Sunday, February 15, 2026
Sunday, February 15, 2026
Home Blog Page 1750

ಜಿಲ್ಲಾ ಮತ್ತು ತಾಲೂಕು ಘಟಕಗಳಿಗೆ ಹೆಚ್ಚಿನ ಅನುದಾನಕ್ಕೆ ಮನವಿ

0

ಸಾಹಿತ್ಯದ ಚಟುವಟಿಕೆಗಳನ್ನು ನಡೆಸಲು ವಿಸ್ತಾರವಾದ ಕಾರ್ಯಕ್ಷೇತ್ರವಿದೆ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಸಾಹಿತ್ಯದ ಕಾರ್ಯಕ್ರಮಗಳನ್ನು ನಡೆಸುತ್ತಾ ಜನರಿಗೂ ಇದನ್ನು ಮುಟ್ಟಿಸುವ ಕೆಲಸವಾಗಲಿ ಎಂದು ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಡಿ.ಮಂಜುನಾಥ್ ಅವರು ಆಶಿಸಿದರು.
ಜ. 23 ರಂದು ನಡೆದ ತೀರ್ಥಹಳ್ಳಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಣಿಯ ಮೊದಲ ಸಭೆಯಲ್ಲಿ ಭಾಗವಹಿಸಿದರು. ಮಂಜುನಾಥ್ ಅವರು,‌ ಮನೆಯಂಗಳಕ್ಕೆ ಮತ್ತು ಶಾಲೆಯೆಡೆಗೆ ಸಾಹಿತ್ಯ ಕಾರ್ಯಕ್ರಮಗಳು, ದತ್ತಿ ಕಾರ್ಯಕ್ರಮಗಳು, ಸಾಹಿತ್ಯ ಕೃತಿಗಳ ಪರಿಚಯ ಸೇರಿದಂತೆ ವೈವಿಧ್ಯಮಯ ಕಾರ್ಯ ಚಟುವಟಿಕೆಗಳನ್ನು ನಡೆಸಬಹುದಾಗಿದೆ. ಹಾಗೆಯೇ ನಾಡು ನುಡಿಗೆ ಧಕ್ಕೆಯಾಗುವ ಸಂದರ್ಭ ಬಂದಾಗ ಯಾವುದೇ ಅಳುಕಿಲ್ಲದೆ ಇದನ್ನು ವಿರೋಧಿಸುವ ಧೈರ್ಯವನ್ನೂ ತೋರಬೇಕು ಎಂದರು.
ಜಿಲ್ಲಾ ಹಾಗೂ ತಾಲೂಕು ಸಾಹಿತ್ಯ ಸಮ್ಮೇಳನಗಳಿಗೆ ಹೆಚ್ಚಿನ ಅನುದಾನಗಳನ್ನು ಒದಗಿಸಲು ಮತ್ತು ನಿರ್ವಹಣಾ ವೆಚ್ಚವನ್ನು ಕೂಡ ನೀಡುವಂತೆ ಕೋರಲಾಗಿದೆ. ಸಾಹಿತ್ಯದ ಚಟುವಟಿಕೆಗಳನ್ನು ಹೆಚ್ಚೆಚ್ಚು ನಡೆಸುವಂತೆ ಸೂಚಿಸಿದರು.
ಇದಕ್ಕೆ ಮೊದಲು ತೀರ್ಥಹಳ್ಳಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನ ಕಾರ್ಯಕಾರಿ ಸಮಿತಿಯ ಮೊದಲ ಸಭೆಯು ತಾಲೂಕು ಕಸಾಪ ಅಧ್ಯಕ್ಷ ಟಿ.ಕೆ. ರಮೇಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಂಬರುವ ದಿನಗಳಲ್ಲಿ ವೈವಿಧ್ಯಮಯ ಸಾಹಿತ್ಯ ಚಟುವಟಿಕೆಗಳನ್ನು ನಡೆಸುವ ಕುರಿತಾಗಿ ಸಭೆಯಲ್ಲಿ ಚರ್ಚಿಸಿ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಹಾಗೆಯೇ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಚಟುವಟಿಕೆಗಳ ಉದ್ಘಾಟನಾ ಸಮಾರಂಭ ಏರ್ಪಡಿಸುವ ಕುರಿತಾಗಿ ಮತ್ತು ಈ ನೂತನ ಕಾರ್ಯಕಾರಿ ಸಮಿತಿಗೆ ಸಲಹೆಗಾರರಾಗಿ ಕೆಲವರನ್ನು ಸೇರಿಸಿಕೊಳ್ಳುವ ಕುರಿತಾಗಿಯೂ ಚರ್ಚಿಸಲಾಯಿತು.
ಸಭೆಯಲ್ಲಿ ಕಾರ್ಯದರ್ಶಿಗಳಾದ ಗಾಯತ್ರಿ ಶೇಷಗಿರಿ, ಸೌಳಿ ನಾಗರಾಜ್ , ಕೋಶಾಧಿಕಾರಿ ಹಾಲಿಗೆ ನಾಗರಾಜ್, ಕಾರ್ಯಕಾರಿ ಸಮಿತಿ ಸದಸ್ಯರಾದ ಮಹಾಬಲೇಶ್ವರ ಹೆಗಡೆ, ಕೋಣಂದೂರು ಎಸ್. ಇ.ಅಶೋಕ್, ಆರ್.ಎಂ.ಧರ್ಮಕುಮಾರ್ , ಜಿ.ಕೆ.ಸತೀಶ್, ಕೆ.ಎಸ್. ನಾಗರತ್ನ, ಸೋಮಶೇಖರ್ ಟಿ.ಜಿ. , ಕೆ.ಜಿ. ಮಹಮ್ಮದ್ , ಎಚ್.ಸಿ. ಪ್ರಸನ್ನಕುಮಾರ್ ಅವರು ಪಾಲ್ಗೊಂಡು ಹಲವು ಸಲಹೆ ಸೂಚನೆಗಳನ್ನು ನೀಡಿದರು.

ಇಂದಿನ ವಿಶೇಷ ಕಾರ್ಯಕ್ರಮ “ಇಷ್ಟವಾಗುವ ಇಳಕಲ್ ಸೀರೆ”.

0

ಇಳಕಲ್ ಸೀರೆ ಉಟ್ಕೊಂಡು, ಮೋಣಕಾಲು ಗಂಟ ಎತ್ಕೊಂಡು ಈ ಹಾಡನ್ನು ನಾವು ಸಾಮಾನ್ಯವಾಗಿ ಕೇಳಿರುತ್ತೇವೆ. ಇಳಕಲ್ ಸೀರೆ ಇಂದು ಸಾಂಪ್ರದಾಯಿಕ ಉಡುಗೆಯಲ್ಲಿ ಒಂದಾಗಿದೆ. ಈ ಬಾರಿ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದ ಸ್ತಬ್ಧ ಚಿತ್ರಗಳ ಪರೇಡ್ ನಲ್ಲಿ ಇಳಕಾಲ್ ಸೀರೆ ಪ್ರದರ್ಶನ ಗೊಳ್ಳಲಿದೆ. ಇಳಕಲ್ ಸೀರೆ ಮಾಡೆಲ್ ಯಾರದು? ಅಂಥ ಯೋಚಿಸುತ್ತಿದ್ದೀರಾ…! ಅದು ಕಮಲಾದೇವಿ ಚಟ್ಟೋಪಾಧ್ಯಾಯ ಅವರ ಪ್ರತಿಮೆ. ಇವರು ಮಹಿಳೆಯರ ಹಕ್ಕು, ಸ್ವಾತಂತ್ಯಕೋಸ್ಕರ ಹೋರಾಡಿದವರು. ಆದರಿಂದ ಇವರನ್ನು ಸ್ತಬ್ದ ಚಿತ್ರಕ್ಕೆ ಆಯ್ಕೆ ಮಾಡಿದ್ದಾರೆ. ಈ ಪ್ರತಿಮೆಗೆ ಇಳಕಲ್ ಸೀರೆಯಿಂದ ಶೃಂಗರಿಸಲಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಕ್ರಿಕೆಟ್ ಅಂಡರ್ 19 ಭಾರತದೆದುರು ತರಗೆಲೆಯಾದ ಉಗಾಂಡ

0

19 ವರ್ಷದೊಳಗಿನವರ ವಿಶ್ವಕಪ್ ಪಂದ್ಯಾವಳಿಯು ಭಾರತ ಮತ್ತು ಉಗಾಂಡ ತಂಡಗಳ ನಡುವೆ ನಡೆಯಿತು. ಉಗಾಂಡ ತಂಡವು ಭಾರತ ಎದುರು ಹೀನಾಯವಾಗಿ ಸೋಲಿಸಿ ಭರ್ಜರಿ ಜಯ ಸಾಧಿಸಿ ಫೈನಲ್ ಹಂತವನ್ನು ತಲುಪಿದೆ.
ಇದೇ 29 ರಂದು 8 ರ ಘಟ್ಟದ ಪಂದ್ಯದಲ್ಲಿ ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಮುಖಾಮುಖಿ ಸೆಣೆಸಲಿವೆ.
B ಗುಂಪಿನ ಕೊನೆಯ ಪಂದ್ಯದಲ್ಲಿ ಭಾರತ ತಂಡವು ಮೊದಲು ಬ್ಯಾಟಿಂಗ್ ಮಾಡಿತು. 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 405 ರನ್ ಗಳಿಸಿಕೊಂಡಿತು. ಭಾರತ ತಂಡದ ಆಟಗಾರ ರಾಜ್ ಔಟಾಗದೆ 108 ಎಸೆತಗಳಲ್ಲಿ 162 ರನ್ ಗಳಿಸಿಕೊಂಡರು ರಘುವಂಶಿ 120 ಎಸೆತಗಳಲ್ಲಿ 144 ರನ್ ಗಳಿಸಿ ಇವರಿಬ್ಬರ ರೋಚಕ ಶತಕದ ಬಲದಿಂದ ಜೊತೆಯಾಟದಲ್ಲಿ ತಂಡಕ್ಕೆ 306 ರನ್ ಸೇರಿಸಿ ಇದರಿಂದ ಉತ್ತಮ ಮೊತ್ತ ಕಲೆಹಾಕಲು ಭಾರತ ತಂಡಕ್ಕೆ ಸಾಧ್ಯವಾಯಿತು.
406 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ ಉಗಾಂಡ ತಂಡವವು ಕೇವಲ 19.4 ಓವರ್ ಗಳಲ್ಲಿಯೇ ಆಲ್ ಔಟ್ ಆಗಿ 79 ರನ್ ಗಳಿಸುವಷ್ಟಕ್ಕೆ ಸೀಮಿತವಾಗಿ ಸೋಲು ಕಂಡು ಉಗಾಂಡ ತತ್ತರಿಸಿ ಹೋಯಿತು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಪ್ರೊ ಕಬಡ್ಡಿ ಲೀಗ್ ಸ್ಟೀಲರ್ಸ್-ಬುಲ್ಸ್ ಜಯದ ಸಂಭ್ರಮ

0

ಬೆಂಗಳೂರಿನ ವೈಟ್ ಫೀಲ್ಡ್ ಶೆರಟಾನ್ ಗ್ರ್ಯಾಂಡ್ ಹೋಟೆಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಲೀಗ್ ಪಂದ್ಯಾವಳಿಯು ಭಾನುವಾರ 4 ತಂಡಗಳ ನಡುವೆ ನಡೆಯಿತು.

ಯೋಧಾ ವಿರುದ್ಧ ಸ್ಟೀಲರ್ಸ್ ಗೆ ರೋಚಕ ಜಯ ಲಭಿಸಿತು.
ಹರಿಯಾಣ ಸ್ಟೀಲರ್ಸ್(36) ಮತ್ತು ಯು.ಪಿ ಯೋಧಾ(35) ತಂಡಗಳ ನಡುವೆ ಪಂದ್ಯ ನಡೆಯಿತು.
ಹರಿಯಾಣ ಪರ ರೋಹಿತ್ ಗುಲಿಯಾ 7 ಪಾಯಿಂಟ್ಸ್ ಮತ್ತು ವಿಕಾಸ್ ಖಂಡೋಲಾ, ಜೈದೀಪ್,ಮತ್ತು ಮೋಹಿತ್ ಇವರುಗಳು ತಲಾ 5 ಪಾಯಿಂಟ್ಸ್ ಗಳಿಸುವುದರೊಂದಿಗೆ ತಂಡದ ಗೆಲುವಿನ ಧ್ವಜ ಹಾರಿಸಿದರು.

ಬುಲ್ಸ್ ಗೆ ಮಣಿದ ಟೈಟನ್ಸ್
ಬೆಂಗಳೂರು ಬುಲ್ಸ್ (36) ಮತ್ತು ತೆಲುಗು ಟೈಟನ್ಸ್(31) ತಂಡಗಳ ನಡುವೆ ಪಂದ್ಯ ನಡೆಯಿತು.
ಬುಲ್ಸ್ ತಂಡದ ರೇಡರ್ ಆಪತ್ಭಾಂದವ ಪವನ್ 12 ಪಾಯಿಂಟ್ಸ್ ಗಳಿಸಿಕೊಂಡರು ಮತ್ತು ಇವರಿಗೆ ಭರತ್ ಕೂಡ 7 ಪಾಯಿಂಟ್ಸ್ ಗಳಿಸಿ ಉತ್ತಮ ಸಾಥ್ ನೀಡಿದರು. ಹಾಗೂ ಸೌರಭ್ ನಂದಾಲ್ ಮತ್ತು ಅಮನ್ ತಲಾ 4 ಪಾಯಿಂಟ್ಸ್ ಗಳಿಸಿ ತಂಡದ ಗೆಲುವಿಗೆ ಕಾರಣರಾದರು. ಹಾಗೆಯೇ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಸಾಧಿಸಿದೆ.

ಇಂದು ನಡೆಯಲಿರುವ ಪಂದ್ಯಗಳು:
೧. ಬೆಂಗಾಲ್ ವಾರಿಯರ್ಸ್ ಮತ್ತು ಜೈಪುರ್ ಪಿಂಕ್ ಪ್ಯಾಂಥರ್ಸ್
ಸಮಯ:7.30
೨. ಪುಣೇರಿ ಪಲ್ಟನ್ ಮತ್ತು ದಬಾಂಗ್ ಡೆಲ್ಲಿ
ಸಮಯ:8.30

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ನೇತಾಜಿಯವರ ಹೊಲೋಗ್ರಾಂ ಪ್ರತಿಮೆ ಅನಾವರಣ

0

ಬ್ರಿಟಿಷರಿಂದ ಮುಕ್ತವಾಗುವ ಸ್ವಾತಂತ್ರ್ಯದ ಕನಸನ್ನು ಮೊಟ್ಟಮೊದಲು ಬಿತ್ತಿದ್ದು ನೇತಾಜಿ ಅವರು. ಅಂಡಮಾನ್ ದ್ವೀಪ ವೊಂದಕ್ಕೆ ನೇತಾಜಿ ಹೆಸರನ್ನು ಇರಿಸುವ ಮೂಲಕ ಬೋಸ್ ಅವರ ಸ್ಪೂರ್ತಿಯ ಪರಂಪರೆಯನ್ನು ಚಿರಸ್ಥಾಯಿಯಾಗಿಸಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮವರ್ಷಾಚರಣೆ ಹಿನ್ನೆಲೆಯಲ್ಲಿ ನವದೆಹಲಿಯ ಇಂಡಿಯಾ ಗೇಟ್ ನಲ್ಲಿ ನೇತಾಜಿಯ ಹೊಲೊಗ್ರಾಮ್ ಪ್ರತಿಮೆಯನ್ನು ಭಾನುವಾರ ಸಂಜೆ ಅನಾವರಣ ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡುತ್ತಿದ್ದರು.

ಕೆಂಪುಕೋಟೆಯಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜೀವನ ಹೋರಾಟ ಕುರಿತ ವಸ್ತುಸಂಗ್ರಹಾಲಯ ಮತ್ತು ರಾಷ್ಟ್ರೀಯ ಸ್ಮಾರಕವನ್ನು ನಿರ್ಮಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಸುಮಾರು 30 ಸಾವಿರ
4ಕೆ ಪ್ರೊಜೆಕ್ಟರ್ ಗಳ ಮೂಲಕ ಹೊಲೊ ಗ್ರಾಫಿಕ್ ಪರದೆ ಮೇಲೆ ನೇತಾಜಿ ಅವರ 28 ಅಡಿ ಎತ್ತರ ಮತ್ತು ಆರು ಅಡಿ ಅಗಲದ ಪ್ರತಿಮೆಯ 3ಡಿ ಚಿತ್ರ ಪ್ರದರ್ಶನ ಕಂಡಿತು. ಪ್ರಧಾನಿ ಅವರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕೇಂದ್ರ ವಸತಿ ಸಚಿವ ಹರ್ದಿಪ್ ಸಿಂಗ್ ಪುರಿ ಅವರು ಸಾಥ್ ನೀಡಿದರು.

ನಂತರ ಮಾತನಾಡಿದ ಪ್ರಧಾನಿ ಮೋದಿ ಅವರು ದಾನವಾಗಿ ಪಡೆಯುವ, ಹೋರಾಟವಿಲ್ಲದೆ ದಕ್ಕಿಸಿಕೊಳ್ಳುವ ಸ್ವಾತಂತ್ರ್ಯವನ್ನು ನೇತಾಜಿ ತಿರಸ್ಕರಿಸಿದ್ದರು. ಅವರು ಸ್ವಾತಂತ್ರ್ಯ ಎಂಬ ಮೂಲಭೂತ ಹಕ್ಕು ಹೋರಾಟದಿಂದಲೇ ದಕ್ಕಿಸಿಕೊಳ್ಳುವ ಸಂಕಲ್ಪ ಮಾಡಿದ್ದರು. ಹಾಗಾಗಿಯೇ ತಮ್ಮ ಜೀವನ ಮತ್ತು ಹೋರಾಟದ ಮೂಲಕ ದೇಶದ ಯುವಕರಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತಾ ಹೋದರು. ಸ್ವಾತಂತ್ರ್ಯ ಚಳುವಳಿಗೆ ಹುಮ್ಮಸ್ಸು, ಚಲನಶಕ್ತಿ ನೀಡಿದ್ದೆ ಬೋಸ್ ಅವರು ಎನ್ನುವುದನ್ನು ಮರೆಯುವಂತಿಲ್ಲ. ಅವರ ಸ್ಮರಣೆ ನಮಗೆ ಸ್ಫೂರ್ತಿದಾಯಕವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಹೋರಾಟದ ಸ್ಪೂರ್ತಿಯ ಕಿಡಿಯಾದ ಬೋಸ್ ಅವರು ನಮಗೆಲ್ಲ ಆದರ್ಶ ಪ್ರಾಯರು. ವಿಪತ್ತುಗಳಲ್ಲಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ರಾಜ್ಯ ವಿಪತ್ತು ನಿರ್ವಹಣಾ ಸಿಬ್ಬಂದಿ ಮತ್ತು ರಾಷ್ಟ್ರೀಯ ಸಿಬ್ಬಂದಿ ಕಾರ್ಯಚರಣೆ ನಡೆಸುತ್ತಾರೆ. ಅಂತ ಬರುವ ಗೌರವಾರ್ಥ ಬೋಸ್ ಅವರ ಜನ್ಮದಿನದಂದು ಪುರಸ್ಕಾರ ನೀಡಿ ಹುರಿದುಂಬಿಸಲು ಆಗುತ್ತಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.

ದೇಶದಲ್ಲಿ 2005ರಲ್ಲಿ ಜಾರಿಗೆ ತರಲಾದ ವಿಪತ್ತು ನಿರ್ವಹಣಾ ಕಾಯ್ದೆಯಿಂದ ಕೋವಿಡ್ ನಿರ್ವಹಣಾ ನಿಯಂತ್ರಣ ಕೂಡ ಸಾಧ್ಯವಾಗಿದೆ. ಅಂತ ವಿಪತ್ತು ನಿರ್ವಹಣಾ ಕೇಂದ್ರಗಳಿಗೆ ಅಗತ್ಯ ಮೂಲಭೂತ ಸೌಕರ್ಯವನ್ನು ನಮ್ಮ ಸರ್ಕಾರ ಒದಗಿಸಿತು. ಮುಖ್ಯವಾಗಿ ನೈಸರ್ಗಿಕ ವಿಕೋಪಗಳಲ್ಲಿ ಒಂದಾದ ಚಂಡಮಾರುತದಿಂದ ಬಾ ದಿಸೆಲ್ ಪಟ್ಟವರು ದೇಶದಾದ್ಯಂತ ವಿಪತ್ತು ನಿರ್ವಹಣೆ ಕಾರ್ಯಾಚರಣೆಯಲ್ಲಿ ಕಾರ್ಯಕರ್ತರಾಗಿ ಭಾಗಿಯಾಗುತ್ತಿರುವುದು ಮಾದರಿ ಕಾರ್ಯ. ಇವರಿಗೆಲ್ಲ ಬೋಸ್ ಅವರ ಹೋರಾಟದ ಹಾದಿ ಪ್ರೇರಣಾ ಶಕ್ತಿ ಎಂದು ಮೋದಿಜಿ ಅವರು ನೇತಾಜಿ ಅವರನ್ನು ವರ್ಣಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ದೇಶದಲ್ಲಿ ಓಮಿಕ್ರಾನ್ ತೀವ್ರ ಪ್ರಸರಣ

0

ಕೋವಿಡ್ ರೂಪಾಂತರಿ ಓಮಿಕ್ರಾನ್ ಪ್ರಸರಣವು ದೇಶದಲ್ಲಿ ತೀವ್ರಗೊಂಡಿದೆ. ಸಾಮುದಾಯಿಕ ಪ್ರಸರಣ ಹಂತದಲ್ಲಿದೆ ಎಂದು ತಜ್ಞರು ತಿಳಿಸಿದ್ದಾರೆ.

ಪ್ರಮುಖವಾಗಿ ಮೆಟ್ರೋ ನಗರಗಳಲ್ಲಿ ಹೆಚ್ಚಿನ ಜನರು ಓಮಿಕ್ರಾನ್ ಸೋಂಕಿನಿಂದ ಬಾಧಿತರಾಗುತ್ತಿದ್ದಾರೆ. ಡೆಲ್ಟಾ ರೂಪಾಂತರಿ ಯನ್ನು ಹಿಂದಿಕ್ಕಿ ಓಮಿಕ್ರಾನ್ ತನ್ನ ಪ್ರಾಬಲ್ಯ ಸಾಧಿಸುತ್ತಿದೆ ಎಂದು ಭಾರತೀಯ ಸಾರ್ಸ್ ಕೋವ್ -2 ಜಿನೋಮಿಕ್ಸ್ ಒಕ್ಕೂಟ ತಿಳಿಸಿದೆ.

ಜೊತೆಗೆ ಓಮಿಕ್ರಾನ್ ತಲಿಯಾದ ಬಿಎ.2 ಮಹಾನಗರಗಳಲ್ಲಿ ಹೆಚ್ಚು ಜನರಿಗೆ ತಗಲುತ್ತಿದೆ. ಸೌಮ್ಯ ರೋಗಲಕ್ಷಣಗಳನ್ನು ಉಂಟು ಮಾಡುತ್ತಿದೆ. ಬಿಎ. 2 ತಳಿಯು ಆರ್ ಟಿ – ಪಿಸಿಆರ್ ಪರೀಕ್ಷೆಯಲ್ಲಿ ಕೂಡ ಪತ್ತೆಯಾಗುತ್ತಿಲ್ಲ. ಆದ್ದರಿಂದ ಹಲವಾರು ಸೋಂಕಿತರು ರೋಗಲಕ್ಷಣ ರಹಿತರಾಗಿದ್ದಾರೆ. ಅವರಿಂದ ಮತ್ತೊಬ್ಬರಿಗೆ ಸೋಂಕು ಹರಡುತ್ತದೆ ಎಂಬ ಆತಂಕವನ್ನು ಒಕ್ಕೂಟದ ತಜ್ಞರು ಹೇಳಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಆಸ್ಟ್ರೇಲಿಯ ಓಪನ್ ಟೆನಿಸ್:ನಡಾಲ್ ಕ್ವಾರ್ಟರ್ ಪೈನಲ್ ಗೆ

0

ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಪಂದ್ಯಾವಳಿಯು ಮನಾರಿನೊ ಮತ್ತು ರಫೆಲ್ ನಡಾಲ್ ಇವರಿಬ್ಬರ ನಡುವೆ ನಡೆಯಿತು. ಮನಾರಿನೊ ವಿರುದ್ಧ ನಡಾಲ್ ಭರ್ಜರಿ ಜಯ ಸಾಧಿಸಿ ಕ್ವಾರ್ಟರ್ ಫೈನಲ್ ಹಂತಕ್ಕೆ ಲಗ್ಗೆ ಇಟ್ಟಿದ್ದಾರೆ.
ರಾಡ್ ಲೇವರ್ ಅರೆನಾದ ಕ್ರೀಡಾಂಗಣದಲ್ಲಿ ಈ ಹಣಾಹಣಿ ನಡೆಯಿತು. ಎಡಗೈ ಆಟಗಾರ ಮನಾರಿನೊ ಅವರ ಸವಾಲನ್ನು ಬಹಳಷ್ಟು ತಾಳ್ಮೆಯಿಂದ ಎದುರಿಸಿ ನಡಾಲ್ ಮೊದಲ ಸೆಟ್ ನ ಟೈಬ್ರೇಕರ್ ನಲ್ಲಿ ಜಯ ಸಾಧಿಸಲು ಕೇವಲ 28 ನಿಮಿಷ 40 ಸೆಕೆಂಡ್ ತೆಗೆದುಕೊಂಡರು.
ಇದರಿಂದಾಗಿ ಟೈಬ್ರೇಕರ್ ನಲ್ಲಿ ಸೆಟ್ ಗೆದ್ದ ನಡಾಲ್ ಸುಲಭವಾಗಿ ಮುನ್ನಡೆದರು 7-6,(4) , 6-2,6-2 ರಲ್ಲಿ ಜಯ ಗಳಿಸಿ ಟೂರ್ನಿಯಲ್ಲಿ 14 ನೇ ಬಾರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಆಟಗಾರ ಎಂಬ ಸಾಧನೆಗೆ ಭಾಜನರಾಗುತ್ತಾರೆ.
ಹೀಗಾಗಿ ಈ ಗೆಲುವಿನೊಂದಿಗೆ 21 ನೇ ಗ್ರ್ಯಾನ್ ಸ್ಲಾಂ ಪ್ರಶಸ್ತಿ ಗೆಲ್ಲುವ ಅವರ ಹಾದಿ ಇನ್ನಷ್ಟು ಸುಲಭವಾಗಿರಬಹುದು ಎಂದು ಭಾವಿಸಿಕೊಂಡಿದ್ದಾರೆ.
ಮುಂದಿನ ಪಂದ್ಯದಲ್ಲಿ ಅವರು ಕೆನಡಾದ ಡೆನಿಸ್ ಶಪ ವಲೋವ್ ಎದುರು ಮುಖಾಮುಖಿಯಾಗಲಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಕೋವಿಡ್ ನಿಯಂತ್ರಣ ಸಭೆ:ವಿದ್ಯಾರ್ಥಿಗಳ ಆರೋಗ್ಯ ದ ಬಗ್ಗೆ ನಿಗಾ ಇರಲಿ

0

ಸರ್ಕಾರದ ಮಾರ್ಗಸೂಚಿ ಪ್ರಕಾರ ಶಾಲಾ ಕಾಲೇಜುಗಳನ್ನು ನಡೆಸಬೇಕು. ಪಾಸಿಟಿವ್ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುವ ವಿದ್ಯಾ ಸಂಸ್ಥೆಗಳಿಗೆ ಜಿಲ್ಲಾಧಿಕಾರಿ ಅವರ ಅನುಮತಿ ಪಡೆದ ಬಳಿಕ ರಜೆ ನೀಡಬಹುದಾಗಿದೆ. ಅನಾರೋಗ್ಯದಿಂದ ಗೈರು ಹಾಜರಾಗುವ ವಿದ್ಯಾರ್ಥಿಗಳಿಗೆ ಹಾಜರಾತಿಯನ್ನು ಕಡ್ಡಾಯಗೊಳಿಸಬಾರದು. ಶಾಲೆಗೆ ಆಗಮಿಸುವ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ನಿರಂತರ ನಿಗಾ ವಹಿಸಬೇಕು ಎಂದು ಸಚಿವರು ತಿಳಿಸಿದರು.

ಜಿಲ್ಲೆಯಲ್ಲಿ ಲಸಿಕೆ ಪಡೆದವರ ಪ್ರಮಾಣ ರಾಜ್ಯಮಟ್ಟಕ್ಕೆ ಹೋಲಿಸಿದರೆ ಕಡಿಮೆಯಿದೆ. ಅಭಿಯಾನದ ರೀತಿಯಲ್ಲಿ ಲಸಿಕೆಯನ್ನು ಪ್ರತಿಯೊಬ್ಬರಿಗೂ ನೀಡಬೇಕು. ಆರೋಗ್ಯ ಕಾರ್ಯಕರ್ತರಿಗೆ ಹಾಗೂ ಮುಂಚೂಣಿ ಕಾರ್ಯಕರ್ತರಿಗೆ ಮೂರನೇ ಡೋಸ್ ನೀಡುವ ಕಾರ್ಯವನ್ನು ಚುರುಕುಗೊಳಿಸಬೇಕು. ಜಿಲ್ಲೆಯಲ್ಲಿ ಪ್ರಸ್ತುತ ಪಾಸಿಟೀವ್ ವ್ಯಕ್ತಿಗಳ ಹೋಂ ಕ್ವಾರೆಂಟೈನ್ ಪ್ರಮಾಣ ಶೇ.೯೫ರಷ್ಟಿದ್ದು, ಪ್ರಾಥಮಿಕ ಸಂಪರ್ಕಿತರಿಗೆ ಕನಿಷ್ಟ ೩ದಿನ ಹೋಂ ಕ್ವಾರೆಂಟೈನ್ ಖಾತ್ರಿಪಡಿಸಬೇಕು. ಹೋಂ ಕ್ವಾರೆಂಟೈನ್‌ನಲ್ಲಿರುವವರಿಗೆ ಅಗತ್ಯ ಔಷಧಿಗಳನ್ನು ಒಳಗೊಂಡ ಕಿಟ್ ಕಡ್ಡಾಯವಾಗಿ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ತಿಳಿಸಿದರು.

ವಸತಿ ನಿಲಯಗಳಲ್ಲಿರುವ ವಿದ್ಯಾರ್ಥಿಗಳಿಗೆ ಕರೋನಾ ಪಾಸಿಟಿವ್ ಬಂದರೆ ಅಂತಹ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸದೆ, ವಸತಿ ನಿಲಯವನ್ನು ಸೀಲ್‌ಡೌನ್ ಮಾಡಿ ವಿದ್ಯಾರ್ಥಿಗಳನ್ನು ಅಲ್ಲಿಯೇ ಇರಿಸಿಕೊಳ್ಳಬೇಕು ಎಂದು ಹೇಳಿದರು.

ಖ್ಯಾತ ಮಕ್ಕಳ ತಜ್ಞ ಡಾ.ಧನಂಜಯ ಸರ್ಜಿ ಅವರು ಮಾತನಾಡಿ, ಮಕ್ಕಳಿಗೆ ಕರೋನಾ ಪಾಸಿಟಿವ್ ಬಂದರೆ ಗಾಬರಿಯಾಗುವ ಅಗತ್ಯವಿಲ್ಲ. ಮೂರನೆ ಅಲೆಯಲ್ಲಿ ಕರೋನಾ ವೈರಸ್ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರಿಲ್ಲ. ಕರೋನಾ ಪಾಸಿಟಿವ್ ಬಂದ ಯಾವುದೇ ಮಕ್ಕಳು ಇದುವರೆಗೆ ಜಿಲ್ಲೆಯಲ್ಲಿ ಆಸ್ಪತ್ರೆಗೆ ದಾಖಲಾಗುವ ಅಗತ್ಯ ಬಿದ್ದಿಲ್ಲ. ಮಕ್ಕಳ ಮೂಲಕ ಕರೋನಾ ಹಿರಿಯರಿಗೆ ಹರಡಿದರೆ ಸಾಮುದಾಯಿಕ ಪ್ರತಿರೋಧ ಶಕ್ತಿ (ಹರ್ಡ್ ಇಮ್ಯೂನಿಟಿ) ಬಹು ಬೇಗನೇ ಬರಲು ಸಾಧ್ಯವಿದೆ. ಕರೋನಾ ನಿಯಂತ್ರಣದ ನಿಟ್ಟಿನಲ್ಲಿ ಇದು ಪ್ರಮುಖ ಪಾತ್ರ ವಹಿಸಲಿದೆ. ಆದ್ದರಿಂದ ಕರೋನಾ ಪಾಸಿಟಿವ್ ಕಾರಣಕ್ಕಾಗಿ ಶಾಲಾ ಕಾಲೇಜುಗಳಿಗೆ ರಜೆ ನೀಡುವುದು ಸಮಂಜಸವಲ್ಲ. ಅಗತ್ಯ ಬಿದ್ದರೆ ಕರೋನಾ ಪಾಸಿಟಿವ್ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುವ ತರಗತಿಗಳಿಗೆ ರಜೆ ನೀಡಬಹುದಾಗಿದೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಪೊಲೀಸ್ ವರಿಷ್ಟಾಧಿಕಾರಿ ಡಾ.ಲಕ್ಷ್ಮೀಪ್ರಸಾದ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ ಸುರಗಿಹಳ್ಳಿ ಸೇರಿದಂತೆ ವಿವಿಧ ಅಧಿಕಾರಿಗಳು ಹಾಗೂ ತಜ್ಞ ವೈದ್ಯರು ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಸೈಯದ್ ಮೋದಿ ಬ್ಯಾಡ್ಮಿಂಟನ್: ಸಿಂಧುಗೆ ಜಯಲಕ್ಷ್ಮಿ

0

ಸೈಯದ್ ಮೋದಿ ಬ್ಯಾಡ್ಮಿಂಟನ್ ಟೂರ್ನಿಯ ಪಂದ್ಯ ಒಲಂಪಿಯನ್ ನ ಪಿ.ವಿ ಸಿಂಧೂ ಮತ್ತು ತಾರೆ ಮಾಳವಿಕಾ ಬನ್ಸೋಡ ಆಟಗಾರ್ತಿಯರ ನಡುವೆ ನಡೆಯಿತು. ಮಾಳವಿಕಾ ಎದುರು ಸಿಂಧೂ ಜಯ ಸಾಧಿಸಿದ್ದಾರೆ.
ಭಾನುವಾರ ನಡೆದ ಸೈಯದ್ ಮೋದಿ ಪ್ರಶಸ್ತಿಯ ಫೈನಲ್ ಹಣಾಹಣಿಯಲ್ಲಿ ಪ್ರಶಸ್ತಿ ಗಳಿಕೆಯ ಜಿದ್ದಾಜಿದ್ದಿ ಹೋರಾಟದಲ್ಲಿ ಸಿಂಧೂ ರವರು 21-13,21-16 ರಲ್ಲಿ ಮಾಳವಿಕಾ ಬನ್ಸೋಡ ಅವರನ್ನು ಕೇವಲ 35 ನಿಮಿಷದಲ್ಲೇ ಬಗ್ಗುಬಡಿದು “ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಯ ಪ್ರಶಸ್ತಿ” ತಮ್ಮದಾಗಿಕೊಂಡು ಮೆರೆದರು.
BWF ವಿಶ್ವ ಟೂರ್ ನ ಸೂಪರ್ 300 ರ ಟೂರ್ನಿ ಇದಾಗಿದ್ದು 2017 ರಲ್ಲು ಪಿ.ವಿ ಸಿಂಧೂ ಚಾಂಪಿಯನ್ ಪಟ್ಟ ಗಳಿಸಿಕೊಂಡಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಚೀನಾದಲ್ಲಿ ಓಮಿಕ್ರಾನ್ ಸಂಕಷ್ಟ ಫೆಂಗ್ವಾಯ್ ನಗರದಲ್ಲಿ ನಿಷೇಧಾಜ್ಞೆ

0

ಬೀಜಿಂಗ್‌ನ ಫೆಂಗ್ಟಾಯ್‌ನಲ್ಲಿರುವ ಎರಡು ದಶಲಕ್ಷಕ್ಕೂ ಹೆಚ್ಚು ನಿವಾಸಿಗಳು ಜಿಲ್ಲೆಯಿಂದ ಹೊರಗೆ ಹೋಗದಂತೆ ನಿಷೇಧಿಸಲಾಗಿದೆ. ವಸತಿ ಸಂಯುಕ್ತವನ್ನು ಹೆಚ್ಚಿನ ಅಪಾಯವೆಂದು ವರ್ಗೀಕರಿಸಿದ ನಂತರ ಗೆಟ್- ಟುಗೆದರ್‌ಗಳನ್ನು ತಪ್ಪಿಸಲು ಆದೇಶಿಸಲಾಗಿದೆ. ಏಕೆಂದರೆ ಚೀನಾದ ರಾಜಧಾನಿ ಬಿಜಿಂಗ್ ನಗರದಲ್ಲಿ ಫೆಬ್ರುವರಿ 4ರ ಚಳಿಗಾಲದ ಒಲಿಂಪಿಕ್ಸ್ ಗೆ ಮುಂಚಿತವಾಗಿ ಓಮಿಕ್ರಾನ್ ಮತ್ತು ಡೆಲ್ಟಾ ರೂಪಾಂತರಗಳ ಹರಡುವಿಕೆಯನ್ನು ಎದುರಿಸಲು ಕ್ರಮಗಳನ್ನು ಹೆಚ್ಚಿಸಿದೆ.
ಎಲ್ಲಾ ನಿವಾಸಿಗಳು ಜಿಲ್ಲೆಯಿಂದ ಹೊರಗೆ ಹೋಗಬಾರದು ಮತ್ತು ಒಟ್ಟಿಗೆ ಸೇರಬಾರದು ಎಂದು ಬೋ ಲ್ಯಾನ್ ಅವರು ಭಾನುವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲೆಯಲ್ಲಿನ ಒಂದು ವಸತಿ ಸಂಯುಕ್ತವನ್ನು ಅಪಾಯದ ವಲಯ ಎಂದು ವರ್ಗೀಕರಿಸಿರುವುದರಿಂದ ಈ ನಿರ್ದೇಶನ ಬಂದಿದೆ. ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ಪತ್ತೆಯಾಗಿವೆ. ಫೆಂಗ್ಟಾಯ್ ಭಾನುವಾರದಿಂದಲೇ ಇಡೀ ಜಿಲ್ಲೆಗೆ ಸಾಮೂಹಿಕ ನ್ಯೂಕ್ಲಿಯಿಕ್ ಆಸಿಡ್ ಪರೀಕ್ಷೆಯನ್ನು ಪ್ರಾರಂಭಿಸಿದೆ.

ಸಾಂಕ್ರಾಮಿಕ ನಿಯಂತ್ರಣ ಮತ್ತು ತಡೆಗಟ್ಟುವ ಕೆಲಸಕ್ಕೆ ಫೆಂಗ್ಟೈಗೆ ಸಹಾಯ ಮಾಡಲು, ಮತ್ತು ಸಾಧ್ಯವಾದಷ್ಟು ಬೇಗ ಪ್ರಸರಣವನ್ನು ಕಡಿತಗೊಳಿಸುವ ಸಲುವಾಗಿ, ಇತರ 10 ಜಿಲ್ಲೆಗಳಿಂದ ವೈದ್ಯಕೀಯ ಕಾರ್ಯಕರ್ತರನ್ನು ನೇಮಿಸಲಾಗಿದೆ ಎಂದು ಬೋ ಲ್ಯಾನ್ ಅವರು ತಿಳಿಸಿದ್ದಾರೆ.

ಜಿಲ್ಲೆಯ ಎಲ್ಲಾ 1,856 ಕೋಲ್ಡ್ ಚೈನ್ ಕಂಪನಿಗಳು ಮತ್ತು 1,760 ಕೋಲ್ಡ್ ಸ್ಟೋರೇಜ್ ಕಂಪನಿಗಳಲ್ಲಿ ಅಪಾಯಗಳನ್ನು ತಪ್ಪಿಸಲು ತನಿಖೆ ನಡೆಸಲಾಗುವುದು ಎಂದು ಹೇಳಿದರು.
21.5 ಮಿಲಿಯನ್‌ಗಿಂತಲೂ ಹೆಚ್ಚು ಪ್ರಬಲವಾದ ಬೀಜಿಂಗ್ ನಗರದಲ್ಲಿ ಭದ್ರತೆ ಮತ್ತು ಸಾಂಕ್ರಾಮಿಕ ನಿಯಂತ್ರಣ ಕ್ರಮಗಳು ಹೆಚ್ಚಿನ ಮಟ್ಟದಲ್ಲಿವೆ. ಏಕೆಂದರೆ ಇದು ಫೆಬ್ರವರಿ 4 ರಿಂದ ಚಳಿಗಾಲದ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸಲು ಸಿದ್ಧವಾಗಿದೆ. ನಗರವು ವರ್ಷಕ್ಕೊಮ್ಮೆ ಚೀನಾದ ವಸಂತಕಾಲದಲ್ಲಿ ನಡೆಯುವ ಅತಿ ದೊಡ್ಡ ಹಬ್ಬವಾದ ಚೀನಿ ಹೊಸವರ್ಷ ಮಾನವ ವಲಸೆಯನ್ನು ಎದುರಿಸುತ್ತಿದೆ. ವಾರದ ಅವಧಿಯ ಆಚರಣೆಗಳು ಜನವರಿ 31 ರಿಂದ ಪ್ರಾರಂಭವಾಗಲಿವೆ. ಈ ಸಮಯದಲ್ಲಿ ಲಕ್ಷಾಂತರ ಚೀನಿಯರು ತಮ್ಮ ಹಳ್ಳಿಗಳಿಗೆ ಮತ್ತು ಇತರ ನಗರಗಳಿಗೆ ಕುಟುಂಬ ಆಚರಣೆಗಳಲ್ಲಿ ಸೇರಲು ಪ್ರಯಾಣಿಸಿದರು. ಬೀಜಿಂಗ್ ಶನಿವಾರದಿಂದ ಐದು ದೃಢಪಡಿಸಿದ ಸೋಂಕುಗಳು ಮತ್ತು ನಾಲ್ಕು ಲಕ್ಷಣರಹಿತ ರೋಗಿಗಳು ಸೇರಿದಂತೆ ಒಟ್ಟು ಒಂಬತ್ತು ಕೋವಿಡ್ -19 ಪ್ರಕರಣಗಳನ್ನು ವರದಿ ಮಾಡಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.