Friday, March 27, 2026
Friday, March 27, 2026
Home Blog Page 537

Big Boss Kannada “ಜಗದೀಶ್ ಅವರನ್ನ ಲಾಯರ್ ಎಂದು ಕರೆಯಬೇಡಿ” ವಕೀಲರ ಸಂಘದ ಪತ್ರ

0

Big Boss Kannada ಬಿಗ್ ಬಾಸ್ ಕನ್ನಡ 11ನೇ ಆವೃತ್ತಿಯಲ್ಲಿ ಜಗದೀಶ್ ಆಟಾಟೋಪ ಮೀತಿ ಮೀರಿ ನಡೆಯುತ್ತಿದ್ದು ಬಿಗ್ ಬಾಸ್ ಸ್ಪರ್ಧಿಗಳಿಗೆ ಹೆಚ್ಚು ಪೀಕಲಾಟಕ್ಕೆ ಕಾರಣವಾಗಿದೆ. ಅಲ್ಲದೆ ಪದೇ ಪದೇ ಮನೆಯಿಂದ ಆಚೆ ನೋಡಿಕೊಳ್ಳುತ್ತಿದ್ದೇನೆ ಎಂದು ಹೇಳುವ ಮೂಲಕ ಪ್ರತಿಸ್ಪರ್ಧಿಗಳನ್ನು ಎದುರಿಸುತ್ತಿದ್ದಾರೆ. ಇದಕ್ಕೆ ಕಾರಣ ತಾನು ವಕೀಲ ಎಂಬ ಮನೋ ಧೈರ್ಯ. ಆದರೆ ಜಗದೀಶ್ ಅವರು ನಿಜಕ್ಕೂ ಲಾಯರ್ ಹೌದೋ ಅಲ್ಲವೋ ಎಂಬ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿವೆ.

ಇದಕ್ಕೆ ಕಾರಣವಾಗಿರುವುದು ಬೆಂಗಳೂರು ವಕೀಲರ ಸಂಘ, ಕಲರ್ಸ್ ಕನ್ನಡ ವಾಹಿನಿಗೆ ಬರೆದಿರುವ ಪತ್ರ. ಹೌದು ಕೆ.ಎನ್ ಜಗದೀಶ್ ಅವರನ್ನು ಲಾಯರ್ ಎಂದು ಕರೆಯಬಾರದು ಎಂದು ವಕೀಲರ ಸಂಘವು ತಾಕೀತು ಮಾಡಿದೆ. ಬೆಂಗಳೂರು ವಕೀಲರ ಸಂಘವು ಏಷ್ಯಾದಲ್ಲಿಯೇ ಅತಿ ದೊಡ್ಡ ಸಂಘವಾಗಿದ್ದು, ಸಮಾಜದಲ್ಲಿ ಅದರ ಘನತೆ ಮತ್ತು ಗೌರವವನ್ನು ಕಾಪಾಡಿಕೊಂಡು ಬಂದಿದೆ. ನಮ್ಮ ಸಂಘವು ಸುಮಾರು 25 ಸಾವಿರಕ್ಕೂ ಹೆಚ್ಚು ವಕೀಲ ಸದಸ್ಯರನ್ನು ಹೊಂದಿದೆ.

ವಕೀಲರ ಸಮುದಾಯವು ದಿನನಿತ್ಯದ ನ್ಯಾಯಾಲಯ ಕಲಾಪಗಳಲ್ಲಿ ಭಾಗವಹಿಸಿ ಸಮಾಜದಲ್ಲಿ ಅತ್ಯಂತ ಗೌರವಪೂರ್ವಕವಾಗಿ ವೃತ್ತಿಯನ್ನು ನಡೆಸಿಕೊಂಡು ಬರುತ್ತಿದ್ದು, ಸಮಾಜಕ್ಕೆ ಮಾದರಿಯಾಗಿದೆ. ಇಂತಹ ಸಂಸ್ಥೆಗೆ ಯಾವುದೇ ವ್ಯಕ್ತಿಗಳು ಮಸಿ ಬಳಿಯಲು ಪ್ರಯತ್ನಪಟ್ಟರೆ ಅದನ್ನು ಸಹಿಸಲು ಆಗುವುದಿಲ್ಲ.
ತಮ್ಮ ಚಾನಲ್‌ನಲ್ಲಿ ಇತ್ತೀಚೆಗೆ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಭಾಗವಹಿಸಿರುವ ಕೆ.ಎನ್ ಜಗದೀಶ್‌ ಅವರು ವಕೀಲರಲ್ಲದಿದ್ದರೂ ಸಹ ಬಿಗ್ ಬಾಸ್-11ರ ಪ್ರಸಾರ ಕಾರ್ಯಕ್ರಮದಲ್ಲಿ ಅವರನ್ನು ವಕೀಲರು ಮತ್ತು ವಕೀಲ್ ಸಾಹೇಬ್ ಎಂದು ಬಿಂಬಿಸುತ್ತಿರುವುದು ನಮ್ಮ ವಕೀಲರ ಸಂಘದ ಸದಸ್ಯರಿಗೆ ನೋವುಂಟು ಮಾಡಿರುತ್ತದೆ ಮತ್ತು ಅನೇಕ ವಕೀಲರು ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ್ದಾರೆ.

Big Boss Kannada ಈ ಹಿಂದೆಯೇ ಕರ್ನಾಟಕ ರಾಜ್ಯದ ವಕೀಲರ ಪರಿಷತ್ತು ಕರ್ನಾಟಕ ರಾಜ್ಯದಲ್ಲಿ ಕಾನೂನು ವೃತ್ತಿ ನಡೆಸದಂತೆ ಕೆ.ಎನ್. ಜಗದೀಶ್‌ ಅವರಿಗೆ ಆದೇಶ ಹೊರಡಿಸಿದೆ. ದೆಹಲಿ ಬಾರ್ ಕೌನ್ಸಿಲ್‌ ಕೆ.ಎನ್‌ ಜಗದೀಶ್‌ ದೆಹಲಿ ಕೌನ್ಸಿಲ್‌ನಲ್ಲಿ ನೋಂದಣಿಯಾಗಿರುವ ದಾಖಲಾತಿಗಳನ್ನು ಪರಿಶೀಲಿಸಿ, ದಾಖಲೆಗಳು ನಕಲಿ ಎಂದು ದೃಢಪಟ್ಟ ನಂತರ ಅವರ ನೋಂದಣಿಯನ್ನು ರದ್ದುಗೊಳಿಸಿ ಎಲ್ಲಾ ಪ್ರಮಾಣ ಪತ್ರಗಳನ್ನು ಹಿಂತಿರುಗಿಸುವಂತೆ ಆದೇಶ ಹೊರಡಿಸಿದೆ.

Klive Special Article ಜಮ್ಮು & ಕಾಶ್ಮೀರ ಚುನಾವಣೆ. ಜನತೆಯಿಂದ ಸಂವಿಧಾನ ಒಪ್ಪಿತದ ಅಭಿವ್ಯಕ್ತಿ

0

Klive Special Article ಜಮ್ಮು ಮತ್ತು ಕಾಶ್ಮೀರದಲ್ಲಿ ಜನತೆ ಬಹು ನಿರೀಕ್ಷಿತ ಬಿಜೆಪಿಗೆ ಆಡಳಿತ ನೀಡಲು ‌ಇನ್ನೂ ಮನಸ್ಸು ಮಾಡಿಲ್ಲದಂತಿದೆ.
ಆದರೆ ಪ್ರಜಾಪ್ರಭುತ್ವ ವ್ಯವಸ್ಥೆ ಒಪ್ಪಿಕೊಂಡ ಮನೋಭಾವ ತೋರಿದ್ದಾರೆ.
ಸ್ಥಳೀಯ ಆಡಳಿತಕ್ಕೆ
ರಾಷ್ಡ್ರೀಯ ಪಕ್ಷಗಳ ನಾಯಕತ್ವ ಇನ್ನೂ
ಅಲ್ಲಿ ಬೇರೂರಿ ಕೆಲಸ ಮಾಡಬೇಕಿದೆ. ಏಕೆಂದರೆ ಕಾಂಗ್ರೆಸ್ ಮತ್ತು ‌ ಮೆಹಬೂಬ ಅವರ ಪಿಡಿಪಿ ಪಕ್ಷಕ್ಕೂ ಅಲ್ಲಿಯ ಜನತೆ
ಸ್ವಾಗತಿಸಿಲ್ಲ. ಇದ್ದದ್ದರಲ್ಲಿ‌ ಪ್ರಮುಖ ವಿರೋಧ ಪಕ್ಷವಾಗಿ
ಬಿಜೆಪಿ ಮಿಂಚಿದೆ.

90 ವಿಧಾನಸಭಾ ಕ್ಷೇತ್ರಗಳ ಪೈಕಿ ಸರ್ಕಾರ ರಚನೆ 46 ಸ್ಥಾನಗಳ ಅಗತ್ಯ ಇತ್ತು.
ಅದರಂತೆ ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಪರೆನ್ಸ್ ಮೈತ್ರಿಕೂಟ 48 ಸ್ಥಾನಗಳಲ್ಲಿ ಗೆದ್ದು ಸ್ಪಷ್ಟ ಬಹುಮತ ಗಳಿಸುವ ಮೂಲಕ ಆಡಳಿತ ಚುಕ್ಕಾಣಿ ಹಿಡಿಯಲು ಮುಂದಾಗಿದೆ.
ಒಮರ್ ಅಬ್ದುಲ್ಲ ಎರಡು ಕ್ಷೇತ್ರಗಳಲ್ಲಿ ಗೆದ್ದು ಅಸೆಂಬ್ಲಿಗೆ ಆಯ್ಕೆಯಾಗಿದ್ದಾರೆ.
ಚುನಾಣೋತ್ತರ ಸಮಯದಿಂದಲೂ
ಫರೂಕ್ ಅಬ್ದುಲ್ಲ ಬಿಜೆಪಿ ಯನ್ನ ವಿರೋಧಿಸುತ್ತಲೇ ಬಂದಿದ್ದಾರೆ. ಮೈತ್ರಿಗೆ ಅವರು ” ಬುಲ್ಡೋಜರ್ ” ನೀತಿಯಿಂದಾಗಿ‌‌ ಬಿಜೆಪಿ ಹೆಸರು ಕೆಡಿಸಿಕೊಂಡಿದೆ ಎನ್ನುವ ಅರ್ಥ ಬರುವ ಹೇಳಿಕೆ ನೀಡಿ
ಬಿಜೆಪಿಯೊಂದಿಗಿನ ಮೈತ್ರಿಯನ್ನ ತಿರಸ್ಕರಿಸಿ‌ ಮಾತಾಡಿದ್ದಾರೆ.
ಆದರೆ ಈಗ ಗೆದ್ದು ಸೀಎಂ ಆಗಲಿರುವ
ಒಮರ್ ಅಬ್ದುಲ್ಲ. ಮೋದಿ ಅವರ ಬಗ್ಗೆ ನೀಡಿದ ಮೆದು ಹೇಳಿಕೆ , ಅಪ್ಪನ ಮಾತಿಗೆ
ವಿರೋಧಾಭಾಸ ಉಂಟುಮಾಡಿದೆ.
ಜಮ್ಮು & ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ನೀಡುವ ಬಗ್ಗೆ ಮತ್ತು ಲೆ.ಗವರ್ನರ್ ಅವರಿಗಿರುವ ಐದು ಶಾಸಕರ ನಾಮನಿರ್ದೇಶನ ಆಧಿಕಾರದ ಬಗೆಗಿನ ವಿವಾದ ಪರಿಹರಿಸಲು ಕಾನೂನಾತ್ಮಕ ಪ್ರಯತ್ನ ಮಾಡುವುದಾಗಿ ಫರೂಕ್ ನುಡಿದಿದ್ದಾರೆ.
ಇಂಡಿ ಕೂಟದ ಬಗ್ಗೆ ನಾಯಕ‌ ರಾಹುಲ್ ಮತ್ತು ಇತರರು ಏನೊಂದೂ ಮಾತಾಡಿಲ್ಲ. ಅವರ ಚಿತ್ತವೆಲ್ಲ ಹರಿಯಾಣ ಫಲಿತಾಂಶದತ್ತ ನೆಟ್ಟಿದೆ.

Klive Special Article ಪ್ರಸ್ತುತ ವಿಧಾನಸಭಾ ಚುನಾವಣೆ
ಮತ ಹಂಚಿಕೆ ಪ್ರಮಾಣ ಹೀಗಿದೆ

ಜಮ್ಮು ಮತ್ತು ಕಾಶ್ಮೀರ ರಾಷ್ಟ್ರೀಯ ಕಾನ್ಫರೆನ್ಸ್ – 23.43%
ಬಿಜೆಪಿ – 25.64%
ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (PDP) – 8.87%

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) – 11.97%
ಇತರೆ – 30.09%
( ಮಾಧ್ಯಮದಲ್ಲಿ ಪ್ತಕಟವಾಗಿರುವ ಅಂಕಿ‌ಅಂಶಗಳನ್ನ ಆಧರಿಸಿದೆ .)
ಅಂದರೆ ಇಲ್ಲಿ ಒಳನೋಟ ಅಚ್ಚರಿಯನ್ನೇ ಉಂಟುಮಾಡುತ್ತದೆ.
ಶೇ.30.9 ಇತರೆ ಪಕ್ಷೇತರರು ಗಳಿಸಿದ್ದಾರೆ. ಈ ಹಂಚಿಕೆಯೇ ಅಪಾರವಾಗಿದೆ.
ಮೈತ್ರಿಕೂಟದ
ನ್ಯಾಷನಲ್ ಕಾನ್ಫರೆನ್ಸ್ ಶೇ.23.43
ಮತ್ತು ಕಾಂಗ್ರೆಸ್ ಶೇ.11.97
ಒಟ್ಟು ಶೇ. 35.40
ಆಗುತ್ತದೆ.
ಮೈತ್ರಿಕೂಟ ಉಸಿರುಗಟ್ಟಿಕೊಂಡು ಗೆಲುವು ಸಾಧಿಸಿದೆ ಅನ್ನಬಹುದು.
ಕಳೆದ 2014 ಚುನಾವಣೆಯಲ್ಲಿ ಸು.
ಶೇ 20 ರಷ್ಟಿದ್ದ ಬಿಜೆಪಿಗೆ ಈಗ ಶೇ25.64 ಏರಿಕೆಯಾಗಿದೆ.
ಚುನಾವಣೆಯಲ್ಲೆ ಶೇ67 ಮತದಾನವಾಗಿದೆ. ಅಂದರೆ ಜನತೆ ಪ್ರಜಾಪ್ರಭುತ್ವಕ್ಕೆ ಒಲವು ತೋರಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಎರಡೂ ಪ್ರದೇಶಗಳಲ್ಲಿ ಕ್ರಮವಾಗಿ
ಜಮ್ಮು ನಲ್ಲಿ( 43)
ನ್ಯಾಷನಲ್ ಕಾನ್ಫರೆನ್ಸ್ 8 ಮತ್ತು ಬಿಜೆಪಿ‌ 29
ಹಾಗೂ ಕಾಶ್ಮೀರದಲ್ಲಿ( 47)
ನ್ಯಾಷನಲ್ ಕಾನ್ಫರೆನ್ಸ್ 41
ಮತ್ತು ಬಿಜೆಪಿ 0.
ಕಾಶ್ಮೀರದಲ್ಲಿ ಯಾಕೆ ಶೂನ್ಯ ಸಾಧನೆ ಬಿಜೆಪಿ ತಲೆಕೆರೆದುಕೊಳ್ಳಬೇಕಿದೆ.

ಇಲ್ಲಿನ ಗೆಲುವಿನ ಬಗ್ಗೆ ಪ್ರಧಾನಿ ಮೋದಿ ನಿರಾಶೆ ವ್ಯಕ್ತಪಡಿಸಿಲ್ಲ.
ಆದರೆ ” ಜಮಗಮು ಮತ್ತು ಕಾಶ್ಮೀರದಲ್ಲಿ ಸಂವಿಧಾನಾತ್ಮಕ ಚುನಾವಣೆ ಪ್ರಕ್ರಿಯೆ ನಡೆಸಿದ ಕೇಂದ್ರ ಸರ್ಕಾರದ ನೀತಿಯು
ಡಾ.ಬಾಬಾ ಸಾಹೇಬ್ ಅಂಬೆಡ್ಕರ್ ಅವರಿಗೆ ಸಲ್ಲಿಸಿದ ಗೌರವವಾಗಿದೆ” ಎಂದಿರುವುದು ಗಮನಾರ್ಹ.
ರಾಜ್ಯಭಾರ ಯಾರೇ ಮಾಡಲಿ. ಭಾರತೀಯ ರಾಜ್ಯಗಳ ಸಂವಿಧಾನಾತ್ಮಕ ಚೌಕಟ್ಟಿಗೆ ಒಳಪಟ್ಟಂತೆ ಈಗ ಗೆದ್ದಿರುವ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ನಾಯಕರು ಮರುಮಾತಿಲ್ಲದೇ ತಾವು ಭಾರತ ಗಣರಾಜ್ಯದ ಒಂದು ಭಾಗ ಎಂದು ಒಪ್ಪಿಕೊಂಡಂತಾಗಿದೆ.
370 ನೇ ವಿಧಿ ರದ್ದತಿ‌ ಈಗ ಇತಿಹಾಸ.
ಮುಂದೆ ಕಾಲಪಕ್ವವಾದಾಗ
ರಾಜ್ಯ ಸ್ಥಾನಮಾನವೂ ದಕ್ಕಲಿ.
ಸದಾ ಕಾಶ್ಮೀರ ಸಮಸ್ಯೆ ಮುಂದಿಟ್ಟು ಕಾಲುಕೆರೆದು ಜಗಳ ಮಾಡುವ ಪಾಕಿಸ್ತಾನಕ್ಕೆ ದಿಟ್ಟ ಉತ್ತರ ಕೊಡುವಂತಾಗಲಿ
ಎಂಬುದೇ ಎಲ್ಲರ ಆಶಯ.

ಡಾ.ಸುಧೀಂದ್ರ
ಪ್ರಧಾನ ಸಂಪಾದಕರು
ಕೆ ಲೈವ್ ನ್ಯೂಸ್
ಶಿವಮೊಗ್ಗ

Chamber of Commerce Shivamogga ಸವಾಲುಗಳನ್ನ ಎದುರಿಸಿ ಪತ್ರಿಕೆ ಈಗ ಜನಮಾನಸ ತಲುಪಿದೆ- ಕ್ರಾಂತಿ ದೀಪ ಮಂಜುನಾಥ್

0

Chamber of Commerce Shivamogga ಪತ್ರಿಕೋದ್ಯಮದಲ್ಲಿ ಅತ್ಯುನ್ನತ ಶ್ರೇಷ್ಠ ಪ್ರಶಸ್ತಿ ಪುಸ್ಕøತರಾದ ಹಾಗೂ ಮಧ್ಯ ಕರ್ನಾಟಕ ಮಲೆನಾಡು ಭಾಗದಲ್ಲಿ ಪ್ರಥಮ ಬಾರಿಗೆ ನೀಡಿದ ಪ್ರಶಸ್ತಿಗೆ ಭಾಜನರಾಗಿರುವ ಹಾಗೂ ವೃತ್ತಿಯ ಜೊತೆಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಕ್ರಾಂತಿದೀಪ ಎನ್.ಮಂಜುನಾಥ್‍ರವರಿಗೆ ನಗರದ ಸ್ನೇಹಮಹಿ ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಹರಿಸಲಾಯಿತು.

ಇದೇ ಸಂದರ್ಭದಲ್ಲಿ ಸ್ನೇಹಮಹಿ ಸಂಘದ ಅಧ್ಯಕ್ಷ ಎಸ್.ಚಿನ್ನಪ್ಪ ಮಾತನಾಡಿ, ನಮ್ಮ ಸoಘದ ವತಿಯಿಂದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ ಹಾಗೂ ರಾಜ್ಯ, ರಾಷ್ಟ್ರ ಮಟ್ಟದ ಕ್ರೀಡೆಗಳನ್ನು ಆಯೋಜನೆ ಮಾಡಿ ಹಲವಾರು ಸಮಾಜಮುಖಿ ಕಾರ್ಯಗಳನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದೇವೆ ಎಂದು ನುಡಿದರು.

Chamber of Commerce Shivamogga ಇದೇ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯ್ ಕುಮಾರ್ ಮಾತನಾಡಿ, ಕ್ರಾಂತಿದೀಪ ಮಂಜಣ್ಣನವರು ಹಲವಾರು ಹೊಸ ಪತ್ರಕರ್ತರಿಗೆ ಅವಕಾಶ ಕಲ್ಪಿಸಿಕೊಟ್ಟು ಅವರ ಬೆಳವಣಿಗೆಗೆ ದಾರಿದೀಪವಾಗಿದ್ದಾರೆ. ಜೊತೆಗೆ ಕ್ರಾಂತಿದೀಪ ಪತ್ರಿಕೆ ಸಾಕಷ್ಟು ಹೋರಾಟಗಳ ಮೂಲಕ ಹಾಗು ಅಚ್ಚು ಮಳೆಯ ಮುದ್ರಣದಲ್ಲಿ ಪತ್ರಿಕೆ ಪ್ರಾರಂಭಿಸಿ ಇದನ್ನು ರಾಜ್ಯ ಮಟ್ಟದಲ್ಲಿ ತನ್ನ ಛಾಪನ್ನು ಮೂಡಿಸಿದೆ. ಈ ನಿಟ್ಟಿನಲ್ಲಿ ಮಂಜಣ್ಣನವರ ಸಾಧನೆ ಅವರ ಪತ್ರಿಕೆ ಇನ್ನೂ ಉನ್ನತಮಟ್ಟದಲ್ಲಿ ಬೆಳೆದು ಹೆಸರುಗಳಿಸಲಿ ಎಂದು ಹಾರೈಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಎನ್.ಮಂಜುನಾಥ್, ಪತ್ರಕಾ ರಂಗದಲ್ಲಿ ಅನೇಕ
ಸವಾಲುಗಳನ್ನು ಎದುರಿಸಿ, ಜನತೆಯ ಸಲಹೆ ಸಹಕಾರ ಆಶೀರ್ವಾದದಿಂದ ನಮ್ಮ ಪತ್ರಿಕೆ ಜನಮಾನಸವನ್ನು ತಲುಪುವಲ್ಲಿ ಯಶಸ್ವಿಯಾಗಿದೆ ಎಂದು ನುಡಿದರು.

ಈ ಸಂದರ್ಭದಲ್ಲಿ ರವಿಕುಮಾರ್ ಉಪಸ್ಥಿತರಿದ್ದರು.

Inner Wheel Shivamogga ಸರ್ಕಾರಿ ಶಾಲೆಗಳಿಗೆ ಸಂಘ ಸಂಸ್ಥೆಗಳ ನೆರವು ಅಗತ್ಯ- ವಾಗ್ದೇವಿ ಬಸವರಾಜ್

0

Inner Wheel Shivamogga ಸರ್ಕಾರಿ ಶಾಲೆಯ ಮಕ್ಕಳಲ್ಲಿ ಇರುವ ಪ್ರತಿಭೆಗೆ ಪ್ರೋತ್ಸಾಹಿಸಲು ಹಾಗೂ ಅವರಲ್ಲಿರುವ ಪ್ರತಿಭೆ ಅನಾವರಣಗೊಳ್ಳಲು ಸರ್ಕಾರಿ ಶಾಲೆಗಳಿಗೆ ಸಂಘ-ಸಂಸ್ಥೆಗಳ ನೆರವು ಅಗತ್ಯ ಎಂದು ಇನ್ನರ್ ವೀಲ್ ಶಿವಮೊಗ್ಗ ಪೂರ್ವದ ಅಧ್ಯಕ್ಷರಾದ ವಾಗ್ದೇವಿ ಬಸವರಾಜ್ ಅವರು ಅಭಿಮತ ವ್ಯಕ್ತಪಡಿಸಿದರು ಅವರು ಇಂದು ಶಿವಮೊಗ್ಗ ಪೂರ್ವ ಸದಸ್ಯರಾದ ಲಾವಣ್ಯ ಶಶಿಧರ್. ವಿಜಯಶ್ರೀ ಇವರ ನೆರವಿನಿಂದ ಬೇಡರ ಹೊಸಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ. ದಾನಿಗಳಾದ ಲಾವಣ್ಯ ಶಶಿಧರ್ ಹಾಗೂ ವಿಜಯಶ್ರೀ ಅವರು ಮಾತನಾಡುತ್ತಾ ದೇಣಿಗೆ ನೀಡಿದ ಸಾಮಗ್ರಿಗಳು ದುರುಪಯೋಗವಾಗದಿರಲಿ ಎಂದು ಸಲಹೆ ನೀಡಿದರು
Inner Wheel Shivamogga ಇದೇ ಸಂದರ್ಭದಲ್ಲಿ ಇದೆ ಶಾಲೆಯ ಶಿಕ್ಷಕ ಲೇಖಕ ರಾಧಾ. ಸಂತೋಷ ಅವರು ದಾನಿಗಳಿಗೆ ಸನ್ಮಾನಿಸಿ ಅವರು ರಚಿಸಿದ ಶರಣರ ಪುಸ್ತಕಗಳನ್ನು ನೀಡಿ ಗೌರವಿಸಿದರು ಇದೇ ಸಂದರ್ಭದಲ್ಲಿ ಸಹ ಶಿಕ್ಷಕಿ ಮುಖ್ಯೋಪಾಧ್ಯಾಯರಾದ ಸರೋಜಮ್ಮನವರು ಅಧ್ಯಕ್ಷತೆ ವಹಿಸಿ ಮಾತನಾಡಿದರು ನಮ್ಮ ಶಾಲೆಗೆ ತುಂಬಾ ಅಗತ್ಯವಾಗಿ ಬೇಕಾಗಿದ್ದ ನೀಡಿದ್ದಕ್ಕೆ ಸಂಸ್ಥೆಗೆ ತುಂಬು ಹೃದಯದ ಧನ್ಯವಾದಗಳು ತಿಳಿಸಿ ಆನಂದ ಭಾಷ್ಪ ಮೂಡಿಸಿದರು ಸಮಾರಂಭದಲ್ಲಿ ಶಿಕ್ಷಕರಾದ ವಾಣಿ
ಪರ್ವೀನ್. ಸಂತೋಷ್. ಇನ್ನರ್ ವೀಲ್ ಮಾಜಿ ಅಧ್ಯಕ್ಷರಾದ ಶ್ರೀಮತಿ ಬಿಂದು ವಿಜಯ ಕುಮಾರ್. ಕಾರ್ಯದರ್ಶಿ ಲತಾ ಸೋಮಶೇಖರ್ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಗ್ರಾಮ ಪಂಚಾಯತಿಯ ಸದಸ್ಯರು ಹಾಗೂ ಗ್ರಾಮಸ್ಥರು ಇನ್ನರ್ ವೀಲ್ ಸದಸ್ಯರು ಉಪಸ್ಥಿತರಿದ್ದರು

Rajendra Water Treatment Plant ಸಾರ್ವಜನಿಕರೆ ಗಮನಿಸಿ! ಇಡೀ ಶಿವಮೊಗ್ಗಕ್ಕೆ ಅ.14 & 15 ರಂದು ಕುಡಿಯುವ ನೀರು ಸರಬರಾಜಿಲ್ಲ

0

Rajendra Water Treatment Plant ರಾಜೇಂದ್ರ ಜಲಶುದ್ಧೀಕರಣ ಘಟಕಕ್ಕೆ ಮಹಾನಗರಪಾಲಿಕೆಯ ವತಿಯಿಂದ ಹೊಸದಾಗಿ ಭೂಗತ ಕೇಬಲ್ ಅಳವಡಿಸಿದ್ದು, ಅ.14 ರಂದು ಕೇಬಲ್ ಚಾಲನೆಗೊಳಿಸುವುದರಿಂದ ಅ.14 ಮತ್ತು 15 ರಂದು ಎರಡು ದಿನಗಳು ಶಿವಮೊಗ್ಗ ನಗರದಲ್ಲಿ ದೈನಂದಿನ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ತಿಳಿಸಿರುತ್ತಾರೆ.

Youth Empowerment and Sports ಪರಿಶಿಷ್ಟ ಜಾತಿ‌ ಯುವಜನರ ಸ್ವಾವಲಂಬನೆಗೆ ತರಬೇತಿ ಶಿಬಿರ

0

Youth Empowerment and Sportsಯುವ ಸಬಲೀಕರಣ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಪರಿಶಿಷ್ಟ ಜಾತಿ ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ ಯುವಜನರ ಸ್ವಾವಲಂಬನೆಗೆ ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ತರಬೇತಿ ಕಾರ್ಯಕ್ರಮ ಆಯೋಜಿಲಾಗಿದ್ದು, 40 ವರ್ಷದೊಳಗಿನ ಯುವಕ/ಯುವತಿಯರಿಂದ ಅರ್ಜಿ ಅಹ್ವಾನಿಸಿದೆ.
ಎಸ್.ಎಸ್.ಎಲ್.ಸಿ ಪಾಸ್/ಫೇಲ್ ಆದವರು ನವಂಬರ್ 07 ರಿಂದ 26ರ ವರೆಗೆ ನಡೆಯುವ 20 ದಿನಗಳ ಹೊಲಿಗೆ ತರಬೇತಿ ಶಿಬಿರಕ್ಕೆ ಮತ್ತು ದ್ವಿತೀಯ ಪಿ.ಯು.ಸಿ ಪಾಸ್/ಫೇಲ್ ಆದವರು ನವಂಬರ್ 15 ರಿಂದ 26 ರ ವರೆಗೆ ನಡೆಯುವ 12 ದಿನಗಳ ವಿಡಿಯೋಗ್ರಾಫಿ ತರಬೇತಿ ಶಿಬಿರಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಶಿಬಿರದಲ್ಲಿ ಭಾಗವಹಿಸುವ ಯುವಕ ಅಥವಾ ಯುವತಿಯರಿಗೆ ಊಟೋಪಹಾರ, Youth Empowerment and Sports ಪ್ರಮಾಣ ಪತ್ರ ಮತ್ತು ಹೊರ ಜಿಲ್ಲೆಗಳಿಂದ ಭಾಗವಹಿಸುವ ಯುವತಿಯರಿಗೆ ಸಾಮಾನ್ಯ ವಸತಿ ವ್ಯವಸ್ಥೆಯನ್ನು ನೀಡಲಾಗುವುದು.
ಆಸಕ್ತರು ಅರ್ಜಿ ನಮೂನೆಯನ್ನು ನಗರದ ನೆಹರು ಕ್ರೀಡಾಂಗದಲ್ಲಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸಹಾಯಕ ನಿರ್ದೇಶಕರ ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ನ. 04 ರೊಳಗಾಗಿ ಸಲ್ಲಿಸುವಂತೆ ಸಹಾಯಕ ನಿರ್ದೇಶಕರು ಪ್ರಕಟಣೆ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸಹಾಯಕ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸುವುದು.

Navaratri Festival ನವರಾತ್ರಿ ಆರನೇ ದಿನ. ಕಾತ್ಯಾಯಿನಿ ರೂಪದಲ್ಲಿ ದೇವಿಯ ಆರಾಧನೆ. ಲೇ: ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ.

0

Navaratri Festival “ಚಂದ್ರಹಾಸೋ ಜ್ವಲಕರಾ
ಶಾರ್ದೂಲ ವರ ವಾಹನಾ/
ಕಾತ್ಯಾಯನೀ ಶುಭಂ ದದ್ಯಾತ್
ದೇವಿ ದಾನವಘಾತಿನೀ//

ಇಂದು ನವರಾತ್ರಿ ಹಬ್ಬದ ಆರನೆಯ ದಿನ.
ನವದುರ್ಗೆಯರ ರೂಪವಾದ “ಕಾತ್ಯಾಯನಿ ದೇವಿ”
ಯನ್ನು ಆರಾಧಿಸಿ ಪೂಜಿಸಲಾಗುತ್ತದೆ.
ಕಾತ್ಯಾಯನಎನ್ನುವಮುನಿಯುಪಾರ್ವತೀದೇವಿಯಂತಹಮಗಳನ್ನುಪಡೆಯುವುದಕ್ಕಾಗಿತಪಸ್ಸುಮಾಡುತ್ತಾನೆ.ಈ ಋಷಿಮುನಿಯ ತಪಸ್ಸಿಗೆ ಮೆಚ್ಚಿ ದುರ್ಗಾಮಾತೆಯು
Navaratri Festival ಮಗಳನ್ನು ಕರುಣಿಸುತ್ತಾಳೆ.ಅದರಂತೆ ಈ ಮಗುವಿಗೆ
ಕಾತ್ಯಾಯನಿ ಎಂದು ಹೆಸರಿಡಲಾಗುತ್ತದೆ.ಕಾತ್ಯಾಯನಿ ದೇವಿಯ ಸ್ವರೂಪವು ಉಗ್ರವಾಗಿರುತ್ತದೆ.ರಾಕ್ಷಸನ ಸಂಹಾರಕ್ಕೆ ಸಿದ್ಧವಾಗಿರುವಂತೆ ಕಾಣುವಳು.ಸಿಂಹ ವಾಹಿನಿಯಾದ ಈ ದೇವಿಯು ಭಕ್ತರ ಪಾಲಿಗೆ ಶಾಂತಿ ಸ್ವರೂಪಿಣಿಮತ್ತುಮಾತೃಸ್ವರೂಪಿಣಿಯೂಆಗಿದ್ದಾಳೆ.ದುಷ್ಟಶಕ್ತಿಗಳನ್ನುದಮನಮಾಡುವದುರ್ಗಾಮಾತೆಯಾಗಿದ್ದಾಳೆ.ಇಂತಹಮಾತೃಸ್ವರೂಪಿಣಿಯಾದದುರ್ಗಾಮಾತೆಯನ್ನು ಭಕ್ತಿಯಿಂದ ಪೂಜಿಸಿ ದೇವಿಯ ಅನುಗ್ರಹ ಪಡೆಯೋಣ.

Murugha Mutt Seer ಹೈಕೋರ್ಟ್ ಜಾಮೀನಿನ ಆದೇಶದ ಪ್ರಕಾರ ಚಿತ್ರದುರ್ಗದ ಮುರುಘಾ ಶ್ರೀ ಬಿಡುಗಡೆ

0

Murugha Mutt Seer ಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿದ್ದ ಚಿತ್ರದುರ್ಗದ ಮುರುಘಾಶ್ರೀ ಅವರನ್ನು ಬಿಡುಗಡೆಗೆ ಚಿತ್ರದುರ್ಗದ ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.
ಪ್ರಕರಣ ಸಂಬಂಧ ಈ ಹಿಂದೆ ಹೈಕೋರ್ಟ್ ಮುರುಘಾಶ್ರೀಗೆ ಜಾಮೀನು ನೀಡಿತ್ತು. ಆದರೆ, ಸಾಕ್ಷ್ಯ ವಿಚಾರಣೆ ನಡೆಸುವವರೆಗೆ Murugha Mutt Seer ಬಂಧನದಲ್ಲಿಡಲು ಸುಪ್ರೀಂಕೋರ್ಟ್ ಆದೇಶಿಸಿತ್ತು. ಇದೀಗ, ಸಾಕ್ಷ್ಯಗಳ ವಿಚಾರಣೆ ಬಹುತೇಕ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮುರುಘಾಶ್ರಿ ಬಿಡುಗಡೆಗೆ ಚಿತ್ರದುರ್ಗದ ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶವನ್ನು ಹೊರಡಿಸಿದೆ.
ಸಂತ್ರಸ್ತೆಯರಿಬ್ಬರು ಸೇರಿದಂತೆ 12 ಸಾಕ್ಷಿಗಳ ವಿಚಾರಣೆ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಜಾಮೀನಿನ ಆದೇಶದ ಪ್ರಕಾರ ಮುರುಘಾಶ್ರೀ ಬಿಡುಗಡೆಯಾಗಿದ್ದಾರೆ.

Department of Stamps and Registration ಶಿವಮೊಗ್ಗ ನಗರ ಪಾಲಿಕೆ ವ್ಯಾಪ್ತಿಯಲ್ಲೂ ಸ್ವತ್ತಿನ ನಮೂನೆ 2/3 ಇ-ಆಸ್ತಿ ತಂತ್ರಾಂಶ ಜಾರಿ- ಆಯುಕ್ತರ ಪ್ರಕಟಣೆ

0

Department of Stamps and Registration ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ-2 ತಂತ್ರಾಂಶದೊಂದಿಗೆ ಇ-ಆಸ್ತಿ ತಂತ್ರಾಂಶವನ್ನು ಸಂಯೋಜಿಸಲಾಗಿದ್ದು ಅಕ್ಟೋಬರ್ 07 ರಿಂದ ಅನ್ವಯವಾಗುವಂತೆ ಅನುಷ್ಟಾನಗೊಳಿಸಲಾಗಿದೆ.
ಸರ್ಕಾರದ ಸುತ್ತೋಲೆಯ ಸೂಚನೆ ಮೇರೆಗೆ ಶಿವಮೊಗ್ಗ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸ್ಥಿರಾಸ್ತಿಗಳ ನೋಂದಣಿಗೆ ಇ-ಆಸ್ತಿ ತಂತ್ರಾಂಶದಲ್ಲಿ ಮಾತ್ರ ಸ್ವತ್ತಿನ ನಮೂನೆ 2/3ನ್ನು ನೀಡಲು ಹಾಗೂ ಹಕ್ಕು ವರ್ಗಾವಣೆಗೆ ಕ್ರಮವಹಿಸಲು ಮತ್ತು ಇ-ಆಸ್ತಿ ತಂತ್ರಾಂಶವನ್ನು ಹೊರತುಪಡಿಸಿ ಭೌತಿಕವಾಗಿ ಹಾಗೂ ಖಾಸಗಿ ತಂತ್ರಾಂಶವನ್ನು ಬಳಕೆ ಮಾಡಿ ನಮೂನೆ 2/3ನ್ನು ನೀಡಬಾರದಾಗಿ ಆದೇಶವಾಗಿರುತ್ತದೆ.
Department of Stamps and Registration ಈ ಹಿನ್ನೆಲೆಯಲ್ಲಿ ಅ.07 ರಿಂದ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಸ್ವತ್ತಿ ನಮೂನೆ 2/3ನ್ನು ಇ-ಆಸ್ತಿ ತಂತ್ರಾಂಶದಲ್ಲಿ ವಿತರಿಸಲಾಗುವುದು, ಸಾರ್ವಜನಿಕರು ಸಹಕರಿಸುವಂತೆ ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leather Industries Development  ಅರ್ಹ ಚರ್ಮ ಕೈಗಾರಿಕಾ ಕುಶಲ ಕರ್ಮಿಗಳಿಗೆ ವಿವಿಧ ಯೋಜನೆಗಳ ಲಾಭ ಪಡೆಯಲು ಅರ್ಜಿ ಸಲ್ಲಿಕೆಗೆ ಆಹ್ವಾನ

0

Leather Industries Development  ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮವು 2024-25ನೇ ಸಾಲಿನಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಚರ್ಮಕೈಗಾರಿಕೆಯಲ್ಲಿ ತೊಡಗಿರುವ ಕುಶಲಕರ್ಮಿಗಳಿಗೆ ವಿವಿಧ ಯೋಜನೆಗಳಾದ ತರಬೇತಿ, ಸ್ವಯಂ ಉದ್ಯೋಗ, ಸ್ವಾವಲಂಭಿ ಮಾರಾಟ ಮಳಿಗೆ, ಸಂಚಾರಿ ಮಾರಾಟ ಮಳಿಗೆ, ನೇರ ಸಾಲ ಯೋಜನೆ, ಪಾದುಕೆ ಕುಟೀರ ಯೋಜನೆ, ವಸತಿ ಹಾಗೂ ಇನ್ನಿತರೆ ಯೋಜನೆಗಾಗಿ ಆಸಕ್ತರಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ.
Leather Industries Development  ಆಸಕ್ತರು https://sevasindhu.karnataka.gov.in ಪೋರ್ಟಲ್ ಮೂಲಕ ಅ. 30 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಲಿಡ್‌ಕರ್ ಜಿಲ್ಲಾ ಸಂಯೋಜಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸಂಯೋಜಕರು, ಲಿಡ್‌ಕರ್, ನೆಹರು ರಸ್ತೆ, ಶಿವಮೊಗ್ಗ ಇವರನ್ನು ಸಂಪರ್ಕಿಸುವುದು.