Friday, March 27, 2026
Friday, March 27, 2026
Home Blog Page 536

Bhadravati Police ವಾಹನ ಸವಾರನ ಮೇಲೆ ದಾಳಿ ನಡೆಸಿ ದರೋಡೆಗೈದ ಮೂವರು ಆರೋಪಿಗಳಿಗೆ ಕೋರ್ಟ್ ಶಿಕ್ಷೆ ಪ್ರಕಟ

0

Bhadravati Police 2019 ರಲ್ಲಿ ಪರೀಕ್ಷೆಯ ಹಿನ್ನೆಲೆಯಲ್ಲಿ ಶಿವಮೊಗ್ಗದ ಬಾಪೂಜಿ ನಗರದಲ್ಲಿ ಟ್ಯೂಷನ್ ಮುಗಿಸಿಕೊಂಡು ವಾಪಾಸ್ ಭದ್ರಾವತಿಗೆ ಬೈಕ್ ನಲ್ಲಿ ಹೋಗುವಾಗ ಮೂವರು ಅಪರಿಚಿತರಿಂದ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಿಗೆ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.

2019ರಲ್ಲಿ ಮೊಹಮ್ಮದ್ ಖಾಲೀದ್ (21) ವಾಪಾಸ್ ಭದ್ರಾವತಿಗೆ ಶಿವಮೊಗ್ಗದಿಮದ ವಾಪಾಸ್ ಹೋಗುವಾಗ ರಾಷ್ಟ್ರೀಯ ಹೆದ್ದಾರಿ 206 ರಲ್ಲಿರುವ ಪಾಪಣ್ಣನ ಕ್ಯಾಂಟೀನ್ ಮುಂದೆ ದ್ವಿ ಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಮೂವರು ಅಪರಿಚಿತ ವ್ಯಕ್ತಿಗಳು ಬಂದು ಅವರನ್ನು ತಡೆದು ಅಡ್ಡಗಟ್ಟಿ ನಿಲ್ಲಿಸಿ ನಗದು ಹಣ, ಮೊಬೈಲ್ ಫೋನ್ ಮತ್ತು ವಾಚ್ ಅನ್ನು ಕಿತ್ತು ಕೊಂಡು ಹೋಗಿದ್ದರು.

ಪ್ರಕರಣವು ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕಣದಲ್ಲಿ ಆಗಿನ ತನಿಖಾಧಿಕಾರಿಗಳಾದ ಭದ್ರಾವತಿ ನಗರ ವೃತ್ತ ಸಿಪಿಐ ರಾಘವೇಂದ್ರ ಕಾಂಡಿಕೆ, ಪ್ರಕರಣದ ತನಿಖೆ ಪೂರೈಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.

Bhadravati Police ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ರತ್ನಮ್ಮ ಪಿ, ಸರ್ಕಾರಿ ಅಭಿಯೋಜಕರಾಗಿ ವಾದ ಮಂಡಿಸಿದ್ದರು,
ಘನ ೪ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗ (ಪೀಠಾಸೀನ ಭದ್ರಾವತಿ)ಯಲ್ಲಿ ಪ್ರಕರಣದ ವಿಚಾರಣೆ ನಡೆದು, ಆರೋಪಿತರ ವಿರುದ್ಧ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ ನ್ಯಾಯಾಧೀಶೆ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ ಆರೋಪಿತರಾದ ಶಿವಮೊಗ್ಗ ನಗರದ ಸಯ್ಯದ್ ಇಬ್ರಾಹಿಂ (23), ಮೊಹಮ್ಮದ್ ಮುಸ್ತಫಾ (22), ಮೊಹಮ್ಮದ್ ಅಲ್ಲಾಭಕ್ಷಿ (22) ಇವರಿಗೆ. 05 ವರ್ಷ 1 ತಿಂಗಳು ಸಾದಾ ಕಾರಾವಾಸ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.

Lok Adalat ಡಿಸೆಂಬರ್ 14 ರಂದು ರಾಜ್ಯದಾದ್ಯಂತ ಲೋಕ ಅದಾಲತ್

0

Lok Adalat ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಡಿ.14 ರಂದು ರಾಜ್ಯಾದ್ಯಂತ ರಾಷ್ಟ್ರೀಯ ಲೋಕ್ ಆದಾಲತ್ ಹಮ್ಮಿಕೊಂಡಿದ್ದು, ಸಾರ್ವಜನಿಕರು ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಮತ್ತು ವ್ಯಾಜ್ಯ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಇಚ್ಛಿಸಿದಲ್ಲಿ ಮುಂಚಿತವಾಗಿ ಸಂಬಂಧಪಟ್ಟ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ತಾಲೂಕು ಕಾನೂನು ಸೇವಾ ಸಮಿತಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳುವಂತೆ ಕ.ರಾ.ಕಾ.ಸೇ.ಪ್ರಾ.ದ ಸದಸ್ಯ ಕಾರ್ಯದರ್ಶಿ ಎಂ.ಎಲ್. ರಘುನಾಥ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಇಚ್ಛಿಸುವವರು ಪ್ರಕರಣ ನಡೆಯುತ್ತಿರುವ ನ್ಯಾಯಾಲಯಕ್ಕೆ ಪ್ರಕರಣ ರಾಜೀ ಮಾಡಿಕೊಳ್ಳುವ ಕುರಿತು ತಿಳಿಸುವ ಮೂಲಕ ಅಥವಾ ಅರ್ಜಿ ಸಲ್ಲಿಸುವ ಮೂಲಕ ಪ್ರಕರಣ ಇತ್ಯರ್ಥ ಮಾಡಿಕೊಳ್ಳುವುದು.
Lok Adalat ಹೆಚ್ಚಿನ ಮಾಹಿತಿಗಾಗಿ www.kslsa.kar.nic.in, ಸಹಾಯವಾಣಿ ಸಂ.: 15100 ಅಥವಾ ನಿಮ್ಮ ಹತ್ತಿರದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳು ಅಥವಾ ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳನ್ನು ಸಂಪರ್ಕಿಸುವುದು. ಹಾಗೂ ಉಚ್ಛ ನ್ಯಾಯಾಲಯ ಕಾನೂನು ಸೇವೆಗಳ ಸಮಿತಿ, ಬೆಂಗಳೂರು – 080-522222919/22869988/22954809, ಉಚ್ಛ ನ್ಯಾಯಾಲಯ ಕಾನೂನು ಸೇವೆಗಳ ಸಮಿತಿ, ಧಾರವಾಡ- 0836-2485242, ಉಚ್ಛ ನ್ಯಾಯಾಲಯ ಕಾನೂನು ಸೇವೆಗಳ ಸಮಿ, ಕಲಬುರುಗಿ= 08472-264141 ಮತ್ತು ಶಿವಮೊಗ್ಗ 08182-222218, ಖಾಯಂ ಜನತಾ ನ್ಯಾಯಾಲಯಗಳ ಕಾರ್ಯಾಲಯದ ದೂ.ಸಂ.: ಬೆಂಗಳೂರು-080-22111726 ಗಳನ್ನು ಸ

Department of Women and Child Development ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಸಾಂಸ್ಕೃತಿಕ ಚಟುವಟಿಕೆ ಸಹಕಾರಿ- ಬಿ.ಎಚ್.ಕೃಷ್ಣಪ್ಪ

0

Department of Women and Child Development ಮಕ್ಕಳ ವ್ಯಕ್ತಿತ್ವ ವಿಕಾಸನದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಸಹಕಾರಿಯಾಗಿವೆೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಬಿ.ಹೆಚ್ ಕೃಷ್ಣಪ್ಪ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಜ್ಯ ಬಾಲ ಭವನ ಸೊಸೈಟಿ ಬೆಂಗಳೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಬಾಲ ಭವನ ಸಮಿತಿ, ಮುಖಾ-ಮುಖಿ ಎಸ್. ಟಿ ರಂಗತAಡ (ರಿ), ಇವರ ಸಂಯುಕ್ತ ಆಶ್ರಯದಲ್ಲಿ ದಸರಾ ಹಬ್ಬದ ಪ್ರಯುಕ್ತ ಸರ್ಕಾರಿ ಬಾಲ ಮಂದಿರದಲ್ಲಿ 06 ರಿಂದ 16 ವರ್ಷದ ಮಕ್ಕಳಿಗೆ ಅ. 8 ರಿಂದ 20 ರ ವರೆಗೆ ರಂಗ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಅತೀ ಸೂಕ್ಷö್ಮವಾಗಿ ಗಮನಿಸುತ್ತಾರೆ. ಅವರ ಬೆಳವಣಿಗೆಗೆ ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳು, ವ್ಯಕ್ತಿತ್ವ ವಿಕಾಸನ ಶಿಬಿರ, ರಂಗ ಶಿಬಿರ ತರಬೇತಿಗಳು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತವೆ. ಪ್ರತಿಯೊಬ್ಬರು ಈ ಶಿಬಿರದ ಉಪಯೋಗ ಪಡೆದುಕೊಳ್ಳಿ ಎಂದರು.
Department of Women and Child Development ರಂಗಾಯಣದ ಆಡಳಿತ ಅಧಿಕಾರಿ ಡಾ. ಶೈಲಜಾ ಮಾತನಾಡಿ, ಮಕ್ಕಳಲ್ಲಿ ಬಾಲ್ಯದಲ್ಲಿಯೇ ರಂಗ ಶಿಕ್ಷಣ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಕುರಿತು ಅರಿವು ಮೂಡಿಸಬೇಕು. ಮಕ್ಕಳು ಮುಂದೆ ಈ ಕ್ಷೇತ್ರದಲ್ಲಿ ಉತ್ತಮವಾದ ಭವಿಷ್ಯವನ್ನು ಕಂಡುಕೊಳ್ಳಲು ಸಾಕಷ್ಟು ಅವಕಾಶಗಳಿದೆ ಎಂದ ಅವರು ರಂಗ ತರಬೇತಿ, ರಂಗಭೂಮಿಯ ಉದ್ದೇಶ, ಪ್ರಾಮುಖ್ಯತೆ ಹಾಗೂ ರಂಗಾಯಣ ಸಂಸ್ಥೆಯ ಕಾರ್ಯ ಚಟುವಟಿಯ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ರಂಗಕರ್ಮಿ ಡಾ. ಸಾಸ್ವೇಹಳ್ಳಿ ಸತೀಶ್ ಅವರು ಮಕ್ಕಳಿಗೆ ರಂಗ ನಾಟಕ, ಜನಪದ ಗೀತೆ, ಭರತನಾಟ್ಯ, ನಮ್ಮ ಕಲೆ ಮತ್ತು ಸಂಸ್ಕೃತಿಯ ಕುರಿತು ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಶಶಿರೇಖಾ, ಮುಖಾ-ಮುಖಿ ಎಸ್.ಟಿ ರಂಗ ತಂಡದ ನಿರ್ದೇಶಕ ಮಂಜು ರಂಗಾಯಣ, ಶಿಬಿರ ನಿರ್ದೇಶಕ ಶಂಕರ್ ಕೆ., ಸರ್ಕಾರಿ ಬಾಲಕಿಯರ ಬಾಲ ಮಂದಿರ ಅಧೀಕ್ಷಕಿ ಜ್ಯೋತಿಕಲಾ, ಸರ್ಕಾರಿ ಬಾಲಕರ ಬಾಲ ಮಂದಿರ ಮತ್ತು ಬಾಲಕಿಯರ ಬಾಲ ಮಂದಿರದ ಮಕ್ಕಳು ಉಪಸ್ಥಿತರಿದ್ದರು.

Ratan Tata ರತನ್ ಟಾಟಾಜಿ‌‌ ಶ್ರೇಷ್ಠ ಉದ್ಯಮ ರಂಗದ ನಾಯಕ- ಪ್ರಧಾನಿ ಮೋದಿ

0

Ratan Tata ಶ್ರೀ ರತನ್ ಟಾಟಾ ಜಿ ಅವರು ದಾರ್ಶನಿಕ ಉದ‌ಯಮಿ ನಾಯಕ, ಸಹಾನುಭೂತಿಯ ಆತ್ಮವುಳ್ಳ ಅಸಾಧಾರಣ ಮನುಷ್ಯ. ಅವರು ಭಾರತದ ಅತ್ಯಂತ ಹಳೆಯ ಮತ್ತು ಪ್ರತಿಷ್ಠಿತ ವ್ಯಾಪಾರ ಸಂಸ್ಥೆಗಳಲ್ಲಿ ಒಂದಕ್ಕೆ ಸ್ಥಿರ ನಾಯಕತ್ವವನ್ನು ಒದಗಿಸಿದರು. ಅದೇ ಸಮಯದಲ್ಲಿ, ಅವರ ಕೊಡುಗೆಯು ಬೋರ್ಡ್ ರೂಮ್ ವ್ಯಾಪ್ತಿಯನ್ನು ಮೀರಿದೆ. ಅವರ ನಮ್ರತೆ, ದಯೆ ಮತ್ತು Ratan Tata ನಮ್ಮ ಸಮಾಜವನ್ನು ಉತ್ತಮಗೊಳಿಸುವ ಅಚಲವಾದ ಬದ್ಧತೆಗೆ ಧನ್ಯವಾದಗಳು ಅವರು ಅಪಾರ ಸಂಖ್ಯೆಯ ಜನರನ್ನು ಪ್ರೀತಿಸುತ್ತಿದ್ದರು.
ಎಂದು ಪ್ರಧಾನಿ ಮೋದಿ ತಮ್ಮ ಶ್ರದ್ಧಾಂಜಲಿ ಸಂದೇಶದಲ್ಲಿ ತಿಳಿಸಿದ್ದಾರೆ.

Navaratri Festival ನವರಾತ್ರಿ ಎಂಟನೇ ದಿನ. ದೇವಿಯ ಮಹಾಗೌರಿ‌ ರೂಪದ ಆರಾಧನೆ. ಬರಹ: ಎನ್.ಜಯಭೀಮ ಜೊಯಿಸ್.ಶಿವಮೊಗ್ಗ.

0

Navaratri Festival “ಶ್ವೇತೆ ವೃಷೇ ಸಮಾರೂಢಾ ಶ್ವೇತಾಂಬರಧರಾ ಶುಚಿಃ/
ಮಹಾಗೌರೀ ಶುಭಂ ದದ್ಯಾತ್ ಮಹಾದೇವ
ಪ್ರಮೋದದಾ//


Navaratri Festival ಇಂದು ನವರಾತ್ರಿಯ ಎಂಟನೆಯ ದಿವಸ.
ಇಂದು ದೇವಿಯ ಎಂಟನೆಯ ರೂಪವಾದ ಮಹಾ
ಗೌರಿಯ ಆರಾಧನೆಯ ದಿನ.
ಸರ್ವ ಸನ್ಮಂಗಳ ಕಾರಿಣಿಯಾದ ದೇವಿಯ ರೂಪ
ಮಹಾಗೌರಿಯ ಅವತಾರ ರೂಪ.ಶ್ವೇತ ವರ್ಣದಿಂದ ಕಂಗೊಳಿಸುವ ಮಾತೆಯ ದೇಹವೆಲ್ಲಾ ಪ್ರಭೆಯಿಂದ
ಹೊಳೆಯುವುದು.ನಂದಿವಾಹನರೂಢಳಾದ ದೇವಿಯು ಶಾಂತಿ ಮತ್ತು ಸಂತೋಷದ ಪ್ರತೀಕ.
ನಾಲ್ಕು ಭುಜಗಳನ್ನು ಹೊಂದಿರುವ ಮಾತೆ,ಅಭಯ ಹಸ್ತದಿಂದ ಭಕ್ತರನ್ನು ಹರಸುತ್ತಿದ್ದಾಳೆ.ಒಂದು ಕೈಯಲ್ಲಿ
ದುಷ್ಟಶಕ್ತಿಗಳನ್ನು ನಿಗ್ರಹಿಸಲು ತ್ರಿಶೂಲವನ್ನು ಹಿಡಿದಿರು
ತ್ತಾಳೆ.
ಭಕ್ತರಿಗೆ ಶಾಂತಿ ಮತ್ತು ಸಂತೋಷವನ್ನುಕೊಟ್ಟು
ಅನುಗ್ರಹಿಸುವ ಮಹಾಗೌರಿಮಾತೆಗೆ ಭಕ್ತಿಯ ನಮನಗಳನ್ನು ಅರ್ಪಿಸಿ ತಾಯಿಯ ಅನುಗ್ರಹಕ್ಕೆ ಪಾತ್ರರಾಗೋಣ.

Ratan Naval Tata ಭಾರತದ “ರತನ್” ಕಣ್ಮರೆ

0

Ratan Naval Tata ಭಾರತದ ಕೈಗಾರಿಕಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ ಟಾಟಾ ಸಮೂಹ.
ವಿವಿಧ ಕ್ಷೇತ್ರಗಳಲ್ಲಿ ಮೌಲ್ಯಾಧಾರಿತ ಉತ್ಪನ್ನಗಳಿಗೆ ವಿಶ್ವಖ್ಯಾತಿ
ಗಳಿಸಿದೆ.
ಇತ್ತೀಚೆಗೆ ಆಟೊಮೊಬೈಲ್ ಕ್ಷೇತ್ರದಲ್ಲಿ ಕ್ಷಿಪ್ರ ಬೆಳವಣಿಗೆ ತೋರುತ್ತಿದೆ.
ಅಂತಹ ಪ್ರಚಂಡ ದಾಖಲೆಯುಳ್ಳ ಟಾಟಾ ಸಮೂಹದ ಬೆನ್ನೆಲುಬು‌ ರತನ್ ನೇವಲ್ ಟಾಟಾ.

ಎಂಭತ್ತಾರು ವರ್ಷದ ರತನ್ ಜಿ ಅವರು ಮುಂಬೈ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಅನಾರೋಗ್ಯ ನಿಮಿತ್ತ ದಾಖಲಾಗಿದ್ದರು .
ಚಿಕಿತ್ಸೆ ಫಲಕಾರಿಯಾಗದೇ
ವಯೋಸಹಜ ಅಸ್ವಸ್ಯತೆಯಿಂದ ನಿಧನರಾಗಿದ್ದಾರೆ.

ಟಾಟಾ ಗ್ರೂಪ್‌ನ ಅತ್ಯಂತ ಗೌರವಾನ್ವಿತ ನಾಯಕ ರತನ್ ಟಾಟಾ ಅವರು ಅಕ್ಟೋಬರ್ 9 ರಂದು ತಮ್ಮ 86 ನೇ ವಯಸ್ಸಿನಲ್ಲಿ ನಿಧನರಾದರು. ಅವರು 30 ವರ್ಷಗಳಿಗೂ ಹೆಚ್ಚು ಕಾಲ ಸಂಘಟಿತ ಸಂಸ್ಥೆಯನ್ನು ಮುನ್ನಡೆಸಿದ್ದರು.
.
Ratan Naval Tata ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್‌ಅವರು
ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ,
“ನಾವು ಆಳವಾದ ನಷ್ಟದ ಭಾವನೆಯೊಂದಿಗೆ ಶ್ರೀ ರತನ್ ಜಿ ಅವರಿಗೆ ವಿದಾಯ ಹೇಳುತ್ತೇವೆ ಎಂದಿದ್ದಾರೆ.
ಭಾರತದಲ್ಲಿ ಉಪ್ಪು ತಯಾರಿಕೆಯಿಂದ ಆರಂಭಿಸಿ ಕೋಟಿ ಕೋಟಿ ರೂಪಾಯಿ ಬೆಲೆ ಬಾಳುವ ಆಕರ್ಷಕ ಕಾರ್‌ಗಳ ತನಕ ವ್ಯಾಪಾರ ಮಾಡಿ ಲಾಭ ಪಡೆದು ಯಶಸ್ವಿಯಾದ ಸಂಸ್ಥೆ ಎನಿಸಿಕೊಂಡ ಒಂದೇ ಒಂದು ದೊಡ್ಡ ಸಂಸ್ಥೆ ಏನಾದರೂ ಇದ್ದರೆ ಅದು ಟಾಟಾ ಸಂಸ್ಥೆ ಮಾತ್ರ ಎಂಬ ಮಾತು ರತನ್ ಟಾಟಾ ಎಂದಾಕ್ಷಣ ನೆನಪಾಗುತ್ತದೆ.

District Directorate Of Welfare Of Disabled & Senior Citizen ಸರೆಬ್ರಲ್ ಪಾಲ್ಸಿ, ಮಸ್ಕ್ಯುಲರ್ ಡೈಸ್ಟ್ರೋಫಿ, ಪಾರ್ಕಿನ್ಸನ್ ,ಮಲ್ಟಿಪಲ್ ಸಿರೋಸಿಸ್ ‌ಕಾಯಿಲೆಯುಳ್ಳ ಹಿರಿಯ ನಾಗರೀಕರಿಗೆ ಪ್ರೋತ್ಸಾಹ ಧನ ಮಾಹಿತಿ

0

District Directorate Of Welfare Of Disabled & Senior Citizen ಶಿವಮೊಗ್ಗ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ಜಿಲ್ಲೆಯಲ್ಲಿನ ಸೆರೆಬ್ರಲ್ ಪಾಲ್ಸಿ, ಮಸ್ಕಲರ್ ಡೈಸ್ಟ್ರೋಫಿ, ಪಾರ್ಕಿನ್‌ಸನ್ಸ್ ಮತ್ತು ಮಲ್ಟಿಪಲ್ ಸ್ಕೆರೋಸಿಸ್ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗಳ ಆರೈಕೆದಾರರಿಗೆ ರೂ. 1000/-ಗಳ ಪ್ರೋತ್ಸಾಹಧನವನ್ನು ನೀಡುವ ಯೋಜನೆಯಡಿ ಅರ್ಜಿ ಆಹ್ವಾನಿಸಿದೆ.
ಆರ್ಹರು ನಿಗದಿತ ನಮೂನೆ ಅರ್ಜಿಯನ್ನು ಆಯಾ ತಾಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು (ವಿ.ಆರ್.ಡಬ್ಲ್ಯೂ) ಹಾಗೂ ತಾಲೂಕು ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರು (ಎಂ.ಆರ್.ಡಬ್ಲ್ಯೂ) ಗಳಿಂದ ಪಡೆದು ಭರ್ತಿ ಮಾಡಿದ ಅರ್ಜಿಯೊಂದಿಗೆ ಎಲ್ಲಾ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಅ. 30 ರೊಳಗಾಗಿ ಸಲ್ಲಿಸುವಂತೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
District Directorate Of Welfare Of Disabled & Senior Citizen ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗ ತಾಲೂಕು ಶ್ರೀಧರ (ವಿ.ಆರ್.ಡಬ್ಲ್ಯೂ)-9880972583, ಸುಮ (ಯು.ಆರ್.ಡಬ್ಲ್ಯೂ)-8746997896, ಭದ್ರಾವತಿ ತಾಲೂಕು, ದಿನೇಶ-7899137243, ಶಿಕಾರಿಪುರ ತಾಲೂಕು, ಹುಚ್ಚರಾಯಪ್ಪ ಎಂ.-9741161346, ಸಾಗರ ತಾಲೂಕು, ಶ್ಯಾಮ್‌ಸುಂದರ್-9535247757, ಸೊರಬ-ಭರತ್‌ಕುಮಾರ್ ಹೆಚ್.ಸಿ.-9110493122, ತೀರ್ಥಹಳ್ಳಿ ತಾಲೂಕು, ದಿವಾಕರ ಬಿ.-9480767638 ಹಾಗೂ ಹೊಸನಗರ ತಾಲೂಕು, ರವಿಕುಮಾರ್-9731922693 ಇವರುಗಳನ್ನು ಸಂಪರ್ಕಿಸುವುದು.

Mysore Dasara ನಿರ್ಬಂಧದ ನಡುವೆಯೂ ಮಹಿಷ ದಸರಾಗೆ ಚಾಲನೆ

0

Mysore Dasara ವಿರೋಧದ ಹೊರತಾಗಿಯೂ ಮಹಿಷ ಮೂರ್ತಿಗೆ ಪುಷ್ಪಾರ್ಚನೆ, ಮಹಿಷ ದಸರಾಗೆ ಚಾಲನೆ ಟೌನ್ ಹಾಲ್ ಹೊರತುಪಡಿಸಿ ಮೈಸೂರಲ್ಲಿ ಮಹಿಷ ಆಚರಣೆಗೆ ನಿಷೇಧಾಜ್ಞೆ ಹೇರಲಾಗಿತ್ತು.

ಮೈಸೂರಿನಲ್ಲಿ ಮಹಿಷ ದಸರಾ ಆಚರಣೆಗೆ ನಿರ್ಬಂಧದ ಹೊರತಾಗಿಯೂ ಮಹಿಷ ಮೂರ್ತಿಗೆ ಪುಷ್ಪಾರ್ಚನೆ ಮಾಡಲಾಗಿದೆ.

ಮಹಿಷ ದಸರಾ ಸಮಿತಿಯ ಸದಸ್ಯರು ನಗರದ ಪುರಭವನದಲ್ಲಿ ಮಹಿಷನ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಮಹಿಷ ದಸರಾಗೆ ಚಾಲನೆ ನೀಡಲಾಗಿದೆ.

Mysore Dasara ಷೇಧಾಜ್ಞೆ ಹಿನ್ನೆಲೆಯಲ್ಲಿ 5ಕ್ಕಿಂತ ಹೆಚ್ಚು ಜನರು ಸೇರಲು ನಿರ್ಬಂಧ ವಿಧಿಸಿರುವುದನ್ನು ವಿರೋಧಿಸಿ ಸಮಿತಿಯ ಸದಸ್ಯರು ಪ್ರತಿಭಟನೆ ನಡೆಸಿದ್ದರು. ಆದರೆ ನಿಷೇಧಾಜ್ಞೆ ಹೊರತಾಗಿಯೂ ಪುರಭವನದಲ್ಲಿ ಚಾಲನೆ ನೀಡಲಾಗಿದೆ.
ಮೈಸೂರಲ್ಲಿ ಮಹಿಷ ಆಚರಣೆಗೆ ವಿಧಿಸಿದ್ದ ನಿಷೇಧಾಜ್ಞೆಯನ್ನು ಈ ಮೂಲಕ ಪೊಲೀಸರೇ ಮುಂದೆ ನಿಂತು ಉಲ್ಲಂಘನೆಯಾಗುವುದಕ್ಕೆ ಅವಕಾಶ ಮಾಡಿಕೊಟ್ಟಂತಾಗಿದೆ ಎಂಬ ಆರೋಪ ಕೇಳಿಬಂದಿದೆ.

ಆದರೆ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಚಾಮುಂಡಿ ಬೆಟ್ಟದಲ್ಲಿ ಮಹಿಷ ಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸಲು ಅವಕಾಶ ನೀಡಿಲ್ಲ ಎಂದು ಹೇಳಿದ್ದಾರೆ. ಟೌನ್ ಹಾಲ್ ಹೊರತುಪಡಿಸಿ ಮೈಸೂರಲ್ಲಿ ಮಹಿಷ ಆಚರಣೆಗೆ ನಿಷೇಧಾಜ್ಞೆ ಹೇರಲಾಗಿತ್ತು.

Bannerghatta National Park ಬಸ್ಸಿನ ಕಿಟಕಿಯಲ್ಲಿ ಮುಖ ಚಾಚಿದ ಚಿರತೆ. ಬನ್ನೇರುಘಟ್ಟ ಉದ್ಯಾನವನದಲ್ಲಿ ಘಟನೆ

0

Bannerghatta National Park ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಚಿರತೆಯೊಂದು ಏಕಾಏಕಿ ಸಫಾರಿ ಬಸ್ ಏರಿದ್ದು, ಕೆಲವು ಪ್ರವಾಸಿಗರು ಆತಂಕಗೊಂಡಿದ್ದು, ಇನ್ನು ಕೆಲವರು ಕಿಟಕಿಯಲ್ಲಿ ಚಿರತೆ ನೋಡಿ ಖುಷಿಪಟ್ಟಿದ್ದಾರೆ.
ಈ ರೋಮಾಂಚಕ ಕ್ಷಣದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಚಿರತೆ ಬಸ್ ಹತ್ತಲು ಪ್ರಯತ್ನಿಸಿದೆ ಮತ್ತು ಗಾಬರಿಗೊಂಡ ಪ್ರಯಾಣಿಕರನ್ನು ವಾಹನದ ಕಿಟಕಿಯ ಮೂಲಕ ಇಣುಕಿ ನೋಡಿದೆ.

Bannerghatta National Park ನಂತರ ಚಾಲಕ ಬಸ್ ಅನ್ನು ನಿಧಾನವಾಗಿ ಮುಂದಕ್ಕೆ ಚಲಿಸಲು ಪ್ರಾರಂಭಿಸುತ್ತಿದ್ದಂತೆ ಕೆಳಕ್ಕೆ ಹಾರಿ ಹೋಗಿದೆ.
ಅಧಿಕಾರಿಗಳ ಪ್ರಕಾರ, ಭಾನುವಾರ ಸಫಾರಿ ವೇಳೆ ಚಾಲಕ ವನ್ಯಜೀವಿಗಳನ್ನು ಹತ್ತಿರದಿಂದ ವೀಕ್ಷಿಸಲು ಕರೆದುಕೊಂಡು ಹೋದಾಗ ಈ ಘಟನೆ ನಡೆದಿದೆ.

ಈ ದೃಶ್ಯವನ್ನು ಪ್ರವಾಸಿಗರು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.

BSNL ಬಿಎಸ್ ಎನ್ ಎಲ್ ಬೆಳ್ಳಿಹಬ್ಬದ ವಿಶೇಷ ಕೊಡುಗೆ

0

BSNL ಬಿಎಸ್‌ಎನ್‌ಎಲ್ ದಿನದಿಂದ ದಿನಕ್ಕೆ ತನ್ನ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಖಾಸಗಿ ಕಂಪನಿಗಳ ಬೆಲೆ ಏರಿಕೆಯನ್ನು ಸಂಪೂರ್ಣವಾಗಿ ಲಾಭವನ್ನಾಗಿ ಮಾಡಿಕೊಳ್ಳುವಲ್ಲಿ ಬಿಎಸ್‌ಎನ್‌ಎಲ್ ಯಶಸ್ವಿಯಾಗಿದೆ.

ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಮೂರು ಖಾಸಗಿ ಕಂಪನಿಗಳು ಪೋಸ್ಟ್‌ಪೇಯ್ಡ್ ಮತ್ತುy ಪ್ರಿಪೇಯ್ಡ್ ಬೆಲೆಗಳನ್ನು ಶೇ.15ರಷ್ಟು ಹೆಚ್ಚಿಸಿವೆ. ಜನಸಾಮಾನ್ಯರ ಜೇಬಿಗೆ ಹಿತವಾಗುವ ಪ್ಲಾನ್‌ಗಳನ್ನು ಬಿಎಸ್‌ಎನ್‌ಎಲ್ ನೀಡುತ್ತಿರೋದರಿಂದ ಗ್ರಾಹಕರ ಸಂಖ್ಯೆ ಏರಿಕೆಯಾಗುತ್ತಿದೆ.

ಇದೀಗ ಹೊಸ ಆಫರ್ ಬಿಡುಗಡೆ ಮಾಡಿರುವ ಬಿಎಸ್‌ಎನ್‌ಎಲ್ 24GB ಡೇಟಾ ಉಚಿತವಾಗಿ ನೀಡುವ ಘೋಷಣೆ ಮಾಡಿದೆ. 24 GB ಉಚಿತ ಡೇಟಾ ಹೇಗೆ ಆಕ್ಟಿವೇಟ್ ಮಾಡಿಕೊಳ್ಳಬೇಕು ಎಂಬುದರ ಮಾಹಿತಿ ಇಲ್ಲಿದೆ.

ಬಿಎಸ್‌ಎನ್ಎಲ್ ಈ ತಿಂಗಳು 25ನೇ ವರ್ಷದ ಸಂಭ್ರಮಾಚರಣೆಯಲ್ಲಿದೆ. ಬಎಸ್‌ಎನ್ಎಲ್ ಸಂಸ್ಥೆ ಹುಟ್ಟಿಕೊಂಡು 24 ವರ್ಷ ಕಳೆದಿದ್ದು, ತನ್ನ ಗ್ರಾಹಕರಿಗೆ 24 GB ಉಚಿತ ಡೇಟಾವನ್ನು 4G ಸ್ಪೀಡ್‌ನಲ್ಲಿ ನೀಡುತ್ತಿ ದೆ. ಈ ಆಫರ್ ಕೆಲ ಅರ್ಹ ಬಳಕೆದಾರರಿಗೆ ಮಾತ್ರ ಲಭ್ಯವಾಗಲಿದೆ.
24GB ಹೆಚ್ಚುವರಿ ಡೇಟಾ ಪಡೆಯಲು ಬಯಸುವ BSNL ಬಳಕೆದಾರರು/ಚಂದಾದಾರರು ರೂ 500ಕ್ಕಿಂತ ಹೆಚ್ಚು ಮೌಲ್ಯದ ವೋಚರ್‌ ಪಡೆದು ರೀಚಾರ್ಜ್ ಮಾಡಿಕೊಳ್ಳಬೇಕು. ಅಕ್ಟೋಬರ್ 1 ಮತ್ತು ಅಕ್ಟೋಬರ್ 24 ರ ನಡುವೆ ರೀಚಾರ್ಜ್ ಅನ್ನು ಪೂರ್ಣಗೊಳಿಸಿಕೊಂಡಿರಬೇಕು. ಈ ವೋಚರ್ ಮೂಲಕ ಗ್ರಾಹಕರಿಗೆ ಹೆಚ್ಚುವರಿ ಅಂದ್ರೆ 24 GB ಲಭ್ಯವಾಗುತ್ತದೆ.
ಕಳೆದ 24 ವರ್ಷಗಳಿಂದ ಗ್ರಾಹಕರ ನಂಬಿಕೆ ಉಳಿಸಿಕೊಂಡು ನಾವೀನ್ಯತೆಯೊಂದಿಗೆ ಸೇವೆಯನ್ನು ಸಲ್ಲಿಸುತ್ತಿದೆ.

BSNL 24 ವರ್ಷಗಳಿಂದ ಬಿಎಸ್‌ಎನ್‌ಎಲ್ ಭಾರತವನ್ನು ಒಂದಾಗಿಸಿದೆ. ನೀವು ಇಲ್ಲದಿದ್ದರೆ ಇದ್ಯಾವೂದೂ ಸಾಧ್ಯವಾಗುತ್ತಿರಲಿಲ್ಲ. ಈ ಮೈಲಿಗಲ್ಲನ್ನು ನಮ್ಮೊಂದಿಗೆ ಆಚರಿಸಲು ಬಿಎಸ್ಎನ್‌ಎಲ್ ಇಷ್ಟಪಡುತ್ತದೆ. ₹ 500/- ಕ್ಕಿಂತ ಹೆಚ್ಚಿನ ರೀಚಾರ್ಜ್ ವೋಚರ್‌ಗಳಲ್ಲಿ 24 GB ಹೆಚ್ಚುವರಿ ಡೇಟಾವನ್ನು ಆನಂದಿಸಿ ಎಂದು ಬಿಎಸ್‌ಎನ್‌ಎಲ್ ಎಕ್ಸ್ ಖಾತೆ ಮೂಲಕ ಅಧಿಕೃತ ಮಾಹಿತಿಯನ್ನು ನೀಡಿದೆ.

ಸೆಪ್ಟೆಂಬರ್ 15, 2000 ರಂದು ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ತನ್ನ ಸೇವೆಯನ್ನು ಆರಂಭಿಸಿತ್ತು. ಅಕ್ಟೋಬರ್ 1, 2000 ರಿಂದ BSNL ದೇಶಾದ್ಯಂತ ದೂರಸಂಪರ್ಕ ಸೇವೆಗಳನ್ನು ಒದಗಿಸುತ್ತಿದೆ. ಖಾಸಗಿ ಕಂಪನಿಗಳು ತೀವ್ರ ಸ್ಪರ್ಧೆಯ ನಡುವೆಯೂ ಬಿಎಸ್ಎನ್ಎಲ್ ತನ್ನದೇ ಆದ ಗ್ರಾಹಕರನ್ನು ಉಳಿಸಿಕೊಂಡು ಸೇವೆಯನ್ನು ನೀಡುತ್ತಾ ಬಂದಿದೆ. BSNL ವಿಶ್ವ ದರ್ಜೆಯ ISO 9000 ಪ್ರಮಾಣೀಕೃತ ಟೆಲಿಕಾಂ ತರಬೇತಿ ಸಂಸ್ಥೆಯನ್ನು ಹೊಂದಿದೆ.