Sunday, February 15, 2026
Sunday, February 15, 2026
Home Blog Page 1749

ಅನಿರ್ದಿಷ್ಟಾವಧಿ ಜೈಲುಬಂಧನ ಸೂಕ್ತವಲ್ಲ-ಸುಪ್ರೀಂ

0

ಜಾಮೀನಿಗೆ ಒತ್ತು ನೀಡುವುದು, ಜೈಲು ನ್ಯಾಯಾಂಗ ತತ್ವಶಾಸ್ತ್ರವಲ್ಲ, ಆರೋಪಿಯ ಚಟುವಟಿಕೆಗಳು ಹಾನಿಕಾರಕವೆಂದು ಸಾಬೀತುಪಡಿಸುವ ದೊಡ್ಡ ಪಿತೂರಿಯನ್ನು ಒಳಗೊಂಡಿರಬಹುದೆಂಬ ಊಹೆಯ ಮೇಲೆ ತನಿಖಾ ಸಂಸ್ಥೆಗಳ ಮುಕ್ತ ತನಿಖೆಯೊಂದಿಗೆ ಯಾವುದೇ ವ್ಯಕ್ತಿಯನ್ನು ಅನಿರ್ದಿಷ್ಟಾವಧಿಯವರೆಗೆ ಜೈಲಿನಲ್ಲಿ ಇರಿಸಲಾಗುವುದಿಲ್ಲ. ಇದು ರಾಷ್ಟ್ರೀಯ ಭದ್ರತೆಗೆ ಧಕ್ಕೆ ಉಂಟುಮಾಡುತ್ತದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
ಗಡಿಯಾಚೆಗಿನ ಜಾನುವಾರು ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಎಂ.ಡಿ. ಇನಾಮುಲ್ ಹಕ್‌ಗೆ ಜಾಮೀನು ನೀಡುವ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ಮತ್ತು ದಿನೇಶ್ ಮಹೇಶ್ವರಿ ಅವರ ಪೀಠವು ಈ ಅವಲೋಕನವನ್ನು ಮಾಡಿದೆ. ಇದರಲ್ಲಿ ಕೇಂದ್ರೀಯ ಸಂಸ್ಥೆಯು ಬಿಎಸ್‌ಎಫ್ ಕಮಾಂಡೆಂಟ್‌ನನ್ನು ಬಂಧಿಸಿತ್ತು. ಕಳ್ಳಸಾಗಾಣಿಕೆ ಪ್ರಕರಣದಲ್ಲಿ ರಾಜಕೀಯ ಪಕ್ಷಗಳು ಮತ್ತು ಸ್ಥಳೀಯ ಆಡಳಿತದ ಅಧಿಕಾರಿಗಳಿಗೆ ಪಾವತಿಸಲಾಗಿದೆ. ಹಕ್ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ ಅವರು, 2021ರ ಫೆಬ್ರವರಿ 6ರಂದು ಜಾನುವಾರು ಕಳ್ಳಸಾಗಣೆ ಪ್ರಕರಣದಲ್ಲಿ ಸಿಬಿಐ ಚಾರ್ಜ್‌ಶೀಟ್ ಸಲ್ಲಿಸಲು ವಿಫಲವಾಗಿದೆ .

ಕಳೆದ ವರ್ಷ ಫೆಬ್ರವರಿ 21 ರಂದು ಪೂರಕ ಚಾರ್ಜ್ ಶೀಟ್ ಅನ್ನು ಅನುಸರಿಸಿದೆ. ಆರೋಪಿ ಬಿಎಸ್‌‌ಎಫ್ ಕಮಾಂಡೆಂಟ್ ಮತ್ತು ಇತರ ಆರೋಪಿಗಳಿಗೂ ಜಾಮೀನು ನೀಡಲಾಗಿದೆ. ಆದರೆ ಗರಿಷ್ಠ ಏಳು ವರ್ಷಗಳ ಜೈಲು ಶಿಕ್ಷೆಯನ್ನು ವಿವರಿಸುವ ಅಪರಾಧದಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ಜೈಲಿನಲ್ಲಿದ್ದರೂ ಕಲ್ಕತ್ತಾ ಹೈಕೋರ್ಟ್ ಹಕ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ ಎಂದು ಅವರು ಹೇಳಿದರು.
ಬಿಎಸ್ಎಫ್ ಸಿಬ್ಬಂದಿ, ಕಸ್ಟಮ್ಸ್ ಅಧಿಕಾರಿಗಳು, ಸ್ಥಳೀಯ ಪೊಲೀಸರು ಮತ್ತು ಇತರರನ್ನು ಒಳಗೊಂಡಿರುವ ಭಾರತ-ಬಾಂಗ್ಲಾದೇಶ ಗಡಿಯ ಮೂಲಕ ಗಡಿಯಾಚೆಗಿನ ಜಾನುವಾರು ಕಳ್ಳಸಾಗಣೆಗಾಗಿ ಅರ್ಜಿದಾರರು ದರೋಡೆಕೋರರು ಎಂದು ಸಿಬಿಐ ಹೆಚ್ಚುವರಿ ಸಾಲಿಸಿಟರ್ ಜನರಲ್ ಅಮನ್ ಲೇಖಿ ಅವರು ಹೇಳಿದ್ದಾರೆ. ಆದರೆ ಅವರು ಬಾಂಗ್ಲಾದೇಶದಿಂದ ಭೂ ಮಾರ್ಗದ ಮೂಲಕ ಪಶ್ಚಿಮ ಬಂಗಾಳವನ್ನು ತಲುಪುವ ಮೂಲಕ ಪಶ್ಚಿಮ ಬಂಗಾಳವನ್ನು ಎದುರಿಸಿದರು‌. ಹೀಗಾಗಿ, ಇದು ಸ್ಥಳೀಯ ಪೋಲೀಸರ ಸಹಯೋಗವನ್ನು ಸೂಚಿಸುತ್ತದೆ.ಇದರೊಂದಿಗೆ ರಾಷ್ಟ್ರೀಯ ಭದ್ರತೆಗೆ ಗಂಭೀರ ಕಾಳಜಿಯನ್ನು ಮೂಡಿಸುತ್ತದೆ. ದೊಡ್ಡ ಪಿತೂರಿಯ ತನಿಖೆ ಇನ್ನೂ ಬಾಕಿ ಇದೆ ಎಂದು ಅವರು ಹೇಳಿದರು. ನ್ಯಾಯಮೂರ್ತಿಗಳಾದ ಚಂದ್ರಚೂಡ್ ಮತ್ತು ಮಹೇಶ್ವರಿ ಅವರು, ಈ ಮುಕ್ತ ತನಿಖೆ ನಮಗೆ ಅರ್ಥವಾಗುವುದಿಲ್ಲ ಎಂದು ಕೇಳಿದರು. ಇತರ ಆರೋಪಿಗಳಿಗೆ ಜಾಮೀನು ನೀಡಿದಾಗ ವ್ಯಕ್ತಿಯನ್ನು ಅನಿರ್ದಿಷ್ಟವಾಗಿ ಬಂಧಿಸುವುದು ದೊಡ್ಡ ಪಿತೂರಿಯ ತನಿಖೆಗೆ ಹೇಗೆ ಸಹಾಯ ಮಾಡುತ್ತದೆ? ಒಂದು ವರ್ಷ 2 ತಿಂಗಳು, ಅವರು ಬಂಧನದಲ್ಲಿದ್ದರು. ಇದು ದೊಡ್ಡ ಪಿತೂರಿಯ ತನಿಖೆಗೆ ಸಾಕಾಗುವುದಿಲ್ಲವೇ? ಅವರ ನಿರಂತರ ಬಂಧನವನ್ನು ಸಮರ್ಥಿಸಲಾಗಿಲ್ಲ ಎಂದು ಪೀಠವು ಹಕ್ ಅವರಿಗೆ ಜಾಮೀನು ನೀಡಿತು. ಜಾಮೀನಿನಲ್ಲಿರುವಾಗ ಆರೋಪಿಗಳು ಪಾಲಿಸಬೇಕಾದ ಷರತ್ತುಗಳನ್ನು ನಿರ್ದಿಷ್ಟಪಡಿಸುವಂತೆ ಅಸನ್ಸೋಲ್‌ನಲ್ಲಿರುವ ವಿಶೇಷ ಸಿಬಿಐ ನ್ಯಾಯಾಲಯವನ್ನು ಅದು ಕೇಳಿದೆ. ಹಕ್ ಅವರು ಕಳೆದ ವರ್ಷ ನವೆಂಬರ್ 11 ರ ಕಲ್ಕತ್ತಾದ ಹೈಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿ ಅವರ ವೈಲ್ ಮನವಿಯನ್ನು ತಿರಸ್ಕರಿಸಿದರು.

ಆಸ್ಟ್ರೇಲಿಯನ್ ಓಪನ್ ಟೆನ್ನಿಸ್: ಮೆಡ್ವೆಡಿವ್ ಎಂಟರಘಟ್ಟಕ್ಕೆ

0

ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯು ಸೋಮವಾರ ಅಮೆರಿಕಾದ ಮ್ಯಾಕ್ಸಿಮ್ ಕ್ರೆಸಿ ಮತ್ತು ರಷ್ಯಾದ ಡ್ಯಾನಿಲ್ ಮೆಡ್ವೆಡೆವ್ ಆಟಗಾರರ ನಡುವೆ ನಡೆಯಿತು. ಕ್ರೆಸಿ ವಿರುದ್ಧ ಗೆದ್ದ ಮೆಡ್ವೆಡೆವ್ ಎಂಟರ ಘಟ್ಟಕ್ಕೆ ಲಗ್ಗೆ ಇಟ್ಟಿದ್ದಾರೆ.
ಮಾರ್ಗರೇಟ್ ಕೋರ್ಟ್ ಆರೆನಾದಲ್ಲಿ ನಡೆದ ಹಣಾಹಣಿಯಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರರಲ್ಲಿ ಒಬ್ಬರೆನಿಸಿಕೊಂಡಿರುವ ಮೆಡ್ವೆಡೆವ್ ರವರು ಅಮೆರಿಕಾದ ಮ್ಯಾಕ್ಸಿಮ್ ಕ್ರೆಸಿ ಅವರ ಪ್ರಬಲ ಪೈಪೋಟಿಯನ್ನು ಸುಲಭವಾಗಿ ಎದುರಿಸಿದರು.
ಪಂದ್ಯದ ನಡುವೆ ಮೆಡ್ವೆಡೆವ್ ಒಂದು ಹಂತದಲ್ಲಿ ತಾಳ್ಮೆಯನ್ನು ಕಳೆದುಕೊಂಡರು ಕೊನೆಗೆ 6-2,7-6(4),7-5 ರಲ್ಲಿ ಜಯಸಾಧಿಸಿ ಎಂಟರ ಘಟ್ಟಕ್ಕೆ ಕಾಲಿಡಲು ಯಶಸ್ವಿಯಾದರು.
ಎಂಟರ ಘಟ್ಟದ ಟೂರ್ನಿಯಲ್ಲಿ ರಷ್ಯಾದ ಡ್ಯಾನಿಲ್ ಮೆಡ್ವೆಡಿವ್ ಮತ್ತು ಕೆನಡಾದ ಫೆಲಿಕ್ಸ್ ಆಗರ್ ಅಲಿಯಾಸಿಮ್ ಅವರು ಮುಖಾಮುಖಿಯಾಗಲಿದ್ದಾರೆ

ಅಮೇಜಾನ್ ನಿಂದ ಭಾರತಕ್ಕೆ ಅಗೌರವ: ಟ್ವಿಟ್ಟಿಗರ ಆಕ್ರೋಶ

0

ದೇಶದ ಅತ್ಯಂತ ದೊಡ್ಡ ಆನ್ಲೈನ್ ಶಾಪಿಂಗ್ ಸಂಸ್ಥೆಯಾದ ಅಮೇಜಾನ್ ತ್ರಿವರ್ಣ ಧ್ವಜದ ಮಾದರಿಯಲ್ಲಿರುವ ಮಾಸ್ಕ್ ಸೇರಿದಂತೆ ರಾಷ್ಟ್ರಧ್ವಜ ಇರುವಂತಹ ಅನೇಕ ಅನೇಕ ಉತ್ಪನ್ನಗಳನ್ನು ಆನ್ಲೈನ್ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಅವಕಾಶ ನೀಡಿರುವುದರಿಂದ ಮತ್ತೊಮ್ಮೆ ವಿವಾದಕ್ಕೆ ಗುರಿಯಾಗಿದೆ.

ಧ್ವಜದ ಚಿತ್ರ ಮುದ್ರಿಸಲಾದ ಟೀಶರ್ಟಗಳು, ಮಾಸ್ಕ್ ಗಳು, ಕೀ ಚೈನ್ ಗಳು, ಚಾಕ್ಲೆಟ್ ಕವರ್ ಗಳು, ಸಿರಾಮಿಕ್ ಮಗ್ ಗಳನ್ನು ಮಾರಾಟಕ್ಕೆ ಇಡಲಾಗಿದೆ. ಇದು ರಾಷ್ಟ್ರಧ್ವಜಕ್ಕೆ ಮಾಡುವ ಅವಮಾನ ಎಂದು ನೆಟ್ಟಿಗರೊಬ್ಬರು ಟ್ವಿಟರ್ ಮೂಲಕ ರಾಷ್ಟ್ರಧ್ವಜದ ಚಿತ್ರವಿರುವ ಎಲ್ಲಾ ಉತ್ಪನ್ನಗಳನ್ನು ಅಮೆಜಾನ್ ಹಿಂಪಡೆಯಬೇಕು. ಬೇಷರತ್ತು ಕ್ಷಮೆ ಕೋರಬೇಕು ಎಂದು ಆಗ್ರಹಿಸಿದ್ದಾರೆ.

ಅಮೇಜಾನ್ ಹೀಗೆ ವಿವಾದ ಸೃಷ್ಟಿಸುತ್ತಿರುವುದು ಇದೇ ಮೊದಲ ಬಾರಿಯಲ್ಲ. 2019ರಲ್ಲಿ ಇಂಥದ್ದೇ ಒಂದು ಕೆಲಸ ಮಾಡಿತ್ತು. ಹಿಂದು ದೇವತೆಗಳು, ದೇವರ ಚಿತ್ರ ಮುದ್ರಿಸಲಾದ ಟಾಯ್ಲೆಟ್​ ಸೀಟ್​ ಕವರ್​ಗಳು, ಬಾಗಿಲು ಮ್ಯಾಟ್​​ಗಳನ್ನು ಮಾರಾಟಕ್ಕಿಟ್ಟಿತ್ತು. ಆಗಲೂ ಸಹ ಅಮೇಜಾನ್​ ಬಹಿಷ್ಕರಿಸಿ ಎಂಬ ಅಭಿಯಾನ ಇಂಟರ್​​ನೆಟ್​​ನಲ್ಲಿ ನಡೆದಿತ್ತು. ಅಮೇಜಾನ್​ ಕ್ಷಮೆ ಕೋರಿತ್ತು. ಅದಕ್ಕೂ ಮೊದಲು 2017ರಲ್ಲಿ ಭಾರತದ ರಾಷ್ಟ್ರಧ್ವಜದ ಚಿತ್ರವಿರುವ ಬಾಗಿಲಿಗೆ ಹಾಕುವ ಮ್ಯಾಟ್​ಗಳು ಅಮೇಜಾನ್​​ನ ಕೆನಡಾ ವಿಭಾಗದ ವೆಬ್​ಸೈಟ್​​ನಲ್ಲಿ ಮಾರಾಟಕ್ಕೆ ಇದ್ದವು. ಆಗಲೂ ಸಹ ಬಹಿಷ್ಕಾರ ಅಭಿಯಾನ ನಡೆದಿತ್ತು.

ಕ್ರಿಕೆಟ್ ಪಟು ಸ್ಮೃತಿ ಮಂದಾನ: ಐಸಿಸಿ ಗೌರವ ಪ್ರಶಸ್ತಿ

0

ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಗೌರವ ಪ್ರಶಸ್ತಿ” ಯು ಭಾರತ ತಂಡದ ಮಹಿಳಾ ವಿಭಾಗದಲ್ಲಿ ಆರಂಭಿಕ ಬ್ಯಾಟರ್ ‘ಸ್ಮೃತಿ ಮಂದಾನ’ ರವರಿಗೆ ಲಭಿಸಿದೆ ಎಂದು “ICC ಮಂಡಳಿ”ಯು ತಿಳಿಸಿದೆ.
2021 ನೇ ಸಾಲಿನಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್ ನಲ್ಲಿ ಗಳಿಸಿದ ರನ್ ಆಧಾರದಲ್ಲಿ ಅವರಿಗೆ ಈ ಗೌರವ ನೀಡಲಾಗಿದೆ.
ಭಾರತ ತಂಡವು ಆಡಿದ ಮೊದಲ ‘ಪಿಂಕ್ ಬಾಲ್ ಟೆಸ್ಟ್’ ನಲ್ಲಿ ಶತಕ ಬಾರಿಸುವ ಮೂಲಕ ಮಂದಾನ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.
ನಿಗದಿತ ಓವರ್ ಗಳ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದಿದ್ದ ಸರಣಿಯಲ್ಲಿ ಭಾರತದ ಗೆಲುವಿನಲ್ಲಿ ಮಂದಾನ ಬಹಳಷ್ಟು ಪರಿಶ್ರಮ ವಹಿಸಿದ್ದರು. ಎರಡನೇ ಏಕದಿನ ಪಂದ್ಯದಲ್ಲಿ 158 ರನ್ ಗುರಿ ಬೆನ್ನತ್ತಿ ಹೋರಾಡಿದಾಗ ಮಂದಾನ 80 ರನ್ ಬಾರಿಸಿದ್ದರು.
ಇಂಗ್ಲೆಂಡ್ ವಿರುದ್ಧ ಡ್ರಾ ದಲ್ಲಿ ಕೊನೆಗೊಂಡ ಟೆಸ್ಟ್ ಸರಣಿಯಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ ಮಂದಾನ 78 ರನ್ ಸಂಪಾದಿಸಿದ್ದರು.
ಟಿ-20 ಸರಣಿಯ ಅಂತಿಮ ಪಂದ್ಯದಲ್ಲಿ ಔಟಾಗದೆ 48 ರನ್ ಗಳಿಸಿ ತಂಡದ ಜಯಕ್ಕೆ ಮುಖ್ಯ ಕಾರಣರಾಗಿದ್ದರು.
“ಭಾರತ ಟಿ-20 ತಂಡದ ಉಪನಾಯಕಿ ಆಗಿರುವ ಸ್ಮೃತ ಮಂದಾನ ಅವರು ICC ಪ್ರಶಸ್ತಿ ಗೆದ್ದ ಭಾರತದ ಎರಡನೇ ಆಟಾಗಾರ್ತಿಯಾಗಿದ್ದಾರೆ.” ‘2007 ರಲ್ಲಿ ವೇಗಿ ಜೂಲವ್ ಗೋಸ್ವಾಮಿ’ ಅವರು ಈ ಪ್ರಶಸ್ತಿಗೆ ಭಾಜನರಾಗಿದ್ದರು.

ನೋಟರಿ ಕಾಯಿದೆ ತಿದ್ದುಪಡಿ ಬೇಡ: ಪ್ರಧಾನಿಗೆ ದೇವೆಗೌಡರಿಂದ ಪತ್ರ

0

ಉದ್ದೇಶಿತ ನೋಟರಿ ಕಾಯ್ದೆ 1952 ತಿದ್ದುಪಡಿ ಕ್ರಮವನ್ನು ಕೈಬಿಡುವಂತೆ ಕೋರಿ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

ನೋಟರಿ ಕಾಯ್ದೆ 1952 ರ ಸೆಕ್ಷನ್ 5ರ ಪ್ರಸ್ತಾವಿತ ತಿದ್ದುಪಡಿ ಜಾರಿಗೊಳಿಸಿದರೆ ದೇಶದ 75 ಸಾವಿರಕ್ಕೂ ಹೆಚ್ಚು ನೋಟರಿಗಳಿಗೆ ತೊಂದರೆ ಆಗಲಿದೆ. ನೋಟರಿಗಳ ಅವಧಿಯನ್ನು ಐದು ವರ್ಷಗಳಿಗೆ ಸೀಮಿತಗೊಳಿಸುವ ಮತ್ತು ನೋಟುಗಳ ಪ್ರಾಕ್ಟೀಸ್ ಪ್ರಮಾಣಪತ್ರ ಎರಡು ಅವಧಿಗಳ ಅಷ್ಟೇ ನವೀಕರಿಸುವ ನಿಯಮಗಳು ನೋಟರಿಗಳಿಗೆ ಮಾರ್ಗವಾಗಿದೆ ಎಂದು ಹೇಳಿದ್ದಾರೆ.

ವಕೀಲರು ನೋಟರಿ ಆದ ನಂತರ ಅದು ಶಾಶ್ವತವಾಗಿರುತ್ತದೆ. ಕಾನೂನು ವೃತ್ತಿಯು ವೇಗವಾಗಿ ವಿಕಸನಗೊಳ್ಳುತ್ತಿದೆ. 15 ವರ್ಷಕ್ಕೂ ಹೆಚ್ಚುಕಾಲ ಸರಿಯಾಗಿ ಕೆಲಸ ಮಾಡಿದವರು ಮತ್ತೆ ವಕೀಲರಾಗಿ ಪರಿಣಿತ ವಕೀಲರ ನಡುವೆ ಕೆಲಸ ಮಾಡುವುದು ಕಷ್ಟ. ಈ ಕುರಿತು ಕರ್ನಾಟಕ ರಾಜ್ಯ ನೋಟರಿ ಕಲ್ಯಾಣ ಸಂಘ ನನಗೆ ಮನವಿ ಸಲ್ಲಿಸಿದೆ ಎಂದು ತಿಳಿಸಿದ್ದಾರೆ.

ಉದ್ದೇಶಿತ ತಿದ್ದುಪಡಿಯ ಸಾಂವಿಧಾನಿಕ ಸಿಂಧುತ್ವದ ಕುರಿತು ನನಗೆ ಅನುಮಾನಗಳು ಕಾಡುತ್ತಿವೆ. ನೋಟರಿ ಕಾಯ್ದೆ ಸಾವಿರ 1962ರ ಸೆಕ್ಷನ್ 5ಕ್ಕೆ ಪ್ರಸ್ತಾಪಿಸಲಾದ ತಿದ್ದುಪಡಿಯು ಸಂವಿಧಾನದ 14, 19, 21 ಹಾಗೂ 309 ನೇ ವಿಧಿ ಉಲ್ಲಂಘಿಸುತ್ತವೆ ಎನ್ನಲಾಗಿದೆ.

ನಮ್ಮ ಪ್ರತಿಭೆಗಳು ವಿದೇಶ ಖ್ಯಾತಿ ಜೊತೆ ಸ್ವದೇಶ ಪ್ರಗತಿಗೂ ಶ್ರಮಿಸಬೇಕು-ಪ್ರಧಾನಿ

0

ಪ್ರಧಾನಿ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪಡೆದ ಪುಟಾಣಿ ವೀರರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶಿ ಆಂದೋಲನದ ಮಹತ್ವವನ್ನು ತಿಳಿಸಿದರು.

“ಸರ್ಕಾರ ರೂಪಿಸುವ ಪ್ರತಿ ಯೋಜನೆಯ ಕೇಂದ್ರಬಿಂದು ಯುವ ಜನರೇ ಆಗಿರುತ್ತಾರೆ. ಇದರ ಪ್ರಯೋಜನ ಪಡೆಯುವ ಯುವ ಪ್ರತಿಭೆಗಳು ದೇಶಿ ಆಂದೋಲನವನ್ನು ಬೆಂಬಲಿಸಬೇಕು ಎಂದು ಸಲಹೆ ನರೇಂದ್ರ ಮೋದಿ ಅವರು ಸಲಹೆ ನೀಡಿದರು.

ಪುರಸ್ಕಾರ ವಿಜೇತ ಬಾಲಪ್ರತಿಭೆಗಳನ್ನು ತೆಗೆ ಆನ್ಲೈನ್ ಮೂಲಕ ಸಂವಾದ ನಡೆಸಿದ ಪ್ರಧಾನಿ ಅವರು, ಹಲವು ಉಪಯುಕ್ತ ಕಿವಿಮಾತುಗಳನ್ನು ಹೇಳಿದ್ದಾರೆ. ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರ ಹೊಲೋಗ್ರಾಮ್ ಪ್ರತಿಭೆ ಅನಾವರಣಗೊಳಿಸಿದ ಕುರಿತು ಕೇಳಿದ ಪ್ರಶ್ನೆಗೆ, ಸೊಗಸಾದ ಉತ್ತರ ನೀಡಿದರು. ” ನೇತಾಜಿ ಅವರಿಂದ ಈ ದೇಶ ಬಹುದೊಡ್ಡ ಸ್ಪೂರ್ತಿಯನ್ನು ಪಡೆದಿದೆ. ಅದಕ್ಕೆ ಪ್ರತಿಯಾಗಿ ಅವರನ್ನು ಸ್ಮರಿಸುವಂತೆದ್ದೇನಾದರೂ ಮಾಡಬೇಕಾದದ್ದು ನಮ್ಮ ಕರ್ತವ್ಯ. ಬಾಲ ಪ್ರತಿಭೆಗಳಾದ ನೀವು ದೇಶಪ್ರೇಮದ ಪಾಠವನ್ನು ನೇತಾಜಿ ಯಿಂದ ಕಲಿಯಬೇಕು. ದೇಶ ಮೊದಲು ಎಂಬ ಸಿದ್ಧಾಂತವನ್ನು ಅಳವಡಿಸಿಕೊಳ್ಳಿ ಎಂದು ಪ್ರಧಾನಿ ಅವರು ತಿಳಿಸಿದ್ದಾರೆ.

ಬಾಲ ಪುರಸ್ಕಾರ ವಿಜೇತರಿಗೆ ಬ್ಲಾಕ್ ಚೈನ್ ತಂತ್ರಜ್ಞಾನ ಬಳಸಿ ಪ್ರಧಾನಿ ಮೋದಿ, ಡಿಜಿಟಲ್ ಪ್ರಶಸ್ತಿ ಪತ್ರಗಳನ್ನು ನೀಡಿದರು. ಜಾಗತಿಕ ಮಟ್ಟದಲ್ಲಿ ಭಾರತದ ಯುವ ಪ್ರತಿಭೆಗಳು ದೊಡ್ಡ ಹೆಸರು ಮಾಡಿವೆ. ಪ್ರತಿಷ್ಠಿತ ಕಂಪನಿಗಳ ಸಿಇಒ ಗಳು ಭಾರತೀಯರು ಎನ್ನುವುದು ಹೆಮ್ಮೆಯ ವಿಷಯ. ಆದರೆ ಈ ಕೀರ್ತಿ ಹೊರದೇಶಗಳಿಗೆ ಮಾತ್ರ ಸೀಮಿತವಾಗಿರಬಾರದು. ಇಲ್ಲಿ ಬೆಳೆಯುವ ಪ್ರತಿಭೆಗಳು ಇಲ್ಲಿಯೇ ನಿಂತು, ಏನನ್ನಾದರೂ ಸಾಧಿಸಬೇಕು. ಆ ಮೂಲಕ ದೇಶಿ ಆಂದೋಲನಕ್ಕೆ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.

14 ಬಾಲಕಿಯರು ಸೇರಿದಂತೆ 29 ಮಕ್ಕಳಿಗೆ ರಾಷ್ಟ್ರೀಯ ಬಾಲ ಪುರಸ್ಕಾರ ನೀಡಲಾಯಿತು. ನಾವಿನ್ಯತೆ, ಪಾಂಡಿತ್ಯಪೂರ್ಣ ಸಾಧನೆಗಳು, ಕ್ರೀಡೆ, ಸಮಾಜ ಸೇವೆ ಮತ್ತು ಶೌರ್ಯ, ಕಲೆ-ಸಂಸ್ಕೃತಿ ಸೇರಿ ಆರು ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆಗೆ ಪುರಸ್ಕಾರ ನೀಡಲಾಯಿತು

ಪ್ರೊ ಕಬಡ್ಡಿ ಲೀಗ್ ಗೆಲುವಿನಲೆಯಲ್ಲಿ ವಾರಿಯರ್ಸ್-ಪಲ್ಟನ್

0

ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ ಶೆರಟಾನ್ ಗ್ರ್ಯಾಂಡ್ ಹೋಟೆಲ್ ಮೈದಾನದಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಲೀಗ್ ಪಂದ್ಯಾವಳಿಯು ಸೋಮವಾರ 4 ತಂಡಗಳ ನಡುವೆ ನಡೆಯಿತು.

ಪ್ಯಾಂಥರ್ಸ್ ವಿರುದ್ಧ ವಾರಿಯರ್ಸ್ ಗೆ ರೋಚಕ ಜಯ
ಜೈಪುರ್ ಪಿಂಕ್ ಪ್ಯಾಂಥರ್ಸ್ (22) ಮತ್ತು ಬೆಂಗಾಲ್ ವಾರಿಯರ್ಸ್ (41) ತಂಡಗಳ ನಡುವೆ ನಡೆಯಿತು.
ಬೆಂಗಾಲ್ ತಂಡದ ಡಿಫೆನ್ಸ್ ವಿಭಾಗದ ರಣ್ ಸಿಂಗ್ 4 ಪಾಯಿಂಟ್ಸ್ ಗಳಿಸಿದರೆ ವಿಶಾಲ್ ಮಾನೆ ಮತ್ತು ಅಭೋಜರ್ ಮಿಘಾನಿ ತಲಾ 2 ಪಾಯಿಂಟ್ಸ್ ಕಲೆ ಹಾಕಿದರು.
ಹಾಗೆಯೇ ಮೊಹಮ್ಮದ್ ನವಿಭಕ್ಷ್ 6 ಪಾಯಿಂಟ್ಸ್ ಗಳಿಸಿದರೆ ಸುಕೇಶ್ ಹೆಗಡೆ 4 ಪಾಯಿಂಟ್ಸ್ ಕಲೆಹಾಕಿ ತಂಡಕ್ಕೆ ನೀಡಿದರು.
ಇವರೆಲ್ಲರ ಉತ್ತಮ ಆಟ ಪ್ರದರ್ಶನದಿಂದ ಬೆಂಗಾಲ್ ತಂಡವು 13 ಅಂಕಗಳ ಅಂತರದಿಂದ ಜೈಪುರ್ ತಂಡವನ್ನು ಮಣಿಸಿತು.

ಡೆಲ್ಲಿ ವಿರುದ್ಧ ಪಲ್ಟನ್ ಗೆ ಭರ್ಜರಿ ಜಯ
ದಬಾಂಗ್ ಡೆಲ್ಲಿ(25) ಮತ್ತು ಪುಣೇರಿ ಪಲ್ಟನ್(42) ತಂಡಗಳ ನಡುವೆ ನಡೆಯಿತು.
ಪುಣೇರಿ ಪರ ಮೋಹಿತ್ ಗೋಯತ್ 10 ಪಾಯಿಂಟ್ಸ್ ಗಳಿಸಿದರು. ಹಾಗೆಯೇ ಅಸ್ಲಾಂ ಇನಾಮದಾರ್ 8 ಪಾಯಿಂಟ್ಸ್ ಮತ್ತು ನಿತಿನ್ ತೋಮರ್ ಹಾಗೂ ಡಿಫೆಂಡರ್ ಸೊಮ್ ವೀರ್ ತಲಾ 6 ಪಾಯಿಂಟ್ಸ್ ಗಳಿಸುವುದರ ಮೂಲಕ ತಂಡದ ಗೆಲುವಿಗೆ ಪ್ರಮುಖ ಕಾರಣರಾದರು.
ಇದರಿಂದ ಪಲ್ಟನ್ ತಂಡವು 17 ಅಂಕಗಳ ಅಂತರದಿಂದ ಡೆಲ್ಲಿ ತಂಡವನ್ನು ಬಗ್ಗುಬಡಿಯಿತು.

 ಪ್ರೊ ಕಬಡ್ಡಿ ಲೀಗ್ ಆಯೋಜಕ ಕಂಪನಿ ಮಶಾಲ್ ರವರು ಎರಡು ತಂಡಗಳ ಕೆಲವು ಆಟಗಾರರಲ್ಲಿ ಕೋವಿಡ್  ಧೃಡಪಟ್ಟ ಕಾರಣ ತಮ್ಮ ತಮ್ಮ ತಂಡಗಳಲ್ಲಿ ಆಡುವ ಅಗತ್ಯವಿರುವ ಆಟಗಾರರನ್ನು ಮುಂದೆ ನಡೆಯಲಿರುವ ಪಂದ್ಯಗಳಿಗೆ ಕಣಕ್ಕಿಳಿಸುವುದು ಕಷ್ಟವಾಗುತ್ತದೆ ಆದ್ದರಿಂದ ಆ ತಂಡಗಳ ಮುಂದಿನ ದಿನಾಂಕಕ್ಕೆ ಮರುನಿಗದಿ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
 ಮರುನಿಗದಿ ಯಾಗಿರುವ ಪಂದ್ಯಗಳ ಪ್ರಕಾರ 25 ರಿಂದ 28 ರವರೆಗೆ ಪ್ರತಿದಿನ ಒಂದೇ ಪಂದ್ಯ ನಡೆಯಲಿದೆ ಹಾಗೂ 29 ಮತ್ತು 30 ರಂದು ಎರಡು ಪಂದ್ಯಗಳು ನಡೆಯಲಿವೆ ಎಂದು ತಿಳಿಸಿದ್ದಾರೆ.
   ಆಟಗಾರರ ಆರೋಗ್ಯ ಮತ್ತು ಸುರಕ್ಷತೆಯನ್ನು ಗಮದಲ್ಲಿಟ್ಟುಕೊಂಡು ಕೆಲವು ಪಂದ್ಯಗಳನ್ನು ಮರುನಿಗದಿ ಮಾಡಲಾಗಿದೆ. ಕೋವಿಡ್ ಖಚಿತಪಟ್ಟಿರುವ ಆಟಗಾರರ ಪ್ರತ್ಯೇಕವಾಸಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರೊ ಕಬಡ್ಡಿ ಲೀಗ್ ಮಂಡಳಿಯ ಆಯೋಜಕ ಮಶಾಲ್ ತಿಳಿಸಿದ್ದಾರೆ.

ಇಂದು ನಡೆಯುವ ಪಂದ್ಯ:
೧. ಹರಿಯಾಣ ಸ್ಟೀಲರ್ಸ್ ಮತ್ತು ತೆಲುಗು ಟೈಟನ್ಸ್
ಸಮಯ:7.30

ಉನ್ನತ ಐಎಎಸ್ ಅಧಿಕಾರಿಗಳ ವರ್ಗಾವಣೆ

0

ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಕಾರ್ಯನಿರತ 19 ಮಂದಿ ಉನ್ನತ ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಈ ಪ್ರಕ್ರಿಯೆ ಜನವರಿ 24ರಂದು ನಡೆದಿದೆ.

ಅಧಿಕಾರಿಗಳ ಹೆಸರು ಮತ್ತು ವರ್ಗವಾದ ಹುದ್ದೆಯ ವಿವರ ಈ ಕೆಳಗಿನಂತಿವೆ;

  1. ಯಶ್ವಂತ್ ಗುರುಕಾರ್-ಜಿಲ್ಲಾಧಿಕಾರಿ, ಕಲಬುರ್ಗಿ
    02.ಡಾ. ಶಾಮಲಾ ಇಕ್ಬಾಲ್-ಸಾರ್ವಜನಿಕ ಉದ್ಯಮ ಕಾರ್ಯದರ್ಶಿ
  2. ಗಿರಿಮಾ ಪವಾರ್-ಸಿಇಒ , ಜಿಲ್ಲಾ ಪಂಚಾಯತ್, ಯಾದಗಿರಿ
    04.ವಿ ವಿ ಜ್ಯೋತ್ಸ್ನಾ -ಎಂ.ಡಿ, ಕರ್ನಾಟಕ ಸಿಲ್ಕ್ ಬೋರ್ಡ್
  3. ಬಿ.ಎಚ್‌. ಅನಿಲ್ ಕುಮಾರ್-ಲೋಕೋಪಯೋಗಿ ಇಲಾಖೆ
    06.ಬಿ. ಜಗದೀಶ್-ಹೆಚ್ಚುವರಿ ಎಂಡಿ, ಪ್ರವಾಸೋದ್ಯಮ ಇಲಾಖೆ
  4. ಶಿಲ್ಪ ನಾಗ್-ಆಯುಕ್ತರು, ಗ್ರಾಮೀಣಾಭಿವೃದ್ಧಿ
  5. ವೆಂಕಟ್ ರಾಜ್- ಡಿ.ಸಿ. ಕೋಲಾರ
    09.ಎ.ಎ. ದಯಾನಂದ-ಆಯುಕ್ತರು, ಹಿಂದುಳಿದ ವರ್ಗಗಳ ಇಲಾಖೆ
  6. ಕೆಎಸ್ ಲತಾಕುಮಾರಿ-ನಿರ್ದೇಶಕಿ, ವಿಕಲಚೇತನರ ಕಲ್ಯಾಣ ಇಲಾಖೆ
  7. ನಳಿನಿ ಅತುಲ್-ಪರೀಕ್ಷಾ ನಿಯಂತ್ರಕರು
  8. ಇಬ್ರಾಹಿಂ ಮೈಗೂರ್-ಕಾರ್ಯದರ್ಶಿ ರೇರಾ
    13.ಹೆಚ್.ಟಿ. ಭವ್ಯರಾಣಿ-ಎಂ ಡಿ ಕರ್ನಾಟಕ ವಿದ್ಯುತ್ ಇಲಾಖೆ
    14.ಡಾ. ಶ್ಯಾಮಲಾ ಇಕ್ಬಾಲ್ -ಸಾರ್ವಜನಿಕ ಉದ್ಯಮ ಕಾರ್ಯದರ್ಶಿ
    15.ಕನಗವಲ್ಲಿ -ಆಯುಕ್ತರು, ಅಪರ ಆಹಾರ ಇಲಾಖೆ
  9. ಎನ್.ಎಂ. ನಾಗರಾಜ್ -ಎಂಡಿ, ಕೆಎಸ್ ಎಂಎಸ್ ಸಿ
  10. ಪಾಟೀಲ್ ಭುವನೇಶ್ ದೇವಿ ದಾರ್-ಎಂ ಡಿ ಈಶಾನ್ಯ ಕರ್ನಾಟಕ ಸಾರಿಗೆ
  11. ಶೇಕ್ ತನ್ವೀರ್- ಹೆಚ್ಚುವರಿ ಆಯುಕ್ತರು, ಅಬಕಾರಿ ಇಲಾಖೆ
  12. ಶಿಲ್ಪ ಶರ್ಮ- ಆಯುಕ್ತರು, ಪಂಚಾಯತ್ ರಾಜ್

ಸಾರಿಗೆ ಉದ್ಯಮಿ ನಿಗೂಢ ಸಾವು

0

ಶಿವಮೊಗ್ಗದ ಸಾರಿಗೆ ಉದ್ಯಮಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದಂತಹ ಸಾಗರದ ಪ್ರಕಾಶ್ ಟ್ರಾವೆಲ್ಸ್ ಮಾಲೀಕ ಪ್ರಕಾಶ್ ಅವರು ಅವರು ಮೃತಪಟ್ಟಿದ್ದಾರೆ.

ಜನವರಿ 21ರಂದು ಪ್ರಕಾಶ್ ಅವರು ನಿಗೂಢವಾಗಿ ನಾಪತ್ತೆಯಾಗಿದ್ದರು. 22ರಂದು ಬೆಳಿಗ್ಗೆ ಹೊಸನಗರ ತಾಲೂಕಿನ ಪಟಗುಪ್ಪ ಸೇತುವೆ ಮೇಲೆ ಪ್ರಕಾಶ್ ಅವರ ಕಾರು ಮತ್ತು ಮೊಬೈಲ್ ಫೋನ್ ಪತ್ತೆಯಾಗಿತ್ತು. ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಹೊಸನಗರ ಪೊಲೀಸರು ಶೋಧ ಕಾರ್ಯ ಆರಂಭಿಸಿದರು. ಸತತ ಎರಡು ದಿನಗಳ ಶೋಧ ಕಾರ್ಯ ನಡೆಸಿದ ಬಳಿಕ ಪ್ರಕಾಶ್ ಅವರ ಮೃತದೇಹ ಸೋಮವಾರ ಬೆಳಗಿನಜಾವ ಪತ್ತೆಯಾಗಿದೆ.

ಮಲೆನಾಡಿಗೆ ಐಷಾರಾಮಿ ಬಸ್ಸುಗಳನ್ನು ತಂದ ಪರಿಚಯಿಸಿದವ ಮೊದಲಿಗರಲ್ಲಿ ಪ್ರಕಾಶ್ ಅವರು ಒಬ್ಬರು. ಪ್ರಕಾಶ್ ಟ್ರಾವೆಲ್ಸ್ ಹೆಸರಿನಲ್ಲಿ 50ಕ್ಕೂ ಹೆಚ್ಚು ಬಸ್ ಗಳಿದೆ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪ್ರಕಾಶ್ ಟ್ರಾವೆಲ್ಸ್ ನಲ್ಲಿ ಸುಮಾರು 500 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕಳೆದ ಕೊರೋನಾ ಲಾಕ್ ಡೌನ್ ಸಮಯದ ಸಂಕಷ್ಟದ ನಡುವೆಯೂ ತಮ್ಮ ಟ್ರಾವೆಲ್ಸ್ ನಲ್ಲಿ ಕೆಲಸ ಮಾಡುವ ನೌಕರರಿಗೆ ನೆರವಾಗಿದ್ದರು. ಕೋವಿಡ್ ಮಾರ್ಗಸೂಚಿಗಳ ಪರಿಣಾಮ ಪ್ರಕಾಶ್ ಟ್ರಾವೆಲ್ ಸಂಪೂರ್ಣ ನಷ್ಟಕ್ಕೆ ಗುರಿಯಾಯಿತು. ಬಳಿಕ ಬಸ್ ನಿರ್ವಹಣೆ, ಸಿಬ್ಬಂದಿ ಸಂಬಳ, ಪಡೆದ ಸಾಲ ತೀರಿಸುವ ಒತ್ತಡ ಎದುರಾಗಿತ್ತು ಎಂದು ಮೂಲಗಳಿಂದ ತಿಳಿದುಬಂದಿದೆ.

ಪ್ರಕಾಶ್ ಅವರು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ದುರ್ಬಲ ರಾಗಿರಲಿಲ್ಲ. ಅವರ ಹತ್ಯೆಯಾಗಿದೆ ಎಂದು ಕುಟುಂಬದವರು ಆಪ್ತರು ಸಂಸ್ಥೆಯ ನೌಕರರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಹೊಸನಗರ ಪೊಲೀಸರು ತನಿಖೆ ನಡೆಸುತ್ತಿದ್ದು, ಸತ್ಯಾಂಶ ಹೊರಬರಲಿದೆ.

ಕಾಫಿ ಡೇ ಉದ್ಯಮಿ ಸಿದ್ದಾರ್ಥ್ ಅವರ ದುರಂತ ಸಾವು ಇನ್ನೂ ಕಣ್ಮುಂದೆ ಇರುವ ಹಾಗೆಯೇ ಪ್ರಕಾಶ್ ಟ್ರಾವೆಲ್ಸ್ ನಾ ಮಾಲೀಕ ಪ್ರಕಾಶ್ ಅವರ ದುರಂತ ಅಂತ್ಯ ಮಲೆ ನಾಡಿಗರಲ್ಲಿ ನೋವನ್ನುಂಟು ಮಾಡಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.


Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಫೆಬ್ರವರಿ 15 ರ ನಂತರ ಒಮಿಕ್ರಾನ್ ಅಬ್ಬರ ತಗ್ಗಲಿದೆ

0

ಓಮಿಕ್ರಾನ್ ರೂಪಾಂತರಿ‌ ಯಿಂದ ಕಂಡುಬಂದಿರುವ ಕೊರೋನಾ ಮೂರನೆ ಅಲೆಯ ಅಬ್ಬರ ಫೆಬ್ರವರಿ 15ರ ನಂತರ ಇಳಿಕೆಯಾಗಲಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ಕೊರೋನಾ ಸೋಂಕಿನ ಹೊಸ ಪ್ರಕರಣಗಳು ಬಹುತೇಕ ರಾಜ್ಯಗಳಲ್ಲಿ ನಿಧಾನವಾಗಿ ಇಳಿಕೆ ಕಾಣುತ್ತಿದೆ. ಅಥವಾ ಸ್ಥಿರವಾಗಿದೆ. ದೆಹಲಿ, ಮುಂಬೈ ಹೀಗೆ ಹಲವಾರು ಮಹಾನಗರಗಳಲ್ಲಿಯೂ ಸೋಂಕಿತರ ಸಂಖ್ಯೆ ಇಳಿಕೆಯಾಗಿದೆ. ಇದೇ ಪರಿಸ್ಥಿತಿ ಮುಂದುವರೆಯಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ವರದಿಯಲ್ಲಿ ತಿಳಿಸಿದೆ.

ಶೀಘ್ರದಲ್ಲೇ ಪ್ಯಾಂಡೆಮಿಕ್ ನಿಂದ ಎಂಡೆಮಿಕ್ ಆಗಿ ಪರಿವರ್ತನೆ ಆಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ದೇಶದಲ್ಲಿ ಮೂರನೇ ಅಲೆ ಪರಿಣಾಮವನ್ನು ಕೊರೋನಾ ನಿರೋಧಕ ಲಸಿಕೆಗಳು ತಗ್ಗಿಸಿವೆ. ಆದರೂ, ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಜೊತೆ ಕೇಂದ್ರ ಆರೋಗ್ಯ ಸಚಿವಾಲಯವು ಸಂಪರ್ಕದಲ್ಲಿದೆ. ಅದರಲ್ಲೂ, ದೇಶದ ಶೇ. 74ರಷ್ಟು ವಯಸ್ಕರು ಲಸಿಕೆಯ 2 ಡೋಸ್ ಪಡೆದಿರುವುದು ಸಕರಾತ್ಮಕವಾಗಿದೆ.

ಆದ್ದರಿಂದ ಮೂರನೇ ಅಲೆಯಲ್ಲಿ ಸಾವಿನ ಪ್ರಮಾಣ ಗಣನೀಯವಾಗಿ ತಗ್ಗಿದೆ ಎಂದು ಸಚಿವಾಲಯದ ವರದಿಗಳು ತಿಳಿಸಿವೆ.