Sunday, February 15, 2026
Sunday, February 15, 2026
Home Blog Page 1744

ಪ್ರೊ ಕಬಡ್ಡಿ ಲೀಗ್ದಬಾಂಗ್ ಧಾಳಿಗೆಜಯಂಟ್ಸ್ ಥಂಡ!

0

ರೇಡರ್ ಗಳ ಪರಾಕ್ರಮ ಮತ್ತು ರಕ್ಷಣಾ ವಿಭಾಗದ ಸಂಘಟಿತ ಹೋರಾಟದಿಂದ ಮಿಂಚಿದ ದಬಾಂಗ್ ದೆಹಲಿ ತಂಡ ಪ್ರೊ ಕಬಡ್ಡಿ ಲೀಗ್ ನ 81ನೇ ಪಂದ್ಯದಲ್ಲಿ ಎದುರಾಳಿ ಗುಜರಾತ್ ಜಯಂಟ್ಸ್ ವಿರುದ್ಧ 41 ರಿಂದ 22 ಅಂಕಗಳ ಬೃಹತ್ ಅಂತರದ ಗೆಲುವು ಸಾಧಿಸಿತು.

ಬೆಂಗಳೂರಿನ ಶೆರಟಾನ್ ಹೋಟೆಲ್ ನಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಆರಂಭದಿಂದಲೂ ಮೇಲುಗೈ ಸಾಧಿಸಿದ ದಬಾಂಗ್ ದೆಹಲಿ ತಂಡ ಸುಲಭ ಜಯ ಗಳಿಸಿತು.ಆದರೆ, ಎದುರಾಳಿ ಆಟಗಾರರ ಅಬ್ಬರದ ಆಟಕ್ಕೆ ಮಂಕಾದ ಗುಜರಾತ್ ತಂಡ ಸೋಲಿನ ಶರಣಾಯಿತು. ದೆಹಲಿ ತಂಡ ಈ ಗೆಲುವಿನೊಂದಿಗೆ 14 ಪಂದ್ಯಗಳಲ್ಲಿ ಒಟ್ಟಾರೆ 48 ಅಂಕಗಳಿಸಿ ಅಂಕಪಟ್ಟಿಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿತು.

ಪಂದ್ಯದ ಮೊದಲಾರ್ಧ ಮುಕ್ತಾಯಗೊಂಡಾಗ ದಬಾಂಗ್ ದೆಹಲಿ ತಂಡ 22 ರಿಂದ 11 ಅಂಕಗಳ ಮುನ್ನಡೆಯನ್ನು ಕಾಪಾಡಿಕೊಂಡು ಗೆಲುವಿನ ವಿಶ್ವಾಸ ಮೂಡಿಸಿತು. ಹಾಗೆ ದ್ವಿತೀಯಾರ್ಧದಲ್ಲೂ 19 ಅಂಕಗಳನ್ನು ತನ್ನದಾಗಿಸಿಕೊಳ್ಳುವ ಮೂಲಕ ಜಯಭೇರಿ ಬಾರಿಸಿತು. ಗುಜರಾತ್ ಜಯಂಟ್ಸ್ ತಂಡಕ್ಕೆ 11 ಅಂಕ ಮಾತ್ರ ಗಳಿಸಲು ಸಾಧ್ಯವಾಯಿತು.

ದಬಾಂಗ್ ದೆಹಲಿ ತಂಡದ ಪರ ವಿಜಯ್ 8, ಮಂಜಿತ್ ಚಿಲ್ಲರ್ 5, ಸಂದೀಪ್ ನರ್ವಾಲ್ 6, ಅಶೋಕ್ ಮಲಿಕ್ 6 ಮತ್ತು ಕೃಷ್ಣ 5 ಅಂಕಗಳನ್ನು ಗಳಿಸುವ ಮೂಲಕ ತಂಡದ ಗೆಲುವಿಗೆ ಕೊಡುಗೆ ನೀಡಿದ್ದಾರೆ.

ಗುಜರಾತ್ ಜಯಂಟ್ಸ್ ಪರ ಪ್ರದೀಪ್ ಕುಮಾರ್ 7 ಗರಿಷ್ಠ ಅಂಕ ಗಳಿಸಿದ್ದಾರೆ.

ರಾಜ್ಯದಲ್ಲಿ ಕೋವಿಡ್ ಪರಿಷ್ಕೃತ ಮಾರ್ಗಸೂಚಿ

0

ಡಿಸೆಂಬರ್ ಅಂತ್ಯ ಹಾಗೂ ಜನವರಿ ಪ್ರಾರಂಭದಲ್ಲಿ ರಾಜ್ಯಾದ್ಯಂತ ಕೋವಿಡ್ ಸೋಂಕಿನ ಪ್ರಮಾಣ ಹೆಚ್ಚಾಗಿದ್ದು ಎಲ್ಲರಲ್ಲೂ ಆತಂಕ ಮೂಡಿತ್ತು. ಆದರೆ ಈಗ ಕೋವಿಡ್ ಹೊಸ ಸೋಂಕಿತರ ಪ್ರಮಾಣ ಇಳಿಕೆಯಾಗಿರುವ ಜೊತೆಗೆ ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತಾಂತ್ರಿಕ ಸಲಹಾ ಸಮಿತಿ ವರದಿ ಆಧಾರದ ನಿರ್ಬಂಧಗಳನ್ನು ಸಡಿಲಿಸಲು ನಿರ್ಧರಿಸಲಾಗಿದೆ.

ರಾಜ್ಯದಲ್ಲಿ ಕೋವಿಡ್ ಸೋಂಕಿತರ ಪ್ರಮಾಣ ಒಟ್ಟು 4,02,857 ರಷ್ಟು ಇದೆ. 22,318ರಷ್ಟು 14 ವರ್ಷದೊಳಗಿನ ಮಕ್ಕಳಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ. 401 ಮಕ್ಕಳು ಕೋವಿಡ್ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸೋಂಕಿನಿಂದ ಆಸ್ಪತ್ರೆಗೆ ದಾಖಲಾದವರ ಪ್ರಮಾಣ 6,732 ರಷ್ಟೀದೆ. ಇದುವರೆಗೆ ಕೋವಿಡ್ ನಿಂದಾಗಿ 146 ಮಂದಿ ಮೃತಪಟ್ಟಿದ್ದಾರೆ.

ರಾಜ್ಯ ಸರ್ಕಾರವು ಕೋವಿಡ್ ಸ್ಥಿತಿಗತಿ ಕುರಿತಂತೆ ವಿಸ್ತೃತ ಚರ್ಚೆ ನಡೆಸಿ ಆಸ್ಪತ್ರೆಗೆ ದಾಖಲಾಗುತ್ತಿರುವ ಸೋಂಕಿತರ ಸಂಖ್ಯೆ ಶೇ.2 ಕ್ಕಿಂತ ಕಡಿಮೆ ಇರುವುದರಿಂದ ಕೋವಿಡ್ ನಿರ್ಬಂಧ ಸಡಲಿಸುವ ತೀರ್ಮಾನ ಕೈಗೊಂಡಿದೆ.

“ಸೋಮವಾರದಿಂದ ರಾಜ್ಯಾದ್ಯಂತ ರಾತ್ರಿ ಕರ್ಫ್ಯೂ ರದ್ದಾಗಲಿದೆ. ಚಿತ್ರಮಂದಿರ ಮಲ್ಟಿಪ್ಲೆಕ್ಸ್ ಗಳಲ್ಲಿ ವೀಕ್ಷಕರು 2-3 ಗಂಟೆಗಳ ಕಾಲ ಕುಳಿತುಕೊಳ್ಳಬೇಕಾದ ಕಾರಣ ಒಟ್ಟು ಸಾಮರ್ಥ್ಯದ ಶೇ.50 ಆಸನ ಭರ್ತಿಗೆ ಅಷ್ಟೇ ಅವಕಾಶವಿದೆ. ಜಾತ್ರೆ ಧಾರ್ಮಿಕ ಸಮಾವೇಶ ಸೇರಿದಂತೆ ಎಲ್ಲಾ ರೀತಿಯಲ್ಲಿ ಜಾತ, ಪ್ರತಿಭಟನೆ, ಧರಣಿ ನಿರ್ಬಂಧ ವಿಸ್ತರಿಸಲಾಗಿದೆ” ಎಂದು ಸಚಿವ ಆರ್.ಅಶೋಕ್ ಅವರು ತಿಳಿಸಿದರು.

“ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ಭೇಟಿ ನೀಡಲು ಮುಕ್ತ ಅವಕಾಶವಿದೆ. ಆದರೆ ಕೋವಿಡ್ ನಿಯಮಾವಳಿ ಮಾರ್ಗಸೂಚಿಗಳನ್ನು ಪಾಲಿಸಬೇಕು. ಉದ್ಯಾನವನಗಳಲ್ಲಿ ಸಫಾರಿ ಸೇರಿದಂತೆ ಇತರೆ ಚಟುವಟಿಕೆಗಳಿಗೂ ಅವಕಾಶ ನೀಡಲಾಗಿದೆ” ಎಂದು ಸಚಿವ ಆನಂದ್ ಸಿಂಗ್ ಅವರು ತಿಳಿಸಿದರು.

“ಸೋಮವಾರದಿಂದ ಬೆಂಗಳೂರಿನಲ್ಲಿ 1 ರಿಂದ 9ನೇ ತರಗತಿಗಳು ಪ್ರಾರಂಭವಾಗಲಿದೆ. ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಪಾಲನೆಯಾಗುತ್ತಿಲ್ಲ ಎಸ್ ಒ ಪಿ ಬೆಂಗಳೂರಿಗೂ ಅನ್ವಯವಾಗಲಿದೆ. ಯಾವುದೇ ಮಗುವಿಗೆ ಕೋವಿಡ್ ಪಾಸಿಟಿವ್ ಬಂದರೆ ಆ ತರಗತಿಯನ್ನು ಮುಚ್ಚಲಾಗುವುದು” ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಹೇಳಿದ್ದಾರೆ.

ಕೊರೋನ ಸದಾ ಜಾಗೃತರಾಗಿರಿ- ವಿಆಸಂ

0

ಕಳೆದ ಒಂದು ವಾರದಿಂದ ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಇಳಿಮುಖವಾಗಿದ್ದರೂ ಸಹ, ಕೊರೋನಾ ಸೋಂಕಿನಿಂದ ದೇಶ ಸಂಪೂರ್ಣವಾಗಿ ಪಾರಾಗಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.

ಸಾರ್ವಜನಿಕರು ಇನ್ನೂ ಎರಡು-ಮೂರು ತಿಂಗಳ ಕಾಲ ಕೊರೋನಾ ಮುನ್ನೆಚ್ಚರಿಕೆಗಳನ್ನು ಪಾಲಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಬೇಕು. ಕೊರೋನಾ ನಿರೋಧಕ ಲಸಿಕೆಯ ಒಂದನೇಯ ಡೋಸ್ ಪಡೆದವರು ಸ್ವಯಂಪ್ರೇರಿತವಾಗಿ ಎರಡನೇಯ ಡೋಸ್ ಪಡೆದು ಲಸಿಕಾ ಅಭಿಯಾನಕ್ಕೆ ವೇಗ ನೀಡಬೇಕು.

ಎಷ್ಟು ಬೇಗ ದೇಶದ ಪ್ರತಿಯೊಬ್ಬರು ಲಸಿಕೆಯ ಎರಡೂ ಡೋಸ್ ಪಡೆಯುತ್ತಾರೋ, ಅಷ್ಟು ಬೇಗ ಸೋಂಕಿನ ಪ್ರಸರಣ ತಗಲಿದೆ ಎಂದು ಡಬ್ಲ್ಯೂ ಎಚ್ಒ ಆಗ್ನೇಯ ಏಷ್ಯಾದ ಪ್ರಾದೇಶಿಕ ನಿರ್ದೇಶಕಿ ಪೂನಮ್ ಖೇತ್ರಪಾಲ್ ಸಿಂಗ್ ಅವರು ತಿಳಿಸಿದ್ದಾರೆ.

ಆದಷ್ಟು ಶೀಘ್ರದಲ್ಲೇಜಿಪಂ ಮತ್ತು ತಾಪಂ ಚುನಾವಣೆ ನಡೆಸುತ್ತೇವೆ- ಈಶ್ವರಪ್ಪ

0

ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್ ಈಶ್ವರಪ್ಪ ಅವರು ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಗಳಿಗೆ ಆದಷ್ಟು ಬೇಗ ಚುನಾವಣೆ ನಡೆಸುತ್ತೇವೆ ಎಂದು ಮಾಧ್ಯಮ ಮಿತ್ರರಿಗೆ ತಿಳಿಸಿದ್ದಾರೆ.

ಈ ಹಿಂದೆ ಕ್ಷೇತ್ರಗಳು ಮತ್ತು ಮೀಸಲಿಗೆ 780 ತಕರಾರು ಅರ್ಜಿಗಳು ಬಂದಿದ್ದವು ಲಕ್ಷ್ಮೀನಾರಾಯಣ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ವರದಿ ಸಲ್ಲಿಸಿದ ಬಳಿಕ ಚುನಾವಣೆ ನಡೆಸಲಾಗುವುದು ಎಂದು ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

‘ಅವಕಾಶವಾದಿ ರಾಜಕಾರಣಕ್ಕೆ ಇನ್ನೊಂದು ಹೆಸರು ಸಿದ್ದರಾಮಯ್ಯ ಮತ್ತು ಸಿ.ಎಂ.ಇಬ್ರಾಹಿಂ’ ಎಂದು ಲೇವಡಿ ಕೂಡ ಕೆ.ಎಸ್. ಈಶ್ವರಪ್ಪ ಮಾಡಿದರು.

ಭಾರತ – ಇಸ್ರೆಲ್ ವಿಶೇಷ ಬಾಂಧವ್ಯ- ಮೋದೀಜಿ

0

ಭಾರತ ಮತ್ತು ಇಸ್ರೇಲ್ ನಡುವಿನ ಬಾಂಧವ್ಯಕ್ಕೆ ಸುದೀರ್ಘ ಇತಿಹಾಸವಿದೆ ಎಂದು ಮಾನ್ಯ ಪ್ರಧಾನಿ ನರೇಂದ್ರ ಮೋದೀಜಿ ಅವರು ಹೇಳಿದ್ದಾರೆ.

ಉದಯ ದೇಶಗಳ ದ್ವಿಪಕ್ಷೀಯ ಬಾಂಧವ್ಯಕ್ಕೆ 30ವರ್ಷ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ವಿಡಿಯೋ ಮೂಲಕ ವಿಶೇಷ ಸಂದೇಶ ನೀಡಿರುವ ಮೋದಿ ಅವರು, “ಇದು ದಶಕದ ಅವಧಿಯಲ್ಲಿ ಎರಡು ದೇಶಗಳ ಅಭಿವೃದ್ಧಿ ಮತ್ತು ಬೆಳವಣಿಗೆಯಲ್ಲಿ ಪರಸ್ಪರ ಸಹಕಾರ ನೀಡಿವೆ. ಈ ಅವಧಿಯು ಎರಡು ದೇಶಗಳ ಬೆಳವಣಿಗೆಯಲ್ಲಿ ಯು ಮಹತ್ವದ ಅವಧಿಯಾಗಿದೆ. ಎರಡು ದೇಶಗಳ ಜನರ ನಡುವೆ ಮೊದಲಿನಿಂದಲೂ ವಿಶೇಷ ಬಾಂಧವ್ಯ ಇದೆ ಎಂದು ಮೋದೀಜಿ ಅವರು ತಿಳಿಸಿದ್ದಾರೆ.

ದ್ವೀಪಕ್ಷೀಯ ಸಂಬಂಧ 30 ವರ್ಷ ಪೂರೈಸಿದ ದಿನವೇ ಪೆಗಾಸಸ್ ಕುರಿತು ನ್ಯೂಯಾರ್ಕ್ ಟೈಮ್ಸ್ ನಲ್ಲಿ ವರದಿ ಪ್ರಕಟವಾಗಿದೆ. ಶನಿವಾರ ರಾತ್ರಿ ಪ್ರಧಾನಿ ನರೇಂದ್ರ ಮೋದಿಯವರು ಸಂದೇಶ ನೀಡಿರುವುದರಿಂದ, ಪೆಗಾಸಸ್ ಕುರಿತ ಪ್ರತಿಪಕ್ಷಗಳ ಆರೋಪಕ್ಕೆ ಉತ್ತರ ನೀಡಿದ್ದಾರೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಇಸ್ರೇಲ್ ಜೊತೆಗೆ ಭಾರತವು 1950ರ ಸೆಪ್ಟೆಂಬರ್ ತಿಂಗಳಿನಲ್ಲಿಯೇ ಪೂರ್ಣಪ್ರಮಾಣದ ರಾಜತಾಂತ್ರಿಕ ಸಂಬಂಧ ಬೆಳೆಸಿದೆಯಾದರೂ, 1992ರ ಜನವರಿ 29ರಂದು ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆ ಸಹಿ ಹಾಕಿದೆ

ಹಣ ತೋಳ್ಬಲ ಪಕ್ಷಾಂತರ ರಹಿತ ಚುನಾವಣಾ ಸುಧಾರಣೆ ಅಗತ್ಯ

0

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು “ಜಾತಿ, ಹಣ, ತೋಳ್ಬಲ ಹಾಗೂ ಪಕ್ಷಾಂತರ ಬಲಗಳಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಕುಸಿಯುವುದನ್ನು ತಡೆಯಲು ಚುನಾವಣೆ ವ್ಯವಸ್ಥೆಯಲ್ಲಿ ಸುಧಾರಣೆ ಅಗತ್ಯ” ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

“ಚುನಾವಣಾ ವ್ಯವಸ್ಥೆಯಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆ ಕಾಯ್ದುಕೊಳ್ಳಲು ಮಾರ್ಗದರ್ಶನ, ಸಲಹೆ ನೀಡಲು ಎಲ್ಲಾ ರಂಗದವರು ನೈತಿಕ ಹೊಣೆಗಾರಿಕೆ ಮುಂದಾಗಬೇಕು. ಎಲ್ಲೆಡೆ ವ್ಯಾಪಕ ಸಮಾಲೋಚನಾ ಸಭೆ, ಚರ್ಚೆಗಳು ಪ್ರಾರಂಭವಾಗಬೇಕು. ತುರ್ತುಪರಿಸ್ಥಿತಿ ವಿರುದ್ಧ ಇಡೀ ದೇಶ ಒಂದಾಗಿ ಹೋರಾಡಿತ್ತು. ಈಗ ಸೃಷ್ಟಿಯಾಗಿರುವ ರಾಜಕೀಯ ವಾತಾವರಣಕ್ಕೆ ಅಂತ್ಯವೂ ನಡೆಯಬೇಕಿದೆ” ಎಂದು ಕಾಗೇರಿಯವರು ಹೇಳಿದರು.

“ಪ್ರಭುತ್ವ ವ್ಯವಸ್ಥೆಯಲ್ಲಿ ನೈತಿಕ ಅಧಃಪತನ ಕುರಿತು ರಾಜಕಾರಣಿಗಳ ವಿರುದ್ಧ ಬಟ್ಟು ಮಾಡುವ ಸಂಸ್ಕೃತಿ ದೂರವಾಗಬೇಕು. ಚುನಾವಣೆ ಸುಧಾರಣೆ ಚರ್ಚೆ ಎಲ್ಲಿಂದ ಆರಂಭವಾದರೂ ಸ್ವಾಗತ. ವಿಧಾನಮಂಡಲದಲ್ಲೂ ಚರ್ಚೆ ಪ್ರಾರಂಭಿಸುವಂತೆ ಎಲ್ಲಾ ಶಾಸಕರಿಗೆ ಸಲಹೆ ನೀಡುತ್ತೇನೆ” ಎಂದು ವಿಶ್ವೇಶ್ವರ ಹೆಗಡೆ ಕಾಗೇರಿಯವರು ತಿಳಿಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಕಾಗೇರಿ‌ ಅವರು “ಶಾಸಕರ ಭವನದ ಬಳಿ ಎಂ.ಪಿ.ಕುಮಾರಸ್ವಾಮಿ ಅವರನ್ನು ತಡೆದು ಪೊಲೀಸರು ಹಲ್ಲೆಗೆ ಯತ್ನಿಸಿದ್ದಾರೆ ಎಂಬ ಆರೋಪದ ಬಗ್ಗೆ ಪೊಲೀಸ್ ಅಧಿಕಾರಿಗಳ ವರದಿ ಆಧರಿಸಿ ಕ್ರಮ ಜರುಗಿಸಲಾಗುವುದು” ಎಂದು ಕಾಗೇರಿ ತಿಳಿಸಿದ್ದಾರೆ.

ಯಾವುದೇ ಅಕ್ರಮ ಕಂಡುಬಂದಿಲ್ಲ- ನ್ಯಾ.ವೀರಪ್ಪ

0

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅಕ್ರಮಗಳಿಗೆ ಸಂಬಂಧಿಸಿದ ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ ಹೈಕೋರ್ಟ್ ನ ನ್ಯಾಯಮೂರ್ತಿಗಳಾದ ಬಿ. ವೀರಪ್ಪ ನೇತೃತ್ವದ ತಂಡವು ಕಾರಾಗೃಹಕ್ಕೆ ಧಿಡೀರ್ ಭೇಟಿ ನೀಡಿ ಪರಿಶೀಲಿಸಿದರು.

ಭೇಟಿ ನೀಡಿ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ನ್ಯಾಯಮೂರ್ತಿ ಬಿ. ವೀರಪ್ಪ ಅವರು, “ಭೇಟಿ ನೀಡಿದ ಸಂದರ್ಭದಲ್ಲಿ ಯಾವುದೇ ಅಕ್ರಮ ಕಂಡುಬಂದಿಲ್ಲ. ಜೈಲಿನಲ್ಲಿ ವ್ಯವಸ್ಥೆಯ ಲೋಪಗಳು ಕಾಣಿಸಲಿಲ್ಲ. ಆಹಾರದ ಗುಣಮಟ್ಟ ಸಹ ಉತ್ತಮವಾಗಿದೆ ಎಂದು ಬಿ. ವೀರಪ್ಪ ಅವರು ಹೇಳಿದರು.

ಜೈಲು ಅಧಿಕಾರಿಗಳ ಧೋರಣೆ ಬಗ್ಗೆ ಕೆಲ ಕೈದಿಗಳಿಂದ ದೂರು ಕೇಳಿಬಂದಿದೆ. ತಪ್ಪು ಮಾಡಿ ಬಂದಿರುವ ಕೈದಿಗಳಿಗೆ ಅಂತಹ ಧೋರಣೆ ಸಾಮಾನ್ಯ ಎಂದು ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರು ಆಗಿರುವಂತಹ ನ್ಯಾಯಮೂರ್ತಿ ಬಿ. ವೀರಪ್ಪ ಅವರು ತಿಳಿಸಿದ್ದಾರೆ.

9ರಿಂದ 10 ವರ್ಷ ಜೈಲುವಾಸ ಅನುಭವಿಸಿದರ ಪಟ್ಟಿ ಮಾಡಲು ಸೂಚಿಸಲಾಗಿದೆ. ಅಂಥವರ ಕ್ರಿಮಿನಲ್ ಮೇಲ್ಮನವಿ ಪ್ರಕರಣಗಳು ವಿಚಾರಣೆಗೆ ಬಾಕಿ ಇದ್ದರೆ ಅವುಗಳನ್ನು ಆದ್ಯತೆ ಮೇರೆಗೆ ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುವುದು ಎಂದು ನ್ಯಾಯಮೂರ್ತಿ ವೀರಪ್ಪ ಅವರು ತಿಳಿಸಿದ್ದಾರೆ.
ಬ್ಯಾರಕ್ ಗಳಿಗ, ಅಡುಗೆ ಮನೆಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದ ತಂಡ ಕೈದಿಗಳೊಂದಿಗೆ ಸಂವಾದ ನಡೆಸಿತು. ಈ ಸಂದರ್ಭದಲ್ಲಿ ನ್ಯಾಯಮೂರ್ತಿಗಳು ಕೈದಿಗಳಿಗೆ ಲಭ್ಯವಿರುವ ಹಕ್ಕುಗಳು, ಕಾನೂನು ಸೇವಾ ಪ್ರಾಧಿಕಾರದಿಂದ ಹೇಗೆ ನೆರವು ಪಡೆದುಕೊಳ್ಳಬಹುದೆಂಬ ಬಗ್ಗೆ ವಿವರಿಸಿದ್ದಾರೆ.

ಈ ಸಂದರ್ಭದಲ್ಲಿ ನ್ಯಾ. ಪಿ. ಎಸ್. ದಿನೇಶ್ ಕುಮಾರ್, ಹೈಕೋರ್ಟ್ ರಿಜಿಸ್ಟರ್ ಜನರಲ್ ಶಿವ ಶಂಕರೇಗೌಡ, ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್ ಶಶಿಧರ್ ಶೆಟ್ಟಿ ಹಾಗೂ ಇನ್ನಿತರರು ಪರಿಶೀಲನಾ ತಂಡದಲ್ಲಿ ಉಪಸ್ಥಿತರಿದ್ದರು.

ಭ್ರಷ್ಟಾಚಾರ ಮತ್ತು ವೈಫಲ್ಯ ಇಷ್ಟೆ ಬೋಮ್ಮಾಯಿ ಸರ್ಕಾರದ ಸಾಧನೆ-ಸಿದ್ಧು

0

ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಅವರು ಬೊಮ್ಮಾಯಿ ನೇತೃತ್ವದ ಸರ್ಕಾರದ ಸಾಧನೆ ಎಂದರೆ ಭ್ರಷ್ಟಾಚಾರ ಮತ್ತು ವೈಫಲ್ಯ. ಸಿಎಂ ಬದಲಾಗಿದ್ದಾರೆ ಹೊರತು ಸರ್ಕಾರ ಬದಲಾಗಿಲ್ಲ ಭ್ರಷ್ಟಾಚಾರ ನಿಂತಿಲ್ಲ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

“ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಐದು ವರ್ಷದಲ್ಲಿ ನೀರಾವರಿಗಾಗಿ 1.50 ಲಕ್ಷ ಕೋಟಿ ರೂ ವೆಚ್ಚ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಘೋಷಿಸಿತ್ತು. ವರ್ಷಕ್ಕೆ ಕನಿಷ್ಠ 30,000 ಕೋಟಿ ರೂ ಖರ್ಚು ಮಾಡಬೇಕಿತ್ತು. ಆದರೆ ಈ ಸರ್ಕಾರ ಖರ್ಚು ಮಾಡಿರುವುದು 6,300 ಕೋಟಿ ರೂ ಮಾತ್ರ. ಗಂಗಾ ಕಲ್ಯಾಣ ಯೋಜನೆಗೆ ಕೇವಲ 30 ಕೋಟಿ ರೂ ನೀಡಲಾಗಿದೆ. ಬಜೆಟ್ ಗಾತ್ರ ಹೆಚ್ಚಾದಂತೆ ಎಸ್ ಸಿ ಪಿ-ಟಿ ಎಸ್ ಪಿ ಅನುದಾನವೂ ಹೆಚ್ಚಾಗಬೇಕು ಆದರೆ ಅನುದಾನ ಕಡಿಮೆ ಮಾಡಿರುವುದು ದಲಿತರಿಗೆ ಮಾಡಿರುವ ದ್ರೋಹ” ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

“ಸರ್ಕಾರ ತನ್ನ ಜಾಹೀರಾತಿನಲ್ಲಿ ಹೈದರಾಬಾದ್-ಕರ್ನಾಟಕ ಅಭಿವೃದ್ಧಿಗೆ 3000 ಕೋಟಿ ರೂ ವೆಚ್ಚ ಮಾಡುವುದಾಗಿ ಹೇಳಿದ್ದು ಈವರೆಗೆ ಬಿಡುಗಡೆ ಯಾಗಿರುವುದು 1200 ಕೋಟಿ ರೂ ಕೊರೋನಾ ಪರಿಸ್ಥಿತಿ ನಿಯಂತ್ರಣದಲ್ಲಿ ಎಡವಿದೆ. ಕೋವಿಡ್ ಸಾವಿನ ಸಂಖ್ಯೆಯನ್ನು ಸುಳ್ಳು ಮಾಹಿತಿ ನೀಡಿದೆ” ಎಂದು ಹೆಚ್.ಕೆ ಪಾಟೀಲ್ ಅವರು ಸರ್ಕಾರದ ವಿರುದ್ಧ ಹರಿಹಾಯ್ದರು.

ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು “ಜೆಡಿಎಸ್ ನಲ್ಲಿ ಇದ್ದಾಗಿನಿಂದಲೂ ಜೊತೆಗಿದ್ದವರು ಹಾಗಾಗಿ ಅವರು ಪಕ್ಷ ಬಿಡುವುದಿಲ್ಲ. ಸದ್ಯ ಪಕ್ಷದ ಮೇಲೆ ಕೋಪ ಬಂದಿದೆ. ಹಾಗಾಗಿ ಆ ರೀತಿ ಮಾತನಾಡಿದ್ದಾರೆ. ಅವರ ಕೋಪ ಕಡಿಮೆಯಾದ ಮೇಲೆ ನಾನು ಹೋಗಿ ಮಾತನಾಡುತ್ತೇನೆ. ಇಬ್ರಾಹಿಂ ಜೊತೆಗೆ ನಜೀರ್ ಅಹಮದ್ ಕೂಡ ಪರಿಷತ್ ಪ್ರತಿಪಕ್ಷ ನಾಯಕ ಸ್ಥಾನದ ಆಕಾಂಕ್ಷಿಯಾಗಿದ್ದರು. ಎಲ್ಲಾ ಆಕಾಂಕ್ಷಿಗಳಿಗೆ ಅವಕಾಶ ನೀಡಲು ಸಾಧ್ಯವೇ?” ಎಂದು ತಿಳಿಸಿದ್ದಾರೆ.

“ಈ ಸರ್ಕಾರದ ಸಾಧನೆಯೆಂದರೆ ಭ್ರಷ್ಟಾಚಾರ. ಗುತ್ತಿಗೆದಾರರ ಸಂಘವು ಪ್ರಧಾನಿಗಳಿಗೆ ಪತ್ರ ಬರೆದರೂ ಚೌಕಿದಾರ್ ಎಂದು ಕರೆದುಕೊಳ್ಳುವ ಮೋದಿ ಸುಮ್ಮನಿದ್ದಾರೆ” ಎಂದು ಹೆಚ್ ಕೆ ಪಾಟೀಲ್ ಕುಟುಕಿದ್ದಾರೆ.

ಪೆಗಾಸಸ್ ಮತ್ತೆ ವಿಪಕ್ಷಗಳ ಅಸ್ತ್ರ

0

ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಪ್ರಚಾರ ಅಬ್ಬರ ತಾರಕ ತಲುಪಿರುವ ನಡುವೆಯೇ ಇದುವರೆಗೆ ಬೂದಿಮುಚ್ಚಿದ ಕೆಂಡದಂತಿದ್ದ ಪೆಗಾಸಸ್ ಸ್ಟೈವೇರ್ ಹಗರಣ ಮತ್ತೆ ಮುನ್ನಲೆಗೆ ಬಂದಿದೆ.

2017ರಲ್ಲಿ ಭಾರತ – ಇಸ್ರೇಲ್ ಬೃಹತ್ 200 ಕೋಟಿ ಡಾಲರ್ ಮೊತ್ತದ ಒಪ್ಪಂದ ಕುದುರಿದೆ. ಅದರ ಕೇಂದ್ರ ಬಿಂದು ಪೆಗಾಸಸ್ ಸ್ಟೈ ವೇರ್ ಮತ್ತು ಕ್ಷಿಪಣಿ ವ್ಯವಸ್ಥೆ ಖರೀದಿ ಒಡಂಬಡಿಕೆ ಎಂದು ಅಮೆರಿಕದ ದಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿರುವುದು ವಿವಾದ ಮತ್ತೊಮ್ಮೆ ಜೀವ ಪಡೆಯಲು ಕಾರಣವಾಗಿದೆ.

ಇಸ್ರೇಲ್ ನ ಎನ್ಎಸ್ಒ ಗ್ರೂಪ್ ತಯಾರಿಸಿ ಮಾರಾಟ ಮಾಡಿರುವ ಪೆಗಾಸಸ್ ಬೇಹುಗಾರಿಕೆ ಸಾಫ್ಟ್ವೇರ್, ಭಾರತ ಸೇರಿದಂತೆ ಹಲವು ದೇಶಗಳಲ್ಲಿ ವಿವಾದಕ್ಕೆ ಇದು ಕಾರಣವಾಗಿದೆ. ಪತ್ರಕರ್ತರು, ಮಾನವ ಹಕ್ಕುಗಳ ಹೋರಾಟಗಾರರು, ರಾಜಕಾರಣಿಗಳು ಸೇರಿದಂತೆ ಹಲವು ಕ್ಷೇತ್ರಗಳ ಗಣ್ಯರ ವಿರುದ್ಧ ಇಸ್ರೇಲ್ ನ ಈ ಸ್ಟೈ ವೇರ್ ಅನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಂಡಿದೆ ಎನ್ನುವ ಆರೋಪ ಕೇಳಿಬರುತ್ತಿದೆ. ಈ ಪ್ರಕರಣವನ್ನು ಕಳೆದ ವರ್ಷ ದೊಡ್ಡ ರಾದ್ಧಾಂತಕ್ಕೆ ಕಾರಣವಾಗಿತ್ತು. ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಿ ಸತ್ಯಾಸತ್ಯತೆಯ ತನಿಖೆಗೆ ಸಮಿತಿ ರಚನೆ ಮಾಡಿದೆ.

ಈ ಸ್ಟೈ ವೇರ್ ಅನ್ನು ಕೇಂದ್ರ ಸರ್ಕಾರ ಖರೀದಿಸಿ ದುರ್ಬಳಕೆ ಮಾಡಿರುವುದು ಸತ್ಯಶೋಧ ನಡೆಯುತ್ತಿರುವಾಗಲೇ, ಅಮೆರಿಕದ ಪತ್ರಿಕೆ ವರದಿ ಪ್ರಕಟಿಸಿದೆ. ಭಾರತ ಮತ್ತು ಇಸ್ರೇಲ್ ನಡುವೆ ಪೆಗಾಸಸ್ ಖರೀದಿ ಒಪ್ಪಂದ ನಡೆದಿರುವುದು ನಿಜ ಎಂದು ತಿಳಿಸಿದೆ. ದಿ ಬೆಟಲ್ ಫಾರ್ ದ ವರ್ಲ್ಡ್ ಮೋಸ್ಟ್ ಪವರ್ಫುಲ್ ಸೈಬರ್ ವೆಪನ್ ಎಂಬ ಶೀರ್ಷಿಕೆ ಅಡಿ ವರದಿ ಪ್ರಕಟಗೊಂಡಿದೆ.

ಎನ್ಎಸ್ಒ ಸುಮಾರು ಒಂದು ದಶಕದಿಂದ ತನ್ನ ಬೇಹುಗಾರಿಕೆ ಸಾಫ್ಟ್ವೇರ್ ಅನ್ನು ವಿವಿಧ ದೇಶಗಳಿಗೆ ಮಾರಾಟ ಮಾಡುತ್ತ ಬಂದಿದೆ. ಯಾರಿಂದಲೂ ಸಾಧ್ಯವಾಗದ ಕೆಲಸವನ್ನು ತನ್ನ ಸ್ಟೈ ವೇರ್ ಮಾಡುತ್ತದೆ ಎಂದು ಪುಸಲಾಯಿಸಿ ಸರ್ಕಾರಗಳ ಬೇಹುಗಾರಿಕೆ ಸೇವಾ ಸಂಸ್ಥೆಗಳಿಗೂ ಸಹ ಅದನ್ನು ಮಾರಾಟ ಮಾಡಲಾಗುತ್ತಿದೆ. ಐಫೋನ್ ಅಥವಾ ಅಂಡ್ರಾಯ್ಡ್ ಸ್ಮಾರ್ಟ್ಫೋನ್ ಯಾವುದಿದ್ದರೂ ಸರಿ, ಸಮರ್ಥವಾಗಿ ಭೇದಿಸಿ ಮಾಹಿತಿ ಕಲೆಹಾಕಿ ಎಂದು ಎನ್ಎಸ್ಒ ತನ್ನ ಸ್ಟೈ ವೇರ್ ಬಗ್ಗೆ ಹೇಳಿಕೊಂಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಪ್ಯಾಲೆಸ್ತಿನ್ ವಿಚಾರದಲ್ಲಿ ಇಸ್ರೇಲ್ ಪರ ಒಲವು ಹೊಂದಿರುವ ಭಾರತ, ಸದಾ ಸಮತೋಲನ ಕಾಯ್ದುಕೊಳ್ಳುವ ಸರ್ಕಸ್ ಮಾಡುತ್ತ ಬಂದಿದೆ. 2017ರಲ್ಲಿ ಇದೇ ವಿಷಯವನ್ನು ಮುನ್ನೆಲೆಯಲ್ಲಿ ತೋರಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್ ಗೆ ಭೇಟಿ ನೀಡಿದ್ದರು. ಅಂದಿನ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಮೋದಿ ಬೀಚ್ ನಲ್ಲಿ ಬರಿಗಾಲಿನಿಂದ ನಡೆದದ್ದು ಸುದ್ದಿಯಾಗಿತ್ತು. ಇದೆಲ್ಲವೂ ಒಪ್ಪಂದದ ಮುಸುಕಿನಲ್ಲಿ ನಡೆದ ವ್ಯವಸ್ಥಿತ ತಂತ್ರಗಾರಿಕೆ ಯಾಗಿತ್ತು ಎಂದು ವರದಿಯಲ್ಲಿ ತಿಳಿಸಲಾಗಿದೆ.

200 ಕೋಟಿ ಡಾಲರ್ ಮೊತ್ತದ ಪೆಗಾಸಸ್ ಹಾಗೂ ಕ್ಷಿಪಣಿ ವ್ಯವಸ್ಥೆ ಖರೀದಿ ಒಪ್ಪಂದವನ್ನು ಇಬ್ಬರು ಗಣ್ಯರ ಭೇಟಿಯ ಒಳಮರ್ಮ ವಾಗಿತ್ತು. ಒಪ್ಪಂದದ ನಂತರ 2019ರಲ್ಲಿ ಇಸ್ರೇಲ್ ಪ್ರಧಾನಿ ನೇತನ್ಯಾಹು ಭಾರತಕ್ಕೆ ಅಪರೂಪದ ಭೇಟಿ ನೀಡಿದ್ದರು. ಇವರ ಕೊಡು-ಕೊಳ್ಳುವ ವ್ಯವಹಾರದ ಭಾಗವಾಗಿಯೇ ವಿಶ್ವಸಂಸ್ಥೆ ಆರ್ಥಿಕ ಮತ್ತು ಸಾಮಾಜಿಕ ಮಂಡಳಿ ಸಭೆಯಲ್ಲಿ ಪ್ಯಾಲೆಸ್ತೀನ್ ವಿಷಯ ಪ್ರಸ್ತಾಪವಾದಾಗ ಭಾರತವು ಇಸ್ರೇಲ್ ಪರ ಮತ ಹಾಕಿತ್ತು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಗ್ರಾಮ ಒನ್ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ವಿಸ್ತರಣೆ

0

ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಫೆಬ್ರವರಿ ತಿಂಗಳ ಅಂತ್ಯದೊಳಗೆ ‘ಗ್ರಾಮ ಒನ್’ ವಿಸ್ತರಿಸಲು ಆದೇಶಿಸಿರುವ ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಅಗತ್ಯವಿರುವ ಮೂಲ ಸೌಕರ್ಯ ಒದಗಿಸಲು ಸಂಬಂಧಿಸಿದ ಇಲಾಖೆಗೆ ಸೂಚಿಸಿದ್ದಾರೆ.

ಅರ್ಜಿ ಸ್ವೀಕೃತಿ ಸೇವೆಯನ್ನು ಗ್ರಾಮ ಒನ್ ನಿರ್ವಹಿಸಬೇಕು. ಗ್ರಾಮ ಒನ್ ನಿಂದ ಸ್ವೀಕರಿಸಲಾದ ಅರ್ಜಿಗಳ ವಿಲೇವಾರಿ ಕೆಲಸವನ್ನು ‘ ಅಟಲ್ ಜನಸ್ನೇಹಿ ಕೇಂದ್ರ’ ಗಳು ನಿರ್ಮಿಸಬೇಕು. ಅದಕ್ಕಾಗಿ ಅಗತ್ಯ ಕಂಪ್ಯೂಟರ್ ಮತ್ತು ಮೂಲಸೌಕರ್ಯ ಕಲ್ಪಿಸಲು ಇ-ಆಡಳಿತ ಇಲಾಖೆ ಮೇಲುಸ್ತುವಾರಿ ವಹಿಸಬೇಕೆಂದು ಸೂಚಿಸಲಾಗಿದೆ.

ಗ್ರಾಮ ಒನ್ ಆಪರೇಟರ್ ಗಳಿಗೆ ತಾಂತ್ರಿಕ, ಆಡಳಿತಾತ್ಮಕ ಹಾಗೂ ಕಾನೂನು ಸಮಸ್ಯೆಗಳ ಬಗ್ಗೆ ತರಬೇತಿ ನೀಡಲು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಲು ಮತ್ತು ಅಜ್ಜಿ ತಿರಸ್ಕಾರಕ್ಕೆ ಸಕಾರಣವನ್ನು ತಂತ್ರಾಂಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಬೇಕು. ಜಿಲ್ಲಾಧಿಕಾರಿಗಳು ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳು ತಿರಸ್ಕೃತ ಅರ್ಜಿಗಳನ್ನು ಪರಿಶೀಲಿಸಬೇಕು. ಒಂದು ವೇಳೆ ತಪ್ಪಾಗಿ ತಿರಸ್ಕೃತ ಮಾಡುತ್ತಿರುವ ಅಧಿಕಾರಿ ಅಥವಾ ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು. ಜೊತೆಗೆ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ನಡೆಯುವ ಎಂಪಿಕ್ ಮತ್ತು ಕೆಡಿಪಿ ಸಭೆಯಲ್ಲಿ ಪರಿಶೀಲಿಸಬೇಕು ಎಂದು ಸೂಚಿಸಲಾಗಿದೆ.

ಎಲ್ಲಾ ಆಪರೇಟರ್ ಗಳಿಗೆ ಅನ್ವಯಿಸುವಂತೆ ಇ-ಆಡಳಿತ ಇಲಾಖೆಯಿಂದ ನೀತಿ ಸಂಹಿತೆ ಪ್ರಕಟಿಸಬೇಕು. ಇದರ ಕಡ್ಡಾಯ ಪಾಲಿಗೆ ಸ್ಥಳೀಯ ಜಿಲ್ಲಾಧಿಕಾರಿಗಳು ಕ್ರಮವಹಿಸಬೇಕು. ಸೇವೆಗಳನ್ನು ವಿತರಿಸುವ ಆಡಳಿತಾತ್ಮಕ ಕಾರ್ಯವಿಧಾನ, ಕಾನೂನು ತಿಳುವಳಿಕೆ ನೀಡಬೇಕು. ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಆಪರೇಟರ್ ಗಳನ್ನು ಸಿದ್ಧಪಡಿಸಬೇಕು ಎಂದು ಮಾನ್ಯ ಮುಖ್ಯಮಂತ್ರಿ ಅವರು ತಮ್ಮ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.