ರಷ್ಯಾ ತೈಲ ಆಮದಿನ ಮೇಲೆ ಯುರೋಪಿಯನ್ ಒಕ್ಕೂಟ ಭಾರೀ ನಿರ್ಬಂಧ ಹೇರಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇನ್ನು ಮುಂದೆ ಭಾರತ ಹಾಗೂ ಚೀನಾ ಮೇಲೆ ಅವಲಂಬನೆ ಆಗಬೇಕಾಗುವ ಲಕ್ಷಣಗಳು ಕಂಡುಬರುತ್ತಿದೆ.
ಯುರೋಪಿಯನ್ ಒಕ್ಕೂಟದ ಈ ನಿರ್ಧಾರದಿಂದ ರಷ್ಯಾಗೆ ವರ್ಷಕ್ಕೆ 10 ಬಿಲಿಯನ್ ಡಾಲರ್ ಅಂದರೆ ಸುಮಾರು 75 ಸಾವಿರ ಕೋಟಿ ರೂಪಾಯಿಯಷ್ಟು ರಫ್ತು ಆದಾಯ ಕಡಿತಗೊಳ್ಳುತ್ತದೆ ಎಂದು ವರದಿಯಿಂದ ತಿಳಿದುಬಂದಿದೆ.
ಇದರ ಜೊತೆಗೆ, ಯುರೋಪ್‌ನಲ್ಲಿ ಫೇಮಸ್ ಆಗಿದ್ದ ಯುರಾಲ್ಸ್ ಆಯಿಲ್ ಬ್ರ್ಯಾಂಡ್‌ಗೆ ಈಗ ಹೊಸ ಕಸ್ಟಮರ್ ಅಂದರೆ ಅದನ್ನು ಖರೀದಿಸೋ ದೇಶಗಳು ಬೇಕಾಗಿವೆ. ಆದರೆ, ಏಷ್ಯಾದಲ್ಲಿ ಸೀಮಿತ ದೇಶಗಳು ಮಾತ್ರ ಇದನ್ನು ಖರೀದಿಸುತ್ತಿವೆ. ಏಕೆಂದರೆ, ಇದಕ್ಕೆ ಅತ್ಯಾಧುನಿಕ ಸಂಸ್ಕರಣೆ ಹಾಗೂ ಮಿಶ್ರಣ ಸಾಮರ್ಥ್ಯಗಳು ಬೇಕಾಗಿದೆ. ಚೀನಾ ಹಾಗೂ ಭಾರತ ಈ ರಿಫೈನರಿಗಳನ್ನು ಹೊಂದಿವೆ.