ಅಪರಾಧಿಗಳು ಅಧಿಕಾರದಲ್ಲಿ ಇರುವ ಬದಲಿಗೆ ಪಾಕಿಸ್ತಾನದ ಮೇಲೆ ಅಣುಬಾಂಬ್ ಹಾಕುವುದು ಉತ್ತಮ ಎಂದು ಪಾಕ್ನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಹೇಳಿದ್ದಾರೆ.
ಈಚೆಗಷ್ಟೇ ಅವಿಶ್ವಾಸ ನಿರ್ಣಯ ಮಂಡನೆ ಮೂಲಕ ಅಧಿಕಾರ ಕಳೆದುಕೊಂಡ ಮೊದಲ ಪಾಕ್ ಪ್ರಧಾನಿ ಎನಿಸಿಕೊಂಡ ಖಾನ್ ಅವರು ಮಾತನಾಡಿ, ಎಸ್ಟಾಬ್ಲಿಷ್ಮೆಂಟ್ ನನಗೆ ಕರೆ ಮಾಡುತ್ತಿದೆ. ಆದರೆ, ನಾನು ಅವರ ನಂಬರ್ ಬ್ಲಾಕ್ ಮಾಡಿದ್ದೇನೆ. ಚುನಾವಣೆ ದಿನಾಂಕ ಘೋಷಣೆ ಆಗುವ ತನಕ ಯಾರೊಂದಿಗೂ ನಾನು ಮಾತನಾಡುವುದಿಲ್ಲ ಎಂದು ತಿಳಿಸಿದ್ದಾರೆ.
ಈ ವಿಷಯದ ಬಗ್ಗೆ ಡಾನ್ ಪತ್ರಿಕೆ ವರದಿ ಮಾಡಿದೆ. ತನ್ನ ಸರ್ಕಾರ ಉರುಳುವುದಕ್ಕೆ ಅಮೆರಿಕವು ಆಗಿನ ವಿಪಕ್ಷದ ಜೊತೆಗೆ ಸೇರಿ ಮಾಡಿದ ಪಿತೂರಿಯೇ ಕಾರಣ ಎಂದು ಒತ್ತಿ ಒತ್ತಿ ಹೇಳಿದ್ದಾರೆ.
ಪಿತೂರಿಗೆ ಬೆಂಬಲ ನೀಡಿದವರು ಪಾಕಿಸ್ತಾನದ ಭವಿಷ್ಯದ ಬಗ್ಗೆ ಯೋಚಿಸಿದರೋ ಇಲ್ಲವೋ ಎಂದು ಖಾನ್ ಕೇಳಿರುವುದಾಗಿ ಜಿಯೋ ಸುದ್ದಿ ವಾಹಿನಿ ತನ್ನ ವರದಿಯಲ್ಲಿ ತಿಳಿಸಿದೆ.
ಈ ಅಪರಾಧಿಗಳು ಅಧಿಕಾರದಲ್ಲಿ ಇರುವ ಬದಲಿಗೆ ಪಾಕಿಸ್ತಾನದ ಮೇಲೆ ಅಣು ಬಾಂಬ್ ಹಾಕುವುದು ಉತ್ತಮ,ಎಂದು ಇಮ್ರಾನ್ ಖಾನ್ ಅವರು ಖಡಕ್ಕಾಗಿ ಹೇಳಿದ್ದಾರೆ.
ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಅಧ್ಯಕ್ಷರಾಗಿರುವ ಇಮ್ರಾನ್ ಖಾನ್, ಕಳೆದ ಜೂನ್ನಲ್ಲಿ ನನಗೆ ಈ ಪಿತೂರಿ ಬಗ್ಗೆ ಗೊತ್ತಾಯಿತು. ಆದರೆ ದುರದೃಷ್ಟ ಏನೆಂದರೆ, ಎಲ್ಲ ನಿರ್ಧಾರಗಳನ್ನು ಸರ್ಕಾರ ದುರ್ಬಲಗೊಳಿಸಲು ತೆಗೆದುಕೊಳ್ಳಲಾಯಿತು. ಹಾಗೂ ನಂತರ ಮುಕ್ತಾಯಗೊಂಡಿತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಎಸ್ಟಾಬ್ಲಿಷ್ಮೆಂಟ್ ಜೊತೆಗಿನ ಸಂಬಂಧ ನನ್ನ ಸರ್ಕಾರದ ಕೊನೆ ದಿನದ ತನಕ ಚೆನ್ನಾಗಿತ್ತು. ಆದರೆ 2 ಸಮಸ್ಯೆಗಳಿದ್ದವು. ಅವುಗಳ ಬಗ್ಗೆ ಕಣ್ಣಲ್ಲಿ ಕಣ್ಣಿಟ್ಟು ನೋಡಲಿಲ್ಲ. ಪ್ರಬಲ ಕೇಂದ್ರಕ್ಕೆ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಉಸ್ಮಾನ್ ಬಜ್ದಾರ್ ತೆಗೆಯಬೇಕಿತ್ತು. ಆದರೆ ಅವರು ಹೇಳಬೇಕಿತ್ತು, ಸಿಂಧ್ ಪ್ರಾಂತ್ಯದಲ್ಲಿ ಹೆಚ್ಚು ಭ್ರಷ್ಟಾಚಾರ ಹಾಗೂ ಆಡಳಿತ ಸಮಸ್ಯೆ ಇತ್ತು ಎಂದು ತಿಳಿಸಿದ್ದಾರೆ.
ಇಮ್ರಾನ್ ಅವರು ಇನ್ನೂ ಮುಂದುವರಿದು, ದೇಶದ ಸ್ಪೈ ಮಾಸ್ಟರ್ ಲೆ. ಜನರಲ್ ಫೈಜ್ ಹಮೀದ್ ವಿಚಾರದಲ್ಲಿ ಎಸ್ಟಾಬ್ಲಿಷ್ಮೆಂಟ್, ಅಂದರೆ ಸೇನೆ ಜೊತೆಗೆ ಭಿನ್ನಾಭಿಪ್ರಾಯ ಇತ್ತು ಎಂದು ತಿಳಿಸಿದ್ದಾರೆ.