ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇರುವ ಸೌಲಭ್ಯಗಳ ಬಗ್ಗೆ ಭಾರತ ಸರ್ಕಾರದ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ ಸ್ಮಾಟ್ ಸಿಟಿ ಮುಖಾಂತರ ಜೀವನ ಗುಣಮಟ್ಟ ಸೌಕರ್ಯ ಕುರಿತು ಸಮೀಕ್ಷೆ ನಡೆಯುತ್ತಿದ್ದು, ಶಿವಮೊಗ್ಗ ನಗರದ ಲಿಂಗತ್ವ ಅಲ್ಪಸಂಖ್ಯಾತರು “ಶಿವಮೊಗ್ಗ ನಗರ ಹೇಗಿದೆ, ಅಭಿಪ್ರಾಯ ತಿಳಿಸಿ ಅಭಿಯಾನದಲ್ಲಿ ಪಾಲ್ಗೊಂಡರು.
ಲಿಂಗತ್ವ ಅಲ್ಪಸಂಖ್ಯಾತರನ್ನು ಸಹ ಸಮೀಕ್ಷೆ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಪ್ರೇರೆಪಿಸುತ್ತಿರುವುದು. ನಮ್ಮ ಅಭಿಪ್ರಾಯಗಳನ್ನು ಸಹ ದಾಖಲೆ ಮಾಡುತ್ತಿರುವುದು ಉತ್ತಮ ನಿರ್ಧಾರವಾಗಿದೆ. ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸುವ ನಿಟ್ಟಿನಲ್ಲಿ ಸರ್ಕಾರಗಳು ಎಲ್ಲ ರೀತಿಯಲ್ಲೂ ಪಾಲ್ಗೊಳ್ಳುವಿಕೆಗೆ ಆದ್ಯತೆ ನೀಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸ್ಮಾರ್ಟ್ ಸಿಟಿ ಸಾರ್ವಜನಿಕ ಸಂಪರ್ಕ ಅಧಿಕಾರಿ ಶ್ರೀಮತಿ ವರ್ಗಿಸ್ ಮಾತನಾಡಿ, ಲಿಂಗತ್ವ ಅಲ್ಪಸಂಖ್ಯಾತರು ದಾಖಲಿಸುವ ಮಾಹಿತಿ ಕೂಡ ಸಮೀಕ್ಷೆಯಲ್ಲಿ ಮಹತ್ವ ಪಡೆಯುತ್ತದೆ. ಸರ್ಕಾರ ರೂಪಿಸುವ ಯೋಜನೆಗಳಲ್ಲಿ ಗಣನೆಗೆ ಬರುತ್ತದೆ. ಲಿಂಗತ್ವ ಅಲ್ಪಸಂಖ್ಯಾತ ಸಮುದಾಯ ಎಲ್ಲರೂ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಶಿವಮೊಗ್ಗ ನಗರದ ಸಮುದಾಯ ಸಂಘದ ಲಿಂಗತ್ವ ಅಲ್ಪಸಂಖ್ಯಾತರು ಶಿವಮೊಗ್ಗ ನಗರದ ಬಗ್ಗೆ ಅವರ ಅಭಿಪ್ರಾಯವನ್ನು ಆನ್ ಲೈನ್ ಲಿಂಕ್ ಮುಖಾಂತರ ಹಂಚಿಕೊಂಡರು.
ಈ ಸಂದರ್ಭದಲ್ಲಿ ಅಧ್ಯಕ್ಷ ಮೊಹಮ್ಮದ್ ಶಫಿವುಲ್ಲಾ ಹಾಗೂ ಸಂಘದ ಸದಸ್ಯರು ಭಾಗವಹಿಸಿದ್ದರು. ಸ್ಮಾರ್ಟ್ ಸಿಟಿಯ ಕಂಪನಿ ಸೆಕ್ರೆಟರಿ ಶರತ್ ಬಾಬು, ಸಮೀಕ್ಷೆ ಸಂಯೋಜಕ ಸಮನ್ವಯ ಕಾಶಿ ಹಾಗೂ ಸಮನ್ವಯ ಸ್ವಯಂಸೇವಕ ನಿತ್ಯ ಹಾಗೂ ಮಲ್ಲಿಕಾರ್ಜುನ್ ಭಾಗವಹಿಸಿದ್ದರು.