Friday, February 14, 2025
Friday, February 14, 2025

ನೂತನ ಸಂಸತ್ ಭವನದ ಅಶೋಕ ಚಕ್ರ ಲಾಂಛನ: ಶಿಲ್ಪಿಯ ಸ್ಪಷ್ಟನೆ

Date:

ನವದೆಹಲಿಯಲ್ಲಿ ನಿರ್ಮಿಸಲಾಗಿರುವ ಸಂಸತ್ ಭವನದ ಮೇಲೆ ಬೃಹತ್ ರಾಷ್ಟ್ರೀಯ ಲಾಂಛನವನ್ನು ಪ್ರಧಾನಿ ನರೇಂದ್ರ ಮೋದಿಯವರು ಅನಾವರಣಗೊಳಿಸಿದ್ದಾರೆ.

ಲಾಂಛನದಲ್ಲಿರುವ ಸಿಂಹಗಳ ಮುಖಭಾವದ ಕುರಿತು ಪ್ರತಿಪಕ್ಷಗಳ ನಾಯಕರು ತಕರಾರು ತೆಗೆದಿದ್ದಾರೆ.
ಸಿಂಹಗಳ ಮುಖಭಾವದಲ್ಲಿ ಅತಿಯಾದ ವ್ಯಗ್ರತೆ ಇದೆ ಎಂಬುದು ಪ್ರತಿಪಕ್ಷಗಳ ನಾಯಕರ ಆರೋಪವಾಗಿದೆ.

ಅಲ್ಲದೆ ರಾಷ್ಟ್ರೀಯ ಲಾಂಛನ ಅನಾವರಣಗೊಳಿಸುವ ಸಂದರ್ಭದಲ್ಲಿ ಪ್ರತಿಪಕ್ಷಗಳನ್ನು ಆಹ್ವಾನಿಸಿಲ್ಲ ಎಂಬ ಆಕ್ಷೇಪವೂ ಕೇಳಿ ಬಂದಿದೆ.

ಇದರ ನಡುವೆ ಲಾಂಛನ ನಿರ್ಮಿಸಿರುವ 49 ವರ್ಷದ ಶಿಲ್ಪಿ ಸುನಿಲ್ ಡಿಯೋರಾ ಈಗ ವಿವಾದದ ಕುರಿತು ಸ್ಪಷ್ಟನೆ ನೀಡಿದ್ದು, ಅಲ್ಲಿರುವ ಸಿಂಹಗಳ ಗಾತ್ರಕ್ಕೂ ನೂತನ ಸಂಸತ್ ಭವನದ ಮೇಲಿನ ಬೃಹತ್ ಲಾಂಛನದ ಸಿಂಹಗಳ ಗಾತ್ರಕ್ಕೂ ಭಾರಿ ವ್ಯತ್ಯಾಸವಿದ್ದು, ಆದರೂ ಕೂಡ ಸಿಂಹಗಳ ಮುಖಭಾವದಲ್ಲಿ ಸಾಮ್ಯತೆ ಕಾಪಾಡಿಕೊಳ್ಳಲಾಗಿದೆ.

ತದ್ರೂಪು ಬರುವಂತೆ ನೋಡಿಕೊಳ್ಳಲಾಗಿದ್ದು, ಮನಬಂದಂತೆ ಯಾವುದೇ ಮಾರ್ಪಾಡು ಮಾಡಿಲ್ಲ ಎಂದು ಹೇಳಿದ್ದಾರೆ.

ಸಂಸತ್ ಮೇಲೆ ನಿರ್ಮಾಣವಾಗಿರುವ ಲಾಂಛನದಲ್ಲಿನ ಸಿಂಹಗಳು ವಾರಣಾಸಿ ಬಳಿಯ ಸಾರಾನಾಥದಲ್ಲಿರುವ ಅಶೋಕ ಸ್ಥಂಭದ ಮೇಲಿನ ಸಿಂಹಗಳನ್ನೇ ಹೋಲುತ್ತವೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Shivamogga ಅತ್ಯುತ್ತಮ‌ ರೋಟರಿ ನಾಯಕರನ್ನ ಗುರುತಿಸಿ ಗೌರವಿಸುವ ಕಾರ್ಯಕ್ರಮ

Rotary Shivamogga ಶಿವಮೊಗ್ಗ ನಗರದ ಕಾಸ್ಮೋ ಕ್ಲಬ್‌ನಲ್ಲಿ ರೋಟರಿ ಕ್ಲಬ್ ಶಿವಮೊಗ್ಗ...

Shivamogga City Corporation ಕೆಎಫ್ ಡಿ ಬಗ್ಗೆ ಅರಿವು ಮೂಡಿಸಿ,ಪ್ರಕರಣ ಹೆಚ್ಚದಂತೆ ಗಮನವಹಿಸಿ- ವಿ.ಎಸ್.ರಾಜೀವ್

Shivamogga City Corporation ಶಿವಮೊಗ್ಗ ತಾಲ್ಲೂಕುಗಳಲ್ಲಿ ಕೆಎಫ್‌ಡಿ ಪ್ರಕರಣಗಳು ಹೆಚ್ಚದಂತೆ...

Rapido Bike ಶಿವಮೊಗ್ಗಕ್ಕೂ ಎಂಟ್ರಿ ಕೊಟ್ಟ ರ್ಯಾಪಿಡೊ ಬೈಕ್

Rapido Bike ಶಿವಮೊಗ್ಗ ನಗರದಲ್ಲಿ ರ್ಯಾಪಿಡೋ ಬೈಕ್ ಓಡಾಟ ಶುರುವಾಗಿದೆ.ರ್ಯಾಪಿಡೋ...