K.S.Eshwarappa ಪ್ರಸ್ತುತ ಸಮಾಜದಲ್ಲಿ ಇತಿಹಾಸ ಪ್ರಜ್ಞೆ ಕೊರತೆಯಿದೆ. ಇಂತಹ
ಸನ್ನಿವೇಶದಲ್ಲಿ ಇತಿಹಾಸ ಪ್ರಾಧ್ಯಾಪಕ, ಮತ್ತು ಹಿರಿಯ ಸಂಶೋಧಕ ಡಾ. ಶಾಂತಾರಾಮ ಸಾಮಕರು ಕನಕದಾಸರ ಮನೆಯ ಸ್ಥಳ ಪತ್ತೆ ಹಚ್ಚಿ ,ಉತ್ಖನನ ಕಾರ್ಯ ಕೈಗೊಂಡು ಇಡೀ ನಾಡಿಗೇ ಅಪೂರ್ವ ಕೊಡುಗೆ ನೀಡಿದ್ದಾರೆ
ಡಾ.ಸಾಮಕರ ಪ್ರಯತ್ನ
ಸ್ಮರಣೀಯ. ಎಂದು
ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ಶ್ರೀಗಂಧ ಸಂಸ್ಥೆ,
ಮಲೆನಾಡು ಇತಿಹಾಸ ಸಂಶೋಧನೆ ಮತ್ತು ಅಧ್ಯಯನ
ವೇದಿಕೆಯಿಂದ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾಜಿ ಡೀಸಿಎಂ ಕೆ.ಎಸ್.ಈಶ್ವರಪ್ಪಹೇಳಿದರು.
” ಬಾಡದ ಮಣ್ಣಿನಲ್ಲಿ
ಮೂಡಿದ ಕನಕನ ಹೆಜ್ಜೆ ಗುರುತುಗಳು” ಕನಕದಾಸರ ಅರಮನೆ ಉತ್ಖನನದಿಂದ
ಸಂಶೋಧಿಸಿದ ಚಿತ್ರಗಳ ಇತಿಹಾಸ ಪ್ರಾತ್ಯಕ್ಷಿಕೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಡಾ.ಎಸ್.ಜಿ.ಸಾಮಗ ಅವರು ಉತ್ಖನನದ ಸಾಹಸವನ್ನ ಅರ್ಥಪೂರ್ಣವಾಗಿ ಪೂರೈಸಿರುವುದು ಹೆಮ್ಮೆಯ ಸಂಗತಿ.
ಇದುವರೆಗೆ ಮಲೆನಾಡು ಇತಿಹಾಸ ಸಂಶೋಧನೆ ಮತ್ತು ಅಧ್ಯಯನ ವೇದಿಕೆ ಮಾಡಿರುವ ಚಟುವಟಿಕೆಗಳನ್ನು ತಿಳಿದು
ಸಂತೋಷವಾಗಿದೆ. ಅವರ ಮುಂದಿನ ಸಂಶೋಧನಾ ಕಾರ್ಯಗಳಿಗೆ ನಾನು
ಎಲ್ಲ ರೀತಿಯ ಸಹಕಾರ ನೀಡುತ್ತೇನೆ ಎಂದು ಕೆ .ಎಸ್.ಈಶ್ವರಪ್ಪ ಭರವಸೆ
ನೀಡಿದರು..
ಆದಿಚುಂಚನಗಿರಿ ಶಿವಮೊಗ್ಗ ಶಾಖಾ ಮಠದ ಶ್ರೀ ನಾದಮಯಾನಂದನಾಥ
ಸ್ವಾಮೀಜಿಯವರು ದಿವ್ಯಸಾನ್ನಿಧ್ಯ ವಹಿಸಿದ್ದರು.
ಮಲೆನಾಡು ಇತಿಹಾಸ ಸಂಶೋಧನೆ ಮತ್ತು
ಅಧ್ಯಯನ ವೇದಿಕೆ ಅಧ್ಯಕ್ಷ ಡಾ.ಎಸ್.ಜಿ.ಸಾಮಗ, ಕಾರ್ಯದರ್ಶಿ ದಿಲೀಪ್
ನಾಡಿಗ್, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಎಚ್.ಆರ್.ಶಂಕರನಾರಾಯಣ ಶಾಸ್ತ್ರಿ,
ಕಾರ್ಯದರ್ಶಿ ವಿನಯ್ ಶಿವಮೊಗ್ಗ ಉಪಸ್ಥಿತರಿದ್ದರು.
ವೇದಿಕೆಯ ಕಾರ್ಯಕ್ಕೆ ಸಹಕಾರ ನೀಡಿದ ಎಲ್ಲರನ್ನೂ ಸ್ಮರಿಸಿದ ವೇದಿಕೆ ಪ್ರಧಾನ ಕಾರ್ಯದರ್ಶಿ ದಿಲೀಪ್ ನಾಡಿಗ್ ಅವರು ವೇದಿಕೆ ಇದುವರೆಗೆ ನಡೆಸಿದ
ಚಟುವಟಿಕೆಗಳನ್ನು ಭವಿಷ್ಯದ ಯೋಜನೆಗಳನ್ನು ವಿವರಿಸಿದರು,
K.S.Eshwarappa ಶಿವಮೊಗ್ಗ ಆದಿಚುಂಚನಗಿರಿ ಶಾಖಾಮಠದ ಶ್ರೀನಾದಮಯಾನಂದನಾಥ ಸ್ವಾಮೀಜಿ ಅವರು”
ಕನಕದಾಸರು
ಅತ್ಯುತ್ತಮ ಕೀರ್ತನಕಾರರು. ಅಪ್ರತಿಮ ಸಮಾಜ ಸುಧಾರಕರು. ಅಂತವರ ಸ್ಥಳಚರಿತ್ರೆ, ವಾಸ್ತವ್ಯಗಳ
ಇತಿಹಾಸವನ್ನು ಉತ್ಪನನ ಮಾಡುವುದು ಭವಿಷ್ಯದ ದೃಷ್ಟಿಯಿಂದ ಅತ್ಯವಶ್ಯವಾಗಿದೆ.
ಅಂತಹ ಕಾರ್ಯವನ್ನು ಡಾ.ಎಸ್.ಜಿ.ಸಾಮಕ ಮಾಡಿದ್ದಾರೆ. ಇದರಿಂದಾಗಿ ಕನಕರ ಕಾಲದ ಮನೆ ವಿನ್ಯಾಸ, ಹಂಪಿಯ ಹೊಂದಿಕೊಳ್ಳುವಂತಾಗಿರುವ ಅಲ್ಲಿನ ಅವಶೇಷಗಳಿಂದ ,ಸಂಸ್ಕೃತಿ, ಜನಜೀವನ ಎಲ್ಲವನ್ನೂ ತಿಳಿಯುವಂತಾಗಿದೆ
ಎಂದ ಶ್ರೀಗಳು ನುಡಿದರು.. ಮಲೆನಾಡು ಇತಿಹಾಸ ಸಂಶೋಧನೆ ಮತ್ತು ಅಧ್ಯಯನ
ವೇದಿಕೆಯಿಂದ ಮುಂದಿನ ದಿನಗಳಲ್ಲಿ ಇತಿಹಾಸದ ಹೊಸ ಸಂಗತಿಗಳು
ಸಂಶೋಧನೆಯಾಗಲಿಪ್ರಸ್ತುತ ಡಾ.ಸಾಮಕರ ಸಂಶೋಧನೆಗೆ ಸರ್ಕಾರದ ಮಾನ್ಯತೆಯ
ಮುದ್ರೆಯೂ ದೊರೆಯಲಿ ಎಂದು ಸ್ವಾಮೀಜಿಯವರು ಆಶಿಸಿದರು.
ಡಾ.ಸಾಮಕರು ಬಾಡ ಗ್ರಾಮದಲ್ಲಿ ಕರ್ನಾಟಕ ಸರ್ಕಾರದ ಆದೇಶದಂತೆ ತಾವು ಯೋಜಿತವಾಗಿ ಕೈಗೊಂಡ ಕ್ಷೇತ್ರಕಾರ್ಯಗಳನ್ನ ವಿವರಿಸುವ “ವರ್ಣಚಿತ್ರ ದೃಶ್ಯಾವಳಿ” ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.
ಇತಿಹಾಸ ಪ್ರಿಯರಿಗಂತೂ ಈ ಪ್ರಾತ್ಯಕ್ಷಿಕೆ ಅಚ್ಚುಮೆಚ್ಚಿನದಾಗಿತ್ತು
ಬಾಡ ಗ್ರಾಮದಲ್ಲಿ ನಾಗರಿಕ ಸೌಲಭ್ಯಗಳ
ಕೊರತೆಯನ್ನೂ ಲೆಕ್ಕಿಸದೇ ಕನಕರ ಜಾಡು ಕಂಡು ಹಿಡಿಯುವ ಏಕಮಾತ್ರ ಗುರಿಯಿಂದ ತದೇಕ ಚಿತ್ತರಾಗಿ ತಾವು ನಿರ್ವಹಿಸಿದ ಕ್ಷೇತ್ರಕಾರ್ಯಗಳ ಬಗ್ಗೆ
ಡಾ.ಸಾಮಕರು ನೀಡಿದ ವಿವರಣೆ ಅತ್ಯಂತ ಆಸಕ್ತಿಯುತವಾಗಿತ್ತು.
ಇತಿಹಾಸದಲ್ಲಿ ಅಸ್ಥೆಯುಳ್ಳ ವೀಕ್ಷಕರು
ತನ್ಮಯರಾಗಿ ಈ ಪ್ರಾತ್ಯಕ್ಷಿಕೆ ವೀಕ್ಷಿಸಿ ಆನಂದಿಸಿದರು.
“ಈಗ ಉತ್ಖನನದಂತಹ ಕ್ಲಿಷ್ಟ ಕಾರ್ಯಗಳನ್ನ ಕೈಗೆತ್ತಿಕೊಳ್ಳುವುದೇ ಅಪರೂಪ. ಅದರಲ್ಲೂ ಉತ್ಖನನ ನಡೆಸುವಾಗ ವಹಿಸುವ ಸೂಕ್ಷ್ಮ ಎಚ್ಚರಿಕೆಗಳ ಬಗ್ಗೆ ಡಾ.ಸಾಮಕರು ತಮ್ಮ ಪ್ರಾತ್ಯಕ್ಷಿಕೆಯಲ್ಲಿ ಸವಿವರವಾಗಿ ತಿಳಿಸಿದ್ದಾರೆ.
ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಹೆಚ್.ಎಸ್.ಶಂಕರನಾರಾಯಣ ಶಾಸ್ತ್ರಿ ಅವರು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ತಿಳಿಸಿದರು.
ವೇದಿಕೆ ಸದಸ್ಯ ನಾಗಾರಾಜ್ ಅವರ ವಂದನಾರ್ಪಣೆಯೊಂದಿಗೆ ಈ ಅಪೂರ್ವ ಹಾಗೂ ಮಲೆನಾಡು ಇತಿಹಾಸ ಸಂಶೋಧನೆ ಮತ್ತು ಅಧ್ಯಯನ ಸಂಸ್ಥೆಯ ಚೊಚ್ಚಲ ,ಒಂದು ಇತಿಹಾಸವನ್ನೇ ಸೃಷ್ಟಿಸಿದ ಸಮಾರಂಭವಾಗಿ ಸಂಪನ್ನಗೊಂಡಿತು
ಉಪನ್ಯಾಸಕಿ
ಡಾ.ಮೈತ್ರೇಯಿ ಆದಿತ್ಯ ಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು.
