Friday, March 27, 2026
Friday, March 27, 2026
Home Blog Page 535

Chikkamagaluru Police ಚಿಕ್ಕಮಗಳೂರು ದತ್ತಪೀಠದ ಬಳಿ ಕಂದಕಕ್ಕೆ ಬಿದ್ದ ಕಾರು ಸ್ಥಳೀಯರಿಂದ ಪ್ರಯಾಣಿಕರ ರಕ್ಷಣೆ

0

Chikkamagaluru Police ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಸುಮಾರು 250 ಅಡಿ ಆಳಕ್ಕೆ ಬಿದ್ದಿರುವ ಘಟನೆ ದತ್ತಪೀಠ (ಮಾರ್ಗದ ಕವಿಕಲ್ ಗಂಡಿ ಬಳಿ ಸಂಭವಿಸಿದೆ.
ಮೂಲತಃ ತೆಲಂಗಾಣ ರಾಜ್ಯದ ನೋಂದಣಿ ಇರುವ ಕಾರು ಆಕ್ಟಿಡೆಂಟ್‌ ಆಗಿದ್ದು, ಕಾರಿನಲ್ಲಿದ್ದವರು ಹೈದರಾಬಾದ್‌ ನವರು ಎನ್ನಲಾಗಿದೆ. ಅದೃಷ್ಟಕ್ಕೆ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Chikkamagaluru Police ಕಾರು ಪ್ರಪಾತಕ್ಕೆ ಉರುಳುವಾಗ ಮರಗಳು ಅಡ್ಡಿಯಾದ್ದರಿಂದ ಕಾರಿನಲ್ಲಿದ್ದ ಮಗುವೂ ಸೇರಿದಂತೆ ಐವರು ಬಚಾವ್‌ ಆಗಿದ್ದಾರೆ. ಇನ್ನೂ ಕಾರು ಪಾತಾಳಕ್ಕೆ ಬಿದ್ದ ವಿಷಯ ತಿಳಿಯುತ್ತಲೇ ಸ್ಥಳೀಯರು ದೌಡಾಯಿಸಿ ಎಲ್ಲಾ ಪ್ರಯಾಣಿಕರನ್ನು ರಕ್ಷಿಸಿದ್ದಾರೆ.

Dasara Festival ದೇವಿಗೆ ನಾಲಗೆಯನ್ನೇ ಕತ್ತರಿಸಿ ಅರ್ಪಿಸಿದ ಭಕ್ತ!

0

Dasara Festival ದಸರಾ ಹಬ್ಬದಂದು 9 ದಿನಗಳ ಕಾಲ ದುರ್ಗಾ ದೇವಿಯ ಒಂಬತ್ತು ರೂಪಗಳನ್ನು ಪೂಜಿಸಲಾಗುತ್ತದೆ. ಪ್ರತಿ ವರ್ಷ ಆಶ್ವಿಯುಜ ಮಾಸದಲ್ಲಿ ಈ ಪೂಜೆ ನಡೆಯುತ್ತದೆ. ಈ ವರ್ಷ ಅಕ್ಟೋಬರ್ 3 ರಂದು ನವರಾತ್ರಿ ಪ್ರಾರಂಭವಾಗಿ ವಿಜಯದಶಮಿಗೆ ಮುಗಿದಿದೆ.
ಇನ್ನು ದೇಶದೆಲ್ಲೆಡೆ ಈ ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸಲಾಯಿತು ಈ ಪೈಕಿ ಮಧ್ಯಪ್ರದೇಶದಲ್ಲಿ ಭಕ್ತರೊಬ್ಬರು ದೇವಿಗೆ ಅರ್ಪಿಸಿದ ನೈವೇದ್ಯ ನೋಡಿ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಹೌದು, ರಾಮ್ ಸರಣ್ ಎಂಬ ಭಕ್ತ ತನ್ನ ನಾಲಿಗೆಯನ್ನು ಕತ್ತರಿಸಿ ದೇವಿಗೆ ಅರ್ಪಿಸಿದ್ದಾನೆ ಎಂದು ದೇವಸ್ಥಾನದ ಅರ್ಚಕ ಜೈ ಕಿಶನ್ ಹೇಳಿದ್ದಾರೆ.
ಈ ಭಕ್ತ ತನ್ನ ನಾಲಿಗೆಯನ್ನು ಸುಮಾರು ಮೂರು ಇಂಚು ಕತ್ತರಿಸಿ ದೇವಿಗೆ ಅರ್ಪಿಸಿದನೆಂದು ಹೇಳಲಾಗುತ್ತದೆ. ಅಲ್ಲದೆ, ಸ್ವಲ್ಪ ರಕ್ತವನ್ನೂ ಪಾತ್ರೆಯಲ್ಲಿ ತುಂಬಿ ಮಾತೆಗೆ ಅರ್ಪಿಸಿದ್ದಾನೆ.. ವಿಷಯ ತಿಳಿದ ನೆರೆಹೊರೆಯವರು ದೃಶ್ಯವನ್ನು ನೋಡಲು ದೇವಸ್ಥಾನಕ್ಕೆ ಆಗಮಿಸಿದ್ದಾರೆ. ರತ್ನಗಿರಿ ಅಮ್ಮನವರು ಅಂದ್ರೆ ನನಗೆ ಅಪಾರವಾದ ಭಕ್ತಿ ಮತ್ತು ನಂಬಿಕೆ ಇದೆ, ಅದಕ್ಕೆ ನನ್ನ ನಾಲಿಗೆಯನ್ನು ಅರ್ಪಿಸಿದೆ ಅಂತ ಭಕ್ತ ಹೇಳಿಕೊಂಡಿದ್ದಾನೆ ಎನ್ನಲಾಗಿದೆ..
Dasara Festival ಈ ರತ್ನನಗರ ದೇವಾಲಯವನ್ನು 2015 ರಲ್ಲಿ ನಿರ್ಮಿಸಲಾಯಿತು. ಈ ದೇವಾಲಯದಲ್ಲಿರುವ ದುರ್ಗಾ ಮಾತೆಯ ಮೇಲೆ ತಮಗೆ ಅಪಾರ ನಂಬಿಕೆಯಿದೆ ಎನ್ನುತ್ತಾರೆ ಭಕ್ತರು. ಲಹರ್ ನಗರದಲ್ಲಿರುವ ಈ ದೇವಾಲಯದಲ್ಲಿ ಅಮ್ಮನನ್ನು ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯಲ್ಲಿ ಜನರು ಬರುತ್ತಾರೆ. ಮೇಲಾಗಿ ಭಕ್ತನಿಗೆ ನಾಲಿಗೆ ಮರಳಿ ಬರುತ್ತದೆ ಎಂಬ ನಂಬಿಕೆಯೂ ಸಹ ಇದೆ.. ಎನ್ನುತ್ತಾರೆ ದೇವಸ್ಥಾನಕ್ಕೆ ಬರುವ ಭಕ್ತರು.
ನಿನ್ನೆ ಕೂಡ ದೇವಸ್ಥಾನದಲ್ಲಿ ಹವನ ಮಾಡಿದ ಭಕ್ತರು ಭಕ್ತಿಯಿಂದ ನಾಲಿಗೆ ಕತ್ತರಿಸಿ ದೇವಿಗೆ ಅರ್ಪಿಸಿದ್ದಾರೆ. ಇನ್ನು ಕೆಲವರು ಇಷ್ಟಾರ್ಥಗಳು ನೆರವೇರಿದಾಗ ದೇವಿಯ ಮೇಲಿನ ಭಕ್ತಿಯನ್ನು ತೋರಿಸಲು ಹೀಗೆ ಮಾಡುತ್ತಾರೆ.

Shivamogga Dasara ಶಿವಮೊಗ್ಗ ದಸರಾ ಅಧಿಕಾರಿಗಳಿಗೆ ಬಿಸ್ಲೇರಿ ನೀರು ಜನಕ್ಕೆ ಕೊಳಕು ನೀರು ಸರಬರಾಜು ಪಾಲಿಕೆ ವೈಚಿತ್ರ್ಯ- ಶಿ.ಜು.ಪಾಶಾ

0

Shivamogga Dasara ಹಿಂದೂಗಳ ವಿಶೇಷ ಹಬ್ಬ ದಸರೆಗೆ ಹಿಂದೂ ನಾಯಕರೆಂದೇ ಕರೆಸಿಕೊಳ್ಳುವ ಶಾಸಕ ಚನ್ನಬಸಪ್ಪ @ ಚನ್ನಿ ಕೊಳಕು ಕುಡಿಯುವ ನೀರು ಸರಬರಾಜಾಗುತ್ತಿದ್ದರೂ ಮೌನವಾಗಿರುವುದೇಕೆ?

ಸಂತೋಷದಿಂದಲೇ ನವರಾತ್ರಿ ಹಬ್ಬ ಆಚರಿಸಲು ಸಿದ್ಧರಾದ ಶಿವಮೊಗ್ಗದ ಜನತೆಗೆ ಕೊಳಕು ನೀರನ್ನು ಸರಬರಾಜು ಮಾಡುತ್ತಿದೆ. ಈ ನೀರು ಎಷ್ಟು ಕೊಳಕಿದೆ ಎಂದರೆ, ಸ್ನಾನ ಕೂಡ ಮಾಡಲು ಸಾಧ್ಯವಿಲ್ಲದಷ್ಟು- ಇನ್ನು ಈ ನೀರು ಕುಡಿದುಬಿಟ್ಟರೆ ದೇವರೇಗತಿ; ಆ ನವದುರ್ಗೆಯರೇ ಕಾಪಾಡಬೇಕು!

ಶಿವಮೊಗ್ಗ ನಗರ ನೀರು ಸರಬರಾಜು ವ್ಯವಸ್ಥೆಯನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವತಿಯಿಂದ ನಿರ್ವಹಿಸಲಾಗುತ್ತಿದ್ದು, ಅ.8ರಂದು ಬಂದ ಮಳೆಯಿಂದಾಗಿ ಗಾಜನೂರು ಡ್ಯಾಂ ಮತ್ತು ತುಂಗಾ ನದಿಯ ನೀರಿನಲ್ಲಿ ಕೆಂಪು ಬಣ್ಣವು (ಟರ್ಬಿಡಿಟಿ) ಹೆಚ್ಚಾಗಿದ್ದು, ನೀರನ್ನು ಸಾರ್ವಜನಿಕರು ಕುದಿಸಿ, ಆರಿಸಿ ಕುಡಿಯುವಂತೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿ ಅದೇ ನೀರಲ್ಲಿ ಕೈತೊಳೆದುಕೊಂಡು ಕಾಣೆಯಾಗಿದ್ದಾರೆ.

ಈ ಕೊಳಕು ನೀರು ಇಡೀ ಶಿವಮೊಗ್ಗಕ್ಕೆ ವಿತರಣೆಯಾಗುತ್ತಿದೆ. ಶಾಸಕ ಚನ್ನಿ, ಆಯುಕ್ತೆ ಕವಿತಾ ಯೋಗಪ್ಪನವರ್, ನೀರು ಸರಬರಾಜು ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರ ಮನೆಗೂ ಇದೇ ಕೊಳಕು ನೀರು ಸರಬರಾಜಾಗುತ್ತಿದೆಯಾ? ಹಾಗೆ ಆಗುತ್ತಿದ್ದರೆ, ಹಿಂದೂಗಳ ವಿಶೇಷ ಹಬ್ಬ ದಸರಾ ಕೊಳಕು ನೀರಲ್ಲೇ ನಡೆಯುತ್ತಿರುವುದೇಕೆ? ಶಾಸಕ ಚನ್ನಿಯವರು ದಸರಾ ಕಾರ್ಯಕ್ರಮಗಳಲ್ಲಿ ಮುಳುಗಿ ಹೋಗಿದ್ದಾರೆ. ಅವರು ಕುಂತಲ್ಲಿ, ನಿಂತಲ್ಲಿ ಬಿಸ್ಲರಿ ವಾಟರ್ ಸಿಗುತ್ತಿದೆ. ಅವರ ಜೊತೆ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್ ತಮ್ಮ ವ್ಯಾಪ್ತಿಗೇ ಈ ಸಮಸ್ಯೆ ಬರುವುದಿಲ್ಲ ಎಂದು ಅದೇ ಬಿಸ್ಲರಿ ವಾಟರ್ ಕುಡಿಯುತ್ತಾ ದಸರಾದಲ್ಲಿ ಮಗ್ನರಾಗಿದ್ದಾರೆ.

Shivamogga Dasara ಇನ್ನು ಈ ಸಮಸ್ಯೆ ಬಗೆಹರಿಸುವವರು ಯಾರು? ಕೊಳಕು ನೀರು ಕುದಿಸಿ, ಆರಿಸಿ ಕುಡಿಯಲು ಹೋದರೂ ನೀರಿನ ಕೊಳಕು ಬಣ್ಣ ನೋಡಿ ಜನ ಕಂಗಾಲಾಗುತ್ತಿದ್ದಾರೆ. ಕೊಳಕಾತಿ ಕೊಳಕು ನೀರಲ್ಲೇ ದಸರಾ ಮುಗಿಯುತ್ತಿದೆ. ಇನ್ನು, ರೋಗಗಳಿಗೆ ಬಲಿಯಾಗುವುದಷ್ಟೇ ಬಾಕಿ.

ಮಾಜಿ ಸಂಸದರೂ ಆಗಿರುವ ಕಾಂಗ್ರೆಸ್ಸಿನ ರಾಜ್ಯ ವಕ್ತಾರರಾದ ಆಯನೂರು ಮಂಜುನಾಥ್ ರವರು ಶಿವಮೊಗ್ಗ ಜನತೆಗೆ ವಿಶೇಷ ರೀತಿಯಲ್ಲೇ ಶುಭಾಶಯಗಳನ್ನು ಕೋರುತ್ತಾ ನೀರಿನ ಕುರಿತು ಗಮನ ಸೆಳೆದಿದ್ದಾರೆ. ಶಾಸಕರಿಗೂ ಆಯುಕ್ತರಿಗೂ ಮಾತಾಡಿದ್ದಾರೆ.

ಆದರೆ…ನೀರು ಹಾಗೇ ಕೊಳಕಾತಿ ಕೊಳಕಾಗಿಯೇ ಸರಬರಾಜಾಗುತ್ತಿರುವುದು ನಿಂತಿಲ್ಲ ಎಂದು ಶಿವಮೊಗ್ಗದ ಪತ್ರಕರ್ತ ಮತ್ತು ಕವಿ ಶಿ.ಜು.ಪಾಶಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Karnataka Urban Water Supply and Board ಎಡಬಿಡದ ಮಳೆ ಪರಿಣಾಮ ನೀರಿನಲ್ಲಿ ಕೆಂಪುಬಣ್ಣ, ಕುದಿಸಿ ಆರಿಸಿ ನೀರು ಕುಡಿಯಲು ಶಿವಮೊಗ್ಗ ಜಲ ಮಂಡಳಿ ಮನವಿ

0

Karnataka Urban Water Supply and Board ಶಿವಮೊಗ್ಗ, ನಗರ ನೀರು ಸರಬರಾಜು ವ್ಯವಸ್ಥೆಯನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವತಿಯಿಂದ ನಿರ್ವಹಿಸಲಾಗುತ್ತಿದ್ದು, ಅ.08ರಂದು ಬಂದ ಮಳೆಯಿಂದಾಗಿ ಗಾಜನೂರು ಡ್ಯಾಂ ಮತ್ತು ತುಂಗಾ ನದಿಯ ನೀರಿನಲ್ಲಿ ಕೆಂಪು ಬಣ್ಣವು (ಟರ್ಬಿಡಿಟಿ) ಹೆಚ್ಚಾಗಿದ್ದು, ನೀರನ್ನು ಸಾರ್ವಜನಿಕರು ಕುದಿಸಿ, ಆರಿಸಿ ಕುಡಿಯುವಂತೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.

CM Siddharamaiah ಬಹು ತೆರಿಗೆ ಪಾವತಿಸುವ ಕರ್ನಾಟಕಕ್ಕೆ ಕಡೆಗಣನೆ ಕೇಂದ್ರದಿಂದ ಕಡಿಮೆ ಅನುದಾನ – ಸಿದ್ಧರಾಮಯ್ಯ

0

CM Siddharamaiah ಕರ್ನಾಟಕವನ್ನು ಕಡೆಗಣಿಸುವಂತಹ ಅನ್ಯಾಯವನ್ನು ನಾವೇನು ಮಾಡಿದ್ದೇವೆ? ಎಂದು ಪ್ರತಿಯೊಬ್ಬ ಸ್ವಾಭಿಮಾನಿ ಕನ್ನಡಿಗನು ಕೇಂದ್ರ ಸರ್ಕಾರವನ್ನು ಕೇಳಬೇಕಾಗಿದೆ. ಬಿಮಾರು ರಾಜ್ಯಗಳೆಂದೇ ಕುಖ್ಯಾತಿ ಪಡೆದಿರುವ ರಾಜ್ಯಗಳಾದ ಉತ್ತರಪ್ರದೇಶಕ್ಕೆ ರೂ.31,962 ಕೋಟಿ, ಬಿಹಾರಕ್ಕೆ ರೂ.17,921 ಕೋಟಿ, ಮಧ್ಯಪ್ರದೇಶಕ್ಕೆ ರೂ.13,987 ಕೋಟಿ ಮತ್ತು ರಾಜಸ್ತಾನಕ್ಕೆ ರೂ.10,737 ಕೋಟಿಯಷ್ಟು ತೆರಿಗೆ ಪಾಲನ್ನು ನೀಡಲಾಗಿದೆ.

CM Siddharamaiah ರಾಜ್ಯಗಳಿಂದ ಸಂಗ್ರಹಿಸುವ ತೆರಿಗೆ ಹಣದಲ್ಲಿ ಉತ್ತರಪ್ರದೇಶಕ್ಕೆ ಶೇ.17.93, ಬಿಹಾರಕ್ಕೆ 10.05, ರಾಜಸ್ತಾನಕ್ಕೆ 6.02 ಮತ್ತು ಮಧ್ಯಪ್ರದೇಶಕ್ಕೆ 7.85ರಷ್ಟು ಪಾಲು ನೀಡಿದರೆ, ಕರ್ನಾಟಕಕ್ಕೆ ನೀಡುತ್ತಿರುವ ತೆರಿಗೆ ಪಾಲು ಕೇವಲ ಶೇ.3.64 ಮಾತ್ರ. ತೆರಿಗೆ ಹಂಚಿಕೆಗಾಗಿ ನಿಗದಿ ಪಡಿಸಲಾಗಿರುವ ಮಾನದಂಡದಲ್ಲಿಯೇ ಬಿಜೆಪಿ ಸರ್ಕಾರದ ಪ್ರಗತಿ ವಿರೋಧಿ ಧೋರಣೆ ಸ್ಪಷ್ಟವಾಗಿದೆ. ಅಭಿವೃದ್ಧಿಶೀಲ ರಾಜ್ಯವನ್ನು ಶಿಕ್ಷಿಸಿ, ದುರಾಡಳಿತ ನಡೆಸುತ್ತಿರುವ ರಾಜ್ಯಗಳನ್ನು ಪುರಸ್ಕರಿಸುವ ತೆರಿಗೆ ಹಂಚಿಕೆ ಮಾನದಂಡವನ್ನೇ ಬದಲಾಯಿಸಬೇಕೆಂದು ನಾವು ಒತ್ತಾಯಿಸುತ್ತಲೇ ಬಂದಿದ್ದರೂ ನರೇಂದ್ರ ಮೋದಿ ಅವರ ಸರ್ಕಾರ ಕಿವುಡಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾಲತಾಣದಲ್ಲಿ ತಮ್ಮ ಗರಂ ಅನಿಸಿಕೆ ಹಂಚಿಕೊಂಡಿದ್ದಾರೆ.

District Consumer Disputes Redressal Commission ಮೊಬೈಲ್ ದೋಷ. ಗ್ರಾಹಕರಿಗೆ ಸೂಕ್ತ ಸ್ಪಂದಿಸದ ಮಾರಾಟಗಾರ. ಕೇಸ್ ಗೆದ್ದ ಗ್ರಾಹಕ

0

ದೂರುದಾರರಾದ ಚೇತನ್ ತಾವು ಕೊಂಡ ಮೊಬೈಲ್‌ನಲ್ಲಿ ದೋಷವಿದ್ದು ರಿಪೇರಿ ಮಾಡದೇ ಸೇವಾ ನ್ಯೂನ್ಯತೆವೆಸಗಿದ ಎದುರುದಾರ ಒನ್ ಪ್ಲಸ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್, ಅಶೋಕ ನಗರ, ಬೆಂಗಳೂರು ಅರ್ಬನ್, ಫಿಲ್ಮ್ ಸೆಂಟರ್ ಎಲೆಕ್ಟ್ರಾನಿಕ್ಸ್, ಶಿವಮೊಗ್ಗ ಹಾಗೂ ಮೊಬೈಲ್ ಕೇರ್. ಶಿವಮೊಗ್ಗ ಇವರ ವಿರುದ್ದ ದಾಖಲಿಸಿದ್ದ ಪ್ರಕರಣದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಪರಿಹಾರ ನೀಡಲು ಆದೇಶಿಸಿದೆ.

ದೂರುದಾರರಾದ ಚೇತನ್ ಇವರು ಎದುರುದಾರರಾದ ಒನ್ ಪ್ಲಸ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್, ಅಶೋಕ ನಗರ, ಬೆಂಗಳೂರು ಅರ್ಬನ್ 1ನೇ ಎದುರುದಾರರು, ಫಿಲ್ಮ್ ಸೆಂಟರ್ ಎಲೆಕ್ಟ್ರಾನಿಕ್ಸ್, ಶಿವಮೊಗ್ಗ 2ನೇ ಎದುರುದಾರರು ಮತ್ತು ಮೊಬೈಲ್ ಕೇರ್ ಶಿವಮೊಗ್ಗ, 3ನೇ ಎದುರುದಾರರು ಇವರ ವಿರುದ್ದ ದೂರನ್ನು ಸಲ್ಲಿಸಿ ತಾವು ಫಿಲ್ಮ್ ಸೆಂಟರ್ ಎಲೆಕ್ಟ್ರಾನಿಕ್ಸ್, ಶಿವಮೊಗ್ಗ ಇವರಿಂದ ಕೊಂಡ ಮೊಬೈಲ್‌ನಲ್ಲಿ ಖರೀದಿಸಿದ ದಿನಾಂಕದಿಂದಲೂ ದೋಷ ಕಂಡುಬಂದಿದ್ದು, ಹಲವಾರು ಬಾರಿ ಎದುರುದಾರರಲ್ಲಿ ರಿಪೇರಿ ಮಾಡಿಕೊಡಲು ವಿನಂತಿಸಿದ್ದು, ಎದುರುದಾರರು ಒಮ್ಮೆ ಮೊಬೈಲ್ ರಿಪೇರಿ ಮಾಡಿಕೊಟ್ಟಿದ್ದರು.

ನಂತರವೂ ಮೊಬೈಲ್‌ನಲ್ಲಿ ದೋಷ ಕಂಡುಬಂದಿದ್ದು, ಎದುರುದಾರರಲ್ಲಿ ತೋರಿಸಿದಾಗ, ಎದುರುದಾರರು ಸ್ಪಂದಿಸದಿದ್ದಕ್ಕೆ ಮೊಬೈಲ್‌ನ್ನು ರಿಪೇರಿ ಮಾಡಿಕೊಡಲು ವಕೀಲರ ಮುಖಾಂತರ ಲೀಗಲ್ ನೋಟೀಸ್ ನೀಡಿದ್ದಾಗ್ಯೂ ದುರಸ್ತಿಪಡಿಸಲು ವಿಫಲರಾದ ಕಾರಣ ಈ ಆಯೋಗದ ಮುಂದೆ ಅರ್ಜಿ ಸಲ್ಲಿಸಿ ಮೊಬೈಲ್‌ನಲ್ಲಿ ತಯಾರಿಕಾ ದೋಷವಿರುವ ಕಾರಣ ಮೊಬೈಲ್ ಖರೀದಿಯ ಮೊತ್ತ ರೂ.40,800/-ಗಳನ್ನು ಹಾಗೂ ಎದುರುದಾರರ ಸೇವಾ ನ್ಯೂನ್ಯತೆಯಿಂದ ಆದ ಮಾನಸಿಕ ಹಿಂಸೆಗೆ ರೂ.50,000/-ಗಳನ್ನು ಹಾಗೂ ರೂ.2.000/-ಗಳ ವೆಚ್ಚಗಳನ್ನು ಎದುರುದಾರರು ನೀಡಲು ನಿರ್ದೇಶಿಸಬೇಕೆಂದು ವಿನಂತಿಸಿರುತ್ತಾರೆ.

District Consumer Disputes Redressal Commission ದೂರನ್ನು ದಾಖಲಿಸಿಕೊಂಡು ಆಯೋಗದಿಂದ ಎದುರುದಾರರಿಗೆ ನೋಟೀಸ್‌ನ್ನು ನೀಡಿದ್ದು, ಎದುರುದಾರರು ನೋಟೀಸ್ ಪಡೆದು ಹಾಜರಾಗದ ಕಾರಣ ಎದುರುದಾರರನ್ನು ಏಕ-ಪಕ್ಷೀಯವೆಂದು (ಎಕ್ಸ್-ಪಾರ್ಟೆ) ತೀರ್ಮಾನಿಸಲಾಗಿರುತ್ತದೆ ಹಾಗೂ ಸದರಿ ದೂರಿನ ವಿಚಾರಣೆಯನ್ನು ಮಾಡಿ, ದೂರಿನ ಅಂಶಗಳು, ದೂರುದಾರರ ಪರ ವಕೀಲರ ವಾದವನ್ನು ಆಲಿಸಿ ಮತ್ತು ದೂರುದಾರರು ಸಲ್ಲಿಸಿರುವ ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿದ ಆಯೋಗವು ಫಿರ್ಯಾದಿದಾರರು 2ನೇ ಎದುರುದಾರರಿಂದ ಮೊಬೈಲ್ ಖರೀದಿಸಿರುವುದು ಫಿರ್ಯಾದಿದಾರರು ಸಲ್ಲಿಸಿರುವ ರಸೀದಿಯಿಂದ ಧೃಡಪಟ್ಟಿದ್ದು ಮತ್ತು ಮೊಬೈಲ್‌ನ್ನು ರಿಪೇರಿಗಾಗಿ 3ನೇ ಎದುರುದಾರರ ಬಳಿ ನೀಡಿರುವುದು 3ನೇ ಎದುರುದಾರರು ನೀಡಿರುವ ಸರ್ವಿಸ್ ಚಲನ್‌ನಿಂದ ಧೃಡಪಟ್ಟಿದ್ದು ಮತ್ತು ಮೊಬೈಲ್ ರಿಪೇರಿ ಮಾಡಿಕೊಡಲು ಹಲವಾರು ಬಾರಿ ವಿನಂತಿಸಿದರೂ ಎದುರುದಾರರು ಸರಿಯಾದ ರೀತಿಯಲ್ಲಿ ಮೊಬೈಲ್ ರಿಪೇರಿ ಮಾಡಿಕೊಡದ ಕಾರಣ ಮೊಬೈಲ್ ಹಣ ವಾಪಸ್ ನೀಡಲು ಕೋರಿರುವುದು ವಕೀಲರು ಎದುರುದಾರರಿಗೆ ಕಳುಹಿಸಿರುವ ಲೀಗಲ್ ನೋಟೀಸ್‌ನಲ್ಲಿ ಖಾತರಿಯಾಗಿರುತ್ತದೆ.

ದೂರುದಾರರು ಮಾಡಿರುವ ಆಪಾದನೆಗಳಿಗೆ ಮತ್ತು ಸಲ್ಲಿಸಿರುವ ದಾಖಲೆಗಳಿಗೆ 1 ಮತ್ತು 2ನೇ ಎದುರುದಾರರು ಸ್ಥಳೀಯವಾಗಿ ಶಿವಮೊಗ್ಗದಲ್ಲೇ ಇದ್ದರೂ ಸಹ ಹಾಜರಾಗಿ ದೂರುದಾರರು ಮಾಡಿರುವ ಆಪಾದನೆಗಳು ಸುಳ್ಳೆಂದಾಗಲಿ ಅಥವಾ ತಮ್ಮ ವಿರುದ್ಧ ದೂರುದಾರರು ಮಾಡಿರುವ ಆಪಾದನೆಗಳನ್ನು ಅಲ್ಲಗೆಳೆಯುವಂತಹ ಯಾವುದೇ ದಾಖಲೆಗಳನ್ನು ಸಹ ಮಂಡಿಸಿರುವುದಿಲ್ಲವೆAಬ ಅಂಶಗಳನ್ನು ಪರಿಗಣಿಸಿದ ಆಯೋಗವು ಅರ್ಜಿದಾರರು ಖರೀದಿಸಿದ ಮೊಬೈಲ್ ಉತ್ಪಾದನಾ ದೋಷದಿಂದ ಕೂಡಿದ್ದು ಎದುರುದಾರರು ಸದರಿ ಮೊಬೈಲ್‌ನ್ನು ರಿಪೇರಿ ಮಾಡಿಕೊಡಲು ವಿಫಲರಾಗಿದ್ದು, ಎದುರುದಾರರ ಸೇವಾ ನ್ಯೂನ್ಯತೆಯಾಗಿರುತ್ತದೆಂದು ಪರಿಗಣಿಸಿ ಅರ್ಜಿದಾರರು ಎದುರುದಾರರಿಂದ ಮೊಬೈಲ್ ಖರೀದಿಸಿದ ಮೊತ್ತ ರೂ.34,576/- (ಜಿ.ಎಸ್.ಟಿ. ರೂ.6.223.73 ಹೊರತುಪಡಿಸಿ)ಗಳನ್ನು ಶೇ.9 ಬಡ್ಡಿಯೊಂದಿಗೆ ದಿ: 01/01/2024 ರಿಂದ ಪೂರಾ ಹಣ ನೀಡುವವರೆಗೂ ಪಾವತಿಸಲು ಹಾಗೂ ಎದುರುದಾರರಿಂದ ಅರ್ಜಿದಾರರಿಗೆ ಉಂಟಾದ ಮಾನಸಿಕ ಹಿಂಸೆ ಹಾಗೂ ಹಾನಿಗಳಿಗೆ ಪರಿಹಾರವಾಗಿ ರೂ.15,000/-ಗಳನ್ನು ಮತ್ತು ವ್ಯಾಜ್ಯದ ಖರ್ಚು-ವೆಚ್ಚಗಳ ಬಾಬ್ತಾಗಿ ರೂ.10,000/-ಗಳನ್ನು ನೀಡಬೇಕೆಂದು ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ, ಸದಸ್ಯರಾದ ಸವಿತಾ. ಬಿ. ಪಟ್ಟಣಶೆಟ್ಟಿ ಮತ್ತು ಬಿ.ಡಿ.ಯೋಗಾನಂದ ಭಾಂಡ್ಯ ಇವರನ್ನು ಒಳಗೊಂಡ ಪೀಠವು ದಿನಾಂಕ: 09/10/2024ರಂದು ಆದೇಶಿಸಿದೆ.

MESCOM Thirtahalli ಅಕ್ಟೋಬರ್ 15 ತೀರ್ಥಹಳ್ಳಿಯಲ್ಲಿ ಮೆಸ್ಕಾಂ ಜನಸಂಪರ್ಕ ಸಭೆ

0

MESCOM Thirtahalli ತೀರ್ಥಹಳ್ಳಿ ಮೆಸ್ಕಾಂ ಉಪ ವಿಭಾಗ ಕಛೇರಿಯಲಿ ಅ. 15 ರಂದು ಬೆಳಿಗ್ಗೆ 11.00 ರಿಂದ 01.00 ರವರೆಗೆ ಜನಸಂಪರ್ಕ ಸಭೆ ನಡೆಯಲ್ಲಿದೆ.

MESCOM Thirtahalli ಈ ಸಭೆಯಲ್ಲಿ ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲ್ಲಿದ್ದು, ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುವುದರಿಂದ ಈ ಅವಕಾಶವನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಮೆಸ್ಕಾಂ
ತಿಳಿಸಿದೆ.

ಸಂಪರ್ಕಿಸಬಹುದಾದ ದೂರವಾಣಿಸಂಖ್ಯೆ;9448289508

CM Siddharamaiah ವಾಲ್ಮೀಕಿ ನಿಗಮ ಬಹುಕೋಟಿ ಹಗರಣ ಹಿನ್ನೆಲೆ. ಸಿದ್ಧರಾಮಯ್ಯ ರಾಜಿನಾಮೆ ನೀಡಿ- ಎಸ್.ದತ್ತಾತ್ರಿ

0

CM Siddharamaiah ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ನಿಗಮದ ಹಣ ದುರ್ಬಳಕೆ ಪ್ರಕರಣದಲ್ಲಿ ಜಾರಿ ನಿರ್ದೇಶನಲಾಯ ಸಲ್ಲಿಸಿರುವ ಚಾರ್ಜ್ ಶೀಟ್‌ನಲ್ಲಿ ನಿಗಮದ ಹಣ ವರ್ಗಾವಣೆಯಲ್ಲಿ ಮಾಜಿ ಸಚಿವ ಶ್ರೀ ನಾಗೇಂದ್ರರವರೇ ಸಂಪೂರ್ಣ ಸೂತ್ರಧಾರಿ, ಅವರ ಆದೇಶದಂತೆಯೇ ಹಣ ವರ್ಗಾವಣೆಯಾಗಿದೆ ಎಂದು ಇ.ಡಿ ಖಚಿತ ಪಡಿಸಿದೆ. ನಾಗೇಂದ್ರ ಹಾಗೂ ಸುಮಾರು 24ಮಂದಿ ಈ ಅಕ್ರಮದಲ್ಲಿ ಭಾಗಿಯಾಗಿರುವುದನ್ನು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಎಂ.ಜಿ ರೋಡ್‌ನಲ್ಲಿ ಯೂನಿಯನ್ ಬ್ಯಾಂಕಿನಿಂದ 187 ಕೋಟಿ ವರ್ಗಾವಣೆಯಾಗಿದ್ದು, ಈ ಹಣವು ನಕಲಿ ಖಾತೆಗಳಿಗೆ ವರ್ಗಾವಣೆ ಮಾಡಿಸಿ ತದನಂತರ ಈ ಹಣದಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರ ಚುನಾವಣೆಗಾಗಿ20.19 ಕೋಟಿ ಹಣವನ್ನು ದುರ್ಬಳಕೆಯಾಗಿರುವುದನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಲಯಕ್ಕೆ ಇ.ಡಿ ಸ್ಪಷ್ಟಪಡಿಸಿದೆ.
ನಾಗೇಂದ್ರರವರ ಅಪ್ತ ಶ್ರೀ ವಿಜಯಕುಮಾರ್ ರವರ ಪೋನ್‌ನಲ್ಲಿ ಇದ್ದ ಮಾಹಿತಿಯನ್ನು ರಿಟ್ರೀವ್ ಮಾಡಿದಾಗ ಹಣ ಹಂಚಿಕೆಯ ಅವ್ಯವಹಾರ ಕಂಡು ಬಂದಿದೆ. ನಾಗೇಂದ್ರರವರು ವೈಯಕ್ತಿಕ ಉದ್ದೇಶಕ್ಕೆ ನಿಗಮದ ಹಣ ಉಪಯೋಗಿಸಿ ಕೊಂಡಿರುವುದು ಬೆಳಕಿಗೆ ಬಂದಿದೆ.
ಕರ್ನಾಟಕ ರಾಜ್ಯ ಸರ್ಕಾರದ ಅದರಲ್ಲಿಯೂ ವಿಶೇಷವಾಗಿ ಈ ರಾಜ್ಯದ ಲಕ್ಷಾಂತರ ಬಡ ಪರಿಶಿಷ್ಟ ಪಂಗಡಗಳ ಜನ ಕಲ್ಯಾಣ ಯೋಜನೆಗೆ ಮೀಸಲಾಗಿದ್ದ ಹಣವನ್ನು ಈ ರೀತಿ ದುರ್ಬಳಕೆ ಯಾಗಿರುವುದು ತಮ್ಮ ಗಮನಕ್ಕೆ ಬಂದಿದ್ದರು ಕೂಡ ಮಾನ್ಯ ಮುಖ್ಯಮಂತ್ರಿಗಳು ಈ ವಿಚಾರದಲ್ಲಿ ಮೌನ ವಹಿಸಿ, ಪರೋಕ್ಷವಾಗಿ ಈ ಅಕ್ರಮಕ್ಕೆ ಸಹಕರಿಸುವುದರ ಮೂಲ ಪರಿಶಿಷ್ಟ ಪಂಗಡಗಳಿಗೆ ದ್ರೋಹವೆಸಗಿದ್ದಾರೆ.
ರಾಜ್ಯದ ಹಣಕಾಸು ಖಾತೆಯನ್ನು ವಹಿಸಿಕೊಂಡು ಸುಮಾರು 14 ಬಾರಿ ಬಜೆಟ್ ಮಂಡಿಸಿದ್ದೇನೆOದು ಬೀರುವ ಮಾನ್ಯ ಸಿದ್ದರಾಮಯ್ಯನವರು ಈ ರೀತಿಯ ಸರ್ಕಾರದ ಹಣವೇ ಚುನಾವಣೆಗೆ ಉಪಯೋಗಿಸಿರುವುದನ್ನು ಇ.ಡಿ ನಿರ್ದೇಶನಾಲಯ ಸಾಕ್ಷಿಗಳ ಸಮೇತ ಸ್ಪಷ್ಟಪಡಿಸಿದ್ದರು, ತಾವು ಇನ್ನು ಮಂಡತನದಿಂದ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಲು ಅರ್ಹರಲ್ಲ.
ಈ ಹಿನ್ನೆಲೆಯಲ್ಲಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಾಲ್ಮೀಕಿ ನಿಗಮದಲ್ಲಿ ನಡೆದ ಅವ್ಯವಹಾರ ಹಾಗೂ ದುರ್ಬಳಕೆಯ ಜವಾಬ್ದಾರಿಯ ನೈತಿಕ ಹೊಣೆಹೊತ್ತು ತಮ್ಮ ಸ್ಥಾನಕ್ಕೆ ಈಗಾದರೂ ರಾಜಿನಾಮೆ ನೀಡಿ, ತಮ್ಮ, ರಾಜಕೀಯ ಮುತ್ಸದ್ದಿತನವನ್ನು ಈ ರಾಜ್ಯದ ಜನತೆಗೆ ತೋರಿಸಬೇಕಾಗಿ ಅಗ್ರಹಿಸುತ್ತೇನೆ.

Chamber of Commerce Shivamogga ರತನ್ ಟಾಟಾ, ದೂರದೃಷ್ಟಿಯ ಮಹಾನ್ ವ್ಯಕ್ತಿ- ಬಿ.ಗೋಪಿನಾಥ್

0

Chamber of Commerce Shivamogga ದೇಶದ ಹೆಮ್ಮೆಯ ಉದ್ಯಮಿ, ಟಾಟಾ ಸಮೂಹದ ಮುಖ್ಯಸ್ಥಾರಾದ ಶ್ರೀ ರತನ್ ಟಾಟಾರವರ ನಿಧನದ ಸುದ್ದಿ ದೇಶದ ಜನತೆಗೆ ಅಪಾರ  ದುಃಖವನ್ನುಂಟು ಮಾಡಿದ್ದು, ದೇಶದ ಆರ್ಥಿಕಾಭಿವೃದ್ಧಿಗೆ ತುಂಬಲಾರದ ನಷ್ಟವನ್ನುಂಟಾಗಿದೆ. ಟಾಟಾ ಸಂಸ್ಥೆಯ ಮೂಲಕ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿರುವುದು ಮಾತ್ರವಲ್ಲ ಜೊತೆಗೆ ಭಾತರದ ಉದ್ಯಮ ವಲಯವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಎತ್ತರಕ್ಕೆ ಕೊಂಡೊಯ್ದ್ದ ದೂರದೃಷ್ಟಿಯ ಮಹಾನ್ ವ್ಯಕ್ತಿತ್ವವನ್ನು ಹೊಂದಿದ್ದರು.

Chamber of Commerce Shivamogga ಶ್ರೀಯುತ ರತನ್‌ಟಾಟಾರವರು ತಮ್ಮ ಬದುಕು ಸಾಧನೆಗಳ ಮೂಲಕ ಅಜರಾಮರರಾಗಿದ್ದಾರೆ. ಅಗಲಿದ ಮಹಾನ್ ಚೇತನಕ್ಕೆ ಭಗವಂತ ಸದ್ಗತಿ ನೀಡಲೆಂದು ದೇವರಲ್ಲಿ ಪ್ರಾರ್ಥಿಸಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ. ಗೋಪಿನಾಥ್, ಪದಾಧಿಕಾರಿಗಳು, ನಿದೇಶಕರುಗಳು ಗೌರವ ಶ್ರದ್ದಾಂಜಲಿಯನ್ನು ಅರ್ಪಿಸಿದ್ದಾರೆ.

Bhadravati Police ವಾಹನ ಸವಾರನ ಮೇಲೆ ದಾಳಿ ನಡೆಸಿ ದರೋಡೆಗೈದ ಮೂವರು ಆರೋಪಿಗಳಿಗೆ ಕೋರ್ಟ್ ಶಿಕ್ಷೆ ಪ್ರಕಟ

0

Bhadravati Police 2019 ರಲ್ಲಿ ಪರೀಕ್ಷೆಯ ಹಿನ್ನೆಲೆಯಲ್ಲಿ ಶಿವಮೊಗ್ಗದ ಬಾಪೂಜಿ ನಗರದಲ್ಲಿ ಟ್ಯೂಷನ್ ಮುಗಿಸಿಕೊಂಡು ವಾಪಾಸ್ ಭದ್ರಾವತಿಗೆ ಬೈಕ್ ನಲ್ಲಿ ಹೋಗುವಾಗ ಮೂವರು ಅಪರಿಚಿತರಿಂದ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಿಗೆ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.

2019ರಲ್ಲಿ ಮೊಹಮ್ಮದ್ ಖಾಲೀದ್ (21) ವಾಪಾಸ್ ಭದ್ರಾವತಿಗೆ ಶಿವಮೊಗ್ಗದಿಮದ ವಾಪಾಸ್ ಹೋಗುವಾಗ ರಾಷ್ಟ್ರೀಯ ಹೆದ್ದಾರಿ 206 ರಲ್ಲಿರುವ ಪಾಪಣ್ಣನ ಕ್ಯಾಂಟೀನ್ ಮುಂದೆ ದ್ವಿ ಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಮೂವರು ಅಪರಿಚಿತ ವ್ಯಕ್ತಿಗಳು ಬಂದು ಅವರನ್ನು ತಡೆದು ಅಡ್ಡಗಟ್ಟಿ ನಿಲ್ಲಿಸಿ ನಗದು ಹಣ, ಮೊಬೈಲ್ ಫೋನ್ ಮತ್ತು ವಾಚ್ ಅನ್ನು ಕಿತ್ತು ಕೊಂಡು ಹೋಗಿದ್ದರು.

ಪ್ರಕರಣವು ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕಣದಲ್ಲಿ ಆಗಿನ ತನಿಖಾಧಿಕಾರಿಗಳಾದ ಭದ್ರಾವತಿ ನಗರ ವೃತ್ತ ಸಿಪಿಐ ರಾಘವೇಂದ್ರ ಕಾಂಡಿಕೆ, ಪ್ರಕರಣದ ತನಿಖೆ ಪೂರೈಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.

Bhadravati Police ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ರತ್ನಮ್ಮ ಪಿ, ಸರ್ಕಾರಿ ಅಭಿಯೋಜಕರಾಗಿ ವಾದ ಮಂಡಿಸಿದ್ದರು,
ಘನ ೪ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗ (ಪೀಠಾಸೀನ ಭದ್ರಾವತಿ)ಯಲ್ಲಿ ಪ್ರಕರಣದ ವಿಚಾರಣೆ ನಡೆದು, ಆರೋಪಿತರ ವಿರುದ್ಧ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ ನ್ಯಾಯಾಧೀಶೆ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ ಆರೋಪಿತರಾದ ಶಿವಮೊಗ್ಗ ನಗರದ ಸಯ್ಯದ್ ಇಬ್ರಾಹಿಂ (23), ಮೊಹಮ್ಮದ್ ಮುಸ್ತಫಾ (22), ಮೊಹಮ್ಮದ್ ಅಲ್ಲಾಭಕ್ಷಿ (22) ಇವರಿಗೆ. 05 ವರ್ಷ 1 ತಿಂಗಳು ಸಾದಾ ಕಾರಾವಾಸ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.