Wednesday, July 8, 2026
Wednesday, July 8, 2026

ನೋಟರಿ ಕಾಯಿದೆ ತಿದ್ದುಪಡಿ ಬೇಡ: ಪ್ರಧಾನಿಗೆ ದೇವೆಗೌಡರಿಂದ ಪತ್ರ

Date:

ಉದ್ದೇಶಿತ ನೋಟರಿ ಕಾಯ್ದೆ 1952 ತಿದ್ದುಪಡಿ ಕ್ರಮವನ್ನು ಕೈಬಿಡುವಂತೆ ಕೋರಿ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

ನೋಟರಿ ಕಾಯ್ದೆ 1952 ರ ಸೆಕ್ಷನ್ 5ರ ಪ್ರಸ್ತಾವಿತ ತಿದ್ದುಪಡಿ ಜಾರಿಗೊಳಿಸಿದರೆ ದೇಶದ 75 ಸಾವಿರಕ್ಕೂ ಹೆಚ್ಚು ನೋಟರಿಗಳಿಗೆ ತೊಂದರೆ ಆಗಲಿದೆ. ನೋಟರಿಗಳ ಅವಧಿಯನ್ನು ಐದು ವರ್ಷಗಳಿಗೆ ಸೀಮಿತಗೊಳಿಸುವ ಮತ್ತು ನೋಟುಗಳ ಪ್ರಾಕ್ಟೀಸ್ ಪ್ರಮಾಣಪತ್ರ ಎರಡು ಅವಧಿಗಳ ಅಷ್ಟೇ ನವೀಕರಿಸುವ ನಿಯಮಗಳು ನೋಟರಿಗಳಿಗೆ ಮಾರ್ಗವಾಗಿದೆ ಎಂದು ಹೇಳಿದ್ದಾರೆ.

ವಕೀಲರು ನೋಟರಿ ಆದ ನಂತರ ಅದು ಶಾಶ್ವತವಾಗಿರುತ್ತದೆ. ಕಾನೂನು ವೃತ್ತಿಯು ವೇಗವಾಗಿ ವಿಕಸನಗೊಳ್ಳುತ್ತಿದೆ. 15 ವರ್ಷಕ್ಕೂ ಹೆಚ್ಚುಕಾಲ ಸರಿಯಾಗಿ ಕೆಲಸ ಮಾಡಿದವರು ಮತ್ತೆ ವಕೀಲರಾಗಿ ಪರಿಣಿತ ವಕೀಲರ ನಡುವೆ ಕೆಲಸ ಮಾಡುವುದು ಕಷ್ಟ. ಈ ಕುರಿತು ಕರ್ನಾಟಕ ರಾಜ್ಯ ನೋಟರಿ ಕಲ್ಯಾಣ ಸಂಘ ನನಗೆ ಮನವಿ ಸಲ್ಲಿಸಿದೆ ಎಂದು ತಿಳಿಸಿದ್ದಾರೆ.

ಉದ್ದೇಶಿತ ತಿದ್ದುಪಡಿಯ ಸಾಂವಿಧಾನಿಕ ಸಿಂಧುತ್ವದ ಕುರಿತು ನನಗೆ ಅನುಮಾನಗಳು ಕಾಡುತ್ತಿವೆ. ನೋಟರಿ ಕಾಯ್ದೆ ಸಾವಿರ 1962ರ ಸೆಕ್ಷನ್ 5ಕ್ಕೆ ಪ್ರಸ್ತಾಪಿಸಲಾದ ತಿದ್ದುಪಡಿಯು ಸಂವಿಧಾನದ 14, 19, 21 ಹಾಗೂ 309 ನೇ ವಿಧಿ ಉಲ್ಲಂಘಿಸುತ್ತವೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಸಾಮಾಜಿಕ ಸೇವೆಗಳು ಮನುಷ್ಯನ ಬದುಕನ್ನ ಸಾರ್ಥಕಗೊಳಿಸುತ್ತವೆ : ಬಿ.ವೈ.ರಾಘವೇಂದ್ರ

B.Y. Raghavendra ‘ಸೇವೆಯೇ ಸಾರ್ಥಕ ಸ್ನೇಹವೇ ಅಮರ’ ಎಂದು ಸಂಸದ ಬಿ.ವೈ....

Sri Sonda Swarnavalli Mahasansthan 2026 ರ ಭಗವದ್ಗೀತಾ ಅಭಿಯಾನ: ವಿಜಯನಗರದಲ್ಲಿ ಆಯೋಜನೆ, ಸ್ವರ್ಣವಲ್ಲಿಶ್ರೀಗಳಿಂದ ಸಭೆ

Sri Sonda Swarnavalli Mahasansthan ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಶಿರಸಿ...

S.N. Channabasappa ಶಿವಮೊಗ್ಗ ನ್ಯೂ ಮಂಡ್ಲಿಯಲ್ಲಿ ಮಳೆಗೆ ಮನೆ ಕುಸಿತ.: ಶಾಸಕ ಚನ್ನಬಸಪ್ಪ ಪರಿಶೀಲನೆ

S.N. Channabasappa ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಶಿವಮೊಗ್ಗ...