ಕೇಂದ್ರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ದೇಶದ ಭದ್ರತೆಗೆ ಧಕ್ಕೆ ತರುತ್ತಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಸರ್ಕಾರ ರಕ್ಷಣಾ ಪಡೆಗಳಿಗೆ ನೀಡಲಾಗುವ ಅನುದಾನವನ್ನು ಕಡಿಮೆ ಮಾಡಿದೆ. ರಕ್ಷಣಾ ವಲಯದಲ್ಲಿ ಸುಮಾರು 1,22,555 ಹುದ್ದೆಗಳು ಖಾಲಿ ಇವೆ.
ಇಷ್ಟೇ ಅಲ್ಲದೆ 30 ಲಕ್ಷ ಮಾಜಿ ಸೈನಿಕರು ಒಂದು ಶ್ರೇಣಿ ಒಂದು ಪಿಂಚಣಿ ಸೌಲಭ್ಯದಿಂದ ವಂಚಿತರಾಗಿದ್ದಾರೆ.
ಸೈನಿಕ ಅಂಗವಿಕಲ ಪಿಂಚಣಿ ಮೇಲೂ ತೆರಿಗೆ ವಿಧಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ಕಾಂಗ್ರೆಸ್ ಸರ್ಕಾರ ಯಾವತ್ತೂ ಸೈನಿಕರ ಹಿತಕ್ಕಾಗಿ ಕೆಲಸ ಮಾಡಿದೆ ಎಂದರು.
ಡಬಲ್ ಇಂಜಿನ್ ನಿಷ್ಕ್ರಿಯತೆಯಿಂದ ದೇಶ ಮತ್ತು ಗೋವಾದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಗೋವಾದಲ್ಲಿ ಕಾಂಗ್ರೆಸ್ ಗೆ ಸರಕಾರ ರಚಿಸಲು ಅವಕಾಶ ನೀಡಿದರೆ ಕೋಮು ಸೌಹಾರ್ದತೆ , ಭ್ರಷ್ಟಾಚಾರ ಮುಕ್ತ ಮತ್ತು ಸ್ಥಿರ , ಬಲಿಷ್ಟ ಆಡಳಿತ ನೀಡುತ್ತೇವೆ ಎಂದು ಡಿಕೆಶಿ ಅವರು ತಿಳಿಸಿದರು.