Tuesday, March 31, 2026
Tuesday, March 31, 2026
Home Blog Page 584

Klive Special Article ಕೆ ಲೈವ್ ವಿಶೇಷ. ನೃತ್ಯಗುರು ಸಹನಾ ಚೇತನಾ ನಾಟ್ಯಾರಾಧನಾ 13

0

ಲೇ: ಡಾ.ಮೈತ್ರೇಯಿ ಆದಿತ್ಯ ಪ್ರಸಾದ್.

Klive Special Article ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಕಲೆಗಳಿಗೆ ಹೆಚ್ಚು ಪ್ರೋತ್ಸಾಹ ನೀಡುವಂತಹ ಶಿವಮೊಗ್ಗ ಸ್ವತಃ ತಾನೂ ಕೂಡ ಅತ್ಯಂತ ಶ್ರೇಷ್ಠ ಮಹನೀಯರನ್ನು ಹೊಂದಿದೆ. ಕಲೆ, ಸಾಹಿತ್ಯ, ನೃತ್ಯ, ಯಕ್ಷಗಾನ, ನಾಟಕ ಹೀಗೆ ಎಲ್ಲ ಪ್ರಕಾರಗಳಲ್ಲೂ ತನ್ನದೇ ಆದ ವಿಶಿಷ್ಟ ಕೊಡುಗೆಯನ್ನು ಎಲ್ಲ ರಂಗಕ್ಕೂ ನೀಡುತ್ತಲೇ ಬಂದಿದೆ. ಶಿವಮೊಗ್ಗದಿಂದ ಹೊರಹೊಮ್ಮಿದ ಪ್ರತಿಭೆಗಳು ಜಗದಗಲ ತಮ್ಮ ವಿಶಿಷ್ಟ ಛಾಪನ್ನು ಮೂಡಿಸಿದ್ದಾರೆಂದರೆ ತಪ್ಪಾಗಲಾರದು. ಈ ಶಿವಮೊಗ್ಗ ಹೇಗೆ ಇಲ್ಲಿನ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತದೆಯೋ ಹಾಗೆ ಹೊರಗಿನಿಂದ ಬದವರಿಗೂ ಸಹ ನೀಡುತ್ತಲೇ ಬಂದಿದೆ ಎಂದರೆ ತಪ್ಪಾಗಲಾರದು.
Klive Special Article ಅದೇ ರೀತಿಯಲ್ಲಿ ಶಿವಮೊಗ್ಗ ಅನೇಕ ಪ್ರತಿಭೆಗಳ ಜನ್ಮತಾಣವಾಗಿ ಮಾರ್ಪಡಾಗುವಲ್ಲಿ ಇಲ್ಲಿನ ಹಿರಿಯ ಗುರುಗಳ ಮಾರ್ಗದರ್ಶನ ಬಹುಮುಖ್ಯ. ಆ ನಿಟ್ಟಿನಲ್ಲಿ ನೃತ್ಯದ ಆಸಕ್ತಿಯ ಪ್ರತಿಭೆಗಳನ್ನು ಎಲ್ಲೆಡೆ ಪರಿಚಯಿಸುವ ಕಾರ್ಯ ಮಾಡುತ್ತಿರುವುದರಲ್ಲಿ ಶಿವಮೊಗ್ಗದ ಸಹಚೇತನ ನಾಟ್ಯಾಲಯ ಕೂಡ ಒಂದಾಗಿದೆ. ಇಲ್ಲಿನ ನೃತ್ಯಗುರು ಶ್ರೀಮತಿ ಸಹನಾ ಚೇತನ್ ಅವರು ತಮ್ಮ ಹೊಸರೀತಿಯ ಆಲೋಚನೆಗಳಿಂದ ಕ್ರಿಯಾತ್ಮಕ ಕ್ರಿಯಾಶೀಲಭರಿತರಾಗಿ ಹಲವಾರು ನೃತ್ಯರೂಪಕಗಳನ್ನು ಸಂಯೋಜಿಸಿ ನಿರ್ಮಿಸಿದ್ದಾರೆ. ಅದರಲ್ಲಿ ಡಿ. ವಿ. ಜಿ ಯವರ ಅಂತಃಪುರ ಗೀತೆಗಳು, ಕುವೆಂಪುರವರ ಕಲಾಸುಂದರಿ, ವಚನ ಸಾಹಿತ್ಯದ ಮಹಾದೇವಿಯ ದಕ್ಷಿಣಾರ್ಧತೆ ತಪಸ್ವಿನಿ ಹಿಂದಿ ಸಾಹಿತ್ಯದ ಕವಿಕೇಶವ ದಾಸರ ಋತುರಂಗ ರಾಮಾಯಣ ಮಹಾಭಾರತ ಕಾವ್ಯಗಳು ಫ್ಯೂಶನ್ ಶಾಸ್ತ್ರೀಯ ಹಾಗೂ ಪಾಸ್ತಾತ್ಯ ನೃತ್ಯ ಶೈಲಿಗಳ ಸಮ್ಮಿಲನಗಳು ಸೇರಿದಂತೆ ವಿಶೇಷ ನೃತ್ಯ ರೂಪಗಳಾದ ಕರುಣೆಗೆ ಜೈ ಹಾಗೂ ಹೂವಿನ ಹಾಡು ಹಲವು ಪ್ರದರ್ಶನಗಳನ್ನು ಕಂಡಿವೆ. ಕಳೆದ 24 ವರ್ಷಗಳಿಂದ ಸಹಚೇತನ ನಾಟ್ಯಾಲಯ ಸಾಂಪ್ರದಾಯಿಕ ನೃತ್ಯ ಶೈಲಿಗಳನ್ನು ಕಾಪಾಡಿಕೊಂಡು ಬರುವುದರ ಜೊತೆಗೆ, ಅದರ ಉನ್ನತಿ ಮತ್ತು ಏಳಿಗೆಗಾಗಿ ಶ್ರಮಿಸುವುದು ಹಾಗೂ ಶಾಸ್ತ್ರೀಯ ಸಂಪ್ರದಾಯಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಜೊತೆಗೆ ಪ್ರಾದೇಶಿಕ ನೃತ್ಯ ಶೈಲಿಯಲ್ಲಿ ಪರಿಣತಿ ಹಾಗೂ ಪಾಂಡಿತ್ಯ ಹೆಚ್ಚಿಸಿ ಕರ್ನಾಟಕದ ಇತರೆ ಪ್ರದೇಶಗಳಲ್ಲಿ ಸಾಂಪ್ರದಾಯಿಕ ನೃತ್ಯ ಕಲೆ ಪ್ರಚಾರ ಮಾಡುವುದು ಈ ನಾಟ್ಯಾಲಯದ ಆಶಯವಾಗಿದೆ. ವಿಶೇಷವಾಗಿ ಗ್ರಾಮೀಣ ಹಾಗೂ ಹಿಂದುಳಿದ ಮಕ್ಕಳು, ಸರ್ಕಾರಿ ಶಾಲಾ ಮಕ್ಕಳು, ಮಾಧವ ನೆಲೆಯ ಮಕ್ಕಳು ಇವರುಗಳಲ್ಲಿಯೂ ಸಹ ನೃತ್ಯಗಳನ್ನು ಬೆಳೆಸುವ ಉದ್ದೇಶ ಇದರದ್ದಾಗಿದೆ.
ಸಾಮಾಜಿಕ ಸೇವೆಯ ದೃಷ್ಟಿಯಿಂದ ಹಲೋ ಹಿಂದುಳಿದ ಬಡಾವಣೆಯ ಮಕ್ಕಳಿಗೆ ಉಚಿತ ನೃತ್ಯ ತರಬೇತಿ ನೀಡಿ ಜನವರಿಯಲ್ಲಿ ಭಾರತೀಯಂ ಹೆಸರಿನಡಿಯಲ್ಲಿ ಕಾರ್ಯಕ್ರಮ, ಇದರೊಂದಿಗೆ ಸಮಾಜದಲ್ಲಿ ಪ್ರತಿಮ ಸೇವೆ ಸಲ್ಲಿಸುತ್ತಿರುವ ಸಮಾಜಮುಖಿ ಜೀವಿಗಳಿಗೆ ಅದೇ ತರ ಪುಣ್ಯ ಸ್ಮರಣೆಯ ಅಂಗವಾಗಿ ಅಜಿತಶ್ರೀ ಪುರಸ್ಕಾರ ಪ್ರಶಸ್ತಿ, ಅಲ್ಲದೆ ಕಳೆದ ಹನ್ನೆರಡು ವರ್ಷಗಳಿಂದ ನಿರಂತರವಾಗಿ ನಾಟಿಯರಾಧನಾ ಎನ್ನುವ ರಾಷ್ಟ್ರೀಯ ನೃತ್ಯ ಮಹೋತ್ಸವವನ್ನು ಕೂಡ ನಡೆಸಿಕೊಂಡು ಬಂದಿದ್ದಾರೆ.
ಕಲೆ ಎಲ್ಲರಿಗಾಗಿ ಎನ್ನುವ ಉದ್ದೇಶದಿಂದ ನೃತ್ಯ ಗುರು ಸಹನಾ ಚೇತನ ಅವರು ಈಗಾಗಲೇ 6500ಕ್ಕೂ ಹೆಚ್ಚು ಮಂದಿ ಶಿಷ್ಯರಿಗೆ ತಮ್ಮ ನೃತ್ಯ ಜ್ಞಾನವನ್ನೆರೆದಿದ್ದಾರೆ. ವಿವಿಧ ವೇದಿಕೆಗಳಲ್ಲಿ ತಾವು ಸಹ ನೃತ್ಯ ಮಾಡಿ ತಮ್ಮ ಶಿಷ್ಯರಿಗೂ ನೃತ್ಯ ಮಾಡಿಸಿದ್ದಾರೆ. ಅಲ್ಲದೆ ಕಳೆದ ವರ್ಷ ಉಚಿತ ಸಾಮೂಹಿಕ ರಂಗ ಪ್ರವೇಶ ತಮ್ಮ ಶಿಷ್ಯರಿಗೆ ಮಾಡಿಸಿ ಹೊಸ ಕಾರ್ಯಕ್ಕೆ ನಾಂದಿ ಹಾಡಿದವರಾಗಿದ್ದಾರೆ.
ಸದಾ ಕ್ರಿಯಾಶೀಲರಾಗಿರುವಂತಹ ಇವರು ಈ ಬಾರಿ ಮತ್ತೆ ಅಂತರಾಷ್ಟ್ರೀಯ ನೃತ್ಯ ಮಹೋತ್ಸವಕ್ಕೆ ಸಜ್ಜಾಗಿದ್ದಾರೆ. ಆಗಸ್ಟ್ 30 ಶುಕ್ರವಾರ ಸಂಜೆ 6:30ಕ್ಕೆ ‘ರುದ್ರಾಭಿಸಾರ’ ನಟರಾಜ ಕೀರ್ತನಗಳ ನೃತ್ಯ ಸರಮಾಲೆಯನ್ನು ತಮ್ಮ ನಾಟ್ಯಾಲಯದ ಎಲ್ಲ ವಿದ್ಯಾರ್ಥಿಗಳಿಂದ ಮಾಡಿಸಲಿದ್ದಾರೆ. 31ರ ಶನಿವಾರ ಸಂಜೆ 6:30ಕ್ಕೆ ಶ್ರೀ ಲಲಿತಾಷ್ಟಕದ ನರ್ತನ ರೂಪವಾದ ‘ಲಲಿತಾರ್ಣವ’ ಎಂಬ ನೃತ್ಯ ರೂಪಕವನ್ನು ನೃತ್ಯ ಗುರು ಸಹನಾ ಚೇತನ ಅವರು ಏಕವ್ಯಕ್ತಿ ಪ್ರದರ್ಶನ ನೀಡಲಿದ್ದಾರೆ. ಅಂದೆ ಸಂಜೆ ಏಳಕ್ಕೆ ಹರಿದಾಸರ ಭಕ್ತಿ ಮಾರ್ಗವಾದ ದಾಸರ ದಾಸರ ಪದಗಳಿಂದ ಕೂಡಿದಂತಹ ನಾಟ್ಯ ಲಯದ ಹಿರಿಯ ವಿದ್ಯಾರ್ಥಿಗಳು ನರ್ತಿಸುವ ‘ಹರಿದಾಸ ಕೂಟ’ ವಾದರೆ ಮೂರನೆಯ ಹಾಗೂ ಕೊನೆಯ ದಿನ ಸೆಪ್ಟೆಂಬರ್ 1 ಭಾನುವಾರ ಸಂಜೆ 6.30ಕ್ಕೆ ಚೆನ್ನೈನ ವಿಶ್ವವಿಖ್ಯಾತ ಶ್ರೀದೇವಿ ನೃತ್ಯಲಯ ಇವರಿಂದ ಭರತನಾಟ್ಯ, ಹಾಗೂ ಮಹಾರಾಷ್ಟ್ರದ ಪುರಸ್ಕಾರ ಡಾನ್ಸ್ ಅಕಾಡೆಮಿ ಅವರಿಂದ ಲೋಕ ನೃತ್ಯವನ್ನು ಏರ್ಪಡಿಸಿದ್ದಾರೆ. ಬೇರೆ ಕಡೆಗಳಲ್ಲಿ ಹಣ ಕೊಟ್ಟು ಹೋಗುವಂತಹ ಈ ನೃತ್ಯ ರೂಪಗಳನ್ನು ನಾವಿಲ್ಲಿ ಉಚಿತವಾಗಿ ನೋಡುತ್ತಿರುವುದು ಸಹಚೇತನ ನಾಟ್ಯಾಲಯದ ಈ ಕಾರ್ಯಕ್ರಮಗಳಿಂದ. ಅತಿ ಹೆಚ್ಚಿನ ಜನರು ಇದಕ್ಕೆ ಆಗಮಿಸಿ ಕಣ್ಮನ ಹೃನ್ಮನ ತುಂಬಿಕೊಳ್ಳುವುದನ್ನು ಮರೆಯಬೇಡಿ.

ಡಾ. ಮೈತ್ರೇಯಿ ಆದಿತ್ಯಪ್ರಸಾದ್
ಉಪನ್ಯಾಸಕರು ಪೇಸ್ ಪಿಯು ಕಾಲೇಜ್

DC Shivamogga ಆಹಾರ ಸುರಕ್ಷತೆ ಬಗ್ಗೆ ಡೀಸಿ ಅವರಿಂದ ಮಹತ್ವದ ಸಭೆ. ಗ್ರಾಹಕರ ಹಿತರಕ್ಷಿಸಲು ಸೂಚನೆ

0

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಆಹಾರ ಕಲಬೆರಕೆ ತಡೆಗಟ್ಟುವ ಕುರಿತು ವ್ಯಾಪಕವಾಗಿ ದಾಳಿಗಳನ್ನು ನಡೆಸಿ, ಪ್ರಕರಣ ದಾಖಲಿಸಬೇಕೆಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬುಧವಾರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಗ್ರಾಹಕರ ಸಂರಕ್ಷಣಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಮಾರುಕಟ್ಟೆ ಹಾಗೂ ಯಾವುದೇ ಕ್ಷೇತ್ರದಲ್ಲಿ ಗ್ರಾಹಕರಿಗೆ ಅನಾನುಕೂಲವಾಗದಂತೆ ಕ್ರಮ ವಹಿಸುವಂತೆ ಸಂಬAಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
DC Shivamogga ಆಹಾರ ಕಲಬೆರಕೆಯ ಕುರಿತು ಸಾಕಷ್ಟು ದೂರುಗಳು ಬರುತ್ತಿದ್ದು ಆಹಾರ ಕಲಬೆರಕೆ ತಡೆಟ್ಟುವ ಕೆಲಸ ಆಗಬೇಕು. ಅನಿರೀಕ್ಷಿತ ದಾಳಿಗಳನ್ನು ನಡೆಸಬೇಕು ಎಂದು ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ಗ್ರಾಹಕ ರಕ್ಷಣಾ ಪರಿಷತ್ ಸದಸ್ಯರಾದ ಕೆ.ಎನ್.ವೆಂಕಟಗಿರಿ ಮಾತನಾಡಿ, ಇಂಟರ್‌ನೆಟ್ ಕೇಂದ್ರಗಳಲ್ಲಿ ಪಹಣಿ ಮತ್ತಿತರೆ ದಾಖಲೆಗಳನ್ನು ಪಡೆಯುವ ವೇಳೆ ಸಾರ್ವಜನಿಕರಿಂದ ಹೆಚ್ಚುವರಿ ಶುಲ್ಕವನ್ನು ಪಡೆಯಲಾಗುತ್ತಿದೆ. ಆದ್ದರಿಂದ ಶುಲ್ಕ ವಿವರದ ಬೋರ್ಡ್ನ್ನು ಪ್ರದರ್ಶಿಸಬೇಕು. ಹಾಗೂ ಸಕಾಲ ಕುರಿತು ಕಾನೂನು, ಎಸ್‌ಓಪಿ ಇದ್ದರೂ ವಿವಿಧ ಇಲಾಖೆಗಳಲ್ಲಿ ಸಮರ್ಪಕವಾಗಿ ಅನುಷ್ಟಾನ ಆಗುತ್ತಿಲ್ಲವೆಂದು ದೂರಿದರು.
ಜಿಲ್ಲಾಧಿಕಾರಿಗಳು, ಇಂಟರ್‌ನೆಟ್ ಕೇಂದ್ರಗಳಲ್ಲಿ ತಾವು ನೀಡುವ ಸೇವೆಗಳ ಶುಲ್ಕದ ವಿವರವಿರುವ ಫಲಕ ಪ್ರದರ್ಶಿಸಬೇಕು, ಇಲ್ಲವಾದಲ್ಲಿ ಪರವಾನಗಿ ರದ್ದುಗೊಳಿಸಲಾಗುವುದು. ಸಕಾಲವನ್ನು ಗಮನಿಸಲಾಗುತ್ತಿದೆ. ಸುಸೂತ್ರವಾಗಿ ನಡೆಯುತ್ತಿದೆ. ಎಲ್ಲಿ ಸಮರ್ಪಕವಾಗಿ ಅನುಷ್ಟಾನವಾಗುತ್ತಿಲ್ಲವೋ ಅಂತಹ ಪ್ರಕರಣಗಳು ಕಂಡು ಬಂದಲ್ಲಿ ನನಗೆ ತಿಳಿಸಿ, ಕ್ರಮ ಕೈಗೊಳ್ಳುತ್ತೇನೆ.
ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಕುಡಿಯುವ ನೀರು, ತಂಪು ಪಾನೀಯಗಳು, ಬಿಸ್ಕತ್ತು, ಚಾಕಲೇಟುಗಳಿಗೆ ಗ್ರಾಹಕರಿಂದ ಹೆಚ್ಚುವರಿಯಾಗಿ ಹಣ ಪಡೆದುಕೊಳ್ಳುತ್ತಿರುವ ಬಗ್ಗೆಯೂ ದೂರುಗಳು ಬಂದಿದ್ದು, ಈ ಬಗ್ಗೆ ತಪಾಸಣೆ ನಡೆಸಿ ದಂಡ ವಿಧಿಸುವಂತೆ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕರಿಗೆ ಸೂಚನೆ ನೀಡಲಾಯಿತು.
ಭದ್ರಾವತಿ ತಾಲ್ಲೂಕಿನಲ್ಲಿ ಬೆಲ್ಲ ತಯಾರಿಕಾ ಘಟಕಗಳಲ್ಲಿ ಬೆಲ್ಲ ತಯಾರಿಸಲು ರಾಸಾಯನಿಕ ವಸ್ತುಗಳನ್ನು ಬಳಕೆ ಮಾಡಲಾಗುತ್ತಿದೆ ಎನ್ನುವ ದೂರುಗಳಿದ್ದು ಈ ಕುರಿತು ಪರಿಶೀಲನೆ ನಡೆಸಿ ಕ್ರಮ ವಹಿಸಲು ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಿಲ್ದಾಣಗಳಲ್ಲಿ ಶೌಚಾಲಯಗಳ ಬಳಕೆಗೆ ಹೆಚ್ಚುವರಿ ಶುಲ್ಕ ವಸೂಲಾತಿ ಮಾಡುತ್ತಿರುವ ಕುರಿತು ಹಾಗೂ ಕಾರ್ಗೋ ಸೇವೆಗಳಿಗೂ ಹೆಚ್ಚುವರಿ ಮೊತ್ತ ವಸೂಲಿ ಮಾಡುತ್ತಿರುವ ಕುರಿತು ದೂರುಗಳು ಸ್ವೀಕಾರಗೊಂಡಿದ್ದು ಈ ಬಗ್ಗೆ ಸೂಕ್ತ ವಿಚಾರಣೆ ನಡೆಸಿ ತಪ್ಪಿತಸ್ಥರಿಗೆ ಶಿಸ್ತು ಕ್ರಮವನ್ನು ತೆಗೆದುಕೊಳ್ಳಬೇಕೆಂದು ಕೆಎಸ್‌ಆರ್‌ಟಿಸಿ ನಿಗಮದ ಅಧಿಕಾರಿಗಳಿಗೆ ಸೂಚಿಸಿದರು.
ಹೋಟೆಲ್ ಹಾಗೂ ಫಾಸ್ಟ್ ಫುಡ್ ತಯಾರಿಕಾ ಅಂಗಡಿಗಳಲ್ಲಿ ನಿಷೇಧಿತ ಆಹಾರಗಳ ಬಣ್ಣಗಳನ್ನು ಬಳಸುತ್ತಿರುವ ಬಗ್ಗೆ ಹಾಗೂ ಅತಿ ಹೆಚ್ಚು ಅಜಿನೋ ಮೋಟೋ ಮತ್ತು ಟೇಸ್ಟಿಂಗ್ ಪೌಡರ್ ಬಳಕೆ ಮಾಡುತ್ತಿರುವ ಬಗ್ಗೆ ಸೂಕ್ತ ತಿಳುವಳಿಕೆ ನೀಡಿ ಹೋಟೆಲ್ ಮಾಲೀಕರು ಹಾಗೂ ಗ್ರಾಹಕರಿಗೆ ಜಾಗೃತಿ ಮೂಡಿಸುವಂತೆ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
ಮೆಡಿಕಲ್ ಸ್ಟೋರ್‌ಗಳು ಮತ್ತು ಜನೌಷಧ ಕೇಂದ್ರಗಳಲ್ಲಿ ಅಗತ್ಯ ಔಷಧಿಗಳು ಕಳಪೆ ಗುಣಮಟ್ಟದಿಂದ ಕೂಡಿರುವ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪಣೆಗಳು ಕೇಳಿ ಬರುತ್ತಿದ್ದು ನಿಯಮಿತ ತಪಾಸಣೆ ಮತ್ತು ಅನಿರೀಕ್ಷಿತ ದಾಳಿಗಳನ್ನು ನಡೆಸುವಂತೆ ಸಹಾಯಕ ಔಷಧ ನಿಯಂತ್ರಕರಿಗೆ ತಿಳಿಸಿದರು.
ಆಹಾರ ಮತ್ತು ಗ್ರಾಹಕರ ಸರಬರಾಜು ಇಲಾಖೆ ಉಪ ನಿರ್ದೇಶಕ ಅವಿನ್, ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕರಾದ ರಾಜು, ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು, ಗ್ರಾಹಕ ರಕ್ಷಣಾ ಪರಿಷತ್ ಸದಸ್ಯರಾದ ಕೆ.ಎನ್.ವೆಂಕಟಗಿರಿ, ಎಂ.ಎಂ.ಜಯಸ್ವಾಮಿ, ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

National Sports Day ಭಾರತದ ಹಾಕಿ ಕ್ರೀಡೆಗೆ ಕೋಡು ಮೂಡಿಸಿದ ಹರಿಕಾರ, ಧ್ಯಾನ್ ಚಂದ್-ಎಸ್.ಎಚ್.ಸುರೇಶ್

0

National Sports Day ವಿಶ್ವ ಮಟ್ಟದಲ್ಲಿ ಭಾರತದ ಹಾಕಿ ತಂಡವನ್ನು ಗುರುತಿಸುವಂತೆ ಮಾಡಿದ ಶ್ರೇಷ್ಠ ಆಟಗಾರ ಎಂದರೆ ಅದು ಧ್ಯಾನಚಂದ್ ಎಂದು ಬಿಜಿಎಸ್ ಶಾಲಾ ಕಾಲೇಜಿನ ಪ್ರಾಂಶುಪಾಲರಾದ ಸುರೇಶ್ ಎಸ್. ಹೆಚ್.ತಿಳಿಸಿದರು.
ಅವರು ಗುರುಪುರದ ಬಿಜಿಎಸ್ ಶಾಲಾ ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿದ್ದ ಧ್ಯಾನ್ ಚಂದ್ ಅವರ 119ನೇ ಜನ್ಮದಿನದ ನಿಮಿತ್ತ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಆಚರಿಸಿ ಮಾತನಾಡಿದ ಅವರು ದೇಶದ ಕೀರ್ತಿಯನ್ನು ಹೆಚ್ಚಿಸಿದ ಧ್ಯಾನ್ ಚಂದ್ National Sports Day ಅವರು ಒಲಂಪಿಕ್ ನಲ್ಲಿ ಸಾಲು ಸಾಲು ಚಿನ್ನದ ಪದಕ ತಂದುಕೊಟ್ಟು ದೇಶದ ಕೀರ್ತಿ ಹೆಚ್ಚಿಸಿದ್ದಾರೆ ಎಂದರು.
ಆಗಸ್ಟ್ 29ರಂದು ಸ್ಮರಿಸುವುದರ ಜೊತೆಗೆ, ಕ್ರೀಡಾ ರಂಗದ ಬಗ್ಗೆ ಅವಲೋಕನ ಮಾಡುವ ದಿನ ಇದಾಗಿದೆ. ಇತ್ತೀಚಿಗೆ ದೇಶದ ಅತ್ಯುನ್ನತ ಕ್ರೀಡಾ ಪುರಸ್ಕಾರ ಖೇಲ್ ರತ್ನಕ್ಕೆ ಅವರ ಹೆಸರಿಂದ ಕೊಡುತ್ತಿರುವುದು ಹೆಮ್ಮೆಯ ವಿಚಾರ ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಸಂಯೋಜಕರಾದ ಮಾಲತೇಶ್, ಶಿಕ್ಷಕರಾದ ಹರೀಶ್, ವಿಶ್ವನಾಥ್, ಶ್ರೀಮತಿ ಚಂದ್ರಿಕಾ, ಗೀತಾ, ರಾ. ಹ. ತಿಮ್ಮೇನಹಳ್ಳಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Dhyan Chand ಆಹಾರ ಸುರಕ್ಷತೆ ಬಗ್ಗೆ ಡೀಸಿ ಅವರಿಂದ ಮಹತ್ವದ ಸಭೆ. ಗ್ರಾಹಕರ ಹಿತ ರಕ್ಷಿಸಲು ಸೂಚನೆ

0

Dhyan Chand ವಿಶ್ವ ಮಟ್ಟದಲ್ಲಿ ಭಾರತದ ಹಾಕಿ ತಂಡವನ್ನು ಗುರುತಿಸುವಂತೆ ಮಾಡಿದ ಶ್ರೇಷ್ಠ ಆಟಗಾರ ಎಂದರೆ ಅದು ಧ್ಯಾನಚಂದ್ ಎಂದು ಬಿಜಿಎಸ್ ಶಾಲಾ ಕಾಲೇಜಿನ ಪ್ರಾಂಶುಪಾಲರಾದ ಸುರೇಶ್ ಎಸ್. ಹೆಚ್.ತಿಳಿಸಿದರು.
ಅವರು ಇಂದು ಗುರುಪುರದ ಬಿಜಿಎಸ್ ಶಾಲಾ ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿದ್ದ ಧ್ಯಾನ್ ಚಂದ್ ಅವರ 119ನೇ ಜನ್ಮದಿನದ ನಿಮಿತ್ತ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಆಚರಿಸಿ ಮಾತನಾಡಿದ ಅವರು ದೇಶದ ಕೀರ್ತಿಯನ್ನು ಹೆಚ್ಚಿಸಿದ ಧ್ಯಾನ್ ಚಂದ್ ಅವರು ಒಲಂಪಿಕ್ ನಲ್ಲಿ ಸಾಲು ಸಾಲು ಚಿನ್ನದ ಪದಕ ತಂದುಕೊಟ್ಟು ದೇಶದ ಕೀರ್ತಿ ಹೆಚ್ಚಿಸಿದ್ದಾರೆ ಎಂದರು.
Dhyan Chand ಆಗಸ್ಟ್ 29ರಂದು ಸ್ಮರಿಸುವುದರ ಜೊತೆಗೆ, ಕ್ರೀಡಾ ರಂಗದ ಬಗ್ಗೆ ಅವಲೋಕನ ಮಾಡುವ ದಿನ ಇದಾಗಿದೆ. ಇತ್ತೀಚಿಗೆ ದೇಶದ ಅತ್ಯುನ್ನತ ಕ್ರೀಡಾ ಪುರಸ್ಕಾರ ಖೇಲ್ ರತ್ನಕ್ಕೆ ಅವರ ಹೆಸರಿಂದ ಕೊಡುತ್ತಿರುವುದು ಹೆಮ್ಮೆಯ ವಿಚಾರ ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಸಂಯೋಜಕರಾದ ಮಾಲತೇಶ್, ಶಿಕ್ಷಕರಾದ ಹರೀಶ್, ವಿಶ್ವನಾಥ್, ಶ್ರೀಮತಿ ಚಂದ್ರಿಕಾ, ಗೀತಾ, ರಾ. ಹ. ತಿಮ್ಮೇನಹಳ್ಳಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Dhyan Chand ಕ್ರೀಡಾಲೋಕದ ದಂತಕತೆ “ಧ್ಯಾನ್ ಚಂದ್”

0

Dhyan Chand ಕ್ರೀಡಾ ಲೋಕದ ದಂತಕಥೆ ಮೇಜರ್ ಧ್ಯಾನ್‌ಚಂದ್ ಅವರ ಜನ್ಮ ದಿನದ ಅಂಗವಾಗಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ
ಭಾರತದ ಹಾಕಿ ದಂತಕತೆ, ಶ್ರೇಷ್ಠ ಹಾಕಿ ಆಟಗಾರ ಮೇಜರ್ ಧ್ಯಾನ್ ಚಂದ್ ಅವರ ಸ್ಮರಣಾರ್ಥ ಪ್ರತಿ ವರ್ಷ ಆಗಸ್ಟ್ 29 ರಂದು ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಣೆ ಮಾಡಲಾಗುತ್ತದೆ. ರಾಷ್ಟ್ರೀಯ ಕ್ರೀಡಾ ದಿನವನ್ನು ಭಾರತದಲ್ಲಿ ಮೊದಲ ಬಾರಿಗೆ 2012 ರಲ್ಲಿ ಆಚರಿಸಲಾಯಿತು. ಅದೇ ವರ್ಷ ರಾಷ್ಟ್ರೀಯ ಕ್ರೀಡಾ ದಿನವನ್ನು ರಾಷ್ಟ್ರೀಯ ದಿನಗಳ ಪಟ್ಟಿಗೆ ಸೇರಿಸಲಾಯಿತು. ಮೇಜರ್ ಧ್ಯಾನ್À ಚಂದ್ ಆಗಸ್ಟ್ 29, 1905 ರಲ್ಲಿ ಅಹಮದಾಬಾದ್‌ನಲ್ಲಿ ಜನಿಸಿದರು. ವಿಶ್ವಕಂಡ ಅಪರೂಪದ, ಅತ್ಯತ್ತಮ ಹಾಕಿ ಆಟಗಾರ ಎಂಬ ಹೆಗ್ಗಳಿಕೆಗೆ ಧ್ಯಾನ್ ಚಂದ್ ಪಾತ್ರರಾಗಿದ್ದರು. ಇವರ ಹುಟ್ಟುಹಬ್ಬವನ್ನು ಪ್ರತಿವರ್ಷ ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಲಾಗುತ್ತದೆ.
Dhyan Chand ಮೇಜರ್ ಧ್ಯಾನ್ ಚಂದ್ ಸಿಂಗ್ (1905-1979) ಅವರು ತಮ್ಮ ವಿಶಿಷ್ಟ ಸಾಧನೆಗಳೊಂದಿಗೆ ಇದುವರೆಗೆ ಶ್ರೇಷ್ಠ ಫೀಲ್ಡ್ ಹಾಕಿ ಆಟಗಾರ, ಗಾಲ್ಫ್ ಆಟದಲ್ಲೂ ಅಸಾಧಾರಣ ಕೌಶಲ್ಯಗಳೊಂದಿಗೆ ದಶಕಗಳವರೆಗೆ ಕ್ರೀಡೆಯಲ್ಲಿ ಪ್ರಾಬಲ್ಯ ಸಾಧಿಸಿದ್ದರು. ಅವರು 1928, 1932, ಮತ್ತು 1936 ರಲ್ಲಿ ಸತತ ಮೂರು ಒಲಿಂಪಿಕ್ ಚಿನ್ನದ ಪದಕಗಳನ್ನು ಗಳಿಸಿದ ಭಾರತೀಯ ಹಾಕಿ ತಂಡದ ನಾಯಕರಾಗಿದ್ದರು. ಮೈದಾನದಲ್ಲಿನ ಅವರ ಕ್ರೀಡಾ ಕೌಶಲ್ಯಕ್ಕೆ ಅವರಿಗೆ “ಹಾಕಿ ಮಾಂತ್ರಿಕ” ಎಂಬ ಹೆಸರು ತಂದುಕೊಟ್ಟಿದ್ದು, ಅವರ ಕ್ರೀಡಾ ಕೌಶಲ್ಯ ಭಾರತದಾದ್ಯಂತ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡುತ್ತಿದೆ.
ಒಲಂಪಿಕ್ ಹಾಕಿಯಲ್ಲಿ 8 ಬಾರಿ ಚಿನ್ನ ಗೆದ್ದ ಭಾರತ:
ಒಲಿಂಪಿಕ್ಸ್ನಲ್ಲಿ ಭಾರತದ ಹಾಕಿ ತಂಡದ ಸಾಧನೆ ಕ್ರೀಡಾ ಇತಿಹಾಸದಲ್ಲಿ ಭಾರತ ತಂಡವು ಇದುವರೆಗೂ 8 ಬಾರಿ ಚಿನ್ನ ಪದಕ ಗೆಲ್ಲುವ ಮೂಲಕ ಹಾಕಿ ಕ್ರೀಡಾ ಇತಿಹಾಸದಲ್ಲಿ ದೊಡ್ಡ ಹೆಸರು ಮಾಡಿದೆ.
ಚಿನ್ನದ ಪದಕ – ಮೊದಲ ಸ್ಥಾನ, 1928 (ಆಂಸ್ಟರ್‌ಡ್ಯಾಮ್),
ಚಿನ್ನದ ಪದಕ – ಮೊದಲ ಸ್ಥಾನ, 1932 (ಲಾಸ್ ಏಂಜಲೀಸ್)
ಚಿನ್ನದ ಪದಕ – ಮೊದಲ ಸ್ಥಾನ, 1936, (ಬರ್ಲಿನ್)
ಚಿನ್ನದ ಪದಕ – ಮೊದಲ ಸ್ಥಾನ, 1948 (ಲಂಡನ್)
ಚಿನ್ನದ ಪದಕ – ಮೊದಲ ಸ್ಥಾನ, 1952 (ಹೆಲ್ಸಿಂಕಿ)
ಚಿನ್ನದ ಪದಕ – ಮೊದಲ ಸ್ಥಾನ, 1956 (ಮೆಲ್ಬೋರ್ನ್)
ಚಿನ್ನದ ಪದಕ – ಮೊದಲ ಸ್ಥಾನ, 1964 (ಟೋಕಿಯೋ)
ಚಿನ್ನದ ಪದಕ – ಮೊದಲ ಸ್ಥಾನ, 1980 (ಮಾಸ್ಕೋ)
ಬೆಳ್ಳಿ ಪದಕ – ಎರಡನೇ ಸ್ಥಾನ, 1960 (ರೋಮ್)
ಕಂಚಿನ ಪದಕ – ಮೂರನೇ ಸ್ಥಾನ, 1968 (ಮೆಕ್ಸಿಕೋ ಸಿಟಿ)
ಕಂಚಿನ ಪದಕ – ಮೂರನೇ ಸ್ಥಾನ, 1972 (ಮ್ಯೂನಿಚ್)
ಕಂಚಿನ ಪದಕ – ಮೂರನೇ ಸ್ಥಾನ, 2020 (ಟೋಕಿಯೊ)
ಕಂಚಿನ ಪದಕ – ಮೂರನೇ ಸ್ಥಾನ, 2024 (ಪ್ಯಾರಿಸ್)
ಒಲಂಪಿಕ್ ಚಿನ್ನದ ನಿರಾಸೆಯೊಂದಿಗೆ ಹೊಸ ಭರವಸೆ:
ಈ ಬಾರಿಯ ಸಮ್ಮರ್ ಒಲಿಂಪಿಕ್ಸ್ನಲ್ಲಿ ಭಾರತದಿಂದ 117 ಮಂದಿ ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಭಾರತ 5 ಕಂಚಿನ ಪದಕ ಮತ್ತೊಂದು ಬೆಳ್ಳಿ ಪದಕ ಸೇರಿದಂತೆ ಒಟ್ಟಾರೆ 6 ಪದಕಗಳ ಗೆಲುವು ಸಾಧಿಸಿದೆ. ಮನು ಭಾಕರ್ ಅವರು ಮಹಿಳೆಯರ 10 ಮೀ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತಕ್ಕೆ ಮೊದಲ ಕಂಚಿನ ಪದಕವನ್ನು ತಂದುಕೊಟ್ಟಿದ್ದಾರೆ ಮತ್ತು ಭಾರತಕ್ಕೆ ಒಲಿಂಪಿಕ್ ಪದಕವನ್ನು ಗೆದ್ದ ಮೊದಲ ಮಹಿಳಾ ಶೂಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ನೀರಜ್ ಚೋಪ್ರಾ, ಮನು ಭಾಕರ್, ಸರಬ್ಜೋತ್ ಸಿಂಗ್, ಸ್ವಪ್ನಿಲ್ ಕುಸಾಲೆ, ಅಮನ್ ಸೆಹ್ರಾವತ್ ಮತ್ತು ಭಾರತೀಯ ಹಾಕಿ ತಂಡ ಸೇರಿದಂತೆ ಒಂದು ಬೆಳ್ಳಿ ಮತ್ತು ಐದು ಕಂಚು ಸೇರಿದಂತೆ ಆರು ಪದಕಗಳಿಗೆ ಕೊಡುಗೆ ನೀಡಿದೆ. ಭಾರತವು ಪ್ಯಾರಿಸ್ 2024 ರ ಒಲಿಂಪಿಕ್ಸ್ನಲ್ಲಿ 71 ನೇ ಸ್ಥಾನದಲ್ಲಿದೆ. 6 ಪದಕಗಳನ್ನು ಗೆಲ್ಲುವ ಮೂಲಕ ಸಂಭ್ರಮಿಸಿದೆ. ಒಲಿಂಪಿಕ್ಸ್ನಲ್ಲಿ ಭಾರತದ ಅಭಿಯಾನವು ಬ್ಯಾಡ್ಮಿಂಟನ್‌ನಲ್ಲಿ ಲಕ್ಷ್ಯ ಸೇನ್, ವೇಟ್‌ಲಿಫ್ಟಿಂಗ್‌ನಲ್ಲಿ ಸೈಖೋಮ್ ಮೀರಾಭಾಯ್ ಚಾನು ಅವರ ಸೋಲು ನಿರಾಶೆಗೊಳಿಸಿದೆ. ಆದರೆ ವಿನೀಶ್ ಪೋಗಟ್ ಮಹಿಳಾ ಕುಸ್ತಿಯಲ್ಲಿ 50 ಕೆಜಿ ಒಲಿಂಪಿಕ್ಸ್ನಲ್ಲಿ ಫೈನಲ್ ತಲುಪಿದ ನಂತರ ಅಧಿಕ ತೂಕದ ಕಾರಣಕ್ಕಾಗಿ ಅನರ್ಹಗೊಂಡ ಕಾರಣಕ್ಕೆ ವಿನೇಶ್ ಚಿನ್ನದ ಪದಕದಿಂದ ವಂಚಿತರಾಗಿದ್ದು ಇಡೀ ದೇಶದ ಜನ ಮಿಡಿಯುವಂತೆ ಮಾಡಿದ್ದು ಎಲ್ಲರೂ ಅವರ ಪರವಾಗಿ ಬೆಂಬಲಕ್ಕೆ ನಿಂತಿದ್ದು ಅಭಿನಂದನೀಯ. ಕನಿಷ್ಠ ಬೆಳ್ಳಿ ಪದಕಕ್ಕಾಗಿ ಸಿಎಎಸ್‌ಗೂ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ.
ಐಸಿಸಿ ಟಿ20 ವಿಶ್ವಕಪ್ ಗೆದ್ದ ಭಾರತ:
ಕ್ರೀಡಾ ಲೋಕದಲ್ಲಿ ಕ್ರಿಕೆಟ್ ಒಂದು ಅತೀ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ಕ್ರೀಡೆಯಾಗಿದೆ. ಭಾರತದ ಪಾಲಿಗೆ ಕ್ರಿಕೆಟ್ ಜನಮಾನಸದಲ್ಲಿ ಮನೆ ಮಾಡಿದೆ ಎಂದರು ತಪ್ಪಾಗಲಾರದು. ಭಾರತದ ಬಿಸಿಸಿಐ ನಡೆಸುವ ಐಪಿಎಲ್ ಕ್ರೀಡಾಕೂಟ ಇಡೀ ಜಗತ್ತನ್ನು ಆಕರ್ಷಿಸುತ್ತದೆ.
ಕ್ರಿಕೆಟ್ ಕ್ರೀಡೆಯಲ್ಲಿ ಭಾರತ ಉತ್ತಮ ಸಾಧನೆಯೊಂದಿಗೆ ಮುಂದೆ ಸಾಗಿದ್ದು ದಕ್ಷಿಣ ಆಫ್ರಿಕಾದ ಆತಿಥ್ಯದಲ್ಲಿ ನಡೆದ 2007ರ ಮೊದಲ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಟ್ರೋಫಿ ಗೆದ್ದಿತ್ತು. ಬಾರ್ಬೆಡೋಸ್‌ನ ಕೆನ್ಸಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ 2024 ರ ಜೂನ್ 29 ರಂದು ನಡೆದ ಟಿ20 ವಿಶ್ವಕಪ್ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ಎದುರು ರೋಹಿತ್ ಶರ್ಮಾ ಬಳಗ 7 ರನ್‌ಗಳ ರೋಚಕ ಜಯ ದಾಖಲಿಸಿ, 2013 ರಿಂದ ಐಸಿಸಿ ಟೂರ್ನಿಗಳಲ್ಲಿ ಭಾರತ ಅನುಭವಿಸಿದ್ದ ಟ್ರೋಫಿ ಗೆಲುವಿನ ನಿರಾಸೆ ಮರೆಯುವಂತೆ ಮಾಡಿತು.
ಭಾರತದ ಕ್ರೀಡಾಕ್ಷೇತ್ರದಲ್ಲಿ ಗ್ರಾಮೀಣ ಭಾಗದ ಪ್ರತಿಭೆಗಳನ್ನು ಗುರುತಿಸಿ ಉತ್ತಮ ತರಬೇತಿಯನ್ನು ನೀಡಬೇಕಾಗಿದೆ. ಹಾಗೂ ಸರ್ಕಾರ ಇನ್ನೂ ಹೆಚ್ಚಿನ ಕ್ರೀಡಾಶಾಲೆಗಳು, ಅಕಾಡೆಮಿಗಳು ಹಾಗೂ ಕ್ರೀಡೆಗೆ ಸಂಬAಧಿಸಿದAತೆ ಕ್ರೀಡಾ ವಿಶ್ವವಿದ್ಯಾಲಯವನ್ನು ತೆರೆಯುವ ಮೂಲಕ ಯುವ ಜನರಲ್ಲಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ದೊರೆಯುವಂತಾದರೆ ಕ್ರೀಡಾ ಕ್ಷೇತ್ರದಲ್ಲಿ ಇನ್ನೂ ಹೆಚ್ಚು ಸಾಧನೆ ಮಾಡಲು ಸಾಧ್ಯವಾಗಲಿದೆ.
-ರಘು ಆರ್.
ಅಪ್ರೆಂಟಿಸ್ ವಾರ್ತಾ ಇಲಾಖೆ.

Power Outage ಆಗಸ್ಟ್ 31 ರಂದು ಆಲ್ಕೊಳ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

0

Power Outage ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಗುವ ಫೀಡರ್ ಎ.ಎಫ್-03 ರಲ್ಲಿ ಮೆಸ್ಕಾಂ ವತಿಯಿಂದ ತುರ್ತು ಕಾಮಗಾರಿ ಇರುವುದರಿಂದ ಆ.31 ರಂದು ಬೆಳಗ್ಗೆ 10.00 ರಿಂದ ಸಂಜೆ 5.00 ರವರೆಗೆ ಈ ವ್ಯಾಪ್ತಿಗೆ ಬರುವ ಎಸ್.ವಿ. ಬಡಾವಣೆ ಎ,ಬಿ.ಎಫ್ ಬ್ಲಾಕ್, ಗುಡ್‌ಲಕ್ ಸರ್ಕಲ್, ಅಮ್ಮ ನಿಲಯ, ಸ್ನೇಹ ಅಪಾರ್ಟ್ಮೆಂಟ್ ಸುತ್ತಮುತ್ತಲಿನ ಪ್ರದೇಶ, ಎಂ.ಎಂ.ಎಸ್. Power Outage ಲೇಔಟ್, ಬೋವಿ ಕಾಲೋನಿ, ವಿಜಯಲಕ್ಷಿö್ಮ ಲೇಔಟ್, ಸೋಮನಾಥ್ ಲೇಔಟ್, ಪುಷ್ಪಗಿರಿ ಲೇಔಟ್ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮಸ್ಕಾಂ ತಿಳಿಸಿದೆ.

19th Asian Selection Tournament ಏಷಿಯನ್ ಸೆಲೆಕ್ಷನ್ ಕರಾಟೆ ಪಂದ್ಯಾವಳಿಯಲ್ಲಿ ಜೀವಾತ್ಮ.ಜಿ.ಬಿರ್ಜೆ ಗೆ ದ್ವಿತೀಯ ಸ್ಥಾನ

0

19th Asian Selection Tournament ಕೇರಳ ರಾಜ್ಯದ ತಿರುವನಂತಪುರದಲ್ಲಿ ಇತ್ತೀಚೇಗೆ ಆಯೋಜಿಸಿದ್ದ 19ನೇ ಏಷಿಯನ್ ಸೆಲೆಕ್ಷನ್ ಟೂರ್ನಮೆಂಟ್‌ನಲ್ಲಿ ಕರಾಟೆ ವಿದ್ಯಾರ್ಥಿ ಜೀವಾತ್ಮ ಜಿ.ಬಿರ್ಜೆ ಸ್ಪರ್ಧಿಸಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಟ್ರೋಫಿ ಹಾಗೂ ಪ್ರಮಾಣ ಪತ್ರ ಪಡೆದಿರುತ್ತಾರೆ.

50-55 ಕೆಜಿ ಸ್ಪರ್ಧಿಗಳ ವಿಭಾಗದಲ್ಲಿ ಸಾಧನೆ ಮಾಡಿರುವ ಜೀವಾತ್ಮ ಜಿ.ಬಿರ್ಜೆ ಅವರು ಶಿವಮೊಗ್ಗದ ಗಾಡಿಕೊಪ್ಪದವರಾಗಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಕನ್ನಡಪ್ರಭ ಪತ್ರಕರ್ತ ಗಿರಿಧರ ಎಂ.ಗಾಡಿಕೊಪ್ಪ ಹಾಗೂ ಶಿಕ್ಷಕಿ ಬಿ.ಎಸ್.ಸರಸ್ವತಿ ಬಾಯಿ ದಂಪತಿ ಪುತ್ರ.

19th Asian Selection Tournament ಫ್ಲಾರೆನ್ಸ್ ಇಂಗ್ಲಿಷ್ ಪಬ್ಲಿಕ್ ಸ್ಕೂಲ್‌ನಲ್ಲಿ 7ನೇ ತರಗತಿ ವಿದ್ಯಾರ್ಥಿಯಾಗಿದ್ದಾರೆ. ಕರಾಟೆ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದ ಜೀವಾತ್ಮ ಜಿ.ಬಿರ್ಜೆ ಅವರ ಸಾಧನೆಗೆ ಡಬ್ಲ್ಯೂಕೆಒ ಇಂಡಿಯಾದ ಕರ್ನಾಟಕ ಇನ್‌ಸ್ಟಕ್ಟçರ್ ಹಾಗೂ ಸ್ಟುಡಿಯೋ ಮಾಸ್ಟರ್ ಬಾಬು ಎಸ್., ಕರ್ನಾಟಕ ಬ್ರಾಂಚ್ ಮುಖ್ಯಸ್ಥ ಫೆರೋಜ್ ಖಾನ್ ಹಾಗೂ ಪೋಷಕರಾದ ಗಿರಿಧರ ಎಂ.ಗಾಡಿಕೊಪ್ಪ, ಸರಸ್ವತಿ ಬಾಯಿ ಅಭಿನಂದಿಸಿದ್ದಾರೆ.

ಜೀವಾತ್ಮ ಅವರು ಬೆಂಗಳೂರಿನ ಆರ್‌ಜಿ ಫಿಟ್‌ನೆಸ್ ಅಂಡ್ ಪರ್ಸನಲ್ ಟ್ರೈನಿಂಗ್ ಸ್ಟುಡಿಯೋದಲ್ಲಿ ಕರಾಟೆ ತರಬೇತಿ ಪಡೆಯುತ್ತಿದ್ದಾರೆ.

University Syndicate members ರಾಜ್ಯದ ವಿವಿಧ ವಿವಿಗಳಿಗೆ ಸಿಂಡಿಕೇಟ್ ಸದಸ್ಯರ ನೇಮಕ

0

University Syndicate members ಸಾಹಿತಿ ಪ್ರೊ ಅಮರೇಶ ನುಗಡೋಣಿ, ಕೆ. ಷರೀಫಾ,‌ ಡಾ. ಬಂಜಗೆರೆ ಜಯಪ್ರಕಾಶ್‌, ಡಾ. ನಟರಾಜ್‌ ಹುಳಿಯಾರ್‌, ನಟರಾಜ ಬೂದಾಳು, ಬಿ. ಪೀರ್‌ ಬಾಷಾ, ಕೆ.ಪಿ. ಶ್ರೀಪಾಲ್, ಚ.ಹ. ರಘುನಾಥ್, ಆಯೆಷಾ ಫರ್ಜಾನಾ, ಎನ್‌ ಎ ಎಂ ಇಸ್ಮಾಯಿಲ್‌, ಡಾ ಎಚ್‌ ಎಸ್‌ ಅನುಪಮಾ, ಸಿದ್ದಪ್ಪ ಮೂಲಗೆ ಸೇರಿದಂತೆ ಹಲವರನ್ನು ವಿವಿಧ ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಸದಸ್ಯರಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.ಸಿಂಡಿಕೇಟ್ ಸದಸ್ಯರಾಗಿ ನೇಮಕಗೊಂಡವರ ಪಟ್ಟಿ ಕೆಳಗಿನಂತಿದೆ:

University Syndicate members ಕುವೆಂಪು ವಿಶ್ವವಿದ್ಯಾಲಯ ಶಿವಮೊಗ್ಗ

ಪ್ರೊ ಸಾಕಮ್ಮ, ಶಿವಮೊಗ್ಗ

ಶಿವಕುಮಾರ್ ಎಂಮ, ಭದ್ರಾವತಿ

ಮುಸಾಪೀರ್ ಭಾಷಾ, ಭದ್ರಾವತಿ

ಲಕ್ಷ್ಮೀಕಾಂತ ಚಿಮನೂರು,ಶಿವಮೊಗ್ಗ

ಕೆ.ಪಿ.ಶ್ರೀಪಾಲ್,ಶಿವಮೊಗ್ಗ

ಎಚ್ ಅರವಿಂದ್ , ಹಲಸೂರು, ತರೀಕೆರೆ

ಕನ್ನಡ ವಿಶ್ವವಿದ್ಯಾಲಯ, ಹಂಪಿ

ಡಾ.ಬಿ.ಯು.ಸುಮಾ

ಸೋಮಶೇಖರ ಬಣ್ಣದ ಮನೆ

ಡಾ ಎಂ ಎಸ್‌ ಮುತ್ತಯ್ಯ

ಎನ್‌ ಎ ಎಂ ಇಸ್ಮಾಯಿಲ್‌

ಡಾ ಬಂಜಗೆರೆ ಜಯಪ್ರಕಾಶ್‌

ಡಾ.‌ ಕೆ ಫಣಿರಾಜ್

ಡಾ. ನಟರಾಜ್‌ ಹುಳಿಯಾರ್‌

ಬಿ ಆರ್‌ ಪಾಟೀಲ್

ಗುಲ್ಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ

ಡಾ. ಶ್ರೀದೇವಿ ಎಸ್ ಕಟ್ಟಿಮನಿ

ಸಿದ್ದಪ್ಪ ಸುಳ್ಳದ್

ಪೀರ್ ಜಾದ ಫಹೀಮುದ್ದೀನ್

ಮಲ್ಲಣ್ಣ ಎಸ್ ಮಡಿವಾಳ

ಉದಯ್ ಕಾಂತ್

ಸಿದ್ದಪ್ಪ ಮೂಲಗೆ

ರಾಯಚೂರು ವಿಶ್ವವಿದ್ಯಾಲಯ, ರಾಯಚೂರು

ಡಾ. ಮೀನಾಕ್ಷಿ ಖಂಡಿಮಠ

ಡಿ.ಆರ್.ಚಿನ್ನ

ಜೀಶಾನ್ ಅಖಿಲ್ ಸಿದ್ದಿಕಿ

ಶಿವಣ್ಣ

ಚನ್ನಬಸವ

ಕೆ. ಪ್ರತಿಮಾ

ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿ

ಡಾ.ಜಯಲಕ್ಷ್ಮಿ ನಾಯಕ್

ಡಾ.ವೈ. ಆರ್ಥೋಬ ನಾಯಕ

ಬಿ. ಪೀರ್ಬಾಷಾ

ಶಿವಕುಮಾರ್ ಕೆ

ಡಾ. ಅಮರೇಶ ನುಗಡೋಣಿ

ಚ.ಹ.ರಘುನಾಥ್

ಬೆಂಗಳೂರು (ಜ್ಞಾನಭಾರತಿ), ವಿಶ್ವವಿದ್ಯಾಲಯ, ಬೆಂಗಳೂರು

ಡಾ. ಜಯಶ್ರೀ ಹೆಗ್ಡೆ

ಎಂ.ಎ. ಮಹದೇವ ನಾಯ್ಕ

ಡಾ. ಕೆ. ಷರೀಫಾ

ಡಿ.ಬಿ.ಗಂಗರಾಜು

ದಂಡಿಕೆರೆ ನಾಗರಾಜ್‌

ರಮೇಶ್‌ ಬಾಬು

ಬೆಂಗಳೂರು ನಗರ ವಿಶ್ವವಿದ್ಯಾಲಯ, ಬೆಂಗಳೂರು

ಆಯೇಷಾ ಫರ್ಜಾನಾ

ಎಚ್.‌ ಕೃಷ್ಣರಾಮ್‌

ಡಾ. ಫ್ರಾನ್ಸಿಸ್‌ ಅಲ್ಮೀಡಿಯಾ

ವಿ.ಶಿವಕುಮಾರ್‌

ಕೆ.ಪಿ.ಪಾಟೀಲ್‌

ಡಾ. ಬೀರಪ್ಪ ಎಚ್‌

ಬೆಂಗಳೂರು ಉತ್ತರ (ಕೋಲಾರ) ವಿಶ್ವವಿದ್ಯಾಲಯ

ಸಹನಾ ಎಸ್‌ ಆರ್‌

ಜೈದೀಪ್‌

ಅರ್ಬಾಜ್‌ ಪಾಷಾ

ಎಂ ಗೋಪಾಲಗೌಡ

ನಿರೂಪ್‌

ಕೆ. ಬಸವರಾಜು

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ

ಡಾ. ಕಾವೇರಿ

ರವೀಂದ್ರ ಮಲ್ಲಪ್ಪ

ರಪೀಕ್‌ ಭಂಡಾರಿ

ಡಾ. ಮಾರುತಿ ಎಚ್‌

ಮಹಂತೇಶ್‌ ಕಂಬಾರ

ಎಸ್‌ ಎಸ್‌ ಅಂಗಡಿ

ಅಕ್ಕಮಹಾದೇವಿ ವಿಶ್ವವಿದ್ಯಾಲಯ, ವಿಜಯಪುರ

ಡಾ. ಮಾಧುರಿ ಡಿ ಬಿರಾದಾರ್‌

ಡಾ. ಶಿವಯೋಗೆಪ್ಪ ಜೆ ಮಾಡಾಳ

ಡಾ. ಅತೀಕ್‌ ಉರ್‌ ರೆಹಮಾನ್‌

ಡಾ. ಎಸ್‌ ನಟರಾಜ ಬೂದಾಳ್‌

ಮಲ್ಲಮ್ಮ ಶಿ ಯಳವಾರ

ಸೈದಪ್ಪ ಮಾದಾರ

ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

ಡಾ ಎಚ್‌ ಎಸ್‌ ಅನುಪಮ

ಮಹೇಶ್‌ ವೂ ಹುಲೆನವರ

ರಾಬರ್ಟ್‌ ದದ್ದಾಪುರಿ

ದೇವೇಂದ್ರಪ್ಪ

ಡಾ. ಶಿವಾನಂದ ವೆಂಕಣ್ಣ ನಾಯಕ್‌

ಶ್ಯಾಮ ಮಲ್ಲನಗೌಡರ

ಕರ್ನಾಟಕ ಜಾನಪದ ವಿಶ್ವವಿದ್ಯಾಲಯ

ಡಾ: ಜ್ಯೋತಿಲಕ್ಷ್ಮೀ ಡಿ.ಪಿ.

ರಾಮಪ್ಪ ಮಾನಪ್ಪ

ಸಹನಾ ಪಿಂಜಾರ,

ಮೋಹನ್ ಕುಮಾರ್. ಎನ್

ಗೊರೆವಾಲೆ ಚಂದ್ರಶೇಖ‌ರ್

ಡಾ: ಮೊಗಳ್ಳಿ ಗಣೇಶ್

Prime Minister Narendra Modi 10ಲಕ್ಷ ನೇರ & 30 ಲಕ್ಷ ಪರೋಕ್ಷ ಉದ್ಯೋಗ ಸೃಷ್ಟಿಯ ಮೋದಿ ಪ್ಲಾನ್ ರೆಡಿ

0

Prime Minister Narendra Modi ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಭಾರತದಾದ್ಯಂತ 12 ಹೊಸ ಕೈಗಾರಿಕಾ ನಗರಗಳಿಗೆ ಅನುಮೋದನೆ ನೀಡಿದೆ.

ಇದು ಪ್ರಧಾನಿ ಮೋದಿಯವರ ಮತ್ತೊಂದು ಮಾಸ್ಟರ್‌ಸ್ಟ್ರೋಕ್ ಅಂತಲೇ ಹೇಳಬಹುದು.

ಎರಡು ಕೈಗಾರಿಕಾ ನಗರಗಳು ಆಂಧ್ರಪ್ರದೇಶದಲ್ಲಿ,
1 ಬಿಹಾರದಲ್ಲಿ ಇರುತ್ತವೆ
. ಈ ಯೋಜನೆಯು ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ಮಾದರಿಯಲ್ಲಿರುತ್ತದೆ.

₹ 28,602 ಕೋಟಿ ಮೌಲ್ಯದ 12 ಯೋಜನೆಗಳು ಭಾರತದ ಕೈಗಾರಿಕಾ ಭೂದೃಶ್ಯವನ್ನು ಸಂಪೂರ್ಣವಾಗಿ ಪರಿವರ್ತಿಸುತ್ತವೆ ಎಂಬ ನಿರೀಕ್ಷಯಿದೆ.

Prime Minister Narendra Modi ಇದು 10 ಲಕ್ಷ ನೇರ ಮತ್ತು 30 ಲಕ್ಷದವರೆಗೆ ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತದೆ.

ಬಿಜೆಪಿ ನೀಡಿದ ಭರವಸೆಯಂತೆ ನಿರುದ್ಯೋಗ ನಿವಾರಣೆಯಲ್ಲಿ ಇದೊಂದು ಮಹತ್ವದ ಕ್ರಮ ಎನ್ನಲಾಗಿದೆ.

Pace College ವೇದಗಣಿತವೇ ಮೊದಲಾದ ಸಂಗತಿಗಳ ಮೂಲಕ ವಿಶಿಷ್ಟವೆನಿಸಿದ” ಸಂಸ್ಕೃತೋತ್ಸವ

0

Pace College ಪೇಸ್ ಕಾಲೇಜಿನಲ್ಲಿ ಸಂಸ್ಕೃತದಲ್ಲಿ ವಿಜ್ಞಾನ ಎಂಬ ವಿಷಯದ ಕುರಿತಾದ ಅಂಶಗಳನ್ನು ಮಕ್ಕಳೇ ಪ್ರಸ್ತುತ ಪಡಿಸುವ ಮೂಲಕ ಸಂಸ್ಕೃತೋತ್ಸವವನ್ನು ಆಚರಿಸಲಾಯಿತು.

ಅಗಾಧವಾದ ಜ್ಞಾನರಾಶಿಯನ್ನು ಹೊಂದಿದ ಸಂಸ್ಕೃತ ಭಾಷೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಕೊಡುವುದರ ಜೊತೆಗೆ ಬಹು ಹಿಂದೆಯೇ ಸಂಸ್ಕೃತ ಗ್ರಂಥಗಳಲ್ಲಿ ಹೇಳಿದ ವಿಜ್ಞಾನದ ಸಂಗತಿಗಳಾದ ವೇದಗಣಿತ, ಗಣಿತಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ,ಜೀವಶಾಸ್ತ್ರ ಹಾಗೂ ಆಯುರ್ವೇದ ವಿಜ್ಞಾನದ ಸಂಗತಿಗಳನ್ನು ದ್ವಿತೀಯ ಪಿಯುಸಿಯ ವಿದ್ಯಾರ್ಥಿಗಳೇ ಪ್ರಸ್ತುತಪಡಿಸುವ ಮೂಲಕ ಸಂಸ್ಕೃತ ಗ್ರಂಥಗಳಲ್ಲಿ ಉಲ್ಲೇಖಿತವಾದ ಅಂಶಗಳನ್ನು ತಿಳಿಸಿಕೊಟ್ಟರು.

ಬಹು ಹಿಂದೆಯೇ ನಮ್ಮ ಪೂರ್ವಜರು ವಿಜ್ಞಾನದ ಸಂಗತಿಗಳನ್ನು ತಮ್ಮ ಕೃತಿಗಳಲ್ಲಿ ತಿಳಿಸಿದ್ದಾರೆ.

ದಶಾವತಾರದ ವಿಷಯದಲ್ಲಿ ಜೀವರಾಶಿಯ ಬೆಳವಣಿಗೆಯ ಸಂಗತಿಯಾಗಿರಬಹುದು, ಪೈಥಾಗೋರಸ್ ನ ಪ್ರಮೇಯವಾಗಿರಬಹುದು, ರಸಾಯನಶಾಸ್ತ್ರದ ಪಾದರಸದ ಕುರಿತಾಗಿರಬಹುದು, ಲೋಹ ಶುದ್ಧೀಕರಣ, ವೇದಗಣಿತ, ಭೌತಶಾಸ್ತ್ರದ ಬೆಳಕಿನ ವೇಗವೇ ಮೊದಲಾದ ಸಂಗತಿಗಳನ್ನು ಬಹು ವಿಸ್ತಾರವಾಗಿ ತಿಳಿಸುವಲ್ಲಿ ಯಶಸ್ವಿಯಾದರು.

ವಿಜ್ಞಾನದ ವಿದ್ಯಾರ್ಥಿಗಳಾದ ನಾವು ಇವುಗಳಿಂದ ಪ್ರೇರೇಪಿತರಾಗಿ ಜರ್ಮನಿಯೇ ಮೊದಲಾದ ಪಾಶ್ಚಾತ್ಯ ದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ಸಂಸ್ಕೃತಕ್ಕೆ ಮಹತ್ವವನ್ನು ನೀಡುತ್ತಿದ್ದಾರಲ್ಲ ಅದರಂತೆ ನಾವು ಕೂಡ ಸಂಸ್ಕೃತಕ್ಕೆ ಇನ್ನೂ ಹೆಚ್ಚಿನ ಸ್ಥಾನಮಾನ ದೊರಕುವಂತೆ ಮಾಡಬಹುದು ಎಂದು ಹೇಳಿದರು. ಇದನ್ನು ದ್ವಿತೀಯ ಪಿ. ಯು ವಿದ್ಯಾರ್ಥಿಗಳಾದ ನಂದನ್ ಕೌಡಿಕಿ, ನಚಿಕೇತ್, ಅಭಿನವ್ ಶರ್ಮಾ, ಚನ್ನರಾಜ್, ಶ್ರಿಯಾ, ಅಮೃತ ಹಾಗೂ ಕೇದಾರ್ ಇವರುಗಳು ವಿಜ್ಞಾನದ ವಿಷಯದ ಕುರಿತಾಗಿ ಪ್ರಸ್ತುತಪಡಿಸಿದರು.

Pace College ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಂಸ್ಥೆಯ ಕಾರ್ಯದರ್ಶಿಗಳು , ಕಾಲೇಜಿನ ಪ್ರಾಚಾರ್ಯರೂ ಆದ ಪ್ರೊ.ಬಿ.ಎನ್. ವಿಶ್ವನಾಥಯ್ಯನವರು ವಿದ್ಯಾರ್ಥಿಗಳ ಈ ಕಾರ್ಯವನ್ನು ಶ್ಲಾಘಿಸುತ್ತಾ ಸಂಸ್ಕೃತ ದಿನದ ಪ್ರಯುಕ್ತ ಆಚರಿಸಿದ ಕಾರ್ಯಕ್ರಮ ಅರ್ಥಗರ್ಭಿತವಾಗಿತ್ತು. ವೈಜ್ಞಾನಿಕವಾದ ಈ ಸಂಸ್ಕೃತ ಭಾಷೆಯ ಮಹತ್ವವನ್ನು ಭಾರತದಲ್ಲಿ ಎಲ್ಲರೂ ತಿಳಿದು ಇದನ್ನು ಇನ್ನೂ ಅಧಿಕವಾಗಿ ಅಧ್ಯಯನ ಮಾಡುವಂತೆ ಆಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಡಾ. ಮೈತ್ರೇಯಿ, ಕೇಶವಮೂರ್ತಿ, ಬಸವರಾಜು ಕೆ.ಆರ್., ಪ್ರಭಂಜನ್ ಅವರು ಉಪಸ್ಥಿತರಿದ್ದರು.
ಸೈಯದ್ ಮೂಸಾ ಸ್ವಾಗತಿಸಿದರು, ಕುಮಾರಿ ಶರಣ್ಯ ಪ್ರಾರ್ಥಿಸಿದರು, ಸೂರ್ಯಕುಮಾರ್ ವಂದಿಸಿದರು, ರಿಷಿ ಹಾಗೂ ಫಲ್ಗುಣಿ ಕಾರ್ಯಕ್ರಮ ನಿರೂಪಿಸಿದರು. ಸಮೃದ್ಧಿ ನಾಯಕ್, ಮುಂಗಾರು, ಅಮೂಲ್ಯ ಬಾಯರ್ ಹಾಗೂ ರಕ್ಷಾ ರಾವ್ ಸಂಸ್ಕೃತ ಗೀತೆಗಳ ಗಾಯನ ಮಾಡಿದರು.