Thursday, March 19, 2026
Thursday, March 19, 2026
Home Blog Page 1478

ತೈವಾನ್ ವಿರುದ್ಧ ಯುದ್ಧೋತ್ಸಾಹ ನಿಲ್ಲಿಸಬೇಕು ಚೀನಾಗೆಪ್ರಮುಖ ರಾಷ್ಟ್ರಗಳ ತಾಕೀತು

0

ತೈವಾನ್‌ ಹಾಗೂ ಅದರ ಆಸುಪಾಸಿನಲ್ಲಿ ನಡೆಸುತ್ತಿರುವ ಸೇನಾ ತಾಲೀಮು ಅನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಎಂದು ಅಮೆರಿಕ, ಆಸ್ಟ್ರೇಲಿಯ, ಜಪಾನ್‌ಗಳು ಚೀನಾಗೆ ಆಗ್ರಹಪಡಿಸಿವೆ.

ತೈವಾನ್‌ನಲ್ಲಿ ಶಾಂತಿ ಮತ್ತು ಸ್ಥಿರತೆ ಸ್ಥಾಪನೆಗೆ ಬದ್ಧವಾಗಿರುವುದಾಗಿಯೂ ಈ ದೇಶಗಳು ಪ್ರತಿಪಾದಿಸಿವೆ.
ಅಮೆರಿಕ ಸಂಸತ್ತಿನ ಸ್ಪೀಕರ್‌ ನ್ಯಾನ್ಸಿ ಪೆಲೋಸಿ ಅವರು ತೈಪೆಗೆ ಭೇಟಿ ನೀಡಿದ್ದ ಹಿಂದೆಯೇ ಚೀನಾವು ಸೇನಾ ತಾಲೀಮು ಅನ್ನು ಚುರುಕುಗೊಳಿಸಿತ್ತು.
ಕಳೆದ 25 ವರ್ಷಗಳಲ್ಲಿ ತೈವಾನ್‌ಗೆ ಭೇಟಿ ನೀಡಿದ ಅಮೆರಿಕದ ಉನ್ನತ ಸ್ಥಾನದಲ್ಲಿರುವ ಪ್ರಥಮ ರಾಜಕಾರಣಿ ಪೆಲೋಸಿ. ಇವರ ಭೇಟಿ, ತೈವಾನ್‌ ಅಧ್ಯಕ್ಷ ಸಾಯ್ ಇಂಗ್ ವೆನ್‌ ಮತ್ತಿತರ ಮುಖಂಡರ ಜೊತೆಗೆ ನಡೆಸಿದ್ದ ಸಭೆಯು ಚೀನಾವನ್ನು ಕೆರಳಿಸಿತ್ತು.

ಅದರ ಹಿಂದೆಯೇ ಸೇನಾ ತಾಲೀಮು ಆರಂಭಿಸಿದ್ದ ಚೀನಾವು ತೈವಾನ್‌ ಆಸುಪಾಸಿನಲ್ಲಿ ಸಮುದ್ರವನ್ನು ಗುರಿಯಾಗಿಸಿ ಖಂಡಾಂತರ ಕ್ಷಿಪಣಿಗಳನ್ನು ಪ್ರಯೋಗಿಸಿತ್ತು. ಜೊತೆಗೆ ದೊಡ್ಡ ಪ್ರಮಾಣದಲ್ಲಿ ಸೇನಾ ತಾಲೀಮು ಕಾರ್ಯಾಚರಣೆಯನ್ನು ಆರಂಭಿಸಿತ್ತು.

ಈ ಬೆಳವಣಿಗೆಯ ಹಿಂದೆಯೇ ಮೂರು ಪ್ರಮುಖ ರಾಷ್ಟ್ರಗಳು ಜಂಟಿ ಹೇಳಿಕೆ ನೀಡಿದ್ದು, ಸೇನಾ ತಾಲೀಮು ಅನ್ನು ತಕ್ಷಣವೇ ಕೈಬಿಡಬೇಕು ಎಂದು ಚೀನಾಗೆ ಆಗ್ರಹಪಡಿಸಿವೆ.

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಯಂಟೊನಿ ಬ್ಲಿಂಕೆನ್, ಆಸ್ಟ್ರೇಲಿಯ ವಿದೇಶಾಂಗ ಸಚಿವ ಪೆನ್ನಿ ವೊಂಗ್‌, ಜಪಾನ್‌ನ ಸಚಿವ ಹಯಾಷಿ ಯೊಷಿಮಸ ಅವರು ಈ ಕುರಿತು ಜಂಟಿ ಹೇಳಿಕೆ ನೀಡಿದ್ದಾರೆ.

ಕಾಮನ್ ವೆಲ್ತ್ ಕ್ರೀಡಾಕೂಟ:ಶ್ರೀಕಾಂತ್ ಕಿಡಂಬಿಗೆ ಕಂಚು

0

ಕಾಮನ್‌ವೆಲ್ತ್ ಗೇಮ್ಸ್ 2022ರಲ್ಲಿ ಭಾರತ ಬ್ಯಾಡ್ಮಿಂಟನ್‌ನಲ್ಲಿ ಎರಡನೇ ಪದಕವನ್ನು ಪಡೆದುಕೊಂಡಿದೆ. ಸ್ಟಾರ್ ಷಟ್ಲರ್ ಕಿಡಂಬಿ ಶ್ರೀಕಾಂತ್ ಪುರುಷರ ಸಿಂಗಲ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.

ಕಾಮನ್‌ವೆಲ್ತ್ ಗೇಮ್ಸ್ 2022ರಲ್ಲಿ ಭಾರತ ಬ್ಯಾಡ್ಮಿಂಟನ್‌ನಲ್ಲಿ ಎರಡನೇ ಪದಕವನ್ನು ಪಡೆದುಕೊಂಡಿದೆ.

ಸ್ಟಾರ್ ಷಟ್ಲರ್ ಕಿಡಂಬಿ ಶ್ರೀಕಾಂತ್ ಪುರುಷರ ಸಿಂಗಲ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಇದರೊಂದಿಗೆ ಪದಕ ಪಟ್ಟಿಯಲ್ಲಿ ಭಾರತದ ಪದಕಗಳ ಸಂಖ್ಯೆ 50 ದಾಟಿದೆ. ಭಾನುವಾರ ರಾತ್ರಿ ನಡೆದ ಕಂಚಿನ ಪದಕದ ಪಂದ್ಯದಲ್ಲಿ ಸಿಂಗಾಪುರದ ಜಿಯಾ ಹೆಂಗ್ ತೆಹ್ ಅವರನ್ನು 21-15, 21-18 ನೇರ ಗೇಮ್‌ಗಳಿಂದ ಕಿಡಂಬಿ ಸೋಲಿಸಿದರು. ಆದಾಗ್ಯೂ, 2018 ರ ಬೆಳ್ಳಿ ಪದಕ ವಿಜೇತ ಕಿಡಂಬಿ ಶ್ರೀಕಾಂತ್ ಈ ಕ್ರೀಡಾಕೂಟದಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಏಕೆಂದರೆ ಅವರು ಚಿನ್ನದ ಪದಕ ಗೆಲ್ಲುವ ಪ್ರಬಲ ಸ್ಪರ್ಧಿ ಎಂದು ಪರಿಗಣಿಸಲ್ಪಟ್ಟಿದ್ದರು.

ಭೂಗರ್ಭಶಾಸ್ತ್ರಜ್ಞರಿಂದ ಸುಳ್ಯ ಸುತ್ತಮುತ್ತ ಪ್ರಾಕೃತಿಕ ಅನಾಹುತಗಳ ಅಧ್ಯಯನ

0

ಸುಳ್ಯ ತಾಲೂಕಿನಲ್ಲಿ ಅದರಲ್ಲೂ ಅರಣ್ಯ ಪ್ರದೇಶಗಳಲ್ಲಿ ಸಂಭವಿಸಿರುವ ಪ್ರಾಕೃತಿಕ ಅನಾಹುತಗಳಿಗೆ ಕಾರಣ ಪತ್ತೆಗೆ ಭೂಗರ್ಭಶಾಸ್ತ್ರಜ್ಞರಿಂದ ಅಧ್ಯಯನ ನಡೆಸುವ ನಿಟ್ಟಿನಲ್ಲಿ ಸೂಕ್ತ ಕ್ರಮಕ್ಕಾಗಿ ರಾಜ್ಯ ಸರಕಾರವನ್ನು ಕೋರಲಾಗುವುದು ದ.ಕ.ಜಿಲ್ಲಾಧಿಕಾರಿ ಡಾ. ರಾಜೇಂದ್ರ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಳ್ಯದ ಕಲ್ಮಕಾರು, ಸಂಪಾಜೆ ಮತ್ತಿತರ ಪ್ರದೇಶಗಳಲ್ಲಿ ನಡೆದ ಪ್ರಾಕೃತಿಕ ಅನಾಹುತದಲ್ಲಿ ಮನೆಗಳಿಗೆ ನೀರು ನುಗ್ಗಿದ ಪ್ರಕರಣ, ಭಾಗಶಃ ಮನೆ ಹಾನಿ ಹಾಗೂ ಪೂರ್ಣ ಮನೆ ಹಾನಿ ಪ್ರಕರಣಗಳಿಗೆ ನಿಗದಿತ ಪರಿಹಾರ ನೀಡಲಾಗುತ್ತಿದೆ. ಬಾಳಗೋಡು, ಹರಿಹರ ಮತ್ತು ಕಲ್ಮಕಾರುಗಳಲ್ಲಿ 6 ಸಾವಿರ ಸಂತ್ರಸ್ತರಿಗೆ ಕಾಳಜಿ ಕೇಂದ್ರಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.

ಸುಮಾರು 100 ಮಂದಿ ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ. ಕಲ್ಮಕಾರಿನಲ್ಲಿ 150ಕ್ಕೂ ಅಧಿಕ ಕುಟುಂಬ ರಸ್ತೆ ಮಾರ್ಗದ ಸಂಪರ್ಕ ಕಡಿದುಕೊಂಡಿದೆ. ಅಲ್ಲಿಗೆ ತಾತ್ಕಾಲಿಕವಾಗಿ ಮರು ಸಂಪರ್ಕ ಕಲ್ಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

ರಾಷ್ಟ್ರಧ್ವಜಕ್ಕೆ ನಮ್ಮ ಗೌರವ ಪರಿಪೂರ್ಣವಾಗಿರಲಿ

0

ರಾಷ್ಟ್ರಧ್ವಜಕ್ಕೆ ಬೆಂಕಿ ಹಚ್ಚುವುದಾಗಲಿ, ಕೆಳಗೆ ಬೀಳಿಸುವುದಾಗಲಿ, ಕಾಲ ಕೆಳಗೆ ಹಾಕುವುದಾಗಲಿ, ಹಾಳುಗೆಡುವುದಾಗಲಿ ಅಥವಾ ಅದಕ್ಕೆ ಯಾವುದೇ ತರಹದ ಅಗೌರವ ತೋರುವ ರೀತಿಯಲ್ಲಿ ನಡೆದು ಕೊಂಡರೆ, ಮಾತು, ಬರಹ ಅಥವಾ ಕೃತ್ಯದ ಮೂಲಕ ಅಗೌರವ ತೋರಿದರೆ ರಾಷ್ಟ್ರೀಯ ಗೌರವದ ಅವಮಾನ ವಿರೋಧಿ ಕಾಯ್ದೆಯಡಿಯಲ್ಲಿ ಶಿಕ್ಷೆಗೆ ಒಳ ಪಡಿಸಲಾಗುತ್ತದೆ

ಇಡೀ ಭಾರತ ಆಗಸ್ಟ್ 15, 2022 ರಂದು ತನ್ನ 75 ನೇ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದೆ. ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯವಾಗಿ 75 ವರ್ಷ ಕಳೆದಿದೆ. ಇದರ ಗೌರವಾರ್ಥವಾಗಿ ಆಜಾದಿ ಕಾ ಅಮೃತ್ ಮಹೋತ್ಸವವನ್ನು ಆಯೋಜಿಸಿದೆ. ಈ ಬಾರಿ ಹರ್ ಘರ್ ತಿರಂಗ ಅಭಿಯಾನವನ್ನು ಆರಂಭಿಸಲಾಗಿದೆ.

ರಾಷ್ಟ್ರ ಧ್ವಜವನ್ನು ಕೇವಲ ಸ್ವತಂತ್ರ ದಿನ ಹಾಗೂ ಗಣರಾಜ್ಯೋತ್ಸವದಂದು ಮಾತ್ರ ಹೊರತೆಗೆದು ಗೌರವದಿಂದ ಧ್ವಜಾರೋಹಣ ಮಾಡಲಾಗುತ್ತದೆ. ರಾಷ್ಟ್ರ ಧ್ವಜ ರಾಷ್ಟ್ರದ ಗೌರವ ಮತ್ತು ಭಾರತೀಯರ ರಾಷ್ಟ್ರೀಯತೆ ಬಿಂಬಿಸುವ ಲಾಂಛನವಾಗಿದೆ.

ದೇಶದ ಪ್ರಮುಖ ಸ್ಥಳಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ ರಾಷ್ಟ್ರಧ್ವಜ ಬಳಸಲಾಗುತ್ತದೆ. ಆದರೆ, ಈ ಬಾರಿ ಮನೆ ಮನೆಗಳಲ್ಲಿ ಧ್ವಜಾರೋಹಣ ಮಾಡಲು ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿದ್ದಾರೆ. ರಾಷ್ಟ್ರ ಧ್ವಜ ಕರ್ನಾಟಕದ ಧಾರವಾಡ ಜಿಲ್ಲೆಯ ಗರಗ ಗ್ರಾಮದಲ್ಲೇ ನಿರ್ಮಾಣವಾಗುತ್ತದೆ.

ಮಲೆನಾಡಿನಲ್ಲಿ ಮಳೆ: ತುಂಗಭದ್ರ ನದಿ ನೀರಿನ ಹರಿವು ಗಣನೀಯ ಏರಿಕೆ

0

ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಮಳೆ ಚುರುಕಾಗಿರುವುದರಿಂದ ಇಲ್ಲಿನ ತುಂಗ, ಭದ್ರಾ ನದಿಯಲ್ಲಿ ನೀರಿನ ಹರಿವು ಗಣನೀಯವಾಗಿ ಏರಿಕೆಯಾಗುತ್ತಿದೆ.

ಶನಿವಾರಂದು ನದಿಯಲ್ಲಿ ನೀರಿನ ಮಟ್ಟ 9.200 ಮೀ.ಗೆ ಏರಿದೆ. ಶುಕ್ರವಾರ 7.240 ಮೀ., ಗುರುವಾರ 7.210 ಮೀ.
ಇತ್ತು. ಕೇವಲ 3 ದಿನಗಳ ಅಂತರದಲ್ಲಿ ನದಿಯಲ್ಲಿ 2 ಮೀ. ನೀರಿನ ಮಟ್ಟ ಹೆಚ್ಚಾಗಿದೆ. ಮಳೆ ಇನ್ನೂ ಮುಂದುವರಿದರೆ ಅಥವಾ ಜಲಾಶಯದಿಂದ ಹೆಚ್ಚುವರಿ ನೀರು ಹರಿಸಿದರೆ ನದಿಯಲ್ಲಿ ಮತ್ತೆ ಪ್ರವಾಹ ಉಂಟಾಗುವ ಸಾಧ್ಯತೆ ಇದೆ.

ಜುಲೈ ತಿಂಗಳಲ್ಲಿ ನಗರದ ಗಂಗಾನಗರದ ಮನೆಗಳು ಜಲಾವೃತವಾಗಿದ್ದವು. ಚಿಕ್ಕಬಿದರಿ ಸಾರಥಿ ಮತ್ತು ಉಕ್ಕಡಗಾತ್ರಿ ಯಿಂದ ನಂದಿಗುಡಿ ನಡುವಿನ ಸೇತುವೆ ಮುಳುಗಿ ರಸ್ತೆ ಸಂಪರ್ಕ ಕಡಿತವಾಗಿತ್ತು. ಮತ್ತೆ ಅದೇ ದುಃಸ್ಥಿತಿ ಎದುರಾಗುವ ಸಾಧ್ಯತೆ ಇದೆ. ಪ್ರವಾಹಕ್ಕೀಡಾದ ಪ್ರದೇಶಗಳ ಜನರು ಆತಂಕದಲ್ಲಿದೆ.

ಹರಿಹರದಲ್ಲಿ ಶುಕ್ರವಾರ 10.2 ಮಿ.ಮೀ., ಮಲೇಬೆನ್ನೂರು 14 ಮಿ.ಮೀ., ಕೊಂಡಜ್ಜಿ 9.2 ಮಿ.ಮೀ., ಹೊಳೆಸಿರಿಗೆರೆಯಲ್ಲಿ 10.4 ಮಿ.ಮೀ., ಒಟ್ಟು 43.6, ಸರಾಸರಿ 10.90 ಮಿ.ಮೀ. ಮಳೆ ದಾಖಲಾಗಿದೆ.

ಪಕ್ಷ ಬಯಸಿದರೆ ಚುನಾವಣೆಯಲ್ಲಿ ಸ್ಪರ್ಧಿಸುವೆ

0

ಪಕ್ಷ ಬಯಸಿದರೆ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ. ಇಲ್ಲವಾದರೆ ಇಲ್ಲ ಎಂದು ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಅವರು ತಿಳಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಚುನಾವಣಾ ನಿವೃತ್ತಿ ಘೋಷಣೆ ಮಾಡಿದ್ದಾರೆ. ನೀವೂ ಕೂಡ ನಿವೃತ್ತಿ ತೆಗೆದುಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರು, ಚುನಾವಣೆಗೆ ಸ್ಪರ್ಧಿಸುವ ವಿಚಾರವನ್ನು ಪಕ್ಷ ತೀರ್ಮಾನ ಮಾಡುತ್ತದೆ ಎಂದು ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ನಾನು ಮೊದಲು ಎಂಎಲ್‌ಎ ಆದಾಗಲೂ ನಾನೇ ಸ್ವಯಂ ಇಚ್ಛೆಯಿಂದ ಶಾಸಕನಾಗಿದ್ದಲ್ಲ. ಹಿರಿಯರೆಲ್ಲಾ ಕೂತು ನನ್ನನ್ನು ಆಯ್ಕೆ ಮಾಡಿದರು. ಬಳಿಕ ಯುವ ಮೋರ್ಚಾ ರಾಜ್ಯಾಧ್ಯಕ್ಷ ಆಗಬೇಕು ಎಂದು ಹೇಳಿದ್ದರು. ನಾನು ಅದನ್ನೂ ನಿರ್ವಹಿಸಿದೆ. ಬಳಿಕ ಬಿಜೆಪಿ ರಾಜ್ಯಾಧ್ಯಕ್ಷನಾಗಿಯೂ ಕೆಲಸ ಮಾಡಿದೆ. ಬಳಿಕ, ಅನೇಕ ಮಂತ್ರಿ ಪದವಿಗಳನ್ನ ನೋಡಿದ್ದೇನೆ. ಉಪ ಮುಖ್ಯಮಂತ್ರಿ ಕೂಡ ಆಗಿದ್ದೇನೆ. ಈಗಲೂ ಅಷ್ಟೇ ಪಕ್ಷ ಚುನಾವಣೆಗೆ ಟಿಕೆಟ್ ಕೊಟ್ಟರೆ ಸ್ಪರ್ಧಿಸುತ್ತೇನೆ ಇಲ್ಲದಿದ್ದರೆ ಇಲ್ಲ ಎಂದು ಹೇಳಿದ್ದಾರೆ.

ಸಚಿವ ಸಂಪುಟ ವಿಸ್ತರಣೆ ಕುರಿತು ಯಾವುದೇ ಮಾಹಿತಿ ಇಲ್ಲ. ನಾನು ಪುನಃ ಮಂತ್ರಿಯಾಗುತ್ತೇನೆ. ಇಲ್ಲವೋ ಗೊತ್ತಿಲ್ಲ. ಹಾಗಾಗಿ ನಾನು ಕಳಂಕ ರಹಿತನಾಗಿದ್ದೇನೆ ಎಂದು ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಅವರು ಹೇಳಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ಈಶ್ವರಪ್ಪ, ದಾವಣಗೆರೆಯಲ್ಲಿ ನಡೆಸಿರುವುದು ಸಿದ್ದರಾಮೋತ್ಸವ ಅಲ್ಲ. ಅದು ಚುನಾವಣೋತ್ಸವ ಎಂದು ಹೇಳಿದ್ದಾರೆ.
ಅಂದು ಚುನಾವಣೋತ್ಸವಕ್ಕೆ ಬಂದಿದ್ದ ಜನರೇ ಮುಂದೆ ಕಾಂಗ್ರೆಸ್‌ ಪಕ್ಷಕ್ಕೆ ಮಣ್ಣು ಮುಕ್ಕಿಸಲಿದ್ದಾರೆ ಎಂದು ಈಶ್ವರಪ್ಪ ಅವರು ಅಭಿಪ್ರಾಯ ಪಟ್ಟಿದ್ದಾರೆ.

ಸಿದ್ದರಾಮೋತ್ಸವದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆಶಿ ಆಲಂಗಿಸಿಕೊಂಡ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಆಲಿಂಗನಕ್ಕೆ ಪಕ್ಷದ ವರಿಷ್ಟ ರಾಹುಲ್ ಗಾಂಧಿ ಹೇಳಿ ಕೊಡಬೇಕಾಯಿತು. ಕೆಲ ಕಾಲ ಜೊತೆಗೆ ಓಡಾಡಿದ ಪ್ರೇಮಿಗಳು ಬೇರೆಯಾದಾಗ ಕುಟುಂಬದವರೇ ಬುದ್ದಿ ಹೇಳಿ ಮದುವೆಗೆ ಒಪ್ಪಿಸಿ ತಬ್ಬಿಕೊಳ್ಳಿ ಎಂದು ಗದರುವಂತಿತ್ತು.

ಕರುಣೆ ತೋರೋ ಮಳೆರಾಯ ಮೊರೆಯಿಟ್ಟಿದೆ ಕರುನಾಡು

0

ಮಳೆ ನಿಂತರೆ ಸಾಕು ಅನ್ನೋ ಮಾತುಗಳು ಎಲ್ಲರ ಬಾಯಲ್ಲಿ ಕೇಳುತ್ತಿದ್ದೇವೆ. ದಕ್ಷಿಣ, ಉತ್ತರ ಒಳನಾಡು ಸೇರಿದಂತೆ ಎಲ್ಲಾ ಭಾಗಗಳಲ್ಲಿ ಕಳೆದ 3 ವಾರಗಳಿಂದ ನಿರಂತರ ಮಳೆ ಆಗುತ್ತಿದೆ. ತೊಳೆದು ಹಾಕಿರೋ ಬಟ್ಟೆ ಒಣಗುತ್ತಿಲ್ಲ.

ಸೂರ್ಯದೇವ ಕೃಪೆ ತೋರಲಿ ಎಂದು ಎಲ್ಲರೂ ಪ್ರಾರ್ಥನೆ ಮಾಡಿಕೊಳ್ತಿದ್ದಾರೆ. ಇಂದಿನಿಂದ ಮೂರು ದಿನ ರಾಜ್ಯದ 10 ಜಿಲ್ಲೆಗಳಲ್ಲಿ ಮಳೆಯ ಅಲರ್ಟ್ ಘೋಷಣೆ ಮಾಡಲಾಗಿದೆ. ಇನ್ನು ನಿರಂತರ ಮಳೆಯಿಂದಾಗಿ ನದಿಗಳು ಅಪಾಯಮಟ್ಟದಲ್ಲಿ ಹರಿಯುತ್ತಿವೆ. ವಾಹನಗಳು ನೀರಿನಲ್ಲಿ ಕೊಚ್ಚಿ ಹೋಗಿರುವ ವರದಿಗಳು ರಾಜ್ಯದ ಮೂಲೆ ಮೂಲೆಯಿಂದಲೂ ಬರುತ್ತಿವೆ. ಕೆಲವಡೆ ಪ್ರಾಣಹಾನಿ ಸಹ ಸಂಭವಿಸಿವೆ.

ರಾಜಧಾನಿ ಬೆಂಗಳೂರಿನಲ್ಲಿ ಇಂದೂ ಸಹ ಮೋಡ ಕವಿದ ವಾತಾವರಣ ಇರಲಿದೆ. ಜಡಿ ಮಳೆಯಾಗಲಿದೆ. ಆದ್ದರಿಂದ, ಮನೆಯಿಂದ ಹೊರ ಹೋಗುವ ಮುನ್ನ ಮಳೆಯಿಂದ ರಕ್ಷಣೆ ಪಡೆದುಕೊಳ್ಳಲು ಕೊಡೆ ಅಥವಾ ರೇನ್ ಕೋಟ್ ತೆಗೆದುಕೊಂಡು ಹೋಗುವುದನ್ನು ಮರೆಯಬೇಡಿ. ಇಂದು ಸಿಲಿಕಾನ್ ಸಿಟಿಯಲ್ಲಿ ಗರಿಷ್ಠ 26 ಮತ್ತು ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ಇನ್ನೂ ಮಳೆಯ ಜೊತೆಯಲ್ಲಿ ಚಳಿ ಸಹ ಏರಿಕೆಯಾಗಿದೆ.

ಕೈಮಗ್ಗ ಉತ್ಪನ್ನಗಳನ್ನ ಖರೀದಿಸಿ ಪ್ರೋತ್ಸಾಹಿಸಿ-ಸಚಿವ ಶಂಕರ ಪಾಟೀಲ

0

ಕೈಮಗ್ಗ ಕ್ಷೇತ್ರದ ಅಭಿವೃದ್ಧಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರವು ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ.

ಕೈಮಗ್ಗ ಉತ್ಪನ್ನಗಳನ್ನು ಗ್ರಾಹಕರುಗಳು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿ ಮಾಡಿ ಬಳಸುವ ಮೂಲಕ ಕೈಮಗ್ಗ ನೇಕಾರರನ್ನು ಪ್ರೋತ್ಸಾಹಿಸಬೇಕು ಎಂದು ಕೈಮಗ್ಗ ಮತ್ತು ಜವಳಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ತಿಳಿಸಿದರು.

8ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಪ್ರಯುಕ್ತ ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ಬೆಂಗಳೂರಿನ ಕುಮಾರ ಕೃಪಾ ರಸ್ತೆಯ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಏರ್ಪಡಿಸಲಾದ ಕೈಮಗ್ಗ ನೇಕಾರರ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ 2022ನೇ ಸಾಲಿನ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಕೃಷಿ ಕ್ಷೇತ್ರದಂತೆ ಕೈಮಗ್ಗ ಕ್ಷೇತ್ರದಲ್ಲೂ ಜಾರಿಗೊಳಿಸಿರುವ ಹಲವಾರು ಯೋಜನೆಗಳು ನೇಕಾರರಿಗೆ ನೆರವಾಗಿದೆ. ರಾಜ್ಯದ ಕೈಮಗ್ಗ ಉತ್ಪನ್ನಗಳು ಗುಣಮಟ್ಟ ಹಾಗೂ ಉತ್ಕೃಷ್ಟತೆ ಹೊಂದಿದ್ದು ಖರೀದಿ ಮಾಡುವ ಮೂಲಕ ನೇಕಾರರನ್ನು ಉತ್ತೇಜಿಸಿ ಬೆಂಬಲಿಸಬೇಕು ಎಂದು ಹೇಳಿದರು.

ಲಿಂಗನಮಕ್ಕಿ ಡ್ಯಾಂ ಹೆಚ್ಚುವರಿ ನೀರು ಯಾವುದೇ ಸಮಯ ಬಿಡುಗಡೆ ಆಗಬಹುದು

0

ಶರಾವತಿ ಯೋಜನೆಯ ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆ ಬೀಳುತ್ತಿರುವುದರಿಂದ ಲಿಂಗಮಕ್ಕಿ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟವು ದಿನೇ ದಿನೇ ಏರುತ್ತಿದೆ.

ಜಲಾಶಯದ ಗರಿಷ್ಟ ಮಟ್ಟ 1819.00 ಅಡಿಗಳಾಗಿದ್ದು ದಿ: 06-08-2022 ರ ಬೆಳಿಗ್ಗೆ 8 ಗಂಟೆಗೆ ಜಲಾಶಯದ ನೀರಿನ ಮಟ್ಟ 1801.35 ಅಡಿಗಳಾಗಿರುತ್ತದೆ. ಈ ದಿನದ ಲಿಂಗನಮಕ್ಕಿ ಜಲಾಶಯದ ಒಳ ಹರಿವು ಸುಮಾರು 30,000 ಕ್ಯೂಸೆಕ್ಸ್‍ಗಳಿಗಿಂತಲೂ ಅಧಿಕವಾಗಿದ್ದು ಇದೇ ರೀತಿಯಲ್ಲಿ ಜಲಾಶಯಕ್ಕೆ ಬರುವ ನೀರಿನ ಹರಿವು ಮುಂದುವರೆದ ಪಕ್ಷದಲ್ಲಿ ಜಲಾಶಯವು ಶೀಘ್ರದಲ್ಲಿ ಗರಿಷ್ಟ ಮಟ್ಟವನ್ನು ತಲುಪುವ ಸಾಧ್ಯತೆ ಇರುತ್ತದೆ.

ಅಣೆಕಟ್ಟೆಯ ಸುರಕ್ಷತಾ ದೃಷ್ಟಿಯಿಂದ ಹೆಚ್ಚುವರಿ ನೀರನ್ನು ಜಲಾಶಯದಿಂದ ಯಾವುದೇ ಸಮಯದಲ್ಲಿ ಹೊರಬಿಡಲಾಗುವುದು. ಆದ್ದರಿಂದ ಅಣೆಕಟ್ಟೆಯ ಕೆಳದಂಡೆಯಲ್ಲಿ ಹಾಗೂ ನದಿಯ ಪಾತ್ರದುದ್ದಕ್ಕೂ ವಾಸಿಸುತ್ತಿರುವ ಸಾರ್ವಜನಿಕರು ತಮ್ಮ ಜನ, ಜಾನುವಾರು ವಗೈರೆಗಳೊಂದಿಗೆ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳ್ಳಬೇಕೆಂದು ಕರ್ನಾಟಕ ವಿದ್ಯುತ್ ನಿಗಮದ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.

ಜಬೀರ್ ಮತ್ತು ಬಸಿತ್ ಆನ್ ಲೈನ್ ರಾಮಾಯಣ ಕ್ವಿಜ್ವಿಜೇತರು

0

ಕೇರಳದಲ್ಲಿ ರಾಮಾಯಣ ಆಚರಣೆಯ ಭಾಗವಾಗಿ ನಡೆಸಿದ ರಾಮಾಯಣ ರಸಪ್ರಶ್ನೆ ಫಲಿತಾಂಶ ಈಗ ದೇಶದ ಗಮನ ಸೆಳೆದಿದೆ.

ಕೇರಳದಲ್ಲಿ ರಾಮಾಯಣ ರಸಪ್ರಶ್ನೆಯ ಫಲಿತಾಂಶ ಬಂದಾಗ ರಾಜ್ಯದ ಜನ ಮಾತ್ರವಲ್ಲದೆ ದೇಶವೇ ಅಚ್ಚರಿಪಟ್ಟಿದೆ. ರಾಮಾಯಣ ಮಾಸದ ಅಂಗವಾಗಿ ಇತ್ತೀಚೆಗೆ ನಡೆದ ರಾಜ್ಯಾದ್ಯಂತ ರಾಮಾಯಣ ಕುರಿತ ಆನ್‌ಲೈನ್ ರಸಪ್ರಶ್ನೆ ವಿಜೇತರನ್ನು ಡಿಸಿ ಬುಕ್ಸ್ ಪ್ರಕಟಿಸುತ್ತಿದ್ದಂತೆಯೇ ಐದು ಮಂದಿ ವಿಜೇತರ ಲಿಸ್ಟ್​ನ ಮೊದಲ ಎರಡು ಹೆಸರುಗಳು ಎಲ್ಲರ ಗಮನ ಸೆಳೆದವು.

ಮಲಪ್ಪುರಂನ ಇಬ್ಬರು ಮುಸ್ಲಿಂ ವಿದ್ಯಾರ್ಥಿಗಳಾದ ಮೊಹಮ್ಮದ್ ಜಬೀರ್ ಪಿ ಕೆ ಮತ್ತು ಮೊಹಮ್ಮದ್ ಬಸಿತ್ ಎಂ ಅವರು 1,000 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದ ಆನ್‌ಲೈನ್ ರಾಮಾಯಣ ರಸಪ್ರಶ್ನೆಯಲ್ಲಿ ಅಗ್ರಸ್ಥಾನ ಪಡೆದರು. ಇವರಿಬ್ಬರೂ ವಲಂಚೇರಿಯ ಕೆಕೆಎಚ್‌ಎಂ ಇಸ್ಲಾಮಿಕ್ ಮತ್ತು ಆರ್ಟ್ಸ್ ಕಾಲೇಜಿನಲ್ಲಿ ವಾಫಿ ಕೋರ್ಸ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಎಂಟು ವರ್ಷಗಳ Wafy ಕಾರ್ಯಕ್ರಮದ ಅಡಿಯಲ್ಲಿ, ಅವರು ಇಸ್ಲಾಮಿಕ್ ಅಧ್ಯಯನವನ್ನು ಸ್ನಾತಕೋತ್ತರ ಹಂತದವರೆಗೆ ಅನುಸರಿಸುತ್ತಿದ್ದಾರೆ. ಇದು ನಿಯಮಿತ ವಿಶ್ವವಿದ್ಯಾಲಯದ ಪದವಿ ಕೋರ್ಸ್ ಅನ್ನು ಸಹ ಒಳಗೊಂಡಿದೆ.

ಹಿಂದೂ ಧರ್ಮ, ಬೌದ್ಧ ಧರ್ಮ, ಜೈನ ಧರ್ಮ ಮತ್ತು ಸಿಖ್ ಧರ್ಮವನ್ನು ಅಧ್ಯಯನ ಮಾಡುವ ಭಾರತೀಯ ಧರ್ಮಗಳ ಕುರಿತಾದ ಕಾಗದವನ್ನು ಒಳಗೊಂಡಿರುವ ವಾಫಿ ಕೋರ್ಸ್‌ನ ವಿಶಿಷ್ಟ ಪಠ್ಯಕ್ರಮವು ಅವರಿಗೆ ಸಹಾಯ ನೀಡಿತು ಎಂದು ಜಬೀರ್ ಹೇಳಿದರು.

ಕೋರ್ಸ್‌ನ ಭಾಗವು ಕ್ರಿಶ್ಚಿಯನ್ ಧರ್ಮ, ಜುದಾಯಿಸಂ, ಟಾವೊಯಿಸಂ ಇತ್ಯಾದಿಗಳೊಂದಿಗೆ ವ್ಯವಹರಿಸುವ ಕಾಗದವನ್ನು ಸಹ ಹೊಂದಿದೆ.

ನಮ್ಮ ಪ್ರಾಂಶುಪಾಲರಾದ ಅಬ್ದುಲ್ ಹಕೀಂ ಫೈಝಿ ಅಡ್ರಿಸ್ಸೆರಿ ನೇತೃತ್ವದ ಇಸ್ಲಾಮಿಕ್ ಕಾಲೇಜುಗಳ ಸಮನ್ವಯದಿಂದ ವಿನ್ಯಾಸಗೊಳಿಸಲಾದ ವಾಫಿ ಕೋರ್ಸ್‌ನ ಪಠ್ಯಕ್ರಮವು ವಿದ್ಯಾರ್ಥಿಗಳನ್ನು ಬಹು-ಧರ್ಮೀಯ ಸಮಾಜದಲ್ಲಿ ಬದುಕಲು ಸಜ್ಜುಗೊಳಿಸುವ ಉದ್ದೇಶದಿಂದ ಎಲ್ಲಾ ಧರ್ಮಗಳನ್ನು ಅಧ್ಯಯನ ಮಾಡಲು ಪ್ರೋತ್ಸಾಹಿಸುತ್ತದೆ.

ಪಠ್ಯಕ್ರಮವು ವಿವಿಧ ಧರ್ಮಗಳನ್ನು ವಿವರವಾಗಿ ಅಧ್ಯಯನ ಮಾಡುವ ಮಾಡ್ಯೂಲ್‌ಗಳನ್ನು ಹೊಂದಿದೆ ಎಂದು ಜಬೀರ್ ಹೇಳಿದರು.