Sunday, March 1, 2026
Sunday, March 1, 2026
Home Blog Page 1580

2019 ರ ನಂತರ ಖರೀದಿಸಿದ ವಾಹನಗಳಿಗೆ ಮಾತ್ರ HSRP ಕಡ್ಡಾಯ

0

ಕೇಂದ್ರ ಸಾರಿಗೆ ಇಲಾಖೆಯಿಂದ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಕಡ್ಡಾಯಗೊಳಿಸಲಾಗಿತ್ತು. ಈ ಕಾರಣಕ್ಕಾಗಿ ಅನೇಕ ವಾಹನಗಳಿಗೆ ಸಂಚಾರಿ ಪೊಲೀಸರು ದಂಡ ಕೂಡ ವಿಧಿಸುತ್ತಿದ್ದರು.

ಎಲ್ಲಾ ವಾಹನಗಳಿಗೂ ಸುರಕ್ಷತೆಯ ನೋಂದಣಿ ಫಲಕ ಕಡ್ಡಾಯವೇ ಎನ್ನುವ ಗೊಂದಲಕ್ಕೆ ಹಲವು ವಾಹನ ಸವಾರರಿದ್ದರು. ಆದರೆ ಸಾರಿಗೆ ಇಲಾಖೆಯಿಂದ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ.

ಅದೇನು ಅಂದರೆ ಏಪ್ರಿಲ್ 1, 2019ಕ್ಕಿಂತ ಮೊದಲಿನ ವಾಹನಗಳಿಗೆ ಹೈ ಸೆಕ್ಯುರಿಟಿ ನೋಂದಣಿ ಫಲಕ ಕಡ್ಡಾಯವಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದೆ. ಈ ಮೂಲಕ ವಾಹನ ಸವಾರರಿಗೆ ಸಿಹಿಸುದ್ದಿಯನ್ನು ಸಾರಿಗೆ ಇಲಾಖೆ ನೀಡಿದೆ.

ಈ ಕುರಿತಂತೆ ಸಾರಿಗೆ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ. ಏಪ್ರಿಲ್ 1, 2019ಕ್ಕೂ ಮೊದಲು ಖರೀದಿಸಿರುವಂತ ವಾಹನಗಳಿಗೆ ಎಚ್ ಎಸ್ ಆರ್ ಪಿ ಕಡ್ಡಾಯವಲ್ಲ. ಏಪ್ರಿಲ್ 1, 2019ರ ನಂತ್ರ ಖರೀದಿಸಿದಂತ ವಾಹನಗಳಿಗೆ ಕಡ್ಡಾಯವಾಗಿದೆ ಎಂಬುದಾಗಿ ಸ್ಪಷ್ಟ ಪಡಿಸಿದೆ. ಅಲ್ಲದೇ ಏಪ್ರಿಲ್ 1, 2019ಕ್ಕೂ ಮೊದಲು ಖರೀದಿಸಿದಂತ ವಾಹನಗಳಿಗೆ ಹೈ ಸೆಕ್ಯುರಿಟಿ ನೋಂದಣಿ ಫಲಕ ಅಳವಡಿಸುವಂತೆ ಒತ್ತಾಯಿಸುವಂತಿಲ್ಲ ಎಂಬುದಾಗಿಯೂ ತಿಳಿಸಿದೆ.

ಏಪ್ರಿಲ್ 1, 2019ರ ನಂತರ ಖರೀದಿಸಿದಂತ ವಾಹನಗಳಿಗೆ ಮಾತ್ರವೇ ಎಚ್ ಎಸ್ ಆರ್ ಪಿ ಕಡ್ಡಾಯವಾಗಿದೆ. ಅದಕ್ಕೂ ಮೊದಲಿನ ವಾಹನಗಳಿಗೆ ಕಡ್ಡಾಯವಲ್ಲ. ಬೆಂಗಳೂರಿನಲ್ಲಿ ಏಪ್ರಿಲ್ 1, 2019ಕ್ಕೂ ಮೊದಲು ಖರೀದಿಸಿದಂತ ಸುಮಾರು 1.75 ಕೋಟಿಗೂ ಹೆಚ್ಚು ವಾಹನಗಳಿವೆ ಎಂಬುದಾಗಿಯೂ ತಿಳಿಸಿದೆ. ಈ ಮೂಲಕ ಸಂಚಾರಿ ಪೊಲೀಸರಿಂದ ಇಂತಹ ವಾಹನ ಸವಾರರಿಗೆ ಉಂಟಾಗುತ್ತಿದ್ದಂತ ಕಿರಿಕಿರಿಯನ್ನು ಸಾರಿಗೆ ಇಲಾಖೆ ತಪ್ಪಿಸಿದೆ.

ಕ್ರಿಕೆಟ್ ಪಟು ಆಸ್ಟ್ರೇಲಿಯಾದ ಸೈಮಂಡ್ಸ್ ಅಫಘಾತದಲ್ಲಿ ಸಾವು

0

ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಮಾಜಿ ಆಲ್‌ರೌಂಡರ್‌ ಆಯಂಡ್ರ್ಯೂ ಸೈಮಂಡ್ಸ್‌ ನಿಧನಕ್ಕೆ ಸಹ ಆಟಗಾರರು, ಅಭಿಮಾನಿಗಳು ಸೇರಿದಂತೆ ಕ್ರಿಕೆಟ್‌ ಜಗತ್ತು ತೀವ್ರ ಆಘಾತ ವ್ಯಕ್ತಪಡಿಸಿದೆ. ಅಗಲಿದ ಮೆಚ್ಚಿನ ಆಟಗಾರನನ್ನು ನೆನೆದು ಸಂತಾಪ ವ್ಯಕ್ತಪಡಿಸಿದ್ದಾರೆ.

ಟೌನ್ಸ್‌ವಿಲ್ಲೆ ನಗರದ ಹೊರವಲಯದಲ್ಲಿ ಶನಿವಾರ ರಾತ್ರಿ ಸಂಭವಿಸಿದ ಕಾರು ಅಪಘಾತದಲ್ಲಿ ಸೈಮಂಡ್ಸ್‌ ಮೃತಪಟ್ಟಿದ್ದಾರೆ.

ಇದು ನಿಜಕ್ಕೂ ಅತೀವ ನೋವನ್ನುಂಟು ಮಾಡಿದ ಸಂಗತಿ. ಅತ್ಯಂತ ಪ್ರಾಮಾಣಿಕ, ಹಾಸ್ಯಪ್ರಿಯ, ಪ್ರೀತಿಸುವ ಸ್ನೇಹಿತ, ನಿಮಗಾಗಿ ಏನು ಬೇಕಿದ್ದರೂ ಮಾಡಲು ಸಿದ್ಧನಿದ್ದವನ ಬಗ್ಗೆ ಯೋಚಿಸಿ. ಅದು ರಾಯ್‌’ ಎಂದು ಸೈಮಂಡ್ಸ್‌ ಅವರ ಜೊತೆಯಾಟಗಾರ, ಆಸಿಸ್‌ ತಂಡದ ಮಾಜಿ ನಾಯಕ ಆಯಡಂ ಗಿಲ್‌ಕ್ರಿಸ್ಟ್‌ ಭಾವುಕರಾಗಿ ಟ್ವೀಟ್‌ ಮಾಡಿದ್ದಾರೆ.
ಅತ್ಯಂತ ಆಘಾತಕಾರಿ. ನಾವೆಲ್ಲರೂ ನಿನ್ನನ್ನು ಮಿಸ್‌ ಮಾಡಿಕೊಳ್ಳುತ್ತಿದ್ದೇವೆ ಸ್ನೇಹಿತ ಎಂದು ಜೇಸನ್‌ ಗಿಲೆಸ್ಪಿ ಟ್ವೀಟ್‌ ಮಾಡಿದ್ದಾರೆ.

ಕ್ವೀನ್ಸ್‌ಲ್ಯಾಂಡ್‌ನ ಪ್ರೀತಿಯ ಆಟಗಾರ ಆಯಂಡ್ರ್ಯೂ ಸೈಮಂಡ್ಸ್‌ ಅವರು 46ನೇ ವರ್ಷಕ್ಕೆ ಅಪಘಾತದಲ್ಲಿ ನಿಧನರಾಗಿದ್ದು ಅತ್ಯಂತ ಆಘಾತ ಮತ್ತು ನೋವನ್ನುಂಟು ಮಾಡಿದೆ ಎಂದು ಕ್ರಿಕೆಟ್‌ ಆಸ್ಟ್ರೇಲಿಯಾ ಸಂತಾಪ ಸೂಚಿಸಿದೆ.

ಕಾರು ಅಪಘಾತದಲ್ಲಿ ಆಯಂಡ್ರ್ಯೂ ಸೈಮಂಡ್ಸ್‌ ಅವರು ನಿಧನರಾದರು ಎಂಬ ಸುದ್ದಿಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಂಗಣದೊಳಗೆ ಮತ್ತು ಹೊರಗೆ ನಾವು ಉತ್ತಮ ಸಂಬಂಧವನ್ನು ಹೊಂದಿದ್ದೆವು. ಅವರ ಕುಟುಂಬದ ಪರವಾಗಿ ಪ್ರಾರ್ಥಿಸುತ್ತೇನೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯಬ್‌ ಅಕ್ತರ್‌ ಹೇಳಿದ್ದಾರೆ.

ಬೆಳಗ್ಗೆಯೇ ಆಘಾತಕಾರಿ ಸುದ್ದಿ ಎದುರಾಗಿದೆ. ನನ್ನ ಆತ್ಮೀಯ ಗೆಳಯನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ವಿವಿಎಸ್‌ ಲಕ್ಷ್ಮಣ್‌ ಟ್ವೀಟ್‌ ಮಾಡಿದ್ದಾರೆ.

ಶೀಘ್ರದಲ್ಲೇ ಮತದಾರರ ಕಾರ್ಡ್ ಜೊತೆ ಆಧಾರ್ ಜೋಡಣೆ

0

ಆಧಾರ್ ಕಾರ್ಡ್ ಇಂದು ಸರ್ಕಾರಿ ಸೇವೆಗಳು ಸೇರಿದಂತೆ ಅನೇಕ ಸೇವೆಗಳಿಗೆ ಕಡ್ಡಾಯವಾಗಿದೆ. ಪಾನ್ ಕಾರ್ಡ್, ಬ್ಯಾಂಕ್ ಖಾತೆ ಸೇರಿದಂತೆ ಹಲವು ಸೇವೆಗಳಿಗೆ ಆಧಾರ್ ಜೋಡಣೆ ಮಾಡುವುದು ಕಡ್ಡಾಯವಾಗಿದೆ.

ಪ್ರಸ್ತುತ ಆಧಾರ್ ಜೋಡಣೆ ಕುರಿತಂತೆ ಇನ್ನೊಂದು ಮಹತ್ವದ ತೀರ್ಮಾನ ಕೈಗೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಮತದಾರರ ಗುರುತಿನ ಚೀಟಿ ಜೊತೆ ಆಧಾರ್ ಜೋಡಣೆ ಮಾಡಲು ನಿರ್ಧರಿಸಲಾಗಿದೆ.

ಕೇಂದ್ರ ಚುನಾವಣಾ ಆಯೋಗದ ಆಯುಕ್ತ ಸುಶೀಲ್ ಚಂದ್ರ ಈ ಮಾಹಿತಿಯನ್ನು ನೀಡಿದ್ದಾರೆ. ಶೀಘ್ರದಲ್ಲಿಯೇ ಸರ್ಕಾರ ಈ ಕುರಿತು ನಿಯಮಗಳನ್ನು ಪ್ರಕಟಿಸಲಿದೆ ಎಂದು ತಿಳಿಸಿದ್ದಾರೆ.

ಆದರೆ, ಮತದಾರರ ಗುರುತಿನ ಚೀಟಿಗೆ ಆಧಾರ್ ಜೋಡಣೆ ಮಾಡುವುದು ಮತದಾರರ ವಿವೇಚನೆಗೆ ಬಿಡಲಾಗಿದೆ. ಒಂದೊಮ್ಮೆ ಜೋಡಣೆ ಮಾಡಲು ನಿರಾಕರಿಸಿದರೆ ಅದಕ್ಕೆ ಸೂಕ್ತ ಕಾರಣಗಳನ್ನು ನೀಡಬೇಕಾಗುತ್ತದೆ ಎಂದು ಹೇಳಿದ್ದಾರೆ.

ಥಾಮಸ್ ಕಪ್ ಪುರುಷರ ಬ್ಯಾಡ್ಮಿಂಟನ್ ಫೈನಲ್ಸ್ ಗೆ ಭಾರತ

0

ಥಾಮಸ್ ಕಪ್‌ನಲ್ಲಿ ಭಾರತ ತಂಡ ಐತಿಹಾಸಿಕ ಸಾಧನೆ ಮಾಡಿದೆ. ಭಾರತೀಯ ಪುರುಷರ ಬ್ಯಾಡ್ಮಿಂಟನ್ ತಂಡ ಇದೇ ಪ್ರಥಮ ಬಾರಿಗೆ ಥಾಮಸ್ ಕಪ್‌ನಲ್ಲಿ ಫೈನಲ್ ಹಂತಕ್ಕೇರಿದ ಸಾಧನೆ ಮಾಡಿದೆ.

ಸೆಮಿಫೈನಲ್‌ನಲ್ಲಿ ಡೆನ್ಮಾರ್ಕ್ ವಿರುದ್ಧ 3-2 ಅಂತರದಲ್ಲಿ ಜಯಗಳಿಸುವ ಮೂಲಕ ಇತಿಹಾಸವನ್ನು ಸೃಷ್ಟಿಸಿದೆ.

ಫೈನಲ್‌ನಲ್ಲಿ ಭಾರತ ತಂಡಕ್ಕೆ ಇಂಡೋನೇಷ್ಯಾ ಸವಾಲೊಡ್ಡಲಿದೆ.

ಭಾರತ 1979ರ ನಂತರ ಥಾಮಸ್ ಕಪ್‌ನ ಸೆಮಿ ಫೈನಲ್ ಹಂತಕ್ಕೇರಲು ವಿಫಲವಾಗಿತ್ತು. ಈ ಬಾರಿ ಅದನ್ನು ಮೀರಿದ ಸಾಧನೆ ಭಾರತ ಮಾಡುವಲ್ಲಿ ಯಶಸ್ವಿಯಾಗಿದೆ. 2016ರ ಚಾಂಪಿಯನ್ ತಂಡ ಡೆನ್ಮಾರ್ಕ್ ವಿರುದ್ಧ ಭಾರತ ಗೆಲುವು ದಾಖಲಿಸಲು ಯಶಸ್ವಿಯಾಯಿತು.

ವಿಶ್ವ ಚಾಂಪಿಯನ್‌ಶಿಪ್‌ನ ಬೆಳ್ಳಿ ಪದಕ ವಿಜೇತ ಕಿಡಂಬಿ ಶ್ರೀಕಾಂತ್ ಮತ್ತು ವಿಶ್ವದ 8 ನೇ ಶ್ರೇಯಾಂಕದ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಗೆಲುವಿನ ಮೂಲಕ ಸ್ಪರ್ಧೆಯಲ್ಲಿ ಮುಂದುವರಿಯುವಂತೆ ಮಾಡಿದ್ದರು.

2-2 ಅಂತರದಿಂದ ಹಣಾಹಣಿ ಸಮಬಲಗೊಂಡಿದ್ದಾಗ ಮತ್ತೊಮ್ಮೆ ಪ್ರಣಯ್ ಪಾತ್ರ ನಿರ್ಣಾಯಕವಾಗಿತ್ತು. ವಿಶ್ವದ 13 ನೇ ಶ್ರೇಯಾಂಕದ ರಾಸ್ಮಸ್ ಗೆಮ್ಕೆ ವಿರುದ್ಧ ನಿರ್ಣಾಯಕ ಹೋರಾಟದಲ್ಲಿ ಕಣಕ್ಕಿಳಿದ ಪ್ರಣಯ್ ಈ ಪಂದ್ಯದಲ್ಲಿ ಪಾದದ ಗಾಯಕ್ಕೆ ತುತ್ತಾದರು. ನಂತರ ಚಿಕಿತ್ಸೆ ಪಡೆದು ಆಟವನ್ನು ಮುಂದುವರಿಸಿದ ಪ್ರಣಯ್ ಭಾರತಕ್ಕೆ ಗೆಲುವನ್ನು ತಂದಿತ್ತರು. 13-21 21-9 21-12 ಅಂತರದಿಂದ ರಾಸ್ಮಸ್ ಗೆಮ್ಕೆ ವಿರುದ್ಧ ಪ್ರಣಯ್ ಗೆಲುವು ಸಾಧಿಸಿ 3-2 ಅಂತರದಿಂದ ಗೆಲುವು ಸಾಧಿಸಿ ಫೈನಲ್ ಹಂತಕ್ಕೇರುವಲ್ಲಿ ಪ್ರಮುಖ ಪಾತ್ರವಹಿಸಿದರು.

ಈ ಪಂದ್ಯದ ನಂತರ ಮಾತನಾಡಿದ ಪ್ರಣಯ್ ನನ್ನ ತಲೆಯಲ್ಲಿ ಬಹಳಷ್ಟು ಸಂಗತಿಗಳು ಓಡಾಡುತ್ತಿತ್ತು. ಅದರಲ್ಲೂ ಪಾದ ಉಳುಕಿದ ಸಾಮಾನ್ಯಕ್ಕಿಂತ ಹೆಚ್ಚು ನೋಯುತ್ತಿತ್ತು. ಆದ್ದರಿಂದ, ಸ್ವಲ್ಪ ಹಿನ್ನಡೆಯಾಯಿತು. ಈ ಸಂದರ್ಭದಲ್ಲಿ ನಾನು ಏನು ಮಾಡಬೇಕೆಂದು ಯೋಚಿಸುತ್ತಿದ್ದೆ ಎಂದು ಪಂದ್ಯದ ನಂತರ ಮಾತನಾಡಿದ್ದಾರೆ.

ಫೈನಲ್ ಹಂತದಲ್ಲಿ ಭಾರತಕ್ಕೆ ಮತ್ತಷ್ಟು ಬಲಿಷ್ಠ ಸವಾಲು ಎದುರಾಗಿದೆ. 14 ಬಾರಿಯ ಚಾಂಪಿಯನ್ ತಂಡ ಇಂಡೋನೇಷ್ಯಾ ಭಾರತಕ್ಕೆ ಸವಾಲೊಡ್ಡಲಿದೆ. ಥಾಮಸ್ ಕಪ್‌ನಲ್ಲಿ ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿರುವ ಇಂಡೋನೇಷ್ಯಾ ಸೆಮಿಫೈನಲ್‌ನಲ್ಲಿ ಜಪಾನ್ ತಂಡವನ್ನು 3-2 ಅಂತರದಿಂದ ಮಣಿಸಿ ಫೈನಲ್ ಹಂತಕ್ಕೇರಿದೆ.

ಹುಬ್ಬಳ್ಳಿಯಲ್ಲಿ ಭಗವದ್ಗೀತ ಕಲಾಲೋಕ ನಿರ್ಮಾಣ

0

ಆಕಾಶದಷ್ಟು ಎತ್ತರಕ್ಕೆ ಕಾಣುವ ಕಟ್ಟಡ. ಒಳಗೆ ಹೋದರೆ ನಿಸರ್ಗ ಸೌಂದರ್ಯ. ಹಾಗೆ ಮುಂದೆ ನಡೆದರೆ, ಆಧ್ಯಾತ್ಮಿಕ ಜೀವನಕ್ಕೆ ಅಗತ್ಯವಾದ ಚಿತ್ರಣಗಳು. ಇದೆಲ್ಲದಕ್ಕೂ ಸಾಕ್ಷಿಯಾಗಿರುವುದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ನಿರ್ಮಾಣ ಮಾಡಿರುವ ಜ್ಞಾನಲೋಕ ಮ್ಯೂಸಿಯಂ ಅಥವಾ ಭಗವದ್ಗೀತಾ ಜ್ಞಾನ ದಿವ್ಯಕಲಾಲೋಕ.

ಇಷ್ಟು ದಿನ ವಾಣಿಜ್ಯನಗರಿಯಾಗಿ ಬಿಂಬಿತವಾಗಿದ್ದ ಹುಬ್ಬಳ್ಳಿ ಇನ್ಮುಂದೆ ಧಾರ್ಮಿಕ ಹಾಗೂ ಆಧ್ಯಾತ್ಮಿಕ ನಗರವಾಗಿ ಹೊರಹೊಮ್ಮಲಿದೆ. ಇಲ್ಲಿನ ಬೈರಿದೇವರಕೊಪ್ಪದ ಗಾಮನಗಟ್ಟಿ ರಸ್ತೆಯಲ್ಲಿ ನಿರ್ಮಾಣಗೊಂಡಿರುವ ಈ ಮ್ಯೂಸಿಯಂ ಏಷ್ಯಾದಲ್ಲಿಯೇ ಅತಿದೊಡ್ಡ ಮ್ಯೂಸಿಯಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಸುಮಾರು 5 ಎಕರೆ ಪ್ರದೇಶದಲ್ಲಿ ಈ ಮ್ಯೂಸಿಯಂ ನಿರ್ಮಾಣ ಮಾಡಲಾಗಿದೆ. ಭಗವದ್ಗೀತೆ ಹಾಗೂ ಜನರಿಗೆ ಆಧ್ಯಾತ್ಮಿಕ ಮೌಲ್ಯಗಳನ್ನು ಪರಿಚಯಿಸುವ ಸದುದ್ದೇಶದಿಂದ ಇಂತಹದೊಂದು ಮ್ಯೂಸಿಯಂ ಅನ್ನು ನಿರ್ಮಾಣ ಮಾಡಿದ್ದಾರೆ. ಸುಮಾರು 108 ಸ್ಟಾಲ್ ಮೂಲಕ ಭಗವದ್ಗೀತೆಯ ಸಾರವನ್ನು ಸಾರ್ವಜನಿಕರಿಗೆ ಅರ್ಥೈಸುವ ನಿಟ್ಟಿನಲ್ಲಿ ಮ್ಯೂಸಿಯಂ ನಿರ್ಮಾಣಗೊಂಡಿದೆ. ಇಂದು ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಈ ಮ್ಯೂಸಿಯಂ ಅನ್ನು ಉದ್ಘಾಟನೆ ಮಾಡುವ ಮುಖಾಂತರ ಸಾರ್ವಜನಿಕರ ಪ್ರವೇಶಕ್ಕೆ ಅನುವು ಮಾಡಿಕೊಡಲಾಗುತ್ತದೆ.

ಅತ್ಯಾಚಾರ &ಕೊಲೆಗಳಲ್ಲಿ ಡಿಎನ್ಎ ಒಂದೇ ಪ್ರಮುಖ ಸಾಕ್ಷ್ಯವಲ್ಲ

0

ಅತ್ಯಾಚಾರ ಹಾಗೂ ಕೊಲೆ ಅಪರಾಧದ ವಿಚಾರಣೆಯಲ್ಲಿ ಡಿಎನ್‌ಎ ಪರೀಕ್ಷೆಯೇ ಪ್ರಮುಖ ಅಂಶವಲ್ಲ. ಬೇರೆ ಸಾಕ್ಷ್ಯಗಳ ಆಧಾರದ ಮೇಲೂ ಕೂಡ ತೀರ್ಪನ್ನು ನೀಡಬಹುದು ಎಂದು ಸುಪ್ರೀಂ ಕೋರ್ಟ್‌ ಮಾಹಿತಿ ತಿಳಿಸಿದೆ.

ಒಬ್ಬ ವ್ಯಕ್ತಿ 8 ವರ್ಷದ ಬಾಲಕಿಯ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದ.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಧ್ಯಪ್ರದೇಶದ ಹೈಕೊರ್ಟ್‌ ಅಪರಾಧಿಗೆ ಮರಣ ದಂಡನೆ ವಿಧಿಸಿತ್ತು. ಅಪರಾಧಿ ಪರ ವಾದ ಮಂಡಿಸಿದ ವಕೀಲರು ಮೃತ ದೇಹದ ಮೇಲೆ ಯಾವುದೇ ರೀತಿಯ ಡಿಎನ್‌ಎ ಟೆಸ್ಟ್‌ ನಡೆಸಿಲ್ಲ ಅಂತ ವಾದಿಸಿದ್ದರು.

ಈ ಹಿನ್ನಲೆಯಲ್ಲಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಈಗ ಕೋರ್ಟ್ ಡಿಎನ್‌ಎ ಟೆಸ್ಟ್‌ ಮಾತ್ರ ಪ್ರಮುಖ ಆಗಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

ಪಿಎಸ್ಐ ಹುದ್ದೆ ನೇಮಕಾತಿ ಪ್ರಕರಣ:ಆರೋಪಿಗಳ ಮನೆಗೆ ದಾಳಿ

0

545 ಪಿಎಸ್‌ಐ ಹುದ್ದೆಗಳ ನೇಮಕಾತಿ ಪರೀಕ್ಷೆ ಹಾಗೂ ಆಯ್ಕೆ ಪಟ್ಟಿಯಲ್ಲಿ ನಡೆದ ಅಕ್ರಮ ಪ್ರಕರಣದಲ್ಲಿ ಸಿಲುಕಿರುವ ಆರೋಪಿಗಳ ಮನೆ ಮೇಲೆ ಸಿಐಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಮನೆಯನ್ನು ಸಂಪೂರ್ಣವಾಗಿ ಹುಡುಕಲಾಗಿದೆ. ಆರೋಪಿ ಡಿವೈಎಸ್ಪಿ ಶಾಂತಕುಮಾರ್ ಅವರ ಆಡುಗೋಡಿಯ ಪೊಲೀಸ್ ಕ್ವಾರ್ಟರ್ಸ್​ನಲ್ಲಿರುವ ನಿವಾಸದ ಮೇಲೆ ಸಿಐಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಒಟ್ಟು 2 ವಾಹನಗಳಲ್ಲಿ ಶಾಂತಕುಮಾರ್ ಸಿನಿವಾಸಕ್ಕೆ ಆಗಮಿಸಿದ ಸಿಐಡಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪರಿಶೀಲನೆ ನಡೆಸುತ್ತಿದ್ದಾರೆ .

545 ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ನೇಮಕಾತಿಯಲ್ಲಿ ನಡೆದ ಅಕ್ರಮ ಪ್ರಕರಣ ಸಂಬಂಧ ಕಲಬುರಗಿ ಜಿಲ್ಲಾ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಒಡೆತನದ ಶಾಲೆ ಜ್ಞಾನಜ್ಯೋತಿ ಶಾಲೆಯ ಹೆಡ್​ಮಾಸ್ಟರ್ ಕಾಶಿನಾಥ್ ಅವರನ್ನು ಸಿಐಡಿ ಮತ್ತೆ ವಶಕ್ಕೆ ಪಡೆದಿದೆ.

ಅಕ್ರಮದಲ್ಲಿ ಸಿಲುಕಿ ಬಂಧಿತರಾಗಿರುವ ಕಲಬುರಗಿ ಜಿಲ್ಲಾ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಒಡೆತನದ ಶಾಲೆ ಇದಾಗಿದೆ.

ಇನ್ನೊಂದೆಡೆ ತಾಜ್ ಸುಲ್ತಾನ್​ಪುರ ರಸ್ತೆಯಲ್ಲಿರುವ ಕಾಶಿನಾಥ್ ನಿವಾಸದ ಮೇಲೂ ಅಧಿಕಾರಿಗಳು ದಾಳಿ ನಡೆಸಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಜ್ಞಾನ ಜ್ಯೋತಿ ಶಾಲೆಯಲ್ಲಿ ನಡೆದ ಅಕ್ರಮ ಸಂಬಂಧ ಕಾಶಿನಾಥ್ ಅವರನ್ನು ಮೇ 11 ರಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಜ್ಞಾನ ಜ್ಯೋತಿ ಶಾಲೆ ಅಲ್ಲದೆ , ಬೇರೆ ಪರೀಕ್ಷೆ ಕೇಂದ್ರದಲ್ಲಿನ ಅಕ್ರಮದಲ್ಲಿ ಕೂಡ ಭಾಗಿಯಾಗಿರುವ ಆರೋಪ ಇವರ ಮೇಲಿದೆ.

ಈ ಹಿನ್ನೆಲೆ ಸಿಐಡಿ ಅಧಿಕಾರಿಗಳು ಕಾಶಿನಾಥ್ ಅವರನ್ನು ಇಂದು ಮತ್ತೆ ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ. ಅಲ್ಲದೆ , ಕಾಶಿನಾಥ್ ಅವರನ್ನು 7 ದಿನಗಳ ವಿಚಾರಣೆಗಾಗಿ ಸಿಐಡಿ ಅಧಿಕಾರಿಗಳ ವಶಕ್ಕೆ ನೀಡಲಾಗಿದೆ.

ಉಕ್ರೇನ್ ಸಮರ: ರಷ್ಯ ದುರ್ಬಲವಾಗುತ್ತಿದೆ!

0

ರಷ್ಯಾ ಹಾಗೂ ಉಕ್ರೇನ್ ಯುದ್ಧ ಆರಂಭಗೊಂಡು ಅನೇಕ ದಿನಗಳೇ ಕಳೆದಿದೆ. ಎರಡೂ ದೇಶಗಳು ಸಮಾನವಾಗಿ ತಮ್ಮ ಶೌರ್ಯವನ್ನು ತೋರ್ಪಡಿಸಿವೆ. ಈಗಾಗಲೇ ರಾಜಧಾನಿ ಕೀವ್‌ ಮೇಲೆ ಮತ್ತೆ ನಿಯಂತ್ರಣ ಸಾಧಿಸಿರುವ ಉಕ್ರೇನ್‌ಗೆ ಇನ್ನೊಂದು ಜಯ ಸಿಕ್ಕಿದೆ.

ಉಕ್ರೇನ್‌ ಸೇನೆ ಹೇಳಿಕೊಂಡ ಪ್ರಕಾರ, ಉಕ್ರೇನಿನ 2ನೇ ಬೃಹತ್‌ ನಗರ ಖಾರ್ಕಿವ್‌ನಿಂದಲೂ ರಷ್ಯಾ ಸೇನೆ ಕಾಲ್ಕೀಳುತ್ತಿದೆ.

ಖಾರ್ಕಿವ್‌ನಲ್ಲಿ 2 ದೇಶಗಳ ಸೇನೆಯ ನಡುವೆ ಭೀಕರ ಸಮರ ನಡೆಯುತ್ತಿದೆ.

ಸದ್ಯ ರಷ್ಯನ್ನರು ಖಾರ್ಕಿವ್‌ನಿಂದ ಹೊರ ನಡೆಯುತ್ತಿದ್ದಾರೆ. ಆದರೆ, ಡಾನೆಸ್ಕ್ ನಗರದಲ್ಲಿ ಮೋರ್ಟಾರ್‌ ಶೆಲ್‌ ದಾಳಿಗಳನ್ನು ನಡೆಸುತ್ತಿದ್ದಾರೆ.

ಇಷ್ಟಲ್ಲದೆ, ವಾಯುದಾಳಿ ಮಾಡುವ ಮೂಲಕ ಉಕ್ರೇನ್‌ ಪಡೆಗಳನ್ನು ನಾಶ ಮಾಡಲು ಯತ್ನಿಸುತ್ತಿದ್ದಾರೆ ಎಂದು ಉಕ್ರೇನ್‌ ಸೇನೆ ಹೇಳಿಕೊಂಡಿದೆ. ಇದರ ಮಧ್ಯೆ ಈ ಯುದ್ಧ ಯಾವಾಗ ಮುಗಿಯುತ್ತದೆ ಎಂದು ಗೊತ್ತಿಲ್ಲದ ಮಟ್ಟಿಗೆ ದೀರ್ಘ‌ವಾಗಲಿದೆ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸಿ ಅವರು ಮಾಹಿತಿ ತಿಳಿಸಿದ್ದಾರೆ.

ರಷ್ಯಾ ಯೋಧರೊಬ್ಬರನ್ನು ಯುದ್ಧಾಪರಾಧಿ ಎಂದು ಉಕ್ರೇನ್‌ ನ್ಯಾಯಾಲಯ ವಿಚಾರಣೆ ನಡೆಸುತ್ತಿರುವುದು ಇನ್ನೊಂದು ಮಹತ್ವದ ಬೆಳವಣಿಗೆ.

ಮಾಜಿ ಪ್ರಧಾನಿ ಖಾನ್ ಗೆ ಈಗ ಪಾಕ್ ಸರ್ಕಾರದ ಬಗ್ಗೆ ಅತೃಪ್ತಿ

0

ಅಪರಾಧಿಗಳು ಅಧಿಕಾರದಲ್ಲಿ ಇರುವ ಬದಲಿಗೆ ಪಾಕಿಸ್ತಾನದ ಮೇಲೆ ಅಣುಬಾಂಬ್ ಹಾಕುವುದು ಉತ್ತಮ ಎಂದು ಪಾಕ್​ನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಹೇಳಿದ್ದಾರೆ.

ಈಚೆಗಷ್ಟೇ ಅವಿಶ್ವಾಸ ನಿರ್ಣಯ ಮಂಡನೆ ಮೂಲಕ ಅಧಿಕಾರ ಕಳೆದುಕೊಂಡ ಮೊದಲ ಪಾಕ್ ಪ್ರಧಾನಿ ಎನಿಸಿಕೊಂಡ ಖಾನ್ ಅವರು ಮಾತನಾಡಿ, ಎಸ್ಟಾಬ್ಲಿಷ್​ಮೆಂಟ್ ನನಗೆ ಕರೆ ಮಾಡುತ್ತಿದೆ. ಆದರೆ, ನಾನು ಅವರ ನಂಬರ್ ಬ್ಲಾಕ್ ಮಾಡಿದ್ದೇನೆ. ಚುನಾವಣೆ ದಿನಾಂಕ ಘೋಷಣೆ ಆಗುವ ತನಕ ಯಾರೊಂದಿಗೂ ನಾನು ಮಾತನಾಡುವುದಿಲ್ಲ ಎಂದು ತಿಳಿಸಿದ್ದಾರೆ.

ಈ ವಿಷಯದ ಬಗ್ಗೆ ಡಾನ್ ಪತ್ರಿಕೆ ವರದಿ ಮಾಡಿದೆ. ತನ್ನ ಸರ್ಕಾರ ಉರುಳುವುದಕ್ಕೆ ಅಮೆರಿಕವು ಆಗಿನ ವಿಪಕ್ಷದ ಜೊತೆಗೆ ಸೇರಿ ಮಾಡಿದ ಪಿತೂರಿಯೇ ಕಾರಣ ಎಂದು ಒತ್ತಿ ಒತ್ತಿ ಹೇಳಿದ್ದಾರೆ.
ಪಿತೂರಿಗೆ ಬೆಂಬಲ ನೀಡಿದವರು ಪಾಕಿಸ್ತಾನದ ಭವಿಷ್ಯದ ಬಗ್ಗೆ ಯೋಚಿಸಿದರೋ ಇಲ್ಲವೋ ಎಂದು ಖಾನ್ ಕೇಳಿರುವುದಾಗಿ ಜಿಯೋ ಸುದ್ದಿ ವಾಹಿನಿ ತನ್ನ ವರದಿಯಲ್ಲಿ ತಿಳಿಸಿದೆ.

ಈ ಅಪರಾಧಿಗಳು ಅಧಿಕಾರದಲ್ಲಿ ಇರುವ ಬದಲಿಗೆ ಪಾಕಿಸ್ತಾನದ ಮೇಲೆ ಅಣು ಬಾಂಬ್ ಹಾಕುವುದು ಉತ್ತಮ,ಎಂದು ಇಮ್ರಾನ್ ಖಾನ್ ಅವರು ಖಡಕ್ಕಾಗಿ ಹೇಳಿದ್ದಾರೆ.

ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಅಧ್ಯಕ್ಷರಾಗಿರುವ ಇಮ್ರಾನ್ ಖಾನ್, ಕಳೆದ ಜೂನ್​ನಲ್ಲಿ ನನಗೆ ಈ ಪಿತೂರಿ ಬಗ್ಗೆ ಗೊತ್ತಾಯಿತು. ಆದರೆ ದುರದೃಷ್ಟ ಏನೆಂದರೆ, ಎಲ್ಲ ನಿರ್ಧಾರಗಳನ್ನು ಸರ್ಕಾರ ದುರ್ಬಲಗೊಳಿಸಲು ತೆಗೆದುಕೊಳ್ಳಲಾಯಿತು. ಹಾಗೂ ನಂತರ ಮುಕ್ತಾಯಗೊಂಡಿತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಎಸ್ಟಾಬ್ಲಿಷ್​ಮೆಂಟ್​ ಜೊತೆಗಿನ ಸಂಬಂಧ ನನ್ನ ಸರ್ಕಾರದ ಕೊನೆ ದಿನದ ತನಕ ಚೆನ್ನಾಗಿತ್ತು. ಆದರೆ 2 ಸಮಸ್ಯೆಗಳಿದ್ದವು. ಅವುಗಳ ಬಗ್ಗೆ ಕಣ್ಣಲ್ಲಿ ಕಣ್ಣಿಟ್ಟು ನೋಡಲಿಲ್ಲ. ಪ್ರಬಲ ಕೇಂದ್ರಕ್ಕೆ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಉಸ್ಮಾನ್ ಬಜ್ದಾರ್ ತೆಗೆಯಬೇಕಿತ್ತು. ಆದರೆ ಅವರು ಹೇಳಬೇಕಿತ್ತು, ಸಿಂಧ್ ಪ್ರಾಂತ್ಯದಲ್ಲಿ ಹೆಚ್ಚು ಭ್ರಷ್ಟಾಚಾರ ಹಾಗೂ ಆಡಳಿತ ಸಮಸ್ಯೆ ಇತ್ತು ಎಂದು ತಿಳಿಸಿದ್ದಾರೆ.

ಇಮ್ರಾನ್ ಅವರು ಇನ್ನೂ ಮುಂದುವರಿದು, ದೇಶದ ಸ್ಪೈ ಮಾಸ್ಟರ್ ಲೆ. ಜನರಲ್ ಫೈಜ್ ಹಮೀದ್ ವಿಚಾರದಲ್ಲಿ ಎಸ್ಟಾಬ್ಲಿಷ್​ಮೆಂಟ್, ಅಂದರೆ ಸೇನೆ ಜೊತೆಗೆ ಭಿನ್ನಾಭಿಪ್ರಾಯ ಇತ್ತು ಎಂದು ತಿಳಿಸಿದ್ದಾರೆ.

ಬಾಕಿ ಉಳಿಸಿಕೊಂಡಿರುವ ಸಕ್ಕರೆ ಕಾರ್ಖಾನೆಗಳು:ರೈತರಿಗೆ ಸಂಕಷ್ಟ

0

ರೈತರ ಕಬ್ಬಿನ ಬಾಕಿ ಬಿಲ್‌ ಪಾವತಿಗೆ ಸರ್ಕಾರ ಸೂಚನೆ ಕೊಟ್ಟರೂ ಸಹ ಸಕ್ಕರೆ ಕಾರ್ಖಾನೆಗಳ ಮಾಲೀಕರು ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ.

ಕಬ್ಬು ಪೂರೈಸಿದ 15 ದಿನಗಳಲ್ಲಿ ರೈತರಿಗೆ ಕಬ್ಬಿನ ಹಣ ಪಾವತಿಸಬೇಕೆಂಬ ನಿಯಮಕ್ಕೆ ಬೆಲೆಯೇ ಕೊಡುತ್ತಿಲ್ಲ.

ಈ ನಿಯಮಗಳು ಕಾಗದಕ್ಕೆ ಮಾತ್ರ ಸೀಮಿತ. ಕಬ್ಬು ಬೆಳೆಗಾರರಿಗೆ ಕೊಡಬೇಕಾದ ಹಣ ಕೊಡದೇ ಸಕ್ಕರೆ ಕಾರ್ಖಾನೆಗಳು ರೈತರ ಗಾಯದ ಮೇಲೆ ಬರೆ ಎಳೆದಿವೆ.

ಬೆಳ​ಗಾವಿ ಜಿಲ್ಲೆಯ ಒಟ್ಟು 21 ಸಕ್ಕರೆ ಕಾರ್ಖಾನೆಗಳು 2021-22ನೇ ಸಾಲಿನಲ್ಲಿ ರೈತರ ಕಬ್ಬಿನ ಬಾಕಿ ಉಳಿಸಿಕೊಂಡಿರುವ ಮೊತ್ತ ಬರೋಬ್ಬರಿ 889.61 ಕೋಟಿ ಎಂಬು​ವುದು ಈಗ ಇದು ಬಹಿರಂಗ​ಗೊಂಡಿದೆ. ಕೇವಲ ಒಂದೇ ಜಿಲ್ಲೆ​ಯಲ್ಲಿ ಇಷ್ಟೊಂದು ಮೊತ್ತ ಇರಬೇಕಾದರೆ, ಬೇರೆ ಜಿಲ್ಲೆಗಳಲ್ಲಿ ಇನ್ನೆಷ್ಟು ಇರಬಹುದು.

ಕಳೆದ ಎರಡು ವರ್ಷಗಳಿಂದ ರೈತರು ಕೊರೋನಾ ಸಂಕಷ್ಟದಿಂದ ನಲುಗಿಹೋಗಿದ್ದಾರೆ. ಈಗ ಕಬ್ಬಿನ ಬಾಕಿ ಬಿಲ್‌ ಬಾರದಿರುವುದು ಮತ್ತಷ್ಟು ಸಂಕಷ್ಟಕ್ಕೆ ತಳ್ಳುವಂತಾಗಿದೆ. ಒಂದೆಡೆ ಕಬ್ಬಿನ ಬಾಕಿ ಬಿಲ್‌ ನೀಡುವಂತೆ ರೈತರ ಹೋರಾಟ ಇನ್ನೂ ನಿಂತಿಲ್ಲ. ಇನ್ನೊಂದೆಡೆ ಸಕ್ಕರೆ ಕಾರ್ಖಾನೆಗಳ ಮಾಲೀಕರು ಬಾಕಿ ಹಣ ಪಾವತಿಸದೇ ರೈತರನ್ನು ಸತಾಯಿಸುವುದು ತಪ್ಪಿಲ್ಲ.

ರೈತರು ಸಾಲ ಮಾಡಿ ಕಬ್ಬು ಬೆಳೆದು, ಕಾರ್ಖಾನೆಗೆ ಕಬ್ಬು ಪೂರೈಕೆ ಮಾಡಿದ ರೈತರು ಈಗ ಸಂಕಷ್ಟದಲ್ಲಿದ್ದಾರೆ. ಕಬ್ಬಿನ ಬಾಕಿ ಹಣ ಪಾವತಿಸುವಂತೆ ಸಚಿವರು ಆದೇಶ ಮಾಡಿದ್ದರೂ, ಆ ಆದೇಶಕ್ಕೆ ಕ್ಯಾರೇ ಅನ್ನುತ್ತಿಲ್ಲ. ಸಕ್ಕರೆ ಕಾರ್ಖಾನೆಗಳು ತಮ್ಮ ಹಠಮಾರಿತನ ನೀತಿಯನ್ನು ಮುಂದುವರಿಸಿವೆ. ರೈತರು ಸಂಕಷ್ಟದಲ್ಲಿದ್ದರೂ ಕಾರ್ಖಾನೆಗಳು ಬಾಕಿ ಹಣ ನೀಡುತ್ತಿಲ್ಲ. ಕಬ್ಬಿನ ಬಾಕಿ ಬಿಲ್‌ ಪಾವತಿಗೆ ರೈತರು ಗಡುವು ಕೊಟ್ಟರೂ ಯಾವುದೇ ಪ್ರಯೋಜನವಾಗುತ್ತಿಲ್ಲ.

ಸಹಕಾರ ಕ್ಷೇತ್ರಗಳಿಂದ ಸಕ್ಕರೆ ಕಾರ್ಖಾನೆಗಳ ಮಾಲೀಕರು ಕೋಟ್ಯಂತರ ರೂಪಾಯಿ ಸಾಲ ಪಡೆದಿದ್ದಾರೆ. ಸಾಲ ಪಡೆದಿದ್ದರೂ ರೈತರ ಕಬ್ಬಿನ ಬಾಕಿ ಹಣ ಪಾವತಿಸುತ್ತಿಲ್ಲ. ತಾವು ಸಾಲ ಪಡೆದುಕೊಂಡ ಬ್ಯಾಂಕಿಗೂ ಸಾಲ ಮತ್ತು ಬಡ್ಡಿಯನ್ನೂ ಕೆಲ​ವನ್ನು ಹೊರ​ತು​ಪ​ಡಿಸಿ ಮತ್ತೆ ಕಲವು ಕಾರ್ಖಾ​ನೆ​ಗಳು ಪಾವ​ತಿಗೇ ಮುಂದಾ​ಗ​ದಿ​ರು​ವುದು ಕಂಡು​ಬಂದಿದೆ.