ಭಾರತದ ಆರ್ಥಿಕತೆ ಬೆಳವಣಿಗೆಯ ಹಾದಿಯಲ್ಲಿದೆ ಎಂದು ವೇದಾಂತ ಸಮೂಹದ ಅಧ್ಯಕ್ಷ ಅನಿಲ್ ಅಗರ್ವಾಲ್ ತಿಳಿಸಿದ್ದಾರೆ.
2300 ವರ್ಷಗಳ ಹಿಂದೆ ಚಾಣಕ್ಯ ಆರ್ಥಿಕ ಪ್ರಗತಿಯು ದೇಶಕ್ಕೆ ಅಭ್ಯುದಯ ತರುತ್ತದೆ ಎಂದಿದ್ದ. ಇವತ್ತು ಭಾರತ ಸಂಶೋಧನೆ ಮತ್ತು ಡಿಜಿಟಲೀಕರಣದ ಬಲದಿಂದ ಅಭಿವೃದ್ಧಿಪಥದಲ್ಲಿ ಮುನ್ನಡೆಯುತ್ತಿದೆ ಎಂದರು.
ಸಂಶೋಧನೆ ಮತ್ತು ಡಿಜಿಟಲೀಕರಣ ಮತ್ತು ಸರ್ಕಾರದ ಸುಧಾರಣೆ ಕ್ರಮಗಳ ಪರಿಣಾಮದ ಬೆಳವಣಿಗೆಗೆ ಪೂರಕ ಸಂಪನ್ಮೂಲ ಸೃಷ್ಟಿಯಾಗಿದೆ ಎಂದು ತಿಳಿಸಿದ್ದಾರೆ.
ಹಾಲಿ ಉತ್ಪಾದಕ ವಲಯದ ಕಂಪನಿಗಳು ಹಾಗೂ ಸರ್ಕಾರಿ ಕಂಪನಿಗಳು ಪೂರ್ಣಪ್ರಮಾಣದಲ್ಲಿ ಉತ್ಪಾದನೆಯಲ್ಲಿ ತೊಡಗಿಸಿಕೊಳ್ಳುವಂತೆ ನೋಡಿಕೊಳ್ಳಬೇಕು. ಇದರಿಂದ ಒಟ್ಟಾರೆ ಉತ್ಪಾದನೆಯನ್ನು 2-3 ಪಟ್ಟು ವೃದ್ದಿಸಬಹುದು. ಇದು ಉದ್ಯೋಗವಕಾಶ ಹೆಚ್ಚಿಸಬಲ್ಲದು ಎಂದರು.
ಇಡೀ ಜಗತ್ತು ಭಾರತಕ್ಕೆ ಭೇಟಿನೀಡಲು ಬಯಸುತ್ತಿದೆ. ಹೀಗಾಗಿ ಪ್ರವಾಸೋದ್ಯಮ ಹತ್ತುಪಟ್ಟು ಬೆಳೆಯುವ ನಿರೀಕ್ಷೆ ಇದೆ. ದೇಶಕ್ಕೆ 10,000 ವರ್ಷಗಳ ಇತಿಹಾಸ ಇದೆ ಎಂದು ಅವರು ಹೇಳಿದರು. ಮೂಲಸೌಕರ್ಯ ಮತ್ತು ರಿಯಲ್ ಎಸ್ಟೇಟ್ ವಲಯಕ್ಕೆ ಉತ್ತೇಜನ ನೀಡಬೇಕು. ಸಂಸ್ಕೃತಿ, ಕಲೆ ಮತ್ತು ಕರಕುಶಲ ಕ್ಷೇತ್ರಗಳಿಗೂ ಪ್ರೋತ್ಸಾಹ ನೀಡಬೇಕು ಎಂದು ಸಲಹೆ ನೀಡಿದರು.
ಭಾರತ ಆರ್ಥಿಕ ಪ್ರಗತಿಯ ಹಾದಿಯಲ್ಲಿದೆ
Date: