Ratan Naval Tata ಭಾರತದ ಕೈಗಾರಿಕಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ ಟಾಟಾ ಸಮೂಹ.
ವಿವಿಧ ಕ್ಷೇತ್ರಗಳಲ್ಲಿ ಮೌಲ್ಯಾಧಾರಿತ ಉತ್ಪನ್ನಗಳಿಗೆ ವಿಶ್ವಖ್ಯಾತಿ
ಗಳಿಸಿದೆ.
ಇತ್ತೀಚೆಗೆ ಆಟೊಮೊಬೈಲ್ ಕ್ಷೇತ್ರದಲ್ಲಿ ಕ್ಷಿಪ್ರ ಬೆಳವಣಿಗೆ ತೋರುತ್ತಿದೆ.
ಅಂತಹ ಪ್ರಚಂಡ ದಾಖಲೆಯುಳ್ಳ ಟಾಟಾ ಸಮೂಹದ ಬೆನ್ನೆಲುಬು ರತನ್ ನೇವಲ್ ಟಾಟಾ.
ಎಂಭತ್ತಾರು ವರ್ಷದ ರತನ್ ಜಿ ಅವರು ಮುಂಬೈ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಅನಾರೋಗ್ಯ ನಿಮಿತ್ತ ದಾಖಲಾಗಿದ್ದರು .
ಚಿಕಿತ್ಸೆ ಫಲಕಾರಿಯಾಗದೇ
ವಯೋಸಹಜ ಅಸ್ವಸ್ಯತೆಯಿಂದ ನಿಧನರಾಗಿದ್ದಾರೆ.
ಟಾಟಾ ಗ್ರೂಪ್‌ನ ಅತ್ಯಂತ ಗೌರವಾನ್ವಿತ ನಾಯಕ ರತನ್ ಟಾಟಾ ಅವರು ಅಕ್ಟೋಬರ್ 9 ರಂದು ತಮ್ಮ 86 ನೇ ವಯಸ್ಸಿನಲ್ಲಿ ನಿಧನರಾದರು. ಅವರು 30 ವರ್ಷಗಳಿಗೂ ಹೆಚ್ಚು ಕಾಲ ಸಂಘಟಿತ ಸಂಸ್ಥೆಯನ್ನು ಮುನ್ನಡೆಸಿದ್ದರು.
.
Ratan Naval Tata ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್‌ಅವರು
ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ,
“ನಾವು ಆಳವಾದ ನಷ್ಟದ ಭಾವನೆಯೊಂದಿಗೆ ಶ್ರೀ ರತನ್ ಜಿ ಅವರಿಗೆ ವಿದಾಯ ಹೇಳುತ್ತೇವೆ ಎಂದಿದ್ದಾರೆ.
ಭಾರತದಲ್ಲಿ ಉಪ್ಪು ತಯಾರಿಕೆಯಿಂದ ಆರಂಭಿಸಿ ಕೋಟಿ ಕೋಟಿ ರೂಪಾಯಿ ಬೆಲೆ ಬಾಳುವ ಆಕರ್ಷಕ ಕಾರ್‌ಗಳ ತನಕ ವ್ಯಾಪಾರ ಮಾಡಿ ಲಾಭ ಪಡೆದು ಯಶಸ್ವಿಯಾದ ಸಂಸ್ಥೆ ಎನಿಸಿಕೊಂಡ ಒಂದೇ ಒಂದು ದೊಡ್ಡ ಸಂಸ್ಥೆ ಏನಾದರೂ ಇದ್ದರೆ ಅದು ಟಾಟಾ ಸಂಸ್ಥೆ ಮಾತ್ರ ಎಂಬ ಮಾತು ರತನ್ ಟಾಟಾ ಎಂದಾಕ್ಷಣ ನೆನಪಾಗುತ್ತದೆ.