಾಯವಾಗಿ ನಾರ್ತ್ ಬ್ಲಾಕ್ ನಲ್ಲಿ ಇದ್ದರೆ ಸಾಕಾಗುತ್ತದೆ. ಇದರಿಂದ ಹೆಚ್ಚು ಉಳಿತಾಯವಾಗುತ್ತದೆ. 2019ರ ನಂತರ ಬಜೆಟ್ ಪ್ರತಿಯನ್ನು ಬ್ರೀಫ್ ಕೇಸ್ ನಲ್ಲಿ ಇಟ್ಟು ತರುವ ಸಂಪ್ರದಾಯವನ್ನು ನಿಲ್ಲಿಸಲಾಗಿದೆ ಎಂದು ತಿಳಿದುಬಂದಿದೆ.

ಅತಿಥಿ ಉಪನ್ಯಾಸಕರ ನೇಮಕಾತಿ: ಆನ್ ಲೈನ್ ಕೌನ್ಸಿಲಿಂಗ್ ಆರಂಭ

0

ಜುಲೈ 27 ರಿಂದ ಜನವರಿ 30ರ ವರೆಗೆ ಅತಿಥಿ ಉಪನ್ಯಾಸಕರ ನೇಮಕಾತಿಗೆ ಆನ್ಲೈನ್ ಕೌನ್ಸಿಲಿಂಗ್ ಅನ್ನು ಕಾಲೇಜು ಶಿಕ್ಷಣ ಇಲಾಖೆ ಆಯೋಜಿಸಿದೆ. ರಾಜ್ಯಾದ್ಯಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗಳಿಗೆ ಒಟ್ಟು 10,636 ಅತಿಥಿ ಉಪನ್ಯಾಸಕರ ನೇಮಕಾತಿಗೆ ಕಾಲೇಜು ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ ಎಂದು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಪಿ.ಪ್ರದೀಪ್ ಹೇಳಿದ್ದಾರೆ.

ಅಭ್ಯರ್ಥಿಗಳ ಜೇಷ್ಠತೆ ಆಧಾರದ ಮೇಲೆ ತಮಗೆ ಬೇಕಾದ ಕಾಲೇಜನ್ನು ಕೌನ್ಸಿಲಿಂಗ್ ನಲ್ಲಿ ಆಯ್ಕೆಮಾಡಿಕೊಳ್ಳಬಹುದು ಬಳಿಕ ತಮ್ಮ ಕಚೇರಿಯಿಂದ ನೇಮಕಾತಿ ಆದೇಶ ನೀಡಲಾಗುತ್ತದೆ ಎಂದು ಪಿ.ಪ್ರದೀಪ್ ಹೇಳಿದ್ದಾರೆ.

ಕೌನ್ಸಿಲಿಂಗ್ ಮುಗಿದ ಎರಡು ದಿನಗಳಲ್ಲಿ ತಮಗೆ ಸೂಚಿಸಿದ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರು ವರದಿ ಮಾಡಿಕೊಳ್ಳಬೇಕಾಗುತ್ತದೆ ಈ ವೇಳೆ ಮೂಲ ದಾಖಲೆಗಳನ್ನು ಪರಿಶೀಲನೆ ಒಪ್ಪಿಸಿ ಕರ್ತವ್ಯಕ್ಕೆ ಹಾಜರಾಗಬೇಕು. ದಾಖಲೆಗಳಲ್ಲಿ ವ್ಯತ್ಯಾಸ ಕಂಡುಬಂದರೆ ಅಂತಹವರನ್ನು ಬಿಡಲಾಗುವುದು ಎಂದು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತರು ತಿಳಿಸಿದರು.

“ಒಟ್ಟು 47 ವಿಷಯಗಳಲ್ಲಿ ವಾರಕ್ಕೆ 15 ಗಂಟೆಗಳ ಬೋಧನೆಯ ಪೂರ್ಣ ಕಾರ್ಯಭಾರವಿರುವ 7,225 ಮತ್ತು ಭಾಗಶಃ ಕಾರ್ಯಭಾರವಿರುವ 3,411 ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.

“ವಾಣಿಜ್ಯ ವಿಷಯ ಬೋಧನೆಗೆ 1,830 ಮಂದಿ, ಕನ್ನಡ 1,008, ಇತಿಹಾಸ 675, ಇಂಗ್ಲಿಷ್ 736, ಸಮಾಜಶಾಸ್ತ್ರ 526, ಅರ್ಥಶಾಸ್ತ್ರ 620, ಬಿಸಿನೆಸ್ ಮ್ಯಾನೇಜ್ಮೆಂಟ್ 490, ಕಂಪ್ಯೂಟರ್ ಸೈನ್ಸ್ 910, ಭೌತಶಾಸ್ತ್ರ 562, ರಾಜ್ಯಶಾಸ್ತ್ರ 602, ರಸಾಯನಶಾಸ್ತ್ರ 663, ಗಣಿತ 492, ಪ್ರಾಣಿಶಾಸ್ತ್ರ 198, ಸಸ್ಯಶಾಸ್ತ್ರ 212, ಮನೋವಿಜ್ಞಾನ 54, ಪರಿಸರವಿಜ್ಞಾನ 53, ಸಮಾಜಕಾರ್ಯ 80, ಉರ್ದು ಭಾಷಾ ವಿಷಯಗಳಿಗೆ ಸಂಬಂಧಿಸಿದ 78 ಹುದ್ದೆಗಳು ಲಭ್ಯವಿದೆ” ಎಂದು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್ ಅವರು ತಿಳಿಸಿದ್ದಾರೆ.

ಸಂಗೊಳ್ಳಿ ರಾಯಣ್ಣಹೆಸರಲ್ಲಿ ಮಿಲಿಟರಿ ಶಾಲೆ ಆರಂಭವಾಗಲಿವೆ

0

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ 191 ನೇ ಸ್ಮರಣೋತ್ಸವ ಅಂಗವಾಗಿ ಅವರ ಪುತ್ತಳಿಕೆಗೆ ಸಿಎಂ ಬೊಮ್ಮಾಯಿಯವರು ಮಾಲಾರ್ಪಣೆ ಮಾಡಿದರು.

ರಾಯಣ್ಣನ ಹೆಸರಿನಲ್ಲಿ ಸರ್ಕಾರ 180 ಕೋಟಿ ರೂ ವೆಚ್ಚದ ಬೃಹತ್ ಮಿಲಿಟರಿ ಶಾಲೆಯ ಪ್ರಾರಂಭಿಸಲಿದೆ ಎಂದು ಸಿಎಂ ಬೊಮ್ಮಾಯಿ ಅವರು ತಿಳಿಸಿದ್ದಾರೆ.

“ಬೃಹತ್ ಮಿಲಿಟರಿ ಶಾಲೆ ಪ್ರಾರಂಭಿಸಲು 55 ಕೋಟಿ ರೂಗಳನ್ನು ಸರ್ಕಾರ ಈಗಾಗಲೇ ಬಿಡುಗಡೆ ಮಾಡಿದೆ ಈ ವರ್ಷ ಶಾಲೆಯ ಕಾಮಗಾರಿ ಪೂರ್ಣಗೊಳ್ಳಲಿದೆ ಸಂಪೂರ್ಣ ಇಲಾಖೆ ಶಾಲೆಯ ಉಸ್ತುವಾರಿ ವಹಿಸಿಕೊಳ್ಳಲು ಮಾತುಕತೆ ನಡೆದಿದೆ. ಹಾಸ್ಟೆಲ್ ವ್ಯವಸ್ಥೆ ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗುತ್ತದೆ” ಎಂದು ಸಿಎಂ ಬೊಮ್ಮಾಯಿ ಅವರು ತಿಳಿಸಿದರು.

ಎಲ್ಲಾ ಶಾಲಾ ಕಾಲೇಜುಗಳಲ್ಲಿ ಸಂಗೊಳ್ಳಿರಾಯಣ್ಣನ ಭಾವಚಿತ್ರ ಹಾಕಿಸಲು ಸರ್ಕಾರ ಆದೇಶ ಹೊರಡಿಸಿದೆ. ಬೆಂಗಳೂರಿನ ರಸ್ತೆಗಳಿಗೆ ಸ್ವಾತಂತ್ರ್ಯ ಹೋರಾಟಗಾರರ ಹೆಸರಿಡುವ ಸಂಸದ ಪಿ.ಸಿ.ಮೋಹನ್ ಅವರ ಬಗ್ಗೆ ಶೀಘ್ರ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಿಎಂ ತಿಳಿಸಿದರು.

ದಿಲ್ಲಿಯಲ್ಲಿ ರಾಯಣ್ಣನ ಪ್ರತಿಮೆ ಸ್ಥಾಪನೆಗೆ ಸಂಬಂಧಪಟ್ಟವರಿಗೆ ಪತ್ರ ಬರೆಯಲಾಗಿದೆ. ಬೆಳಗಾವಿ ಸುವರ್ಣ ಸೌಧದ ಮುಂದೆ ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣನ ಮೂರ್ತಿ ಸ್ಥಾಪಿಸಲಾಗುತ್ತದೆ ಎಂದು ಅವರು ತಿಳಿಸಿದರು.

ಕಾಗಿನೆಲೆ ಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಅಶೋಕ್ ಸಂಸದ ಪಿಸಿ ಮೋಹನ್ ಮಾಜಿ ಶಾಸಕರಾದ ವಾಟಾಳ್ ನಾಗರಾಜ್ ಇದ್ದಂತೆ ಹಲವು ನಾಯಕರು ಉಪಸ್ಥಿತರಿದ್ದರು.

ಗ್ರಾಮೀಣರ ಮನೆ ಬಾಗಿಲಿಗೆ-ಗ್ರಾಮ ಒನ್

0

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಸರ್ಕಾರದ ನಾನಾ ಸೇವಾ ಸೌಲಭ್ಯ ಪ್ರಮಾಣಪತ್ರಕ್ಕಾಗಿ ಗ್ರಾಮೀಣ ಜನ ಜಿಲ್ಲಾ ತಾಲೂಕು ಕಚೇರಿಗಳಿಗೆ ಓಡಾಡುವ ಬದಲಿಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸುಲಭವಾಗಿ ಪಡೆಯುವಂತಹ ‘ಗ್ರಾಮ ಒನ್’ ಸೇವೆಗೆ ಚಾಲನೆ ನೀಡಿದರು.

ಈ ಸೇವೆಗೆ ಏಕಕಾಲಕ್ಕೆ ಸದ್ಯ 12 ಜಿಲ್ಲೆಗಳ 3024 ಪಂಚಾಯತಿಗಳಲ್ಲಿ ಚಾಲನೆ ನೀಡಲಾಗಿದೆ. ಮಾರ್ಚ್ ಅಂತ್ಯದೊಳಗೆ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಕೇಂದ್ರ ತೆರೆಯಲು ಸರ್ಕಾರ ಮುಂದಾಗಿದೆ.

ಗ್ರಾಮ ಒನ್ ಸೇವೆಯಲ್ಲಿ ಗ್ರಾಮೀಣ ಭಾಗದ ಜನರಿಗೆ ಸೇವಾ ಸಿಂಧುವಿನಲ್ಲಿ ಬರುವ ಎಲ್ಲಾ 750 ಸೇವೆಗಳ ಸೌಲಭ್ಯ ಲಭ್ಯವಿದೆ. ಮಾಹಿತಿ ಹಕ್ಕು ಸೇವೆಗಳು, ಸಕಾಲ ಸೇವೆಗಳು, ಸಿಎಂ ಪರಿಹಾರ ನಿಧಿ, ಸಣ್ಣ ಬ್ಯಾಂಕಿಂಗ್ ಸೇವೆಗಳು ‘ಗ್ರಾಮ ಒನ್’ ಸೇವಾ ಸೌಲಭ್ಯ ಪಡೆಯಬಹುದಾಗಿದೆ.

‘ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಪ್ರಜಾಸತಾತ್ಮಕ ಒಕ್ಕೂಟ ಗಣರಾಜ್ಯ ಸ್ಥಾಪನೆಯಾಗಬೇಕು ಎಂಬ ಕನಸಿನೊಂದಿಗೆ ಡಾ.ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ರಚಿಸಿದ್ದಾರೆ. ಗಣರಾಜ್ಯೋತ್ಸವ ದಿನವನ್ನು ಕರ್ತವ್ಯಗಳ ಮೂಲಕ ನಮ್ಮ ಹಕ್ಕುಗಳಿಗೆ ಅರ್ಹತೆ ಪಡೆಯುವ ದಿನ ಎಂದು ಭಾವಿಸಿದ್ದೇನೆ. ಹಾಗಾಗಿ ಜನರಿಂದ, ಜನರಿಗಾಗಿ ಇರುವ ಸರ್ಕಾರ ಜನರಿಗೆ ಸ್ಪಂದಿಸಬೇಕೆಂಬ ಚಿಂತನೆಯಿಂದ ಗ್ರಾಮ ಒನ್ ಸೇವೆಗೆ ಚಾಲನೆ’ ನೀಡಲಾಗಿದೆ ಎಂದು ಹೇಳಿದರು.

ಪ್ರೊ ಕಬಡ್ಡಿ ಲೀಗ್ಯು ಮುಂಬಾ ರೋಚಕ ವಿಜಯ

0

ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ ಶೆರಟಾನ್ ಗ್ರ್ಯಾಂಡ್ ಹೋಟೆಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಲೀಗ್ ಪಂದ್ಯವು ಬುಧವಾರ ಬೆಂಗಳೂರು ಬುಲ್ಸ್(34) ಮತ್ತು ಯು.ಮುಂಬಾ(45) ತಂಡಗಳ ನಡುವೆ ಪಂದ್ಯ ನಡೆಯಿತು.
ಬುಲ್ಸ್ ವಿರುದ್ಧ ಮುಂಬಾ ರೋಚಕ ಜಯ ಸಾಧಿಸಿತು. ರೇಡರ್ ಪವನ್ ಮತ್ತೊಮ್ಮೆ ಅಬ್ಬರದ ಆಟದ ಮೂಲಕ ಸೂಪರ್ 10 ಸಾಧನೆ ಮಾಡಿದ ಶೆರಾವತ್ ಗೆ ರೇಡರ್ ಭರತ್ ಮತ್ತು ಡಿಫೆಂಡರ್ ಸೌರಭ್ ಉತ್ತಮ ಸಾಥ್ ನೀಡಿದರು. ಆದರೆ ಯು ಮುಂಬಾ ತಂಡದ ಸಂಘಟಿತ ಆಟದ ಪ್ರದರ್ಶನದಿಂದ 11 ಅಂಕಗಳ ಅಂತರದಿಂದ ಶರಣಾಯಿತು.
ಯು ಮುಂಬಾ ಡಿಫೆಂಡರ್ ಫಜಲ್ ಅತ್ರಾಚಲಿ ನೇತೃತ್ವದ ಟ್ಯಾಕ್ಲಿಂಗ್ ಮೂಲಕ ತಂಡವನ್ನು ಗೆಲುವಿನ ಕಡೆ ಕರೆದೊಯ್ದರು.

ಇಂದು ನಡೆಯಲಿರುವ ಪಂದ್ಯ:
೧. ಯು.ಪಿ ಯೋಧಾ ಮತ್ತು ಪುಣೇರಿ ಪಲ್ಟನ್
ಸಮಯ:7.30

ಆಸ್ಟ್ರೇಲಿಯನ್ ಓಪನ್ ಟೆನ್ನಿಸ್:ಮೆಡ್ವಡೆವ್ ಉಪಾಂತ್ಯಕ್ಕೆ

0

ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ರಷ್ಯಾದ ಆಟಗಾರ ಡ್ಯಾನಿಲ್ ಮೆಡ್ವೆಡೆವ್ ಮತ್ತು ಸ್ಟೆಫಾನೋಸ್ ಸಿಸಿಪಾನ್ ಸೆಮಿಫೈನಲ್ ಗೆ ಲಗ್ಗೆ ಇಟ್ಟಿದ್ದಾರೆ.
ರಾಡ್ ಲೇವರ್ ಅರೆನಾ ಕ್ರೀಡಾಂಗಣದಲ್ಲಿ ನಡೆದ 5 ಸೆಟ್ ಗಳ ಹಣಾಹಣಿಯಲ್ಲಿ 25 ವರ್ಷದ ಬಲಗೈ ಆಟಗಾರ ಮೆಡ್ವೆಡೆವ್ 6-7(4/7),3-6,7-6(7/2),7-5,6-4, ಸೆಟ್ ಗಳಿಂದ ಕೆನಡಾದ 21 ರ ತರುಣ ಫೆಲಿಕ್ಸ್ ಆಗಾರ್ ಅಲಿಯಾಸಿಮ್ ಅವರ ಸವಾಲನ್ನು ಬಗ್ಗುಬಡಿದರು.
2021 ರ ಆವೃತ್ತಿಯ U.S ಓಪನ್ ಚಾಂಪಿಯನ್ ಗೆ ಕೆನಡಾದ 21ರ ತರುಣ ಮೊದಲ ಸೆಟ್ ನಲ್ಲೇ ಸೋಲುಣಿಸಿದರು. 2 ನೇ ಸೆಟ್ ನಲ್ಲಿ ಮೆಡ್ವೆಡೆವ್ ಹೆಚ್ಚಿನ ಯಾವುದೇ ಪ್ರತಿರೋಧವಿಲ್ಲದೆ ಶರಣಾದರು.
ಅಲಿಯಾಸಮ್ 3 ನೇ ಸೆಟ್ ನಲ್ಲು ಮೆಡ್ವೆಡೆವ್ ಎದುರಾಗಿ ಆಡಿದರೆ,ರಷ್ಯಾದ ಆಟಗಾರನ ಹೋರಾಟ 8 ರ ಘಟ್ಟದಲ್ಲೇ ಮುಗಿದುಹೋಗುತ್ತಿತ್ತು.
ಆದರೆ, ತಾನು ಕಲಿತ ಆಟದ ವರಸೆಗಳೆಲ್ಲವನ್ನೂ ಕೆನಡಾದ ಆಗರ್ ಅಲಿಯಾಸಿಮ್ ಮೇಲೆ ಪ್ರಯೋಗಿಸಿ ಮೆಡ್ವೆಡೆವ್ ಕೊನೆಯ ಮೂರೂ ಸೆಟ್ ಗಳಲ್ಲಿ ಜಯಮಾಲೆ ಹಾಕಿಕೊಂಡರು. “2022 ರ ಸಾಲಿನ ಮೊದಲ ಗ್ರ್ಯಾನ್ ಸ್ಲಾಮ್ ಟೆನಿಸ್ ಪ್ರಶಸ್ತಿ” ತಮ್ಮ ಮುಡಿಗೇರಿಸಿಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆ ಹಾಕುತ್ತಿದ್ದಾರೆ

ಕರುನಾಡ ವಿವಿಧ ಪರಿಣಿತರಿಗೆ ಪದ್ಮಶ್ರೀ ಪುರಸ್ಕಾರ

0

ರಾಜ್ಯದ ಐವರು ಸಾಧಕರಿಗೆ ಪದ್ಮ ಶ್ರೀ ಮುಕುಟವನ್ನು ಕೇಂದ್ರ ಸರ್ಕಾರ ನೀಡಿ ಗೌರವಿಸಿದೆ. ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಬಂಡಾಯ ಸಾಹಿತಿ ದಿವಂಗತ ಡಾ.ಸಿದ್ದಲಿಂಗಯ್ಯ ಅವರಿಗೆ ಮರಣೋತ್ತರ ಪದ್ಮಶ್ರೀ ಲಭಿಸಿದೆ.

ಬಂಟ್ವಾಳ ತಾಲೂಕಿನ ಆಧುನಿಕ ಭಗೀರಥ ಎಂದೇ ಹೆಸರುವಾಸಿಯಾದ ಅಮೈ ಮಹಾಲಿಂಗ್ ನಾಯ್ಕ ಅವರಿಗೆ ಕೃಷಿ ಕ್ಷೇತ್ರದ ಸಾಧನೆಗಾಗಿ ಪದ್ಮಶ್ರೀ ಲಭಿಸಿದೆ.

“ನಾನೇನೋ ಸಣ್ಣ ಕೆಲಸ ಮಾಡಿದ್ದೇನೆ. ಆದರೆ ನನ್ನನ್ನು ಗುರುತಿಸುವುದು ಖುಷಿ ತಂದಿದೆ. ಇಡೀ ದೇಶ ನನ್ನ ಆಶೀರ್ವಾದ ಮಾಡಿದಂತಾಗಿದೆ. 2004ರಲ್ಲಿ ನನಗೆ ಮೊದಲ ಸನ್ಮಾನ ಸಿಕ್ಕಿತ್ತು. ನಂತರ ಹಲವು ಸನ್ಮಾನ ಪ್ರಶಸ್ತಿಗಳು ಸಿಕ್ಕಿವೆ” ಎಂದು ಅಮೈ ಮಹಾಲಿಂಗ ನಾಯ್ಕ ಅವರು ತಿಳಿಸಿದ್ದಾರೆ.

ಹೊಸಹಳ್ಳಿ ಕೇಶವಮೂರ್ತಿಗಳು ಅಂದರೆ ಗಮಕ ಪ್ರಿಯರ ಕಿವಿಯಲ್ಲಿ
ಇನಿದಾದ ಸ್ವರ ಮೊರೆಯುತ್ತದೆ. ಆ ಸ್ವರ ಬೇರೆಯಲ್ಲ‌ ಗಮಕ ವಿದ್ವಾನ್ ಎಚ್ ಆರ್ ಕೇಶವಮೂರ್ತಿಅವರದ್ದು.
ನಾಡಿನೆಲ್ಲೆಡೆ ಅವರ ಗಮಕ ಸಂಗೀತ ಗಂಧದಂತೆ ಹರಡಿದೆ.
ಜೊತೆಗೆ ಅವರೊಟ್ಟಿಗೆ
ಕಾವ್ಯ ವ್ಯಾಖ್ಯಾನ ನೀಡುತ್ತಿದ್ದ ಹಿರಿಯ ಮಾರ್ಕಾಂಡೇಯ ಅವಧಾನಿಗಳನ್ನೂ ಗಮಕ ಪ್ರಿಯರು ಎಂದಿಗೂ ಮರೆಯಲಾರರು.

ಶಿವಮೊಗ್ಗ ಸನಿಹದ ಹೊಸಹಳ್ಳಿ ಕೇಶವಮೂರ್ತಿಯವರ ಹುಟ್ಟೂರು. ಗಮಕ ಎಂದರೇನು ಗೊತ್ತಿರದ ಶ್ರೋತೃಗೆ ತಮ್ಮ ಕಾವ್ಯಗಾಯನ ಧಾಟಿಯಲ್ಲೇ ಆನಂದ ಹೊಂದುವಂತೆ ಮಾಡಿಬಿಡುವ ಮಾಂತ್ರಿಕ ಹಿರಿಯ ಕೇಶವ ಮೂರ್ತಿ.
ಕುಮಾರವ್ಯಾಸ ಪ್ರಶಸ್ತಿ ಅವರ ಮಡಿಲಿಗೆ ಆಗಲೇ ಬಿದ್ದಿದೆ. ರಾಜ್ಯ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ಹೀಗೆ ಹತ್ತು ಹಲವು ಅವರನ್ನ ಹುಡುಕಿ ಕೊಂಡು ಬಂದಿವೆ. ಈಗ ಪದ್ಮಶ್ರೀ ಅರಸಿ ಬಂದಿರುವುದು ಇಡೀ ಗಮಕ ಕಲಾವಿದ ಬಳಗಕ್ಕೇ ಸಂಭ್ರಮದ ಸಂಗತಿ.

ಹೆಚ್.ಆರ್. ಕೇಶವಮೂರ್ತಿ ಅವರು “ಎಲ್ಲಾ ಹಿರಿಯರ ಆಶೀರ್ವಾದ, ಪೂರ್ವಿಕರ ಪುಣ್ಯದ ಫಲ ಪ್ರಶಸ್ತಿ ಬರುವುದು ಮುಖ್ಯವಲ್ಲ, ಕಲೆಯನ್ನು ಉಳಿಸಿ, ಬೆಳೆಸಬೇಕು ಎಂಬುದು ಮುಖ್ಯ ಉದ್ದೇಶ. ಸಾಧಕರು ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವ ಕೇಂದ್ರಸರ್ಕಾರಕ್ಕೆ ಅಭಿನಂದನೆಗಳು” ಎಂದು ತಿಳಿಸಿದ್ದಾರೆ.

ರೈತರಿಗೆ ಪೂರಕವಾಗುವ ಕೃಷಿ ಪರಿಕರ ಆವಿಷ್ಕರಿಸಿದ ಗ್ರಾಮೀಣ ಪ್ರತಿಭೆ ಹಾಗೂ ರೈತ ವಿಜ್ಞಾನಿ ಅಬ್ದುಲ್ ಖಾದರ್ ಅವರಿಗೆ ಕೇಂದ್ರ ಸರ್ಕಾರವು ಪದ್ಮಶ್ರೀ ಗರಿಯನ್ನು ನೀಡಿದೆ.

“ಪದ್ಮಶ್ರೀ ಪ್ರಶಸ್ತಿ ದೊರೆತಿರುವುದು ತುಂಬಾ ಸಂತೋಷವಾಗಿದೆ. ಇದು ನನಗೆ ಸಿಕ್ಕ ಪ್ರಶಸ್ತಿ ಎಲ್ಲಾ ದೇಶದ ಕೃಷಿ ಸಂಕುಲಕ್ಕೆ ದೊರೆತ ಪ್ರಶಸ್ತಿಯಾಗಿದೆ. ಅಣ್ಣಿಗೇರಿಯ ಹೆಸರನ್ನು ಕೊಂಡೊಯ್ದ ರೈತ ಬಾಂಧವರಿಗೆ ಈ ಪ್ರಶಸ್ತಿಯನ್ನು ಅರ್ಪಿಸುತ್ತೇನೆ” ಎಂದು ಅಬ್ದುಲ್ ಖಾದರ್ ನಡಕಟ್ಟಿನ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಸಾಧನೆಗಾಗಿ ನ್ಯಾಷನಲ್ ಅಗ್ರಿಕಲ್ಚರ್ ರಿಸರ್ಚ್ ಅಂಡ್ ಎಜುಕೇಶನ್ ಡಿಪಾರ್ಟ್ಮೆಂಟ್ ನ ಕಾರ್ಯದರ್ಶಿ ಹಾಗೂ ಇಂಡಿಯನ್ ಕೌನ್ಸಿಲ್ ಫಾರ್ ಅಗ್ರಿಕಲ್ಚರ್ ನಿರ್ದೇಶಕರಾಗಿದ್ದ ಹಾಗೂ ಪ್ರಸ್ತುತ ಮಣಿಪುರದ ಇಂಫಾಲ್ ಕೇಂದ್ರೀಯ ಕೃಷಿ ವಿವಿಯ ಚಾನ್ಸಲರ್ ಆಗಿರುವ ಕರ್ನಾಟಕದ ಸುಬ್ಬಣ್ಣ ಅಯ್ಯಪ್ಪನ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.

ಕಲೆ, ಸಾಹಿತ್ಯ, ಕೃಷಿ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ತಮ್ಮದೇ ಆದಂತಹ ಛಾಪನ್ನು ಮೂಡಿಸಿರುವ ಕರ್ನಾಟಕದ ಐವರು ಗಣ್ಯರಿಗೆ ಈ ಬಾರಿಯ ಪದ್ಮಶ್ರೀ ಪ್ರಶಸ್ತಿ ಲಭಿಸಿರುವುದು ಪ್ರತಿಯೊಬ್ಬ ಕನ್ನಡಿಗರಿಗೂ ಸಂತಸ ತಂದಿದೆ.