ಚೀನಾದಲ್ಲಿ ಕೋವಿಡ್ ಸೋಂಕಿನ ಸಂಖ್ಯೆಗಳು ಆತಂಕಕಾರಿಯಾಗಿ ಏರಿಕೆಯಾಗುತ್ತಿರುವುದು ವಿಶ್ವದಾದ್ಯಂತ ಆತಂಕ ಸೃಷ್ಟಿಸಿದೆಯಲ್ಲದೆ ಮತ್ತೆ ಕೋವಿಡ್ ಪ್ರಕರಣಗಳು ಏರಿಕೆಯಾಗಲಿವೆಯೇ ಎಂಬ ಭೀತಿಗೆ ಕಾರಣವಾಗಿದೆ.
ಚೀನಾದ ಹಲವು ನಗರಗಳು ಜ್ವರ ತಪಾಸಣಾ ಕ್ಲಿನಿಕ್‌ಗಳು ಹಾಗೂ ಆಸ್ಪತ್ರೆಗಳನ್ನು ತೆರೆಯುವ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗಿವೆ. ಚೀನಾದ ಝೀರೋ ಕೋವಿಡ್ ನಿಯಮಾವಳಿಯನ್ವಯ ಇದ್ದ ಸಾಮೂಹಿಕ ಲಾಕ್‌ಡೌನ್ ಕ್ರಮಗಳನ್ನು ವ್ಯಾಪಕ ಪ್ರತಿಭಟನೆಗಳ ನಂತರ ಕೈಬಿಟ್ಟ ನಂತರ ಈಗ ಮತ್ತೆ ಕೋವಿಡ್ ಪ್ರಕರಣಗಳು ಏರಿಕೆಯಾಗಲಾರಂಭಿಸಿವೆ.
ಇದೀಗ ಚೀನಾದಾದ್ಯಂತ ಮತ್ತೆ ವೈರಸ್ ಹಾವಳಿ ಅತಿಯಾಗುತ್ತಿದ್ದಂತೆ ಮುಂದಿನ ದಿನಗಳಲ್ಲಿ ಕೋವಿಡ್‌ನಿಂದ ಇನ್ನಷ್ಟು ಸಾವುಗಳು, ವೈರಸ್ ಮ್ಯುಟೇಶನ್‌ಗಳು ನಡೆಯಬಹುದೆಂಬ ಆತಂಕ ಎದುರಾಗಿದೆ ಎಂದು ವರದಿಯಾಗಿದೆ.
ಡಿಸೆಂಬರ್ 7 ರಿಂದ ಚೀನಾದಲ್ಲಿ ಕಡ್ಡಾಯ ಕೋವಿಡ್ ಪರೀಕ್ಷೆ ಮೊದಲಾದ ಕ್ರಮಗಳನ್ನು ಕೈಬಿಡಲಾಗಿದೆ. ಆದರೆ ಈ ಕ್ರಮದ ನಂತರ ಅಲ್ಲಿನ ಆಸ್ಪತ್ರೆಗಳು ರೋಗಿಗಳಿಂದ ತುಂಬಿದ್ದು, ಫಾರ್ಮಸಿಗಳಲ್ಲಿ ಔಷಧಿಗಳು ಖಾಲಿಯಾಗುತ್ತಿವೆ ಹಾಗೂ ಜನರು ಹೆಚ್ಚಾಗಿ ಮನೆಗಳಲ್ಲಿಯೇ ಉಳಿಯಲು ಬಯಸಿದ್ದಾರೆ.
2019 ರಲ್ಲಿ ಚೀನಾದ ವುಹಾನ್ ನಗರದಲ್ಲಿ ಮೊದಲ ಬಾರಿ ಕೋವಿಡ್ ಸೋಂಕು ಪತ್ತೆಯಾದ ನಂತರ ಅಲ್ಲಿ ಇತರ ದೇಶಗಳಿಗೆ ಹೋಲಿಸಿದರೆ ಕಡಿಮೆ ಸಾವುಗಳು- 5242 ವರದಿಯಾಗಿದ್ದವು.
ಆದರೆ ಈ ಅಂಕಿಸಂಖ್ಯೆಗಳ ಸತ್ಯಾಸತ್ಯತೆಯ ಬಗ್ಗೆ ಸಾಕಷ್ಟು ಸಂಶಯಗಳಿವೆ.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇರುವ ಸೌಲಭ್ಯಗಳ ಬಗ್ಗೆ ಭಾರತ ಸರ್ಕಾರದ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ ಸ್ಮಾಟ್ ಸಿಟಿ ಮುಖಾಂತರ ಜೀವನ ಗುಣಮಟ್ಟ ಸೌಕರ್ಯ ಕುರಿತು ಸಮೀಕ್ಷೆ ನಡೆಯುತ್ತಿದ್ದು, ಶಿವಮೊಗ್ಗ ನಗರದ ಲಿಂಗತ್ವ ಅಲ್ಪಸಂಖ್ಯಾತರು “ಶಿವಮೊಗ್ಗ ನಗರ ಹೇಗಿದೆ, ಅಭಿಪ್ರಾಯ ತಿಳಿಸಿ ಅಭಿಯಾನದಲ್ಲಿ ಪಾಲ್ಗೊಂಡರು.
ಲಿಂಗತ್ವ ಅಲ್ಪಸಂಖ್ಯಾತರನ್ನು ಸಹ ಸಮೀಕ್ಷೆ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಪ್ರೇರೆಪಿಸುತ್ತಿರುವುದು. ನಮ್ಮ ಅಭಿಪ್ರಾಯಗಳನ್ನು ಸಹ ದಾಖಲೆ ಮಾಡುತ್ತಿರುವುದು ಉತ್ತಮ ನಿರ್ಧಾರವಾಗಿದೆ. ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸುವ ನಿಟ್ಟಿನಲ್ಲಿ ಸರ್ಕಾರಗಳು ಎಲ್ಲ ರೀತಿಯಲ್ಲೂ ಪಾಲ್ಗೊಳ್ಳುವಿಕೆಗೆ ಆದ್ಯತೆ ನೀಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸ್ಮಾರ್ಟ್ ಸಿಟಿ ಸಾರ್ವಜನಿಕ ಸಂಪರ್ಕ ಅಧಿಕಾರಿ ಶ್ರೀಮತಿ ವರ್ಗಿಸ್ ಮಾತನಾಡಿ, ಲಿಂಗತ್ವ ಅಲ್ಪಸಂಖ್ಯಾತರು ದಾಖಲಿಸುವ ಮಾಹಿತಿ ಕೂಡ ಸಮೀಕ್ಷೆಯಲ್ಲಿ ಮಹತ್ವ ಪಡೆಯುತ್ತದೆ. ಸರ್ಕಾರ ರೂಪಿಸುವ ಯೋಜನೆಗಳಲ್ಲಿ ಗಣನೆಗೆ ಬರುತ್ತದೆ. ಲಿಂಗತ್ವ ಅಲ್ಪಸಂಖ್ಯಾತ ಸಮುದಾಯ ಎಲ್ಲರೂ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಶಿವಮೊಗ್ಗ ನಗರದ ಸಮುದಾಯ ಸಂಘದ ಲಿಂಗತ್ವ ಅಲ್ಪಸಂಖ್ಯಾತರು ಶಿವಮೊಗ್ಗ ನಗರದ ಬಗ್ಗೆ ಅವರ ಅಭಿಪ್ರಾಯವನ್ನು ಆನ್ ಲೈನ್ ಲಿಂಕ್ ಮುಖಾಂತರ ಹಂಚಿಕೊಂಡರು.
ಈ ಸಂದರ್ಭದಲ್ಲಿ ಅಧ್ಯಕ್ಷ ಮೊಹಮ್ಮದ್ ಶಫಿವುಲ್ಲಾ ಹಾಗೂ ಸಂಘದ ಸದಸ್ಯರು ಭಾಗವಹಿಸಿದ್ದರು. ಸ್ಮಾರ್ಟ್ ಸಿಟಿಯ ಕಂಪನಿ ಸೆಕ್ರೆಟರಿ ಶರತ್ ಬಾಬು, ಸಮೀಕ್ಷೆ ಸಂಯೋಜಕ ಸಮನ್ವಯ ಕಾಶಿ ಹಾಗೂ ಸಮನ್ವಯ ಸ್ವಯಂಸೇವಕ ನಿತ್ಯ ಹಾಗೂ ಮಲ್ಲಿಕಾರ್ಜುನ್ ಭಾಗವಹಿಸಿದ್ದರು.
ರಾಜ್ಯ ಕಾಂಗ್ರೇಸ್ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಮೈಯಲ್ಲಿ ಹರಿಯುತ್ತಿರುವುದು ಜುಲ್ಫಿಕರ್ ಭುಟ್ರೊ ಮಹಮ್ಮದ್ ಅಲಿ ಜಿನ್ನಾರ ರಕ್ತವೆಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪರವರು ಹೇಳಿರುವುದು ಭಾರತದ ತಾಯಂದಿರಿಗೆ ಮಾಡಿದ ಅಗೌರವವಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ವೈ. ಬಿ. ಚಂದ್ರಕಾಂತ್ ಖಂಡಿಸಿದ್ದಾರೆ.
ಹಿರಿಯ ರಾಜಕಾರಣಿಯಾಗಿರುವ ಕೆ.ಎಸ್. ಈಶ್ವರಪ್ಪ ಅವರು ಕಾಂಗ್ರೇಸ್ ಪಕ್ಷದ ಬಗ್ಗೆ ಡಿ.ಕೆ.ಶಿವಕುಮಾರ್‌ರವರ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಬಗ್ಗೆ ಕಾಂಗ್ರೇಸ್ ಪಕ್ಷದ ಇತರೆ ನಾಯಕರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದನ್ನೇ ರೂಢಿ ಮಾಡಿಕೊಂಡಿದ್ದಾರೆ.
ಪಾಕಿಸ್ಥಾನದ ಸಚಿವ ಬಿಲಾವಲ್ ಭುಟ್ಟೋ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಕಟ್ಟದಾಗಿ ಮಾತನಾಡಿದರೆ ಅದಕ್ಕೆ ಭಾರತ ಸರ್ಕಾರ, ಪ್ರಧಾನಿ ನರೇಂದ್ರ ಮೋದಿಯವರು ಸರಿಯಾಗಿ ಎದುರೇಟು ನೀಡಬೇಕೆ ಹೊರತು ಕಾಂಗ್ರೆಸ್ ನಾಯಕರ ಮೈಯಲ್ಲಿ ಹರಿಯುತ್ತಿರುವ ರಕ್ತದ ಬಗ್ಗೆ ಕೆ.ಎಸ್ ಈಶ್ವರಪ್ಪರವರು ಮಾತನಾಡಿರುವುದನ್ನು ಜಿಲ್ಲಾ ವಕ್ತಾರರಾದ ವೈ.ಬಿ.ಚಂದ್ರಕಾಂತ್ ಟೀಕಿಸಿದ್ದಾರೆ.
ಯಾರ ಮೈಯಲ್ಲಿ ಯಾರ ರಕ್ತ ಹರಿಯುತ್ತದೆ ಎನ್ನುವುದು ತಂದೆಗೂ ತಿಳಿಯುವುದಿಲ್ಲ. ಅದೇನಿದ್ದರೂ ತಾಯಿಗೆ ಮಾತ್ರ ತಿಳಿಯುತ್ತದೆ. ಅದಕ್ಕೆ ತಾಯಿಯೇ ಸತ್ಯವೆಂದು ಹೇಳುವುದು. ಇದನ್ನು ಕೆ.ಎಸ್ ಈಶ್ವರಪ್ಪರವರು ತಿಳಿಯಬೇಕಿತ್ತು.
ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಅವರಷ್ಟೇ ಅಲ್ಲ ಕೆ.ಎಸ್ ಈಶ್ವರಪ್ಪರವರ ಮೈಯಲ್ಲಿ ಹರಿಯುತ್ತಿರುವುದು ಯಾರ ರಕ್ತ ಎನ್ನುವುದು ಕೇವಲ ಅವರವರ ತಾಯಂದಿರಿಗೆ ಮಾತ್ರ ಗೊತ್ತಿರುವುದರಿಂದ ಈ ಬಗ್ಗೆ ಮಾತನಾಡುವುದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಜಿಲ್ಲಾ ಕಾಂಗ್ರೇಸ್ ವಕ್ತಾರರಾದ ವೈ.ಬಿ.ಚಂದ್ರಕಾಂತ್ ಖಂಡಿಸಿದ್ದಾರೆ.
ಬಿ.ಜೆ.ಪಿ ಸರ್ಕಾರ ರಾಜ್ಯದಲ್ಲಿನ ತನ್ನ ದುರಾಡಳಿತವನ್ನು ಮುಚ್ಚಕೊಳ್ಳಲು ಕುಕ್ಕರ್ ಬ್ಲಾಸ್ಟ್ ಪ್ರಕರಣವನ್ನು ದುರ್ಬಳಕೆ ಮಾಡಿಕೊಂಡಿತು ಎನ್ನುವುದನ್ನು ಡಿ.ಕೆ ಶಿವಕುಮಾರ್‌ವರ ಹೇಳಿಕೆಯ ಅರ್ಥವಾಗಿತ್ತೇ ವಿನಃ ಉಗ್ರನ ಕೃತ್ಯದ ಬಗ್ಗೆ ಸಮರ್ಥನೆ ಮಾಡಿರುವುದು ಆಗಿರುವುದಲ್ಲ. ಇಂತಹ ಕೃತ್ಯವನ್ನು ಕಾಂಗ್ರೇಸ್ ಎಂದಿಗೂ ಸಹಿಸುವುದಿಲ್ಲ ಎನ್ನುವುದನ್ನು ಕಾಂಗ್ರೇಸ್ ಸರ್ಕಾರ ಹಲವು ಯುದ್ದಗಳ ಸಂದರ್ಭದಲ್ಲಿ ಸಾಬೀತು ಮಾಡಿದೆ, ಕಾಂಗ್ರೇಸ್ ಪಕ್ಷಕ್ಕೆ ಅದರ ನಾಯಕರಿಗೆ ಬುದ್ದಿ ಹೇಳುವ ಕೆ.ಎಸ್ ಈಶ್ವರಪ್ಪನವರು ಕಂದಹಾರ ವಿಮಾನ ಅಪಹರಣ ಸಂದರ್ಭದಲ್ಲಿ ತಮ್ಮ ಪಕ್ಷದ ಸರ್ಕಾರ ತೆಗೆದುಕೊಂಡ ತೀರ್ಮಾನ ಎಷ್ಟು ಸರಿ ಎನ್ನುವುದು ಮೊದಲು ತಿಳಿದುಕೊಳ್ಳಬೇಕು, ಇದು ಉಗ್ರರಿಗೆ ಬೆಂಬಲಿಸಿದ ಕೃತ್ಯವಲ್ಲವೇ ಎಂದು ವಕ್ತಾರರಾದ ವೈ.ಬಿ ಚಂದ್ರಕಾಂತ್ ಅವರು ಪ್ರಶ್ನಿಸಿದ್ದಾರೆ.
ಬಹು ದಿನಗಳ ನಂತರವೂ ಮನದಲ್ಲಿ ಅಚ್ಚಳಿಯದೇ ಉಳಿದ ವಿಚಾರವನ್ನು ಬರಹ ರೂಪಕ್ಕಿಳಿಸಿದ್ದೇನೆ.
ಭಾರತದ ಚರಿತ್ರೆಯ ಪುಟಗಳಲ್ಲಿ ನಾವರಿಯದೇ ಕಣ್ಮರೆಯಾದ ಅದೆಷ್ಟೋ ಮಹನೀಯರು ಆಗಿಹೋಗಿದ್ದಾರೆ. ಅವರ ಹೆಸರೇ ದಾಖಲಾಗಲಿಲ್ಲವಾದರೆ ಅವರ ಸಾಧನೆಯೂ ನಮಗೆ ಅರಿವಾಗುವುದಿಲ್ಲ. ಸೋಲಿನ ಇತಿಹಾಸವನ್ನೇ ನಮ್ಮದೆಂದು ತಿಳಿದು ನಾವಿರುವುದು ಆಳಿಸಿಕೊಳ್ಳುವುದಕ್ಕಾಗಿಯೇ ಹೊರತು ಆಳುವುದಕ್ಕಾಗಿ ಅಲ್ಲ ಎಂಬ ಮನಸ್ಥಿತಿಯನ್ನು ತಂದುಕೊಂಡಿರುವಾಗಲೇ ಇತಿಹಾಸದ ಕಾಲಗರ್ಭದಲಿ ಅಡಗಿದ ಭಾರತೀಯ ಅದರಲ್ಲೂ ನಮ್ಮ ಕರ್ನಾಟಕದ ಭಾಗಗಳನ್ನು ತನ್ನ ಎಪ್ಪತ್ತೈದನೆಯ ವಯಸ್ಸಿನವರೆಗೂ ಆಳಿದ, ಪೋರ್ಚುಗೀಸರಿಂದ ‘ರೈನಾ ದಿ ಪೆಮೆಂಟಾ’ ಪ್ರಶಸ್ತಿಗೆ ಭಾಜನಳಾದ, ವ್ಯಾಪಾರದ ಕ್ಷೇತ್ರದಲ್ಲಿ ಭಾರತವನ್ನು ಉತ್ತುಂಗಕ್ಕೇರಿಸಿದ, ಸ್ತ್ರೀ ಕುಲದ ಭೂಷಣ ಪ್ರಾಯರಲ್ಲಿ ಒಬ್ಬರಾದ, ‘ಸಸ್ತ್ರಿಯಾ ಗೃಹಂ ರಕ್ಷ್ಯತೇ’ ಅಂದರೆ ಒಳ್ಳೆಯ ಹೆಣ್ಣುಮಕ್ಕಳಿಂದ ಗೃಹ ರಕ್ಷಿಸಲ್ಪಡುತ್ತದೆ ಎಂಬ ಸುಭಾಷಿತದ ಮಾತಿಗೆ ಅನ್ವರ್ಥವಾದಂತೆ ಗೃಹ ಅಷ್ಟೇ ಅಲ್ಲ ನಾಡನ್ನೇ ರಕ್ಷಿಸುವ ತಾಕತ್ತು ಸ್ತ್ರೀಗಿದೆ ಎಂದು ಜಗತ್ತಿಗೆ ಸಾರಿದ ಕರಿಮೆಣಸಿನ ರಾಣಿ ಎಂಬ ಬಿರುದಾಂಕಿತ ಅವ್ವರಸಿ ಅಥವಾ ರಾಣಿಚೆನ್ನಭೈರಾದೇವಿಯನ್ನು ಆಕೆಯ ಆಡಳಿತದ ವೈಖರಿ, ಸಾಧನೆಯ ಮಜಲುಗಳನ್ನು ಎಳೆ ಎಳೆಯಾಗಿ ಕಾದಂಬರಿಯ ರೂಪದಲ್ಲಿ ನಮಗೆ ರಸಾಸ್ವಾದದ ಜೊತೆಗೆ ಇತಿಹಾಸ ಮರೆತ ಭಾಗವನ್ನು ನಮಗೆ ಪರಿಚಯಿಸಿಕೊಟ್ಟ ಕೀರ್ತಿ, ಹೆಗ್ಗಳಿಕೆ ‘ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮಾ’ ಎಂಬ ರಾಮ ಭಕ್ತಿಯ ರಸಾಮೃತದಲ್ಲಿ ಮಿಂದೇಳುವಂತೆ ಮಾಡಿ ಜಗತ್ತಿಗೇ ಪ್ರಸಿದ್ಧರಾದ ಶ್ರೀ ಡಾ. ಗಜಾನನ ಶರ್ಮಾ ಅವರದು. ಇದು ಕೇವಲ ಕಾದಂಬರಿಯಾಗಿರದೇ ಚರಿತ್ರೆಯ ಅಜ್ಞಾತ ವ್ಯಕ್ತಿಗಳ ಪರಿಚಯವೂ ಹೌದು. ನಮ್ಮ ಮಕ್ಕಳು ತಮ್ಮ ಪಠ್ಯದಲ್ಲಿ ಓದುವಂತೆ ಮಾಡಿ ಹೆಮ್ಮೆಯ ಇತಿಹಾಸ ನಮ್ಮದೆಂಬ ಭಾವ ಮೂಡುವಂತೆ ಮಾಡಿದ್ದು ಪಠ್ಯಪುಸ್ತಕ ಪರಿಷ್ಕರಣ ಸಮಿತಿಯಲ್ಲಿನ ಅಧ್ಯಕ್ಷರಾದ ಶ್ರೀರೋಹಿತ್ ಚಕ್ರತೀರ್ಥ ಅವರು.
ಚೆನ್ನಭೈರಾದೇವಿ ಒಂದೇ ಅಲ್ಲ ಕ್ರಾಂತಿವೀರ ಭಗತ್ ಸಿಂಗ್‌ನ ಅನನ್ಯ ದೇಶಭಕ್ತಿಯ ಗಾಥೆಯನ್ನು ಎಳವೆಯಿಂದಲೇ ಪರಿಚಯಿಸಿ ತನ್ನ ೨೩ನೆಯ ವಯಸ್ಸಿನ ವೀರಮರಣದವರೆಗೂ ಅವರ ಜೀವನದ ಪ್ರಮುಖ ಘಟ್ಟಗಳನ್ನು ಪರಿಚಯಿಸುವ ಮತ್ತು ಸೋಲಿನ ಇತಿಹಾಸ ಓದಿ ಬಸವಳಿದ ನಮಗೆ ಈ ಕಥೆಗಳ ಕೇಳಿದರೆ ರೋಮಾಂಚನವಾಗಿ ನರನಾಡಿಗಳಲ್ಲಿ ಭಾರತ ಎಂದರೆ ಪೂಜ್ಯಭಾವ ಮೂಡಿ ತಾಯಿಭಾರತಿಯ ಪಾದಪದ್ಮಗಳ ಪೂಜಿಸೋಣ ಬನ್ನಿ ಎಂದೆನ್ನುವಂತೆ ಮಾಡಿದ ಮಹನೀಯರು ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವ, ಜೀವನ, ತಾರುಣ್ಯವನ್ನೇ ಅರ್ಪಿಸಿ ಈ ರೀತಿಯ ಹೆಮ್ಮೆಯ ಪುತ್ರರನ್ನು ಪಡೆದ ತಾಯಿ ಭಾರತಿಯೇ ಧನ್ಯಳೆಂಬ ಭಾವ ಮೂಡಿಸುವ ಶ್ರೀ ಚಕ್ರವರ್ತಿ ಸೂಲಿಬೆಲೆಯವರ ‘ಅಮರಪುತ್ರರು’ ಎಂಬ ಪಠ್ಯ ಈ ಬಾರಿಯ ಪ್ರೌಢಶಾಲಾ ಪಠ್ಯದಲ್ಲಿದೆ.
ಆಂಗ್ಲರು ತಮ್ಮ ಆಳ್ವಿಕೆ ಇಲ್ಲಿ ನೆಲೆಗೊಳ್ಳುವಂತೆ ಮಾಡಲು ಬೀಸಿದ ಪ್ರಬಲ ಅಸ್ತ್ರವೇ ಇಲ್ಲಿನ ಶಿಕ್ಷಣ ಪದ್ಧತಿಯನ್ನು ಹಾಳುಮಾಡುವುದು, ಅದರಿಂದ ಮೂಡಿದ ಆತ್ಮವಿಶ್ವಾಸವನ್ನು ನುಚ್ಚುನೂರು ಮಾಡುವುದು, ದಾಸ್ಯದಿಂದ ನಾವು ಹೊರಬಂದು ವೀರರು, ಧೀರರು ಆಳಿದ ನಾಡಿದು ಸ್ವಾತಂತ್ರ್ಯಕ್ಕಾಗಿ ಬಲಿದಾನ ಗೈದ ಅಮರ ಪುತ್ರರ ಪಡೆದ ತಾಯಿ ಭಾರತಿಯೇ ಧನ್ಯ. ಇಂತಹ ಭಾರತದಲ್ಲಿರುವ ನಾವುಗಳೇ ಪಾವನರೆಂಬ ಭಾವಮೂಡಿಸುವಲ್ಲಿ ಪರಿಷ್ಕರಣ ಸಮಿತಿಯ ಅಧ್ಯಕ್ಷರು ಯಶಸ್ವಿಯಾಗಿದ್ದಾರೆ.
ಇದೆಲ್ಲ ಹೇಳಲು ಕಾರಣವೆಂದರೆ ಇತ್ತೀಚೆಗಷ್ಟೆ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ನಮ್ ಹಳ್ಳಿ ಥಿಯೇಟರ್ ದಶಮಾನದ ಹೊಸ್ತಿಲಲಿ ಆಯೋಜಿಸಿದ ಪಠ್ಯರಂಗೋತ್ಸವದ ‘ರಾಣಿ ಚೆನ್ನಭೈರಾದೇವಿ ಹಾಗೂ ಅಮರಪುತ್ರರು’ ಎಂಬ ನಾಟಕಗಳನ್ನು ಸಾಂದೀಪನಿ ಶಾಲೆಯ ಮಕ್ಕಳು ಅದ್ಭುತವಾಗಿ ಅಭಿನಯಿಸಿದ್ದನ್ನು ನೋಡುವ ಭಾಗ್ಯ ಒದಗಿ ಬಂದದ್ದಕ್ಕಾಗಿ.
ರಂಗದ ಮೇಲೆ ಚೆನ್ನಭೈರಾದೇವಿಯ ಪುಟ್ಟ ಇತಿಹಾಸ ಕೇಳಿದ ಮೇಲೆ ಆರಂಭವಾಗುವ ನಾಟಕ, ಆ ಮಕ್ಕಳು ಅಭಿನಯಿಸಿದ ರೀತಿ ಮನೋಜ್ಞವಾಗಿತ್ತು. ಕಾದಂಬರಿಯನ್ನು ಪಠ್ಯಕ್ಕಿಳಿಸಿದ್ದು ಸಾಹಸ ಇನ್ನು ಅದನ್ನು ನಾಟಕ ರೂಪಕ್ಕೆ ತರುವುದು ಮತ್ತೂ ಸಾಹಸವೇ ಸರಿ. ಈ ಪಠ್ಯವನ್ನು ದೃಶ್ಯಕ್ಕೆ ತಂದು ದೃಶ್ಯಕಾವ್ಯವಾಗಿಸಿ ಮನಸಿನಲ್ಲಿ ಅಚ್ಚಳಿಯದಂತೆ ಉಳಿಸುವಲ್ಲಿ ಯಶಸ್ವಿ ಪ್ರದರ್ಶನವಾಯಿತು.
ಚೆನ್ನಭೈರಾದೇವಿ ನಾಟಕದಲ್ಲಿನ ಪಟ್ಟಾಭಿಷೇಕದ ದೃಶ್ಯ, ಸಲ್ಲೇಖನ ವ್ರತದಿಂದ ಆಕೆಯ ದೇಹತ್ಯಾಗದ ದೃಶ್ಯಗಳು ನಿರ್ದೇಶಕರ ಕ್ರಿಯಾತ್ಮಕತೆಗೆ ಹಿಡಿದ ಕನ್ನಡಿಯಂತಿದ್ದವು. ಮಕ್ಕಳ ಅಭಿನಯವಂತೂ ನೋಡುಗರ ಮನಸೂರೆಗೊಂಡು ಮಂತ್ರಮುಗ್ಧರನ್ನಾಗಿಸಿದವು. ನಾಟಕಕ್ಕೆ ಬಳಸಿದ ರಂಗಪರಿಕರಗಳು, ಪ್ರಸಾದನ, ಬೆಳಕಿನ ನಿರ್ವಹಣೆ ಮತ್ತು ನಾಟಕದ ಜೊತೆ ಜೊತೆಗೆ ನಮ್ಮನ್ನು ಕೊಂಡೊಯ್ಯುವ ಸಂಗೀತವಂತು ಬಣ್ಣಿಸಲಸದಳ ಆನಂದ ನೀಡುವಂತೆ ಮಾಡಿದ್ದು ಶ್ರೀಪಾದ ತೀರ್ಥಹಳ್ಳಿ ಬಳಗದ ಕೈಚಳಕ. ಈ ಎಲ್ಲವೂ ನಾಟಕದ ಮೆರುಗನ್ನು ಹೆಚ್ಚಿಸುವಂತಿತ್ತು. ಇವೆಲ್ಲಕ್ಕಿಂತ ಮುಖ್ಯವಾಗಿ ಮಕ್ಕಳ ಬಾಯಲ್ಲಿ ಭಾರತಮಾತೆಯ ಹೆಮ್ಮೆಯ ಪುತ್ರರ ಕಥನ ಮೂಡಿಬಂದು ಆ ಮಕ್ಕಳಲ್ಲಿ ಆ ಪಾತ್ರ ಚಿರಸ್ಥಾಯಿಯಾಗುವಂತೆ ಈ ನಾಟಕಗಳು ಮಾಡಿದವು ಎಂದರೆ ತಪ್ಪಾಗಲಾರದು. ಪ್ರತಿಯೊಂದು ಪಾತ್ರಗಳನ್ನು ತಾವು ಅನುಭವಿಸಿ ನಟಿಸುವ ಮೂಲಕ ದೇಶಭಕ್ತರ ಪಾತ್ರ ಜೀವಂತವಾಗಿಸಿದವು. ಈ ಮಕ್ಕಳಿಗೆ ತರಬೇತಿ ನೀಡಿದ ನಿರ್ದೇಶಕರಾದ ಚೇತನ್ ರಾಯನಹಳ್ಳಿಯವರ ಶ್ರಮ ಇಲ್ಲಿ ಕಂಡುಬರುತ್ತದೆ ಹಾಗೂ ಈ ಪಠ್ಯವನ್ನು ಇತಿಹಾಸದ ಚಿತ್ರಣವನ್ನು ಕಣ್ಣಮುಂದೆ ತರಿಸುವಂತೆ ರಂಗರೂಪಕ್ಕೆ ಇಳಿಸಿದ ಮಂಜುನಾಥಸ್ವಾಮಿಯವರ ಕಾರ್ಯ ಅಭಿನಂದನಾರ್ಹವಾದುದಾಗಿದೆ.
ಸಮಾನ ಮನಸ್ಕ ತರುಣರೆಲ್ಲಾ ಒಗ್ಗೂಡಿ ಒಂದು ಕಾರ್ಯ ಮಾಡಿದರೆ ಅದರ ಫಲ ಏನು ಎಂಬುದು ನಮ್ ಹಳ್ಳಿ ಥಿಯೇಟರ್ ನ ಈ ರೀತಿಯ ಯಶಸ್ವಿ ಕಾರ್ಯಕ್ರಮಗಳೇ ಸಾಕ್ಷಿ. ಕಿಕ್ಕಿರಿದು ತುಂಬಿದ ಪ್ರೇಕ್ಷಕರ ಎದುರಿಗೆ ಅಲ್ಲದೇ, ಕೃತಿಯ ಕರ್ತೃವಿನ ಎದುರಿಗೇ ಅಭಿನಯಿಸುವ ಸವಾಲು ಸ್ವೀಕರಿಸಿ ಮಕ್ಕಳು ಜಯಿಸಿದರೆನ್ನಬಹುದು. ಮತ್ತು ಅದು ಲೇಖಕರ ಸಂತೋಷಕ್ಕೂ ಕಾರಣವಾಗಿತ್ತು. ತಾನು ಕೃತಿ ರಚಿಸಿದ್ದಕ್ಕೆ ಧನ್ಯತಾಭಾವ ಗಜಾನನ ಶರ್ಮಾ ಅವರ ಮನದಲ್ಲಿ ಮೂಡಿದಂತಿತ್ತು. ಇನ್ನೊಂದು ಉಲ್ಲೇಖಾರ್ಹ ಅಂಶವೆಂದರೆ ಈ ರೀತಿಯ ಪ್ರಯೋಗಗಳಿಗೆ ಸಮಯ ಹಾಗೂ ಅವಕಾಶ ನೀಡಿದ ಸಾಂದೀಪನಿ ಶಾಲೆಯ ಆಡಳಿತ ಮಂಡಳಿಯವರು ಅವರನ್ನು ಸ್ಮರಿಸಿ ಅಭಿನಂದಿಸದಿದ್ದರೆ ತಪ್ಪಾದೀತು.
ಒಟ್ಟಿನಲ್ಲಿ ಈ ನಾಟಕಗಳ ಯಶಸ್ವಿ ಪ್ರದರ್ಶನದಿಂದ ರೋಹಿತ್ ಚಕ್ರತೀರ್ಥ ಗೆದ್ದಿದ್ದಾರೆ. ವಿವಾದಗಳ ಸುಡು ಸುಡುವ ಬೆಂಕಿಯ ನಡುವೆ ರೋಹಿತ್, ಚೆನ್ನಭೈರಾದೇವಿ, ಅಮರಪುತ್ರರು ಅಂತಹ ಅನೇಕ ನೈಜ ರಾಷ್ಟ್ರೀಯ ಚಿಂತನೆಯ ಪಠ್ಯಗಳನ್ನು ಸೇರಿಸಿ ಮಕ್ಕಳ ಶಿಕ್ಷಣದ ಧಾಟಿಯನ್ನು ಸರಿಯಾದ ಹಾದಿಗೆ ತಂದಿದ್ದಾರೆ. ರೋಹಿತ್ ಬಿತ್ತಿದ ರಾಷ್ಟ್ರೀಯತೆಯ ಬೀಜ ಮೊದಲು ಶಿವಮೊಗ್ಗದಲ್ಲಿ ಮೊಳೆತು ಚಿಗುರಿದೆ ಎನ್ನುವ ವಿನಯ್ ಶಿವಮೊಗ್ಗ ಇವರ ಮಾತು ನೂರಕ್ಕೆ ನೂರರಷ್ಟು ನಿಜವಾಗಿದೆ.
ಈ ನಾಟಕ ಎಲ್ಲರೂ ನೋಡುವಂತಾದರೆ ಚೆನ್ನಾಗಿತ್ತು ಹಾಗಾಗಿಯೇ ನಾಟಕ ನೋಡದವರಿಗೆ ಸಾರಥಿ ಯೂಟ್ಯೂಬ್ ಚಾನಲ್ ನಲ್ಲಿ ನೋಡುವ ಅವಕಾಶವನ್ನು ಮಾಡಿಕೊಟ್ಟಿದೆ.
ಬರಹ: ಡಾ.ಮೈತ್ರೇಯಿ ಹೆಚ್. ಎಲ್ ಸಂಸ್ಕೃತ ಉಪನ್ಯಾಸಕರು ಪೇಸ್ ಕಾಲೇಜು ಶಿವಮೊಗ್ಗ
ಶ್ರೀ ರೋಜಾ ಷಣ್ಮುಗಂ ಗುರೂಜಿಯವರ ಹುಟ್ಟು ಹಬ್ಬದ ಪ್ರಯುಕ್ತ ಶಿವಮೊಗ್ಗದಲ್ಲಿ ನಡೆದ ಅಯ್ಯಪ್ಪೋತ್ಸವದಲ್ಲಿ ಸಾವಿರಾರು ಭಕ್ತರು ಅಯ್ಯಪ್ಪ ವ್ರತ ಧಾರಿಗಳು, ಹಿರಿಯರು ಮಾತೆಯರು ಸಡಗರ ಸಂಭ್ರಮದಿಂದ ಪಾಲ್ಗೊಂಡಿದ್ದರು.
ಕುವೆಂಪು ರಂಗಮಂದಿರದಲ್ಲಿ ಶ್ರೀ ರೋಜಾ ಗುರೂಜಿ ಶಿಷ್ಯ ವೃಂದವು ಆಯೋಜಿಸಿದ್ದ ಈ ಕಾರ್ಯಕ್ರಮದ ನಿಮಿತ್ತ ನಗರದ ಕಾಮಾಕ್ಷಿ ಬೀದಿಯ ಗಣಪತಿ ದೇವಸ್ಥಾನದಿಂದ ಕಳಶ ಹೊತ್ತ ಮಹಿಳೆಯರ ಜೊತೆ ವಿಶೇಷ ಅಯ್ಯಪ್ಪ ವಿಗ್ರಹವನ್ನು ರಾಜ ಬೀದಿ ಉತ್ಸವದಿಂದ ಮಣಿಕಂಠನ ವೇಷದಲ್ಲಿದ್ದ ಅಯ್ಯಪ್ಪನ ಜೊತೆ ಕುವೆಂಪು ರಂಗಮಂದಿರಕ್ಕೆ ಕರೆತರಲಾಯಿತು.
ಶ್ರೀ ರೋಜಾ ಗುರೂಜಿಯ ಆಪ್ತರಾದ ಯುವರಾಜ್ ಅಯ್ಯಪ್ಪನ ಕುರಿತು ಗುರೂಜಿಯ ಹಾಡನ್ನು ಹಾಡಿದರು. ವಿಶೇಷವಾಗಿ 70ಕ್ಕು ಹೆಚ್ಚು ಪುಟಾಣಿಗಳು ಒಗ್ಗೂಡಿ ಶ್ಲೋಕ ಪಠಣೆಯಿಂದ ಕಾರ್ಯಕ್ರಮ ಆರಂಭವಾಯಿತು.
ಶಬರಿಮಲೆಯ ಮಾಲಿಕಾಪುರಂ ಮೇಲ್ ಶಾಂತಿ ಬ್ರಹ್ಮಶ್ರೀ. K ಶಂಭು ನಂಬೂದರಿ ಯವರು ಅಯ್ಯಪ್ಪನ ಪೂಜೆ ಮಾಡಿ ಎಲ್ಲಾ ಭಕ್ತ ವೃಂದದವರಿಗೆ ಆಶೀರ್ವಚನ ನೀಡಿದರು. ಮಾಲಿಕಾಪುರಂ ಮೇಲ್ ಶಾಂತಿ ಅವರು ಶ್ರೀ ಶಬರೀಶ್ ರೋಜಾ ಷಣ್ಮುಗಂ ಗುರುಸ್ವಾಮಿ ಅವರಿಗೆ ಸನ್ಮಾನಿಸಿದರು.
ಶಬರಿಮಲೆಯಿಂದ ತಂದ ವಿಶೇಷ ಪ್ರಸಾದವನ್ನು ಎಲ್ಲರಿಗೂ ವಿತರಿಸಲಾಯಿತು. ಭೋಜನ ವ್ಯವಸ್ಥೆಯನ್ನು ಸಹ ಮಾಡಲಾಗಿತ್ತು.
ವಿಶೇಷವಾಗಿ ಮಾತೆಯರಿಗೆ ಅಯ್ಯಪ್ಪನ ದರ್ಶನ ಮಾಡುವ ಸೌಭಾಗ್ಯವನ್ನು ಶ್ರೀ ಶಬರೀಶ್ ಷಣ್ಮುಗಂ ಗುರುಸ್ವಾಮಿಯವರು ಶಿವಮೊಗ್ಗ ಭಕ್ತರಿಗೆ ಒದಗಿಸಿದರು.
ಈ ಕಾರ್ಯಕ್ರಮದಲ್ಲಿ ನಗರದ ಪ್ರಥಮ ಪ್ರಜೆ ಪಾಲಿಕೆಯ ಮೇಯರ್ ಶಿವಕುಮಾರ್, ಮಾಜಿ ಸೂಡಾ ಅಧಕ್ಷರಾದ ರಮೇಶ್, ಸಾರ್ವಜನಿಕ ಶ್ರೀ ಅಯ್ಯಪ್ಪ ದೇವಸ್ಥಾನದ ಸಮಿತಿಯ ಮುರಳಿ, ಕೇಶವ್, ಸತ್ಯನಾರಾಯಣ್, ಮಂಜುನಾಥ್, ಶಂಕರ್, ಪ್ರತ್ಯಂಗಿರಾ ದೇವಿ ಉಪಾಸಕರಾದ ಶ್ರೀ ಸುಪ್ರೀತ್ ಗುರೂಜಿ, ಪಲ್ಲವಿ ಹಾಗೂ ಕರ್ನಾಟಕ ರಾಜ್ಯದ ವಿವಿಧ ಗುರುಸ್ವಾಮಿಗಳು ಹಾಗೂ ಅಪಾರ ಶಿಷ್ಯ ವೃಂದ ಉಪಸ್ಥಿತರಿದ್ದರು.
ಅಪರಾಧಗಳನ್ನು ತಡೆಗಟ್ಟಬೇಕಾದರೆ ಮೊದಲು ನಾವು ಜಾಗೃತರಾಗಬೇಕು. ಯುವಜನರಲ್ಲಿ ಜಾಗೃತಿ ಮೂಡಿಸುವ ಜವಾಬ್ದಾರಿ ಸಮಾಜದ ಮೇಲಿದೆ ಎಂದು ಕುದುರೆಮುಖ ವೃತ್ತ ನಿರೀಕ್ಷಕ ಸಿ.ಎನ್.ರಮೇಶ್ ಅವರು ಹೇಳಿದರು.
ಕಳಸದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ರಾಷ್ಟೀಯ ಸೇವಾ ಯೋಜನೆ ಮತ್ತು ಕಾನೂನು ಅರಿವು ಜಾಗೃತಿ ಘಟಕ ಏರ್ಪಡಿಸಿದ್ದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಹಿಳೆಯರು ಹೊರಗಡೆ ತೆರಳುವ ಸಂದರ್ಭದಲ್ಲಿ ಚಿನ್ನಾಭರಣ ಬಗ್ಗೆ ಮುಂಜಾಗ್ರತೆ ವಹಿಸುವುದು ಸೂಕ್ತವಾಗಿದೆ. ಜೊತೆಗೆ ರಸ್ತೆ ಸುರಕ್ಷಾ ನಿಯಮಗಳನ್ನು ಪಾಲಿಸಿಕೊಳ್ಳಬೇಕು. ಯುವಕರು ಹೆಲ್ಮೆಟ್ ಧರಿಸುವ ಮೂಲಕ ತಮ್ಮ ಅಮೂಲ್ಯ ಜೀವವನ್ನು ರಕ್ಷಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು. ಸಂಪನ್ಮೂಲ ವ್ಯಕ್ತಿ ಕಳಸ ಠಾಣೆಯ ಸಹಾಯಕ ಸಬ್‌ಇನ್ಸ್ಪೆಕ್ಟರ್ ಡಾ.ಸಿ.ಆರ್.ಮೋಹನ್ ಕುಮಾರ್ ಮಾತನಾಡಿ ವಿದ್ಯಾರ್ಥಿಗಳು ಸದಾ ಹೆತ್ತವರ ಸಲಹೆಗಳನ್ನು ಪಾಲಿಸುವುದರೊಂದಿಗೆ ದೇಶದ ಕಾನೂನನ್ನು ಗೌರವಿಸಬೇಕು. ಮಾದಕ ದ್ರವ್ಯಗಳ ಕುರಿತು ಎಚ್ಚರಿಕೆ ವಹಿಸಬೇಕು. ಪರವಾನಗಿ ಮತ್ತಿತರ ಸೂಕ್ತ ದಾಖಲೆಗಳಿಲ್ಲದೆ ವಾಹನಗಳನ್ನು ಚಲಾಯಿಸಬಾರದು. ಬ್ಯಾಂಕ್ ಸಂಬಂಧಪಟ್ಟ ಯಾವುದೇ ಒಟಿಪಿ ಅಥವಾ ಪಾಸ್‌ವರ್ಡ್ಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜು ಪ್ರಾಂಶುಪಾಲ ವಿನಯ್ ಕುಮಾರ್ ಶೆಟ್ಟಿ ವಿದ್ಯಾರ್ಜನೆಯೊಂದಿಗೆ ಸಾಮಾನ್ಯ ಜ್ಞಾನವನ್ನು ಬೆಳೆಸಿಕೊಳ್ಳಬೇಕು. ಪೊಲೀಸ್ ಇಲಾಖೆ ಹಮ್ಮಿ ಕೊಂಡಿರುವ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕೈ ಜೋಡಿಸಿ ಸಮಾಜ ದಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದರು. ಈ ಸಂದರ್ಭದಲ್ಲಿ ರಾಷ್ಟಿçÃಯ ಸೇವಾ ಯೋಜನಾ ಮುಖ್ಯಸ್ಥ ವಿಶು ಕುಮಾರ್, ಕಾಲೇಜ್ ನಾ ಎಲ್ಲಾ ಬೋಧಕರು ಹಾಜರಿದ್ದರು.
ಕ್ಷೇಮ ಟ್ರಸ್ಟ್ (ರಿ) ವತಿಯಿಂದ ಶಿವಮೊಗ್ಗದ ಆಧಾರ ಆರೈಕೆ ಕೇಂದ್ರದಲ್ಲಿ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಮಾನಸಿಕ ರೋಗಿಗಳಿಗೆ ಪುನರ್ವಸತಿ ಕೇಂದ್ರವಾಗಿ `ಆಧಾರ’ ಕಳೆದ 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿದೆ.
ಇದರಲ್ಲಿ ಮಹತ್ತರ ಪಾತ್ರ ವಹಿಸಿದ ಶ್ರೀ ಎನ್. ಗೋಪಾಲಕೃಷ್ಣ ಭಟ್ ಮತ್ತು ಶ್ರೀ ಎನ್. ರಾಘವೇಂದ್ರ ಭಟ್ ರವರಿಗೆ ಸನ್ಮಾನಿಸಲಾಯಿತು.
‘ಆಧಾರ’ದಲ್ಲಿರುವ ಸುಮಾರು 30 ಪುರುಷರು/ಮಹಿಳೆಯರು, ಸಂಗೀತ, ನೃತ್ಯ, ಭಾಷಣ, ಏಕಪಾತ್ರಾಭಿನಯದಂತಹ ಚಟುವಟಿಕೆಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಅವರಿಗೆಲ್ಲಾ ಕ್ಷೇಮ ಟ್ರಸ್ಟ್ ವತಿಯಿಂದ `ವ್ಯಾಸಲೀನ್’ ಕ್ರೀಮ್‌ನ್ನು ವಿತರಿಸಲಾಯಿತು.
ಕ್ಷೇಮ ಟ್ರಸ್ಟ್ ನ ಡಾ. ಕೆ.ಆರ್. ಶ್ರೀಧರ್, ಶ್ರೀಮತಿ ವಿಜಯಾ ಶ್ರೀಧರ್, ಡಾ. ಕೆ.ಎಸ್. ಪವಿತ್ರಾ ಮತ್ತು ಡಾ. ಕೆ.ಎಸ್. ಶುಭ್ರತಾ ಉಪಸ್ಥಿತರಿದ್ದರು.
ಶಿವಮೊಗ್ಗ ಜಿಲ್ಲಾ ಜನತಾದಳ ಕಾರ್ಯಾಧ್ಯಕ್ಷರಾಗಿ ಶ್ರೀಯುತ ದಾದಪೀರ್ ರವರನ್ನು ನೇಮಕ ಮಾಡಿ ಜಿಲ್ಲಾಧ್ಯಕ್ಷರಾದ ಎಂ. ಶ್ರೀಕಾಂತ್ ರವರು ಆದೇಶಿಸಿದ್ದಾರೆ.
ಎಂ ಶ್ರೀಕಾಂತ್ ರವರು ಮಾತನಾಡಿ ಜವಾಬ್ದಾರಿಯಿಂದ ಪಕ್ಷದ ತತ್ವ-ಸಿದ್ದಾಂತಗಳಿಗೆ ಬದ್ದರಾಗಿ ಜಿಲ್ಲೆಯಲ್ಲಿ ಪಕ್ಷದ ಸಂಘಟನೆಗಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕೆಂದು ತಿಳಿಸಿದರು.
ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷರಾದ ಮಹಮ್ಮದ್ ಯೂಸುಫ್ ಮಾತನಾಡಿ, ಪಕ್ಷದ ಜಿಲ್ಲಾ ಕಾರ್ಯಾಧ್ಯಕ್ಷರಾಗಿ ಅಲ್ಪಸಂಖ್ಯಾತರ ಮುಖಂಡರಾದ ದಾದಪೀರ್ ರವರನ್ನು ನೇಮಕ ಮಾಡಿರುವುದು ನಾವು ಸ್ವಾಗತಿಸುತ್ತೇವೆ ಹಾಗೇ ನಮಗೆ ಪಕ್ಷ ಸಂಘಟಿಸಲು ಇನ್ನಷ್ಟು ಶಕ್ತಿ ತುಂಬಿದಂತಾಗಿದೆ.
ಈ ಸಂದರ್ಭದಲ್ಲಿ ಪಕ್ಷದ ಮಹಾ ಪ್ರಧಾನ ಕಾರ್ಯದರ್ಶಿ ತ್ಯಾಗರಾಜ್, ನಗರಾಧ್ಯಕ್ಷರಾದ ಗೋವಿಂದಪ್ಪ, ನಗರ ಕಾರ್ಯಾಧ್ಯಕ್ಷರಾದ ಸಿದ್ದಪ್ಪ, ಮುಖಂಡರಾದ ನಿಖಿಲ್, ಅಲ್ತಾಫ್, ವಾಜಿದ್, ಸೈಯದ್ ಸಮಿ ಇನ್ನಿತರರು ಇದ್ದರು.
ಫೋಟೋಗ್ರಾಫಿ ವೃತ್ತಿಯಲ್ಲಿ ಕಾಲ ಕಾಲಕ್ಕೆ ಬದಲಾಗುವ ಹೊಸ ತಂತ್ರಜ್ಞಾನದ ಅಳವಡಿಕೆ ಅತ್ಯಂತ ಅವಶ್ಯಕ ಎಂದು ವಿಧಾನ ಪರಿಷತ್ ಶಾಸಕ ಡಿ.ಎಸ್.ಅರುಣ್ ಅವರು ಹೇಳಿದರು.
ಶಿವಮೊಗ್ಗ ನಗರದ ಎನ್‌ಆರ್‌ಬಿ ಸ್ಟುಡಿಯೋದಲ್ಲಿ ವೆಬ್‌ಸೈಟ್ ಲೋಕಾರ್ಪಣೆಗೊಳಿಸಿ ಮಾತನಾಡಿ, 25 ವರ್ಷಗಳಿಂದ ಎನ್‌ಆರ್‌ಬಿ ಸ್ಟುಡಿಯೋ ಶಿವಮೊಗ್ಗ ನಗರದಜನತೆಗೆಸೇವೆ ನೀಡುತ್ತಿದ್ದು, ಹೊಸ ವಿನ್ಯಾಸದಆಧುನಿಕತಂತ್ರಜ್ಞಾನದಕ್ಯಾನನ್ ಫೈನ್‌ಆರ್ಟ್ ಪ್ರಿಂಟಿಂಗ್ ಅಳವಡಿಸಲಾಗಿದೆ. ಅತ್ಯಾಧುನಿಕ ಸೇವೆಗಳನ್ನು ಶಿವಮೊಗ್ಗ ಜನರಿಗೆಒದಗಿಸುವಂತಾಗಲಿ ಎಂದು ಆಶಿಸಿದರು.
ಪತ್ರಕರ್ತಚಂದ್ರಕಾಂತ್ ಅವರು ಮಾತನಾಡಿ, ಹಿಂದಿನ ಕಾಲದಲ್ಲಿ ಫೋಟೋ ತೆಗೆಸಿಕೊಂಡು ಮರ‍್ನಾಲ್ಕು ದಿನದ ನಂತರ ಫೋಟೋಗಳು ಸಿಗುತ್ತಿದ್ದವು.ಆದರೆ ಇಂದಿನ ಕಾಲದಲ್ಲಿಆಧುನಿಕತಂತ್ರಜ್ಞಾನದ ನೆರವಿನಿಂದ ಕೆಲವೇ ನಿಮಿಷಗಳಲ್ಲಿ ಫೋಟೊ ಲಭ್ಯವಾಗುತ್ತವೆ.
ಬೆಂಗಳೂರಿನಲ್ಲಿ ಮಾತ್ರ ಸಿಗುತ್ತಿದ್ದ ಸೇವೆಗಳನ್ನು ಶಿವಮೊಗ್ಗದಲ್ಲಿಯೂ ಎನ್‌ಆರ್‌ಬಿ ಸ್ಟುಡಿಯೋ ಆರಂಭಿಸಿರುವುದು ಅಭಿನಂದನೀಯ ಎಂದರು.
ರೋಟರಿಯ ಮಾಜಿ ಸಹಾಯಕಗವರ್ನರ್ ಜಿ.ವಿಜಯ್‌ಕುಮಾರ್, ಹೊಸ ತಂತ್ರಜ್ಞಾನದ ಅಳವಡಿಕೆ ಜತೆಯಲ್ಲಿ ಹೆಚ್ಚಿನ ಸೇವೆಗಳನ್ನು ಎನ್‌ಆರ್‌ಬಿ ಸ್ಟುಡಿಯೋಒದಗಿಸುತ್ತದೆ. ತಂತ್ರಜ್ಞಾನದಿಂದ ಪರಿಣಾಮಕಾರಿ ಹಾಗೂ ಉತ್ತಮಗುಣಮಟ್ಟದ ಫೋಟೋತೆಗೆಯಲು ಸಾಧ್ಯವಿದೆಎಂದು ಹೇಳಿದರು.
ಭಾರತದಎಲ್ಲೆಡೆಯು ಮನೆ ಮನೆಯಿಂದಎನ್‌ಆರ್‌ಬಿ ಆನ್‌ಲೈನ್ ಸ್ಟುಡಿಯೋ ಹೊಸ ತಾಂತ್ರಿಕತೆ ಲಭ್ಯಇರುವುದುಖುಷಿಯ ಸಂಗತಿಯಾಗಿದೆ. ಹೊಸ ಟೆಕ್ನಾಲಜಿಯ ಫೊಟೋಸ್, ಫ್ರೇಮ್, ಎಲ್‌ಇಡಿ ಲೈಟ್ ಫ್ರೇಮ್, ಅಲೂಮಿನಿಯಂ ಫ್ರೇಮ್, ಮಗ್ ಪ್ರಿಂಟಿAಗ್ ಸೇವೆಗಳು ಲಭ್ಯವಿದೆಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಓಂ ಗಣೇಶ್ ಶೇಟ್, ಮಾಲೀಕ ಸತೀಶ್‌ಚಂದ್ರ, ನೇತ್ರಾವತಿ, ಅಮೋಘ, ಅಪೂರ್ವ, ಚೇತನ್, ಸುರೇಶ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.
ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಡಿಹೆಚ್‌ಆರ್/ಐಸಿಎಂಆರ್ ವತಿಯಿಂದ ವೈರಲ್ ರಿಸರ್ಚ್ ಡಯಾಗ್ನಸ್ಟಿಕ್ ಲ್ಯಾಬೋರೆಟರಿ ಮಂಜೂರಾಗಿದ್ದು, ಇಲ್ಲಿ ಗುತ್ತಿಗೆ ಆಧಾರದಲ್ಲಿ ಸಂಚಿತ ವೇತನದಡಿ ಕೆಲಸ ಮಾಡಲು ಸೈಂಟಿಸ್ಟ್-ಬಿ (ಮೆಡಿಕಲ್) ಹುದ್ದೆಗೆ ನೇಮಕಾಗಿ ಮಾಡಿಕೊಳ್ಳುವ ಸಲುವಾಗಿ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು ಅರ್ಜಿ ನಮೂನೆಯನ್ನು ಸಂಸ್ಥೆಯ ವೆಬ್‌ಸೈಟ್ sims-shimoga.com ರಲ್ಲಿ ಪಡೆದು, ಭರ್ತಿಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ನಿರ್ದೇಶಕರು ಮತ್ತು ಡೀನ್ ಶಿವಮೊಗ್ಗ, ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹೆಸರಿಗೆ ರೂ. 1000/-ಗಳ ಡಿ.ಡಿ.ಯೊಂದಿಗೆ ಡಿ.31ರೊಳಗಾಗಿ ಸಿಮ್ಸ್ನಲ್ಲಿ ಸಲ್ಲಿಸುವಂತೆ ಸಂಸ್ಥೆಯ ನಿರ್ದೇಶಕರು ತಿಳಿಸಿದ್ದಾರೆ.