Tuesday, March 31, 2026
Tuesday, March 31, 2026
Home Blog Page 1357

ಮನಸ್ಸಿನಿಂದ ಮನಸ್ಸಿಗೆ – 02

1

ಪುಟ್ ಬಾಲ್ ಆಟವನ್ನು ಮತ್ತೊಂದು ಹೆಜ್ಜೆ ಮೇಲಿನ ಹಂತಕ್ಕೆ ತೆಗೆದುಕೊಂಡು ಹೋದ ಅರ್ಜೆಂಟೈನಾ ತಂಡ.

ನಿನ್ನೆ ಕತಾರ್ ನಲ್ಲಿ ನಡೆದ ವಿಶ್ವಕಪ್ ಪುಟ್ ಬಾಲ್ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ ಗೆದ್ದ ಅರ್ಜೆಂಟೈನಾ, ಪುಟ್ ಬಾಲ್ ಆಟದ ಎಲ್ಲಾ ವಿಭಾಗಗಳಲ್ಲಿ ಹೆಚ್ಚು ಕಲಾತ್ಮಕತೆಯನ್ನು ಪ್ರದರ್ಶಿಸಿತು. ಮುಖ್ಯವಾಗಿ ಚೆಂಡನ್ನು ಹೆಚ್ಚು ಕಡಿಮೆ ಆಟದ ಮುಕ್ಕಾಲು ಸಮಯ ತನ್ನ ಹಿಡಿತದಲ್ಲೇ ಇಟ್ಟುಕೊಂಡಿದ್ದು ಮಾತ್ರವಲ್ಲದೆ ಪಾಸ್ ಗಳನ್ನು ನೀಡಿದ ರೀತಿ ಪುಟ್ ಬಾಲ್ ಆಟದ ಇದುವರೆಗಿನ ಎಲ್ಲಾ ಉತ್ಕೃಷ್ಟ ಹಂತವನ್ನು ದಾಟಿ ಅತ್ಯಂತ ಸೊಗಸಾದ ಸೌಂದರ್ಯವನ್ನು ಉಣಬಡಿಸಿತು.

ಲಿಯೋನೆಲ್ ಮೆಸ್ಸಿ ಎಂಬ ಆಧುನಿಕ ಪುಟ್ ಬಾಲ್ ಮಾಂತ್ರಿಕ ವಿಶ್ವದ ಸಾಕಷ್ಟು ಕ್ರೀಡಾ ಅಭಿಮಾನಿಗಳ ಮನಸ್ಸುನ್ನು ತನ್ನ ಆಟದ ಮೂಲಕ ಮನಸೂರೆಗೊಂಡರು.

ಬಹುತೇಕ 1986 ರಲ್ಲಿ ವಿಶ್ವಕಪ್ ಗೆದ್ದ ಡಿಯಾಗೋ ಮರಡೋನ ರೀತಿಯಲ್ಲಿ ಅಥವಾ ಅದಕ್ಕೂ ಒಂದು ಹೆಜ್ಜೆ ಮುಂದೆ ಸಾಗಿ ಈ ಬಾರಿ ಅರ್ಜೆಂಟೈನಾ ವಿಶ್ವ ಚಾಂಪಿಯನ್ ಆಗಲು ಕಾರಣನಾದ.

ಸಾಹಿತ್ಯ, ಸಂಗೀತ, ಸಿನಿಮಾ, ಚಿತ್ರಕಲೆ ರೀತಿಯಲ್ಲಿ ಕ್ರೀಡೆ ಸಹ ಕಲಾತ್ಮಕ ಮತ್ತು ಮಾಂತ್ರಿಕ ಶಕ್ತಿಯನ್ನು ಹೊಂದಿದೆ. ವಿಶ್ವದ ಅತ್ಯಂತ ಜನಪ್ರಿಯ ಕ್ರೀಡೆ ಪುಟ್ ಬಾಲ್ ಲಲಿತಕಲೆಗಳ ರೀತಿಯಲ್ಲಿಯೇ ಸೂಕ್ಷ್ಮತೆಯನ್ನು ಹೊಂದಿದೆ.

ಸೋಲು ಗೆಲುವು ಅವಮಾನ ನಿರಾಸೆ ಕೋಪ ದ್ವೇಷ ಅಸೂಯೆ ಸಂಭ್ರಮ ಎಲ್ಲವನ್ನೂ ಒಳಗೊಂಡ ಒಂದು ವಿಜ್ಞಾನವೂ ಹೌದು. ಅದರಲ್ಲಿ ಬದುಕಿನ ಅನೇಕ ಪಾಠಗಳು ಅಡಗಿವೆ.

ಇದ್ದಕ್ಕಿದ್ದಂತೆ ಬದಲಾಗುವ ತಿರುವುಗಳು, ಏರಿಳಿತಗಳು, ಪ್ರೇಕ್ಷಕರ ಪ್ರತಿಕ್ರಿಯೆಗಳು, ಅನಿರೀಕ್ಷಿತಗಳು, ಅನಿವಾರ್ಯಗಳು, ವಿರುದ್ಧ ತಂಡದ ಒತ್ತಡಗಳು, ಅಂಪೈರುಗಳ ಸರಿ‌ – ತಪ್ಪು ನಿರ್ಣಯಗಳು, ಅದೃಷ್ಟದಾಟ ಎಲ್ಲವೂ ಬದುಕಿಗೆ ಪಾಠವಾಗುತ್ತಾ ಸಾಗುತ್ತದೆ.

ನೋಡುವ ದೃಷ್ಟಿಕೋನ, ಆಸಕ್ತಿ, ಗ್ರಹಿಕೆಯ ಸಾಮರ್ಥ್ಯ, ಮನಸ್ಸಿನ ವಿಶಾಲತೆ, ಭಾವನೆಗಳ ಶುದ್ದತೆ, ತಾಳ್ಮೆ ಇಲ್ಲಿ ಮುಖ್ಯವಾಗುತ್ತದೆ. ಜೊತೆಗೆ ನಮ್ಮ ಕ್ರಿಯೆ ಪ್ರತಿಕ್ರಿಯೆಗಳು ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಒಟ್ಟಿನಲ್ಲಿ ಈ ಬಾರಿಯ ವಿಶ್ವಕಪ್ ಪುಟ್ ಬಾಲ್ ಹೆಚ್ಚು ರೋಚಕವಾಗಿತ್ತು. ಕತಾರ್ ಎಂಬ ಪುಟ್ಟ ದೇಶ ಅಚ್ಚುಕಟ್ಟಾಗಿ ಮತ್ತು ಅದ್ದೂರಿಯಾಗಿ ಆಯೋಜಿಸಿತ್ತು. 2026 ರಲ್ಲಿ ಅಮೆರಿಕದಲ್ಲಿ ಮುಂದಿನ ವಿಶ್ವಕಪ್ ನಡೆಯಲಿದೆ.

ಸುಮಾರು ‌140 ಕೋಟಿ ಜನಸಂಖ್ಯೆಯನ್ನು ಹೊಂದಿರುವ ನಮ್ಮ ನಿಮ್ಮೆಲ್ಲರ ದೇಶ ಭಾರತ ಭ್ರಷ್ಟಾಚಾರ, ಸೋಮಾರಿತನ, ಜಾತಿ ಪದ್ದತಿ, ಕೇವಲ ಹಣಗಳಿಕೆಯ ವ್ಯಾಮೋಹ, ಚುನಾವಣಾ ಅಕ್ರಮ ಎಲ್ಲವನ್ನೂ ಮೀರಿ ಕ್ರೀಡೆಗಳೂ ಸೇರಿ ಎಲ್ಲಾ ಕ್ಷೇತ್ರಗಳಲ್ಲಿ ಆದಷ್ಟು ಬೇಗ ವಿಶ್ವಮಟ್ಟದ ಸಾಧನೆ ಮಾಡುವಂತಾಗಲಿ.

ನಮ್ಮ ಮಕ್ಕಳು ಒಳ್ಳೆಯ ಮನೆ, ಉದ್ಯೋಗ, ಆಸ್ತಿ, ಒಡವೆ, ವಾಹನ, ಭರ್ಜರಿ ಮದುವೆ, ಪಾರ್ಟಿ ಮುಂತಾದ ಐಹಿಕ ಸುಖ ಭೋಗಗಳ ಜೊತೆಗೆ ಈ ರೀತಿಯ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಸಹ ಹೆಚ್ಚು ತೊಡಗಿಸಿಕೊಂಡು ದೇಶದ ಘನತೆಯನ್ನು ಕಾಪಾಡುವಂತಾಗಲಿ.

ದೇವರು, ಧರ್ಮ, ಜಾತಿ, ಭಾಷೆ ಸಂಘರ್ಷಗಳಲ್ಲಿಯೇ ತಮ್ಮನ್ನು ಹೆಚ್ಚು ಯೋಚಿಸುವಂತೆ ಮಾಡಿಕೊಂಡು, ವಿವಿಧ ಚಟಗಳಿಗೆ ದಾಸರಾಗಿ, ರಾಜಕಾರಣಿಗಳಿಗೆ, ಸಿನಿಮಾ ನಟನಟಿಯರಿಗೆ ಜೈಕಾರ ಹಾಕುತ್ತಾ, ಸಾಮಾಜಿಕ ಜಾಲತಾಣಗಳ ಕಾಮಿಡಿಗಳಿಗೆ, ವಿಕೃತಗಳಿಗೆ ಹೆಚ್ಚು ಆಕರ್ಷಿತರಾಗಿ ನಮ್ಮ ಸಮಯವನ್ನು ಹಾಳು ಮಾಡಿಕೊಂಡು ವ್ಯರ್ಥ ಮಾಡುವುದಕ್ಕಿಂತ ಮತ್ತಷ್ಟು ಪ್ರಯೋಜನಕಾರಿ ಜೀವನವನ್ನು ರೂಪಿಸಿಕೊಂಡು ಸಾಧಕರಾಗುವ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನಸೋಣ ಎಂಬ ಸಂಕಲ್ಪವನ್ನು ಈಗಿನಿಂದಲೇ ಕೈಗೊಂಡು ಕಾರ್ಯ ಪ್ರವೃತ್ತರಾಗೋಣ.

ಕ್ರೀಡಾ ಪ್ರೇಮಿಗಳಿಗೆ ಈ ತಿಂಗಳಲ್ಲಿ ಭರಪೂರ ಮನರಂಜನೆ ನೀಡಿದ ಕಬಡ್ಡಿ, ಕ್ರಿಕೆಟ್ ಮತ್ತು ಪುಟ್ ಬಾಲ್ ಆಟಗಾರರಿಗೆ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ಹೇಳುತ್ತಾ…

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್. ಕೆ.
9844013068…

ಎತ್ತಿನ ಓಟ ಮತ್ತು ಬಂಡಿ ಸ್ಪರ್ಧೆ ಏರ್ಪಾಡಿಗೆ ಪೂರ್ವಾನುಮತಿ ಅಗತ್ಯ-ಜಿಲ್ಲಾಧಿಕಾರಿ

0

ಎತ್ತಿನ ಓಟ/ಎತ್ತಿನ ಗಾಡಿ ಓಟವು ಒಂದು ಸಾಂಪ್ರದಾಯಿಕ ಕ್ರೀಡೆಯಾಗಿದ್ದು ಆಯೋಜಕರು ಕ್ರೀಡೆಗೆ ಮುನ್ನ ಸ್ಥಳೀಯ ವ್ಯಾಪ್ತಿಯ ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕು. ಇಲ್ಲವಾದಲ್ಲಿ ಅಂತಹವರ ವಿರುದ್ದ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ತಿಳಿಸಿದರು.

ಎತ್ತಿನ ಓಟ/ಎತ್ತಿನ ಗಾಡಿ ಓಟ ಕ್ರೀಡೆಯ ಮಾರ್ಗಸೂಚಿ ಕುರಿತು ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವಿಕೆ(ಕರ್ನಾಟಕ ತಿದ್ದುಪಡಿ) ಸುಗ್ರೀವಾಜ್ಞೆ 2017 ರನ್ವಯ ಎತ್ತಿನ ಓಟ/ಎತ್ತಿನ ಗಾಡಿ ಓಟ ಆಯೋಜಿಸುವ ಆಯೋಜಕರು ಕ್ರೀಡೆಯ 15 ದಿನಗಳ ಮೊದಲೇ ಸ್ಥಳೀಯ ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕು.

ಎತ್ತಿನ ಓಟ ನಡೆಸುವ ಗ್ರಾಮಗಳಲ್ಲಿ ಮೊದಲು ಗ್ರಾಮ ಪಂಚಾಯ್ತಿ ಮತ್ತು ಪಶುವೈದ್ಯರಿಂದ ಎನ್‍ಓಸಿ ಪಡೆದು ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಬೇಕು. ತಹಶೀಲ್ದಾರರಿಗೆ ಸಲ್ಲಿಸಿದ ಅರ್ಜಿಯನ್ನು ಅವರು ವಿವರವಾಗಿ ಪರಿಶೀಲಿಸಿ ಸೂಕ್ತ ಶಿಫಾರಸ್ಸಿನೊಂದಿಗೆ ಜಿಲ್ಲಾಧಿಕಾರಿಗಳಿಗೆ ಕಳುಹಿಸುತ್ತಾರೆ.

ಜಿಲ್ಲಾಧಿಕಾರಿಗಳು ಈ ಕ್ರೀಡೆಯಿಂದ ಆಗುವ ಸಾಧಕ ಬಾಧಕಗಳನ್ನು ಪರಿಶೀಲಿಸಿ ಅನುಮತಿ ನೀಡುವರು ಅಥವಾ ತಿರಸ್ಕರಿಸುವರು.

ಒಂದು ವೇಳೆ ಅನುಮತಿ ಪಡೆಯದೇ ಹೋದಲ್ಲಿ ಸ್ಥಳೀಯ ಸಂಸ್ಥೆಗಳು ಜವಾಬ್ದಾರರಾಗುತ್ತಾರೆ ಹಾಗೂ ಆಯೋಜಕರ ವಿರುದ್ದ ಸೂಕ್ತ ಕ್ರಮ ವಹಿಸಲಾಗುವುದು. ಈ ಕ್ರೀಡೆಯ ಆಯೋಜನೆ ಪರಿಶೀಲಿಸಲು ಕಂದಾಯ ಇಲಾಖೆ, ಪೊಲೀಸ್, ಯುವ ಸಬಲೀಕರಣ ಮತ್ತು ಕ್ರೀಡೆ, ಪಶುಸಂಗೋಪನೆ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲೆಯ ಎಸ್‍ಪಿಸಿಎ(ಸೊಸೈಟಿ ಫಾರ್ ಪ್ರಿವೆನ್ಶನ್ ಆಫ್ ಕ್ರುಯೆಲ್ಟಿ ಆಫ್ ಅನಿಮಲ್)ಪ್ರತಿನಿಧಿ ಇರುವರು.

ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಇಓ, ಪಶುಸಂಗೋಪನೆ, ಆರೋಗ್ಯ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವ ಷರತ್ತುಗಳಿಗೊಳಪಟ್ಟು ಎತ್ತಿನ ಓಟ ಕ್ರೀಡೆಯನ್ನು ನಡೆಸುವ ಸಂಬಂಧ ಅಧಿಕಾರಿಗಳಿಗೆ ಸಭೆ ನಡೆಸಿ ಅರಿವು ಮೂಡಿಸಬೇಕು ಹಾಗೂ ಈ ಸಂಬಂಧ ತಂಡ ಸನ್ನದ್ದವಾಗಿರಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್ ಮಾತನಾಡಿ, ಎತ್ತಿನ ಓಟದ ಅಧಿಸೂಚನೆ ಉದ್ದೇಶ ಪ್ರಾಣಿಗಳಿಗೆ ಆಗುವ ಕ್ರೌರ್ಯ ಹಾಗೂ ಮನುಷ್ಯರಿಗೆ ಆಗುವ ಹಾನಿ ತಡೆಗಟ್ಟುವುದಾಗಿದ್ದು, ಕ್ರೀಡೆಯಲ್ಲಿ ಭಾಗಿಯಾಗುವ ಎತ್ತುಗಳಿಗೆ ಅಪಘಾತ ಸಂಭವಿಸಿದಲ್ಲಿ ತುರ್ತು ವೈದ್ಯಕೀಯ ವ್ಯವಸ್ಥೆ, ಆಂಬುಲೆನ್ಸ್ ಇತರೆ ವ್ಯವಸ್ಥೆ ಸೇರಿದಂತೆ ಮಾರ್ಗಸೂಚಿಯಲ್ಲಿನ ಎಲ್ಲ ಅಂಶಗಳನ್ನು ಅನುಸರಿಸಬೇಕು. ಜೊತೆಗೆ ಕ್ರೀಡಾ ಸ್ಥಳದಲ್ಲಿ ಬ್ಯಾರಿಕೇಡ್ ಹಾಕಿ, ಜನರನ್ನು ನಿಯಂತ್ರಿಸಲು ಸ್ಥಳೀಯರನ್ನು ನೇಮಿಸಬೇಕು. ಹಾಗೂ ಆ ಸ್ಥಳದಲ್ಲಿ ಮದ್ಯ ಸೇವನೆ ಮಾಡಿದವರಿಗೆ ಬಿಡಬಾರದು ಎಂದು ತಿಳಿಸಿದರು.

ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ.ಶಿವಯೋಗಿ ಯಲಿ ಮಾತನಾಡಿ, ಕ್ರೀಡೆಯ ಆಯೋಜಕರು ಎತ್ತುಗಳಿಗೆ ಒಂದು ಪ್ರತ್ಯೇಕ ಸಮತಟ್ಟಾದ ಟ್ರ್ಯಾಕ್ ನಿರ್ಮಿಸಿ, ಗರಿಷ್ಟ 100 ಮೀಟರ್ ಉದ್ದ ಮತ್ತು 7.5 ಮೀಟರ್ ಅಗಲ ಇರಬೇಕು. ಹಾಗೂ ಮಧ್ಯಾಹ್ನ 12 ರಿಂದ 3 ಗಂಟೆ ನಡುವಿನ ಅವಧಿ 38 ಡಿಗ್ರಿ ಸಿ ಉಷ್ಣಾಂಶ ಮೀರಿದ ಯಾವುದೇ ಪ್ರದೇಶದಲ್ಲಿ ಎತ್ತಿನ ಓಟ ಕ್ರೀಡೆಗಾಗಿ ಎತ್ತುಗಳನ್ನು ಬಳಸುವಂತಿಲ್ಲ ಎಂದರು.

ಸಭೆಯಲ್ಲಿ ಪ್ರಭಾರ ಐಎಎಸ್ ಅಧಿಕಾರಿ ದಲ್ಜೀತ್ ಸಿಂಗ್, ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಫ್ ಹೊನ್ನಳ್ಳಿ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮಲ್ಲಿಕಾರ್ಜುನ್, ತಹಶೀಲ್ದಾರ್ ಡಾ.ನಾಗರಾಜ್, ತಾಲ್ಲೂಕು ವೈದ್ಯಾಧಿಕಾರಿ ಡಾ.ಚಂದ್ರಶೇಖರ್ ಹಾಗೂ ವಿಡಿಯೋ ಕಾನ್ಫರೆನ್ಸ್ ಮೂಲಕ ಇತರೆ ತಾಲ್ಲೂಕುಗಳ ತಹಶೀಲ್ದಾರ್, ಇಓ, ಪಶುಸಂಗೋಪನೆ ಇತರೆ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.

ಜನವರಿ 5 ರಂದು ಅಂತಿಮವಾಗಿ ಮತದಾರರ ಪಟ್ಟಿ ಪ್ರಕಟಣೆ- ಡಾ.ಸೆಲ್ವಮಣಿ

0

ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ಹೊಸದಾಗಿ 25,426 ಅರ್ಜಿಗಳು ಬಂದಿದ್ದು, 2023 ರ ಜನವರಿ 05 ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ಹೇಳಿದರು.

ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ರಾಜಕೀಯ ಪಕ್ಷದವರೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, 2023 ರ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವೇಳೆ ಜಿಲ್ಲೆಯಲ್ಲಿ ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು (ನಮೂನೆ 6) 25426 ಅರ್ಜಿಗಳು ಅರ್ಜಿ ಬಂದಿವೆ.

18 ಮತ್ತು 19 ವರ್ಷದ 10,667 ಯುವ ಮತದಾರರ ಅರ್ಜಿಗಳು ಬಂದಿವೆ. ನಮೂನೆ 7 ರಲ್ಲಿ ಮರಣ, ವಿಳಾಸ ಬದಲಾವಣೆ, ಸ್ಥಳ ಬದಲಾವಣೆಗೆ ಸಂಬಂಧಿಸಿದ 17,229 ಅರ್ಜಿಗಳು ಬಂದಿವೆ.

ನವೆಂಬರ್ 09 ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ನ.09 ರಿಂದ ಹಕ್ಕು ಮತ್ತು ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದ್ದು, ಪ್ರಸ್ತುತ ಅವುಗಳ ಪರಿಶೀಲನೆ ನಡೆಸಲಾಗುತ್ತಿದೆ.

ಡಿಸೆಂಬರ್ 26 ರಂದು ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿ ಮಾಡಿ, ಜನವರಿ 05 ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು. ಹಾಗೂ ಚುನಾವಣೆ ಘೋಷಣೆಯಾಗಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಅಂತಿಮ ದಿನದವರೆಗೆ ಮತದಾರರಿಂದ ಅರ್ಜಿಗಳನ್ನು ಸ್ವೀಕರಿಸಲಾಗುವುದು ಎಂದರು.

ಜಿಲ್ಲೆಯ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ 247 ಮತಗಟ್ಟೆಗಳು, ಭದ್ರಾವತಿಯಲ್ಲಿ 253, ಶಿವಮೊಗ್ಗ 282, ತೀರ್ಥಹಳ್ಳಿ 258, ಶಿಕಾರಿಪುರ 232, ಸೊರಬ 239 ಮತ್ತು ಸಾಗರ 264 ಒಟ್ಟು 1775 ಮತಗಟ್ಟೆಗಳಿದ್ದು, ಪ್ರತಿ ಮತಗಟ್ಟೆಗೆ ಒಬ್ಬರಂತೆ 1775 ಮತಗಟ್ಟೆ ಅಧಿಕಾರಿ(ಬಿಎಲ್‍ಓ)ಗಳನ್ನು ನೇಮಿಸಲಾಗಿದೆ. ಶೇ.83.1 ರಷ್ಟು ಮತದಾರರ ಚೀಟಿಗೆ ಆಧಾರ್ ಲಿಂಕ್ ಆಗಿದೆ.

ರಾಜಕೀಯ ಪಕ್ಷಗಳಿಗೆ ಸಂಬಂಧಿಸಿದಂತೆ ಬಿಜೆಪಿ ಪಕ್ಷದವರು ಒಟ್ಟು 1773, ರಾಷ್ಟ್ರೀಯ ಕಾಂಗ್ರೆಸ್ ಪಕ್ಷ 1632 ಮತ್ತು ಜೆಡಿಎಸ್ ಪಕ್ಷದವರು 1270 ಮತಗಟ್ಟೆ ಏಜೆಂಟ್ (ಬಿಎಲ್‍ಎ) ಗಳನ್ನು ನೇಮಿಸಿದ್ದಾರೆ. ಜೆಡಿಎಸ್ ನವರು ಭದ್ರಾವತಿ ಮತ್ತು ತೀರ್ಥಹಳ್ಳಿಯಲ್ಲಿ ಬಿಎಲ್‍ಎಗಳನ್ನು ನೇಮಿಸಬೇಕಿದೆ ಎಂದರು.

ರಾಜಕೀಯ ಪಕ್ಷದ ಮುಖಂಡರು ಮತದಾರರ ಪಟ್ಟಿಗೆ ಹೊಸ ಸೇರ್ಪಡೆಗೆ ಹೆಚ್ಚಿನ ಗಮನ ಹರಿಸುವಂತೆ ಕೋರಿದರು.

ಸಭೆಯಲ್ಲಿ ಇಂಡಿಯನ್ ನ್ಯಾನಷನಲ್ ಕಾಂಗ್ರೆಸ್ ಪಕ್ಷದ ಚಂದನ್ ಎಂ., ಭಾರತೀಯ ಜನತಾ ಪಾರ್ಟಿಯ ಪ್ರಭಾಕರ್ ಎಂ, ವಿನ್ಸೆಂಟ್ ರೋಡ್ರಿಗಸ್, ಜೆಡಿಎಸ್ ನ ಹೆಚ್ ತ್ಯಾಗರಾಜ್, ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಫ್ ಹೊನ್ನಳ್ಳಿ, ಚುನಾವಣಾ ತಹಶೀಲ್ದಾರ್ ಮಂಜುಳಾ ಭಜಂತ್ರಿ ಹಾಜರಿದ್ದರು.

ಭದ್ರಾವತಿ ವಿಐಎಸ್ಎಲ್ ನಿಂದ ಆರೋಗ್ಯ ತಪಾಸಣಾ ಶಿಬಿರ

0

ವಿ ಐ ಎಸ್ ಎಲ್ ಆಸ್ಪತ್ರೆ ವತಿಯಿಂದ ವಿ ಐ ಎಸ್ ಎಲ್ ಆಸ್ಪತ್ರೆ, ಸಹ್ಯಾದ್ರಿ ನಾರಾಯಣಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗ ಇವರುಗಳ ಸಹಯೋಗದಲ್ಲಿ ದೊಡ್ಡೇರಿ ಗ್ರಾಮ ಪಂಚಾಯತ್ ಗ್ರಾಮದಲ್ಲಿ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.

ಸಾಮಾನ್ಯ ಆರೋಗ್ಯ ತಪಾಸಣೆ, ಹೃದಯ ಮತ್ತು ಕಣ್ಣಿನ ತಪಾಸಣೆ, ಮೂಳೆ ಚಿಕಿತ್ಸೆಯ ತಪಾಸಣೆಯನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ವಿ ಐ ಎಸ್ ಎಲ್ ಕಾರ್ಯಪಾಲಕ ನಿರ್ದೇಶಕರಾದ ಶ್ರೀ ಬಿ.ಎಲ್. ಚಂದ್ವಾನಿ, ಜೊತೆಗೆ ಶ್ರೀ ಕೆ.ಎಸ್. ಸುರೇಶ್, ಮುಖ್ಯ ಮಹಾಪ್ರಬಂಧಕರು (ಸ್ಥಾವರ), ಶ್ರೀಮತಿ ದುಲಾರಿ ಚಂದ್ವಾನಿ, ದೊಡ್ಡೇರಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಮಧು ಸಿ. ಲೇಪಾಕ್ಷ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀ ಮಧುಸೂಧನ್ ಉದ್ಘಾಟಿಸಿದರು.

ಸುಮಾರು 165 ಗ್ರಾಮಸ್ಥರು ಮತ್ತು ಗ್ರಾಮೀಣ ವಿದ್ಯಾರ್ಥಿಗಳು ಈ ಶಿಬಿರದ ಸದುಪಯೋಗ ಪಡೆದರು.

ವಿ ಐ ಎಸ್ ಎಲ್ ಆಸ್ಪತ್ರೆಯ ತಜ್ಞರಾದ ಡಾ|| ಎಚ್.ಶೋಭಾ, ಡಾ|| ಎಮ್.ವೈ.ಸುರೇಶ್ ಮತ್ತು ಡಾ|| ಎಸ್.ಎನ್. ಸುರೇಶ್, ಸಾಮಾನ್ಯ ಆರೋಗ್ಯ, ಮೂಳೆ ಮತ್ತು ದಂತ ಸಮಸ್ಯೆಗಳ ಬಗ್ಗೆ ತಜ್ಞರ ಸಲಹೆಯನ್ನು ನೀಡಿದರು. ಇದರಲ್ಲಿ ಶ್ರೀಮತಿ ಲಿಲ್ಲಿ ಮರಿಯ, ಶ್ರೀ ಟಿ.ಎನ್. ಕೃಷ್ಣ, ಶ್ರೀ ಅಲೆನ್ ಜುಡೊ ಪಿಂಟೊ, ಶ್ರೀ ಮಧುಕರ್ ಮತ್ತು ಶ್ರೀ ಆರ್. ಮಂಜುನಾಥ್ ಸಹಕರಿಸಿದರು.

ಶಂಕರ ಕಣ್ಣಿನ ಆಸ್ಪತ್ರೆಯ ತಜ್ಞರಾದ ಡಾ|| ಮೊಹಮ್ಮದ್ ಶಹಬಾಜ್, ಶ್ರೀ ರವೀಂದ್ರ, ಶ್ರೀ ಅನ್ಶಾದ್ ಮತ್ತು ಕು.ಭೂಮಿಕಾ ನೇತ್ರ ಪರೀಕ್ಷೆಗಳನ್ನು ನಡೆಸಿ ನೇತ್ರ ಆರೈಕೆಯ ಬಗ್ಗೆ ತಜ್ಞರ ಸಲಹೆಯನ್ನು ನೀಡಿದರು.

ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ತಜ್ಞರಾದ ಡಾ|| ಶರತ್, ಡಾ|| ಮಾವಿಶ್ ಎಂ. ಕರಕ, ಕು.ಅಶ್ವಿನಿ, ಶ್ರೀಮತಿ ತಾಸಿನಾ, ಜೆನ್ನಿಫರ್, ಶ್ರೀ ಗಣೇಶ್ ಅವರು ಹೃದಯ ಸಂಬAಧಿ ಪರೀಕ್ಷೆಗಳನ್ನು ನಡೆಸಿ, ಹೃದ್ರೋಗ ಆರೈಕೆಯ ಬಗ್ಗೆ ತಜ್ಞರ ಸಲಹೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಶ್ರೀಮತಿ ಹೇಮಾವತಿ, ದೊಡ್ಡೇರಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಮಂಜು.ಕೆ, ಶ್ರೀಮತಿ ರಾಮಕ್ಕ, ಶ್ರೀ ಆಗಶರೀಫ್, ಶ್ರೀಮತಿ ಗೌರಿಬಾಯಿ, ಶ್ರೀಮತಿ ಗಂಗಮ್ಮ, ಶ್ರೀಮತಿ ಜಾನಿ.ಜೆ.ಬಿ, ಶ್ರೀಮತಿ ಲಲಿತಾ ಗಣೇಶ್ ಡಿ.ಬಿ, ಶ್ರೀ ಶ್ರೀನಿವಾಸ್‌ರಾವ್, ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ ಶ್ರೀ ಪಾಂಡುರಂಗ, ಶ್ರೀ ಅಣ್ಣಪ್ಪ, ಶ್ರೀ ಮಲ್ಲೇಶ್, ಶ್ರೀ ಪ್ರವೀಣ್ ಕುಮಾರ್.ಎಲ್, ಮಹಾ ಪ್ರಬಂಧಕರು (ಸಿಬ್ಬಂದಿ ಮತ್ತು ಸಾರ್ವಜನಿಕ ಸಂಪರ್ಕ) ಮತ್ತು ಶ್ರೀಮತಿ ಶೋಭ.ಕೆ.ಎಸ್, ಸಹಾಯಕ ಪ್ರಬಂಧಕರು (ಸಿಬ್ಬಂದಿ ಮತ್ತು ಸಿ.ಎಸ್.ಆರ್) ಉಪಸ್ಥಿತರಿದ್ದರು.

ಐಎಂಎ ವತಿಯಿಂದ ಹಿರಿಯ ವೈದ್ಯರ ಮನೆಗೆ ಭೇಟಿ ಕಾರ್ಯಕ್ರಮ

0

ಸಾರ್ವಜನಿಕರಿಗೆ ಹೆಚ್ಚು ಉಪಯುಕ್ತ ಆಗುವಂತಹ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸಬೇಕು ಎಂದು ಹಿರಿಯ ಫಿಜಿಷಿಯನ್ ಡಾ. ರಂಗಪ್ಪಗೌಡ ಹೇಳಿದರು.

ಭಾರತೀಯ ವೈದ್ಯಕೀಯ ಸಂಘ (ಐಎಂಎ) ಶಿವಮೊಗ್ಗ ಘಟಕದಿಂದ ಹಿರಿಯ ವೈದ್ಯ ಡಾ. ರಂಗಪ್ಪಗೌಡ ಅವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಣೆ ಹಾಗೂ ಸಮಾಲೋಚನೆ ಸಂದರ್ಭದಲ್ಲಿ ಮಾತನಾಡಿದರು.

ಐಎಂಎ ಶಿವಮೊಗ್ಗ ಘಟಕ ಸಾರ್ವಜನಿಕರಿಗೆ ಆರೋಗ್ಯ ಸೇವೆ ಒದಗಿಸಲು ನಿಟ್ಟಿನಲ್ಲಿ ಉಚಿತ ಆರೋಗ್ಯ ಶಿಬಿರಗಳನ್ನು ನಡೆಸಬೇಕು. ರಕ್ತದಾನ ಶಿಬಿರಗಳನ್ನು ಆಯೋಜಿಸಬೇಕು. ವೈದ್ಯರ ಸೇವೆ ಜನರಿಗೆ ಹೆಚ್ಚು ತಲುಪಲು ಶಿಬಿರಗಳು ಸಹಕಾರಿ ಆಗುತ್ತವೆ ಎಂದು ತಿಳಿಸಿದರು.
ಭಾರತೀಯ ವೈದ್ಯಕೀಯ ಸಂಘ (ಐಎಂಎ) ಶಿವಮೊಗ್ಗ ಘಟಕವು ಉತ್ತಮ ಕಾರ್ಯ ಚಟುವಟಿಕೆಗಳನ್ನು ಆಯೋಜಿಸಿಕೊಂಡು ಮುನ್ನಡೆಯುತ್ತಿರುವುದು ಶ್ಲಾಘನೀಯ. ಐಎಂಎ ಶಿವಮೊಗ್ಗ ಘಟಕ ಕ್ಯಾಲೆಂಡರ್ ಕೂಡ ಬಿಡುಗಡೆ ಮಾಡಿರುವುದು ಉತ್ತಮ ಕಾರ್ಯ ಎಂದರು.

ಭಾರತೀಯ ವೈದ್ಯಕೀಯ ಸಂಘ (ಐಎಂಎ) ಶಿವಮೊಗ್ಗ ಘಟಕದ ಅಧ್ಯಕ್ಷ ಡಾ. ಎಂ.ಎಸ್.ಅರುಣ್ ಮಾತನಾಡಿ, ಶಿವಮೊಗ್ಗ ಘಟಕವು ಪ್ರತಿ 15 ದಿನಗಳಿಗೊಮ್ಮೆ ಹಿರಿಯ ವೈದ್ಯರ ಮನೆಗೆ ಭೇಟಿ ಕೊಟ್ಟು ಆರೋಗ್ಯ ವಿಚಾರಿಸುವ ಜತೆಯಲ್ಲಿ ಸಮಾಲೋಚನೆ ನಡೆಸಲಾಗುವುದು. ಹಿರಿಯ ವೈದ್ಯರ ಮಾರ್ಗದರ್ಶನದಲ್ಲಿ ಸಮಾಜಮುಖಿ ಕಾರ್ಯಗಳನ್ನು ನಿರಂತರವಾಗಿ ಆಯೋಜಿಸಲಾಗುವುದು ಎಂದು ತಿಳಿಸಿದರು.

ಶಿವಮೊಗ್ಗ ಐಎಂಎ ಘಟಕದಿಂದ ಹೊರತಂದಿರುವ ಕ್ಯಾಲೆಂಡರ್ ಅನ್ನು ಹಿರಿಯ ಫಿಜಿಷಿಯನ್ ಡಾ.ರಂಗಪ್ಪ ಗೌಡ ಅವರಿಗೆ ನೀಡಲಾಯಿತು.
ಶಿವಮೊಗ್ಗ ಐಎಂಎ ಘಟಕದ ಕಾರ್ಯದರ್ಶಿ ಡಾ. ರಕ್ಷ ರಾವ್ , ಡಾ. ನಾಗರಾಜ್, ಡಾ. ಶ್ರೀಕಾಂತ್ ಹೆಗ್ಡೆ , ಡಾ. ಸುಬ್ಬಣ್ಣ ಮತ್ತಿತರರು ಹಾಜರಿದ್ದರು.

ಐಎಂಎ ವತಿಯಿಂದ ಹಿರಿಯ ವೈದ್ಯರ ಮನೆಗೆ ಭೇಟಿ ಕಾರ್ಯಕ್ರಮ

0

ಸಾರ್ವಜನಿಕರಿಗೆ ಹೆಚ್ಚು ಉಪಯುಕ್ತ ಆಗುವಂತಹ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸಬೇಕು ಎಂದು ಹಿರಿಯ ಫಿಜಿಷಿಯನ್ ಡಾ. ರಂಗಪ್ಪಗೌಡ ಹೇಳಿದರು.

ಭಾರತೀಯ ವೈದ್ಯಕೀಯ ಸಂಘ (ಐಎಂಎ) ಶಿವಮೊಗ್ಗ ಘಟಕದಿಂದ ಹಿರಿಯ ವೈದ್ಯ ಡಾ. ರಂಗಪ್ಪಗೌಡ ಅವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಣೆ ಹಾಗೂ ಸಮಾಲೋಚನೆ ಸಂದರ್ಭದಲ್ಲಿ ಮಾತನಾಡಿದರು.

ಐಎಂಎ ಶಿವಮೊಗ್ಗ ಘಟಕ ಸಾರ್ವಜನಿಕರಿಗೆ ಆರೋಗ್ಯ ಸೇವೆ ಒದಗಿಸಲು ನಿಟ್ಟಿನಲ್ಲಿ ಉಚಿತ ಆರೋಗ್ಯ ಶಿಬಿರಗಳನ್ನು ನಡೆಸಬೇಕು. ರಕ್ತದಾನ ಶಿಬಿರಗಳನ್ನು ಆಯೋಜಿಸಬೇಕು. ವೈದ್ಯರ ಸೇವೆ ಜನರಿಗೆ ಹೆಚ್ಚು ತಲುಪಲು ಶಿಬಿರಗಳು ಸಹಕಾರಿ ಆಗುತ್ತವೆ ಎಂದು ತಿಳಿಸಿದರು.
ಭಾರತೀಯ ವೈದ್ಯಕೀಯ ಸಂಘ (ಐಎಂಎ) ಶಿವಮೊಗ್ಗ ಘಟಕವು ಉತ್ತಮ ಕಾರ್ಯ ಚಟುವಟಿಕೆಗಳನ್ನು ಆಯೋಜಿಸಿಕೊಂಡು ಮುನ್ನಡೆಯುತ್ತಿರುವುದು ಶ್ಲಾಘನೀಯ. ಐಎಂಎ ಶಿವಮೊಗ್ಗ ಘಟಕ ಕ್ಯಾಲೆಂಡರ್ ಕೂಡ ಬಿಡುಗಡೆ ಮಾಡಿರುವುದು ಉತ್ತಮ ಕಾರ್ಯ ಎಂದರು.

ಭಾರತೀಯ ವೈದ್ಯಕೀಯ ಸಂಘ (ಐಎಂಎ) ಶಿವಮೊಗ್ಗ ಘಟಕದ ಅಧ್ಯಕ್ಷ ಡಾ. ಎಂ.ಎಸ್.ಅರುಣ್ ಮಾತನಾಡಿ, ಶಿವಮೊಗ್ಗ ಘಟಕವು ಪ್ರತಿ 15 ದಿನಗಳಿಗೊಮ್ಮೆ ಹಿರಿಯ ವೈದ್ಯರ ಮನೆಗೆ ಭೇಟಿ ಕೊಟ್ಟು ಆರೋಗ್ಯ ವಿಚಾರಿಸುವ ಜತೆಯಲ್ಲಿ ಸಮಾಲೋಚನೆ ನಡೆಸಲಾಗುವುದು. ಹಿರಿಯ ವೈದ್ಯರ ಮಾರ್ಗದರ್ಶನದಲ್ಲಿ ಸಮಾಜಮುಖಿ ಕಾರ್ಯಗಳನ್ನು ನಿರಂತರವಾಗಿ ಆಯೋಜಿಸಲಾಗುವುದು ಎಂದು ತಿಳಿಸಿದರು.

ಶಿವಮೊಗ್ಗ ಐಎಂಎ ಘಟಕದಿಂದ ಹೊರತಂದಿರುವ ಕ್ಯಾಲೆಂಡರ್ ಅನ್ನು ಹಿರಿಯ ಫಿಜಿಷಿಯನ್ ಡಾ.ರಂಗಪ್ಪ ಗೌಡ ಅವರಿಗೆ ನೀಡಲಾಯಿತು.
ಶಿವಮೊಗ್ಗ ಐಎಂಎ ಘಟಕದ ಕಾರ್ಯದರ್ಶಿ ಡಾ. ರಕ್ಷ ರಾವ್ , ಡಾ. ನಾಗರಾಜ್, ಡಾ. ಶ್ರೀಕಾಂತ್ ಹೆಗ್ಡೆ , ಡಾ. ಸುಬ್ಬಣ್ಣ ಮತ್ತಿತರರು ಹಾಜರಿದ್ದರು.

ಚೆಸ್ ಸಾಧನೆಗೆ ನಿರಂತರ ಪರಿಶ್ರಮ ಮತ್ತು ತಾಳ್ಮೆ ಅಗತ್ಯ- ಕಿಶನ್ ಗಂಗೊಳ್ಳಿ

0

ಶಿವಮೊಗ್ಗ, ಚೆಸ್ ಸ್ಪರ್ಧೆಯಲ್ಲಿ ಸಾಧನೆ ಮಾಡಲು ನಿರಂತರ
ಪರಿಶ್ರಮ ಹಾಗೂ ತಾಳ್ಮೆ ಅತ್ಯಂತ ಅವಶ್ಯಕ ಎಂದು
ಅಂತಾರಾಷ್ಟ್ರೀಯ ಚೆಸ್ ಆಟಗಾರ, ಗ್ರಾಂಡ್ ಮಾಸ್ಟರ್ ಕಿಶನ್
ಗಂಗೊಳ್ಳಿ ಹೇಳಿದರು.

ಶಿವಮೊಗ್ಗ ನಗರದ ರೋಟರಿ ಬ್ಲಡ್ ಬ್ಯಾಂಕ್ ಆವರಣದಲ್ಲಿ ರೋಟರಿ ಕ್ಲಬ್
ಶಿವಮೊಗ್ಗ ಮಿಡ್‌ಟೌನ್ ಹಾಗೂ ನಳಂದ ಚೆಸ್ ಅಕಾಡೆಮಿ
ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ ಓಪನ್
ಚೆಸ್ ಪಂದ್ಯಾವಳಿ ಹಾಗೂ 16 ವರ್ಷದೊಳಗಿನ ಟೂರ್ನ್ಮೆಂಟ್ ಉದ್ಘಾಟಿಸಿ
ಮಾತನಾಡಿದರು.

ಶಿಕ್ಷಣ ಕ್ಷೇತ್ರದಲ್ಲಿ ಅಧ್ಯಯನ ಪೂರ್ಣಗೊಳಿಸಿ ವೃತ್ತಿಗೆ
ಸೇರಲು ಹತ್ತಾರು ವರ್ಷಗಳೇ ಬೇಕಾಗುತ್ತದೆ. ಚೆಸ್‌ನಲ್ಲಿ
ಮಕ್ಕಳು ಒಂದೆರಡು ವರ್ಷಗಳಲ್ಲಿ ಸಾಧನೆ ಮಾಡದಿದ್ದರೆ
ಕಲಿಕೆ ಬಿಡಿಸುವ ಪ್ರವೃತ್ತಿ ಜಾಸ್ತಿ ಇದೆ. ಆ ರೀತಿ ಆಗಬಾರದು.
ಮಕ್ಕಳಿಗೆ ವರ್ಷಗಳ ಕಾಲ ನಿರಂತರ ಕಲಿಕೆಯಲ್ಲಿ
ತೊಡಗುವಂತೆ ಪ್ರೋತ್ಸಾಹಿಸಬೇಕು. ಕಠಿಣ ಪರಿಶ್ರಮದಿಂದ
ಚೆಸ್‌ನಲ್ಲಿ ಉತ್ತಮ ಸಾಧನೆ ಮಾಡುತ್ತಾರೆ ಎಂದು ತಿಳಿಸಿದರು.

ರೋಟರಿ ಕ್ಲಬ್ ಶಿವಮೊಗ್ಗ ಮಿಡ್‌ಟೌನ್ ಅಧ್ಯಕ್ಷೆ ವೀಣಾ ಸುರೇಶ್
ಮಾತನಾಡಿ, ಮಕ್ಕಳು ಚೆಸ್ ಕಲಿಕೆಯಲ್ಲಿ ನಿರಂತರವಾಗಿ
ತೊಡಗಿಸಿಕೊಳ್ಳುವುದರಿಂದ ಬೌದ್ಧಿಕ ಸಾಮಾರ್ಥ್ಯ ವೃದ್ಧಿ
ಆಗುತ್ತದೆ. ನೆನಪಿನ ಶಕ್ತಿ ಹೆಚ್ಚುತ್ತದೆ. ಮರೆವಿನ ಕಾಯಿಲೆ
ತಡೆಗಟ್ಟಲು ಸಾಧ್ಯವಿದೆ. ಕಲಿಕಾ ಸಾಮಾರ್ಥ್ಯ ಹೆಚ್ಚುವುದರಿಂದ
ಶೈಕ್ಷಣಿಕ ಕ್ಷೇತ್ರಕ್ಕೂ ಅನುಕೂಲವಾಗುತ್ತದೆ.
ಸ್ಪರ್ಧೆಯಲ್ಲಿ ಸೋಲು ಗೆಲುವು ಸಾಮಾನ್ಯ. ಗೆದ್ದವರು
ಮತ್ತಷ್ಟು ಕೌಶಲ್ಯ ಹೆಚ್ಚಿಸಿಕೊಳ್ಳಲು ಗಮನ ವಹಿಸಬೇಕು.
ಸೋತವರು ಮುಂದಿನ ಪಂದ್ಯಾವಳಿಗೆ ಈಗಿನಿಂದಲೇ ಸಿದ್ಧತೆ ನಡೆಸಿ
ಕೌಶಲ್ಯ ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮರೆವಿ
ಚೆಸ್ ಪಂದ್ಯಾವಳಿಯಲ್ಲಿ ವಿವಿಧ ವಿಭಾಗದ ಸ್ಪರ್ಧೆಗಳು
ನಡೆದವು. ಓಪನ್ ಟೂರ್ನ್ಮೆಂಟ್‌ನಲ್ಲಿ ಯಾವುದೇ ವಯಸ್ಸಿನ ಮಿತಿ
ಇರಲಿಲ್ಲ. ಯು 16,ಯು 13 ಯು
11, ಯು 9 ಹಾಗೂ ಯು 7 ವಯೋಮಿತಿಯೊಳಗಿನ
ಪಂದ್ಯಗಳು ನಡೆದವು. ಇನ್ನೂರಕ್ಕೂ ಅಧಿಕ ಸ್ಪರ್ಧಿಗಳು
ಭಾಗವಹಿಸಿದ್ದರು. ಒಟ್ಟು ಸಾವಿರ ರೂ. ಮೌಲ್ಯದ

ಬಹುಮಾನವನ್ನು ವಿಜೇತರಿಗೆ ಪ್ರಮಾಣ ಪತ್ರದೊಂದಿಗೆ
ವಿತರಿಸಲಾಯಿತು.
ನಳಂದ ಚೆಸ್ ಅಕಾಡೆಮಿಯ ಶ್ರೀಕೃಷ್ಣ ಉಡುಪ, ರೋಟರಿ ಕ್ಲಬ್
ಶಿವಮೊಗ್ಗ ಮಿಡ್‌ಟೌನ್ ಕಾರ್ಯದರ್ಶಿ ಮೀರಾ ನಾಡಿಗ್, ಮದನ್‌ಲಾಲ್,
ಸುರೇಶ್‌ಕುಮಾರ್.ಡಿ, ಉಮಾ ಅಮರ್, ಅಮರನಾಥ್, ಸುನೀತಾ ಚೇತನ್
ಮತ್ತಿತರರು ಉಪಸ್ಥಿತರಿದ್ದರು.

ದೇಶಪ್ರೇಮದಲ್ಲಿ ಭಾರತೀಯ ಸೈನಿಕ ಯಾರೊಂದಿಗೂ ರಾಜಿ ಮಾಡಿಕೊಳ್ಳಲಾರ-ಕರ್ನಲ್ ನರಹರಿ

0

ಭಾರತೀಯ ಸೈನ್ಯ ವೃತ್ತಿಯಲ್ಲಿ ನಿರಂತರವಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಯೋಧರು ಸಮಾಜದಲ್ಲಿನ ಭ್ರಷ್ಟಾಚಾರ ವಿರುದ್ಧ ಹೋರಾಡುವ ಮೂಲಕ ರಾಜ್ಯದಲ್ಲಿ ಶಿಸ್ತು ಹಾಗೂ ಸಮರ್ಥವಾಗಿ ಆಡಳಿತ ನಡೆಸಲು ಅರ್ಹರು ಎಂದು ಕರ್ನಲ್ ಪಿ.ವಿ.ಹರಿ ಹೇಳಿದರು.

ಚಿಕ್ಕಮಂಗಳೂರು, ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಮಾಜಿ ಸೈನಿಕರ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ 1971ರ ಯುದ್ದದ 52ನೇ ವಿಜಯೋತ್ಸವ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಅಂದಿನ ಬಹಳಷ್ಟು ಸೈನಿಕರು ಪರಾಕ್ರಮದಿಂದ ಹೋರಾಡಿ ದೇಶಕ್ಕಾಗಿ ದುಡಿದಿದ್ದಾರೆ. ಆರೋಗ್ಯದಲ್ಲಿ ಅನೇಕ ಏರುಪೇರುಗಳಾದರೂ ಸಹ ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ದೇಶದ ಭೂ ಭಾಗವನ್ನು ವಿರೋಧಿ ದೇಶದವರಿಗೆ ಮುಟ್ಟಲು ಅವಕಾಶ ಮಾಡಿಕೊಡದೇ ಸೇವೆ ಸಲ್ಲಿಸಿರುವುದು ಹೆಮ್ಮೆಯ ವಿಷಯ ಎಂದರು.
ಭಾರತೀಯ ಸೈನಿಕರು ದೇಶಪ್ರೇಮ ಹಾಗೂ ರಕ್ಷಣೆ ವಿಚಾರದಲ್ಲಿ ಯಾರೊಂದಿಗೂ ರಾಜೀಗೊಳ ಗಾಗದೇ ಉತ್ತಮ ಸೇವೆ ಸಲ್ಲಿಸಿದ್ದಾರೆ. ನೆರೆದೇಶದ ಯುದ್ಧದ ಸಮಯದಲ್ಲಿ ವಿರೋಧಿ ಬಣದ ಸೈನಿಕರು ಶರಣಾಗತಿಯಾದಲ್ಲಿ ಅವರಿಗೆ ಉತ್ತಮ ರೀತಿಯಲ್ಲಿ ವ್ಯವಹರಿಸಲಾಗುತ್ತಿತ್ತು. ಆದರೆ ಪಾಕಿಸ್ತಾನ ದೇಶವು ತದ್ವಿರುದ್ಧವಾಗಿ ನಡೆದುಕೊಂಡು ನಮ್ಮ ಸೈನಿಕರಿಗೆ ವಿಚಿತ್ರವಾಗಿ ಹಿಂಸಿಸುತ್ತಿದ್ದರು ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಸೈನ್ಯ ವೃತ್ತಿಯಲ್ಲಿ ಎಂದಿಗೂ ಮೇಲು-ಕೀಳು ಎಂಬ ಮಾತುಗಳನ್ನಾಡದೇ ನಾವೆಲ್ಲರೂ ಭಾರತ ಮಾತೆಯ ಮಕ್ಕಳಂತೆ ವರ್ತಿಸಲಾಗುತ್ತಿತ್ತು. ಅಂದಿನಿಂದ ಇಂದಿವರೆಗೂ ಸೈನ್ಯ ವೃತ್ತಿಯಲ್ಲಿ ಎಂದಿಗೂ ಜಾತಿಯನ್ನು ಅಳಿಯುವುದಿಲ್ಲ ಎಂದು ಹೇಳಿದರು.
ಉಪವಿಭಾಗಾಧಿಕಾರಿ ಹೆಚ್.ಡಿ.ರಾಜೇಶ್ ಮಾತನಾಡಿ ಇಂದಿನ ಯುವಪೀಳಿಗೆಗೆ ಸೈನ್ಯ ವೃತ್ತಿಯ ಬಗ್ಗೆ ಆಸಕ್ತಿಯನ್ನು ಬೆಳೆಸಲು ಮಾಜಿ ಸೈನಿಕರು ಮಾರ್ಗದರ್ಶನ ನೀಡಬೇಕು. ಶಿಸ್ತಿನ ಸಿಫಾಯಿಗಳಂತೆ ಆರ್ಮಿಯಲ್ಲಿ ಕಾರ್ಯನಿರ್ವಹಿಸಿದವರು ಭಾರತದ ಯಾವುದೇ ಪ್ರದೇಶಗಳಲ್ಲಿ ಬದುಕಲು ಸಾಧ್ಯವಾ ಗಲಿದೆ ಎಂಬುದನ್ನು ತೋರ್ಪಡಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಸಿ.ಎಸ್.ಮಂಜು ನಾಥ್ 1971ರಲ್ಲಿ ಪಾಕಿಸ್ತಾನದ ವಿರುದ್ಧ ಹೋರಾಡಿ ಸುಮಾರು 90ಸಾವಿರಕ್ಕೂ ಹೆಚ್ಚು ಪಾಕ್ ಸೈನಿಕರನ್ನು ಹಾಗೂ ಅರ್ಧದಷ್ಟು ಭೂಪ್ರದೇಶವನ್ನು ಭಾರತೀಯ ಸೈನ್ಯ ವಶಪಡಿಸಿಕೊಳ್ಳಲಾಗಿತ್ತು. ತದನಂತರ ವಿಶ್ವಸಂಸ್ಥೆ ಹಾಗೂ ಯುದ್ಧನಿಯಮಗಳನ್ನು ಪಾಲನೆಯ ಅನುಗುಣವಾಗಿ ಬಿಡುಗಡೆ ಮಾಡಿ ಅನುಕಂಪ ತೋರಲಾಗಿತ್ತು ಎಂದು ತಿಳಿಸಿದರು.

ಸೈನಿಕರು ಕಾರ್ಗಿಲ್ ವಿಜಯೋತ್ಸವದ ಮೊದಲೇ 1971ರ ಯುದ್ಧವನ್ನು ಅತ್ಯಂತ ಶಕ್ತಿಯುತವಾಗಿ ನಡೆಸಿ ಯಶಸ್ವಿಕಂಡಿತು.

ಆದರೆ ಅಂದಿನ ಸಮಯದಲ್ಲಿ ಮಾಧ್ಯಮಗಳಾಗಲೀ ಅಥವಾ ತಂತ್ರಜ್ಞಾನ ಗಳು ಬೆಳೆದಿಲ್ಲವಾದ್ದರಿಂದ 1971ರ ಯುದ್ದವು ಎಲೆಮರೆ ಕಾಯಿಯಂತೆ ದೇಶದಲ್ಲಿ ಕಣ್ಮರೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ತಾರಾನಾಥ್ ಮಾತನಾಡಿ ಮಾಜಿ ಸೈನಿಕರ ಸಂಘದ ಕಟ್ಟಡವು ತಾ.ಪಂ. ಆವರಣದಲ್ಲಿದ್ದು ಮುಂದಿನ ದಿನಗಳಲ್ಲಿ ವಿಶೇಷ ಅನುದಾನ ಬಿಡುಗಡೆ ಮಾಡುವ ಮೂಲಕ ಸದೃಢ ಕಟ್ಟಡ ವ್ಯವಸ್ಥೆ ಕಲ್ಪಿಸಿಕೊಡಲಾಗುತ್ತದೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ತಾ.ಪಂ. ಆಡಳಿತಾಧಿಕಾರಿ ಜಯಸಿಂಹ, ಸೈನಿಕ ಸಂಘದ ಉಪಾಧ್ಯಕ್ಷ ಹರೀಶ್, ಖಜಾಂಚಿ ಎಸ್.ಪಾಯಿಸ್, ಕಾರ್ಯದರ್ಶಿ ಸಿ.ಟಿ.ಗೋಪಾಲಕೃಷ್ಣ, ಮಾಜಿ ಸೈನಿಕರಾದ ಬಿ.ಎಂ.ಲಕ್ಷ್ಮಣ ಗೌಡ, ಬಸವರಾಜು, ಹೆಚ್. ಎಂ.ಮಂಜುನಾಥಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಹೆಚ್.ಡಿ.ಸುರೇಶ್ ನಿರೂ ಪಿಸಿದರು. ಕಾರ್ಯದರ್ಶಿ ಸಿ.ಟಿ.ಗೋಪಾಲಕೃಷ್ಣ ಸ್ವಾಗತಿ ಸಿದರು. ಪಿ.ಎನ್.ನಾಗರಾಜ್ ವಂದಿಸಿದರು.

ಹೊಸ ಶಿಕ್ಷಣ ನೀತಿ ಇರಿಸುಮುರಿಸಿನ ಬಗ್ಗೆ ಎನ್,ಎಸ್,ಯು,ಐ,ಪ್ರತಿಭಟನೆ

0

ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶಿಕ್ಷಣ ವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಆರೋಪಿಸಿ ಶಿವಮೊಗ್ಗ ಜಿಲ್ಲಾ ಎನ್.ಎಸ್.ಯು.ಐ. ವತಿಯಿಂದ ಇಂದು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಸೈನ್ಸ್ ಮೈದಾನದಿಂದ ಸಾವಿರಾರು ವಿದ್ಯಾರ್ಥಿಗಳು ಎನ್.ಎಸ್.ಯು.ಐ. ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ಮಹಾವೀರವೃತ್ತದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ, ಕಾಂಗ್ರೆಸ್ ಮುಖಂಡ ಹಾಗೂ ಪದವೀಧರರ ಸಹಕಾರ ಸಂಘದ ಅಧ್ಯಕ್ಷ ಎಸ್.ಪಿ. ದಿನೇಶ್, ಕೇಂದ್ರ ಸರ್ಕಾರ ಯಾವುದೇ ಪೂರ್ವ ತಯಾರಿ ಇಲ್ಲದೇ ಜಾರಿಗೊಳಿಸಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಿಂದಾಗಿ ವಿದ್ಯಾರ್ಥಿಗಳು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಶಿಕ್ಷಣ ವಿರೋಧಿ ನೀತಿಯಿಂದಾಗಿ ವಿದ್ಯಾರ್ಥಿಗಳಿಗೆ ಅನಗತ್ಯ ತೊಂದರೆ, ಹೊರೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಿಂದಾಗಿ ಮುಖ್ಯವಾಗಿ ವಿದ್ಯಾರ್ಥಿಗಳ ಪರೀಕ್ಷೆ ಫಲಿತಾಂಶ ವಿಳಂಬವಾಗುತ್ತಿದೆ. ವಾರ್ಷಿಕ ಪ್ರವೇಶ ಶುಲ್ಕದಲ್ಲಿ ವಿಪರೀತ ಹೆಚ್ಚಳವಾಗಿದೆ. ಪ್ರಾಥಮಿಕ ಮತ್ತು ಪ್ರೌಢಶಾಲೆ ವಸತಿ ಸಮಸ್ಯೆ, 8ನೇ ತರಗತಿಯ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆಯಾಗಿಲ್ಲ. ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಬಸ್ ಸೌಕರ್ಯದ ಸಮಸ್ಯೆ ಉಂಟಾಗಿದೆ. ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್ ಟ್ಯಾಪ್ ವಿತರಣೆ ಸ್ಥಗಿತಗೊಳಿಸಲಾಗಿದೆ. ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಸೌಲಭ್ಯ ವಿಸ್ತರಣೆ ಮಾಡುತ್ತಿಲ್ಲ. ಕುವೆಂಪು ಮುಕ್ತ ವಿಶ್ವವಿದ್ಯಾಲಯದ ಪರೀಕ್ಷಾ ನಕಲು, 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ವಿದ್ಯಾರ್ಥಿ ವೇತನ ರದ್ದುಪಡಿಸಿರುವುದು, ಪ್ರಸ್ತುತ ಸಾಲಿನ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳ ಕೊರತೆ ಮುಂತಾದ ಸಮಸ್ಯೆಗಳು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿಯಿಂದ ಉಂಟಾಗಿದ್ದು, ಇದರಿಂದ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಮಾರಕ ಪರಿಣಾಮ ಬೀರುತ್ತಿದೆ ಕೂಡಲೇ ಸರ್ಕಾರಗಳು ಈ ದ್ವಂದ್ವ ನೀತಿಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.

ಮನಸ್ಸಿನಿಂದ ಮನಸ್ಸಿಗೆ

1

ಪ್ರಾಕೃತಿಕ ನಿಯಮ ಮತ್ತು ನಮ್ಮ ಭ್ರಮೆ……

ನಮ್ಮ ನೆಲದ ಒಂದು ಇಂಚು ಭೂಮಿಯನ್ನು ಸಹ ನಾವು ಯಾವುದೇ ದೇಶಕ್ಕೆ ಬಿಟ್ಟು ಕೊಡುವುದಿಲ್ಲ………

ವಿವಿಧ ಕಾಲ ಸಂದರ್ಭ ಸನ್ನಿವೇಶಗಳಲ್ಲಿ ಆ ದೇಶದ ಮುಖ್ಯಸ್ಥರು ಈ ರೀತಿಯ ಹೇಳಿಕೆಗಳನ್ನು ದೇಶದ ಪರವಾಗಿ ನೀಡುತ್ತಾರೆ. ಜನರು ಸಹ ಇದನ್ನು ವಿಶ್ವಾಸದಿಂದ ಸ್ವೀಕರಿಸುತ್ತಾರೆ.

ಭಾರತ ಪಾಕಿಸ್ತಾನ ಬಾಂಗ್ಲಾದೇಶ ಉಕ್ರೇನ್ ತೈವಾನ್ ಕೊರಿಯಾ ಚೀನಾ ಇರಾನ್ ಇರಾಕ್ ಸಿರಿಯಾ ರಷ್ಯಾ ಅಮೆರಿಕ ಜರ್ಮನಿ ಫ್ರಾನ್ಸ್ ಮುಂತಾದ ಎಲ್ಲಾ ದೇಶಗಳಲ್ಲೂ ಇದೇ ಅಭಿಪ್ರಾಯ.

ಸಾಮಾನ್ಯವಾಗಿ ಶತ್ರು ದೇಶಗಳ ಬೆದರಿಕೆ, ಆಕ್ರಮಣ, ಯುದ್ದ ಘೋಷಣೆ, ಬ್ಲಾಕ್ ಮೇಲ್, ಒತ್ತಡ ಮುಂತಾದ ಪರಿಸ್ಥಿತಿಗಳಲ್ಲಿ ಈ ರೀತಿಯ ಹೇಳಿಕೆ ಸಾಮಾನ್ಯ.

ಆದರೆ ವಾಸ್ತವ ಏನು ? ಪ್ರಕೃತಿಯ ಸಹಜ ನಿಯಮ ಏನು ?………….

ಇತಿಹಾಸದ ಅನುಭವದ ಆಧಾರದಲ್ಲಿ ಹೇಳುವುದಾದರೆ ವಾಸ್ತವದ ಪ್ರಕೃತಿಯ ನಿಯಮವು ಬಲಿಷ್ಠರು ದುರ್ಬಲರನ್ನು ಸೋಲಿಸುತ್ತಾರೆ, ಆಕ್ರಮಿಸುತ್ತಾರೆ, ಸಾಯಿಸುತ್ತಾರೆ, ನಿಮ್ಮ ಆಕ್ರೋಶ, ನಿಮ್ಮ ಧೈರ್ಯ, ನಿಮ್ಮ ಧರ್ಮ, ನಿಮ್ಮ ದೇವರು, ನಿಮ್ಮ ನ್ಯಾಯ ನೀತಿ, ನಿಮ್ಮ ದೇಶ ಭಕ್ತಿ ಎಷ್ಟೇ ತೀವ್ರವಾಗಿ ಇದ್ದರೂ ಯಾರು ಬಲಿಷ್ಠರೋ ಅವರೇ ಗೆಲ್ಲುತ್ತಾರೆ.

ಅದು ಮನುಷ್ಯರೇ ಇರಲಿ, ಪ್ರಾಣಿ ಪಕ್ಷಿ ಕೀಟಗಳೇ ಇರಲಿ ಸಾಮಾನ್ಯವಾಗಿ ಬಹುತೇಕ ಇದೇ ನಿಯಮ ಚಾಲ್ತಿಯಲ್ಲಿದೆ. ತೀರಾ ಅಪರೂಪದಲ್ಲಿ ಅಪರೂಪದ ಪ್ರಕರಣಗಳಲ್ಲಿ ಮಾತ್ರ ಕೆಲವು ಸಂದರ್ಭಗಳಲ್ಲಿ ಪವಾಡದ ರೀತಿಯಲ್ಲಿ ದುರ್ಬಲರು ಬಲಿಷ್ಠರನ್ನು ತಮ್ಮ ಧೈರ್ಯದಿಂದ ಮತ್ತು ಯುಕ್ತಿಯಿಂದ ಪ್ರಬಲರ ಮೇಲೆ ವಿಜಯ ಸಾಧಿಸಿದ ಉದಾಹರಣೆಗಳು ಸಹ ಇವೆ.

ಯಾವುದೋ ದೊಡ್ಡ ಪ್ರಾಣಿಯನ್ನು ಸಣ್ಣ ಪ್ರಾಣಿ, ದೊಡ್ಡ ದೇಶವನ್ನು ಸಣ್ಣ ದೇಶ ಸೋಲಿಸಿವೆ. ಇದು ಕೇವಲ ಅಸಾಮಾನ್ಯ ಸನ್ನಿವೇಶದಲ್ಲಿ ಮಾತ್ರ ಸಂಭವಿಸಿರುವುದು.

ಇದರ ಅರಿವು ದೇಶದ ನಾಯಕರಿಗೆ ಇದ್ದರೂ ಸಹ ಜನರನ್ನು ರಂಜಿಸಲು, ಮೆಚ್ಚಿಸಲು, ಅಧಿಕಾರ ಉಳಿಸಿಕೊಳ್ಳಲು ಅಥವಾ ಕೆಲವೊಮ್ಮೆ ಮಾನಸಿಕ ಧೈರ್ಯ ತುಂಬಲು ಈ ರೀತಿಯ ಹೇಳಿಕೆ ನೀಡುತ್ತಾರೆ.

ಇರಾಕಿನ ಸದ್ದಾಂ ಹುಸೇನ್‌, ಉತ್ತರ ಕೊರಿಯಾದ ಕಿಮ್ ಜಾಂಗ್ ಉನ್ ರೀತಿಯ ಸರ್ವಾಧಿಕಾರಿಗಳು ಮಾತ್ರವಲ್ಲ ಪ್ರಜಾಪ್ರಭುತ್ವದ ದೇಶಗಳು ಸಹ ಈ ವಿಷಯದಲ್ಲಿ ಜನರಿಗೆ ಸತ್ಯವನ್ನು ಮನವರಿಕೆ ಮಾಡಿಕೊಡದೆ ಭ್ರಮೆ ಸೃಷ್ಟಿಸುತ್ತಾರೆ.

ಇದರಲ್ಲಿ ಮಾಧ್ಯಮಗಳ ಪಾತ್ರ ಕೂಡ ಇದೆ. ಸುದ್ದಿಗಳು ಪಕ್ಷಪಾತದಿಂದ ಕೂಡಿರುತ್ತವೆ. ತಮ್ಮ ತಮ್ಮ ದೇಶಗಳ ಪರವಾಗಿ ವಿಷಯವನ್ನು ತಿರುಚುತ್ತವೆ ಮತ್ತು ಶತ್ರು ದೇಶಗಳನ್ನು ಟೀಕಿಸುತ್ತಾರೆ. ಆಗಲು ವಿವೇಚನೆಯ ಸತ್ಯ ಹೊರ ಬರುವುದಿಲ್ಲ.

ಯಾವುದೇ ನ್ಯಾಯದ ಮೂಲ ಪ್ರಕೃತಿಯೇ ಹೊರತು ದೇಶ – ಸೈನಿಕ ಸಾಮರ್ಥ್ಯವಲ್ಲ. ಯಾರು ಬಲಿಷ್ಠರೋ ಅವರೇ ಗೆಲ್ಲುವ ಸಾಧ್ಯತೆ ಹೆಚ್ಚು.

ಹಾಗೆಂದು ದುರ್ಬಲರು ಬಲಿಷ್ಠರಿಗೆ ಶರಣಾಗಬೇಕೆಂದು ಅರ್ಥವಲ್ಲ.‌ ದುರ್ಬಲರು ಇತರ ಶಕ್ತಿಗಳನ್ನು ಒಂದು ಗೂಡಿಸಿ ಪ್ರಬಲರ ಮೇಲೆ ಪ್ರತಿರೋಧ ತೋರಿಸಿ ಜಯ ಸಾಧಿಸಬಹುದು. ಪ್ರಬಲರು ಒಂದು ವೇಳೆ ಅಹಂಕಾರಿಗಳಾಗಿ – ಸೋಮಾರಿಗಳಾಗಿ ತಮ್ಮ ಸಾಮರ್ಥ್ಯ ದುರುಪಯೋಗ ಪಡಿಸಿಕೊಳ್ಳುವ ಸಂದರ್ಭದಲ್ಲಿ ದುರ್ಬಲರು ತಮ್ಮೆಲ್ಲಾ ಶಕ್ತಿಯನ್ನು ಒಗ್ಗೂಡಿಸಿ ಸಹ ಪ್ರಬಲರನ್ನು ನಾಶ ಮಾಡಬಹುದು. ಕಡಿಮೆ ಶಕ್ತಿ ಇರುವವರು ತಾಳ್ಮೆಯಿಂದ ಸಮಯ ಸಂದರ್ಭ ಅವಕಾಶಕ್ಕಾಗಿ ಕಾದು ಕುಳಿತು ಪ್ರಬಲರ ದುರ್ಬಲ ಸಮಯದಲ್ಲಿ ಮೇಲೆ ಜಯ ಸಾಧಿಸಬಹುದು.

ಹೀಗೆ ಅನೇಕ ಸಾಧ್ಯತೆಗಳು ಇರುತ್ತವೆ. ‌ಆದರೆ ಸಹಜ ಸಾಮಾನ್ಯ ಪರಿಸ್ಥಿತಿಯಲ್ಲಿ, ತತ್ ಕ್ಷಣದಲ್ಲಿ ಶಕ್ತಿವಂತರು ಮಾತ್ರವೇ ಗೆಲ್ಲುವುದು.
ದೊಡ್ಡ ಜಿಂಕೆಗಳ ಹಿಂಡು ಇದ್ದರೂ ಹುಲಿಯೊಂದು ಜಿಂಕೆಯನ್ನು ಬೇಟೆಯಾಡಿ ತಿನ್ನುತ್ತದೆ. ಆದರೆ ಅಲ್ಲಿ ಮನುಷ್ಯ ಪ್ರತ್ಯಕ್ಷವಾಗಿ ತನ್ನ ಬಂದೂಕಿನಿಂದ ಹುಲಿಯನ್ನು ಕೊಂದು ಜಿಂಕೆಯನ್ನು ರಕ್ಷಿಸಬಹುದು.

ತೈವಾನ್ ದೇಶವನ್ನು ಚೀನಾ ಆಕ್ರಮಿಸುವುದು ಸುಲಭ. ಆದರೆ ಅಮೆರಿಕ ನೇತೃತ್ವದಲ್ಲಿ ವಿಶ್ವ ಒಕ್ಕೂಟ ನೇರವಾಗಿ ಚೀನಾ ವಿರುದ್ಧ ತೈವಾನ್ ರಕ್ಷಣೆಗೆ ಧಾವಿಸಿದರೆ ಚೀನಾ ಪರಿಸ್ಥಿತಿ ಹದಗೆಡುತ್ತದೆ. ಉಕ್ರೇನ್ ಇನ್ನೂ ಪ್ರತಿರೋಧ ತೋರುತ್ತಿರುವುದು ಸಹ ಇದೇ ಆಧಾರದಲ್ಲಿ ಆದರೆ ರೂಪ ಬೇರೆ. ಇದು ಎಲ್ಲಾ ದೇಶಗಳಿಗು ಅನ್ವಯಿಸುತ್ತದೆ. ಪಾಕಿಸ್ತಾನವನ್ನು ಭಾರತ ಆಕ್ರಮಿಸುವುದು ಸುಲಭ. ಆದರೆ ಅದಕ್ಕೆ ಇತರ ದೇಶಗಳ ಬೆಂಬಲ ದೊರೆತರೆ ಭಾರತಕ್ಕೆ ಕಷ್ಟ.

ಭಾರತ ಚೀನಾ ಗಡಿಯಲ್ಲಿ ಇತ್ತೀಚೆಗೆ ನಡೆದ ಸಣ್ಣ ಸೈನಿಕ ಘರ್ಷಣೆಯನ್ನು ಮಾಧ್ಯಮಗಳು ವಿವೇಚನೆ ಇಲ್ಲದೆ ಬಣ್ಣಿಸಿದಾಗ, ರಾಜಕೀಯ ಪಕ್ಷಗಳು ಪಕ್ಷಪಾತದ ಅಭಿಪ್ರಾಯ ವ್ಯಕ್ತಪಡಿಸುತ್ತಿರುವಾಗ ಪ್ರಾಕೃತಿಕ ಸಹಜ ನಿಯಮಗಳು ಯಾವ ರೀತಿಯಲ್ಲಿ ಇರಬಹುದು ಎಂದು ಸಮಚಿತ್ತದಿಂದ ಯೋಚಿಸಿದಾಗ ಈ ಅಭಿಪ್ರಾಯ ಮೂಡಿತು.

ಪ್ರಕೃತಿಗೆ ದೇಶ ಭಾಷೆ ಧರ್ಮ ಜಾತಿ ಬಣ್ಣ ಪ್ರದೇಶಗಳಿಲ್ಲ. ಅದು ಅನಂತ, ಸರ್ವವ್ಯಾಪಿ, ಸಹಜ ಸೃಷ್ಟಿ. ನಾವು ಮಾತ್ರ ಸಂಕುಚಿತ ಅಸಹಜ ಅಮಾನವೀಯ ಸ್ವಾರ್ಥ ಮತ್ತು ನಮ್ಮ ಬುದ್ದಿ ಸೀಮಿತದ ಅಲ್ಪ ಪ್ರಾಣಿಗಳು.

ನಮ್ಮ ದೇಶ ನಮ್ಮ ಭಾಷೆ ನಮ್ಮ ‌ಧರ್ಮ ನಮ್ಮ ಜಾತಿ ನಮ್ಮ ದೇವರು ಎಂದು ಕಚ್ಚಾಡುತ್ತಾ ಸೃಷ್ಟಿಗೇ ಅವಮಾನ ಮಾಡುತ್ತಾ ಬದುಕನ್ನು ಹೆಚ್ಚು ಸಂಕೀರ್ಣ ಗೊಳಿಸಿಕೊಂಡು ಒದ್ದಾಡುತ್ತಿದ್ದೇವೆ. ಅದರ ಪರಿಣಾಮವೇ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್. ಕೆ.
9844013068…