Wednesday, March 4, 2026
Wednesday, March 4, 2026
Home Blog Page 1553

ಯೂರೋ ಒಕ್ಕೂಟದಿಂದ ರಷ್ಯದ ಮೇಲೆ ತೈಲ ನಿರ್ಬಂಧ:ರಷ್ಕಕ್ಕೀಗ ಸಂಕಷ್ಟ

0

ರಷ್ಯಾ ತೈಲ ಆಮದಿನ ಮೇಲೆ ಯುರೋಪಿಯನ್‌ ಒಕ್ಕೂಟ ಭಾರೀ ನಿರ್ಬಂಧ ಹೇರಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಇನ್ನು ಮುಂದೆ ಭಾರತ ಹಾಗೂ ಚೀನಾ ಮೇಲೆ ಅವಲಂಬನೆ ಆಗಬೇಕಾಗುವ ಲಕ್ಷಣಗಳು ಕಂಡುಬರುತ್ತಿದೆ.

ಯುರೋಪಿಯನ್‌ ಒಕ್ಕೂಟದ ಈ ನಿರ್ಧಾರದಿಂದ ರಷ್ಯಾಗೆ ವರ್ಷಕ್ಕೆ 10 ಬಿಲಿಯನ್‌ ಡಾಲರ್‌ ಅಂದರೆ ಸುಮಾರು 75 ಸಾವಿರ ಕೋಟಿ ರೂಪಾಯಿಯಷ್ಟು ರಫ್ತು ಆದಾಯ ಕಡಿತಗೊಳ್ಳುತ್ತದೆ ಎಂದು ವರದಿಯಿಂದ ತಿಳಿದುಬಂದಿದೆ.

ಇದರ ಜೊತೆಗೆ, ಯುರೋಪ್‌ನಲ್ಲಿ ಫೇಮಸ್‌ ಆಗಿದ್ದ ಯುರಾಲ್ಸ್‌ ಆಯಿಲ್‌ ಬ್ರ್ಯಾಂಡ್‌ಗೆ ಈಗ ಹೊಸ ಕಸ್ಟಮರ್ ಅಂದರೆ ಅದನ್ನು ಖರೀದಿಸೋ ದೇಶಗಳು ಬೇಕಾಗಿವೆ. ಆದರೆ, ಏಷ್ಯಾದಲ್ಲಿ ಸೀಮಿತ ದೇಶಗಳು ಮಾತ್ರ ಇದನ್ನು ಖರೀದಿಸುತ್ತಿವೆ. ಏಕೆಂದರೆ, ಇದಕ್ಕೆ ಅತ್ಯಾಧುನಿಕ ಸಂಸ್ಕರಣೆ ಹಾಗೂ ಮಿಶ್ರಣ ಸಾಮರ್ಥ್ಯಗಳು ಬೇಕಾಗಿದೆ. ಚೀನಾ ಹಾಗೂ ಭಾರತ ಈ ರಿಫೈನರಿಗಳನ್ನು ಹೊಂದಿವೆ. ‌

ದೇಶದಲ್ಲಿ ಕೋರೋನ ಸೋಂಕಿತರ ಸಂಖ್ಯೆ ಏರಿಕೆ: ಸಾವಿನ ಪ್ರಮಾಣ ಕುಸಿತ

0

ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಮತ್ತೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 2,745 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ.

ಸೋಂಕಿತರ ಸಾವಿನ ಸಂಖ್ಯೆಯಲ್ಲಿ ದಿಢೀರ್ ಕುಸಿತವಾಗಿದೆ. 24 ಗಂಟೆಯಲ್ಲಿ 6 ಜನರು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.

ಈ ಮೂಲಕ ದೇಶದಲ್ಲಿ ಇದುವರೆಗೆ ಕೊರೋನಾ ಸೋಂಕಿಗೆ ಸಾವನ್ನಪ್ಪಿದವರ ಸಂಖ್ಯೆ 5,24,636ಕ್ಕೆ ಹೆಚ್ಚಾಗಿದೆ.

ಇನ್ನು ದೇಶದಲ್ಲಿ 18,386 ಕೊರೋನಾ ಸಕ್ರಿಯ ಪ್ರಕರಣಗಳಿವೆ. 24 ಗಂಟೆಯಲ್ಲಿ 2,236 ಜನರು ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ದೇಶದಲ್ಲಿ ಇದುವರೆಗೆ 4,26,17,810 ಜನರು ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದಾರೆ

ನಿನ್ನೆ 10,91,110 ಜನರಿಗೆ ಕೊರೋನಾ ಲಸಿಕೆ ನೀಡಲಾಗಿದೆ. ದೇಶದಲ್ಲಿ ಇದುವರೆಗೆ 1,93,57,20,807 ಡೋಸ್ ಲಸಿಕೆ ಹಾಕಲಾಗಿದೆ. ನಿನ್ನೆ 4,55,314 ಜನರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದೆ.

ಕಾಂಗ್ರೆಸ್& ಜೆಡಿಎಸ್ ನಿಂದ ಹಣವಂತರಿಗೆ ಟಿಕೆಟ್- ಸದಾನಂದಗೌಡ

0

ಹಿಂದೆ ವಿಧಾನ ಪರಿಷತ್ ಗೆ ಹಣವಿದ್ದವರಿಗೆ ಮಾತ್ರ ಪ್ರವೇಶ ಸಿಗುತ್ತಿತ್ತು. ಆದರೆ, ಈಗ ಕಾಲ ಬದಲಾಗಿದೆ. ಪ್ರತಿಯೊಂದು ಕ್ಷೇತ್ರಗಳಿಂದ ಪ್ರಬುದ್ಧರನ್ನು ನೇಮಕ ಮಾಡಲಾಗುತ್ತಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದಲ್ಲಿ ಹಣವಿದ್ದವರಿಗೆ ಮಾತ್ರ ಮೇಲ್ಮನೆಗೆ ಟಿಕೆಟ್ ನೀಡಲಾಗುತ್ತಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು ತಿಳಿಸಿದ್ದಾರೆ.

ಮೈಸೂರಿನಲ್ಲಿ ಮಧ್ಯಮ ಮಿತ್ರರೊಂದಿಗೆ ಮಾತನಾಡಿದ ಅವರು, ಗುಡ್ಡಗಾಡಿನಲ್ಲಿ ವಾಸ ಮಾಡುವವರ ಬಗ್ಗೆ ಯಾರು ಧ್ವನಿ ಎತ್ತುವುದಿಲ್ಲ.
ಅಂತವರನ್ನು ಬಿಜೆಪಿ ಗುರುತಿಸಿ ಟಿಕೆಟ್ ನೀಡಿದೆ. ಇದು ಪಕ್ಷದ ಸಂಪ್ರದಾಯ. ಬಿಜೆಪಿ ಅಭ್ಯರ್ಥಿ ಮೈ.ವಿ ರವಿಶಂಕರ್, ನಾಲ್ಕು ಜಿಲ್ಲೆಗಳ ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡಿದ್ದಾರೆ. ಕಳೆದ ಬಾರಿ ಅಲ್ಪ‌ ಮತಗಳಿಂದ ಸೋಲಾಯಿತು.ಈ ಚುನಾವಣೆಯಲ್ಲಿ ನಮಗೆ ಯಾರು ಪ್ರತಿಸ್ಪರ್ಧಿಗಳೇ ಇಲ್ಲಾ ಎಂದು ಹೇಳಿದ್ದಾರೆ.

ಬಿಜೆಪಿಗೆ ಈ ಭಾರಿ ದೊಡ್ಡ ರೀತಿಯಲ್ಲಿ ಜನ ಬೆಂಬಲವಿದೆ. ಬಿಜೆಪಿ ಅಭ್ಯರ್ಥಿ ಪಕ್ಷದ ನಿಷ್ಟಾವಂತ ಕಾರ್ಯಕರ್ತನಾಗಿ ಕೆಲಸ ಮಾಡುತ್ತಾರೆ. ಮೈಸೂರಿನಲ್ಲಿ ಈ ಭಾರಿ ಸಂಘನಾತ್ಮಕ ಕೆಲಸ ಮಾಡುತ್ತಿದ್ದೇವೆ. ಈ ಬಾರಿ ಗೆದ್ದೆ ಗೆಲ್ಲುತ್ತೇವೆ ಎಂದು ಸದಾನಂದ ಗೌಡ ಅವರು ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಘದ ಮೇಲೆ ಟ್ವೀಟ್ ಮಾಡಿ ಸುಸ್ತಾಗಿದೆ. ಇಂದಿನಿಂದ ಕುಮಾರಸ್ವಾಮಿ ಅವರ ವಿರುದ್ಧ ವಾರ್ ಶುರುವಾಗಿದೆ. ಕಾಂಗ್ರೆಸ್ ಅಳಿವಿನ ಅಂಚಿನಲ್ಲಿದೆ. ಅವರ ಟ್ವೀಟ್ ಗೆ ಉತ್ತರ ಕೊಡದೇ ಇರುವುದೇ ಲೇಸು. ಟ್ವೀಟ್ ಮಾಡುವುದೇ ಅವರಿಗೆ ಅಭ್ಯಾಸವಾಗಿದೆ ಎಂದು ಸದಾನಂದ ಗೌಡ ಅವರು ಹೇಳಿದ್ದಾರೆ.

ರಾಜ್ಯಸಭೆ ಚುನಾವಣೆ: ಜೆಡಿಎಸ್ ಬೆಂಬಲಿಸಲು ರೇವಣ್ಣ ಸಿದ್ಧು ಭೇಟಿ

0

ರಾಜ್ಯಸಭೆ ಚುನಾವಣೆಯಲ್ಲಿ ಹೊಸದೊಂದು ತಿರುವು ಸಿಕ್ಕಿದೆ. ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ.

ಇಂದು ಸಿದ್ದರಾಮಯ್ಯ ಅವರ ಮನೆಗೆ ಭೇಟಿ ನೀಡಿದ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರು, ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಗೆಲುವಿಗಾಗಿ ಕಾಂಗ್ರೆಸ್ ಬೆಂಬಲ ನೀಡುವ ಸಂಬಂಧ ಭೇಟಿಯಾಗಿ ಮನವಿ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ಗರೀಬ್ ಕಲ್ಯಾಣ್ ಯೋಜನೆ ಮೋದಿ ಅವರಿಂದ ವರ್ಚುವಲ್ ಸಂವಾದ

0

ಆಯಷ್ಮಾನ್ ಭಾರತ ಯೋಜನೆಯಿಂದ ತಮ್ಮ ತಾಯಿ ಸೇರಿದಂತೆ ಊರಿನ ಹಲವರಿಗೆ ವೈದ್ಯಕೀಯ ಸೌಲಭ್ಯ ಸಿಕ್ಕಿದೆ ಎಂದು ಕಲಬುರಗಿ ಜಿಲ್ಲೆಯ ಮಹಿಳೆಯ ಮಾತಿಗೆ ಪ್ರಧಾನಿ ಮೋದಿಜಿ ಅವರು ಸಂತೋಷವಾಗಿದ್ದಾರೆ. ನಾನು ಕರ್ನಾಟಕದಲ್ಲಿದ್ದರೆ‌ ನಿಮ್ಮ ಮನೆಗೆ ಬರುತ್ತಿದ್ದೆ ಎಂದು ವರ್ಚುಯಲ್‌ ವೇದಿಕೆಯಲ್ಲಿ ಮೋದಿ ಅವರು ತಿಳಿಸಿದ್ದಾರೆ.

ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ವೇದಿಕೆ ಮೂಲಕ ಶಿಮ್ಲಾದಲ್ಲಿ ಆಯೋಜಿಸಿದ್ದ ಗರೀಬ್ ಕಲ್ಯಾಣ್ ಸಮ್ಮೇಳನದ ಅಂಗವಾಗಿ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಕಿಣ್ಣಿ ಸಡಕ್ ಗ್ರಾಮದ ಸಂತೋಷಿ ಅವರೊಂದಿಗೆ ಸಂವಾದ ನಡೆಸಿದರು. ಆಯುಷ್ಮಾನ್ ಭಾರತ್ ಯೋಜನೆಯ ಫಲಾನುಭವಿ ಸಂತೋಷಿ ಅನಾರೋಗ್ಯ ಪೀಡಿತರಾದ ತಮ್ಮ ತಾಯಿಗೆ ಆಯುಷ್ಮಾನ್ ಭಾರತ್ ಯೋಜನೆಯಡಿ ಉಚಿತ ಚಿಕಿತ್ಸೆ ಮತ್ತು ಜನ ಔಷಧಿ ಕೇಂದ್ರದಲ್ಲಿ ಕೈಗೆಟಕುವ ದರದಲ್ಲಿ ಔಷಧ ದೊರೆತ ಬಗ್ಗೆ ಹರ್ಷವನ್ನು ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಸಂತೋಷಿ ಕನ್ನಡದಲ್ಲಿ ಮಾತನಾಡಿದ್ದಾರೆ. ಅಧಿಕಾರಿಯೊಬ್ಬರು ಅದನ್ನು ಹಿಂದಿಗೆ ಅನುವಾದಿಸಿದ್ದಾರೆ.

ಪ್ರಧಾನಿ ಮೋದಿ ಅವರು ಮಾತನಾಡಿ, ನೀವು ಕನ್ನಡದಲ್ಲಿ ಮಾತನಾಡಿದರೂ ನಿಮ್ಮ ಮುಖದ ಭಾವನೆ ಸಂತಸದಲ್ಲಿರುವುದು ತೋರಿಸುತ್ತದೆ. ನಾನು ಪಕ್ಷದ ಕಾರ್ಯಕರ್ತನಾಗಿ ಕರ್ನಾಟಕದಲ್ಲಿದ್ದರೆ ನಿಮ್ಮ ಮನೆಗೆ ಬಂದು ಸಂತೋಷದಲ್ಲಿ ಭಾಗಿಯಾಗುತ್ತಿದ್ದೆ ಎಂದು ಪ್ರಧಾನಿ ಮೋದಿ ಅವರು ಹೇಳಿದ್ದಾರೆ.

ಇಲ್ಲಿಗೆ 8 ವರ್ಷಗಳಲ್ಲಿ ದೇಶ ದೊಡ್ಡ ಬದಲಾವಣೆ ಕಂಡಿದೆ-ಮೋದಿ

0

ಬಿಜೆಪಿ ನೇತೃತ್ವದ ಆಡಳಿತವು ಭ್ರಷ್ಟಾಚಾರ ನಿರ್ಮೂಲನೆ ಮಾಡಿದೆ. ಕಳೆದ 8 ವರ್ಷಗಳಲ್ಲಿ ದೇಶವು ದೊಡ್ಡ ಪ್ರಮಾಣದಲ್ಲಿ ಬದಲಾವಣೆ ಕಂಡಿದೆ ಎಂದು ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

ನಿನ್ನೆ ಮಂಗಳವಾರ ಶಿಮ್ಲಾದಲ್ಲಿ ನಡೆದ ಜಾಥಕ್ಕೂ ಮುಂಚೆ ಕೇಂದ್ರದ ಹಲವಾರು ಯೋಜನೆಗಳ ಫಲಾನುಭವಿಗಳ ಜೊತೆ ಮೋದಿ ಅವರು ಸಂವಾದ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಮೋದಿಜಿ ಅವರು,2014ರ ಮುಂಚೆ ಭ್ರಷ್ಟಾಚಾರವನ್ನು ಸರ್ಕಾರದ ಅತ್ಯಗತ್ಯ ಭಾಗವಾಗಿ ಪರಿಗಣಿಸಲಾಗಿತ್ತು ಎಂದು ಆರೋಪಿಸಿದ್ದಾರೆ.

ಕಿಸಾನ್ ಸಮ್ಮಾನ್ ನಿಧಿಯ 11ನೇ ಕಂತಾಗಿ 80 ಕೋಟಿ ರೈತರಿಗೆ ₹21,000 ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ.

2014ಕ್ಕೂ ಮುಂಚೆ ಅನೇಕ ಹಗರಣಗಳಿಂದ ಸರ್ಕಾರ ಸುದ್ದಿಯಾಗುತ್ತಿತ್ತು. ಆದರೆ, ಈಗ ಭ್ರಷ್ಟಾಚಾರ ಸಹಿಸದಿರುವುದು ಹಾಗೂ ಅಭಿವೃದ್ಧಿ ಯೋಜನೆಗಳ ಚರ್ಚೆ ನಡೆಯುತ್ತಿದೆ. ದೇಶದಲ್ಲಿ ಬಡತನವೂ ತಗ್ಗಿದೆ. ಇದನ್ನು ಅಂತರರಾಷ್ಟ್ರೀಯ ಏಜೆನ್ಸಿಗಳು ಸಹ ಒಪ್ಪಿಕೊಳ್ಳುತ್ತಿವೆ ಎಂದು ಪ್ರಧಾನಿ ಮೋದಿ ಅವರು ಹೇಳಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಭ್ರಷ್ಟಾಚಾರ ಸಹಿಸದೇ, ವಿವಿಧ ಯೋಜನೆಗಳ 9 ಕೋಟಿ ನಕಲಿ ಫಲಾನುಭವಿಗಳನ್ನು ಪಟ್ಟಿಯಿಂದ ಕೈಬಿಟ್ಟಿದ್ದೇವೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ, ವಿದ್ಯಾರ್ಥಿ ವೇತನ ಅಥವಾ ಯಾವುದೇ ಯೋಜನೆಯಾಗಿರಲಿ, ಅರ್ಹರಿಗೆ ನೇರ ವರ್ಗಾವಣೆಯ ಮೂಲಕ ಸರ್ಕಾರದ ಪ್ರಯೋಜನವನ್ನು ತಲುಪಿಸಿ, ಭ್ರಷ್ಟಾಚಾರದ ವ್ಯಾಪ್ತಿಯನ್ನು ಹತ್ತಿಕ್ಕಿದ್ದೇವೆ. 22 ಲಕ್ಷ ಕೋಟಿ ರೂಪಾಯಿಗಳನ್ನು ನೇರ ನಗದು ವರ್ಗಾವಣೆ ಮೂಲಕ ವಿವಿಧ ಯೋಜನೆಗಳ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಿದ್ದೇವೆ ಎಂದು ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.

ಕೊರೋನಾ ಸಾಂಕ್ರಾಮಿಕ ಎದುರಿಸಲು ಕೈಗೊಂಡ ಸರ್ಕಾರ ಕ್ರಮಗಳನ್ನು ಪ್ರಶಂಸಿದ್ದಾರೆ. ದೇಶದಲ್ಲಿ ಇದುವರೆಗೆ ಸುಮಾರು 200 ಕೋಟಿ ಡೋಸ್‌ ಲಸಿಕೆ ನೀಡಲಾಗಿದೆ. ಅಲ್ಲದೆ, ಹಲವು ದೇಶಗಳಿಗೆ ಕೊರೋನಾ ಲಸಿಕೆಗಳನ್ನು ಪೂರೈಸುವ ಮೂಲಕ ಭಾರತವು ಸ್ನೇಹದ ಹಸ್ತ ಚಾಚಿದೆ ಎಂದು ಮೋದಿ ಅವರು ಹೇಳಿದ್ದಾರೆ.

ಮುಂದಿನ 3 ವರ್ಷಗಳಲ್ಲಿ 18 ಲಕ್ಷ ಮನೆ ನಿರ್ಮಾಣ ಗುರಿ- ಬೊಮ್ಮಾಯಿ

0

ವಸತಿ ರಹಿತರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಿಹಿಸುದ್ದಿಯನ್ನು ನೀಡಿದ್ದಾರೆ. ಅದೇನು ಅಂದರೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮುಂದಿನ 3 ವರ್ಷಗಳಲ್ಲಿ ಕರ್ನಾಟಕದಲ್ಲಿ ಸುಮಾರು 18 ಲಕ್ಷ ಮನೆಗಳನ್ನು ನಿರ್ಮಿಸಲಾಗುತ್ತದೆ ಎಂದು ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿನ್ನೆ ಮಂಗಳವಾರ ಕೇಂದ್ರ ಯೋಜನೆಗಳ ಅನೇಕ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ಈ ವೇಳೆಯಲ್ಲಿ ಮಾತನಾಡಿದ ಬೊಮ್ಮಾಯಿ ಅವರು, ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮುಂದಿನ 3 ವರ್ಷಗಳಲ್ಲಿ ಕರ್ನಾಟಕದಲ್ಲಿ ಸುಮಾರು 18 ಲಕ್ಷ ಮನೆಗಳನ್ನು ನಿರ್ಮಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಭರವಸೆ ನೀಡಿದ್ದಾರೆ.

ಮೋದಿ ಆಡಳಿತದಲ್ಲಿ ನೇರ ಲಾಭ ವರ್ಗಾವಣೆ ಕಲ್ಯಾಣದ ಹಣ ಜನರಿಗೆ ತಲುಪುವುದನ್ನು ಖಾತ್ರಿಪಡಿಸಿದೆ ಎಂದು ಹೇಳಿದ್ದಾರೆ.

ಧೂಮಪಾನಕ್ಕೆ ಹೇಳಿ ಗುಡ್ ಬೈ??

0

ಇಂದಿನ ವಿದ್ಯಮಾನದಲ್ಲಿ ಸಿಗರೇಟ್ ಸೇದುವುದು, ತಂಬಾಕು ಸೇವನೆ, ಮದ್ಯಪಾನ ಸೇವನೆ ಫ್ಯಾಶನ್ ಆಗಿಬಿಟ್ಟಿದೆ.

ಇವುಗಳಿಂದ ಆರೋಗ್ಯಕ್ಕೆ ಹಾನಿ ಉಂಟಾಗಲಿದೆ ಎಂದು ತಿಳಿದರೂ ಸಹ ಈ ಕೆಟ್ಟ ಹವ್ಯಾಸಗಳನ್ನು ಬಿಡುವ ಬಗ್ಗೆ ಯಾರೂ ಯೋಚಿಸುವುದಿಲ್ಲ.

ಈಗಿನ ಕಾಲದಲ್ಲಿ ಶಾಲೆಗೆ ಹೋಗುವ ಹುಡುಗರೂ ಸಹ ಧೂಮಪಾನ , ಮಧ್ಯಪಾನ, ಗುಟ್ಕಾ ಸೇವನೆಯಲ್ಲಿ ತೊಡಗಿದ್ದಾರೆ. ಸಾಂಸಾರಿಕ ಜೀವನದಲ್ಲಿನ ತೊಂದರೆಗಳು, ಹಣಕಾಸಿನ ವಿಚಾರ, ಪ್ರೇಮ ವೈಫಲ್ಯ, ಸೇರಿದಂತೆ ಇನ್ನೂ ಅನೇಕ ಕಾರಣಗಳಿಗೆ ಇವು ಮನಸ್ಸುಗಳು ಈ ಕೆಟ್ಟ ಚಟಗಳಿಗೆ ಬಲಿಯಾಗುತ್ತಿದ್ದಾರೆ.

ಇನ್ನು ಕಾಲೇಜು ಯುವಕರಂತೂ ಲವ್ ಫೇಲ್ಯೂರ್ ಎನ್ನುವ ಕಾರಣಕ್ಕೆ ನಾನೇನು ಮಾಡ್ಲಿ ಸ್ವಾಮಿ, ಎಣ್ಣೆ ನಮ್ಮ ಪ್ರೇಮಿ ಎಂಬಂತೆ ಮಧ್ಯಪಾನದ ದಾಸರಾಗಿದ್ದಾರೆ.

ಪ್ರತಿಯೊಂದು ದಿನಕ್ಕೊಂದು ವಿಶೇಷ ದಿನವಿರುವಂತೆ ಪ್ರತಿವರ್ಷವೂ ಮೇ 31 ರಂದು ವಿಶ್ವ ಧೂಮಪಾನ ನಿಷೇಧ ದಿನವನ್ನು ಆಚರಿಸಲಾಗುತ್ತದೆ.

ಈ ದಿನದಂದು ಸೇವನೆಯಿಂದ ಆಗುವ ಕೆಟ್ಟ ಪರಿಣಾಮಗಳ ಬಗ್ಗೆ ಅರಿವು ಮೂಡಿಸಲಾಗುತ್ತದೆ.
ವಿಶ್ವ ಆರೋಗ್ಯ ಸಂಘಟನೆಯ ಸದಸ್ಯ ರಾಷ್ಟ್ರಗಳು 1987ರಲ್ಲಿ ತಂಬಾಕು ಸೇವನೆಯಿಂದ ಉಂಟಾಗುವ ರೋಗ ಮತ್ತು ಸಾವು ನೋವುಗಳನ್ನು ಸರ್ವರ ಗಮನಕ್ಕೆ ತರಲು ವಿಶ್ವ ತಂಬಾಕು ನಿಷೇಧ ದಿನವನ್ನು ಆಯೋಜಿಸಿದರು..

1982ರಲ್ಲಿ ಮೊದಲ ಬಾರಿಗೆ ವಿಶ್ವ ಆರೋಗ್ಯ ಸಂಸ್ಥೆಯು ತ೦ಬಾಕು ರಹಿತ ದಿನದ ಆಚರಗೆಯ ಬಗ್ಗೆ ಅದಿನೂಚನೆ ಹೊರಡಿಸಿತು.ವಿಶ್ವ ಆರೋಗ್ಯ ಸಂಸ್ಥೆಯು ಆರೋಗ್ಯದ ದೃಷ್ಟಿಯಿಂದ ಧೂಮಪಾನ ನಿಷೇಧ ಬಗ್ಗೆ ಚಿಂತನೆಯನ್ನು ಕೈಗೊ೦ಡಿತು. ಧೂಮಪಾನದಿಂದ ಪ್ರತಿ ಪ್ರತಿವರ್ಷ ಪ್ರಪಂಚದಾದ್ಯಂತ ಮಿಲಿಯನ್ ಜನರು ಸಾವನ್ನಪ್ಪುತ್ತಿದ್ದಾರೆ.

ಧೂಮಪಾನ ಕೆಟ್ಟದ್ದು ಆದರೆ ಧೂಮಪಾನಿಗಳು ಕೆಟ್ಟವರಲ್ಲ.ಆದ್ದರಿಂದ
ದಾರಿ ತಪ್ಪುತ್ತಿರುವ ಯುವಜನತೆಗೆ ಜಾಗೃತಿ ಮೂಡಿಸಲು ಮತ್ತು ಧೂಮಪಾನದ ದುಷ್ಪರಿಣಾಮಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸಿ ‘ತಂಬಾಕು ರಹಿತ’ ಸಮಾಜ ನಿರ್ಮಾಣ ಮಾಡುವ ಸದುದ್ದೇಶದಿಂದಲೇ ವಿಶ್ವ ಆರೋಗ್ಯ ಸಂಸ್ಥೆ ವಿಶ್ವ ತಂಬಾಕು ರಹಿತದಿನ ಎಂದು ಅರ್ಥಪೂರ್ಣವಾಗಿ ಮೇ 31 ನ್ನು ಜಗತ್ತಿನಾದ್ಯಂತ 1987 ನೇ ವರ್ಷದಿಂದ, ಆಚರಿಸುತ್ತಾ ಬಂದಿದೆ.

ಧೂಮಪಾನ, ತಂಬಾಕು, ಸಿಗರೇಟ್ ಮತ್ತು ಬೀಡಿಯಂತಹ ವಸ್ತುಗಳು ಶ್ವಾಸಕೋಶದ ಕ್ಯಾನ್ಸರ್ ಗೆ ಕಾರಣವಾಗುತ್ತವೆ.

ತಂಬಾಕಿನಲ್ಲಿ ಇರುವ ಹಾನಿಕಾರಕ ವಸ್ತುಗಳು ಶ್ವಾಸಕೋಶದ ಮೂಲಕ ಹಾದುಹೋಗುವುದರಿಂದ ಶ್ವಾಸಕೋಶದ ನಾಳಗಳು ಶುಷ್ಕತೆ ಹಾಗೂ ಹಾನಿಯನ್ನು ಉಂಟುಮಾಡುತ್ತವೆ.
ಧೂಮಪಾನ ತ್ಯಜಿಸುವುದರಿಂದ ಶ್ವಾಸಕೋಶದ ಆರೋಗ್ಯವನ್ನು ಕಾಪಾಡಬಹುದು. ಜೊತೆಗೆ ಅನೇಕ ಆರೋಗ್ಯ ಸಮಸ್ಯೆಯನ್ನು ತಡೆಯಬಹುದಾಗಿದೆ.

ಮದುವೆ …ಆಟವಲ್ಲ ಬಾಳೆಂಬ ಶಾಲೆಗೆ ಅಡ್ಮಿಷನ್

0

ಪ್ರತಿಯೊಬ್ಬರ ಜೀವನದಲ್ಲಿ ವಿವಾಹವೆಂಬುದು ಪ್ರಮುಖವಾದ ಘಟ್ಟ. ಕೆಲವೊಂದು ಸಮಯದಲ್ಲಿ ಈ ಅಮೂಲ್ಯವಾದ
ಸಂಬಂಧ ಮುರಿದು ಬಿದ್ದು ವಿಚ್ಛೇದನಕ್ಕೂ ಕೂಡ ತಲುಪುತ್ತದೆ. ಗಂಡ-ಹೆಂಡತಿಯರಲ್ಲಿ ಮನಸ್ತಾಪ ಗಳಿದ್ದು, ಪರಸ್ಪರ ಅರ್ಥಮಾಡಿಕೊಳ್ಳದೆ ಇದ್ದರೆ ವಿಚ್ಛೇದನ ಪಡೆದುಕೊಳ್ಳುವುದು ಸಾಮಾನ್ಯ. ಆದರೆ ಚಿಕ್ಕ ಚಿಕ್ಕ ಕಾರಣಗಳಿಂದಲೂ ಸಹ ಒಂದು ಉತ್ತಮವಾದ ಸಂಬಂಧ ಬೇರ್ಪಡುತ್ತದೆ.

ಹೌದು, ಸಣ್ಣಪುಟ್ಟ ಕಾರಣಗಳಿಂದಲೂ ವಿಚ್ಛೇದನ ವಾಗುತ್ತದೆ ಎಂಬುದಕ್ಕೆ ಇಲ್ಲಿದೆ ಒಂದು ಉದಾಹರಣೆ. ಬರೀ ವಿಚ್ಛೇದನ ಮಾತ್ರವಲ್ಲದೆ, ವಿವಾಹ ನಿಶ್ಚಿತವಾಗಿ ಇನ್ನೇನು ವಿವಾಹವಾಗಬೇಕು ಎನ್ನುವಷ್ಟರಲ್ಲಿ ಮದುವೆ ಮುರಿದು ಬಿದ್ದ ಘಟನೆಗಳನ್ನು ಅದೆಷ್ಟು ಪ್ರಸಂಗಗಳನ್ನು ಕೇಳಿರುತ್ತೇವೆ.

ಒಬ್ಬಳು ತನ್ನ ವಿವಾಹದಲ್ಲಿ ಫೋಟೋಗ್ರಾಫರ್ ಇಲ್ಲವೆಂದು ವಿವಾಹವೇ ಬೇಡ ಎಂದು ಮದುವೆ ಮಂಟಪದಿಂದ ಹೋರಟ ಘಟನೆ ಮೊನ್ನೆಯಷ್ಟೇ ನಡೆದಿದೆ. ಅದೇ ರೀತಿ ವಿವಾಹವಾಗಿ ತಮ್ಮ ಸಾಂಸಾರಿಕ ಜೀವನವನ್ನು ನಡೆಸಬೇಕಾದರೆ ಹೆಂಡತಿಗೆ ಅಡುಗೆ ಬರುವುದಿಲ್ಲವೆಂದು, ಮೂರು ಹೊತ್ತು ಮ್ಯಾಗಿ ಮಾಡುತ್ತಾಳೆಂದು ಇಲ್ಲೊಬ್ಬ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾನೆ.

ಪ್ರಪಂಚದಲ್ಲಿ ಏನೆಲ್ಲ ಘಟನೆಗಳು ನಡೆಯುತ್ತವೆ ಎಂಬುದಕ್ಕೆ ಇವು ಒಂದು ಚಿಕ್ಕ ಉದಾಹರಣೆಗಳು. ಮನುಷ್ಯನ ಜೀವನದಲ್ಲಿ ಸಣ್ಣ ಸಣ್ಣ ಕಾರಣಗಳು ಕೂಡ ಅನೇಕ ಸಂಬಂಧಗಳನ್ನು ಒಂದು ಮಾಡುತ್ತದೆ. ಅದೇ ರೀತಿ ಚಿಕ್ಕಚಿಕ್ಕ ಕಾರಣಗಳು ಕೂಡ ಉತ್ತಮವಾದ ಸಂಬಂಧಗಳನ್ನು ಬೇರ್ಪಡಿಸಬಹುದು ಎಂಬುದಕ್ಕೆ ಇದು ಉದಾಹರಣೆ.

ಸಣ್ಣಪುಟ್ಟ ಕಾರಣಗಳನ್ನೇ ದೊಡ್ಡದು ಮಾಡಿಕೊಂಡರೆ ಮುಂದೆ ಜೀವನದಲ್ಲಿ ದೊಡ್ಡ ಸಮಸ್ಯೆಗಳನ್ನ ಎದುರಿಸುವ ಆತ್ಮವಿಶ್ವಾಸವೇ ಇರುವುದಿಲ್ಲ. ಆದ್ದರಿಂದ ಯಃಕಶ್ಚಿತ್ ಸಮಸ್ಯೆಗಳಿಗೆ ಪರಿಹಾರವನ್ನ ನಾವು ಬೆಳೆಯುತ್ತಲೇ ಕಂಡುಹಿಡಿಯುವ ರೂಢಿ ಮಾಡಿಕೊಳ್ಳಬೇಕು.
ಸಣ್ಣ ಸಮಸ್ಯೆಗೆ ಉತ್ತರ ಕಂಡುಕೊಂಡವರಿಗೆ ಮುಂದೆ ದೊಡ್ಡ ಸಮಸ್ಯೆಗಳ ಪರಿಹಾರಕ್ಕೆ ಸುಲಭಸಾಧ್ಯ ಉಪಾಯ ಹೊಳೆಯುತ್ತದೆ.

ಆಸ್ತಿ ತೆರಿಗೆ ಅವೈಜ್ಞಾನಿಕ: ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ

0

ಮಹಾನಗರ ಪಾಲಿಕೆ ಅವೈಜ್ಞಾನಿಕವಾಗಿ ಆಸ್ತಿ ತೆರಿಗೆ ಹೆಚ್ಚಳ ಮಾಡಿರುವುದನ್ನು ವಿರೋಧಿಸಿ ಇಂದು ಪಾಲಿಕೆ ಮುಂಭಾಗದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ಜನ ಈಗಾಗಲೇ ಸಂಕಷ್ಟದ ಸಂದರ್ಭದಲ್ಲಿದ್ದಾರೆ. ನೀರಿನ ಮತ್ತು ಆಸ್ತಿ ತೆರಿಗೆಯನ್ನು ನಾಲ್ಕೈದು ಪಟ್ಟು ಹೆಚ್ಚಿಸಲಾಗಿದೆ. 10 ಸಾವಿರ ರೂ. ಕಟ್ಟುತ್ತಿದ್ದವರು ಈಗ 45 ಸಾವಿರ ರೂ. ಕಟ್ಟಬೇಕಿದೆ. 25 ಸಾವಿರ ರೂ. ಕಟ್ಟುತ್ತಿದ್ದವರು 1 ಲಕ್ಷ ರೂ. ಕಟ್ಟಬೇಕಿದೆ. ಎಸ್.ಆರ್. ದರ ಹೆಚ್ಚಿಸಿದಂತೆ ತೆರಿಗೆಯನ್ನೂ ಏರಿಕೆ ಮಾಡಲಾಗುತ್ತಿದೆ. ಸ್ವಂತ ಮನೆಯವರೂ ಕೂಡ ಬಾಡಿಗೆ ಮನೆಯವರಂತೆ ಬಾಡಿಗೆ ಕಟ್ಟಬೇಕಾಗುತ್ತದೆ ಎಂದು ಆರೋಪಿಸಿದರು.

ಆಸ್ತಿ ತೆರಿಗೆ ಅವೈಜ್ಞಾನಿಕವಾಗಿ ನಿರ್ಧರಿಸಲಾಗಿದೆ. ಇದರಿಂದ ತೆರಿಗೆದಾರರ ಮೇಲೆ ಹೊರೆಯಾಗುತ್ತದೆ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಜನರ ಹಿತವನ್ನೇ ಕಡೆಗಣಿಸಲಾಗುತ್ತಿದೆ. ತಕ್ಷಣವೇ ತೆರಿಗೆಯನ್ನು ವಾಪಸ್ ತೆಗೆದುಕೊಂಡು ಹಳೆ ತೆರಿಗೆಯನ್ನೇ ಮುಂದುವರೆಸಬೇಕು ಎಂದು ಪ್ರತಿಭಟನಾಕಾರರು ಪಾಲಿಕೆ ವಿರುದ್ಧ ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಮಂಗನ ಕಾಯಿಲೆ ಸಂಶೋಧನಾ ಲ್ಯಾಬ್ ಸಾಗರದಲ್ಲಿ ಆರಂಭಿಸಲು ಗುರುತಿಸಲಾಗಿತ್ತು. ಆದರೆ ವಿಜ್ಞಾನಿಗಳು ಅಲ್ಲಿಗೆ ಬರುವುದಿಲ್ಲ. ಹೀಗಾಗಿ ಬೆಂಗಳೂರಿನಲ್ಲಿ ಆರಂಭಿಸಬೇಕೆಂಬ ಬೇಡಿಕೆ ಬಂದಿದೆ. ಆದರೆ ಶಿವಮೊಗ್ಗದಲ್ಲಾದರೂ ಲ್ಯಾಬ್ ಆರಂಭಿಸಬೇಕೆಂದು ಒತ್ತಾಯಿಸಲಾಗಿದೆ ಎಂದರು.

ಕರೂರು ಜಾಗವನ್ನು ಬಫರ್ ಜೋನ್ ಮಾಡುವ ಪ್ರಸ್ತಾವನೆಯನ್ನು ಕೈ ಬಿಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುತ್ತದೆ ಎಂದರು. ಅವರು, ಮುಳುಗಡೆ ಪ್ರದೇಶದವರಿಗೆ ಅರಣ್ಯ ಕಾಯಿದೆಗಳಿಂದ ಮುಕ್ತಿಯೇ ಇಲ್ಲದಂತಾಗಿದೆ. ಒಂದಾದ ಮೇಲೊಂದರಂತೆ ನಿಯಮಗಳನ್ನು ಹೇರಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.