Wednesday, March 4, 2026
Wednesday, March 4, 2026
Home Blog Page 1551

ಹೊಟೆಲುಗಳಲ್ಲಿ ಗ್ರಾಹಕರಿಗೆ ಸೇವಾಶುಲ್ಕ ಕಾನೂನು ಬಾಹಿರ

0

ರೆಸ್ಟೊರೆಂಟ್‌ಗಳು ಕಡ್ಡಾಯವಾಗಿ ಸೇವಾ ಶುಲ್ಕವನ್ನು ವಿಧಿಸುತ್ತಿರುವುದು, ರಾಷ್ಟ್ರೀಯ ಗ್ರಾಹಕರ ಸಹಾಯವಾಣಿಯಲ್ಲಿ ಗ್ರಾಹಕರ ದೂರುಗಳು ಹೆಚ್ಚುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಗ್ರಾಹಕ ವ್ಯವಹಾರಗಳ ಸಚಿವಾಲಯವು ಸೇವಾ ಶುಲ್ಕ ಶುಲ್ಕವು
ಕಾನೂನುಬಾಹಿರ ಮತ್ತು ಯಾವುದೇ ಕಾನೂನು ಪಾವಿತ್ರ್ಯತೆ ಹೊಂದಿಲ್ಲ ಎಂದು ಹೇಳಿದೆ.

ಗ್ರಾಹಕ ವ್ಯವಹಾರಗಳ ಇಲಾಖೆ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಸೇವಾ ಶುಲ್ಕ ವಿಧಿಸುವ ಸಮಸ್ಯೆಗಳ ಕುರಿತು ರೆಸ್ಟೋರೆಂಟ್ ಸಂಘಗಳು ಮತ್ತು ಗ್ರಾಹಕ ಸಂಸ್ಥೆಗಳೊಂದಿಗೆ ಸಭೆ ನಡೆಸಿತು. ಸಭೆಯ ಅಧ್ಯಕ್ಷತೆಯನ್ನು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ – ರೋಹಿತ್ ಕುಮಾರ್ ಸಿಂಗ್ ವಹಿಸಿದ್ದರು ಮತ್ತು ನ್ಯಾಷನಲ್ ರೆಸ್ಟೊರೆಂಟ್ ಅಸೋಸಿಯೇಷನ್ ​​ಆಫ್ ಇಂಡಿಯಾ ಮತ್ತು ಫೆಡರೇಶನ್ ಆಫ್ ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್ಸ್ ಆಫ್ ಇಂಡಿಯಾ ಮತ್ತು ಮುಂಬೈ ಗ್ರಾಹಕ್ ಪಂಚಾಯತ್, ಪುಷ್ಪಾ ಸೇರಿದಂತೆ ಗ್ರಾಹಕ ಸಂಘಟನೆಗಳು ಸೇರಿದಂತೆ ಪ್ರಮುಖ ರೆಸ್ಟೋರೆಂಟ್ ಸಂಘಗಳು ಭಾಗವಹಿಸಿದ್ದವು.

ಸೇವಾ ಶುಲ್ಕವನ್ನು ಪಾವತಿಸಲು ಗ್ರಾಹಕರು ರೆಸ್ಟೋರೆಂಟ್/ಹೋಟೆಲ್‌ಗೆ ಪ್ರವೇಶವನ್ನು ಸೂಚಿಸುವುದು ಗ್ರಾಹಕರ ಮೇಲೆ ನ್ಯಾಯಸಮ್ಮತವಲ್ಲದ ವೆಚ್ಚವನ್ನು ವಿಧಿಸುವುದಕ್ಕೆ ಸಮಾನವಾಗಿರುತ್ತದೆ ಕಾಯಿದೆಯ ಅಡಿಯಲ್ಲಿ ನಿರ್ಬಂಧಿತ ವ್ಯಾಪಾರ ಅಭ್ಯಾಸದ ಅಡಿಯಲ್ಲಿ ಬರುತ್ತದೆ.

ಇದು ಪ್ರತಿದಿನ ಲಕ್ಷಾಂತರ ಗ್ರಾಹಕರ ಮೇಲೆ ಪ್ರತಿಕೂಲ ಪರಿಣಾಮ ಬೀರುವುದರಿಂದ, ಮಧ್ಯಸ್ಥಗಾರರಿಂದ ಕಟ್ಟುನಿಟ್ಟಾದ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಇಲಾಖೆಯು ಶೀಘ್ರದಲ್ಲೇ ದೃಢವಾದ ಚೌಕಟ್ಟನ್ನು ತರಲಿದೆ ಎಂದು ಸರ್ಕಾರದ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಅಪಘಾತದಲ್ಲಿ ಬಸ್ ಗೆ ಬೆಂಕಿ: 7 ಪ್ರಯಾಣಿಕರ ಸಜೀವ ದಹನ

0

ಕಲಬುರಗಿ ಜಿಲ್ಲೆಯ ಕಮಲಾಪುರ ಪಟ್ಟಣದ ಹೊರವಲಯದಲ್ಲಿ ಬೆಳ್ಳಿಗ್ಗೆ ಸಂಭವಿಸಿದ ಅಪಘಾತದಲ್ಲಿ ಖಾಸಗಿ ಬಸ್ ನಲ್ಲಿದ್ದ 7 ಪ್ರಯಾಣಿಕರು ಸಜೀವ ದಹನವಾಗಿದ್ದಾರೆ ಎಂದು ತಿಳಿದುಬಂದಿದೆ.

ಟೆಂಪೋ ಟ್ರಾಕ್ಸ್ ಹಾಗೂ ಬಸ್ ನಡುವೆ ಸಂಭವಿಸಿದ ಅಪಘಾತದ ಬಳಿಕ ಬಸ್ ಗೆ ಬೆಂಕಿ ಹತ್ತಿಕೊಂಡು ಘಟನೆ ನಡೆದಿದೆ.

35 ಜನರಿದ್ದ ಬಸ್ ಗೋವಾದಿಂದ ಹೈದರಾಬಾದಿಗೆ ಹೋಗುತ್ತಿತ್ತು. ಗಾಯಾಳುಗಳನ್ನು ಕಲಬುರಗಿಯ ಅನೇಕ ಆಸ್ಪತ್ರೆಗಳಿಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

ಈ ದುರಂತದಲ್ಲಿ 12 ಜನ ಗಾಯಗೊಂಡಿದ್ದಾರೆ. ಒಟ್ಟಾರೆ 7 ಜನ ಈ ದುರ್ಘಟನೆಯಲ್ಲಿ ಸಜೀವವಾಗಿ ಧಹಿಸಿ ಸಾವನ್ನಪ್ಪಿದ್ದಾರೆಂದು ತಿಳಿದು ಬಂದಿದೆ.

ಕೋಡಿಹಳ್ಳಿ ಚಂದ್ರಶೇಖರ್ ಕಿಕ್ ಬ್ಯಾಕ್ ಪ್ರಕರಣ ತನಿಖೆಗೆ ಒತ್ತಾಯ

0

ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರ ವಿರುದ್ಧ 35 ಕೋಟಿ ವ್ಯವಹಾರ ನಡೆಸಿರುವ ಬಗ್ಗೆ ಖಾಸಗಿ ವಾಹಿನಿಯೊಂದು ಆರೋಪ ಮಾಡಿದೆ.

ಇದು ರೈತ ಸಮುದಾಯದಲ್ಲೇ ಗೊಂದಲಗಳು ಸೃಷ್ಟಿ ಮಾಡಿದೆ. ಹಾಗಾಗಿ ಖಾಸಗಿ ಚಾನೆಲ್ ಒಂದು ವಾರದೊಳಗೆ ಹಣ ಯಾರು ನೀಡಿದ್ದಾರೆ ಮತ್ತು ಯಾವ ಖಾತೆಗೆ ಹೋಗಿದೆ ಎಂದು ಬಹಿರಂಗಪಡಿಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಅರಳಾಪುರ ಮಂಜೇಗೌಡ ಆಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಕುರಿತು ಮಾತನಾಡಿದ ಅವರು, ಕೋಡಿಹಳ್ಳಿ ಚಂದ್ರಶೇಖರ್ ಅವರು ವಿಡಿಯೋದಲ್ಲಿ ಮಾತನಾಡಿರುವುದನ್ನು ಖಾಸಗಿ ಚಾನೆಲ್ ಪ್ರಸಾರ ಮಾಡಿದೆ. ಆದರೆ ಹಣ ವರ್ಗಾವಣೆ ಕುರಿತು ಗೊಂದಲ ಇದೆ. ಹಾಗಾಗಿ ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಸರಕಾರವು ತನಿಖೆ ನಡೆಸಿ, 15 ದಿನದೊಳಗೆ ವರದಿ ನೀಡಬೇಕು. ಇಲ್ಲವಾದಲ್ಲಿ ರೈತರಿಗೆ ಅವಮಾನ ಮಾಡಿದವರು ಕ್ಷಮೆ ಕೇಳಬೇಕು ಎಂದರು.

ಹಿಜಾಬ್ ಧರಿಸಿ ಶಾಲೆಗೆ ಬಂದ ವಿದ್ಯಾರ್ಥಿನಿಯರ ಅಮಾನತು

0

ಶಾಲಾ-ಕಾಲೇಜು ಆವರಣದಲ್ಲಿ ವಸ್ತ್ರ ಸಂಹಿತೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿತ್ತು.

ಸರ್ಕಾರದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದು, ಶಾಲಾ-ಕಾಲೇಜು ಆವರಣದಲ್ಲಿ ಧಾರ್ಮಿಕ ಉಡುಪು ಧರಿಸಿ ಬರೋದಂತೆ ಖಡಕ್ ಆದೇಶದಲ್ಲಿ ಸೂಚಿಸಿತ್ತು.

ಆದರೆ, ಈ ನಿಯಮವನ್ನು ಪದೇ ಪದೇ ಮೀರಿ, ಹಿಜಾಬ್ ಧರಿಸಿಯೇ ಬಂದಂತ 6 ವಿದ್ಯಾರ್ಥಿನಿಯರನ್ನು ಕಾಲೇಜಿನಿಂದ ಅಮಾನತಗೊಳಿಸಿರುವ ಘಟನೆ ಪುತ್ತೂರಿನಲ್ಲಿ ನಡೆದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆಯ ಕಾಲೇಜಿಗೆ, ಕೋರ್ಟ್ ಆದೇಶವಿದೆ. ಹಿಜಾಬ್ ತೆಗೆದಿರಿಸಿ ಕಾಲೇಜು ತರಗತಿಗೆ ಹಾಜರಾಗುವಂತೆ ಪ್ರಾಂಶುಪಾಲರು, ಉಪನ್ಯಾಸಕರು ಸೂಚಿಸಿದ್ದರು.

ಆದರೆ ಆ 6 ವಿದ್ಯಾರ್ಥಿನಿಯರು ಮಾತ್ರ ಕೋರ್ಟ್ ಆದೇಶ, ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರ ಸೂಚನೆಗೆ ಡೋಂಟ್ ಕೇರ್ ಎಂಬುದಾಗಿ ಹಿಜಾಬ್ ಧರಿಸಿಯೇ ಕಾಲೇಜಿಗೆ ಆಗಮಿಸುತ್ತಿದ್ದರು.

ಈ ಹಿನ್ನಲೆಯಲ್ಲಿ ಪ್ರಾಂಶುಪಾಲರು, ಉಪನ್ಯಾಸಕರು ಸಭೆ ನಡೆಸಿ, ಕೋರ್ಟ್ ಆದೇಶ, ಶಿಕ್ಷಣ ಇಲಾಖೆಯ ಆದೇಶವನ್ನು ಧಿಕ್ಕರಿಸಿ, ತರಗತಿಗೆ ಹಿಜಾಬ್ ಧರಿಸಿಯೇ ಬರುತ್ತಿರುವಂತ ವಿದ್ಯಾರ್ಥನಿಯಗಳನ್ನು ಕಾಲೇಜಿನಿಂದ ಅಮಾನತುಗೊಳಿಸಿರುವ ತೀರ್ಮಾನವನ್ನು ಕೈಗೊಂಡಿದ್ದಾರೆ.

ಹೀಗಾಗಿ ಕೋರ್ಟ್ ಆದೇಶವನ್ನು ಧಿಕ್ಕರಿಸಿ, ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸುತ್ತಿದ್ದಂತ 6 ವಿದ್ಯಾರ್ಥಿನಿಯರನ್ನು ಉಪ್ಪನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಅಮಾನತುಗೊಳಿಸಲಾಗಿದೆ.

ಮೂವತ್ತು ದೇಶಗಳಲ್ಲಿ ಮಂಕಿಪಾಕ್ಸ್ ಪತ್ತೆ: WHO ನಿಂದ ಮಾಹಿತಿ

0

ಮೂವತ್ತು ಸ್ಥಳೀಯವಲ್ಲದ ದೇಶಗಳು 550 ಕ್ಕೂ ಹೆಚ್ಚು ಮಂಕಿಪಾಕ್ಸ್ ಪ್ರಕರಣಗಳನ್ನು ದೃಢಪಡಿಸಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಯ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರು ತಿಳಿಸಿದ್ದಾರೆ.

ಮಂಕಿಪಾಕ್ಸ್ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ತನಿಖೆಗಳು ನಡೆಯುತ್ತಿವೆ. ಅನೇಕ ದೇಶಗಳಲ್ಲಿ ಮಂಕಿಪಾಕ್ಸ್ ಹಠಾತ್ ಕಾಣಿಸಿಕೊಂಡಿರುವುದು ಸ್ವಲ್ಪ ಸಮಯದವರೆಗೆ ಪತ್ತೆಯಾಗದ ಪ್ರಸರಣವಿರಬಹುದು ಎಂದು ಸೂಚಿಸುತ್ತದೆ ಎಂದು ಟೆಡ್ರೊಸ್ ವಿಶ್ವ ಆರೋಗ್ಯ ಸಂಸ್ಥೆಯ ಜಿನೀವಾ ಪ್ರಧಾನ ಕಚೇರಿಯಲ್ಲಿ ತಿಳಿಸಿದ್ದರು.

ಕೆಲವು ಪ್ರಕರಣಗಳು, ಮಂಕಿಪಾಕ್ಸ್ ಹೊಂದಿರುವ ವ್ಯಕ್ತಿಯೊಂದಿಗೆ ನಿಕಟ ದೈಹಿಕ ಸಂಪರ್ಕವನ್ನು ಹೊಂದಿದ್ದರೆ, ಅವರು ಸೋಂಕಿನ ಅಪಾಯವನ್ನು ಎದುರಿಸುತ್ತಾರೆ. ಆದ್ದರಿಂದ, ಪರಿಸ್ಥಿತಿಯು ಇನ್ನಷ್ಟು ವಿಕಸನಗೊಂಡು ಪ್ರಕರಣಗಳ ಹೆಚ್ಚಳ ಕಂಡುಬರುತ್ತವೆ ಎಂದು ಟೆಡ್ರೊಸ್ ಅವರು ತಿಳಿಸಿದ್ದಾರೆ.

ಸ್ಥಳೀಯವಲ್ಲದ ದೇಶಗಳಲ್ಲಿ ಮಂಕಿಪಾಕ್ಸ್ ಪ್ರಕರಣಗಳ ಹೆಚ್ಚುತ್ತಿರುವ ವರದಿಗಳನ್ನು ಗಮನದಲ್ಲಿಟ್ಟುಕೊಂಡು, ದೇಶಾದ್ಯಂತ ಮುಂಚಿತವಾಗಿ ಸನ್ನದ್ಧತೆಯನ್ನು ಖಚಿತಪಡಿಸಿಕೊಳ್ಳಲು ಭಾರತದ ಆರೋಗ್ಯ ಸಚಿವಾಲಯ ಮಂಕಿಪಾಕ್ಸ್ ಕಾಯಿಲೆಯ ನಿರ್ವಹಣೆಯ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಭಾರತದಲ್ಲಿ ಮಂಕಿಪಾಕ್ಸ್ ಕಾಯಿಲೆಯ ಯಾವುದೇ ಪ್ರಕರಣಗಳು ವರದಿಯಾಗಿಲ್ಲ ಎಂದು ಆರೋಗ್ಯ ಸಚಿವಾಲಯ ತನ್ನ ವರದಿಯಲ್ಲಿ ತಿಳಿಸಿದೆ.

₹10 ಮತ್ತು ₹ 20 ನಾಣ್ಯಗಳ ಸ್ವೀಕಾರ: ಹುಬ್ಬಳ್ಳಿ ನಾಗರಿಕರಿಗೆ ಮಾಹಿತಿ

0

ಅನೇಕ ದಿನಗಳಿಂದ 10 ರೂ. ಮತ್ತು 20 ರೂ. ಮುಖಬೆಲೆಯ ನಾಣ್ಯಗಳನ್ನು ತೆಗೆದುಕೊಳ್ಳಲು ಅಂಗಡಿ ಮಾಲೀಕರು ತಿರಸ್ಕರಿಸುತ್ತಿದ್ದರು. ಆದರೆ, ಹುಬ್ಬಳ್ಳಿಯ ಹೋಟೆಲ್ ವರ್ತಕರು ಆ ಆತಂಕವನ್ನು ಈಗ ಇಲ್ಲವಾಗಿಸಿದ್ದಾರೆ. ಅದೇನು ಅಂದರೆ 10 ಹಾಗೂ 20 ರೂ. ಮುಖಬೆಲೆಯ ನಾಣ್ಯಗಳನ್ನು ಸ್ವೀಕರಿಸಲಾಗುತ್ತದೆ ಎಂದು ಘೋಷಿಸಿದ್ದಾರೆ.

10 ರೂ. ನಾಣ್ಯಗಳು ಬಿಡುಗಡೆಯಾದ ಹೊಸದರಲ್ಲಿ ಚಲಾವಣೆಯಲ್ಲಿತ್ತು. ಆದರೆ ನಂತರದ ದಿನಗಳಲ್ಲಿ ಮಾರುಕಟ್ಟೆಗೆ ಹೋದಾಗ ಕೆಲವು ಅಂಗಡಿಯವರು ನಾಣ್ಯವನ್ನು ಸ್ವೀಕರಿಸಲು ಹಿಂದೇಟು ಹಾಕುತ್ತಿದ್ದರು. 10. ರೂಗಳ ನಕಲಿ ನಾಣ್ಯಗಳು ಮಾರುಕಟ್ಟೆಯಲ್ಲಿ ಚಲಾವಣೆಗೆ ಬಂದಿದ್ದರಿಂದ, ಗ್ರಾಹಕರಿಂದ ನಾಣ್ಯ ಸ್ವೀಕಾರ ಮಾಡಲು ನಿರಾಕರಿಸುತ್ತಿದ್ದರು.

ಈ ಗೊಂದಲ್ಲಕ್ಕೆ ಕೇಂದ್ರ ಸರಕಾರ ಸಂಸತ್ತಿನಲ್ಲಿ ಸ್ಪಷ್ಟನೆ ನೀಡಿತ್ತು. 10 ರೂ. ಮುಖಬೆಲೆಯ ನಾಣ್ಯಗಳು ಸಂಪೂರ್ಣ ಮಾನ್ಯವಾಗಿದೆ, ಅವು ನಕಲಿಯಲ್ಲ. 10 ರೂಪಾಯಿ ನಾಣ್ಯಗಳನ್ನು ಎಲ್ಲಾ ರೀತಿಯ ವಹಿವಾಟುಗಳಿಗೆ ಬಳಸಬಹುದು ಎಂದು ಕೇಂದ್ರ ಹಣಕಾಸು ಸಚಿವ ಪಂಕಜ್ ಚೌಧರಿ ಹೇಳಿಕೆ ನೀಡಿದ್ದರು.

10 ರೂಪಾಯಿ ನಾಣ್ಯಗಳ ಚಲಾವಣೆ ಮೇಲೆ ಇದ್ದ ಆತಂಕವನ್ನು ಹುಬ್ಬಳ್ಳಿ ಹೋಟೆಲ್ ಉದ್ಯಮಿಗಳು ದೂರ ಮಾಡಿದ್ದಾರೆ. 10 ಮತ್ತು 20 ರೂಪಾಯಿಗಳ ನಾಣ್ಯವನ್ನು ಸ್ವೀಕರಿಸುತ್ತೇವೆ ಎಂದು ಹೋಟೆಲ್ ಮುಂದೆ ಫಲಕಗಳನ್ನು ಹಾಕಿದ್ದಾರೆ.

ಪಠ್ಯ ವಾಪ್ಸಿ ಗೆ ಮುಂದಾಗಿರುವ ಲೇಖಕರೊಂದಿಗೆ ಮಾತುಕತೆ – ಬೊಮ್ಮಾಯಿ

0

ಪಠ್ಯ ಪುಸ್ತಕಗಳಿಂದ ತಮ್ಮ ಪಾಠವನ್ನು ಪ್ರಕಟಿಸುವುದು ಬೇಡ. ಈಗಾಗಲೇ ನೀಡಿರುವ ಅನುಮತಿಯನ್ನು ವಾಪಸ್ ಪಡೆಯುತ್ತಿದ್ದೇವೆ ಎಂದು ಪತ್ರ ಬರೆದಿರುವ ಸಾಹಿತಿಗಳೊಂದಿಗೆ ಚರ್ಚೆ ನಡೆಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.

ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದಂತೆ ಸಮಗ್ರ ವರದಿ ಮತ್ತು ವಾಸ್ತವಾಂಶವನ್ನು ತಿಳಿಸುವಂತೆ ಶಿಕ್ಷಣ ಸಚಿವರಿಗೆ ಸೂಚನೆ ನೀಡಲಾಗಿದೆ. ಈ ಬಗ್ಗೆ ವರದಿ ಪಡೆದು, ಪರಿಶೀಲಿಸಿದ ನಂತರ ಸೂಕ್ತ ತೀರ್ಮಾನವನ್ನು ಕೈಗೊಳ್ಳಲಾಗುವುದು. ವರದಿ ದೊರೆಯಲಿದೆ. ಪಠ್ಯಗಳನ್ನು ವಾಪಸ್ಸು ಪಡೆಯುತ್ತೇವೆ ಎನ್ನುವ ಸಾಹಿತಿಗಳೊಂದಿಗೆ ಈ ಬಗ್ಗೆ ಚರ್ಚಿಸಲಾಗುತ್ತದೆ ಎಂದು ಬಸವರಾಜ್ ಬೊಮ್ಮಾಯಿ ಅವರು ಹೇಳಿದ್ದಾರೆ.

ಉಡುಪಿ ಜಿಲ್ಲಾ ಭಾರತೀಯ ಜನತಾ ಪಕ್ಷದ ವತಿಯಿಂದ ಆಯೋಜಿಸಿರುವ ಸನ್ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಜೀ ಅವರ ನೇತೃತ್ವದ ಕೇಂದ್ರ ಸರ್ಕಾರದ 8ನೇ ವರ್ಷಾಚರಣೆ ಅಂಗವಾಗಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಪಠ್ಯಪುಸ್ತಕದ ಪರಿಷ್ಕರಣೆಗೆ ಸಂಬಂಧಿಸಿದಂತೆ, ಈಗಾಗಲೇ ಪಠ್ಯದಲ್ಲಿರುವ ಪಾಠಗಳನ್ನು ತೆಗೆಯುವಂತೆ ಕೆಲ ಸಾಹಿತಿಗಳು ಹೇಳುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಪಠ್ಯಪುಸ್ತಕ ಪರಿಷ್ಕರಣೆಯ ಬಗ್ಗೆ ಸಮಗ್ರ ವರದಿಯನ್ನು ಕೇಳಲಾಗಿದೆ. ಸ್ವಾಮೀಜಿಗಳು ಹಾಗೂ ಇತರರ ಅಭಿಪ್ರಾಯಗಳನ್ನು ಪರಿಗಣಿಸಲಾಗುವುದು. ಈ ಎಲ್ಲ ವಿಚಾರಗಳ ಬಗ್ಗೆ ಸಮಗ್ರ ವರದಿ ಹಾಗೂ ವಾಸ್ತವಾಂಶವನ್ನು ತಿಳಿಸುವಂತೆ ಶಿಕ್ಷಣ ಸಚಿವರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಎಸಿಬಿ ಈಗಾಗಲೇ ಬಲವರ್ಧನೆಯಾಗಿದೆ. ಲೋಕಾಯುಕ್ತ ಇದ್ದರೂ , ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಎಸಿಬಿ ಆ ಅಧಿಕಾರವಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಹೇಳಿದ್ದಾರೆ.

ಭಾರತೀಯ ರಸ್ತೆ ರಾಜ ಅಂಬಾಸಿಡರ್ ಈಗ ನವೀನ ರೂಪದಲ್ಲಿ ಬರಲಿದೆ

0

ಹೊಸ ಅಂಬಾಸಿಡರ್ ಕಾರು ಉತ್ಪಾದನೆಗೆ ಯೂರೋಪಿಯನ್‌ ಕಂಪನಿಯೊಂದಿಗೆ ಒಟ್ಟು 600 ಕೋಟಿ ರೂ. ಹೂಡಿಕೆ ಮಾಡಿರುವುದಾಗಿ ಹಿಂದೂಸ್ಥಾನ್‌ ಮೋಟರ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಉತ್ತಮ ಬೋಸ್ ತಿಳಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯಲ್ಲಿ ವಿಕಲಚೇತನರಿಂದ ವಿವಿಧ ಯೋಜನೆಗಳ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ

0

ಶಿವಮೊಗ್ಗ ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯಿಂದ 2022-23 ನೇ ಸಾಲಿನಲ್ಲಿ ಅನೇಕ ಯೋಜನೆಗಳ ಸೌಲಭ್ಯ ಪಡೆಯಲು ಅರ್ಹ ವಿಕಲಚೇತನರಿಂದ ಅರ್ಜಿ ಆಹ್ವಾನಿಸಲಾಗಿದೆ. ಸಾಧನೆ ಸಲಕರಣೆ, ಆಧಾರ ಯೋಜನೆ, ವೈದ್ಯಕೀಯ ಪರಿಹಾರ ನಿಧಿ, ವಿವಾಹ ಪ್ರೋತ್ಸಾಹಧನ, ಶಿಶುಪಾಲನಾ ಭತ್ಯೆ, ನಿರುದ್ಯೋಗ ಭತ್ಯೆ, ಸಾಧನೆ ಪ್ರತಿಭೆ, ಯಂತ್ರಚಾಲಿತ ತ್ರಿಚಕ್ರ ವಾಹನ, ಟಾಕಿಂಗ್ ಲ್ಯಾಪ್‍ಟಾಪ್, ವಿದ್ಯಾರ್ಥಿ ಪ್ರೋತ್ಸಾಹಧನ, ವಿದ್ಯಾರ್ಥಿ ಶುಲ್ಕ ಮರುಪಾವತಿ, ಹೊಲಿಗೆಯಂತ್ರ, ಬ್ರೈಲ್ ಕಿಟ್ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಜೂನ್ 30 ಕಡೆಯ ದಿನವಾಗಿದ್ದು ಅರ್ಜಿ ನಮೂನೆಯನ್ನು ಆಯಾ ತಾಲ್ಲೂಕಿನ ಎಂ.ಆರ್.ಡಬ್ಲ್ಯುಗಳಿಂದ ಪಡೆದು ಭರ್ತಿ ಮಾಡಿ ಎಲ್ಲಾ ದಾಖಲಾತಿಗಳನ್ನು ಲಗತ್ತಿಸಿ ಆಯಾ ತಾಲ್ಲೂಕಿನ ಗ್ರಾ.ಪಂ ಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಹಾಗೂ ತಾಲ್ಲೂಕು ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರುಗಳಿಗೆ ನೀಡಲು ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಆಯಾ ತಾಲ್ಲೂಕಿನ ಎಂಆರ್‍ಡಬ್ಲ್ಯುಗಳ ಮೊಬೈಲ್ ಸಂಖ್ಯೆ ಶಿವಮೊಗ್ಗ 9980150110, ಭದ್ರಾವತಿ 7899137243, ಶಿಕಾರಿಪುರ 9741161346, ತೀರ್ಥಹಳ್ಳಿ 9480767638, ಸಾಗರ 9535247757, ಸೊರಬ 9110493122, ಹೊಸನಗರ 9731922693 ಸಂಪರ್ಕಿಸಬಹುದೆಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.

ರಾಜ್ಯದಲ್ಲಿ ₹ 1.41 ಲಕ್ಷ ಕೋಟಿ ಜಿಎಸ್ ಟಿ ಸಂಗ್ರಹ

0

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯಡಿ ಮೇ ತಿಂಗಳಿನಲ್ಲಿ ₹ 1.41 ಲಕ್ಷ ಕೋಟಿ ವರಮಾನ ಸಂಗ್ರಹ ಆಗಿದೆ ಎಂದು ತಿಳಿದುಬಂದಿದೆ.

2022ರ ಏಪ್ರಿಲ್‌ನಲ್ಲಿ ₹ 1.68 ಲಕ್ಷ ಕೋಟಿಯಷ್ಟು ದಾಖಲೆಯ ತೆರಿಗೆ ವರಮಾನ ಸಂಗ್ರಹ ಆಗಿತ್ತು. ಇದಕ್ಕೆ ಹೋಲಿಸಿದರೆ ಮೇನಲ್ಲಿ ₹ 27 ಸಾವಿರ ಕೋಟಿ ಕಡಿಮೆ ಸಂಗ್ರಹ ಆಗಿದೆ. ಹೀಗಿದ್ದರೂ ಜಿಎಸ್‌ಟಿ ವ್ಯವಸ್ಥೆಯು ಜಾರಿಗೆ ಬಂದಾಗಿನಿಂದ ಈವರೆಗೆ ಸಂಗ್ರಹ ಆಗಿರುವ ನಾಲ್ಕನೇ ಗರಿಷ್ಠ ಮೊತ್ತ ಇದಾಗಿದೆ.

2022ರ ಮೇನಲ್ಲಿ ಸಂಗ್ರಹ ಆಗಿರುವ ಒಟ್ಟಾರೆ ಮೊತ್ತದಲ್ಲಿ ಸಿಜಿಎಸ್‌ಟಿ ₹ 25,036 ಕೋಟಿ, ಸಿಜಿಎಸ್‌ಟಿ ₹ 32,001 ಕೋಟಿ, ಐಜಿಎಸ್‌ಟಿ ₹ 73,345 ಕೋಟಿ ಹಾಗೂ ಸೆಸ್‌ ₹ 10,502 ಕೋಟಿ ಸೇರಿಕೊಂಡಿದೆ ಎಂದು ಹಣಕಾಸು ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಏಪ್ರಿಲ್‌ನಲ್ಲಿ 7.4 ಕೋಟಿ ಇ-ವೇ ಬಿಲ್‌ ಸೃಷ್ಟಿ ಆಗಿದೆ. ಮಾರ್ಚ್‌ನಲ್ಲಿ ಸೃಷ್ಟಿ ಆಗಿದ್ದ 7.7 ಕೋಟಿ ಇ-ವೇ ಬಿಲ್‌ಗೆ ಹೋಲಿಸಿದರೆ ಶೇ 4ರಷ್ಟು ಕಡಿಮೆ ಆಗಿದೆ.
ತಿಂಗಳ ಜಿಎಸ್‌ಟಿ ಸಂಗ್ರಹವು ₹ 1.5 ಲಕ್ಷ ಕೋಟಿ ದಾಟಬೇಕು ಎನ್ನುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಗುರಿ ತಲುಪಲು ಬೇಕಾದ ವೇದಿಕೆ ಸಿದ್ಧವಾಗಿರುವಂತೆ ಕಾಣುತ್ತಿದೆ’ ಎಂದು ಟ್ಯಾಕ್ಸ್‌ ಕನೆಕ್ಟ್‌ ಅಡ್ವೈಸರಿ ಪಾಲುದಾರ ವಿವೇಕ್‌ ಜಲನ್‌ ಹೇಳಿದ್ದಾರೆ.