Thursday, June 12, 2025
Thursday, June 12, 2025

Kirloskar Ferrous Industries Limited Factory ರಾಷ್ಟ್ರೀಯ ಸುರಕ್ಷತಾ ಮಂಡಳಿ ವತಿಯಿಂದ ಕೊಪ್ಪಳದ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಾರ್ಖಾನೆಗೆ ಉನ್ನತ ಸುರಕ್ಷತಾ ಪುರಸ್ಕಾರ ಪ್ರಶಸ್ತಿ

Date:

Kirloskar Ferrous Industries Limited Factory ರಾಷ್ಟ್ರೀಯ ಸುರಕ್ಷತಾ ಮಂಡಳಿ ವತಿಯಿಂದ 2022-231ನೇ ಸಾಲಿನ ಉನ್ನತ ಸುರಕ್ಷತಾ ಪುರಸ್ಕಾರ ಪ್ರಶಸ್ತಿಯನ್ನು ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಾರ್ಖಾನೆಗೆ ದಿನಾಂಕ 9-9-2023 ರಂದು ಬೆಂಗಳೂರಿನ ರಾಡಿಸನ್ ಬ್ಲೂ ಹೋಟೆಲ್ ಸಭಾಂಗಣದಲ್ಲಿ ನೀಡಿ ಗೌರವಿಸಲಾಯಿತು.

ರಾಷ್ಟೀಯ ಸುರಕ್ಷತಾ ಮಂಡಳಿ ಕರ್ನಾಟಕ ಚಾಪ್ಟರ್ ಇವರು ಪ್ರತಿ ಎರಡು ವರ್ಷಕ್ಕೊಮ್ಮೆ ಈ ಕಾರ್ಯಕ್ರಮವನ್ನು ಆಯೋಜಿಸಿ ಕರ್ನಾಟಕದಲ್ಲಿ ಇರುವ ಕಾರ್ಖಾನೆಗಳಲ್ಲಿ ಕೆಲವು ಕಾರ್ಖಾನೆಗಳನ್ನು ಗುರುತಿಸಿ ಆ ಕಾರ್ಖಾನೆಗಳ ವಾಸ್ತು ಸ್ಥಿತಿಯನ್ನು ಆಡಿಟ್ ಮಾಡುವುದರ ಮೂಲಕ ಉತ್ತಮ ,ಉನ್ನತ ಮತ್ತು ಅತ್ಯುತ್ತಮ ಸುರಕ್ಷ ಪುರಸ್ಕಾರ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಾರೆ. ಈ ನಿಟ್ಟಿನಲ್ಲಿ ಕೊಪ್ಪಳದ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಉತ್ತರ ಕರ್ನಾಟಕ ಭಾಗದಲ್ಲಿ ಸುರಕ್ಷತೆ, ಕಾರ್ಮಿಕರ ಆರೋಗ್ಯ ಮತ್ತು ಪರಿಸರಕ್ಕೆ ಹೆಚ್ಚಿನ ಗಮನ ನೀಡಿ ಉತ್ಪಾದನೆ ಮಾಡುತ್ತಿದೆ.ಮತ್ತು ಸಿ ಎಸ್ ಆರ್ ಯೋಜನೆಯ ಮೂಲಕ ಕಾರ್ಖಾನೆಯ ಸುತ್ತಮುತ್ತಲಿನ ಗ್ರಾಮಗಳ ಅಭಿವೃದ್ಧಿ, ಶಿಕ್ಷಣ, ಆರೋಗ್ಯಕ್ಕೆ ಹೆಚ್ಚಿನ ಗಮನವನ್ನು ನೀಡಿ ಅಭಿವೃದ್ಧಿ ಮಾಡುತ್ತ ಬಂದಿದೆ. 1993 ರಲ್ಲಿ ಪ್ರಾರಂಭವಾದ ಈ ಕಾರ್ಖಾನೆ ಸತತವಾಗಿ 2017 ರಲ್ಲಿ ಉತ್ತಮ ಸುರಕ್ಷ ಪುರಸ್ಕಾರ ಪ್ರಶಸ್ತಿ,ಯನ್ನು 2019, 2021 ರಲ್ಲಿ ಉನ್ನತ ಸುರಕ್ಷ ಪ್ರಶಸ್ತಿಯನ್ನು ಗಳಿಸಿಸಿ ಈ ಬಾರಿಯು ಸಹ ಅಂದರೆ 2023 ರಲ್ಲಿ ಮತ್ತೆ ಉನ್ನತ ಸುರಕ್ಷತ ಪ್ರಶಸ್ತಿ ಗಳಿಸಿ ಹ್ಯಾಟ್ರಿಕ್ ಮೆಚ್ಚುಗೆ ಪಡೆದಿದೆ. ಇದೆರೀತಿ ನಮ್ಮ ಸಂಸ್ಥೆಯು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಪರಮೇನಹಳ್ಳಿಯಲ್ಲಿ ಸ್ಥಾಪಿಸಲಾಗಿರುವ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಾರ್ಖಾನೆಗೂ ಸಹ ಉತ್ತಮ ಸುರಕ್ಷತಾ ಪುರಸ್ಕಾರ ಪ್ರಶಸ್ತಿ ಗಳಿಸಿದೆ. ಇದಕ್ಕೆ ಕಾರಣಕರ್ತರಾದ ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುವ ಎಲ್ಲಾ ಹಂತದ ಕಾರ್ಮಿಕರಿಗೆ ಮತ್ತು ಅಧಿಕಾರಿಗಳಿಗೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಆರ್.ವಿ ಗುಮಾಸ್ತೆಯವರು ಅಭಿನಂದನೆ ತಿಳಿಸಿದರು.

Kirloskar Ferrous Industries Limited Factory ರಾಷ್ಟ್ರೀಯ ಸುರಕ್ಷತಾ ಮಂಡಳಿ (ಎನ್ ಎಸ್ ಸಿ) ನೀಡುವ ಸುರಕ್ಷ ಪ್ರಶಸ್ತಗೆ ಭಾಜನರಾಗಿದ್ದು ಇಂದು ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಕಂಪನಿಯ ಅಧಿಕಾರಿಗಳು ಪ್ರಶಸ್ತಿಯನ್ನು ಸ್ವೀಕರಿಸಿದರು. ಕಳೆದ ಎರಡು ವರ್ಷದಿಂದ ಮೆ. ಡೂಪಾಂಟ್ ಸಂಸ್ಥೆಯ ಸಹಾಯದಿಂದ ಕಂಪನಿಯ ಕಾರ್ಯಾಚರಣೆ ಉತ್ಪಾದನೆ ಚಟುವಟಿಕೆಗಳಲ್ಲಿ ಅಪಘಾತಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಅಂಗವಾಗಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುಲಾಗುತ್ತಿದೆ. ಕಾರ್ಮಿಕರಿಗೆ ಸುರಕ್ಷತಾ ಸಾಧನ-ಸಲಕರಣೆಗಳು ಕಾಲಕಾಲಕ್ಕೆ ನೀಡುವುದು ಮತ್ತು ಅವುಗಳನ್ನು ಧರಿಸಿ ಕೆಲಸಮಾಡುವ ರೂಢಿಯನ್ನು ಕಾರ್ಮಿಕರಲ್ಲಿ ತರುವ ನಿಟ್ಟಿನಲ್ಲಿ ತರಬೇತಿ ನೀಡುವುದರ ಮೂಲಕ ಚಾಚೂತಪ್ಪದೆ ನಿರ್ವಹಿಸಿಕೊಂಡು ಬಂದಿದೆ. ಅಪಘಾತ ಸಂಭವಿಸಿದರೆ ನಷ್ಟದ ಜೊತೆಗೆ ಕಂಪನಿಯ ಉತ್ಪಾದನೆಗೆ ದಕ್ಕೆ ಯಾಗುತ್ತದೆ, ಸುರಕ್ಷತಾ ತರಬೇತಿ ನೀಡುವಲ್ಲಿ ಕಂಪನಿ ಶ್ರಮಿಸುತ್ತಿದೆ ವಿಶೇಷ ಸಂದರ್ಭಗಳಲ್ಲಿ ಕಾರ್ಮಿಕರಿಗೆ ರಸಪ್ರಶ್ನೆ ಪ್ರಬಂಧ ಸ್ಪರ್ಧೆಯ ಮೂಲಕ ಮಾಹಿತಿ ನೀಡಲಾಗುತ್ತಿದೆ. ನಿಯಮಿತವಾಗಿ ಸುರಕ್ಷತಾ ಕ್ರಮಗಳ ಬಗ್ಗೆ ಸಭೆ ನಡೆಸುವುದು ಮತ್ತು ಆಡಳಿತ ಮಂಡಳಿಗೆ ಜೊತೆ ಚರ್ಚಿಸಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ನಮ್ಮ ಸಾಧನೆ ಗುರುತಿಸಿದ ನ್ಯಾಷನಲ್ ಸೇಫ್ಟಿ ಕೌನ್ಸಿಲ್ (ರಾಷ್ಟ್ರೀಯ ಸುರಕ್ಷತಾ ಮಂಡಳಿ) ಕರ್ನಾಟಕ ಚಾಪ್ಟರ್ ಇವರು 2022-23 ನೇ ಸಾಲಿನ ಉನ್ನತ ಸುರಕ್ಷತಾ ಪುರಸ್ಕಾರ ಪ್ರಶಸ್ತಿಯನ್ನು ನೀಡಿದೆ ಇದು ಪ್ರತಿಯೊಬ್ಬ ಕೆಲಸಗಾರರ, ಕಾರ್ಮಿಕರ ಮತ್ತು ಅದಿಕಾರಿಗಳ ಶ್ರಮದ ಪ್ರತಿಫಲ ಎಂದು ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರು ಮತ್ತು ಕಾರ್ಯ ನಿರ್ವಾಹಕ ಉಪಾದ್ಯಕ್ಷರಾದ ಶ್ರೀ ಪಿ ನಾರಾಯಣ ಸಹ ತಿಳಿಸಿದರು. ಕಾರ್ಖಾನೆಯಲ್ಲಿ ಕೆಲಸಗಾರರು ಕಾರ್ಮಿಕರ ಸುರಕ್ಷತೆ ಮತ್ತು ಆರೋಗ್ಯ ಇವುಗಳನ್ನು ಪರೀಕ್ಷಿಸಿ ತಪಾಸಣೆ ಮಾಡಿ ಸುರಕ್ಷತಾ ವಾತಾವರಣ ಸುರಕ್ಷತಾ ತರಬೇತಿ ಕಾರ್ಯಕ್ರಮಗಳು ಪ್ರದರ್ಶನ ಮತ್ತು ಅಪಘಾತಗಳ ಅಂಕಿ-ಅಂಶಗಳೂ ಕೆಲಸಗಳಲ್ಲಿ ಕೆಲಸಗಾರರ ಸುರಕ್ಷತೆಯ ನೀತಿ ನಿಯಮ ಪಾಲನೆ ಸುರಕ್ಷತಾ ಸಾಧನ ಸಾಮಗ್ರಿಗಳ ಬಳಕೆ ಇವುಗಳನ್ನು ಗುರುತಿಸಿ ಆಯ್ಕೆ ಮಾಡಲಾಗಿದೆ. ಎಂದು ಸುರಕ್ಷತಾ ವಿಭಾಗದ ಅದಿಕಾರಿ ಶ್ರೀ ಮುರಳಿಧರ್ ನಾಡಿಗೇರ್ ಮಾಹಿತಿ ನೀಡಿದರು. ಪ್ರಶಸ್ತಿಯನ್ನು ಬೆಂಗಳೂರಿನ ರಾಡಿಸನ್ ಬ್ಲೂ ಹೋಟೆಲ್ ಸಭಾಂಗಣದಲ್ಲಿ ಕಂಪನಿಯ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಬೇವಿನಹಳ್ಳಿ ಕಾರ್ಖಾನೆಯ ಪರವಾಗಿ ಎರಕ ವಿಭಾಗದ ಜನರಲ್ ಮ್ಯಾನೇಜರ್ ಶ್ರೀ ಹೆಚ್ ಎಂ ಜಗದೀಶ್ ಹಾಗೂ ಸುರಕ್ಷತಾ ವಿಭಾಗದ ಹಿರಿಯ ಅಧಿಕಾರಿ ಎಂ.ಎಂ ನಾಡಿಗೇರ್ ಮತ್ತು ಶ್ರೀ ಗುರುರಾಜ್ ಕೆ ರವರು ಪ್ರಶಸ್ತಿಯನ್ನು ಕಾಯರ್ಕ್ರಮದ ಮುಖ್ಯ ಅಥಿತಿಗಳಾಗಿ ಆಗಮಿಸಿದ, ಫೋಪೆಸರ್. ಶ್ರೀಕಂಠಮೂರ್ತಿ ವೈಸ್ ಛನ್ಸಿಲರ್ ಶ್ರೀ ಸತ್ಯಸಾಯಿ ಬಾಬಾ ಯೂನಿವರ್ಸಿಟಿ ಬೆಂಗಳೂರು ಮತ್ತು ಕಾರ್ಖಾನೆ ಮತ್ತು ಬಾಯ್ಲರ್ ಗಳ ಇಲಾಖೆ, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಥ್ಯ ಇಲಾಖೆ, ಕರ್ನಾಟಕ ಜಂಟಿ ನಿರ್ದೇಶಕರಾದ ಶ್ರೀ ನವನೀತ ಮೋಹನ್ ಹಾಗೂ ನ್ಯಾಷನಲ್ ಸೇಫ್ಟಿ ಕೌನ್ಸಿಲ್ ‌ ಕರ್ನಾಟಕ ಚಾಪ್ಟರ್ ಕಾರ್ಯದರ್ಶಿಗಳಾದ ಶ್ರೀ ಪಿ.ಸಿ ವೆಂಕಟೇಶ್ವರಲು ಇವರಿಂದ ಸ್ವೀಕರಿಸಿದರು.
ಪರಮೇನಹಳ್ಳಿ ಕಾರ್ಖಾನೆಯ ವತಿಯಿಂದ ಬೀಡುಕಬ್ಬಿಣ ವಿಭಾಗದ ಜನರಲ್ ಮ್ಯಾನೇಜರ್ ಶ್ರೀ ಶಾಮ್ ಸುಂದರ್ ರೆಡ್ಡಿ, ಮಾನವ ಸಂಪನ್ನೂಲ ಮತ್ತು ಆಡಳಿತ ವಿಭಾಗದ ಶ್ರೀ ಮಹೇಶ್ ಬೂಸ್ಲೆ ಹಾಗೂ ಸುರಕ್ಷತಾ ವಿಭಾಗದ ಅಧಿಕಾರಿ ಶ್ರೀ ಅರಿಹಂತ್ ಪ್ರಶಸ್ತಿ ಸ್ವೀಕರಿಸಿದರು.

ವರದಿ
ಮುರುಳೀಧರ್ ನಾಡಿಗೇರ್

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga Police ಅಪರಿಚಿತ ವ್ಯಕ್ತಿ ಸಾವು

Shivamogga Police ಶಿವಮೊಗ್ಗ ಬಿ.ಹೆಚ್ ರಸ್ತೆಯಲ್ಲಿರುವ ಮಿನಾಕ್ಷಿ ಭವನದ ಬಳಿ ಅಸ್ವಸ್ಥರಾಗಿ...

Shimoga-Bhadravati Urban Development Authority ಸುಂದರ ನಗರ ನಿರ್ಮಾಣಕ್ಕೆ ನಾಗರೀಕರು ಕೈ ಜೋಡಿಸಲು ಮನವಿ : ಹೆಚ್ ಎಸ್ ಸುಂದರೇಶ್

Shimoga-Bhadravati Urban Development Authority ಮಲೆನಾಡು ಭಾಗದಲ್ಲಿ ಹಸಿರು ಉಳಿಸಲು ಮತ್ತು...

CM Siddharamaih ಸಿಎಂ ಸಿದ್ಧರಾಮಯ್ಯ ಅವರಿಂದ ಕುಸುಮ್ ಸೌರೀಕರಣ ಯೋಜನೆಗೆ ಚಾಲನೆ

CM Siddharamaih ನಮ್ಮ ಸರ್ಕಾರ ಪ್ರತೀ ವರ್ಷ ₹19,000 ಕೋಟಿ...

CM Siddharamaih ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಕುರಿತು ಅಧಿಕಾರಿಗಳೊಂದಿಗೆ ಸಿಎಂ ಸಭೆ

CM Siddharamaih ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಕುರಿತು ಆರೋಗ್ಯ ಸಚಿವರು...