ಚಿಕ್ಕಮಗಳೂರಿನ ಇನಾಂ ದತ್ತಪೀಠ ಸುತ್ತಮುತ್ತ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಗೌರಿಗದ್ದೆ ಆಶ್ರಮದ ವಿನಯ ಗುರೂಜಿ ಅವರು ಪಾಲ್ಗೊಂಡಿದ್ದರು.
ದತ್ತಪೀಠದ ಅಭಿವೃದ್ಧಿಗೆ ಪ್ರಾಧಿಕಾರ ಮಾಡುವುದು ಅಗತ್ಯವಿದೆ ಎಂದು ವಿನಯ್ ಗುರೂಜಿ ಅವರು ಹೇಳಿದ್ದಾರೆ.
ದತ್ತಪೀಠದಲ್ಲಿ ನಾನು ಶೌಚಾಲಯಗಳನ್ನು ಸ್ವಚ್ಛಗೊಳಿಸಿದೆ. ವಾರದ ಕೊನೆಯಲ್ಲಿ 2000ಕ್ಕೂ ಹೆಚ್ಚು ವಾಹನಗಳಲ್ಲಿ ಪ್ರವಾಸಿಗರು ಬರುತ್ತಾರೆ. ಮುಖ್ಯಮಂತ್ರಿ, ಪ್ರವಾಸೋದ್ಯಮ ಸಚಿವರು ದತ್ತಪೀಠ ಪ್ರಾಧಿಕಾರ ಮಾಡಬೇಕು ಎಂದು ಗುರು ಎಂಬುದಕ್ಕಿಂತ ಜನ ಸಾಮಾನ್ಯನಾಗಿ ಮನವಿ ಮಾಡುತ್ತೇನೆ. ಮಹಿಳೆಯರಿಗೆ ಇನ್ನು ಸೌಚಾಲಯಗಳು ನಿರ್ಮಿಸಿಕೊಡಿ. ಹಣ ಇದ್ದವರು ರಿಸಾರ್ಟ್ ಗೆ ಹೋಗ್ತಾರೆ. ಬಡವರು ಪ್ರವಾಸ ಮಾಡಬಾರದು ಎಂದು ನಿಯಮ ಇಲ್ಲ. ಸಂಬಂಧಿಸಿದವರಿಗೆ ನಾನೇ ಖುದ್ದು ಪತ್ರವನ್ನು ಬರೆಯುತ್ತೇನೆ. ಮುಂದಿನ ವರ್ಷದೊಳಗೆ ಸಮಸ್ಯೆ ಪರಿಹರಿಸಲು ಎಂದು ಗೌರಿಗದ್ದೆ ಆಶ್ರಮದ ವಿನಯ ಗುರೂಜಿಯವರು ಮಾಧ್ಯಮ ಮಿತ್ರರಿಗೆ ತಿಳಿಸಿದರು.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.