Friday, April 18, 2025
Friday, April 18, 2025

ದೇಶಪ್ರೇಮದಲ್ಲಿ ಭಾರತೀಯ ಸೈನಿಕ ಯಾರೊಂದಿಗೂ ರಾಜಿ ಮಾಡಿಕೊಳ್ಳಲಾರ-ಕರ್ನಲ್ ನರಹರಿ

Date:

ಭಾರತೀಯ ಸೈನ್ಯ ವೃತ್ತಿಯಲ್ಲಿ ನಿರಂತರವಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಯೋಧರು ಸಮಾಜದಲ್ಲಿನ ಭ್ರಷ್ಟಾಚಾರ ವಿರುದ್ಧ ಹೋರಾಡುವ ಮೂಲಕ ರಾಜ್ಯದಲ್ಲಿ ಶಿಸ್ತು ಹಾಗೂ ಸಮರ್ಥವಾಗಿ ಆಡಳಿತ ನಡೆಸಲು ಅರ್ಹರು ಎಂದು ಕರ್ನಲ್ ಪಿ.ವಿ.ಹರಿ ಹೇಳಿದರು.

ಚಿಕ್ಕಮಂಗಳೂರು, ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಮಾಜಿ ಸೈನಿಕರ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ 1971ರ ಯುದ್ದದ 52ನೇ ವಿಜಯೋತ್ಸವ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಅಂದಿನ ಬಹಳಷ್ಟು ಸೈನಿಕರು ಪರಾಕ್ರಮದಿಂದ ಹೋರಾಡಿ ದೇಶಕ್ಕಾಗಿ ದುಡಿದಿದ್ದಾರೆ. ಆರೋಗ್ಯದಲ್ಲಿ ಅನೇಕ ಏರುಪೇರುಗಳಾದರೂ ಸಹ ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ದೇಶದ ಭೂ ಭಾಗವನ್ನು ವಿರೋಧಿ ದೇಶದವರಿಗೆ ಮುಟ್ಟಲು ಅವಕಾಶ ಮಾಡಿಕೊಡದೇ ಸೇವೆ ಸಲ್ಲಿಸಿರುವುದು ಹೆಮ್ಮೆಯ ವಿಷಯ ಎಂದರು.
ಭಾರತೀಯ ಸೈನಿಕರು ದೇಶಪ್ರೇಮ ಹಾಗೂ ರಕ್ಷಣೆ ವಿಚಾರದಲ್ಲಿ ಯಾರೊಂದಿಗೂ ರಾಜೀಗೊಳ ಗಾಗದೇ ಉತ್ತಮ ಸೇವೆ ಸಲ್ಲಿಸಿದ್ದಾರೆ. ನೆರೆದೇಶದ ಯುದ್ಧದ ಸಮಯದಲ್ಲಿ ವಿರೋಧಿ ಬಣದ ಸೈನಿಕರು ಶರಣಾಗತಿಯಾದಲ್ಲಿ ಅವರಿಗೆ ಉತ್ತಮ ರೀತಿಯಲ್ಲಿ ವ್ಯವಹರಿಸಲಾಗುತ್ತಿತ್ತು. ಆದರೆ ಪಾಕಿಸ್ತಾನ ದೇಶವು ತದ್ವಿರುದ್ಧವಾಗಿ ನಡೆದುಕೊಂಡು ನಮ್ಮ ಸೈನಿಕರಿಗೆ ವಿಚಿತ್ರವಾಗಿ ಹಿಂಸಿಸುತ್ತಿದ್ದರು ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಸೈನ್ಯ ವೃತ್ತಿಯಲ್ಲಿ ಎಂದಿಗೂ ಮೇಲು-ಕೀಳು ಎಂಬ ಮಾತುಗಳನ್ನಾಡದೇ ನಾವೆಲ್ಲರೂ ಭಾರತ ಮಾತೆಯ ಮಕ್ಕಳಂತೆ ವರ್ತಿಸಲಾಗುತ್ತಿತ್ತು. ಅಂದಿನಿಂದ ಇಂದಿವರೆಗೂ ಸೈನ್ಯ ವೃತ್ತಿಯಲ್ಲಿ ಎಂದಿಗೂ ಜಾತಿಯನ್ನು ಅಳಿಯುವುದಿಲ್ಲ ಎಂದು ಹೇಳಿದರು.
ಉಪವಿಭಾಗಾಧಿಕಾರಿ ಹೆಚ್.ಡಿ.ರಾಜೇಶ್ ಮಾತನಾಡಿ ಇಂದಿನ ಯುವಪೀಳಿಗೆಗೆ ಸೈನ್ಯ ವೃತ್ತಿಯ ಬಗ್ಗೆ ಆಸಕ್ತಿಯನ್ನು ಬೆಳೆಸಲು ಮಾಜಿ ಸೈನಿಕರು ಮಾರ್ಗದರ್ಶನ ನೀಡಬೇಕು. ಶಿಸ್ತಿನ ಸಿಫಾಯಿಗಳಂತೆ ಆರ್ಮಿಯಲ್ಲಿ ಕಾರ್ಯನಿರ್ವಹಿಸಿದವರು ಭಾರತದ ಯಾವುದೇ ಪ್ರದೇಶಗಳಲ್ಲಿ ಬದುಕಲು ಸಾಧ್ಯವಾ ಗಲಿದೆ ಎಂಬುದನ್ನು ತೋರ್ಪಡಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಸಿ.ಎಸ್.ಮಂಜು ನಾಥ್ 1971ರಲ್ಲಿ ಪಾಕಿಸ್ತಾನದ ವಿರುದ್ಧ ಹೋರಾಡಿ ಸುಮಾರು 90ಸಾವಿರಕ್ಕೂ ಹೆಚ್ಚು ಪಾಕ್ ಸೈನಿಕರನ್ನು ಹಾಗೂ ಅರ್ಧದಷ್ಟು ಭೂಪ್ರದೇಶವನ್ನು ಭಾರತೀಯ ಸೈನ್ಯ ವಶಪಡಿಸಿಕೊಳ್ಳಲಾಗಿತ್ತು. ತದನಂತರ ವಿಶ್ವಸಂಸ್ಥೆ ಹಾಗೂ ಯುದ್ಧನಿಯಮಗಳನ್ನು ಪಾಲನೆಯ ಅನುಗುಣವಾಗಿ ಬಿಡುಗಡೆ ಮಾಡಿ ಅನುಕಂಪ ತೋರಲಾಗಿತ್ತು ಎಂದು ತಿಳಿಸಿದರು.

ಸೈನಿಕರು ಕಾರ್ಗಿಲ್ ವಿಜಯೋತ್ಸವದ ಮೊದಲೇ 1971ರ ಯುದ್ಧವನ್ನು ಅತ್ಯಂತ ಶಕ್ತಿಯುತವಾಗಿ ನಡೆಸಿ ಯಶಸ್ವಿಕಂಡಿತು.

ಆದರೆ ಅಂದಿನ ಸಮಯದಲ್ಲಿ ಮಾಧ್ಯಮಗಳಾಗಲೀ ಅಥವಾ ತಂತ್ರಜ್ಞಾನ ಗಳು ಬೆಳೆದಿಲ್ಲವಾದ್ದರಿಂದ 1971ರ ಯುದ್ದವು ಎಲೆಮರೆ ಕಾಯಿಯಂತೆ ದೇಶದಲ್ಲಿ ಕಣ್ಮರೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ತಾರಾನಾಥ್ ಮಾತನಾಡಿ ಮಾಜಿ ಸೈನಿಕರ ಸಂಘದ ಕಟ್ಟಡವು ತಾ.ಪಂ. ಆವರಣದಲ್ಲಿದ್ದು ಮುಂದಿನ ದಿನಗಳಲ್ಲಿ ವಿಶೇಷ ಅನುದಾನ ಬಿಡುಗಡೆ ಮಾಡುವ ಮೂಲಕ ಸದೃಢ ಕಟ್ಟಡ ವ್ಯವಸ್ಥೆ ಕಲ್ಪಿಸಿಕೊಡಲಾಗುತ್ತದೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ತಾ.ಪಂ. ಆಡಳಿತಾಧಿಕಾರಿ ಜಯಸಿಂಹ, ಸೈನಿಕ ಸಂಘದ ಉಪಾಧ್ಯಕ್ಷ ಹರೀಶ್, ಖಜಾಂಚಿ ಎಸ್.ಪಾಯಿಸ್, ಕಾರ್ಯದರ್ಶಿ ಸಿ.ಟಿ.ಗೋಪಾಲಕೃಷ್ಣ, ಮಾಜಿ ಸೈನಿಕರಾದ ಬಿ.ಎಂ.ಲಕ್ಷ್ಮಣ ಗೌಡ, ಬಸವರಾಜು, ಹೆಚ್. ಎಂ.ಮಂಜುನಾಥಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಹೆಚ್.ಡಿ.ಸುರೇಶ್ ನಿರೂ ಪಿಸಿದರು. ಕಾರ್ಯದರ್ಶಿ ಸಿ.ಟಿ.ಗೋಪಾಲಕೃಷ್ಣ ಸ್ವಾಗತಿ ಸಿದರು. ಪಿ.ಎನ್.ನಾಗರಾಜ್ ವಂದಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

MESCOM ಏಪ್ರಿಲ್ 19 ಆಲ್ಕೊಳ ಫೀಡರ್ ಎ.ಎಫ್. 3 & 5 ರ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎ.ಎಫ್-3 ಮತ್ತು...

Sonia Gandhi ಸೋನಿಯಾ & ರಾಹುಲ್ ಮೇಲೆ ಬಿಜೆಪಿ ಸರ್ಕಾರದ ದ್ವೇಷ ರಾಜಕಾರಣ- ಶಿವಮೊಗ್ಗ ಎನ್ಎಸ್ ಯು ಐ ಆರೋಪ- ಪ್ರತಿಭಟನೆ

ಕೇಂದ್ರ ಬಿ ಜೆ ಪಿ ಸರ್ಕಾರ ಜಾರಿ ನಿರ್ದೇಶನಾಲಯದ ಮೂಲಕ ನ್ಯಾಷನಲ್...

MESCOM ಏಪ್ರಿಲ್ 18 ಆಲ್ಕೊಳ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ...