ಅತ್ಯಾಚಾರ ಹಾಗೂ ಕೊಲೆ ಅಪರಾಧದ ವಿಚಾರಣೆಯಲ್ಲಿ ಡಿಎನ್‌ಎ ಪರೀಕ್ಷೆಯೇ ಪ್ರಮುಖ ಅಂಶವಲ್ಲ. ಬೇರೆ ಸಾಕ್ಷ್ಯಗಳ ಆಧಾರದ ಮೇಲೂ ಕೂಡ ತೀರ್ಪನ್ನು ನೀಡಬಹುದು ಎಂದು ಸುಪ್ರೀಂ ಕೋರ್ಟ್ ಮಾಹಿತಿ ತಿಳಿಸಿದೆ.
ಒಬ್ಬ ವ್ಯಕ್ತಿ 8 ವರ್ಷದ ಬಾಲಕಿಯ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದ.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಧ್ಯಪ್ರದೇಶದ ಹೈಕೊರ್ಟ್ ಅಪರಾಧಿಗೆ ಮರಣ ದಂಡನೆ ವಿಧಿಸಿತ್ತು. ಅಪರಾಧಿ ಪರ ವಾದ ಮಂಡಿಸಿದ ವಕೀಲರು ಮೃತ ದೇಹದ ಮೇಲೆ ಯಾವುದೇ ರೀತಿಯ ಡಿಎನ್‌ಎ ಟೆಸ್ಟ್ ನಡೆಸಿಲ್ಲ ಅಂತ ವಾದಿಸಿದ್ದರು.
ಈ ಹಿನ್ನಲೆಯಲ್ಲಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಈಗ ಕೋರ್ಟ್ ಡಿಎನ್‌ಎ ಟೆಸ್ಟ್ ಮಾತ್ರ ಪ್ರಮುಖ ಆಗಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.