ರಾಜ್ಯ ಕಾಂಗ್ರೇಸ್ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಮೈಯಲ್ಲಿ ಹರಿಯುತ್ತಿರುವುದು ಜುಲ್ಫಿಕರ್ ಭುಟ್ರೊ ಮಹಮ್ಮದ್ ಅಲಿ ಜಿನ್ನಾರ ರಕ್ತವೆಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪರವರು ಹೇಳಿರುವುದು ಭಾರತದ ತಾಯಂದಿರಿಗೆ ಮಾಡಿದ ಅಗೌರವವಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ವೈ. ಬಿ. ಚಂದ್ರಕಾಂತ್ ಖಂಡಿಸಿದ್ದಾರೆ.
ಹಿರಿಯ ರಾಜಕಾರಣಿಯಾಗಿರುವ ಕೆ.ಎಸ್. ಈಶ್ವರಪ್ಪ ಅವರು ಕಾಂಗ್ರೇಸ್ ಪಕ್ಷದ ಬಗ್ಗೆ ಡಿ.ಕೆ.ಶಿವಕುಮಾರ್‌ರವರ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಬಗ್ಗೆ ಕಾಂಗ್ರೇಸ್ ಪಕ್ಷದ ಇತರೆ ನಾಯಕರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದನ್ನೇ ರೂಢಿ ಮಾಡಿಕೊಂಡಿದ್ದಾರೆ.
ಪಾಕಿಸ್ಥಾನದ ಸಚಿವ ಬಿಲಾವಲ್ ಭುಟ್ಟೋ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಕಟ್ಟದಾಗಿ ಮಾತನಾಡಿದರೆ ಅದಕ್ಕೆ ಭಾರತ ಸರ್ಕಾರ, ಪ್ರಧಾನಿ ನರೇಂದ್ರ ಮೋದಿಯವರು ಸರಿಯಾಗಿ ಎದುರೇಟು ನೀಡಬೇಕೆ ಹೊರತು ಕಾಂಗ್ರೆಸ್ ನಾಯಕರ ಮೈಯಲ್ಲಿ ಹರಿಯುತ್ತಿರುವ ರಕ್ತದ ಬಗ್ಗೆ ಕೆ.ಎಸ್ ಈಶ್ವರಪ್ಪರವರು ಮಾತನಾಡಿರುವುದನ್ನು ಜಿಲ್ಲಾ ವಕ್ತಾರರಾದ ವೈ.ಬಿ.ಚಂದ್ರಕಾಂತ್ ಟೀಕಿಸಿದ್ದಾರೆ.
ಯಾರ ಮೈಯಲ್ಲಿ ಯಾರ ರಕ್ತ ಹರಿಯುತ್ತದೆ ಎನ್ನುವುದು ತಂದೆಗೂ ತಿಳಿಯುವುದಿಲ್ಲ. ಅದೇನಿದ್ದರೂ ತಾಯಿಗೆ ಮಾತ್ರ ತಿಳಿಯುತ್ತದೆ. ಅದಕ್ಕೆ ತಾಯಿಯೇ ಸತ್ಯವೆಂದು ಹೇಳುವುದು. ಇದನ್ನು ಕೆ.ಎಸ್ ಈಶ್ವರಪ್ಪರವರು ತಿಳಿಯಬೇಕಿತ್ತು.
ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಅವರಷ್ಟೇ ಅಲ್ಲ ಕೆ.ಎಸ್ ಈಶ್ವರಪ್ಪರವರ ಮೈಯಲ್ಲಿ ಹರಿಯುತ್ತಿರುವುದು ಯಾರ ರಕ್ತ ಎನ್ನುವುದು ಕೇವಲ ಅವರವರ ತಾಯಂದಿರಿಗೆ ಮಾತ್ರ ಗೊತ್ತಿರುವುದರಿಂದ ಈ ಬಗ್ಗೆ ಮಾತನಾಡುವುದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಜಿಲ್ಲಾ ಕಾಂಗ್ರೇಸ್ ವಕ್ತಾರರಾದ ವೈ.ಬಿ.ಚಂದ್ರಕಾಂತ್ ಖಂಡಿಸಿದ್ದಾರೆ.
ಬಿ.ಜೆ.ಪಿ ಸರ್ಕಾರ ರಾಜ್ಯದಲ್ಲಿನ ತನ್ನ ದುರಾಡಳಿತವನ್ನು ಮುಚ್ಚಕೊಳ್ಳಲು ಕುಕ್ಕರ್ ಬ್ಲಾಸ್ಟ್ ಪ್ರಕರಣವನ್ನು ದುರ್ಬಳಕೆ ಮಾಡಿಕೊಂಡಿತು ಎನ್ನುವುದನ್ನು ಡಿ.ಕೆ ಶಿವಕುಮಾರ್‌ವರ ಹೇಳಿಕೆಯ ಅರ್ಥವಾಗಿತ್ತೇ ವಿನಃ ಉಗ್ರನ ಕೃತ್ಯದ ಬಗ್ಗೆ ಸಮರ್ಥನೆ ಮಾಡಿರುವುದು ಆಗಿರುವುದಲ್ಲ. ಇಂತಹ ಕೃತ್ಯವನ್ನು ಕಾಂಗ್ರೇಸ್ ಎಂದಿಗೂ ಸಹಿಸುವುದಿಲ್ಲ ಎನ್ನುವುದನ್ನು ಕಾಂಗ್ರೇಸ್ ಸರ್ಕಾರ ಹಲವು ಯುದ್ದಗಳ ಸಂದರ್ಭದಲ್ಲಿ ಸಾಬೀತು ಮಾಡಿದೆ, ಕಾಂಗ್ರೇಸ್ ಪಕ್ಷಕ್ಕೆ ಅದರ ನಾಯಕರಿಗೆ ಬುದ್ದಿ ಹೇಳುವ ಕೆ.ಎಸ್ ಈಶ್ವರಪ್ಪನವರು ಕಂದಹಾರ ವಿಮಾನ ಅಪಹರಣ ಸಂದರ್ಭದಲ್ಲಿ ತಮ್ಮ ಪಕ್ಷದ ಸರ್ಕಾರ ತೆಗೆದುಕೊಂಡ ತೀರ್ಮಾನ ಎಷ್ಟು ಸರಿ ಎನ್ನುವುದು ಮೊದಲು ತಿಳಿದುಕೊಳ್ಳಬೇಕು, ಇದು ಉಗ್ರರಿಗೆ ಬೆಂಬಲಿಸಿದ ಕೃತ್ಯವಲ್ಲವೇ ಎಂದು ವಕ್ತಾರರಾದ ವೈ.ಬಿ ಚಂದ್ರಕಾಂತ್ ಅವರು ಪ್ರಶ್ನಿಸಿದ್ದಾರೆ.