Tuesday, March 31, 2026
Tuesday, March 31, 2026
Home Blog Page 585

High Court ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರಿಗೆ ನೀಡಿದ ಜಾಮೀನು ರದ್ದತಿ‌ ಬಗ್ಗೆ ಕೋರಿದ್ದ ಎಸ್ ಐ ಟಿ ಅರ್ಜಿ ವಜಾ

0

High Court ಮಹಿಳೆಯ ಅಪಹರಣ ಪ್ರಕರಣದಲ್ಲಿ ಹೆಚ್.ಡಿ.ರೇವಣ್ಣ ಅವರಿಗೆ ನೀಡಲಾಗಿರುವ ಜಾಮೀನು ರದ್ದುಗೊಳಿಸುವಂತೆ ಕೋರಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಎಸ್‌ಐಟಿ ವಾದ ಆಲಿಸಿದ ನಂತರ ಆಗಸ್ಟ್ 1 ರಂದು ಆದೇಶ ಕಾಯ್ದಿರಿಸಿತ್ತು. ರೇವಣ್ಣ ಅವರಿಗೆ ವಿಶೇಷ ನ್ಯಾಯಾಲಯ ಮೇ 13ರಂದು ಜಾಮೀನು ನೀಡಿದೆ.

High Court ಪ್ರಜ್ವಲ್ ರೇವಣ್ಣ ವಿರುದ್ದ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದ ಬೆನ್ನಲ್ಲೇ, ಪ್ರಕರಣದ ಸಂತ್ರಸ್ತೆ ಎನ್ನಲಾದ ಮಹಿಳೆಯನ್ನು ಅಪಹರಿಸಿದ ಆರೋಪ ಶಾಸಕ ಹೆಚ್‌.ಡಿ ರೇವಣ್ಣ ಮೇಲಿದೆ. ಸಂತ್ರಸ್ತೆ ಪ್ರಜ್ವಲ್ ರೇವಣ್ಣ ವಿರುದ್ದ ದೂರು ನೀಡದಂತೆ ತಡೆಯಲು ಆಕೆಯನ್ನು ರೇವಣ್ಣ ಅಪಹರಣ ಮಾಡಿಸಿದ್ದರು ಎನ್ನಲಾಗಿದೆ.

ಈ ಸಂಬಂಧ ಮಹಿಳೆಯ ಮಗ ದೂರು ದಾಖಲಿಸಿದ್ದರು. ಎಸ್‌ಐಟಿ ರೇವಣ್ಣ ಅವರನ್ನು ಬಂಧಿಸಿತ್ತು.

ಇತರ ಆರೋಪಿಗಳಿಗೂ ಜಾಮೀನು
ಇದೇ ವೇಳೆ ಅಪಹರಣ ಪ್ರಕರಣದ ಇತರೆ ಆರೋಪಿಗಳಾದ ಹಾಸನದ ಸತೀಶ್‌ ಬಾಬು ಅಲಿಯಾಸ್‌ ಸತೀಶ್‌ ಬಾಬಣ್ಣ, ಹೆಚ್‌ ಕೆ ಸುಜಯ್‌, ಹೆಚ್‌ ಎನ್‌ ಮಧು, ಎಸ್‌ ಟಿ ಕೀರ್ತಿ, ಹೆಚ್‌ ಡಿ ಮಾಯು ಗೌಡ, ಕೆ ಎ ರಾಜಗೋಪಾಲ್‌ ಅವರಿಗೂ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ ಎಂದು ವರದಿಯಾಗಿದೆ.

Shivamogga Police ಸೋಗಾನೆ ಕೇಂದ್ರ ಕಾರಾಗೃಹಕ್ಕೆ ಪೊಲೀಸ್ ದಾಳಿ

0

Shivamogga Police ದಿನಾಂಕಃ 28-07-2024 ರಂದು ಬೆಳಗಿನ ಜಾವ ಶ್ರೀ ಮಿಥುನ್ ಕುಮಾರ್ ಜಿ.ಕೆ ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರ ನೇತೃತ್ವದಲ್ಲಿ ಶ್ರೀ ಅನಿಲ್ ಕುಮಾರ್ ಭೂಮರಡ್ಡಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1, ಶಿವಮೊಗ್ಗ ಜಿಲ್ಲೆ ಮತ್ತು ಎ ಜಿ ಕಾರ್ಯಪ್ಪ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ಶಿವಮೊಗ್ಗ ಜಿಲ್ಲೆ, ಕೃಷ್ಣ ಮೂರ್ತಿ, ಡಿವೈಎಸ್.ಪಿ, ಡಿ.ಎ.ಆರ್, ಶಿವಮೊಗ್ಗ ಶ್ರೀ ಮಂಜುನಾಥ್ ಪೊಲೀಸ್ ನಿರೀಕ್ಷಕರು, ತುಂಗಾ ನಗರ ಪೊಲೀಸ್ ಠಾಣೆ, ಶ್ರೀ ರವಿ ಪಾಟೀಲ್, ಪೊಲೀಸ್ Shivamogga Police ನಿರೀಕ್ಷಕರು, ದೊಡ್ಡಪೇಟೆ ಪೊಲೀಸ್ ಠಾಣೆ, ಶ್ರೀ ದೀಪಕ್ ಪೊಲೀಸ್ ನಿರೀಕ್ಷಕರು, ಕೋಟೆ ಪೊಲೀಸ್ ಠಾಣೆ, ಶ್ರೀ ಸತ್ಯ ನಾರಾಯಣ, ಪೊಲೀಸ್ ನಿರೀಕ್ಷಕರು, ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ, ಶ್ರೀ ಪ್ರಶಾಂತ್ ಸಶಸ್ತ್ರ ಪೊಲೀಸ್ ನಿರೀಕ್ಷಕರು, ಡಿಎಆರ್ ಶಿವಮೊಗ್ಗ ಹಾಗೂ 2 ಪಿಎಸ್ಐ ಮತ್ತು 100 ಪೊಲೀಸ್ ಸಿಬ್ಬಂಧಿಗಳ ತಂಡವು ಶಿವಮೊಗ್ಗ ಸೋಗಾನೆಯ ಕೇಂದ್ರ ಕಾರಾಗೃಹದ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು

Shivamogga Cosmo Club ಶಿವಮೊಗ್ಗ ರೋಟರಿ ಸೆಂಟ್ರಲ್ ಕ್ಲಬ್ಬಿಗೆ 16 ಜಿಲ್ಲಾ ಪ್ರಶಸ್ತಿಗಳು

0

Shivamogga Cosmo Club ಶಿವಮೊಗ್ಗ ಕಾಸ್ಮೋ ಕ್ಲಬ್ ನಲ್ಲಿ ನಡೆದ ಅವಾರ್ಡ್ಸ್ ನೈಟ್ ಮತ್ತು ಮೆಂಬರ್ ಶಿಪ್ ಡೆವಲಪ್ ಮೆಂಟ್ ಅಂಡ್ ಪಬ್ಲಿಕ್ ಇಮೇಜ್ ಕಾರ್ಯಕ್ರಮದಲ್ಲಿ 2023-24 ನೇ ಸಾಲಿನ ಸೇವಾ ಕಾರ್ಯಗಳನ್ನು ಗುರುತಿಸಿ 16 ಜಿಲ್ಲಾ ಪ್ರಶಸ್ತಿಗಳನ್ನು ರೋಟರಿ ಕ್ಲಬ್ ಸೆಂಟ್ರಲ್ ಪಡೆದುಕೊಂಡಿದೆ.

Shivamogga Cosmo Club ಮ್ಯಾನೇಜ್ ಮೆಂಟ್ ಆಫ್ ಫೈನಾನ್ಸ್ ಗ್ಲೋಬಲ್ ಗ್ರ್ಯಾಂಡ್ ಕ್ಲಬ್ ಬುಲೆಟ್ ರೋಟರಿ ಇಂಡಿಯಾ ಆಫ್ ಬಳಕೆ ಫ್ಯಾಮಿಲಿ ಆಫ್ ರೋಟರಿ
ಕೆರಿಯರ್ ಅಂಡ್ ಸ್ಕಿಲ್ ಡೆವಲಪ್ ಮೆಂಟ್
ದಿಸ್ ಇಸ್ ಪ್ರಿವೆನ್ಷನ್ ಅಂಡ್ ಟ್ರೀಟ್ ಮೆಂಟ್,
ಬೇಸಿಕ್ ಎಜುಕೇಶನಲ್ ಲಿಟರಸಿ, ಎನ್ವಿರಾನ್ ಮೆಂಟ್, ಇಂಟರ್ ನ್ಯಾಷನಲ್ ಅಂಡರ್ ಸ್ಟ್ಯಾಂಡಿಂಗ್, ಇಂಟರಾಕ್ಟ್ ಯೂತ್ ವೆಲ್ಫೇರ್,
ವ್ಯಾಲ್ಯೂ ಬೇಸಡ್ ಎಜುಕೇಶನ್,
ಸಾಯಿಲ್ ಫರ್ಟಿಲಿಟಿ ಕನ್ಸರ್ವೇಷನ್,
ಡ್ರೈ ಸೇಫ್ ಅಂಡ್ ಸೇವೆ ಲೈಫ್
2023-24 ನೇ ಸಾಲಿನ ಅಧ್ಯಕ್ಷರಾದ ಶಿವರಾಜ್ ಹಾಗೂ ಕಾರ್ಯದರ್ಶಿ ಕಿರಣ್ ಕುಮಾರ್ ಅವರನ್ನು ರೋಟರಿ ಜಿಲ್ಲೆಯಿಂದ ಗುರುತಿಸಲಾಗಿದೆ. ಮತ್ತು ಈ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಸೆಂಟ್ರಲ್ ವತಿಯಿಂದ 26 ರಿಜಿಸ್ಟ್ರೇಷನ್ ಮಾಡಿಸಿ ಜಿಲ್ಲೆಯಲ್ಲಿ ಅತಿ ಹೆಚ್ಚು ರಿಜಿಸ್ಟರ್ ಮಾಡಿದರಲ್ಲಿ ಮೂರನೇ ಸ್ಥಾನವನ್ನು ಪಡೆದಿದ್ದಾರೆ.

ಪ್ರಶಸ್ತಿ ಪತ್ರವನ್ನು ಪಡೆಯುವಾಗ ವೇದಿಕೆ ಮೇಲೆ ಈ ಸಾಲಿನ ಅಧ್ಯಕ್ಷರಾದ ಕಿರಣ್ ಕುಮಾರ್ ಹಾಗೂ ಕಾರ್ಯದರ್ಶಿ ಈಶ್ವರ್.ಪಿ, ಡಿ.ಜಿ.ಪ್ರಕಾಶ್, ಪಾಸ್ಟ್ ಅಸಿಸ್ಟೆಂಟ್ ಗವರ್ನರ್ ರವಿ ಕೋಟೊಜಿ, ಚುಡಾಮಣಿ ಪವಾರ್, ರೋಟರಿ ಸದಸ್ಯರಾದ ಗುರುರಾಜ್, ರಮೇಶ್, ಗಣೇಶ್ ಅಂಗಡಿ, ಸಂತೋಷ್.ಬಿ.ಎ, ಜಯಶೀಲ ಶೆಟ್ಟಿ, ಜಗದೀಶ್, ಸತೀಶ್, ವಿರೂಪಾಕ್ಷ , ಚಂದ್ರು.ಜೆ.ಪಿ, ರಾಜ ಸಿಂಗ್, ವಿರೂಪಾಕ್ಷ, ಜ್ಯೋತಿ ಶ್ರೀರಾಮ್, ದೀಪ ಜಯಶೀಲ ಶೆಟ್ಟಿ ಹಾಗೂ ಆನ್ಸ್ ಕ್ಲಬ್ ನ ಅಧ್ಯಕ್ಷರಾದ ಗೀತಾ ಜಗದೀಶ್, ಸವಿತಾ ಚಂದ್ರು, ಲಕ್ಷ್ಮಿ ಕಿರಣ್, ರೂಪ ಈಶ್ವರ್, ರೇಷ್ಮಾ ರಮೇಶ, ರಾಜೇಶ್ವರಿ ರಾಜಾಸಿಂಗ್ ಸೇರಿದಂತೆ ಇನ್ನಿತರರ ಸದಸ್ಯರು ಉಪಸ್ಥಿರಿದ್ದರು.

Dr. Babu Jagjivan Ram Leather Industries Development ಗೌರಿ ಗಣೇಶ ಹಬ್ಬದ ಪ್ರಯುಕ್ತ ಲಿಡ್ಕರ್ ಉತ್ಪನ್ನಗಳ ರಿಯಾಯಿತಿ ಮಾರಾಟ

0

Dr. Babu Jagjivan Ram Leather Industries Development ಡಾ. ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮವು ಶಿವಮೊಗ್ಗ ನಗರದ ನೆಹರು ರಸ್ತೆ, ಬಸವಸದನ ಕಾಂಪ್ಲೇಕ್ಸ್ನಲ್ಲಿರುವ ಲಿಡ್ಕರ್ ಮಾರಾಟ ಮಳಿಗೆಯಲ್ಲಿ ಗೌರಿ ಗಣೇಶ ಹಬ್ಬದ ಪ್ರಯುಕ್ತ ಅಪ್ಪಟ ಚರ್ಮದ ಎಲ್ಲಾ ವಸ್ತುಗಳ ಮೇಲೆ 20% ಹಾಗೂ ಆಯ್ದ ವಸ್ತುಗಳ ಮೇಲೆ ಶೇ.30% ರಿಂದ 40% ರವರೆಗೆ ರಿಯಾಯಿತಿ ಘೋಷಿಸಿದ್ದು, ಈ ಅವಕಾಶವು ಆ. 28 ರಿಂದ ಸೆ. 06ರ ವರೆಗೆ ಇರುತ್ತದೆ.

Dr. Babu Jagjivan Ram Leather Industries Development ಸಾರ್ವಜನಿಕರು ಈ ಅವಕಾಶದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ನಿಗಮದ ವ್ಯವಸ್ಥಾಪಕರು/ಜಿಲ್ಲಾ ಸಂಯೋಜಕರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಮೊ.ಸಂ.: 8762883941 ನ್ನು ಸಂಪರ್ಕಿಸುವುದು.

Shivamogga Police ಅಂತಾರಾಜ್ಯ ಕಟ್ಟಡ ಕಾರ್ಮಿಕರನ್ನ ಕಾಮಗಾರಿಗಳಿಗೆ ನೇಮಿಸಿದ್ದರೆ ಮಾಹಿತಿ ನೀಡಲು ಸೂಚನೆ

0

Shivamogga Police ಶಿವಮೊಗ್ಗ ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕಟ್ಟಡ ಕಾಮಗಾರಿ ಮತ್ತಿತರ ಕೆಲಸಗಳಲ್ಲಿ ಮೇಸ್ತ್ರಿ/ಮಾಲೀಕರು/ಗುತ್ತಿಗೆದಾರರು ಬೇರೆ ಬೇರೆ ರಾಜ್ಯದಿಂದ ಬರುವ ಕಾರ್ಮಿಕರನ್ನು ಬಳಸಿಕೊಳ್ಳುತ್ತಿದ್ದು, ಹೀಗೆ ಕೆಲಸಕ್ಕೆ ತೆಗೆದುಕೊಳ್ಳುವ ಅಂತರಾಜ್ಯ ಕಾರ್ಮಿಕರ ಆಧಾರ್ ಕಾರ್ಡ್ ಮತ್ತು ವಿಳಾಸವನ್ನು ಸಂಬಂಧಪಟ್ಟ ಹತ್ತಿರದ ಪೊಲೀಸ್ ಠಾಣೆ ಮತ್ತು Shivamogga Police ಕಾರ್ಮಿಕ ಇಲಾಖೆಗೆ ನೀಡಿ ನಂತರದಲ್ಲಿ ಕೆಲಸ ಮಾಡಿಸಿಕೊಳ್ಳುವುದು. ತಪ್ಪಿದ್ದಲ್ಲಿ ಈ ಕಾರ್ಮಿಕರುಗಳಿಂದ ಯಾವುದೇ ಅಹಿತಕರ ಘಟನೆ/ಕಾನೂನು ಬಾಹೀರ ಚಟುವಟಿಕೆಗಳಿಗೆ ಕಾರ್ಮಿಕರನ್ನು ನೇಮಿಸಿಕೊಂಡಿದ್ದ ಮೇಸ್ತ್ರಿ/ ಮಾಲೀಕರು/ ಗುತ್ತಿಗೆದಾರರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಕಾರ್ಮಿಕ ಅಧಿಕಾರಿ ವೇಣುಗೋಪಾಲ್ ಎಂ.ಪಿ. ರವರು ತಿಳಿಸ.

Shivamogga Chamber of Commerce and Industry ಇಂದಿನಿಂದ ಜಿಲ್ಲಾ ಕೈಗಾರಿಕಾ & ವಾಣಿಜ್ಯ ಸಂಸ್ಥೆ ವತಿಯಿಂದ ಟ್ರೇಡ್ ಲೈಸನ್ಸ್ ಮೇಳ

0

Shivamogga Chamber of Commerce and Industry ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಹಾಗೂ ಶಿವಮೊಗ್ಗ ಮಹಾನಗರ ಪಾಲಿಕೆ ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 28.08.2024 ಬುಧವಾರ ದಿಂದ 30.08.2024ವರೆಗೆ ಮೂರು ದಿನಗಳ ಕಾಲ ವಾಣಿಜ್ಯೋದ್ಯಮಿಗಳಿಗೆ ಹಾಗೂ ವರ್ತಕರಿಗೆ ಟ್ರೇಡ್ ಲೈಸೆನ್ಸ್ ಮೇಳವನ್ನು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಆವರಣದಲ್ಲಿ ಆಯೋಜಿಸಲಾಗಿದೆ.

Shivamogga Chamber of Commerce and Industry ಎಲ್ಲಾ ಈ ಟ್ರೇಡ್ ಲೈಸೆನ್ಸ್ ಮೇಳದ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಸಾರ್ವಜನಿಕ ಅಧಿಕಾರಿ ಜಿ ವಿಜಯಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಲೈಸೆನ್ಸ್ ಪಡೆದುಕೊಳ್ಳುವವರು. ಒಂದು ಭಾವಚಿತ್ರ, ಆಧಾರ್ ಕರ‍್ಡ್ ಜೆರಾಕ್ಸ್ ಪ್ರತಿ. ಬಾಡಿಗೆ ಕರಾರು ಪತ್ರ/ಖಾತಾ ಎಕ್ಸ್ಟಾಕ್ಟ್ ಜೆರಾಕ್ಸ್/ಕಂದಾಯ ರಸೀದಿ., ವಿದ್ಯುಚ್ಛಕ್ತಿ ಬಿಲ್ ಜೆರಾಕ್ಸ್/ ತರಬೇಕಾಗಿ ಕೋರಲಾಗಿದೆ

Gruhakshmi Scheme ಗೃಹಲಕ್ಷ್ಮೀ ಯೋಜನೆ ಹಣ ಕೂಡಿಟ್ಟು ಇಡೀ ಹಳ್ಳಿಗೇ ಹೋಳಿಗೆ ಉಣಿಸಿದ ‘ತಾಯಿ’ಗೆ ಸನ್ಮಾನ

0

Gruhakshmi Scheme ಗೃಹಲಕ್ಷ್ಮಿ ಹಣದಲ್ಲಿ ಇಡೀ ಗ್ರಾಮಕ್ಕೆ ಹೋಳಿಗೆ ಊಟ ಹಾಕಿದ ಬೆಳಗಾವಿ ಜಿಲ್ಲೆಯ ರಾಯಬಾಗ್ ತಾಲ್ಲೂಕಿನ‌ ಸುಟ್ಟಟ್ಟಿ ಗ್ರಾಮದ ಅಕ್ಕಾತಾಯಿ ಲಂಗೂಟಿಯನ್ನು ಇಂದು ಬೆಳಗಾವಿ ವಿಮಾನ‌ ನಿಲ್ದಾಣದಲ್ಲಿ‌ ಸನ್ಮಾನಿಸಿ, ನಿಮ್ಮ ಆಶೀರ್ವಾದ ಹೀಗೆಯೇ ಇರಲಿ ಎಂದು ಆಶಿಸಿ, ನಮ್ಮ ಸರ್ಕಾರ ಇರುವವರೆಗೂ ಗೃಹಲಕ್ಷ್ಮಿ ಯೋಜನೆ ನಿಲ್ಲಲ್ಲ, ಪ್ರತೀ ತಿಂಗಳು ನಿಮ್ಮ ಮಡಿಲು ಸೇರುತ್ತಿರುತ್ತದೆ ಎಂಬ ವಾಗ್ದಾನ ನೀಡಿದೆ.

ನಾಡಿಗೆ ಅನ್ನ ಕೊಡೋ ದೊರೆ ನಿನ್ನ ಕೈ ಮೇಲಾಗ್ಲಿ, ನಾಡ ಆಳುವ ದೊರೆ ನೀನು ದೇಶ ಆಳ್ಬೇಕು. ಹಿಂಗಾ ಆಳ್ಕೊತಾ ಹೋಗ್ತಾ ಇರ್ಬೇಕು. ನಾಡಿಗೆ ಒಳ್ಳೇದಾಗೈತ್ರಿ ಎಂದು ಅಕ್ಕಾತಾಯಿ ಲಂಗೂಟಿಯವರು ಮನಸ್ಪೂರ್ತಿಯಾಗಿ ಆಶೀರ್ವಾದ ಮಾಡಿದರು.

Gruhakshmi Scheme ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಅಕ್ಕಾತಾಯಿ ಲಂಗೂಟಿಯವರಿಗೆ ಮತ್ತು ಅವರ ಜೊತೆಯಿದ್ದ ತಾಯಂದಿರಿಗೆ ಸೀರೆ, ಅರಸಿನ – ಕುಂಕುಮ, ಬಾಗಿನ ನೀಡಿದರು.

Sahana Chethan Sahachetana ಆಗಸ್ಟ್ 30 ರಿಂದ ಸಹಚೇತನ ನಾಟ್ಯಾಲಯದಿಂದ 13 ನೇ ನಾಟ್ಯಾರಾಧನ

0

Sahana Chethan Sahachetana ಭಾರತದ ವೈವಿಧ್ಯಮಯ ನೃತ್ಯ ಶೈಲಿಗಳನ್ನು ಒಂದೇ ವೇದಿಕೆಯಲ್ಲಿ ನೋಡುವ ಅವಕಾಶವನ್ನು ಸಹಚೇತನ ನಾಟ್ಯಾಲಯ ನಗರದ ನಾಗರಿಕೆ ಒದಗಿಸಿದೆ.

ನಾಟ್ಯಾರಾಧನವನ್ನು 13 ನೇ ವರ್ಷ ಏರ್ಪಡಿಸಿದೆ. ಆ.30,32 ಹಾಗೂ ಸೆಪ್ಟೆಂಬರ್ 01 ರಂದು ಶಿವಮೊಗ್ಗ ನಗರದ ಕುವೆಂಪು ರಂಗಮಂದಿರದಲ್ಲಿ ಪ್ರತೀ ದಿನ ಸಂಜೆ 6 ರಿಂದ ಜರುಗಲಿದೆ ಎಂದು ನಾಟ್ಯಾಲಯದ ನೃತ್ಯಗುರು ಸಹನಾ ಚೇತನ್ ತಿಳಿಸಿದರು.

ಪ್ರೆಸ್ ಟ್ರಸ್ಟಿನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಆಗಸ್ಟ್ 30 ರ ಶುಕ್ರವಾರ ನಾಟ್ಯಾಲಯದ ಎಲ್ಲಾ 175 ಮಕ್ಕಳು ರುದ್ರಾಭಿಸಾರ – ನಟರಾಜನವಿಶೇಷ ಕೀರ್ತನೆಗಳ ಸರಮಾಲೆಯನ್ನು ಪ್ರಸ್ತುತಪಡಿಸಲಿದ್ದಾರೆ. ಮೂರು ವರ್ಷದಿಂದ ನಲವತ್ತು ವಯಸ್ಸಿನ ವಿದ್ಯಾರ್ಥಿಗಳು ಇದರಲ್ಲಿ ಭಗವಹಿಸುವರು ಎಂದರು.

Sahana Chethan Sahachetana ಆಗಸ್ಟ್ 31ರ ಶನಿವಾರ ನೃತ್ಯಗುರು ಸಹನಾ ಚೇತನ್ ಲಲಿತಾರ್ಣವ – ಆದಿಶಂಕರಾಚಾರ್ಯರು ರಚಿಸಿರುವ ಲಲಿತಾ ಪಂಚಕಮ್ ಜೊತೆಗೆ ಕಾಮಾಕ್ಷಿ ಸುಪ್ರಭಾತಮ್ ಹಾಗೂ ದೇವಿ ಲಲಿತೆಯ ಕೀರ್ತನೆಗಳನ್ನು ತಮ್ಮ ಏಕವ್ಯಕ್ತಿ ನೃತ್ಯರೂಪಕದಲ್ಲಿ ಪ್ರಸ್ತುತ ಪಡಿಸಲಿದ್ದಾರೆ. ತದನಂತರ ನಾಟ್ಯಾಲಯದ ಹಿರಿಯ ವಿದ್ಯಾರ್ಥಿಗಳು ಹರಿದಾಸಕೂಟ ನೃತ್ಯರೂಪಕವನ್ನು ಪ್ರಸ್ತುತಪಡಿಸುವರು ಎಂದರು.
ಸೆಪ್ಟೆಂಬರ್ 1 ರ ಭಾನುವಾರ ಅಂತರಾಷ್ಟ್ರೀಯ ಖ್ಯಾತನಾಮರಾದ 2 ತಂಡಗಳು ಶಿವಮೊಗ್ಗೆಗೆ ಆಗಮಿಸಲಿವೆ.

ದೇಶವಿದೇಶಗಳಲ್ಲಿ, ಯೂಟ್ಯೂಬ್‌ನಲ್ಲಿ ಹೆಚ್ಚಿನ ವೀಕ್ಷಣೆ ಹಾಗೂ ಹಿಂಬಾಲಕರನ್ನು ಹೊಂದಿರುವ ಚೆನ್ನೈನ ಶ್ರೀದೇವಿ ನೃತ್ಯಾಲಯ ಭರತನಾಟ್ಯವನ್ನು ವಿಭಿನ್ನ ರೀತಿಯಲ್ಲಿ ನರ್ತಿಸಲಿದ್ದಾರೆ. ಮತ್ತೊಂದು ತಂಡವೆಂದರೆ, ಮಹಾರಾಷ್ಟ್ರದ ಪುರಸ್ಕಾರ್ ಡಾನ್ಸ್ ಅಕಾಡೆಮಿ ಲಾವಣಿ, ಕೋಳಿ ನೃತ್ಯ, ಗೋಂಡಾಲ್, ಗಾವಾಲನ್ ಇತ್ಯಾದಿ ನೃತ್ಯಗಳನ್ನು ಪ್ರದರ್ಶಿಸಲಿದ್ದಾರೆ ಎಂದರು.

Kuvempu University ಕುವೆಂಪು ವಿವಿ ವಿದ್ಯಾರ್ಥಿಗಳ ಜೊತೆ ಚೆಲ್ಲಾಟವಾಡುತ್ತಿದೆ- ಶಾಸಕ ಡಿ.ಎಸ್.ಅರುಣ್

0

Kuvempu University ಕುವೆಂಪು ವಿಶ್ವವಿದ್ಯಾಲಯ ಮಕ್ಕಳ ಜೊತೆ ಚೆಲ್ಲಾಟವಾಡುತ್ತಿದೆ. ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುವೆಂಪು ವಿ.ವಿ ಅವ್ಯವಸ್ಥೆಗಳ ಆಗರವಾಗಿದೆ. ಎ.11ರಂದು ಪಿಯು ಫಲಿತಾಂಶ ಬಂದಿದ್ದರೂ ಕೂಡ ಪದವಿ ತರಗತಿಗಳಿಗೆ ಇನ್ನೂ ಪ್ರವೇಶಾತಿ ಆರಂಭವಾಗಿಲ್ಲ. 4 ತಿಂಗಳು ಕಳೆದು ಹೋಗಿವೆ. ಕುವೆಂಪು ವಿವಿ ವ್ಯಾಪ್ತಿಯಲ್ಲಿ ಸುಮಾರು 84 ಕಾಲೇಜುಗಳು ಬರುತ್ತವೆ. ಈ ಎಲ್ಲಾ ಕಾಲೇಜುಗಳಲ್ಲಿಯೂ ಇಷ್ಟು ಹೊತ್ತಿಗೆ ಪ್ರವೇಶ ಆರಂಭವಾಗಿ ಪಾಠಗಳು ಆರಂಭವಾಗಬೇಕಿತ್ತು. ಆದರೆ ಇದುವರೆಗೂ ಅಡ್ಡಿಷನ್ ಆಗಿಲ್ಲ ಎಂದು ದೂರಿದರು.

Kuvempu University ಪರೀಕ್ಷೆ ಮೌಲ್ಯ ಮಾಪನ ಮಾಪನ ಮಾಡಿದವರಿಗೆ ಹಣವನ್ನೇ ನೀಡಿಲ್ಲ, ಅತಿಥಿ ಉಪನ್ಯಾಸಕರನ್ನು ಕಡೆಗಾಣಿಸಲಾಗುತ್ತಿದೆ. ರಾಜ್ಯದಲ್ಲಿ ಕುವೆಂಪು ವಿವಿ ಕೊನೆಯ ಸ್ಥಾನದಲ್ಲಿದೆ ಎಂದ ಅವರು, ಸ್ನಾತಕೋತ್ತರ ಕಾಲೇಜುಗಳು ಕೂಡ ಆರಂಭವಾಗಿಲ್ಲ. ಹೀಗಾದರೆ ಮಕ್ಕಳ ಗತಿಯೇನು, ಪೋಷಕರು ಆತಂಕಗೊಂಡಿದ್ದಾರೆ. ಕುವೆಂಪು ವಿವಿ ಮಕ್ಕಳ ಜೊತೆ ಚೆಲ್ಲಾಟವಾಡುತ್ತಿದೆ. ರಾಜ್ಯ ಸರ್ಕಾರ ಈ ಬಗ್ಗೆ ಕಣ್ಣು ಮುಚ್ಚಿಕೊಂಡು ಕುಳಿತಿದೆ. ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ದೂರಿದರು.

DC Shivamogga ಮೊಬೈಲ್ ಆ್ಯಪ್ ಮೂಲಕ ರೈತರು ತಮ್ಮ ಬೆಳೆ ಸಮೀಕ್ಷೆಗೆ ಅಪ್ ಲೋಡ್ ಮಾಡಲು ಅವಕಾಶ

0

DC Shivamogga ರೈತರೇ ತಮ್ಮ ಜಮೀನುಗಳಲ್ಲಿ ಮೊಬೈಲ್ ಆ್ಯಪ್ ಮೂಲಕ ಸರ್ವೇ ನಂಬರ್‌ವಾರು/ಹಿಸ್ಸಾವಾರು ಬೆಳೆ ವಿವರದ ಮಾಹಿತಿಯನ್ನು ಛಾಯಾಚಿತ್ರ ಸಹಿತ ‘ರೈತರ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ 2024-25’ ರಲ್ಲಿ ಅಪ್‌ಲೋಡ್ ಮಾಡಲು ಅವಕಾಶವನ್ನು ಸರ್ಕಾರ ಕಲ್ಪಿಸಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.

ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಸೋಮವಾರ ಬೆಳೆ ಸಮೀಕ್ಷೆ 2024-25 ಮುಂಗಾರು ಕುರಿತು ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ರಾಜ್ಯದಲ್ಲಿ ಸರ್ವೇ ನಂಬರ್, ನಂಬರ್‌ವಾರು ಬೆಳೆಗಳ ನಿಖರ ಮಾಹಿತಿಯ ಮೊಬೈಲ್ ತಂತ್ರಾಂಶ ಬಳಕೆಯಿಂದ ಬೆಳೆ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ. ಮೊಬೈಲ್ ತಂತ್ರಾಂಶದ ಜ್ಞಾನವುಳ್ಳ ಸ್ಥಳೀಯ ಯುವಕರು(ಖಾಸಗಿ ನಿವಾಸಿಗಳು) ಬೆಳೆ ಸಮೀಕ್ಷೆ ನಡೆಸುತ್ತಿದ್ದಾರೆ.
ತಾಲ್ಲೂಕು ಆಡಳಿತ ನೇಮಿಸಿರುವ ತರಬೇತಿ ಹೊಂದಿದ ಖಾಸಗಿ ನಿವಾಸಿಗಳು, ಕೃಷಿ, ತೋಟಗಾರಿಕೆ, ರೇಷ್ಮೆ, ಕಂದಾಯ ಹಾಊ ಬೃಹತ್ ನೀರಾವರಿ ಇಲಾಖೆಗಳ ಸಿಬ್ಬಂದಿಗಳು ಬೆಳೆ ವಿವರ ದಾಖಲಿಸಲು ರೈತರಿಗೆ ಮಾಹಿತಿ ನೀಡುವರು.

ಬೆಳೆ ವಿವರ ದಾಕಲಿಸದ ರಯತರ ತಾಕುಗಳನ್ನು ನಂತರ ತಾಲ್ಲೂಕು ಆಡಳಿತ ನೇಮಿಸಿರುವ ತರಬೇತಿ ಹೊಂದಿದ ಖಾಸಗಿ ನಿವಾಸಿಗಳಿಂದ ಆ.15 ರಿಂದ ಸೆ.30 ರವರೆಗೆ ಸಮೀಕ್ಷೆ ಮಾಡಿಸಲಾಗುವುದು.
ಹೀಗೆ ಸಂಗ್ರಹಿಸುವ ಬೆಳೆ ವಿವರಗಳು ಪಹಣಿಯಲ್ಲಿ ದಾಖಲಾಗುವುದರ ಜೊತೆಗೆ ಸರ್ಕಾರದ ಪ್ರಮುಖ ಯೋಜನೆಗಳಾದ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಫಲಾನುಭವಿಗಳನ್ನು ಗುರುತಿಸಲು ಬೆಳೆ ವಿಮಾ ಯೋಜನೆಯಡಿ ಬೆಳೆ ವಿವರ ಪರಿಶೀಲಿಸಲು, ಪ್ರಕೃತಿ ವಿಕೋಪದಡಿ ಪ್ರವಾಹ ಮತ್ತು ಬರಗಾಲ ಸಂದರ್ಭದಲ್ಲಿ ಪರಿಹಾರ ವಿತರಿಸಲು, ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳ ಫಲಾನುಭವಿ ಆಧಾರಿತ ಯೋಜನೆಗಳಲ್ಲಿ ಬೆಳೆ ಕಟಾವು ಪ್ರಯೋಗಗಳನ್ನು ಕೈಗೊಳ್ಳಲು ಮತ್ತು ಸಾಂಖ್ಯಿಕ ಇಲಾಖೆ, ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳ ಬೆಳೆ ವಿಸ್ತೀರ್ಣ ವರದಿ ಮಾಡಲು ಬೆಳೆ ಸಮೀಕ್ಷೆ ವಿವರಗಳನ್ನು ಬಳಸಲಾಗುವುದು.

DC Shivamogga ಕೃಷಿ, ತೋಟಗಾರಿಕೆ, ರೇಷ್ಮೆ ಮತ್ತು ಕಂದಾಯ ಇಲಾಖಾ ಅಧಿಕಾರಿಗಳು ಬೆಳೆ ಸಮೀಕ್ಷೆಯ ಮೇಲ್ವಿಚಾರಕರಾಗಿ ರೈತರು ಅಥವಾ ಖಾಸಗಿ ನಿವಾಸಿಗಳು ದಾಖಲಿಸಿದ ಬೆಳೆ ವಿವರಗಳನ್ನು ಪರಿಶೀಲಿಸಿ ದೃಢೀಕರಿಸುವರು. ಬೆಳೆ ಸಮೀಕ್ಷೆಯು ಕೃಷಿ ಇಲಾಖೆಯ ಮುಖಾಂತರ ಜಿಲ್ಲಾಧಿಕಾರಿಗಳ ನೇರ ಉಸ್ತುವಾರಿಯಲ್ಲಿ ಜರುಗುವುದು ಎಂದು ತಿಳಿಸಿದರು.

ಆಕ್ಷೇಪಣೆ ಸಲ್ಲಿಸಬಹುದು : ಬೆಳೆ ಸಮೀಕ್ಷೆ ಕುರಿತು ಆಕ್ಷೇಪಣೆಗಳು ಇದ್ದರೆ ರೈತರು ‘beledarshak’ ಆ್ಯಪ್ ಮೂಲಕ ಅಥವಾ ಖುದ್ದಾಗಿ ಕೃಷಿ, ತೋಟಗಾರಿಕೆ ಅಥವಾ ತಾಲ್ಲೂಕು ತಹಶೀಲ್ದಾರ್ ಇವರ ಕಚೇರಿಗೆ ಆಕ್ಷೇಪಣೆ ಅರ್ಜಿ ಸಲ್ಲಿಸಬಹುದು. ರೈತರು ಆಕ್ಷೇಪಣೆಗಳನ್ನು ಸಲ್ಲಿಸಲು ಅಕ್ಟೋಬರ್ 15 ಕೊನೆಯ ದಿನವಾಗಿರುತ್ತದೆ.
ಮರುಸಮೀಕ್ಷೆ ಆಪ್ ಕೂಡ ಬಿಡುಗಡೆ ಆಗಲಿದ್ದು ಸೂಪರ್‌ವೈಸರ್ ತಿರಸ್ಕರಿಸಿದ ಬೆಳೆ ವಿವರಗಳನ್ನು PRs ಆ್ಯಪ್ ನಲ್ಲಿ ತ್ವರಿತವಾಗಿ ಮರುಸಮೀಕ್ಷೆ ನಡೆಸಲಾಗುವುದು. ಬೆಳ ಸಮೀಕ್ಷೆಗೆ ಸಂಬಂಧಿಸಿದ ಮಾಹಿತಿಗಾಗಿ ರೈತರು ಸಹಾಯವಾಣಿ ಸಂಖ್ಯೆ 18004253553 ಗೆ ಕರೆ ಮಾಡಬಹುದು ಅಥವಾ ಹೆಚ್ಚಿನ ವಿವರಗಳಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರ, ಕೃಷಿ, ಕಂದಾಯ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖಾ ಅಧಿಕಾರಿಗಳನ್ನು ಸಂಪರ್ಕಿಸಬಹುದೆಂದು ತಿಳಿಸಿದರು.

ಸಭೆಯಲ್ಲಿ ಐಎಎಸ್ ಪ್ರೊಬೇಷನರಿ ಅಧಿಕಾರಿ ದೃಷ್ಟಿ ಜೈಸ್ವಾಲ್, ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ, ಕೃಷಿ ಜಂಟಿ ನಿರ್ದೇಶಕಿ ಪೂರ್ಣಿಮಾ, ಇತರೆ ಅಧಿಕಾರಿಗಳು ಹಾಜರಿದ್ದರು.