Wednesday, March 4, 2026
Wednesday, March 4, 2026
Home Blog Page 1552

ಅಮೆರಿಕ ವಿರುದ್ಧ ಚೀನಾದಿಂದ ಯರೋಪಿಯನ್ ದೇಶಗಳಿಗೆ ಶಸ್ತ್ರಾಸ್ತ್ರ ಸರಬರಾಜು

0

ಕಳೆದ ಏಪ್ರಿಲ್‌ ತಿಂಗಳಲ್ಲಿ ಯುರೋಪಿನ ಸರ್ಬಿಯಾ ರಾಷ್ಟ್ರ ತನ್ನ ಒಂದು ವಾಯುನೆಲೆಯಲ್ಲಿ ‘ಶೀಲ್ಡ್‌ 2022’ ಹೆಸರಿನ ರಕ್ಷಣಾ ವ್ಯವಸ್ಥೆಯ ಪ್ರದರ್ಶನವನ್ನು ಏರ್ಪಡಿಸಿತ್ತು.

ಆ ಸಮಾರಂಭದಲ್ಲಿ ಸರ್ಬಿಯಾದ ನಾಯಕರು ಭಾಗವಹಿಸಿದ್ದು, ದೇಶದ ಸಾವಿರಾರು ನಾಗರಿಕರೂ ಭಾಗವಹಿಸಿ ಅಲ್ಲಿ ಪ್ರದರ್ಶಿಸಿದ್ದ ಸಮರ ಆಯುಧ, ಉಪಕರಣಗಳನ್ನು ವೀಕ್ಷಸಲು ಅನುಮತಿ ನೀಡಲಾಗಿತ್ತು

ಬೆಲ್‌ಗ್ರಾಡ್‌ ಈಗ ಯುರೋಪಿಯನ್‌ ಒಕ್ಕೂಟದಿಂದ ನಿರಾಶೆಗೊಂಡು, ಬೀಜಿಂಗ್‌ ಹಾಗೂ ಮಾಸ್ಕೋ ಜೊತೆಗಿನ ದೀರ್ಘ ಸಮಯದ ಒಡನಾಟವನ್ನು ಹೆಚ್ಚಿಸುತ್ತಿರುವ ಈ ಸಂದರ್ಭದಲ್ಲಿ, ತೆರೆದ ಬಯಲಿನಲ್ಲಿ ಅತ್ಯಂತ ಜಾಗರೂಕವಾಗಿ ನಡೆದ ಸರ್ಬಿಯಾದ ಈ ಪ್ರದರ್ಶನ ಆ ರಾಷ್ಟ್ರದ ಸೈನ್ಯದ ಸಾಮರ್ಥ್ಯವನ್ನು ಅನಾವರಣಗೊಳಿಸಿತ್ತು.

ಶೀಲ್ಡ್‌ 2022ರಲ್ಲಿ ಸರ್ಬಿಯಾಕ್ಕೆ ಚೀನಾ ಮತ್ತು ರಷ್ಯಾ ಜತೆಗಿರುವ ಸಂಬಂಧವನ್ನು ದೃಢೀಕರಿಸಲು ಬೇಕಿದ್ದ ಕುರುಹುಗಳೂ ಇದ್ದವು. ಕನಿಷ್ಠ ಒಂದು ಬ್ಯಾಟರಿ ಚೀನಾ ನಿರ್ಮಿತ ಎಚ್‌ ಕ್ಯೂ – 22 ಎಸ್‌ಎಎಂಗಳು (ನೆಲದಿಂದ ಆಗಸಕ್ಕೆ ದಾಳಿ ಮಾಡುವ ಕ್ಷಿಪಣಿಗಳು) ಹಾಗೂ ರಷ್ಯಾ ನಿರ್ಮಿತ ಪಾಂಟ್ಸಿರ್‌ ಎಸ್‌1ಗಳು ಪ್ರದರ್ಶಿಸಲ್ಪಟ್ಟಿದ್ದವು.

ಚೀನಾದ ಎಚ್‌ ಕ್ಯೂ – 22 ಮೀಡಿಯಂ ರೇಂಜ್‌ ಎಸ್‌ಎಎಂಗಳು (ರಫ್ತಾದ ಸಂದರ್ಭದಲ್ಲಿ ಅದನ್ನು ಎಫ್‌ಕೆ – 3 ಎಂದು ಗುರುತಿಸಲಾಗಿತ್ತು) ಶೀಲ್ಡ್‌ 2022ರಲ್ಲಿ ಏಪ್ರಿಲ್‌ 30ರಂದು ಕಾಣಿಸಿಕೊಂಡದ್ದು ಹಲವು ಕಾರಣಗಳನ್ನು ಪ್ರತಿನಿಧಿಸುತ್ತವೆ. ಇದನ್ನು 1990ರ ದಶಕದ ಕೊನೆಯಲ್ಲಿ ಅನುಭವಿಸಿದ ಕುಸಿತ ಮತ್ತು ದಶಕಗಳ ಕಾಲ ಅನುಭವಿಸಿದ ಮರುಬಂಡವಾಳ ಹೂಡಿಕೆಯ ಕೊರತೆಯ ನಂತರ ಸರ್ಬಿಯಾದ ವಾಯು ರಕ್ಷಣೆಯಲ್ಲಿನ ಅತಿ ದೊಡ್ಡ ಜಿಗಿತ ಎಂದೇ ಪರಿಗಣಿಸಬಹುದು.

ಆ ಕಾರಣದಿಂದ ಬಹುತೇಕ ಕಳೆದ ವರ್ಷದ ತನಕ ಸರ್ಬಿಯಾದ ವಾಯುಪಡೆ ರಷ್ಯಾ ನಿರ್ಮಿತ, ಈಗಾಗಲೇ ಹಳೆಯದಾಗಿದ್ದ ಎಸ್‌ಎಎಂಗಳ ಮೇಲೆ ಅವಲಂಬಿತವಾಗಿತ್ತು. ಚೀನಾ ನಿರ್ಮಿತ ಎಸ್‌ಎಎಂ ಎಚ್‌ಕ್ಯೂ – 9/9ಬಿ/9ಬಿಇ ಜೊತೆ ಹೋಲಿಕೆ ಇದ್ದರೂ, ಎಚ್‌ಕ್ಯೂ – 22ರ ಪಾತ್ರ ಬಹುಪದರಗಳ ವಾಯು ರಕ್ಷಣಾ ಜಾಲದಲ್ಲಿನ ಅಂತರವನ್ನು ಕಡಿಮೆ ಮಾಡುವುದಾಗಿದೆ.

ಪಿಎಲ್‌ಎ ಮೂಲಕ ನಿರ್ವಹಿಸಲ್ಪಟ್ಟಾಗ, ವಿಮಾನ ವಿರೋಧಿ ದಾಳಿಯಲ್ಲಿ ಎಚ್‌ಕ್ಯೂ – 7 ಹಾಗೂ ಎಚ್‌ಕ್ಯೂ – 17/17ಎಇಗಳು ಕನಿಷ್ಠ ದೂರದ್ದಾದರೆ, ಎಚ್‌ಕ್ಯೂ – 16 ಹಾಗೂ ಎಚ್‌ಕ್ಯೂ – 22 ಮಿಡ್‌ ರೇಂಜ್‌ ವ್ಯವಸ್ಥೆಗಳಾಗಿದ್ದು, ಕ್ರೂಸ್‌ ಕ್ಷಿಪಣಿ ಹಾಗೂ ಡ್ರೋನ್‌ಗಳನ್ನು ಹೊಡೆದುರುಳಿಸಬಲ್ಲವು.

ಕೊನೆಯದಾಗಿ ಎಚ್‌ಕ್ಯು – 9 ಹಾಗೂ ರಷ್ಯಾ ಪೂರೈಸಿರುವ ಎಸ್‌ – 400 ಗಳು, ಒಳಬರುವ ಶತ್ರು ವಿಮಾನಗಳು, ಬಾಂಬರ್‌ಗಳು, ಅತ್ಯಂತ ಎತ್ತರದಲ್ಲಿ ಹಾರುವ ಡ್ರೋನ್‌ಗಳು ಹಾಗೂ ದಾಳಿ ಎಸಗುವ ಯುದ್ಧ ವಿಮಾನಗಳನ್ನು ಗುರುತಿಸಿ, ದಾಳಿ ನಡೆಸುವ ನಡೆಸಬಲ್ಲವಾಗಿವೆ.

ಈ ವಿವರಣೆ ಚೀನಾದ ಸೈನ್ಯವು ತನ್ನ ವಾಯುರಕ್ಷಣೆಯನ್ನು ಬಹುತೇಕ ಹೇಗೆ ರೂಪಿಸುತ್ತದೆ ಎಂಬ ಅಂದಾಜು ಒದಗಿಸುತ್ತದೆ.

ಇತ್ತೀಚೆಗೆ ಚೀನಾ ನಡೆಸುತ್ತಿರುವ ಶಸ್ತ್ರಾಸ್ತ್ರಗಳ ವ್ಯಾಪಾರ ಕಡಿಮೆ ಸೂಕ್ಷ್ಮತೆಯಿಂದ ಕೂಡಿದೆ. 2020ರಲ್ಲಿ ಸರ್ಬಿಯಾಗೆ ಸಣ್ಣ ಪ್ರಮಾಣದಲ್ಲಿ ಸಿಎಚ್‌ – 92 ಯುದ್ಧ ಡ್ರೋನ್‌ಗಳು ಹಾಗೂ ಲೇಸರ್‌ ನಿರ್ದೇಶಿತ ಶಸ್ತ್ರಗಳ ಪೂರೈಕೆಯಾಗಿತ್ತು. ಸರ್ಬಿಯಾಗೆ ಮುಂದಿನ ದಿನಗಳಲ್ಲಿ ದೊಡ್ಡದಾದ, ಮಧ್ಯಮ ಎತ್ತರದ ಕಾಂಬ್ಯಾಟ್ ಡ್ರೋನ್‌ಗಳು‌ ಬರಲಿವೆ ಎಂಬ ಸುದ್ದಿಗಳು ಸತತವಾಗಿ ಹರಿದಾಡುತ್ತಿವೆ.

ಈಗ ಸರ್ಬಿಯಾದ ಬಳಿ ಇರುವ ಕನಿಷ್ಠ ಒಂದು ಬ್ಯಾಟರಿ ಎಚ್‌ಕ್ಯೂ – 22 ಹಾಗೂ ಇನ್ನೂ ಲಭ್ಯವಾಗಲಿರುವ ಆಯುಧಗಳು ಸರ್ಬಿಯಾದ ಅದರ ವಾಯುಪಡೆಯನ್ನು, ಭೂಸೇನಾ ಪಡೆಯೊಂದಿಗೆ ಕೇವಲ ಗಡಿ ರಕ್ಷಣಾ ಹಂತವನ್ನು ಮೀರಿ ಬೆಳೆಯುವಂತೆ ಮಾಡಲು ಶಕ್ತವಾಗಿದೆ. ಕಳೆದ ಕೆಲ ವರ್ಷಗಳಲ್ಲಿ ಚೀನಾ ತನ್ನ ಸರ್ಕಾರಿ ಸ್ವಾಮ್ಯದ ರಕ್ಷಣಾ ಕೈಗಾರಿಕೆಗಳ ಮೂಲಕ, ಹಣದ ಕೊರತೆ ಎದುರಿಸುತ್ತಿರುವ, ಆಧುನೀಕರಣಕ್ಕೆ ಹೆಣಗಾಡುತ್ತಿರುವ ಸೈನ್ಯಗಳನ್ನು ಅಭಿವೃದ್ಧಿಪಡಿಸಬಹುದು ಎಂಬುದನ್ನು ಯಾವುದೇ ಅನುಮಾನಕ್ಕೆ ಎಡೆಯಿಲ್ಲದಂತೆ ಸಾಬೀತುಪಡಿಸಿದೆ.

ಜೂನ್ ಕೊನೆಯಲ್ಲಿ ಪಿಯುಸಿ ಫಲಿತಾಂಶ ಪ್ರಕಟಿಸುವ ಸಂಭಾವ್ಯತೆ

0

ಈಗಾಗಲೇ ಘೋಷಿಸಿರುವಂತೆ ಜೂನ್‌ ಮೂರನೇ ವಾರದಲ್ಲೇ ದ್ವಿತೀಯ ಪಿಯುಸಿ ಫಲಿತಾಂಶವನ್ನು ಪ್ರಕಟಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ಸರ್ವ ಪ್ರಯತ್ನ ನಡೆಸುತ್ತಿದೆ.

ಜೂನ್ ಮೂರನೇ ವಾರದಲ್ಲಾದರೆ ಜೂ.24ರಂದು, ನಾಲ್ಕನೇ ವಾರದಲ್ಲಾದರೆ ಜೂ.28ಕ್ಕೆ ಫಲಿತಾಂಶ ನೀಡಲು ತಾತ್ಕಾಲಿಕ ದಿನಾಂಕ ನಿಗದಿಪಡಿಸಿಕೊಳ್ಳಲಾಗಿದೆ ಎನ್ನಲಾಗುತ್ತಿದೆ.
ಆದರೆ, ಇದನ್ನು ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರಾದ ರಾಮಚಂದ್ರನ್‌ ನಿರಾಕರಿಸಿದ್ದಾರೆ.

ಮೂರನೇ ವಾರದಲ್ಲೇ ಫಲಿತಾಂಶ ನೀಡುವ ಪ್ರಯತ್ನ ಮಾಡುತ್ತಿದ್ದೇವೆ. ನಿರೀಕ್ಷೆಯಂತೆ ಮೌಲ್ಯಮಾಪನ ಕಾರ್ಯವೂ ನಡೆಯುತ್ತಿದೆ. ಅನಿರೀಕ್ಷಿತ ಕಾರಣಗಳಿಂದ ಸಾಧ್ಯವಾಗಿದ್ದರೆ ಮಾತ್ರ ಫಲಿತಾಂಶ ಪ್ರಕಟಣೆ ನಾಲ್ಕನೇ ವಾರದಲ್ಲಿ ಆಗಬಹುದು. ಆದರೆ, ಇನ್ನೂ ಯಾವುದೇ ತಾತ್ಕಾಲಿಕ ದಿನಾಂಕ ನಿಗದಿ ಪಡಿಸಿಲ್ಲ.

ಇಲಾಖೆ ಮೂಲಗಳ ಪ್ರಕಾರ ಮೌಲ್ಯಮಾಪನ ಕಾರ್ಯ ಮೇ 23ರಿಂದ ಆರಂಭವಾಗಿದ್ದು, ಕಳೆದ ಎಂಟು ದಿನಗಳಲ್ಲಿ ಶೇ.50ರಷ್ಟುಮೌಲ್ಯಮಾಪನ ಕಾರ್ಯ ಪೂರ್ಣಗೊಂಡಿದೆ.

ಕಲಾ ಮತ್ತು ವಾಣಿಜ್ಯ ವಿಭಾಗಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಿರೀಕ್ಷೆಗಿಂತ ವೇಗವಾಗಿ ನಡೆದಿದೆ. ವಿಜ್ಞಾನ ವಿಷಯಗಳ ಮೌಲ್ಯಮಾಪನ ಕಾರ್ಯವೂ ನಿರೀಕ್ಷೆಯಂತೆ ನಡೆಯುತ್ತಿದೆ. ಇನ್ನೊಂದು ವಾರದೊಳಗೆ ಬಹುತೇಕ ಮೌಲ್ಯಮಾಪನ ಕಾರ್ಯ ಪೂರ್ಣಗೊಳ್ಳಲಿದ್ದು, ನಂತರದ 10 ದಿನಗಳ ಒಳಗೆ ಫಲಿತಾಂಶ ಪ್ರಕಟಣೆಯ ಮಟ್ಟಕ್ಕೆ ಸಿದ್ಧವಾಗಲಿದೆ.

ಮೌಲ್ಯಮಾಪನ ಪೂರ್ಣಗೊಂಡು ಫಲಿತಾಂಶ ಪ್ರಕಟಣೆಗೆ ಸಿದ್ಧತೆಗಳು ಪೂರ್ಣಗೊಂಡ ಬಳಿಕ ಅಧಿಕೃತ ದಿನಾಂಕ ನಿಗದಿಪಡಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಅಲ್ಲಿಗೆ ಮೂರನೇ ವಾರದಲ್ಲಿ ಫಲಿತಾಂಶ ಪ್ರಕಟಿಸಲು ಸಮಸ್ಯೆಯಾಗುವುದಿಲ್ಲ ಎನ್ನಲಾಗಿದೆ.

ಏ.22ರಿಂದ ಮೇ 18ರವರೆಗೆ ನಡೆದಿದ್ದ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಗೆ 6.84 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು.

ಶೀಘ್ರವೇ ಎಲ್ಲಾ ಗ್ರಾಮ ಪಂಚಾಯತ್ ಗಳಿಗೆ ಅಮೃತ ಆರೋಗ್ಯ ಯೋಜನೆ

0

ರಾಜ್ಯ ಸರ್ಕಾರವು ಗ್ರಾಮೀಣ ಜನತೆಗೆ ಮತ್ತೊಂದು ಸಿಹಿಸುದ್ದಿ ನೀಡಿದೆ.

ಶೀಘ್ರವೇ ರಾಜ್ಯದ ಎಲ್ಲ ಗ್ರಾಮಪಂಚಾಯಿಗಳಲ್ಲೂ `
ಪಂಚಾಯತ್ ಅಮೃತ ಆರೋಗ್ಯ ಯೋಜನೆ ಜಾರಿಗೆ ಬರಲಿದೆ ಎನ್ನಲಾಗಿದೆ.

ರಾಜ್ಯದಲ್ಲಿ ಈಗಾಗಲೇ 14 ಜಿಲ್ಲೆಗಳ 2,816 ಗ್ರಾಮಪಂಚಾಯಿತಿಗಳಲ್ಲಿ ಪಂಚಾಯತ್‌ ಆರೋಗ್ಯ ಅಮೃತ ಆರೋಗ್ಯ ಯೋಜನೆ ಜಾರಿಯಲ್ಲಿದ್ದು, ಶೀಘ್ರವೇ ರಾಜ್ಯದ 3,146 ಗ್ರಾಮ ಪಂಚಾಯಿತಿಗಳಿಗೆ ವಿಸ್ತರಿಸಿ ಆರೋಗ್ಯ ಕಿಟ್‌ಗಳನ್ನು ವಿತರಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ರಾಜ್ಯದ ಗ್ರಾಮೀಣ ಜನತೆಗೆ ಉತ್ತಮ ಆರೋಗ್ಯ ಜೀವನದ ಉದ್ದೇಶಕ್ಕಾಗಿ ಜಾರಿಗೆ ತಂದಿರುವ ಪಂಚಾಯತ್ ಅಮೃತ ಆರೋಗ್ಯ ಯೋಜನೆ ರಾಜ್ಯದ ಎಲ್ಲ ಗ್ರಾಮಪಂಚಾಯಿತಿಗಳಿಗೆ ಜಾರಿಗೆ ತರಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಉಕ್ರೇನಿನ ನೈಟ್ರಿಕ್ ಆಸಿಡ್ ಟ್ಯಾಂಕ್ ಮೇಲೆ ರಷ್ಯಾ ಧಾಳಿ: ತೀವ್ರ ಆತಂಕ

0

ಉಕ್ರೇನ್‌ನ ಪೂರ್ವ ಭಾಗದ ಮೇಲೆ ಕಂಟ್ರೋಲ್‌ ಸಾಧಿಸಲು ಒಂದೊಂದೇ ನಗರಗಳನ್ನ ಆಹುತಿ ಪಡಿಯುತ್ತಿರುವ ರಷ್ಯಾ ಈಗ ಯುಕ್ರೇನ್‌ನ ಮತ್ತೊಂದು ಇಂಪಾರ್ಟೆಂಟ್‌ ಸಿಟಿ ಸೆವೆರೊದೊನೆಸ್ಕ್‌ನ ಕೆಮಿಕಲ್‌ ಪ್ಲಾಂಟ್‌ ಮೇಲೆ ದಾಳಿ ಮಾಡಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಲುಹಾನ್ಸ್‌ ಪ್ರದೇಶದ ಗವರ್ನರ್‌ ಸರ್ಜಿ ಗೈಡೇ ಮಾಹಿತಿ ನೀಡಿದ್ದು ರಷ್ಯಾ ನಮ್ಮ ನಗರದ ಮೇಲೆ ವಾಯುದಾಳಿ ಮಾಡಿದೆ. ಆತಂಕಕಾರಿ ವಿಚಾರ ಅಂದ್ರೆ ರಷ್ಯಾ ದಾಳಿ ನಡೆಸಿರೋದು ನೈಟ್ರಿಕ್‌ ಆಸಿಡ್‌ ಟ್ಯಾಂಕ್‌ ಮೇಲೆ. ಇದು ವಾತವಾರಣಕ್ಕೆ ಬಿಡುಗಡೆಯಾದರೆ, ಉಸಿರಾಟ, ಹಾಗೂ ಚರ್ಮ ಸಂಬಂಧಿತ ಭಯಾನಕ ಖಾಯಿಲೆಗಳು ಉಂಟಾಗಬಹುದು ಅಂತ ಹೇಳಿದ್ದಾರೆ.

ಕಳೆದ ವಾರವಷ್ಟೇ ಇದರ ಹತ್ತಿರಲ್ಲೇ ಇರುವ ಲಿಮೆನ್ ನಗರವನ್ನು ರಷ್ಯಾ ಪಡೆ ತನ್ನ ಕಂಟ್ರೋಲ್‌ಗೆ ತಗೊಂಡಿತ್ತು.
ಸ್ಟಾಟಜಿಕಲಿ ಇಂಪಾರ್ಟೆಂಟ್‌ ಆಗಿದ್ದ ಈ ಸಿಟಿಯನ್ನು ಕೈವಶ ಮಾಡಿಕೊಂಡಿದ್ದು ರಷ್ಯಾಗೆ ಪ್ಲಸ್‌ ಪಾಯಿಂಟ್‌ ಆಗಿತ್ತು.

ಇದಾದ ಬಳಿಕ ಸೆವೆರೊದೊನೆಸ್ಕ್‌ ನಗರದ ಮೇಲೆ ಕಣ್ಣಾಕಿರುವ ರಷ್ಯಾ, ಅದನ್ನ ವಶಕ್ಕೆ ಪಡೆಯಲು ಈಗ ವಿದ್ವಂಸಕ ರೀತಿಯಲ್ಲಿ ವಾಯುದಾಳಿ ಮಾಡಿದೆ ಎನ್ನಲಾಗಿದೆ.

ರಾಜ್ಯಕ್ಕೆ ಜಿಎಸ್ ಟಿ ಪಾಲು ₹ 8,633 ಕೋಟಿ ಬಿಡುಗಡೆ

0

ಕೇಂದ್ರ ಸರ್ಕಾರವು ರಾಜ್ಯಕ್ಕೆ ಬಾಕಿ ಉಳಿಸಿಕೊಂಡಿರುವ ಸರಕು ಹಾಗೂ ಸೇವಾ ತೆರಿಗೆ ಮೊತ್ತದಲ್ಲಿ 8,633 ಕೋಟಿ ರೂಪಾಯಿ ಮಂಜೂರು ಮಾಡಿದೆ.

ಕರ್ನಾಟಕವೂ ಸೇರಿದಂತೆ 21 ರಾಜ್ಯಗಳಿಗೆ ನೀಡಬೇಕಾದ ಸರಕು ಹಾಗೂ ಸೇವಾ ತೆರಿಗೆ 86,912 ಕೋಟಿ ರೂಪಾಯಿಗಳನ್ನು ಕೇಂದ್ರ ಹಣಕಾಸು ಇಲಾಖೆ ಬಿಡುಗಡೆ ಮಾಡಿದೆ. ಇದರಲ್ಲಿ ಕರ್ನಾಟಕದ ಪಾಲು 8633 ಕೋಟಿ ರೂಪಾಯಿ ಸೇರಿದೆ.

ಕೇಂದ್ರ ಸರ್ಕಾರವು ರಾಜ್ಯಕ್ಕೆ 2022ರ ಮೇ 31ರ ವರೆಗಿನ 8,633 ಕೋಟಿ ರೂಪಾಯಿ ಜಿಎಸ್‍ಟಿ ಪರಿಹಾರ ಮಂಜೂರು ಮಾಡಿದೆ. ಇದಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ವಿತ್ತ ಸಚಿವರಾಗಿ ನಿರ್ಮಲಾ ಸೀತಾರಾಮನ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಕೇಂದ್ರವು ರಾಜ್ಯಗಳಿಗೆ ನೀಡಬೇಕಾದ 86,912 ಕೋಟಿ ರೂ. ಜಿಎಸ್‍ಟಿ ಪರಿಹಾರ ನೀಡಿದೆ. ಸುಭಿಕ್ಷ ಆರ್ಥಿಕತೆಯತ್ತ ಇದೊಂದು ಮಹತ್ವದ ಹೆಜ್ಜೆ ಎಂದು ಮುಖ್ಯಮಂತ್ರಿ ಟ್ವೀಟ್ ಮಾಡಿದ್ದಾರೆ. ರಾಜ್ಯಗಳು ತಮ್ಮ ಸಂಪನ್ಮೂಲಗಳನ್ನು ನಿರ್ವಹಿಸುವುದಕ್ಕೆ ನೆರವಾಗಲು ಹಾಗೂ ತಮ್ಮ ಕಾರ್ಯಕ್ರಮಗಳನ್ನು ವಿಶೇಷವಾಗಿ ಬಂಡವಾಳದ ಮೇಲಿನ ವೆಚ್ಚವನ್ನು ಈ ಹಣಕಾಸು ವರ್ಷದಲ್ಲಿ ಯಶಸ್ವಿಯಾಗಿ ನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ರಾಜ್ಯಗಳ ಸಂರಕ್ಷಿತ ಆದಾಯವು ಶೇ.14ರಷ್ಟು ಸಂಯೋಜಿತ ಬೆಳವಣಿಗೆಯಲ್ಲಿ ಬೆಳೆಯುತ್ತಿದೆ. ಆದರೆ ಸೆಸ್ ಸಂಗ್ರಹವು ಅದೇ ಅನುಪಾತದಲ್ಲಿ ಹೆಚ್ಚಾಗದ ಕಾರಣ, ಕೊರೋನಾ ರಕ್ಷಿತ ಆದಾಯ ಮತ್ತು ಸೆಸ್ ಸಂಗ್ರಹದಲ್ಲಿನ ಕಡಿತ ಸೇರಿದಂತೆ ನಿಜವಾದ ಆದಾಯದ ಸ್ವೀಕೃತಿಯ ನಡುವಿನ ಅಂತರ ಮತ್ತಷ್ಟು ಹೆಚ್ಚಿದೆ ಎಂದು ಸರ್ಕಾರ ಹೇಳಿದೆ.

ಕಳೆದ 2017ರ ಜುಲೈ 1ರಂದು ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆ ನೀತಿಯನ್ನು ಪರಿಚಯಿಸಲಾಯಿತು. 5 ವರ್ಷಗಳ ಅವಧಿ ಕಾಯ್ದೆ, 2017ರ ನಿಬಂಧನೆಗಳ ಪ್ರಕಾರ ಅನುಷ್ಠಾನದ ಖಾತೆಯಲ್ಲಿ ಉಂಟಾಗುವ ಯಾವುದೇ ಆದಾಯದ ನಷ್ಟಕ್ಕೆ ಪರಿಹಾರಕ್ಕಾಗಿ ರಾಜ್ಯಗಳಿಗೆ ಭರವಸೆ ನೀಡಲಾಗಿತ್ತು.

ಲವ್ ಜಿಹಾದ್ ವಿರುದ್ಧ ಕಠಿಣ ಕ್ರಮ- ಬೊಮ್ಮಾಯಿ

0

ರಾಜ್ಯದಲ್ಲಿ ಲವ್ ಜಿಹಾದ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.

ಉಡುಪಿಯಲ್ಲಿ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಈಗಾಗಲೇ ಲವ್ ಜಿಹಾದ್ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ.

ತಪ್ಪಿತಸ್ಥರನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ. ಲವ್ ಜಿಹಾದ್ ವಿರುದ್ಧ ಇನ್ನೂ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಬಸವರಾಜ್ ಬೊಮ್ಮಾಯಿ ಅವರು ಹೇಳಿದ್ದಾರೆ.

ಲವ್ ಜಿಹಾದ್ ಪ್ರಕರಣಗಳು ಈಗ ಶುರುವಾದದ್ದು ಅಲ್ಲ. ಹಿಂದಿನಿಂದಲೂ ಇತ್ತು.ಲವ್ ಜಿಹಾದ್ ಪ್ರಕರಣದ ತಪ್ಪಿತಸ್ಥರ ವಿರುದ್ಧ ಈಗಾಗಲೇ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ಪೊಲೀಸರು ಲವ್ ಜಿಹಾದ್ ಮಾಡುವವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಿದ್ದಾರೆ ಎಂದು ಬಸವರಾಜ್ ಬೊಮ್ಮಾಯಿ ಅವರು ಹೇಳಿದ್ದಾರೆ.

ವಾಣಿಜ್ಯ ಬಳಕೆ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ

0

ವಾಣಿಜ್ಯ ಬಳಕೆ ಸಿಲಿಂಡರ್ ದರ ಇಳಿಕೆಯಾಗಿದೆ. 19 ಕೆಜಿ ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಪ್ರತಿ ಸಿಲಿಂಡರ್‌ಗೆ 135 ರೂಪಾಯಿ ಇಳಿಕೆಯಾಗಿದೆ.

ದೆಹಲಿಯಲ್ಲಿ ಇನ್ನು ಮುಂದೆ ವಾಣಿಜ್ಯ ಬಳಕೆ ಸಿಲಿಂಡರ್ ಹೆಲೆ 2 ಸಾವಿರದ 219 ರೂಪಾಯಿ, ಕೋಲ್ಕತ್ತಾದಲ್ಲಿ 2 ಸಾವಿರದ 322 ರೂಪಾಯಿ, ಮುಂಬೈನಲ್ಲಿ 2 ಸಾವಿರದ 171.50 ರೂಪಾಯಿ, ಚೆನ್ನೈನಲ್ಲಿ 2 ಸಾವಿರದ 373 ರೂಪಾಯಿಗಳಾಗಿದೆ. ಇಂದಿನಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದೆ.

ಗೃಹ ಬಳಕೆ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಮೇ 19 ರಂದು ಭಾರತದಲ್ಲಿ ಗೃಹೋಪಯೋಗಿ ಹಾಗೂ ವಾಣಿಜ್ಯ ಬಳಕೆ ಎಲ್‍ಪಿಜಿ ಸಿಲಿಂಡರ್ ಗಳ ಬೆಲೆಯನ್ನು ಹೆಚ್ಚಿಸಲಾಗಿತು. ಒಂದೇ ತಿಂಗಳಲ್ಲಿ 2 ಬಾರಿ ಅಡುಗೆ ತೈಲದ ಬೆಲೆ ಹೆಚ್ಚಿಸಲಾಗಿತ್ತು. 14 ಕೆಜಿ ಗೃಹಬಳಕೆಯ ಸಿಲಿಂಡರ್ ದರವನ್ನು 3.50 ರೂಪಾಯಿ ಹೆಚ್ಚಿಸಲಾಗಿತ್ತು. ಹಾಗೂ 19 ಕೆಜಿಯ ವಾಣಿಜ್ಯ ಬಳಕೆಯ ಎಲ್‍ಪಿಜಿ ಸಿಲಿಂಡರ್ ಬೆಲೆಯನ್ನು 8 ರೂಪಾಯಿ ಹೆಚ್ಚಿಸಲಾಗಿತ್ತು.

ಮಂಕಿಪಾಕ್ಸ್ :ನೈಜೀರಿಯಾದಲ್ಲಿ ಮೊದಲ ಸಾವು ದಾಖಲೆ

0

ದೇಶದಲ್ಲಿ ಕಳೆದ ಎರಡು ವರ್ಷಗಳಿಂದ ಕೊರೋನಾ ಮಹಾಮಾರಿಯಿಂದಾಗಿ ಅನೇಕ ಸಾವು ನೋವುಗಳು ಸಂಭವಿಸಿವೆ. ಈಗ ಹೊಸ ವೈರಸ್ ಮಂಕಿ‌ಪಾಕ್ಸ್ ಕಾಣಿಸಿಕೊಂಡಿದೆ. ನೈಜೀರಿಯಾದಲ್ಲಿ ಮಂಕಿಪಾಕ್ಸ್‌ನಿಂದ ಮೊದಲ ಸಾವು ದಾಖಲಾಗಿದೆ.

ನೈಜೀರಿಯಾ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಶನ್ ಭಾನುವಾರ ಈ ಘೋಷಣೆ ಮಾಡಿದೆ. 2022 ರಲ್ಲಿ ಇದು 66 ಶಂಕಿತ ಕಾಯಿಲೆಗಳಲ್ಲಿ 21 ಪ್ರಕರಣಗಳನ್ನು ದೃಢಪಡಿಸಿದೆ. ಇದು ಸಾಮಾನ್ಯವಾಗಿ ನೈಜೀರಿಯಾ ಮತ್ತು ಪಶ್ಚಿಮ ಮತ್ತು ಮಧ್ಯ ಆಫ್ರಿಕಾದ ಇತರ ಭಾಗಗಳಲ್ಲಿ ಕಾಣಿಸಿದೆ‌.

40 ವರ್ಷ ವಯಸ್ಸಿನ ರೋಗಿ ಮರಣ ಹೊಂದಿದ್ದಾರೆ. ಅವರು ಅಸ್ವಸ್ಥತೆಯನ್ನು ಹೊಂದಿದ್ದರು ಹಾಗೂ ಇಮ್ಯುನೊಸಪ್ರೆಸಿವ್ ಔಷಧಿಗಳನ್ನು ಸೇವಿಸಿದ್ದರು.

ನೈಜೀರಿಯಾವು ಸೆಪ್ಟೆಂಬರ್ 2017ರಿಂದ ಮಂಕಿಪಾಕ್ಸ್‌ನ್ನು ಕಂಡಿದೆ. ಯುರೋಪ್ ಮತ್ತು ಯುಎಸ್ ನಲ್ಲಿ ವರದಿಯಾಗಿರುವ ಮಂಕಿಪಾಕ್ಸ್ ಪ್ರಕರಣಗಳ ಹೆಚ್ಚಳವು ಆ ದೇಶಗಳಲ್ಲಿ ಕಳವಳವನ್ನು ಉಂಟುಮಾಡಿದೆ.

ಉಕ್ರೇನಿಗೆ ಅಮೆರಿಕಾದಿಂದ ಹೈಮರ್ಸ್ ಶಸ್ತ್ರಾಸ್ತ್ರ ಪೂರೈಕೆ

0

ಉಕ್ರೇನ್‌ಗೆ ಅತ್ಯಾಧುನಿಕ ರಾಕೆಟ್‌ ವ್ಯವಸ್ಥೆಯ ಸಹಕಾರ ನೀಡುತ್ತಿರುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಖಚಿತಪಡಿಸಿದ್ದಾರೆ.

ಉಕ್ರೇನಿಯ್ನರಿಗೆ ಅತ್ಯಾಧುನಿಕ ರಾಕೆಟ್‌ ವ್ಯವಸ್ಥೆಗಳು ಹಾಗೂ ಶಸ್ತ್ರಾಸ್ತ್ರಗಳನ್ನು ಪೂರೈಸಲಿದ್ದೇವೆ. ಅದರಿಂದಾಗಿ ಉಕ್ರೇನ್‌ ಯುದ್ಧ ಭೂಮಿಯಲ್ಲಿ ನಿರ್ದಿಷ್ಟ ಗುರಿಯ ಮೇಲೆ ದಾಳಿ ನಡೆಸಲು ಸಹಕಾರಿಯಾಗಲಿದೆ’ ಎಂದು ತಿಳಿಸಿದ್ದಾರೆ.

ರಷ್ಯಾದ ಆಕ್ರಮಣ ಪಡೆಗಳ ಪ್ರಮುಖ ಗುರಿಗಳತ್ತ ನುಗ್ಗುವ ಸಾಮರ್ಥ್ಯವನ್ನು ಅಮೆರಿಕದ ಈ ರಾಕೆಟ್‌ ಲಾಂಚರ್‌ಗಳು ನೀಡಲಿವೆ.

ಹೈಮರ್ಸ್‌ಗಳನ್ನು ಅಥವಾ ಹೈ ಮೊಬಿಲಿಟಿ ಆರ್ಟಿಲರಿ ರಾಕೆಟ್‌ ಸಿಸ್ಟಮ್‌ ಅನ್ನು ಕಳುಹಿಸುತ್ತಿರುವುದಾಗಿ ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.

ಹೈಮರ್ಸ್‌ 300 ಕಿ.ಮೀ. ದೂರದ ಗುರಿಯನ್ನು ತಲುಪಿಸುವ ಸಾಮರ್ಥ್ಯ ಹೊಂದಿವೆ. ಪ್ರಸ್ತುತ ಅಮೆರಿಕ ಉಕ್ರೇನ್‌ಗೆ ನೀಡುತ್ತಿರುವ ಹೈಮರ್ಸ್‌ 80 ಕಿ.ಮೀ. ವ್ಯಾಪ್ತಿಯನ್ನು ಹೊಂದಿರಲಿವೆ ಎಂದು ತಿಳಿದುಬಂದಿದೆ.

ಉಕ್ರೇನ್‌ನ ಪೂರ್ವ ಭಾಗದಲ್ಲಿ ರಷ್ಯಾ ಪಡೆಗಳ ವಿರುದ್ಧದ ಹೋರಾಟದಲ್ಲಿ ಹೆಚ್ಚು ವ್ಯಾಪಿಯ ಗುರಿಯನ್ನು ತಲುಪಬಹುದಾದ ಶಸ್ತ್ರಾಸ್ತ್ರಗಳು ಪ್ರಮುಖ ಪಾತ್ರವಹಿಸಲಿವೆ. ರಾಕೆಟ್‌ ಲಾಂಚರ್‌ಗಳ ವ್ಯವಸ್ಥೆಗೆ ಅಮೆರಿಕದ ನೆರವು ಹೆಚ್ಚಿನ ಬಲ ನೀಡಲಿದೆ.

ಹೈಮರ್ಸ್‌ ಬಹಳ ದೂರದ ಗುರಿಗಳನ್ನು ನಿಖರವಾಗಿ ತಲುಪಲು ಸಹಕಾರಿಯಾಗಿವೆ. ಆದರೆ, ರಷ್ಯಾದ ಆಕ್ರಮಣವನ್ನು ತಪ್ಪಿಸಲು ಹೈಮರ್ಸ್‌ ಬಳಸಲಾಗುತ್ತದೆಯೇ ಹೊರತು, ರಷ್ಯಾದ ವಿರುದ್ಧ ಅಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕುವೆಂಪು ವಿವಿ ಯಲ್ಲಿ ತಂಬಾಕು ರಹಿತ ದಿನಾಚರಣೆ

0

ವಿಶ್ವ ತಂಬಾಕು ರಹಿತ ದಿನಾಚರಣೆಯ ಪ್ರಯುಕ್ತ ಕುವೆಂಪು ವಿಶ್ವವಿದ್ಯಾಲಯದ ಆವರಣದಲ್ಲಿ ಸಸಿಗಳನ್ನು ನೆಡುವ ಮೂಲಕ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ತಂಬಾಕು ವ್ಯಸನದ ದುಷ್ಪರಿಣಾಮಗಳ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು.

ಇದೇ ಸಂದರ್ಭದಲ್ಲಿ ಕ್ಯಾಂಪಸ್ ಸುತ್ತಮುತ್ತ ಅಂಗಡಿ ಮುಂಗಟ್ಟುಗಳಿಗೆ ಭೇಟಿ ನೀಡಿ ಗುಲಾಬಿ ಹೂವುಗಳನ್ನು ನೀಡುವ ಮೂಲಕ ತಂಬಾಕು ಪದಾರ್ಥಗಳನ್ನು ಮಾರಾಟ ಮಾಡದಂತೆ ಜಾಗೃತಿ ಮೂಡಿಸಲಾಯಿತು. ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ, ಕುಲಸಚಿವೆ ಜಿ. ಅನುರಾಧ, ಪರೀಕ್ಷಾಂಗ ಕುಲಸಚಿವ ಪ್ರೊ. ಎಸ್. ಕೆ. ನವೀನ್‌ಕುಮಾರ್, ಹಣಕಾಸು ಅಧಿಕಾರಿ ಎಸ್. ರಾಮಕೃಷ್ಟ, ಡಾ. ಕೆ. ಆರ್. ಮಂಜುನಾಥ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.