Monday, July 27, 2026
Monday, July 27, 2026

ರಾಜ್ಯಕ್ಕೆ ಜಿಎಸ್ ಟಿ ಪಾಲು ₹ 8,633 ಕೋಟಿ ಬಿಡುಗಡೆ

Date:

ಕೇಂದ್ರ ಸರ್ಕಾರವು ರಾಜ್ಯಕ್ಕೆ ಬಾಕಿ ಉಳಿಸಿಕೊಂಡಿರುವ ಸರಕು ಹಾಗೂ ಸೇವಾ ತೆರಿಗೆ ಮೊತ್ತದಲ್ಲಿ 8,633 ಕೋಟಿ ರೂಪಾಯಿ ಮಂಜೂರು ಮಾಡಿದೆ.

ಕರ್ನಾಟಕವೂ ಸೇರಿದಂತೆ 21 ರಾಜ್ಯಗಳಿಗೆ ನೀಡಬೇಕಾದ ಸರಕು ಹಾಗೂ ಸೇವಾ ತೆರಿಗೆ 86,912 ಕೋಟಿ ರೂಪಾಯಿಗಳನ್ನು ಕೇಂದ್ರ ಹಣಕಾಸು ಇಲಾಖೆ ಬಿಡುಗಡೆ ಮಾಡಿದೆ. ಇದರಲ್ಲಿ ಕರ್ನಾಟಕದ ಪಾಲು 8633 ಕೋಟಿ ರೂಪಾಯಿ ಸೇರಿದೆ.

ಕೇಂದ್ರ ಸರ್ಕಾರವು ರಾಜ್ಯಕ್ಕೆ 2022ರ ಮೇ 31ರ ವರೆಗಿನ 8,633 ಕೋಟಿ ರೂಪಾಯಿ ಜಿಎಸ್‍ಟಿ ಪರಿಹಾರ ಮಂಜೂರು ಮಾಡಿದೆ. ಇದಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ವಿತ್ತ ಸಚಿವರಾಗಿ ನಿರ್ಮಲಾ ಸೀತಾರಾಮನ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಕೇಂದ್ರವು ರಾಜ್ಯಗಳಿಗೆ ನೀಡಬೇಕಾದ 86,912 ಕೋಟಿ ರೂ. ಜಿಎಸ್‍ಟಿ ಪರಿಹಾರ ನೀಡಿದೆ. ಸುಭಿಕ್ಷ ಆರ್ಥಿಕತೆಯತ್ತ ಇದೊಂದು ಮಹತ್ವದ ಹೆಜ್ಜೆ ಎಂದು ಮುಖ್ಯಮಂತ್ರಿ ಟ್ವೀಟ್ ಮಾಡಿದ್ದಾರೆ. ರಾಜ್ಯಗಳು ತಮ್ಮ ಸಂಪನ್ಮೂಲಗಳನ್ನು ನಿರ್ವಹಿಸುವುದಕ್ಕೆ ನೆರವಾಗಲು ಹಾಗೂ ತಮ್ಮ ಕಾರ್ಯಕ್ರಮಗಳನ್ನು ವಿಶೇಷವಾಗಿ ಬಂಡವಾಳದ ಮೇಲಿನ ವೆಚ್ಚವನ್ನು ಈ ಹಣಕಾಸು ವರ್ಷದಲ್ಲಿ ಯಶಸ್ವಿಯಾಗಿ ನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ರಾಜ್ಯಗಳ ಸಂರಕ್ಷಿತ ಆದಾಯವು ಶೇ.14ರಷ್ಟು ಸಂಯೋಜಿತ ಬೆಳವಣಿಗೆಯಲ್ಲಿ ಬೆಳೆಯುತ್ತಿದೆ. ಆದರೆ ಸೆಸ್ ಸಂಗ್ರಹವು ಅದೇ ಅನುಪಾತದಲ್ಲಿ ಹೆಚ್ಚಾಗದ ಕಾರಣ, ಕೊರೋನಾ ರಕ್ಷಿತ ಆದಾಯ ಮತ್ತು ಸೆಸ್ ಸಂಗ್ರಹದಲ್ಲಿನ ಕಡಿತ ಸೇರಿದಂತೆ ನಿಜವಾದ ಆದಾಯದ ಸ್ವೀಕೃತಿಯ ನಡುವಿನ ಅಂತರ ಮತ್ತಷ್ಟು ಹೆಚ್ಚಿದೆ ಎಂದು ಸರ್ಕಾರ ಹೇಳಿದೆ.

ಕಳೆದ 2017ರ ಜುಲೈ 1ರಂದು ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆ ನೀತಿಯನ್ನು ಪರಿಚಯಿಸಲಾಯಿತು. 5 ವರ್ಷಗಳ ಅವಧಿ ಕಾಯ್ದೆ, 2017ರ ನಿಬಂಧನೆಗಳ ಪ್ರಕಾರ ಅನುಷ್ಠಾನದ ಖಾತೆಯಲ್ಲಿ ಉಂಟಾಗುವ ಯಾವುದೇ ಆದಾಯದ ನಷ್ಟಕ್ಕೆ ಪರಿಹಾರಕ್ಕಾಗಿ ರಾಜ್ಯಗಳಿಗೆ ಭರವಸೆ ನೀಡಲಾಗಿತ್ತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Prahlad Joshi ಅತ್ಯಂತ ವಿನಮ್ರತೆ ಹಾಗೂ ನಿಷ್ಠೆಯಿಂದೀ ಕರ್ತವ್ಯ ಸ್ವೀಕರಿಸುತ್ತಿದ್ದೇನೆ- ಪ್ರಹ್ಲಾದ ಜೋಷಿ.

Prahlad Joshi ಇಂದು ಭಾರತ ಸರ್ಕಾರದ ಕೇಂದ್ರ ಶಿಕ್ಷಣ ಸಚಿವರಾಗಿ ಶ್ರೀ ಪ್ರಹ್ಲಾದ...

Samarth Ramdas”ಸಾತ್ವಿಕ ಹೃದಯಿ” ಸಮರ್ಥ ರಾಮದಾಸರು. ಲೇ; ಪ್ರಸಾದ್ ಶ್ರೀವತ್ಸ, ದಾವಣಗೆರೆ.

Samarth Ramdas ಜಾಂಬ ಎಂಬ ಪುಟ್ಟ ಹಳ್ಳಿ ಔರಂಗಾಬಾದ್‌ ಜಿಲ್ಲೆಯಲ್ಲಿದೆ. ಅಲ್ಲಿ...

K.S.Eshwarappa ಕನಕರ ಸ್ಥಳಮಾಹಿತಿ ಉತ್ಖನನ ಕಾರ್ಯ ಅರ್ಥಪೂರ್ಣ. ಇಂತಹ ಸಂಶೋಧನೆಗಳಿಗೆ ನನ್ನ ಬೆಂಬಲವಿದೆ – ಕೆ.ಎಸ್.ಈಶ್ವರಪ್ಪ.

K.S.Eshwarappa ಪ್ರಸ್ತುತ ಸಮಾಜದಲ್ಲಿ ಇತಿಹಾಸ ಪ್ರಜ್ಞೆ ಕೊರತೆಯಿದೆ. ಇಂತಹಸನ್ನಿವೇಶದಲ್ಲಿ ಇತಿಹಾಸ ಪ್ರಾಧ್ಯಾಪಕ,...

Dharmendra Pradhan ಧರ್ಮೇಂದ್ರ ಪ್ರಧಾನ್ ರಾಜಿನಾಮೆ,ಕೇವಲ ನೈತಿಕ ಜವಾಬ್ದಾರಿ ಎತ್ತಿ ಹಿಡಿದಿದೆ ಅಷ್ಟೆ- ವಸಂತಕುಮಾರ್.

Dharmendra Pradhan ಧರ್ಮೇಂದ್ರ ಪ್ರಧಾನ್ ರಾಜೀನಾಮೆ, ಕೇವಲ ನೈತಿಕತೆಯ ಜವಾಬ್ದಾರಿ ಎತ್ತಿ...