Saturday, March 22, 2025
Saturday, March 22, 2025

ಟಾಟಾ ಐಪಿಎಲ್ 22 ಪಂಜಾಬ್ ಎದುರು ಸುಲಭ ಸೋಲಿಗೆ ತುತ್ತಾದ ಆರ್.ಸಿ.ಬಿ.

Date:

ಪಂಜಾಬ್​ ನೀಡಿದ ಬೃಹತ್​ ಮೊತ್ತದ ಗುರಿಯನ್ನು ಬೆನ್ನತ್ತಿದ್ದ ಆರ್​ಸಿಬಿಗೆ ಉತ್ತಮ ಆರಂಭ ದೊರೆಯಲಿಲ್ಲ. ಆರಂಭಿಕರಾದ ವಿರಾಟ್​ ಕೊಹ್ಲಿ 20 ರನ್​, ನಾಯಕ ಫಾಫ್ ಡು ಪ್ಲೆಸಿಸ್ 10 ರನ್​ ಮತ್ತು ಮಹಿಪಾಲ್ 6 ರನ್​ ಗಳಿಸಿ ಪೆವಿಲಿಯನ್​ ಹಾದಿ ಹಿಡಿದರು. ಪವರ್​ ಪ್ಲೇನಲ್ಲೇ ಆರ್​ಸಿಬಿ 40 ರನ್​ಗಳಿಗೆ 3 ವಿಕೆಟ್​ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತು.

ಬಳಿಕ ಬಂದ ಮ್ಯಾಕ್ಸ್​ವೆಲ್ ಅವರು​ ರಜತ್ ಪಟಿದಾರ್ ಜೊತೆಗೂಡಿ ಉತ್ತಮ ಬ್ಯಾಟಿಂಗ್​ ಪ್ರದರ್ಶನ ನೀಡಿದರು. ಈ ಇಬ್ಬರು ಆಟಗಾರ ಅಬ್ಬರಿಸಿ 64 ರನ್​ಗಳ ಜೊತೆಯಾಟವಾಡಿದರು. ಆದ್ರೆ ರನ್​ ಗಳಿಸುವ ಭರದಲ್ಲಿ ಪಟಿದಾರ್ 26ಕ್ಕೆ ಔಟಾದರು. ಇದರ ಬೆನ್ನಲ್ಲೇ 35 ರನ್​ ಗಳಿಸಿ ಅಬ್ಬರಿಸುತ್ತಿದ್ದ ಮ್ಯಾಕ್ಸ್​ವೆಲ್​ ಸಹ ಪೆವಿಲಿಯನ್​ ದಾರಿ ಹಿಡಿದರು.

ಮ್ಯಾಕ್ಸ್​ವೆಲ್​ ಔಟಾದ ಬಳಿಕ ಉಳಿದ ಬ್ಯಾಟ್ಸ್​ಮನ್​ಗಳು ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. ದಿನೇಶ್ ಕಾರ್ತಿಕ್ 11 ರನ್​, ಅಹ್ಮದ್​ 9 ರನ್​, ವನಿಂದು ಹಸರಂಗ 1 ರನ್​, ಹರ್ಷಲ್ ಪಟೇಲ್ 11 ರನ್​, ಮೊಹಮ್ಮದ್ ಸಿರಾಜ್ 9 ಮತ್ತು ಜೋಸ್ ಹ್ಯಾಜಲ್​ವುಡ್ 7 ರನ್​ ಗಳಿಸಿ ಅಜಯರಾಗಿ ಉಳಿದರು. ಒಟ್ಟಿನಲ್ಲಿ ಆರ್​ಸಿಬಿ ತಂಡ ನಿಗದಿತ 20 ಓವರ್​ಗಳಿಗೆ 9 ವಿಕೆಟ್​ ಕಳೆದುಕೊಂಡು 155 ರನ್​ ಗಳಿಸಲು ಮಾತ್ರ ಸಶಕ್ತವಾಯಿತು.

155 ರನ್​ಗಳನ್ನು ಕಲೆ ಹಾಕುವ ಮೂಲಕ ಆರ್​ಸಿಬಿ ತಂಡ ಪಂಜಾಬ್​ ವಿರುದ್ಧ 54 ರನ್​ಗಳ ಹೀನಾಯ ಸೋಲು ಕಂಡಿತು. ಪಂಜಾಬ್​ ಪರ ಕಾಗಿಸೋ ರಬಾಡಾ 3 ವಿಕೆಟ್​ ಪಡೆದ್ರೆ, ಧವನ್​ ಮತ್ತು ರಾಹುಲ್ ಚಹರ್​ ತಲಾ ಎರಡು ವಿಕೆಟ್​ ಕಬಳಿಸಿದ್ರು. ಹರ್ಪ್ರಿತ್​ ಬ್ರಾರ್​ ಮತ್ತು ಹರ್ಷದೀಪ್​ ಸಿಂಗ್ ತಲಾ ಒಂದೊಂದು ವಿಕೆಟ್​ ಪಡೆದು ತಂಡದ ಗೆಲುವಿಗೆ ಆಸರೆಯಾದರು.

ಪ್ಲೇ-ಆಫ್​ ರೇಸ್​​ನಲ್ಲಿ ಉಳಿದುಕೊಳ್ಳಲು ಪಂಜಾಬ್ ತಂಡಕ್ಕೆ ನಿನ್ನೆಯ ಪಂದ್ಯದಲ್ಲಿ ಗೆಲುವು ಸಾಧಿಸುವುದು ಅತಿ ಅವಶ್ಯವಾಗಿತ್ತು. ಅದರಂತೆ ತಂಡ 54 ರನ್​ಗಳಿಂದ ಆರ್​ಸಿಬಿ ವಿರುದ್ಧ ಭರ್ಜರಿ ಜಯ ಸಾಧಿಸಿದ್ದು, ಪ್ಲೇ ಆಫ್​ ಕನಸು ಇನ್ನು ಜೀವಂತವಾಗಿದೆ. ಆರ್​ಸಿಬಿಗೂ ಪ್ಲೇ ಆಫ್​ ಕನಸು ಜೀವಂತವಾಗಿದ್ದು, ಬಲಿಷ್ಠ ಲಖನೌ ತಂದ ವಿರುದ್ಧ ಗೆಲುವು ಸಾಧಿಸುವುದು ಅನಿವಾರ್ಯವಾಗಿದೆ.

ಮುಂಬೈನ ಬ್ರಬೋರ್ನ್ ಕ್ರೀಡಾಂಗಣದಲ್ಲಿ ಎದುರಾಗಿದ್ದ ಈ ಉಭಯ ತಂಡಗಳು ಪ್ಲೇ-ಆಫ್​ ರೇಸ್​ನಲ್ಲಿದ್ದಾವೆ. ಈ ಎರಡು ತಂಡಗಳಿಗೂ ನಿನ್ನೆಯ ಪಂದ್ಯ ಅತಿ ಮುಖ್ಯವಾಗಿತ್ತು. ಐಪಿಎಲ್​​ನಲ್ಲಿ ಆರ್​​ಸಿಬಿ ಇಲ್ಲಿಯವರೆಗೆ 13 ಪಂದ್ಯಗಳ ಪೈಕಿ 7ರಲ್ಲಿ ಜಯ, 6ರಲ್ಲಿ ಸೋಲು ಕಂಡಿದ್ದು, 14 ಪಾಯಿಂಟ್​​ಗಳೊಂದಿಗೆ 4ನೇ ಸ್ಥಾನದಲ್ಲಿದೆ. ಆರ್​ಸಿಬಿ ವಿರುದ್ಧ ಗೆದ್ದ ಪಂಜಾಬ್​ ಸದ್ಯ 6ನೇ ಸ್ಥಾನಕ್ಕೇರಿದೆ.

ಇಂದು ಸಂಜೆ 7.30ಕ್ಕೆ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ಮಧ್ಯೆ ಪಂದ್ಯ ನಡೆಯಲಿದ್ದು, ಹೈದರಾಬಾದ್​ ತಂಡಕ್ಕೆ ಪ್ಲೇ ಆಫ್​ ಕನಸು ಜೀವಂತವಾಗಿರಿಸಲು ಗೆಲುವು ಅವಶ್ಯಕವಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kumsi MESCOM ಕುಂಸಿ ಮೆಸ್ಕಾಂ ಕಛೇರಿಯಲ್ಲಿ ಮಾರ್ಚ್ 18. ಜನಸಂಪರ್ಕ ಸಭೆ

Kumsi MESCOM ಕುಂಸಿ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಮಾ.18 ರಂದು ಬೆಳಿಗ್ಗೆ...

Karnataka Legislative Council ಇಡೀ ರಾಷ್ಟ್ರವೇ ಮೆಚ್ಚುವ ‌ಕಾನೂನು ಶಿಕ್ಷಣ ಸಿಗಲಿ- ಮಾಜಿ ನ್ಯಾ.ಎಂ.ಎನ್.ವೆಂಕಟಾಚಲಯ್ಯ

Karnataka Legislative Council ಪ್ರವಾಹೋಪಾದಿಯಲ್ಲಿ ಸಾಧನೆ ಮಾಡುವ ಹಂಬಲ ಉಳ್ಳವರನ್ನು ತಡೆಯಲು...

District Consumer Disputes Redressal Commission ರೆಫ್ರಿಜಿರೇಟರ್ ಸೇವಾನ್ಯೂನತೆ. ಜಿಲ್ಲಾ ವ್ಯಾಜ್ಯ ಪರಿಹಾರ ಆಯೋಗದಿಂದ ಗ್ರಾಹಕರಿಗೆ ಸಿಕ್ಕಿತು ನ್ಯಾಯ

District Consumer Disputes Redressal Commission ದೂರುದಾರರಾದ ಎಸ್.ವಿ.ಲೋಹಿತಾಶ್ವ ಇವರು ಎದುರುದಾರರಾದ...