Sunday, March 1, 2026
Sunday, March 1, 2026
Home Blog Page 1581

ಪದವಿ ಪೂರ್ವಕಾಲೇಜಿಗೆ ಪ್ರವೇಶ:ಪೋಷಕರಿಗೆಮಾಹಿತಿ

0

2022-23ನೇ ಸಾಲಿನಲ್ಲಿ ಪದವಿ ಪೂರ್ವ ಕಾಲೇಜುಗಳಿಗೆ ದಾಖಲಾತಿ ಮಾಡಿಕೊಳ್ಳುವ ಮುಂಚೆ ವಿದ್ಯಾರ್ಥಿಗಳು, ಪೋಷಕರು ಆಯಾ ಕಾಲೇಜುಗಳು ಅಸ್ತಿತ್ವದಲ್ಲಿರುತ್ತದೆಯೇ ಅಥವಾ ಮಾನ್ಯತೆ ಪಡೆದಿದೆಯೇ ಎಂಬುದನ್ನು ಖಚಿತ ಪಡಿಸಿಕೊಂಡ ನಂತರವೇ ದಾಖಲಾತಿ ಮಾಡಿಕೊಳ್ಳಬೇಕು.

ಪದವಿ ಪೂರ್ವ ಶಿಕ್ಷಣ ಇಲಾಖೆಯ www.pue.karnataka.gov.in ವೆಬ್‍ಸೈಟ್‍ನಲ್ಲಿ ಸೂಚಿಸಿರುವ ಕಾಲೇಜುಗಳಿಗೆ ಮಾತ್ರ ದಾಖಲಾತಿ ಪಡೆದುಕೊಳ್ಳಬೇಕು. ಕಾಲೇಜುಗಳು ಅಸ್ತಿತ್ವದಲ್ಲಿರುವ ಬಗ್ಗೆ ಕಾಲೇಜು ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಮಾನ್ಯತೆ ಪಡೆದಿದೆಯೇ ಎಂಬುದನ್ನು ಖಚಿತಪಡಿಸಿಕೊಂಡ ನಂತರ ಪ್ರವೇಶ ಪಡೆಯಬಹುದು.

ಹೆಚ್ಚಿನ ವಿವರಗಳಿಗೆ ದೂ.ಸಂ- 0836-2740277 ಸಂಪರ್ಕಿಸಬಹುದು ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೃಷ್ಣಾ ನಾಯಕ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ರಾಜ್ಯಕ್ಕೆ ಪ್ರಧಾನಿ ಮೋದೀಜಿ ಭೇಟಿ

0

ಜೂನ್ 21 ರಂದು ಮೈಸೂರಿಗೆ ಮಾನ್ಯ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಜೂನ್ 21 ರಂದು ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಆಗಮಿಸುವುದು ಬಹುತೇಕ ಫಿಕ್ಸ್ ಆಗಿದೆ. ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗಿಯಾಗಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ಭಾಗಿಯಾಗಲಿದ್ದಾರೆ.

ಮೈಸೂರಿನ ರೇಸ್ ಕೋರ್ಸ್ ಆವರಣದಲ್ಲಿ ಅಂತಾರಾಷ್ಟ್ರೀಯ ಯೋಗದಿನಾಚರಣೆ ಸಿದ್ಧತೆ ನಡೆಸಲಾಗಿದೆ. ಮೈಸೂರಿನ ಯೋಗ ದಿನಾಚರಣೆ ಕುರಿತು ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಮೈಸೂರಿನ ವಿಜಯನಗರ ಯೋಗ ನರಸಿಂಗಸ್ವಾಮಿ ದೇವಾಸ್ಥಾನದಲ್ಲಿ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಈ ಬಾರಿ ಯೋಗಾ ದಿನಾಚರಣೆಯಲ್ಲಿ 2 ಲಕ್ಷ ಯೋಗಪಟುಗಳನ್ನು ಸೇರಿಸಲು ಸಿದ್ದತೆ ಕೈಗೊಳ್ಳಲಾಗಿದೆ.

2019 ರ ನಂತರ ಖರೀದಿಸಿದ ವಾಹನಗಳಿಗೆ ಮಾತ್ರ HSRP ಕಡ್ಡಾಯ

0

ಕೇಂದ್ರ ಸಾರಿಗೆ ಇಲಾಖೆಯಿಂದ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಕಡ್ಡಾಯಗೊಳಿಸಲಾಗಿತ್ತು. ಈ ಕಾರಣಕ್ಕಾಗಿ ಅನೇಕ ವಾಹನಗಳಿಗೆ ಸಂಚಾರಿ ಪೊಲೀಸರು ದಂಡ ಕೂಡ ವಿಧಿಸುತ್ತಿದ್ದರು.

ಎಲ್ಲಾ ವಾಹನಗಳಿಗೂ ಸುರಕ್ಷತೆಯ ನೋಂದಣಿ ಫಲಕ ಕಡ್ಡಾಯವೇ ಎನ್ನುವ ಗೊಂದಲಕ್ಕೆ ಹಲವು ವಾಹನ ಸವಾರರಿದ್ದರು. ಆದರೆ ಸಾರಿಗೆ ಇಲಾಖೆಯಿಂದ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ.

ಅದೇನು ಅಂದರೆ ಏಪ್ರಿಲ್ 1, 2019ಕ್ಕಿಂತ ಮೊದಲಿನ ವಾಹನಗಳಿಗೆ ಹೈ ಸೆಕ್ಯುರಿಟಿ ನೋಂದಣಿ ಫಲಕ ಕಡ್ಡಾಯವಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದೆ. ಈ ಮೂಲಕ ವಾಹನ ಸವಾರರಿಗೆ ಸಿಹಿಸುದ್ದಿಯನ್ನು ಸಾರಿಗೆ ಇಲಾಖೆ ನೀಡಿದೆ.

ಈ ಕುರಿತಂತೆ ಸಾರಿಗೆ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ. ಏಪ್ರಿಲ್ 1, 2019ಕ್ಕೂ ಮೊದಲು ಖರೀದಿಸಿರುವಂತ ವಾಹನಗಳಿಗೆ ಎಚ್ ಎಸ್ ಆರ್ ಪಿ ಕಡ್ಡಾಯವಲ್ಲ. ಏಪ್ರಿಲ್ 1, 2019ರ ನಂತ್ರ ಖರೀದಿಸಿದಂತ ವಾಹನಗಳಿಗೆ ಕಡ್ಡಾಯವಾಗಿದೆ ಎಂಬುದಾಗಿ ಸ್ಪಷ್ಟ ಪಡಿಸಿದೆ. ಅಲ್ಲದೇ ಏಪ್ರಿಲ್ 1, 2019ಕ್ಕೂ ಮೊದಲು ಖರೀದಿಸಿದಂತ ವಾಹನಗಳಿಗೆ ಹೈ ಸೆಕ್ಯುರಿಟಿ ನೋಂದಣಿ ಫಲಕ ಅಳವಡಿಸುವಂತೆ ಒತ್ತಾಯಿಸುವಂತಿಲ್ಲ ಎಂಬುದಾಗಿಯೂ ತಿಳಿಸಿದೆ.

ಏಪ್ರಿಲ್ 1, 2019ರ ನಂತರ ಖರೀದಿಸಿದಂತ ವಾಹನಗಳಿಗೆ ಮಾತ್ರವೇ ಎಚ್ ಎಸ್ ಆರ್ ಪಿ ಕಡ್ಡಾಯವಾಗಿದೆ. ಅದಕ್ಕೂ ಮೊದಲಿನ ವಾಹನಗಳಿಗೆ ಕಡ್ಡಾಯವಲ್ಲ. ಬೆಂಗಳೂರಿನಲ್ಲಿ ಏಪ್ರಿಲ್ 1, 2019ಕ್ಕೂ ಮೊದಲು ಖರೀದಿಸಿದಂತ ಸುಮಾರು 1.75 ಕೋಟಿಗೂ ಹೆಚ್ಚು ವಾಹನಗಳಿವೆ ಎಂಬುದಾಗಿಯೂ ತಿಳಿಸಿದೆ. ಈ ಮೂಲಕ ಸಂಚಾರಿ ಪೊಲೀಸರಿಂದ ಇಂತಹ ವಾಹನ ಸವಾರರಿಗೆ ಉಂಟಾಗುತ್ತಿದ್ದಂತ ಕಿರಿಕಿರಿಯನ್ನು ಸಾರಿಗೆ ಇಲಾಖೆ ತಪ್ಪಿಸಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.


Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಟಾಟಾ ಐಪಿಎಲ್ 22 ಪಂಜಾಬ್ ಎದುರು ಸುಲಭ ಸೋಲಿಗೆ ತುತ್ತಾದ ಆರ್.ಸಿ.ಬಿ.

ಪಂಜಾಬ್​ ನೀಡಿದ ಬೃಹತ್​ ಮೊತ್ತದ ಗುರಿಯನ್ನು ಬೆನ್ನತ್ತಿದ್ದ ಆರ್​ಸಿಬಿಗೆ ಉತ್ತಮ ಆರಂಭ ದೊರೆಯಲಿಲ್ಲ. ಆರಂಭಿಕರಾದ ವಿರಾಟ್​ ಕೊಹ್ಲಿ 20 ರನ್​, ನಾಯಕ ಫಾಫ್ ಡು ಪ್ಲೆಸಿಸ್ 10 ರನ್​ ಮತ್ತು ಮಹಿಪಾಲ್ 6 ರನ್​ ಗಳಿಸಿ ಪೆವಿಲಿಯನ್​ ಹಾದಿ ಹಿಡಿದರು. ಪವರ್​ ಪ್ಲೇನಲ್ಲೇ ಆರ್​ಸಿಬಿ 40 ರನ್​ಗಳಿಗೆ 3 ವಿಕೆಟ್​ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತು.

ಬಳಿಕ ಬಂದ ಮ್ಯಾಕ್ಸ್​ವೆಲ್ ಅವರು​ ರಜತ್ ಪಟಿದಾರ್ ಜೊತೆಗೂಡಿ ಉತ್ತಮ ಬ್ಯಾಟಿಂಗ್​ ಪ್ರದರ್ಶನ ನೀಡಿದರು. ಈ ಇಬ್ಬರು ಆಟಗಾರ ಅಬ್ಬರಿಸಿ 64 ರನ್​ಗಳ ಜೊತೆಯಾಟವಾಡಿದರು. ಆದ್ರೆ ರನ್​ ಗಳಿಸುವ ಭರದಲ್ಲಿ ಪಟಿದಾರ್ 26ಕ್ಕೆ ಔಟಾದರು. ಇದರ ಬೆನ್ನಲ್ಲೇ 35 ರನ್​ ಗಳಿಸಿ ಅಬ್ಬರಿಸುತ್ತಿದ್ದ ಮ್ಯಾಕ್ಸ್​ವೆಲ್​ ಸಹ ಪೆವಿಲಿಯನ್​ ದಾರಿ ಹಿಡಿದರು.

ಮ್ಯಾಕ್ಸ್​ವೆಲ್​ ಔಟಾದ ಬಳಿಕ ಉಳಿದ ಬ್ಯಾಟ್ಸ್​ಮನ್​ಗಳು ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. ದಿನೇಶ್ ಕಾರ್ತಿಕ್ 11 ರನ್​, ಅಹ್ಮದ್​ 9 ರನ್​, ವನಿಂದು ಹಸರಂಗ 1 ರನ್​, ಹರ್ಷಲ್ ಪಟೇಲ್ 11 ರನ್​, ಮೊಹಮ್ಮದ್ ಸಿರಾಜ್ 9 ಮತ್ತು ಜೋಸ್ ಹ್ಯಾಜಲ್​ವುಡ್ 7 ರನ್​ ಗಳಿಸಿ ಅಜಯರಾಗಿ ಉಳಿದರು. ಒಟ್ಟಿನಲ್ಲಿ ಆರ್​ಸಿಬಿ ತಂಡ ನಿಗದಿತ 20 ಓವರ್​ಗಳಿಗೆ 9 ವಿಕೆಟ್​ ಕಳೆದುಕೊಂಡು 155 ರನ್​ ಗಳಿಸಲು ಮಾತ್ರ ಸಶಕ್ತವಾಯಿತು.

155 ರನ್​ಗಳನ್ನು ಕಲೆ ಹಾಕುವ ಮೂಲಕ ಆರ್​ಸಿಬಿ ತಂಡ ಪಂಜಾಬ್​ ವಿರುದ್ಧ 54 ರನ್​ಗಳ ಹೀನಾಯ ಸೋಲು ಕಂಡಿತು. ಪಂಜಾಬ್​ ಪರ ಕಾಗಿಸೋ ರಬಾಡಾ 3 ವಿಕೆಟ್​ ಪಡೆದ್ರೆ, ಧವನ್​ ಮತ್ತು ರಾಹುಲ್ ಚಹರ್​ ತಲಾ ಎರಡು ವಿಕೆಟ್​ ಕಬಳಿಸಿದ್ರು. ಹರ್ಪ್ರಿತ್​ ಬ್ರಾರ್​ ಮತ್ತು ಹರ್ಷದೀಪ್​ ಸಿಂಗ್ ತಲಾ ಒಂದೊಂದು ವಿಕೆಟ್​ ಪಡೆದು ತಂಡದ ಗೆಲುವಿಗೆ ಆಸರೆಯಾದರು.

ಪ್ಲೇ-ಆಫ್​ ರೇಸ್​​ನಲ್ಲಿ ಉಳಿದುಕೊಳ್ಳಲು ಪಂಜಾಬ್ ತಂಡಕ್ಕೆ ನಿನ್ನೆಯ ಪಂದ್ಯದಲ್ಲಿ ಗೆಲುವು ಸಾಧಿಸುವುದು ಅತಿ ಅವಶ್ಯವಾಗಿತ್ತು. ಅದರಂತೆ ತಂಡ 54 ರನ್​ಗಳಿಂದ ಆರ್​ಸಿಬಿ ವಿರುದ್ಧ ಭರ್ಜರಿ ಜಯ ಸಾಧಿಸಿದ್ದು, ಪ್ಲೇ ಆಫ್​ ಕನಸು ಇನ್ನು ಜೀವಂತವಾಗಿದೆ. ಆರ್​ಸಿಬಿಗೂ ಪ್ಲೇ ಆಫ್​ ಕನಸು ಜೀವಂತವಾಗಿದ್ದು, ಬಲಿಷ್ಠ ಲಖನೌ ತಂದ ವಿರುದ್ಧ ಗೆಲುವು ಸಾಧಿಸುವುದು ಅನಿವಾರ್ಯವಾಗಿದೆ.

ಮುಂಬೈನ ಬ್ರಬೋರ್ನ್ ಕ್ರೀಡಾಂಗಣದಲ್ಲಿ ಎದುರಾಗಿದ್ದ ಈ ಉಭಯ ತಂಡಗಳು ಪ್ಲೇ-ಆಫ್​ ರೇಸ್​ನಲ್ಲಿದ್ದಾವೆ. ಈ ಎರಡು ತಂಡಗಳಿಗೂ ನಿನ್ನೆಯ ಪಂದ್ಯ ಅತಿ ಮುಖ್ಯವಾಗಿತ್ತು. ಐಪಿಎಲ್​​ನಲ್ಲಿ ಆರ್​​ಸಿಬಿ ಇಲ್ಲಿಯವರೆಗೆ 13 ಪಂದ್ಯಗಳ ಪೈಕಿ 7ರಲ್ಲಿ ಜಯ, 6ರಲ್ಲಿ ಸೋಲು ಕಂಡಿದ್ದು, 14 ಪಾಯಿಂಟ್​​ಗಳೊಂದಿಗೆ 4ನೇ ಸ್ಥಾನದಲ್ಲಿದೆ. ಆರ್​ಸಿಬಿ ವಿರುದ್ಧ ಗೆದ್ದ ಪಂಜಾಬ್​ ಸದ್ಯ 6ನೇ ಸ್ಥಾನಕ್ಕೇರಿದೆ.

ಇಂದು ಸಂಜೆ 7.30ಕ್ಕೆ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ಮಧ್ಯೆ ಪಂದ್ಯ ನಡೆಯಲಿದ್ದು, ಹೈದರಾಬಾದ್​ ತಂಡಕ್ಕೆ ಪ್ಲೇ ಆಫ್​ ಕನಸು ಜೀವಂತವಾಗಿರಿಸಲು ಗೆಲುವು ಅವಶ್ಯಕವಾಗಿದೆ.

ಕೋವಿಡ್ ಕಪಿಮುಷ್ಠಿಯಲ್ಲಿ ಉತ್ತರ ಕೊರಿಯ: ತುರ್ತುಪರಿಸ್ಥಿತಿ

0

ಉತ್ತರ ಕೊರಿಯಾದಲ್ಲಿ ಕೋವಿಡ್-19 ವೈರಾಣು ಹರಡುವಿಕೆ ತೀವ್ರ ಹೆಚ್ಚಾಗಿದೆ ಎಂದು ತಿಳಿದುಬಂದಿದೆ.

ಗಣರಾಜ್ಯವಾಗಿ ಸ್ಥಾಪನೆಗೊಂಡ ನಂತರ ಇತಿಹಾಸದಲ್ಲೇ ಅತಿ ದೊಡ್ಡ ಸವಾಲನ್ನು ಉತ್ತರ ಕೊರಿಯಾ ಎದುರಿಸುತ್ತಿದೆ ಎಂದು ನಾಯಕ ಕಿಮ್ ಜಾಂಗ್ ಉನ್ ಹೇಳಿದ್ದಾರೆ ಎಂದು ಅಲ್ಲಿನ ಸರ್ಕಾರಿ ಸುದ್ದಿ ಸಂಸ್ಥೆ ಕೆಸಿಎನ್‌ಎ ವರದಿ ಮಾಡಿದೆ.

ಉತ್ತರ ಕೊರಿಯಾದಲ್ಲಿ 17,400 ಹೊಸ ಕೊರೊನಾ ವೈರಸ್ ಪ್ರಕರಣ ವರದಿಯಾಗಿದೆ. ದೇಶದಲ್ಲಿ ಒಟ್ಟು 5,20,000 ಜನರಿಗೆ ಕೊರೊನಾ ಸೋಂಕು ದೃಢವಾಗಿದ್ದು, 2,40,600 ಸೋಂಕಿತರು ಗುಣಮುಖರಾಗಿದ್ದಾರೆ. 2,80,800 ಸೋಂಕಿತರು ಕ್ವಾರಂಟೈನ್‌ನಲ್ಲಿ ಇರುವುದಾಗಿ ಉತ್ತರ ಕೊರಿಯಾ ತಿಳಿಸಿದೆ.

“ಕೊರೊನಾ ವೈರಸ್ ಹರಡದಂತೆ ತಡೆಯುವುದು ಮತ್ತು ಕೊರೊನಾ ವಿರುದ್ಧ ಹೋರಾಡಲು ಬೇಕಾದ ಕ್ರಮಗಳನ್ನು ತೆಗೆದುಕೊಳ್ಳಬೇಕು” ಎಂದು ಕಿಮ್ ಹೇಳಿರುವುದಾಗಿ ಕೆಸಿಎನ್‌ಎ ವರದಿ ಮಾಡಿದೆ.

ಕೋವಿಡ್-19 ರೂಪಾಂತರಿ ಒಮಿಕ್ರಾನ್ ತಳಿ ಪತ್ತೆಯಾದ ನಂತರ ಉತ್ತರ ಕೊರಿಯಾದಲ್ಲಿ “ತುರ್ತು ಪರಿಸ್ಥಿತಿ” ಘೋಷಿಸಲಾಗಿತ್ತು. ಕೊರೊನಾ ಸೋಂಕು ಹರಡುವುದನ್ನು ತಡೆಯಲು ಕಿಮ್ ಜಾಂಗ್ ಉನ್ ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಣೆ ಮಾಡಿದ್ದರು.

ಎಲ್ಲವೂ ಸರಿಯಾದರೆ ವಿಜಯೇಂದ್ರ ಸಂಪುಟಕ್ಕೆ ಸೇರ್ಪಡೆ:ಕೋರ್ ಸಮಿತಿ

0

ವಿಧಾನಸಭೆಯಿಂದ ವಿಧಾನಪರಿಷತ್‍ಗೆ ನಡೆಯಲಿರುವ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಪುತ್ರ ಬಿ.ವೈ.ವಿಜಯೇಂದ್ರ ಅವರನ್ನು ಅಭ್ಯರ್ಥಿ ಮಾಡಬೇಕೆಂಬ ಅಭಿಪ್ರಾಯ ಕೋರ್ ಕಮಿಟಿ ಸಭೆಯಲ್ಲಿ ವ್ಯಕ್ತವಾಗಿದೆ.

ಮಲ್ಲೇಶ್ವರಂನ ಜಗನ್ನಾಥ ಭವನದಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಮೇಲ್ಮನೆಗೆ ವಿಜಯೇಂದ್ರ ಕಣಕ್ಕಿಳಿಸುವ ಬಗ್ಗೆ ಸಭೆಯಲ್ಲಿ ಭಾಗವಹಿಸಿದ್ದ ನಾಯಕರು ಗಂಭೀರ ಚಿಂತನೆ ನಡೆಸಿದ್ದಾರೆ.

ವಿಜಯೇಂದ್ರ ಸಂಪುಟಕ್ಕೆ ಬಂದರೆ ಹಳೇ ಮೈಸೂರು ಸೇರಿದಂತೆ ಲಿಂಗಾಯಿತರ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಪಕ್ಷದ ಸಂಘಟನೆಗೆ ಅವರನ್ನು ಬಳಕೆ ಮಾಡಿಕೊಳ್ಳಬೇಕು. ಈ ಹಿಂದೆ ರಾಜ್ಯದ ವಿವಿಧೆಡೆ ನಡೆದ ಉಪಚುನಾವಣೆಯಲ್ಲಿ ಕೆಲವು ಕಡೆ ಅವರ ವರ್ಚಿಸ್ಸಿನಿಂದಲೇ ಗೆಲ್ಲಬೇಕು ಎಂಬ ಮಾತು ಕೇಳಿಬಂದಿದೆ.

ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಕ್ಕೆ ಎಲ್ಲರೂ ಬದ್ದರಾಗಿರಬೇಕೆಂಬ ಒಂದು ಸಾಲಿನ ನಿರ್ಣಯವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಂಪುಟ ಪುನಾರಚನೆಯಾದರೆ ವಿಜಯೇಂದ್ರ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕು ಆರು ತಿಂಗಳೊಳಗೆ ಅವರು ಯಾವುದಾದರೊಂದು ಸದನದ ಸದಸ್ಯರಾಗಬೇಕು.

ಹೀಗಾಗಿ ವಿಧಾನಸಭೆಯಿಂದ ವಿಧಾನಪರಿಷತ್‍ಗೆ ನಡೆಯಲಿರುವ ಚುನಾವಣೆಯಲ್ಲಿ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಬೇಕೆಂಬ ಅಭಿಪ್ರಾಯ ವ್ಯಕ್ತವಾಗಿದೆ.

ಸಂಘಟನೆಯೇ ಇಲ್ಲದ ಕೆ.ಆರ್.ಪೇಟೆ, ಶಿರಾ ಸೇರಿದಂತೆ ಮತ್ತಿತರ ಕಡೆ ಬಿಜೆಪಿ ಗೆಲ್ಲಲು ವಿಜಯೇಂದ್ರ ಅವರ ವರ್ಚಸ್ಸೇ ಕಾರಣ. ಯಡಿಯೂರಪ್ಪ ಅವರನ್ನು ಅಕಾರದಿಂದ ಕೆಳಗಿಳಿಸಿರುವ ಕಾರಣ ಪಕ್ಷದ ಬೆನ್ನೆಲುಬಾಗಿ ನಿಂತಿರುವ ವೀರಶೈವ ಲಿಂಗಾಯಿತ ಸಮುದಾಯ ಕೈಬಿಟ್ಟು ಹೋಗದಂತೆ ವಿಜಯೇಂದ್ರ ಅವರಿಗೆ ಮಣೆ ಹಾಕಲು ಬಿಜೆಪಿ ವರಿಷ್ಠರು ಲೆಕ್ಕ ಹಾಕಿದ್ದಾರೆ.

ರಾಜ್ಯವನ್ನು ಪ್ರತಿನಿಧಿಸುವ ದೆಹಲಿಯ ಪ್ರಭಾವಿ ನಾಯಕರೊಬ್ಬರ ಕೈಚಳಕ ಇಲ್ಲವೇ ಹಸ್ತಕ್ಷೇಪವಿಲ್ಲದಿದ್ದರೆ ವಿಜಯೇಂದ್ರ ಹಾದಿ ಸುಗಮ ಎನ್ನಲಾಗುತ್ತಿದೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ₹ 5 ಕ್ಕೆ ಊಟ:ತೆಲಂಗಾಣ ರಾಜ್ಯದ ಜನಸ್ನೇಹೀ ಕಾರ್ಯ

0

ಕೆ.ಚಂದ್ರಶೇಖರ ರಾವ್‌ ಮುಖ್ಯಮಂತ್ರಿಯಾಗಿರುವ ತೆಲಂಗಾಣ ಸರ್ಕಾರ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ.

ತೆಲಂಗಾಣ ರಾಜ್ಯದ 18 ಸರ್ಕಾರಿ ಆಸ್ಪತ್ರೆಗಳಲ್ಲಿ ಕೇವಲ 5 ರೂ.ಗೆ ಊಟ ನೀಡಲು ತೀರ್ಮಾನಿಸಿದೆ.

ಇಲ್ಲಿಗೆ ಊಟ ಪೂರೈಸುವ ಜವಾಬ್ದಾರಿಯನ್ನು ಇಸ್ಕಾನ್‌ ಸಂಸ್ಥೆ ಹೊತ್ತುಕೊಂಡಿದೆ.

ಇದಕ್ಕಾಗಿಯೇ ತೆಲಂಗಾಣ ಸರ್ಕಾರ 40 ಕೋಟಿ ರೂ. ಅನುದಾನ ಮೀಸಲಿಟ್ಟಿದೆ. ಇದರಲ್ಲಿ ಸರ್ಕಾರ 21.25 ರೂ.ಗಳನ್ನು ತನ್ನ ಪಾಲಾಗಿ ಭರಿಸಲಿದೆ. ಉಳಿದ 5 ರೂ.ಗಳನ್ನು ಜನರು ನೀಡಬೇಕಿದೆ.

ಇದರಿಂದ ಪ್ರತೀದಿನ 20,000 ಮಂದಿ ಲಾಭ ಪಡೆಯಲಿದ್ದಾರೆ.ಈ ಯೋಜನೆಗೆ ಒಸ್ಮಾನಿಯಾ ಸರ್ಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ಸಚಿವ ಟಿ.ಹರೀಶ್‌ ರಾವ್‌ ಚಾಲನೆ ನೀಡಿದರು.

ಗೋಧಿ ರಫ್ತಿನ ಮೇಲೆ ನಿಷೇಧ:ಕೇಂದ್ರದ ನಿರ್ಧಾರ

0

ದಿನದಿಂದ ದಿನಕ್ಕೆ ಎಲ್ಲಾ ವಸ್ತುಗಳ ಮೇಲೆ ಬೆಲೆ ಏರಿಕೆಯಾಗುತ್ತಿರುವುದು ಜನ ಸಾಮಾನ್ಯರನ್ನು ಕಂಗೆಡಿಸಿದೆ. ದುಡಿಮೆ ಕಡಿಮೆ, ಖರ್ಚು ಹೆಚ್ಚು ಎನ್ನುವಂತ ಸ್ಥಿತಿಯಿಂದಾಗಿ ಜನ ನಲುಗಿ ಹೋಗಿದ್ದಾರೆ.

ಈ ನಡುವೆ ಕೇಂದ್ರ ಸರ್ಕಾರ ಈ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಗೋಧಿ ರಫ್ತಿನ ಮೇಲೆ ನಿಷೇಧ ಹೇರಿದೆ.

ಏರಿಕೆಯಾಗುತ್ತಿರುವ ದೇಶಿಯ ಬೆಲೆಗಳನ್ನು ನಿಯಂತ್ರಿಸಲು ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಇನ್ನು ಇತರೆ ದೇಶಗಳು ಆಹಾರ ಭದ್ರತೆಯನ್ನು ಎದುರಿಸುತ್ತಿದ್ದರೆ, ಭಾರತ ಸರ್ಕಾರವನ್ನು ಮನವಿ ಮಾಡಿದರೆ, ಆ ಸಂದರ್ಭದಲ್ಲಿ ಅನುಮತಿ ನೀಡಲಾಗುತ್ತದೆ ಎಂದಿದ್ದಾರೆ.

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಗೋಧಿ ಹಿಟ್ಟಿನ ಬೆಲೆಯಲ್ಲಿ ಶೇ.13ರಷ್ಟು ಏರಿಕೆಯಾಗಿದೆ. ಚಿಲ್ಲರೆ ಮಾರುಕಟ್ಟೆ ಒಂದು ಕೆಜಿ ಗೋಧಿ ಹಿಟ್ಟು 59 ರೂಪಾಯಿ ತಲುಪಿದೆ.

ದೇಶಾದ್ಯಂತ ಆಹಾರ ಪದಾರ್ಥಗಳ ಬೆಲೆಗಳು ವೇಗವಾಗಿ ಹರಡುತ್ತಿವೆ. ಸಾಮಾನ್ಯರ ಜನರ ಜೀವನಕ್ಕೆ ಅಗತ್ತವಾದ ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆಯ ಜೊತೆಗೆ ಆಹಾರ ಪದಾರ್ಥಗಳಲ್ಲಿಯೂ ಏರಿಕೆ ಕಾಣುತ್ತಿದೆ. ಪ್ರಸ್ತುತ ಈರುಳ್ಳಿ ರಫ್ತಿನ ಮೇಲಿದ್ದ ಷರತ್ತುಗಳನ್ನು ಸಡಿಲಗೊಳಿಸಿದೆ.

ಉದಯಪುರ ಕಾಂಗ್ರೆಸ್ ಚಿಂತನ ಶಿಬಿರ:ಹೊಸ ತೀರ್ಮಾನಗಳತ್ತ ಚಿಂತನೆ

0

ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ಎಂಬ ನಿಯಮವನ್ನು ಕಾಂಗ್ರೆಸ್ ಪಕ್ಷವು ಅಳವಡಿಸಿಕೊಳ್ಳುವ ಸಾಧ್ಯತೆ ಇದೆ. ಆದರೆ ಒಂದೇ ಕುಟುಂಬದ ಎರಡನೆಯ ವ್ಯಕ್ತಿಯು ಕನಿಷ್ಠ ಐದು ವರ್ಷ ಪಕ್ಷ ಸಂಘಟನೆಯಲ್ಲಿ ಅಸಾಧಾರಣ ರೀತಿಯಲ್ಲಿ ಕೆಲಸ ಮಾಡಿದರೆ ಅಂತವರಿಗೆ ಈ ನಿಯಮದಿಂದ ವಿನಾಯಿತಿ ಇದೆ. ರಾಜಸ್ಥಾನದ ಉದಯಪುರದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಚಿಂತನಾ ಶಿಬಿರದಲ್ಲಿ ಈ ಪ್ರಸ್ತಾವವನ್ನು ಶುಕ್ರವಾರ ಮುಂದೂಡಲಾಗಿದೆ.

ಮುಖಂಡರು ಯಾವುದೇ ಹುದ್ದೆಗೆ ದೀರ್ಘಕಾಲ ಆಂಟಿ ಕೊಳ್ಳುವುದಕ್ಕೂ ತಡೆಒಡ್ಡುವ ಪ್ರಸ್ತಾವನೆ ಇದೆ. ಗರಿಷ್ಠ ಐದು ವರ್ಷ ಒಂದು ಹುದ್ದೆಯಲ್ಲಿರಬಹುದು. ನಂತರ ಮೂರು ವರ್ಷ ಅವರು ಯಾವುದೇ ಹುದ್ದೆ ಹೊಂದುವಂತಿಲ್ಲ. ಕಾರ್ಯದಕ್ಷತೆಯ ಮೇಲೆ ನಿಗಾ ಇರಿಸುವುದು ಕ್ಕಾಗಿ ಮೌಲ್ಯಮಾಪನ ವಿಭಾಗ ಹಾಗೂ ಸಮೀಕ್ಷೆ ನಡೆಸುವುದು ಮತ್ತು ಇತರ ಮಹತ್ವ ವಿಚಾರಗಳಿಗೆ ಗಮನಹರಿಸಲು ಸಾರ್ವಜನಿಕ ಒಳನೋಟ ಗುಂಪು ರಕ್ಷಣೆಯ ಸಲಹೆಯೂ ಶಿಬಿರದಲ್ಲಿ ಮಂಡನೆಯಾಗಿದೆ.

ಚಿಂತನ ಶಿಬಿರವು ಕಾಂಗ್ರೆಸ್ ಪಕ್ಷದಲ್ಲಿ ಹೊಸ ಯುಗವನ್ನು ಆರಂಭಿಸಲಿದೆ ಎಂದು ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಅಜಯ ಮಾಕನ್ ಅವರು ತಿಳಿಸಿದ್ದಾರೆ.

ಸಮಯ ಬದಲಾಗುತ್ತಿದೆ. ಆದರೆ ಕಾಲದ ಜೊತೆಗೆ ಬದಲಾಗಲು ನಮಗೆ ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಒಂದು ಕುಟುಂಬ ಒಂದು ಟಿಕೆಟ್ ಪ್ರಸ್ತಾವದ ವಿಚಾರದಲ್ಲಿ ಬಹುತೇಕ ಸಹಮತ ಏರ್ಪಟ್ಟಿದೆ. ಪಕ್ಷದ ಹಿರಿಯ ಮುಖಂಡರ ಮಕ್ಕಳು ಅಥವಾ ಸಂಬಂಧಿಕರು ನೇರವಾಗಿ ಬಂದು ಚುನಾವಣೆಗೆ ಸ್ಪರ್ಧಿಸಲು ಅವಕಾಶ ಇಲ್ಲ. ಈ ನಿಯಮವು ಗಾಂಧಿ, ನೆಹರು ಕುಟುಂಬಕ್ಕೂ ಅನ್ವಯವಾಗುತ್ತದೆ ಎಂದು ಮಾಕನ್ ಅವರು ತಿಳಿಸಿದ್ದಾರೆ.

ಪಕ್ಷದ ಮುಖಂಡರ ಕುಟುಂಬದ ಸದಸ್ಯರಿಗೆ ಹೆಚ್ಚು ಹೆಚ್ಚು ಅವಕಾಶಗಳನ್ನು ನೀಡಲಾಗುತ್ತಿದೆ ಎಂಬ ಆರೋಪದ ಕಾರಣಕ್ಕೆ ಈ ನಿಯಮ ರೂಪಿಸಲಾಗಿದೆ. ಆದ್ದರಿಂದ ಈ ನಿಯಮವು ಅನುಮೋದನೆ ಗೊಳ್ಳುವ ಸಾಧ್ಯತೆ ಹೆಚ್ಚು ಎಂದು ಮೂಲಗಳು ತಿಳಿಸಿವೆ.

ಶೇ.50ರಷ್ಟು ಟಿಕೆಟ್ಗಳನ್ನು ಐವತ್ತು ವರ್ಷದ ಒಳಗಿನವರಿಗೆ ಮೀಸಲಿರಿಸಲು ಪ್ರಸ್ತಾವವೂ ಇದೆ. ತಾಲೂಕು ಮತ್ತು ಮತಗಟ್ಟೆ ಮಟ್ಟದ ಸಮಿತಿಗಳ ನಡುವೆ ಮಂಡಲ ಸಮಿತಿಗಳನ್ನು ರಚಿಸುವ ಸಲಹೆಯೂ ಪರಿಶೀಲನೆಯಲ್ಲಿದೆ.

ರಾಹುಲ್ ಭಟ್ ಕೊಲೆಗೈದ ಇಬ್ಬರು ಎನ್ ಕೌಂಟರ್ ನಲ್ಲಿ ಉಡೀಸ್

0

ಇಂದು ಬಂಡಿಪೊರಾದ ಬ್ರಾರ್ ಅರಗಮ್ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ರಾಹುಲ್ ಭಟ್​ನನ್ನು ಕೊಂದ ಇಬ್ಬರು ಉಗ್ರರು ಸೇರಿದಂತೆ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಜಮ್ಮು ಮತ್ತು ಕಾಶ್ಮೀರದ ಬದ್ಗಾಮ್​ನಲ್ಲಿ ಗುರುವಾರ ನಡೆದ ಉಗ್ರರ ದಾಳಿಯಲ್ಲಿ ಕಾಶ್ಮೀರಿ ಪಂಡಿತ್ ಸಮುದಾಯದ ರಾಹುಲ್ ಭಟ್​ನನ್ನು ಹತ್ಯೆ ಮಾಡಲಾಗಿತ್ತು.

ಇಂದು ಬಂಡಿಪೊರಾದ ಬ್ರಾರ್ ಅರಗಮ್ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ರಾಹುಲ್ ಭಟ್​ನನ್ನು ಕೊಂದ ಇಬ್ಬರು ಉಗ್ರರು ಸೇರಿದಂತೆ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಈ ಮೂವರಲ್ಲಿ ಇಬ್ಬರು ಗುರುವಾರ ಕಾಶ್ಮೀರಿ ಪಂಡಿತ್ ಸಮುದಾಯದ ರಾಹುಲ್ ಭಟ್ ಮೇಲಿನ ದಾಳಿಯಲ್ಲಿ ಭಾಗಿಯಾಗಿದ್ದರು ಎಂದು ಮೂಲಗಳು ತಿಳಿಸಿವೆ.

ಕಾಶ್ಮೀರದ ಪೊಲೀಸರು ಶುಕ್ರವಾರ ಮಧ್ಯಾಹ್ನ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ‘ಬಂಡಿಪೊರಾದ ಬ್ರಾರ್ (ಅರಗಮ್) ಪ್ರದೇಶದಲ್ಲಿ ಎನ್‌ಕೌಂಟರ್ ಪ್ರಾರಂಭವಾಗಿದೆ.

ಪೊಲೀಸರು ಮತ್ತು ಭದ್ರತಾ ಪಡೆಗಳು ಕಾರ್ಯದಲ್ಲಿವೆ. ಹೆಚ್ಚಿನ ವಿವರಗಳನ್ನು ತಿಳಿಸಲಾಗುವುದು.’ ಎಂದು ಟ್ವೀಟ್ ಮಾಡಿದ್ದಾರೆ.

ಕಾಶ್ಮೀರದ ಇನ್‌ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಪ್ರಕಾರ, ತಪ್ಪಿಸಿಕೊಂಡ ಇಬ್ಬರು ಶುಕ್ರವಾರದ ಎನ್‌ಕೌಂಟರ್‌ನಲ್ಲಿ ಸಿಕ್ಕಿಬಿದ್ದಿದ್ದರು.

ಜಮ್ಮು ಮತ್ತು ಕಾಶ್ಮೀರದ ಬಂಡಿಪೊರಾ ಜಿಲ್ಲೆಯ ಸಲಿಂದರ್ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ನಡೆದ ಎನ್‌ಕೌಂಟರ್‌ನಲ್ಲಿ ಒಬ್ಬ ಭಯೋತ್ಪಾದಕನನ್ನು ಕೊಲ್ಲಲಾಯಿತು. ಇನ್ನಿಬ್ಬರು ಪಾರಾಗಿದ್ದಾರೆ.