ವೈಟ್ ಫೀಲ್ಡ್ ನ ಶರಟಾನ್ ಗ್ರ್ಯಾಂಡ್ ಹೋಟೆಲ್ ಸಭಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಪುಣೇರಿ ತಂಡ ಪ್ರಥಮಾರ್ಧದಲ್ಲಿ 5 ಟ್ಯಾಕಲ್ ,2ಆಲೌಟ್, ಮತ್ತು 13 ರೇಡಿಂಗ್ ಸೇರಿ 21 ಅಂಕ ಕಲೆಹಾಕಿ ಮೂರು ಅಂಕಗಳ ಮುನ್ನಡೆ ಗಳಿಸಿತು.
ಮೋಹಿತ್ ಗೇಯಟ್ (14ಅಂಕ) ಮತ್ತು ಅಸ್ಲಾಂ ಇನಾಮ್ದಾರ್ (12 ಅಂಕ) ಅವರ ಮಿಂಚಿನ ರೇಡಿಂಗ್ ನೆರವಿನಿಂದ ಪುಣೇರಿ ಪಲ್ಟನ್ ತಂಡ ಪ್ರೊ ಕಬಡ್ಡಿ ಲೀಗ್ ನ 8ನೇ ಆವೃತ್ತಿಯ 79ನೇ ಪಂದ್ಯದಲ್ಲಿ ಯು.ಪಿ. ಯೋಧಾ ತಂಡದ ವಿರುದ್ಧ 44-38 ಅಂಕಗಳಿಂದ ಗೆಲುವು ಸಾಧಿಸಿತು.
ಇದು ನಿತಿನ್ ತೋಮರ್ ಬಳಗಕ್ಕೆ ದೊರೆತ ಹ್ಯಾಟ್ರಿಕ್ ಜಯವಾಗಿದೆ.
ಇದೇ ವೇಳೆ ರೇಡಿಂಗ್ ನಲ್ಲಿ 13 ಅಂಕ ಸಂಪಾದಿಸಿದ ಯೋಧಾ ತಂಡ ಟ್ಯಾಕಲ್ ನಲ್ಲಿ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು.
ಮೊದಲಾರ್ಧದ ಮುನ್ನಡೆಯಿಂದ ದೊರೆತ ಆತ್ಮವಿಶ್ವಾಸದಲ್ಲಿ ದ್ವಿತೀಯಾರ್ಧ ಆರಂಭಿಸಿದ ಪುಣೇರಿ ಆಟಗಾರರು ಮತ್ತೆ ಸಂಘಟಿತ ಪ್ರದರ್ಶನ ನೀಡುವಲ್ಲಿ ಮೇಲುಗೈ ಸಾಧಿಸಿದರು.
ಯೋಧಾ ಪರ ಏಕಾಂಗಿ ಹೋರಾಟ ನಡೆಸಿದ ಸುರೇಂದರ್ 16 ಅಂಕ ಗಳಿಸಿದರು.
ಆದರೆ ತಂಡದ ಸೋಲು ತಪ್ಪಿಸಲು ಅವರಿಂದಲೂ ಸಾಧ್ಯವಾಗಲಿಲ್ಲ.
ಇದುವರೆಗೆ ಆಡಿದ 14 ಪಂದ್ಯಗಳ ಪೈಕಿ ತಲಾ 7 ಗೆಲುವು, ಸೋಲುಗಳಿಂದ ಒಟ್ಟಾರೆ 37 ಅಂಕ ಕಲೆಹಾಕಿರುವ ಪಲ್ಟನ್ ತಂಡ ಅಂಕಪಟ್ಟಿಯಲ್ಲಿ ಸದ್ಯ ಎಂಟನೇ ಸ್ಥಾನದಲ್ಲಿದೆ.
ಅಷ್ಟೇ ಪಂದ್ಯಗಳಲ್ಲಿ 5 ಜಯ, 6 ಸೋಲು ಮತ್ತು ಮೂರು ಟೈ ಸಾಧಿಸಿರುವ ಯೋಧಾ ತಂಡ ಒಟ್ಟಾರೆ 40 ಅಂಕಗಳೊಂದಿಗೆ 7ನೇ ಸ್ಥಾನಕ್ಕೆ ತೃಪ್ತಿ ಪಡೆದುಕೊಂಡಿದೆ.
ಇಂದಿನ ಪಂದ್ಯ
ಪಟನಾ ಪೈರೇಟ್ಸ್ ಮತ್ತು ತಮಿಳ್ ತಲೈವಾಸ್
ಪಂದ್ಯ ಆರಂಭ : ರಾತ್ರಿ 7.30
Date: