Monday, May 25, 2026
Monday, May 25, 2026

ಡಿಜಿಟಲ್ ಗ್ರಂಥಾಲಯ:ಕೋಟಿಗೂ ಮೀರಿ ಜನಸ್ಪಂದನ

Date:

ಮಂಗಳೂರಿನ, ಕಿನ್ಯಾ ಗ್ರಾಮದ ಕರ್ನಾಟಕ ಡಿಜಿಟಲ್ ಲೈಬ್ರರಿಯನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆ ಆರಂಭಿಸಿದೆ. ಈ ಲೈಬ್ರೆರಿಗೆ ಸುಮಾರು 1.91 ಕೋಟಿ ಜನರು ನೋಂದಣಿ ಮಾಡಿಕೊಂಡಿದ್ದಾರೆ.

ಕರ್ನಾಟಕದಲ್ಲಿ ಪ್ರತಿಯೊಬ್ಬರಿಗೂ ಪುಸ್ತಕಗಳು ಲಭಿಸಬೇಕು. ಹಾಗೂ ಓದುವ ಹವ್ಯಾಸ ಹಚ್ಚಬೇಕು ಎಂಬ ಉದ್ದೇಶದಿಂದ ಎರಡು ವರ್ಷಗಳ ಹಿಂದೆ ಈ ಡಿಜಿಟಲ್ ಲೈಬ್ರರಿ ಯನ್ನು ಆರಂಭಿಸಲಾಗಿದೆ.

ಶಾಲೆ ,ಕಾಲೇಜು, ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಅಭ್ಯರ್ಥಿಗಳು ಡಿಜಿಟಲ್ ಲೈಬ್ರೆರಿಯ ಸದುಪಯೋಗವನ್ನು ಪಡೆದುಕೊಳ್ಳಬಹುದು. ಗೂಗಲ್ನಲ್ಲಿ ಕರ್ನಾಟಕ ಡಿಜಿಟಲ್ ಪಬ್ಲಿಕ್ ಲೈಬ್ರೆರಿ ಅಥವಾ ಪ್ಲೇ ಸ್ಟೋರ್ ನಲ್ಲಿ ಇ-ಸಾರ್ವಜನಿಕ ಗ್ರಂಥಾಲಯ app ಡೌನ್ಲೋಡ್ ಮಾಡಿಕೊಳ್ಳಬೇಕು. ನಂತರದಲ್ಲಿ ಹೆಸರು, ಮೊಬೈಲ್ ಸಂಖ್ಯೆ, ಬೇಕಾದ ಲೈಬ್ರರಿ ಆಯ್ಕೆಮಾಡಿ, ತಮ್ಮದೇ ಆದ ಪಾಸ್ವರ್ಡ್ ಸೃಷ್ಟಿಸಿಕೊಳ್ಳಬೇಕು. ಅನಂತರ ಅವರು ಡಿಜಿಟಲ್ ಲೈಬ್ರೆರಿಯ ಸದಸ್ಯರಾಗುತ್ತಾರೆ.

ಮೊದಲ ಹಂತದಲ್ಲಿ 30 ಜಿಲ್ಲಾ ಕೇಂದ್ರ ಗ್ರಂಥಾಲಯ, 26 ನಗರ ಕೇಂದ್ರ ಗ್ರಂಥಾಲಯ ಹಾಗೂ 216 ತಾಲೂಕು ಕೇಂದ್ರ ಗ್ರಂಥಾಲಯ ಸೇರಿ ಒಟ್ಟು 272 ಡಿಜಿಟಲ್ ಗ್ರಂಥಾಲಯ ಆರಂಭಗೊಂಡಿದೆ.

ಎರಡನೇ ಹಂತದಲ್ಲಿ ಬಿಬಿಎಂಪಿ ವ್ಯಾಪ್ತಿಯ 198 ವಾರ್ಡ್ ಗಳ 205 ಗ್ರಂಥಾಲಯಗಳ ಪೈಕಿ 100 ಕಡೆ ಡಿಜಿಟಲ್ ಲೈಬ್ರೆರಿ ಸೇವೆ ಆರಂಭಗೊಂಡಿದೆ. ಪ್ರಸ್ತುತ 372 ಡಿಜಿಟಲ್ ಲೈಬ್ರೆರಿಗಳು ಕಾರ್ಯನಿರ್ವಹಿಸುತ್ತಿವೆ.

ನವೆಂಬರ್ ತಿಂಗಳ ವರೆಗೂ ಹೊಸದಾಗಿ 1.91 ಕೋಟಿ ಜನರು ಡಿಜಿಟಲ್ ಲೈಬ್ರೆರಿ ಯಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಅವರು ಸುಮಾರು 20.06 ಲಕ್ಷ ಪುಸ್ತಕಗಳನ್ನು ಓದಿದ್ದಾರೆ. ಇ- ಪುಸ್ತಕಗಳು ಮತ್ತು ವೀಡಿಯೊಗಳು, ಕನ್ನಡ, ಇಂಗ್ಲಿಷ್ ನಿಯತಕಾಲಿಕಗಳು, ರಾಷ್ಟ್ರೀಯ ,ಅಂತರಾಷ್ಟ್ರೀಯ ಜರ್ನಲ್ ಗಳು ಹೀಗೆ ಹಲವಾರು ಮೌಲ್ಯ ಉಳ್ಳಂತಹ ಅನೇಕ ಪುಸ್ತಕಗಳು ಡಿಜಿಟಲ್ ಲೈಬ್ರರಿಯಲ್ಲಿವೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಬದುಕಿನ ಪುಟದಲ್ಲೊಂದು ಘಟನೆ

ಪ್ರಸಾದ್ ಶ್ರೀವತ್ಸ ,ದಾವಣಗೆರೆ. Klive Special Article ಮನುಷ್ಯನೆಂದ ಮೇಲೆ ಹಲವಾರು ಸರಿ-ತಪ್ಪು...

Rotary Shivamogga ವೈವಿಧ್ಯಮಯ ಕಲಾಪ್ರಕಾರಗಳ ಕಲಿಕೆಯಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ವೃದ್ಧಿ- ಡಿ.ಕಿಶೋರ್ ಕುಮಾರ್

Rotary Shivamogga ಬಾಲ್ಯದಿಂದಲೇ ಕಲೆ, ಸಾಹಿತ್ಯ, ನೃತ್ಯದ ಬಗ್ಗೆ ಮಕ್ಕಳಲ್ಲಿ ಆಸಕ್ತಿ...

Dinesh Gundu Rao ಎಬೊಲಾ ಸೋಂಕು ಬಾರದಂತೆ ಆರೋಗ್ಯ ಇಲಾಖೆ ಅಗತ್ಯ ಕ್ರಮ.- ದಿನೇಶ್ ಗುಂಡೂರಾವ್

Dinesh Gundu Rao ಎಬೋಲಾ ಸೋಂಕು ಬಾರದಂತೆ ತಡೆಯಲು ಆರೋಗ್ಯ ಇಲಾಖೆಯಿಂದ...