Sunday, February 15, 2026
Sunday, February 15, 2026
Home Blog Page 1745

ಕೋವಿಡ್ ಹಿನ್ನೆಲೆ:ಕೆಲವು ನಿರ್ಬಂಧ ಸಡಿಲ-ರಾತ್ರಿ ಕರ್ಫ್ಯೂ ಇಲ್ಲ‌

0

ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಕರಣ ಕಡಿಮೆಯಾದ ಹಿನ್ನೆಲೆಯಲ್ಲಿ ಸರ್ಕಾರ ನಿರ್ಬಂಧಗಳನ್ನು ಇನ್ನಷ್ಟು ಸಡಿಲಗೊಳಿಸಿದೆ.
ಸೋಮವಾರದಿಂದ ರಾಜ್ಯಾದ್ಯಂತ ರಾತ್ರಿ ಕರ್ಫ್ಯೂ ಅಂತ್ಯಗೊಳ್ಳಲಿದೆ.

ಬಾರ್, ಪಬ್, ಕ್ಲಬ್, ಮತ್ತು ಹೋಟೆಲ್ ಗಳಲ್ಲಿ ಶೇ. 100 ರಷ್ಟು ಆಸನ ಭರ್ತಿಗೆ ಅವಕಾಶ ಕಲ್ಪಿಸಿದೆ. ಬೆಂಗಳೂರಿನಲ್ಲಿ ಸೋಮವಾರದಿಂದ ಶಾಲಾ ಕಾಲೇಜುಗಳನ್ನು ಪುನರಾರಂಭಿಸಲು ಅನುಮತಿ ನೀಡಲಾಗಿದೆ.

ಚಿತ್ರಮಂದಿರ, ರಂಗಮಂದಿರ, ಮಲ್ಟಿಪ್ಲೆಕ್ಸ್, ಸಿನಿಮಾ ಹಾಲ್, ಮತ್ತು ಸಭಾಂಗಣಗಳ ಸಾಮರ್ಥ್ಯದ ಶೇ. 50ರಷ್ಟು ನಿರ್ಬಂಧ ಮುಂದುವರೆದಿದೆ. ಖಾಸಗಿ ಆಸ್ಪತ್ರೆಗಳು, ಖಾಸಗಿ ವೈದ್ಯಕೀಯ ಕಾಲೇಜುಗಳ ಆಸ್ಪತ್ರೆಗಳಲ್ಲಿ ಆಯ್ದು ಶ್ರೇಣಿಯ ಶೇ.10 ರಷ್ಟು ಹಾಸಿಗೆಗಳನ್ನು ಕೊರೋನಾ ಚಿಕಿತ್ಸೆಗೆ ಕಾಯ್ದಿರಿಸಿಕೊಳ್ಳುವಂತೆಯೂ ಸೂಚಿಸಿದೆ. ಆಯ್ದ ನಿರ್ಬಂಧಗಳನ್ನು ಫೆಬ್ರವರಿ 15ರವರೆಗೆ ವಿಸ್ತರಿಸಲಾಗಿದೆ.

ಗೃಹ ಕಚೇರಿ ಕೃಷ್ಣಾದಲ್ಲಿ ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಸಚಿವರಾದ ಆರ್. ಅಶೋಕ್, ಬಿ. ಸಿ. ನಾಗೇಶ್, ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ. ಸುದರ್ಶನ್, ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಹೀಗೆ ಮುಂತಾದ ಗಣ್ಯರೊಂದಿಗೆ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಕೊರೋನಾ ಸ್ಥಿತಿಗತಿ ಬಗ್ಗೆ ವಿಸ್ತೃತ ಚರ್ಚೆ ನಡೆಸಿದ್ದಾರೆ. ತಂದಿರ ಬರೆದಿ ಆಧರಿಸಿ ಆಯ್ದ ನಿರ್ಬಂಧ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅದರಂತೆ ಮುಖ್ಯಕಾರ್ಯದರ್ಶಿ ಪಿ. ರವಿಕುಮಾರ್ ಅವರು ಮಾರ್ಗಸೂಚಿಯನ್ನು ಹೊರಡಿಸಿದ್ದಾರೆ.

ಗಮಕ ಮತ್ತು ಭಾರತೀಯ ಸಂಸ್ಕೃತಿಪರಿಚಯಿಸಿದ ವಿದ್ವಾಂಸ

0

ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್‍ರಾಜ್ ಸಚಿವರಾದ ಕೆ.ಎಸ್.ಈಶ್ವರಪ್ಪ ಇಂದು ಹೊಸಹಳ್ಳಿಗೆ ತೆರಳಿ ಪದ್ಮಶ್ರೀ ಪ್ರಶಸ್ತಿ ಪುರಸ್ಕøತರಾದ ಹೆಚ್.ಆರ್.ಕೇಶವಮೂರ್ತಿಯವರನ್ನು ಅಭಿನಂದಿಸಿ ಗೌರವಿಸಿದರು. ಈ ವೇಳೆ ಅವರು ಮಾತನಾಡಿ, ಪದ್ಮಶ್ರೀ ಪ್ರಶಸ್ತಿ ಪಡೆಯುವುದರ ಮೂಲಕ ಕೇಶವಮೂರ್ತಿಯವರು ಇಡೀ ದೇಶಕ್ಕೆ ಗಮಕ ಮತ್ತು ಭಾರತೀಯ ಸಂಸ್ಕøತಿಯನ್ನು ಪರಿಚಿಯಿಸಿದ ವಿದ್ವಾಂಸರು. ಇವರು ಶಿವಮೊಗ್ಗ ಜಿಲ್ಲೆಯವರೆಂಬುದು ನಮ್ಮ ಹೆಮ್ಮೆಯಾಗಿದ್ದು, ಇವರಿಗೆ ಪ್ರಶಸ್ತಿ ಲಭಿಸಿರುವುದು ಜಿಲ್ಲೆಗೆ ಮಾತ್ರವಲ್ಲ ಇಡೀ ರಾಜ್ಯಕ್ಕೆ ಸಂತೋಷ ತಂದಿದೆ ಎಂದರು.

ಏಷ್ಯ ಕಪ್ ಮಹಿಳಾ ಹಾಕಿ: ಭಾರತಕ್ಕೆ ಕಂಚಿನ ಪದಕ

0

ಸವಿತಾ ಪೂನಿಯಾ ಸಾರಥ್ಯದ ಭಾರತದ ಮಹಿಳೆಯರ ಹಾಕಿ ತಂಡ ಏಷ್ಯಾ ಕಪ್ ಉಳಿಸಿಕೊಳ್ಳುವಲ್ಲಿ ವಿಫಲವಾದರೂ ಚೀನಾ ತಂಡವನ್ನು ಮಣಿಸಿ ಕಂಚಿನ ಪದಕ ಜಯಿಸುವಲ್ಲಿ ಸಫಲವಾಗಿದೆ.

ಮೂರು ಮತ್ತು ನಾಲ್ಕನೇ ಸ್ಥಾನಕ್ಕಾಗಿ ಇಲ್ಲಿನ ಸುಲ್ತಾನ್ ಖಾಬೂಸ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ಪ್ಲೇ ಆಫ್ ಪಂದ್ಯದಲ್ಲಿ ಭಾರತ ತಂಡ 2ರಿಂದ 0 ಗೋಲ್ ಗಳ ಅಂತರದಿಂದ ಮಾಜಿ ಚಾಂಪಿಯನ್ ಚೀನಾ ತಂಡವನ್ನು ಸೋಲಿಸಿ ಮೂರನೇ ಸ್ಥಾನ ಗಳಿಸಿತು.

ಭಾರತದ ಪರ ಶರ್ಮಿಳಾ ದೇವಿ ಹದಿಮೂರನೇ ನಿಮಿಷ ಮತ್ತು ಗುರ್ಜಿತ್ ಕೌರ್ 19 ನಿಮಿಷ ತಲಾ ಒಂದು ಗೋಲ್ ಬಾರಿಸಿದರು. ಮೊದಲ ಎರಡು ಕ್ವಾರ್ಟರ್ ಗಳಲ್ಲಿ ತಲಾ ಒಂದು ಗೋಲ್ ಬಾರಿಸಿದ ಭಾರತ, ಆ ನಂತರದ ಎರಡು ಕ್ವಾರ್ಟರ್ ಗಳಲ್ಲಿ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿತು. ಆದ್ದರಿಂದ ತಿರುಗೇಟು ನೀಡಲು ಚೀನಾ ತಂಡಕ್ಕೆ ಸಾಧ್ಯವಾಗಲಿಲ್ಲ.

ಪ್ರೊ ಕಬಡ್ಡಿ ಲೀಗ್ ಪೈರೆಟ್ಸ್ ಗೆ ಜಯ

0

ಸರ್ವಾಂಗೀಣ ಸಾಧನೆಗೈದ ಮೂರು ಬಾರಿಯ ಚಾಂಪಿಯನ್ ಪಾಟ್ನಾ ತಂಡ ಪ್ರೊ ಕಬಡ್ಡಿ ಲೀಗ್ ನ 8ನೇ ಆವೃತ್ತಿಯ 80ನೇ ಹಣಾಹಣಿಯಲ್ಲಿ ತಮಿಳು ತಲೈವಾಸ್ ತಂಡವನ್ನು ಸುಲಭವಾಗಿ ಸೋಲಿಸಿ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ.

ವೈಟ್ ಫೀಲ್ಡ್ ನ ಶೆರಟಾನ್ ಗ್ರಾಂಡ್ ಹೋಟೆಲ್ ಸಭಾಂಗಣದಲ್ಲಿ ನಡೆದ ಉಭಯ ಅವಧಿಗಳಲ್ಲಿ ಪಾರಮ್ಯ ಮೆರೆದ ಪ್ರಶಾಂತ್ ಕುಮಾರ್ ರೈ ನಾಯಕತ್ವದ ಪೈರೇಟ್ಸ್ ತಂಡ 52 ರಿಂದ 24 ಅಂಕಗಳ ಭಾರಿ ಅಂತರದಿಂದ ಜಯ ಸಾಧಿಸಿತು.

ಡಿಫೆಂಡರ್ ಸಾಗರ್ ಅವರ 8 ಅಂಕಗಳ ಕೊಡುಗೆಯ ಹೊರತಾಗಿಯೂ ತಲೈವಾಸ್ ತಂಡ ಸೋಲಿಗೆ ಶರಣಾಯಿತು. ಇದು ಕಳೆದ ಐದು ಪಂದ್ಯಗಳಲ್ಲಿ ತಲೈವಾಸ್ ತಂಡಕ್ಕೆ ಎದುರಾದ ಮೂರನೇ ಸೋಲು.

ಮೊದಲಾರ್ಧದಲ್ಲಿ 21 ರಿಂದ 12ರ ಮುನ್ನಡೆ ಗಳಿಸಿದ ಪಾಟ್ನಾ ಪೈರೇಟ್ಸ್ , ದ್ವಿತೀಯಾರ್ಧದಲ್ಲಿ ಅದೇ ಲಯದಿಂದ ಅಡಿ 31ರಿಂದ 12 ಅಂಕಗಳ ಮೇಲುಗೈ ಸಾಧಿಸಿತು. ಪೈರೇಟ್ಸ್ ತಂಡಕ್ಕೆ ಮೋನು ಗೊಯಟ್ 9 ಮತ್ತು ಪ್ರಶಾಂತ್ ಕುಮಾರ್ 8 ಅಂಕಗಳ ಕಾಣಿಕೆ ನೀಡಿದರು.+++

ಇಲ್ಲಿಯವರೆಗೆ ಆಡಿದ 12 ಪಂದ್ಯಗಳಲ್ಲಿ 8 ಜಯ, ಮೂರು ಸೋಲು ಹಾಗೂ ಒಂದು ಡ್ರಾ ದೊಂದಿಗೆ ಒಟ್ಟಾರೆ 45 ಅಂಕ ಕಲೆಹಾಕಿದ ಪಾಟ್ನಾ ಪೈರೇಟ್ಸ್ ತಂಡ ದಬಾಂಗ್ ದೆಹಲಿ (43 ಅಂಕ) ತಂಡವನ್ನು ತೃತೀಯ ಸ್ಥಾನಕ್ಕೆ ತಳ್ಳಿ 2ನೇ ಸ್ಥಾನ ಪಡೆದುಕೊಂಡಿತು. ಗೊತ್ತು 46 ಅಂಕ ಹೊಂದಿರುವ ಬೆಂಗಳೂರು ಬುಲ್ಸ್ ಅಗ್ರ ಸ್ಥಾನ ಪಡೆದುಕೊಂಡಿದೆ. ತಲೈವಾಸ್ ತಂಡ 34 ಅಂಕಗಳೊಂದಿಗೆ 10ನೇ ಸ್ಥಾನದಲ್ಲಿದೆ.

ಸಂಸತ್ ಬಜೆಟ್ ಅಧಿವೇಶನ: ಕಾಂಗ್ರೆಸ್ ಪ್ರತಿ ತಂತ್ರ ಚಿಂತನೆ

0

ಸಂಸತ್ ನ ಬಜೆಟ್ ಅಧಿವೇಶನದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಮಾನ ಮನಸ್ಕ ಪಕ್ಷಗಳ ಜೊತೆಗೂಡಿ ಕೆಲಸ ಮಾಡಲು ಕಾಂಗ್ರೆಸ್ ನಿರ್ಧರಿಸಿದೆ.

ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅಧ್ಯಕ್ಷತೆಯಲ್ಲಿ ನಡೆದ ಸಂಸದೀಯ ರಣತಂತ್ರ ನಿರ್ಧಾರಕ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ರೈತರ ಆತ್ಮಹತ್ಯೆ, ಚೀನಾ ಗಡಿ ವಿವಾದ, ಏರ್ ಇಂಡಿಯಾವನ್ನು ಮಾಡಿರುವುದನ್ನು ಅಧಿವೇಶನದಲ್ಲಿ ಪ್ರಶ್ನಿಸಬೇಕು ಮತ್ತು ಕೊರೋನಾದಿಂದ ಮೃತಪಟ್ಟವರ ಕುಟುಂಬಗಳಿಗೆ ಪರ್ಯಾಯ ಘೋಷಿಸುವಂತೆ ಯು ಆಗ್ರಹಿಸಬೇಕು ಎಂಬ ನಿರ್ಧಾರಗಳನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ.

ಸಮಿತಿ ಸದಸ್ಯರಾದ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ನಾಯಕ ಅಧಿರ್ ರಂಜನ್ ಚೌಧರಿ, ಜೈರಾಮ್ ರಮೇಶ್,ಕೆ.ಸಿ. ವೇಣುಗೋಪಾಲ್, ಇನ್ನು ಮುಂತಾದವರು ಈ ಸಭೆಯಲ್ಲಿ ಉಪಸ್ಥಿತರಿದ್ದರು.

ಗರೀಬಿ ಹಟಾವೋ ಗುರಿಯಸಿರಿವಂತ ರಾಜಕೀಯ ಪಕ್ಷಗಳಿವು..!

0

ದೇಶದ ರಾಜಕೀಯ ಪಕ್ಷಗಳ ಪೈಕಿ 4,847.78 ಕೋಟಿ ರೂ. ಮೌಲ್ಯದ ಅಸ್ತಿಗಳನ್ನು ಹೊಂದುವ ಮೂಲಕ ಬಿಜೆಪಿಯು ಅತ್ಯಂತ ಶ್ರೀಮಂತ ಪಕ್ಷವಾಗಿದೆ.
ದೇಶದಲ್ಲಿ ಸಕ್ರಿಯವಾಗಿರುವ 44 ಪ್ರಾದೇಶಿಕ ಪಕ್ಷಗಳ ಪೈಕಿ ಅತಿ ಹೆಚ್ಚು ಮೌಲ್ಯದ ಆಸ್ತಿಗಳ ಒಡೆತನವನ್ನು ಸಮಾಜವಾದಿ ಪಕ್ಷ (ಎಸ್ ಪಿ) ಹೊಂದಿದೆ.
ಸದ್ಯ ಉತ್ತರಪ್ರದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಹವಣಿಸುತ್ತಿರುವ ಎಸ್ ಪಿ ತೆಕ್ಕೆಯಲ್ಲಿರುವುದು 563.47 ಕೋಟಿ ರೂ. ಮೊತ್ತದ ಸ್ವತ್ತುಗಳು, ತೆಲಂಗಾಣದಲ್ಲಿ ಆಡಳಿತದಲ್ಲಿರುವ ಟಿಆರ್ ಎಸ್ ಹೊಂದಿರುವ ಸ್ವತ್ತುಗಳ ಮೌಲ್ಯ 301.47 ಕೋಟಿ ರೂ. ಮತ್ತು ದಿ. ಜಯಲಲಿತಾ ಮುನ್ನಡೆಸುತ್ತಿದ್ದ ಎಐಎಡಿಎಂಕೆ ಪಕ್ಷದ ಸ್ವತ್ತು 267.61 ಕೋಟಿ ರೂ.ನಷ್ಟಿದೆ.
2019 -20ನೇ ಸಾಲಿನಲ್ಲಿ ರಾಜಕೀಯ ಪಕ್ಷಗಳು ಘೋಷಿಸಿರುವ ಆಸ್ತಿಗಳ ವಿವರಗಳನ್ನು ಆಧರಿಸಿ ಅಸೋಸಿಯೇಷನ್ ಫಾರ್ ಡೆಮೊಕ್ರೆಟಿಕ್ ರಿಫಾರ್ಮ್ಸ್ ಸಿದ್ಧಪಡಿಸಿರುವ ವರದಿಯಲ್ಲಿ ಇದು ಬಹಿರಂಗವಾಗಿದೆ.
ಅತ್ಯಂತ ಶ್ರೀಮಂತ ರಾಜಕೀಯ ಪಕ್ಷಗಳ ಪೈಕಿ ಎರಡನೇ ಸ್ಥಾನವನ್ನು ಬಹುಜನ ಸಮಾಜ ಪಕ್ಷ (ಬಿಎಸ್ ಪಿ) ಪಡೆದುಕೊಂಡಿದ್ದು, 698.33 ಕೋಟಿ ರೂ. ಮೌಲ್ಯದ ಸ್ವತ್ತುಗಳನ್ನು ಹೊಂದಿದೆ. ಸುಮಾರು 588 ಕೋಟಿ ರೂ. ಮೌಲ್ಯದ ಆಸ್ತಿಗಳ ಒಡೆತನದ ಮೂಲಕ ಕಾಂಗ್ರೆಸ್ ಮೂರನೇ ಸ್ಥಾನದಲ್ಲಿದೆ. ಒಟ್ಟಾರೆಯಾಗಿ ಏಳು ರಾಷ್ಟ್ರೀಯ ಪಕ್ಷಗಳು ಮತ್ತು 44 ಪ್ರಾದೇಶಿಕ ಪಕ್ಷಗಳು 2019-20ನೇ ಸಾಲಿನಲ್ಲಿ ಘೋಷಿಸಿಕೊಂಡ ಒಟ್ಟಾರೆ ಸ್ವತ್ತಿನ ಮೌಲ್ಯ 9117.95 ಕೋಟಿ ರೂಪಾಯಿ ಆಗಿದೆ. ಆ ಪೈಕಿ 6,988.57 ಕೋಟಿ ರೂಪಾಯಿ ರಾಷ್ಟ್ರೀಯ ಪಕ್ಷಗಳ ಬಳಿ ಇದ್ದರೆ, ಪ್ರಾದೇಶಿಕ ಪಕ್ಷಗಳ ಬಳಿ 2,129.38 ಕೋಟಿ ರೂಪಾಯಿ ಮೌಲ್ಯದ ಸ್ವತ್ತು ಇದೆ ಎಂದು ತಿಳಿದುಬಂದಿದೆ

ಸಹೋದರರ ಸಮಾಗಮಕ್ಕೆ ನೆರವಾದ ಯು ಟ್ಯೂಬ್

0

ಕೆಲವು ದಿನಗಳ ಹಿಂದಷ್ಟೇ ಕರ್ತಾರ್ ಪುರ ಗುರುದ್ವಾರದಲ್ಲಿ ಬರೋಬ್ಬರಿ 74 ವರ್ಷದ ಬಳಿಕ ಇಬ್ಬರು ಸಹೋದರರು ಭೇಟಿಯಾದ ಬೆನ್ನಲ್ಲೇ ತಮ್ಮ ಸಂಬಂಧಿಗಳನ್ನು ಭೇಟಿಯಾಗಲು ಭಾರತದ ವ್ಯಕ್ತಿಗೆ ಪಾಕಿಸ್ತಾನ ಶುಕ್ರವಾರ ವೀಸಾ ನೀಡಿದೆ.
1947ರಲ್ಲಿ ಭಾರತ-ಪಾಕಿಸ್ತಾನ ಇಬ್ಭಾಗವಾದಾಗ ಸಹೋದರರಾದ ಸಿಕಾ ಖಾನ್ ಹಾಗೂ ಮೊಹಮ್ಮದ್ ಸಿದ್ಧಿಕಿ ಬೇರೆ ಬೇರೆಯಾಗಿದ್ದರು. ಸಿದ್ದಿಕಿ ಪಾಕ್ ಸೇರಿದರೆ,ಖಾನ್ ಭಾರತದಲ್ಲೇ ಉಳಿದಿದ್ದರು.
ಇದಾದ ಬಳಿಕ ಇಬ್ಬರಿಗೂ ಸಂಪರ್ಕವೇ ಇರಲಿಲ್ಲ. ಪಾಕಿಸ್ತಾನ ಮೂಲದ ಪಂಜಾಬಿ ಲೆಹರ್ ಎಂಬ ಯುಟ್ಯೂಬ್ ಚಾನೆಲ್ ನೆರವಿನಿಂದ ಖಾನ್ -ಸಿದ್ದಿಕಿ 74 ವರ್ಷದ ಬಳಿಕ ಇದೇ ತಿಂಗಳ ಆರಂಭದಲ್ಲಿ ಕರ್ತಾರ್ ಪುರ ಗುರುದ್ವಾರದಲ್ಲಿ ಭೇಟಿಯಾಗಿದ್ದರು

ಭದ್ರಾವತಿಯಲ್ಲಿ ಮೊಬೈಲ್ ಕಳ್ಳರ ಗ್ಯಾಂಗ್ ಅರೆಸ್ಟ್

0

ಕದ್ದ ಮೊಬೈಲ್ ಗಳನ್ನು ಕೇರಳದ ಮಲ್ಲಪುರಂ ಮತ್ತು ಮಹಾರಾಷ್ಟ್ರದ ಪುಣೆಯ ಮಾರಾಟ ಮಾಡುವ ಜಾಲ ಭದ್ರಾವತಿಯಿಂದ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿದುಬಂದಿದೆ.
ಪೊಲೀಸ್ ಇಲಾಖೆಯು ಅಂಥವರನ್ನು ಹುಡುಕುವುದರಲ್ಲಿ ನಿರತವಾಗಿದೆ.
ಭದ್ರಾವತಿಯಲ್ಲಿ ಕೆಲವರನ್ನು ಬಂಧಿಸಿದ್ದು, ಅವರು ಕೇರಳ ಮತ್ತು ಪುಣೆ ನಡುವೆ ಕದ್ದ ಮೊಬೈಲ್ ಗಳನ್ನು ಪೂರೈಸುವ ಕೆಲಸ ಮಾಡುತ್ತಿದ್ದರು. ಜೊತೆಗೆ ಸಂತೆ , ಇತ್ಯಾದಿ ಜನನಿಬಿಡ ಪ್ರದೇಶದಲ್ಲಿ ಕಳ್ಳತನ ಮಾಡುತ್ತಿದ್ದ ಗ್ಯಾಂಗ್ ವೊಂದನ್ನು ಬಂಧಿಸಲಾಗಿದೆ. ಕೇರಳದ ಮಲ್ಲಪುರಂ, ಪುಣೆಗೆ ಒಯ್ದು ಇಎಂಇಐ ಬದಲಾವಣೆ ಮಾಡಿ ಕಡಿಮೆ ದರಕ್ಕೆ ಮಾರಾಟ ಮಾಡಲಾಗುತ್ತದೆ ಎಂದು ಶಿವಮೊಗ್ಗದ ಎಸ್ ಪಿ ಬಿ.ಎಂ. ಲಕ್ಷ್ಮೀಪ್ರಸಾದ್ ಅವರು ತಿಳಿಸಿದ್ದಾರೆ.
ಪೊಲೀಸ್ ಇಲಾಖೆಯು ಕಾರ್ಯಾಚರಣೆ ನಡೆಸಿ ಆರು ತಿಂಗಳ ಹಿಂದೆ 12 ಜನರನ್ನು ಬಂಧಿಸಿತ್ತು. ಅದರಲ್ಲಿ ಒಬ್ಬ ಮಧ್ಯವರ್ತಿ ದಂದೆ ಮಾಡುತ್ತಿದ್ದ. ಇನ್ನುಳಿದವರು ಸ್ಥಳೀಯವಾಗಿ ಮೊಬೈಲ್ ಗಳನ್ನು ಕಳುವು ಮಾಡುತ್ತಿದ್ದರು. ಇವರು ತರಕಾರಿ ಮಾರುಕಟ್ಟೆ, ಸಾರ್ವಜನಿಕ ಪ್ರದೇಶಗಳನ್ನೇ ಟಾರ್ಗೆಟ್ ಮಾಡಿಕೊಂಡು ಮೊಬೈಲ್ ಕಳ್ಳತನ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಮಾಲೀಕರಿಗೆ ಗೊತ್ತಾಗದ ಹಾಗೆ ಜೇಬಿನಲ್ಲಿನ ಮೊಬೈಲ್ ಗಳಿಗೆ ಕನ್ನ ಹಾಕುವ ಗ್ಯಾಂಗ್ ಒಂದೆಡೆಯಾದರೆ ವಾಹನಗಳನ್ನು ಅಡ್ಡಗಟ್ಟಿ ದರೋಡೆ ಮಾಡುವ ಗ್ಯಾಂಗ್ ಇನ್ನೊಂದು ಕಡೆ. ಈ ಎರಡೂ ಬಗೆಯ ಗ್ಯಾಂಗ್ ಗಳು ಶಿವಮೊಗ್ಗ ಜಿಲ್ಲೆಯಲ್ಲಿ ಇವೆ. ಪೊಲೀಸರು ಅಂಥವರನ್ನು ಬಂಧಿಸಿ ಅವರ ವಿರುದ್ಧ ಕ್ರಮ ಕೂಡಾ ಕೈಗೊಳ್ಳುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೇಂದ್ರದ ಮೋದಿ ನೇತೃತ್ವದ ಸರ್ಕಾರದಿಂದ ದೇಶ ಭದ್ರತೆಗೆ ಧಕ್ಕೆ-ಡಿಕೆಶಿ

0

ಕೇಂದ್ರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ದೇಶದ ಭದ್ರತೆಗೆ ಧಕ್ಕೆ ತರುತ್ತಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಸರ್ಕಾರ ರಕ್ಷಣಾ ಪಡೆಗಳಿಗೆ ನೀಡಲಾಗುವ ಅನುದಾನವನ್ನು ಕಡಿಮೆ ಮಾಡಿದೆ. ರಕ್ಷಣಾ ವಲಯದಲ್ಲಿ ಸುಮಾರು 1,22,555 ಹುದ್ದೆಗಳು ಖಾಲಿ ಇವೆ.
ಇಷ್ಟೇ ಅಲ್ಲದೆ 30 ಲಕ್ಷ ಮಾಜಿ ಸೈನಿಕರು ಒಂದು ಶ್ರೇಣಿ ಒಂದು ಪಿಂಚಣಿ ಸೌಲಭ್ಯದಿಂದ ವಂಚಿತರಾಗಿದ್ದಾರೆ.
ಸೈನಿಕ ಅಂಗವಿಕಲ ಪಿಂಚಣಿ ಮೇಲೂ ತೆರಿಗೆ ವಿಧಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ಕಾಂಗ್ರೆಸ್ ಸರ್ಕಾರ ಯಾವತ್ತೂ ಸೈನಿಕರ ಹಿತಕ್ಕಾಗಿ ಕೆಲಸ ಮಾಡಿದೆ ಎಂದರು.
ಡಬಲ್ ಇಂಜಿನ್ ನಿಷ್ಕ್ರಿಯತೆಯಿಂದ ದೇಶ ಮತ್ತು ಗೋವಾದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಗೋವಾದಲ್ಲಿ ಕಾಂಗ್ರೆಸ್ ಗೆ ಸರಕಾರ ರಚಿಸಲು ಅವಕಾಶ ನೀಡಿದರೆ ಕೋಮು ಸೌಹಾರ್ದತೆ , ಭ್ರಷ್ಟಾಚಾರ ಮುಕ್ತ ಮತ್ತು ಸ್ಥಿರ , ಬಲಿಷ್ಟ ಆಡಳಿತ ನೀಡುತ್ತೇವೆ ಎಂದು ಡಿಕೆಶಿ ಅವರು ತಿಳಿಸಿದರು.

ಗೋಶಾಲೆ ಪ್ರತಿ ಗ್ರಾಮದಲ್ಲೂ ಆರಂಭಿಸಿ:ಸರ್ಕಾರಕ್ಕೆ ಹೈಕೋರ್ಟ್ ಸಲಹೆ

0

ಪ್ರತಿ ಗ್ರಾಮದಲ್ಲೂ ಗೋ ಶಾಲೆ ಆರಂಭಿಸುವ ಅಗತ್ಯವಿದೆ. ನೀವು ಇತರ ರಾಜ್ಯಗಳನ್ನು ನೋಡಿ ತಿಳಿಯಿರಿ ಎಂದು ಹೈಕೋರ್ಟ್ ಮೌಖಿಕ ಸಲಹೆ ನೀಡಿದೆ.
ಹೈಕೋರ್ಟ್ ಕಾನೂನು ಸೇವಾ ಪ್ರಾಧಿಕಾರ ಪ್ರತಿ ತಾಲೂಕಿನಲ್ಲಿ ಗೋಶಾಲೆ ಆರಂಭಿಸಬೇಕು ಹಾಗೂ ಗೋಶಾಲೆಗಳಿಗೆ ಸೂಕ್ತ ಪ್ರಮಾಣದಲ್ಲಿ ಮೇವು, ನೀರು ಮತ್ತು ಜಾಗ ಒದಗಿಸಲು ನಿರ್ದೇಶಿಸಬೇಕೆಂದು ಸಲ್ಲಿಸಿರುವ ಪಿಐಎಲ್ ಸಿಜೆ ರಿತುರಾಜ್ ಪೀಠ ವಿಚಾರಣೆ ನಡೆಸಿತು.
ಅಲ್ಲದೆ, ಪ್ರತಿ ಜಿಲ್ಲೆಗಳಲ್ಲಿ ತಾತ್ಕಾಲಿಕವಾಗಿ ಮಾತ್ರ ಗೋಶಾಲೆ ಆರಂಭಿಸಲು ಸರ್ಕಾರ ಕೈಗೊಂಡಿರುವ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದೆ.
ಈ ನಡುವೆ, ರಾಜ್ಯದ ಆಯ್ದ ತಾಲೂಕುಗಳಲ್ಲಿ 97 ಗೋಶಾಲೆ ತೆರೆಯಲಾಗಿದೆ. ಅವುಗಳಿಗೆ ಅನುದಾನ ಸಹ ನೀಡಲಾಗಿದೆ. ಹಾಗಾಗಿ, ಮತ್ತೆ ತಾಲೂಕು ಮಟ್ಟದ ಬದಲಾಗಿ ತಾತ್ಕಾಲಿಕವಾಗಿ ಪ್ರತಿ ಜಿಲ್ಲೆಯಲ್ಲಿ ಗೋಶಾಲೆ ಆರಂಭಿಸಲು ಸರ್ಕಾರ ಆದೇಶಿಸಿದೆ ಎಂದು ಸರ್ಕಾರಿ ವಕೀಲರು ತಿಳಿಸಿದ್ದಾರೆ.
ಪ್ರತಿ ಜಿಲ್ಲೆಯಲ್ಲಿ ಗೋಶಾಲೆ ಆರಂಭಿದರೆ ಸಾಕಾಗುವುದಿಲ್ಲ. ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲದೆ ಪ್ರತಿ ಗ್ರಾಮ ಮಟ್ಟದಲ್ಲೂ ಗೋಶಾಲೆ ತೆರೆಯಬೇಕು. ಬೇರೆ ರಾಜ್ಯಗಳಿಗೆ ಹೋಗಿ ಪರಿಶೀಲನೆ ಮಾಡಿ. ಅಲ್ಲಿನ ಸರ್ಕಾರಗಳು ಪ್ರತಿಯೊಂದು ಗ್ರಾಮದಲ್ಲಿ ಗೋಶಾಲೆ ಆರಂಭಿಸಿವೆ ಎಂದು ಸಿಜೆ ತಾಕೀತು ಮಾಡಿದರು