Saturday, July 18, 2026
Saturday, July 18, 2026

ಕ್ರಿಕೆಟ್ ಪಟು ಸ್ಮೃತಿ ಮಂದಾನ: ಐಸಿಸಿ ಗೌರವ ಪ್ರಶಸ್ತಿ

Date:

ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಗೌರವ ಪ್ರಶಸ್ತಿ” ಯು ಭಾರತ ತಂಡದ ಮಹಿಳಾ ವಿಭಾಗದಲ್ಲಿ ಆರಂಭಿಕ ಬ್ಯಾಟರ್ ‘ಸ್ಮೃತಿ ಮಂದಾನ’ ರವರಿಗೆ ಲಭಿಸಿದೆ ಎಂದು “ICC ಮಂಡಳಿ”ಯು ತಿಳಿಸಿದೆ.
2021 ನೇ ಸಾಲಿನಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್ ನಲ್ಲಿ ಗಳಿಸಿದ ರನ್ ಆಧಾರದಲ್ಲಿ ಅವರಿಗೆ ಈ ಗೌರವ ನೀಡಲಾಗಿದೆ.
ಭಾರತ ತಂಡವು ಆಡಿದ ಮೊದಲ ‘ಪಿಂಕ್ ಬಾಲ್ ಟೆಸ್ಟ್’ ನಲ್ಲಿ ಶತಕ ಬಾರಿಸುವ ಮೂಲಕ ಮಂದಾನ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.
ನಿಗದಿತ ಓವರ್ ಗಳ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದಿದ್ದ ಸರಣಿಯಲ್ಲಿ ಭಾರತದ ಗೆಲುವಿನಲ್ಲಿ ಮಂದಾನ ಬಹಳಷ್ಟು ಪರಿಶ್ರಮ ವಹಿಸಿದ್ದರು. ಎರಡನೇ ಏಕದಿನ ಪಂದ್ಯದಲ್ಲಿ 158 ರನ್ ಗುರಿ ಬೆನ್ನತ್ತಿ ಹೋರಾಡಿದಾಗ ಮಂದಾನ 80 ರನ್ ಬಾರಿಸಿದ್ದರು.
ಇಂಗ್ಲೆಂಡ್ ವಿರುದ್ಧ ಡ್ರಾ ದಲ್ಲಿ ಕೊನೆಗೊಂಡ ಟೆಸ್ಟ್ ಸರಣಿಯಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ ಮಂದಾನ 78 ರನ್ ಸಂಪಾದಿಸಿದ್ದರು.
ಟಿ-20 ಸರಣಿಯ ಅಂತಿಮ ಪಂದ್ಯದಲ್ಲಿ ಔಟಾಗದೆ 48 ರನ್ ಗಳಿಸಿ ತಂಡದ ಜಯಕ್ಕೆ ಮುಖ್ಯ ಕಾರಣರಾಗಿದ್ದರು.
“ಭಾರತ ಟಿ-20 ತಂಡದ ಉಪನಾಯಕಿ ಆಗಿರುವ ಸ್ಮೃತ ಮಂದಾನ ಅವರು ICC ಪ್ರಶಸ್ತಿ ಗೆದ್ದ ಭಾರತದ ಎರಡನೇ ಆಟಾಗಾರ್ತಿಯಾಗಿದ್ದಾರೆ.” ‘2007 ರಲ್ಲಿ ವೇಗಿ ಜೂಲವ್ ಗೋಸ್ವಾಮಿ’ ಅವರು ಈ ಪ್ರಶಸ್ತಿಗೆ ಭಾಜನರಾಗಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kuvempu University ಉಪನ್ಯಾಸಕ ಹೆಚ್.ಟಿ.ಕರಿಬಸಪ್ಪನವರಿಗೆ ಕುವೆಂಪು ವಿವಿಯಿಂದ ಪಿಎಚ್.ಡಿ ಪದವಿ ಘೋಷಣೆ

Kuvempu University ಕರಿಬಸಪ್ಪ. ಹೆಚ್. ಟಿ ಕನ್ನಡ ಉಪನ್ಯಾಸಕರು ಸರ್ಕಾರಿ ಪದವಿ...

Department of Agriculture ತೀವ್ರ ಬರದ ಛಾಯೆ: ಜಲಾಶಯ ನಂಬಿ ಬೆಳೆ ಬೆಳೆಯದಂತೆ ರೈತರಲ್ಲಿ ಕೃಷಿ ಇಲಾಖೆ ಮನವಿ

Department of Agriculture ರಾಜ್ಯಾದ್ಯಂತ ತೀವ್ರಗೊಳ್ಳುತ್ತಿರುವ ಎಲ್ ನಿನೊ ಪರಿಣಾಮ ಹಾಗೂ...

B.Y. Raghavendra ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಮಗ್ರ ಮೂಲ ಸೌಕರ್ಯ,ಸುಸಜ್ಜಿತ ರಸ್ತೆ ಸಂಪರ್ಕಕ್ಕೆ ಆದ್ಯತೆ- ಬಿ.ವೈ.ರಾಘವೇಂದ್ರ

B.Y. Raghavendra ಶಿವಮೊಗ್ಗ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಪ್ರಗತಿ ಪರಿಶೀಲನೆಗಾಗಿ...