Wednesday, April 23, 2025
Wednesday, April 23, 2025

Kuvempu University ಕುವೆಂಪು ವಿವಿ ಎನ್ಎಸ್ಎಸ್ ಶಿಬಿರಾರ್ಥಿಗಳಿಂದಪರಿಸರ ಸ್ಚಚ್ಛತಾ ಚಟುವಟಿಕೆ

Date:

Kuvempu University ಎನ್.ಎಸ್.ಎಸ್. ಸ್ವಯಂ ಸೇವಕರು ಶಿಬಿರಗಳಲ್ಲಿ ಪಾಲ್ಗೊಳ್ಳುವ ಮೂಲಕ, ದೈನಂದಿನ ಜೀವನಕ್ಕೆ ಬೇಕಾದ ಶಿಸ್ತು, ನಡವಳಿಕೆ, ನಾಯಕತ್ವ ಗುಣಗಳ ಜೊತೆಗೆ ಪರಿಸರ ಸ೦ರಕ್ಷಣಾ ಕಾರ್ಯವನ್ನೂ ಮಾಡುತ್ತಾರೆ. ಪ್ಲಾಸ್ಟಿಕ್ ಬಳಕೆಯಿಂದಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ, ಗಿಡ ನೆಡುವುದಲ್ಲದೇ ಅವುಗಳ ಪೋಷಣೆ, ಸ್ವಚ್ಛತೆ, ಆರೋಗ್ಯದ ಮಹತ್ವ ಮುಂತಾದ ವಿಷಯಗಳ ಕುರಿತು ತಾವು ತಿಳಿದುಕೊಂಡು ಇತರರಿಗೂ ಅರಿವು ಮೂಡಿಸುವ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಬಿ.ಪಿ.ವೀರಭದ್ರಪ್ಪ ಕುವೆ೦ಪು ವಿಶ್ವವಿದ್ಯಾಲಯ ಮಟ್ಟದ ಅಂತರ್ ಕಾಲೇಜು ಎನ್.ಎಸ್.ಎಸ್. ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಾ ಹೇಳಿದರು.

ವಿಶ್ವವಿದ್ಯಾಲಯ ಮಟ್ಟದ ಈ ಶಿಬಿರದಲ್ಲಿ ವಿಶ್ವವಿದ್ಯಾಲಯ ಆವರಣ, ಭದ್ರಾ ಡ್ಯಾಮ್ ಆವರಣದಲ್ಲಿ ಪ್ಲಾಸ್ಟಿಕ್ ಆಯುವ ಮೂಲಕ ಪರಿಸರವನ್ನು ಉತ್ತಮಗೊಳಿಸಿದ್ದಾರೆ ಎಂದರು.

Kuvempu University ಕುವೆಂಪು ವಿ.ವಿ. ಎನ್.ಎಸ್.ಎಸ್. ವಿಭಾಗವು ರಾಷ್ಟ್ರ ಮಟ್ಟದ ಶಿಬಿರಗಳನ್ನು ಅತ್ಯುತ್ತಮವಾಗಿ ಆಯೋಜಿಸುವ ಮೂಲಕ ದೇಶದ ಇತರ ವಿಶ್ವವಿದ್ಯಾಲಯಗಳಿಗೆ ಮಾದರಿಯಾಗಿದೆ ಎಂದು ತಿಳಿಸಿದರು.

ಸಮಾರಂಭದ ಮುಖ್ಯ ಅತಿಥಿಗಳಾಗಿದ್ದ ಪ್ರೊ.ನವೀನ್‌ಕುಮಾರ್ ಎಸ್. ಕೆ., ಕುಲಸಚಿವರು(ಪರೀಕ್ಷಾ೦ಗ), ಮಾತನಾಡಿ, ಎನ್.ಎಸ್.ಎಸ್. ಸ್ವಯ೦ ಸೇವಕರು ಕೇವಲ ಪಠ್ಯಕ್ರಮಕ್ಕೆ ಸೀಮಿತರಾಗದೇ ಸಮಾಜಮುಖಿ ಕಾರ್ಯಗಳಲ್ಲೂ ತೊಡಗಿಕೊಂಡು ತಾವು ಬೆಳೆಯುವುದರ ಜೊತೆಜೊತೆಗೆ ಜನತೆ ಸರಿದಾರಿಯಲ್ಲಿ ನಡೆಯವಂತೆ ಪ್ರೇರೇಪಿಸುತ್ತಾರೆ ಎಂದರು.

ಶಿಬಿರದ ಸಮಾರೋಪ ಭಾಷಣ ಮಾಡಿದ ಎನ್.ಎಸ್.ಎಸ್. ಕಾರ್ಯಕ್ರಮ ಸ೦ಯೋಜನಾಧಿಕಾರಿ ಡಾ. ನಾಗರಾಜ ಪರಿಸರ, ಶಿಬಿರದಲ್ಲಿ ಮಾತನಾಡಿ ಎನ್.ಎಸ್.ಎಸ್. ಸ್ವಯ೦ಸೇವಕರ ಸರ್ವತೋಮುಖ ಅಭಿವೃದ್ಧಿಗೆ ಅಗತ್ಯವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಎಲ್ಲಾ ಶಿಬಿರಾರ್ಥಿಗಳು ಸಕ್ರೀಯವಾಗಿ ಪಾಲ್ಗೊಳ್ಳುವುದರ ಮೂಲಕ ಶಿಬಿರವನ್ನು ಯಶಸ್ವಿಗೊಳಿಸಿದ್ದಾರೆ.

ಮುಖ್ಯವಾಗಿ ವಿಶ್ವವಿದ್ಯಾಲಯ ಆವರಣ, ಭದ್ರಾ ಡ್ಯಾಮ್ ಆವರಣದಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡು ಪ್ಲಾಸ್ಟಿಕ್ ಆಯುವ ಮೂಲಕ ಪರಿಸರವನ್ನು ಉತ್ತಮಗೊಳಿಸುವಲ್ಲಿ ಶ್ರಮಿಸಿದ್ದಾರೆ. ಅಂದಾಜು 60 ಬ್ಯಾಗುಗಳಷ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿ ಗ್ರಾಮ ಪಂಚಾಯತಿಗೆ ನೀಡಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ವಿಶ್ವ ತಂಬಾಕು ರಹಿತ ದಿನದ ಆಚರಣೆ ಹಿನ್ನೆಲೆಯಲ್ಲಿ ತ೦ಬಾಕು ಸೇವನೆಯಿ೦ದ ಆಗುವ ದುಷ್ಪರಿಣಾಮಗಳನ್ನು ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಎಸ್.ಎಂ.ಆರ್. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಧರ್ಮೇಗೌಡ ಇವರು ಮಾತನಾಡಿ, ಈ ಶಿಬಿರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಶಿಬಿರದ ಶಿಸ್ತಿಗೆ ಬದ್ಧರಾಗಿ, ಮಾದರಿ ಶಿಬಿರವನ್ನಾಗಿ ಯಶಸ್ವಿಗೊಳಿಸಿದ್ದಾರೆ ಎಂದರು.

ಡಾ. ಶರಣ್ ನಾಯ್ಕ ಅವರು ಶಿಬಿರದ ಸಮಗ್ರ ವರದಿಯನ್ನು ವಾಚಿಸಿದರು. ಶ್ರೀ ಹರ್ಷ ಅವರು ಸ್ವಾಗತಿಸಿದರು. ಶ್ರಿ ಶರತ್ ಅವರು ಎಲ್ಲರನ್ನೂ ವ೦ದಿಸಿದರು. ಶ್ರೀ ಲಕ್ಷ್ಮಣ ಕೆ., ಕಾರ್ಯಕ್ರಮ ನಿರೂಪಿಸಿದರು.

ದಿನಾಂಕ: 25-05-2023 ರಿಂದ 31-05-2023 ರವರೆಗೆ ವಿಶ್ವವಿದ್ಯಾಲಯ ಆವರಣ, ಜ್ಞಾನ ಸಹ್ಯಾದ್ರಿ ಶಂಕರಘಟ್ಟ ಇಲ್ಲಿ ನಡೆದ ಕುವೆಂಪು ವಿಶ್ವವಿದ್ಯಾಲಯ ಮಟ್ಟದ ಈ ಶಿಬಿರದಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ವಿವಿಧ ಕಾಲೇಜುಗಳ 170 ಸ್ವಯಂ ಸೇವಕರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa ಎಲ್ಲಾ ತಾಲ್ಲೂಕುಗಳಲ್ಲಿ ಜನಸ್ಪಂದನ ಕಾರ್ಯಕ್ರಮ- ಮಧು ಬಂಗಾರಪ್ಪ

Madhu Bangarappa ಜನರ ಸಮಸ್ಯೆಗಳನ್ನು ಆಲಿಸಿ, ಶೀಘ್ರ ಪರಿಹಾರ ದೊರಕಿಸಲು...

Fisheries project 2024-25ನೇ ಸಾಲಿನ ಮತ್ಸ್ಯಸಂಪದ ಯೋಜನೆಗೆ ಅರ್ಹರಿಂದ ಅರ್ಜಿ ಆಹ್ವಾನ

Fisheries project 2024-25 ನೇ ಸಾಲಿನ ಪ್ರಧಾನ ಮಂತ್ರಿ ಮತ್ಯ್ಸ ಸಂಪದ...

Ravi Telex ಪತ್ರಕರ್ತ‌ “ಟೆಲೆಕ್ಸ್ ರವಿ ” ಗೆ ಅಬ್ದುಲ್ಲ ಮಾದುಮೂಲೆ ದತ್ತಿ ಪ್ರಶಸ್ತಿ

Ravi Telex ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ದಿ ಸಂಘದ...

Inner Wheel East Shimoga ಆಶ್ರಮವಾಸಿಗಳ ಸೇವೆ ,ದೇವರ ಸೇವೆಗೆ ಸಮ- ವಾಗ್ದೇವಿ ಬಸವರಾಜ್

Inner Wheel East Shimoga ಆಶ್ರಮವಾಸಿಗಳ ಸೇವೆ ದೇವರ ಸೇವೆಗೆ ಸಮಾನ....