Thursday, June 19, 2025
Thursday, June 19, 2025

ಮನಸ್ಸಿನಿಂದ ಮನಸ್ಸಿಗೆ – 02

Date:

ಪುಟ್ ಬಾಲ್ ಆಟವನ್ನು ಮತ್ತೊಂದು ಹೆಜ್ಜೆ ಮೇಲಿನ ಹಂತಕ್ಕೆ ತೆಗೆದುಕೊಂಡು ಹೋದ ಅರ್ಜೆಂಟೈನಾ ತಂಡ.

ನಿನ್ನೆ ಕತಾರ್ ನಲ್ಲಿ ನಡೆದ ವಿಶ್ವಕಪ್ ಪುಟ್ ಬಾಲ್ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ ಗೆದ್ದ ಅರ್ಜೆಂಟೈನಾ, ಪುಟ್ ಬಾಲ್ ಆಟದ ಎಲ್ಲಾ ವಿಭಾಗಗಳಲ್ಲಿ ಹೆಚ್ಚು ಕಲಾತ್ಮಕತೆಯನ್ನು ಪ್ರದರ್ಶಿಸಿತು. ಮುಖ್ಯವಾಗಿ ಚೆಂಡನ್ನು ಹೆಚ್ಚು ಕಡಿಮೆ ಆಟದ ಮುಕ್ಕಾಲು ಸಮಯ ತನ್ನ ಹಿಡಿತದಲ್ಲೇ ಇಟ್ಟುಕೊಂಡಿದ್ದು ಮಾತ್ರವಲ್ಲದೆ ಪಾಸ್ ಗಳನ್ನು ನೀಡಿದ ರೀತಿ ಪುಟ್ ಬಾಲ್ ಆಟದ ಇದುವರೆಗಿನ ಎಲ್ಲಾ ಉತ್ಕೃಷ್ಟ ಹಂತವನ್ನು ದಾಟಿ ಅತ್ಯಂತ ಸೊಗಸಾದ ಸೌಂದರ್ಯವನ್ನು ಉಣಬಡಿಸಿತು.

ಲಿಯೋನೆಲ್ ಮೆಸ್ಸಿ ಎಂಬ ಆಧುನಿಕ ಪುಟ್ ಬಾಲ್ ಮಾಂತ್ರಿಕ ವಿಶ್ವದ ಸಾಕಷ್ಟು ಕ್ರೀಡಾ ಅಭಿಮಾನಿಗಳ ಮನಸ್ಸುನ್ನು ತನ್ನ ಆಟದ ಮೂಲಕ ಮನಸೂರೆಗೊಂಡರು.

ಬಹುತೇಕ 1986 ರಲ್ಲಿ ವಿಶ್ವಕಪ್ ಗೆದ್ದ ಡಿಯಾಗೋ ಮರಡೋನ ರೀತಿಯಲ್ಲಿ ಅಥವಾ ಅದಕ್ಕೂ ಒಂದು ಹೆಜ್ಜೆ ಮುಂದೆ ಸಾಗಿ ಈ ಬಾರಿ ಅರ್ಜೆಂಟೈನಾ ವಿಶ್ವ ಚಾಂಪಿಯನ್ ಆಗಲು ಕಾರಣನಾದ.

ಸಾಹಿತ್ಯ, ಸಂಗೀತ, ಸಿನಿಮಾ, ಚಿತ್ರಕಲೆ ರೀತಿಯಲ್ಲಿ ಕ್ರೀಡೆ ಸಹ ಕಲಾತ್ಮಕ ಮತ್ತು ಮಾಂತ್ರಿಕ ಶಕ್ತಿಯನ್ನು ಹೊಂದಿದೆ. ವಿಶ್ವದ ಅತ್ಯಂತ ಜನಪ್ರಿಯ ಕ್ರೀಡೆ ಪುಟ್ ಬಾಲ್ ಲಲಿತಕಲೆಗಳ ರೀತಿಯಲ್ಲಿಯೇ ಸೂಕ್ಷ್ಮತೆಯನ್ನು ಹೊಂದಿದೆ.

ಸೋಲು ಗೆಲುವು ಅವಮಾನ ನಿರಾಸೆ ಕೋಪ ದ್ವೇಷ ಅಸೂಯೆ ಸಂಭ್ರಮ ಎಲ್ಲವನ್ನೂ ಒಳಗೊಂಡ ಒಂದು ವಿಜ್ಞಾನವೂ ಹೌದು. ಅದರಲ್ಲಿ ಬದುಕಿನ ಅನೇಕ ಪಾಠಗಳು ಅಡಗಿವೆ.

ಇದ್ದಕ್ಕಿದ್ದಂತೆ ಬದಲಾಗುವ ತಿರುವುಗಳು, ಏರಿಳಿತಗಳು, ಪ್ರೇಕ್ಷಕರ ಪ್ರತಿಕ್ರಿಯೆಗಳು, ಅನಿರೀಕ್ಷಿತಗಳು, ಅನಿವಾರ್ಯಗಳು, ವಿರುದ್ಧ ತಂಡದ ಒತ್ತಡಗಳು, ಅಂಪೈರುಗಳ ಸರಿ‌ – ತಪ್ಪು ನಿರ್ಣಯಗಳು, ಅದೃಷ್ಟದಾಟ ಎಲ್ಲವೂ ಬದುಕಿಗೆ ಪಾಠವಾಗುತ್ತಾ ಸಾಗುತ್ತದೆ.

ನೋಡುವ ದೃಷ್ಟಿಕೋನ, ಆಸಕ್ತಿ, ಗ್ರಹಿಕೆಯ ಸಾಮರ್ಥ್ಯ, ಮನಸ್ಸಿನ ವಿಶಾಲತೆ, ಭಾವನೆಗಳ ಶುದ್ದತೆ, ತಾಳ್ಮೆ ಇಲ್ಲಿ ಮುಖ್ಯವಾಗುತ್ತದೆ. ಜೊತೆಗೆ ನಮ್ಮ ಕ್ರಿಯೆ ಪ್ರತಿಕ್ರಿಯೆಗಳು ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಒಟ್ಟಿನಲ್ಲಿ ಈ ಬಾರಿಯ ವಿಶ್ವಕಪ್ ಪುಟ್ ಬಾಲ್ ಹೆಚ್ಚು ರೋಚಕವಾಗಿತ್ತು. ಕತಾರ್ ಎಂಬ ಪುಟ್ಟ ದೇಶ ಅಚ್ಚುಕಟ್ಟಾಗಿ ಮತ್ತು ಅದ್ದೂರಿಯಾಗಿ ಆಯೋಜಿಸಿತ್ತು. 2026 ರಲ್ಲಿ ಅಮೆರಿಕದಲ್ಲಿ ಮುಂದಿನ ವಿಶ್ವಕಪ್ ನಡೆಯಲಿದೆ.

ಸುಮಾರು ‌140 ಕೋಟಿ ಜನಸಂಖ್ಯೆಯನ್ನು ಹೊಂದಿರುವ ನಮ್ಮ ನಿಮ್ಮೆಲ್ಲರ ದೇಶ ಭಾರತ ಭ್ರಷ್ಟಾಚಾರ, ಸೋಮಾರಿತನ, ಜಾತಿ ಪದ್ದತಿ, ಕೇವಲ ಹಣಗಳಿಕೆಯ ವ್ಯಾಮೋಹ, ಚುನಾವಣಾ ಅಕ್ರಮ ಎಲ್ಲವನ್ನೂ ಮೀರಿ ಕ್ರೀಡೆಗಳೂ ಸೇರಿ ಎಲ್ಲಾ ಕ್ಷೇತ್ರಗಳಲ್ಲಿ ಆದಷ್ಟು ಬೇಗ ವಿಶ್ವಮಟ್ಟದ ಸಾಧನೆ ಮಾಡುವಂತಾಗಲಿ.

ನಮ್ಮ ಮಕ್ಕಳು ಒಳ್ಳೆಯ ಮನೆ, ಉದ್ಯೋಗ, ಆಸ್ತಿ, ಒಡವೆ, ವಾಹನ, ಭರ್ಜರಿ ಮದುವೆ, ಪಾರ್ಟಿ ಮುಂತಾದ ಐಹಿಕ ಸುಖ ಭೋಗಗಳ ಜೊತೆಗೆ ಈ ರೀತಿಯ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಸಹ ಹೆಚ್ಚು ತೊಡಗಿಸಿಕೊಂಡು ದೇಶದ ಘನತೆಯನ್ನು ಕಾಪಾಡುವಂತಾಗಲಿ.

ದೇವರು, ಧರ್ಮ, ಜಾತಿ, ಭಾಷೆ ಸಂಘರ್ಷಗಳಲ್ಲಿಯೇ ತಮ್ಮನ್ನು ಹೆಚ್ಚು ಯೋಚಿಸುವಂತೆ ಮಾಡಿಕೊಂಡು, ವಿವಿಧ ಚಟಗಳಿಗೆ ದಾಸರಾಗಿ, ರಾಜಕಾರಣಿಗಳಿಗೆ, ಸಿನಿಮಾ ನಟನಟಿಯರಿಗೆ ಜೈಕಾರ ಹಾಕುತ್ತಾ, ಸಾಮಾಜಿಕ ಜಾಲತಾಣಗಳ ಕಾಮಿಡಿಗಳಿಗೆ, ವಿಕೃತಗಳಿಗೆ ಹೆಚ್ಚು ಆಕರ್ಷಿತರಾಗಿ ನಮ್ಮ ಸಮಯವನ್ನು ಹಾಳು ಮಾಡಿಕೊಂಡು ವ್ಯರ್ಥ ಮಾಡುವುದಕ್ಕಿಂತ ಮತ್ತಷ್ಟು ಪ್ರಯೋಜನಕಾರಿ ಜೀವನವನ್ನು ರೂಪಿಸಿಕೊಂಡು ಸಾಧಕರಾಗುವ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನಸೋಣ ಎಂಬ ಸಂಕಲ್ಪವನ್ನು ಈಗಿನಿಂದಲೇ ಕೈಗೊಂಡು ಕಾರ್ಯ ಪ್ರವೃತ್ತರಾಗೋಣ.

ಕ್ರೀಡಾ ಪ್ರೇಮಿಗಳಿಗೆ ಈ ತಿಂಗಳಲ್ಲಿ ಭರಪೂರ ಮನರಂಜನೆ ನೀಡಿದ ಕಬಡ್ಡಿ, ಕ್ರಿಕೆಟ್ ಮತ್ತು ಪುಟ್ ಬಾಲ್ ಆಟಗಾರರಿಗೆ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ಹೇಳುತ್ತಾ…

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್. ಕೆ.
9844013068…

1 COMMENT

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rahul Gandhi ಶಿವಮೊಗ್ಗ ಯುವ ಕಾಂಗ್ರೆಸ್ ನಿಂದ ರಾಹುಲ್ ಗಾಂಧಿಯವರ ಹುಟ್ಟುಹಬ್ಬ ಆಚರಣೆ

Rahul Gandhi ರಾಹುಲ್ ಗಾಂಧಿಯವರ ಹುಟ್ಟುಹಬ್ಬ - ಶಿವಮೊಗ್ಗ ಯುವ ಕಾಂಗ್ರೆಸ್...

Klive Special Article ಈ ಶತಮಾನದಲ್ಲಿ ಯೋಗವು ಜಗತ್ತನ್ನು ಒಂದುಗೂಡಿಸಿದೆ

Klive Special Article ಪ್ರಾಚೀನ ಭಾರತೀಯ ಸಂಪ್ರದಾಯದ ಅಮೂಲ್ಯ...

District Legal Services Authority ಯೋಗಾಭ್ಯಾಸದ ಮಹತ್ವ ಕುರಿತು ಹಿರಿಯ ನಾಗರೀಕರಿಗೆ ಮಾಹಿತಿ ಕಾರ್ಯಕ್ರಮ

District Legal Services Authority ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,...