Friday, March 27, 2026
Friday, March 27, 2026
Home Blog Page 538

Shivamogga Police ಕಾಣೆಯಾಗಿದ್ದಾರೆ; ಮಾಹಿತಿ ನೀಡಲು ಮನವಿ

0

Shivamogga Police ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹರಿಗೆ ಗ್ರಾಮ ವಾಸಿ ಶ್ರೀಮತಿ ಗಾಯತ್ರಿ ಬಿ. ಕೋಂ ಪ್ರಕಾಶ್‌ಕುಮಾರ್ ಪಿ.ಆರ್. ಎಂಬ 51 ವರ್ಷದ ಮಹಿಳೆ ಅ.03 ರಂದು ಮನೆಯಿಂದ ಹೊರಗೆ ಹೋಗಿದ್ದು, ಈವರೆಗೂ ಮನೆಗೆ ವಾಪಾಸ್ಸಾಗಿರುವುದಿಲ್ಲ.
Shivamogga Police ಈಕೆಯ ಚಹರೆ ಸಮಾರು 5.00 ಅಡಿ ಎತ್ತರ, ದುಂಡುಮುಖ, ದಪ್ಪನೆಯ ಮೈಕಟ್ಟು, ಕನ್ನಡಕ ಧರಿಸಿರುತ್ತಾರೆ. ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಹಳದಿ ಬಣ್ಣದ ಸೀರೆ ಮತ್ತು ಹಳದಿ ಬಣ್ಣದ ರವಿಕೆ ಧರಿಸಿರುತ್ತಾರೆ.
ಈಕೆಯ ಕುರಿತು ಸುಳಿವು ದೊರೆತಲ್ಲಿ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ದೂ.ಸಂ.: 08182-261418/ 261410/ 261422/ 9480803350 ಅಥವಾ ಕಂಟ್ರೋಲ್ ರೂಂ ನಂ. 100 ಗಳಿಗೆ ಕರೆ ಮಾಡಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

Legal Services Authority ಮಹಿಳೆ & ಮಕ್ಕಳ ಕಾನೂನುಗಳ ಸದುಪಯೋಗ ಆಗಬೇಕು- ನ್ಯಾ.ಮಂಜುನಾಥ ನಾಯಕ್

0

Legal Services Authority ಮಹಿಳೆಯರು, ಮಕ್ಕಳು ಮತ್ತು ಹಿಂದುಳಿದ ವರ್ಗಗಳಿಗೆ ಸರ್ಕಾರ ಸಾಕಷ್ಟು ಕಾನೂನುಗಳನ್ನು ರೂಪಿಸಿದ್ದು ಈ ಕಾನೂನುಗಳ ಸದುಪಯೋಗ ಆಗಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಮಂಜುನಾಥ ನಾಯಕ್ ತಿಳಿಸಿದರು.
ಜಿಲ್ಲಾ ನ್ಯಾಯಾಂಗ, ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಜಿಲ್ಲಾ ಪಂಚಾಯತ್, ಜಿಲ್ಲಾ ವಕೀಲರ ಸಂಘ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲಾ ಮಹಿಳಾ ಸಬಲೀಕರಣ ಘಟಕ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಸಹಯೋಗದಲ್ಲಿ ಸಿಮ್ಸ್ ಕಾಲೇಜಿನಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ ಯೋಜನಯಡಿ ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಪ್ರಯುಕ್ತ ಏರ್ಪಡಿಸಲಾಗಿದ್ದ ಗರ್ಭಧಾರಣೆ ಪೂರ್ವ ಮತ್ತು ಪ್ರಸವಪೂರ್ವ ಪತ್ತೆ ತಂತ್ರ ವಿಧಾನಗಳು, ಲಿಂಗ ಆಯ್ಕೆ ನಿಷೇಧ(ಪಿಸಿಪಿಎನ್‌ಡಿಟಿ) ಕಾಯ್ದೆ 1994 ಹಾಗೂ ಪೋಕ್ಸೊ ಕಾಯ್ದೆ 2012 ರ ಕುರಿತಾದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
Legal Services Authority ಮಹಿಳೆಯರು, ಮಕ್ಕಳು ಮತ್ತು ಹಿಂದುಳಿದವರಿಗಾಗಿ ರೂಪಿಸಲಾದ ಕಾನೂನುಗಳ ದುರುಪಯೋಗ ನಿಲ್ಲಬೇಕು. ಸದುಪಯೋಗ ಆಗಬೇಕು. ಎಲ್ಲರ ಸಹಕಾರದೊಂದಿಗೆ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಅವು ತಲುಪಬೇಕು ಎಂದು ಆಶಿಸಿದರು.
ಕಾನೂನು ಜಾರಿಗೊಳಿಸುವವರು ಕಾನೂನಿನ ಉದ್ದೇಶ ಅರಿತಾಗ ಮಾತ್ರ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸಾಧ್ಯ. ವೈದ್ಯರು ಸೇರಿದಂತೆ ಪಿಸಿಪಿಎನ್‌ಡಿಟಿ ಮತ್ತು ಪೋಕ್ಸೊ ಕಾಯ್ದೆ ಅನುಷ್ಟಾನಗೊಳಿಸುವ ಎಲ್ಲರೂ ಈ ಕಾಯ್ದೆಗಳನ್ನು ಸಮರ್ಪಕವಾಗಿ ತಿಳಿದುಕೊಳ್ಳಬೇಕು. ಮಕ್ಕಳ ಮೇಲಿನ ದೌರ್ಜನ್ಯ ಗಮನಕ್ಕೆ ಬಂದಾಗ ಸಂಬಂಧಿಸಿದ ಪೋಲೀಸರ ಗಮನಕ್ಕೆ ತರಬೇಕು. ದೌರ್ಜನ್ಯದ ಸಂಶಯ ಬಂದರೂ ಸಹ ವರದಿ ಮಾಡಬೇಕು. ಪೋಕ್ಸೋ ಕಾಯ್ದೆ ಕಲಂ 19 ರ ಪ್ರಕಾರ ಈ ರೀತಿ ವರದಿ ಮಾಡುವುದು ಕರ್ತವ್ಯವಾಗಿದೆ. ವರದಿ ಮಾಡದಿದ್ದರೆ ಕಲಂ 21 ರ ಪ್ರಕಾರ ಶಿಕ್ಷಾರ್ಹ ಅಪರಾಧವಾಗುತ್ತದೆ.
ಪೋಕ್ಸೋ ಕಾಯ್ದೆಯಡಿ ಸಂತ್ರಸ್ತೆ, ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವುದು, ವಿಚಾರಣೆ ಸೇರಿದಂತೆ ಎಲ್ಲ ಪ್ರಕ್ರಿಯೆಗಳಲ್ಲಿ ಅತ್ಯಂತ ಸೂಕ್ಷö್ಮವಾಗಿ ಮತ್ತು ಸಂವೇದನಾಶೀಲತೆಯಿAದ ಅಧಿಕಾರಿಗಳು, ಸಿಬ್ಬಂದಿಗಳು ನಡೆದುಕೊಳ್ಳಬೇಕು. ಇದೊಂದು ಭಿನ್ನ ಅಪರಾಧ ಆದ ಕಾರಣ ಆರೋಗ್ಯ ಇಲಾಖೆಯ ಸುತ್ತೋಲೆಯಂತೆ ಅವರನ್ನು ಉಚರಿಸಬೇಕು. ಸಾಕ್ಷಿ ಹೇಳುವಾಗ ಸಹ ಸೂಕ್ಷö್ಮವಾಗಿರಬೇಕು. ನಮ್ಮ ಉದ್ದೇಶ ನ್ಯಾಯ ಒದಗಿಸುವುದು ಮಾತ್ರ ಆಗಿರುತ್ತದೆ. ಸಂತ್ರಸ್ತರ ಮನಸ್ಸಿಗೆ ನೋವಾಗದಂತೆ ಕಾನೂನು ಪ್ರಕ್ತಿಯೆಯನ್ನು ಎಚ್ಚರಿಕೆಯಿಂದ ಮಾಡಬೇಕೆಂದು ತಿಳಿಸಿದರು.
ಹೆಣ್ಣು ಭ್ರೂಣ ಹತ್ಯೆ ಒಂದು ದುಷ್ಕೃತ್ಯವಾಗಿದ್ದು, ಪಿಸಿಎನ್‌ಡಿಟಿ ಕಾಯ್ದೆ ಜಾರಿಯಿಂದ ಸಾಕಷ್ಟು ಸುಧಾರಣೆಯಾಗಿದೆ. ಅಂಕಿ ಅಂಶಗಳ ಪ್ರಕಾರ ನಮ್ಮ ದೇಶದಲ್ಲಿ ಲಿಂಗಾನುಪಾತ 1000 ಪುರುಷರಿಗೆ 940 ಮಹಿಳೆ, ರಾಜ್ಯದಲ್ಲಿ 1000 ಕ್ಕೆ 973 ಮತ್ತು ಜಿಲ್ಲೆಯಲ್ಲಿ 1000 ಪುರುಷರಿಗೆ 991 ಲಿಂಗಾನುಪಾತವಿದ್ದು, ಇದನ್ನು ಸಮತೋಲನಗೊಳಿಸಲು ಇನ್ನಷ್ಟು ಈ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ್.ಎA.ಎಸ್ ಮಾತನಾಡಿ, ಒಂದು ಕೆಟ್ಟ ಆಚರಣೆ ಅಥವಾ ಪದ್ದತಿಯನ್ನು ಅಳಿಸಿ ಹಾಕಲು ಕಾನೂನನ್ನು ಜಾರಿ ಮಾಡಲಾಗುತ್ತದೆ. ಇಂತಹ ಒಂದು ಪದ್ದತಿ ಹೆಣ್ಣು ಭ್ರೂಣ ಹತ್ಯೆಯಾಗಿದೆ. ಇದೊಂದು ಹೇಯ ಮತ್ತು ಕ್ರೂರ ಕೃತ್ಯವಾಗಿದ್ದು, ಇದನ್ನು ತೊಡೆದುಹಾಕಲು ಪಿಸಿಪಿಎನ್‌ಡಿಟಿ 1994 ಕಾಯ್ದೆಯನ್ನು ಜಾರಿಗೊಳಿಸಲಾಗಿದೆ.
ಈ ಕಾಯ್ದೆ ಅನುಷ್ಟಾನದಿಂದ ಹೆಣ್ಣು ಭ್ರೂಣ ಹತ್ಯೆ ತಡೆಯುವಲ್ಲಿ ಶೇ.95 ರಷ್ಟು ಸಫಲವಾಗಿದ್ದೇವೆ. ಅನುಷ್ಟಾನದಲ್ಲಿ ಅಲ್ಲಿ ಇಲ್ಲಿ ಕೆಲ ಲೋಪದೋಷ ಮತ್ತು ತಪ್ಪು ಕಲ್ಪನೆಗಳಿದ್ದು ಅದನ್ನು ಹೋಗಲಾಡಿಸಲು ಇಂತಹ ತರಬೇತಿ ಹಮ್ಮಿಕೊಂಡಿದ್ದು ಈ ಮೂಲಕ ಸಮರ್ಪಕ, ಸಮಗ್ರ ಮಾಹಿತಿ ನೀಡಲಾಗುವುದು. ವೈದ್ಯರು, ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು, ತಂತ್ರಜ್ಞರು ಇದರ ಸದುಪಯೋಗ ಪಡೆಯಬೇಕೆಂದು ತಿಳಿಸಿದರು.
ಡಿಹೆಚ್‌ಓ ಡಾ.ನಟರಾಜ್ ಮಾತನಾಡಿ, ಲಿಂಗ ಅನುಪಾತ ಸಮತೋಲನದಲ್ಲಿ ನಾವು ಹೆಚ್ಚಿನ ಪ್ರಗತಿ ಸಾಧಿಸಬೇಕಿದೆ. ಈ ನಿಟ್ಟಿನಲ್ಲಿ ನಾವೆಲ್ಲ ಕೆಲಸ ಮಾಡುತ್ತೇವೆ. ಈಗಲೂ ಗಂಡು ಬೇಕೆಂಬ ಬೇಡಿಕೆ ಇದೆ. ಆದರೆ ಮೊದಲಿನಷ್ಟು ಇಲ್ಲ. ಹರಿಯಾಣ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಹೆಣ್ಣಿನ ಸಂಖ್ಯೆ ಕಡಿಮೆ ಇದೆ. ಕೇರಳದಲ್ಲಿ ಹೆಣ್ಣಿನ ಸಂಖ್ಯೆ ಹೆಚ್ಚಿದೆ. ಹೆಣ್ಣಿಗೆ ಶಿಕ್ಷಣ ಮತ್ತು ಸುರಕ್ಷತೆಯ ವಾತಾವರಣ ನೀಡಬೇಕು ಎಂದ ಅವರು ಲಿಂಗಾನುಪಾತ ಸಮಗೊಳಿಸವುಲ್ಲಿ ನಾವೆಲ್ಲ ಒಗ್ಗೂಡಿ ಕೆಲಸ ಮಾಡೋಣ ಎಂದರು.
ಐಎಂಎ ಅಧ್ಯಕ್ಷ ಡಾ. ಶ್ರೀಧರ್ ಮಾತನಾಡಿ, ಪಿಸಿಪಿಎನ್‌ಡಿಟಿ ಕಾಯ್ದೆ ಮೊದಲಿಗಿಂತ ಹೆಚ್ಚಿನ ರೀತಿಯಲ್ಲಿ ಈಗ ಪರಿಣಾಮಕಾರಿಯಾಗಿದೆ. ಇದರ ಅನುಷ್ಟಾನದಲ್ಲಿ ವೈದ್ಯರ ಜವಾಬ್ದಾರಿ ಹೆಚ್ಚಿದೆ ಎಂದ ಅವರು ಪೋಕ್ಸೊ ಪ್ರಕರಣದಲ್ಲಿ ಸಂತ್ರಸ್ತರಿಗೆ ನ್ಯಾಯ ದೊರಕುಸುವ ನಿಟ್ಟಿನಲ್ಲಿ ವೈದ್ಯರು ಸೇರಿದಂತೆ ಎಲ್ಲ ಅಧಿಕಾರಿಗಳು ಹೆಚ್ಚಿನ ರೀತಿಯಲ್ಲಿ ಸಹಕಾರ ನೀಡಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೃಷ್ಣಪ್ಪ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ ಸ್ವಾಮಿ, ಡಿವೈಎಸ್‌ಪಿ ಬಾಬು ಅಂಜನಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿರೂಪಣಾಧಿಕಾರಿ ಸಂತೋಷ್ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಧಿಕಾರಿ ಶಶಿರೇಖಾ, ರೇಡಿಯಾಲಜಿಸ್ಟ್ಗಳು, ವೈದ್ಯ ವಿದ್ಯಾರ್ಥಿಗಳು, ತಂತ್ರಜ್ಞರು, ಆಶಾ ಕಾರ್ಯಕರ್ತೆಯರು ಹಾಜರಿದ್ದರು.

Veera Rani Kittoor Channamma ಕಿತ್ತೂರು ರಾಣಿ ಚೆನ್ನಮ್ಮ ವಿಜಯಜ್ಯೋತಿಗೆ ತೀರ್ಥಹಳ್ಳಿಯಲ್ಲಿ ಅದ್ಧೂರಿ ಸ್ವಾಗತ

0

Veera Rani Kittoor Channamma ವೀರ ರಾಣಿ ಕಿತ್ತೂರು ಚನ್ನಮ್ಮಾಜಿಯ ವಿಜಯ ಜ್ಯೋತಿಯನ್ನು ತೀರ್ಥಹಳ್ಳಿ ಮತಕ್ಷೇತ್ರದ ಮಾಜಿ ಗೃಹ ಮಂತ್ರಿಗಳು ಹಾಗೂ ಹಾಲಿ ಶಾಸಕರಾದ ಸನ್ಮಾನ್ಯ ಶ್ರೀ ಅರಗ ಜ್ಞಾನೇಂದ್ರ ರವರು ಹಾಗೂ ತಹಶೀಲ್ದಾರರಾದ ಮಾನ್ಯ ಶ್ರೀ ಜಕ್ಕನಗೌಡರ ಹಾಗೂ ಪಟ್ಟಣ ಪಂಚಾಯತಿಯ ಮಾಜಿ ಅಧ್ಯಕ್ಷರಾದ ಸಂದೇಶ್ ಜವಳಿ, ತಹಶೀಲ್ದಾರ ಕಛೇರಿಯ ರೆವೆನ್ಯೂ ಇನ್ಸಪೆಕ್ಟರ್ ಸಮೀರ, ತಹಶೀಲ್ದಾರ ಕಛೇರಿ ಸಿಬ್ಬಂದಿಗಳಾದ ಸುನೀತ್ ಎಚ್. ರಾಜಶೇಖರ ಆರ್, ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಿಬ್ಬಂದಿಗಳು ಹಾಗೂ ಪೋಲೀಸ್ ಇಲಾಖೆ ಸಿಬ್ಬಂದಿಗಳು ಚನ್ನಮ್ಮಾಜಿಯ ವಿಜಯ ಜ್ಯೋತಿಯನ್ನು ವಾದ್ಯಮೇಳದೊಂದಿಗೆ ಬರಮಾಡಿಕೊಂಡು, ವಿಜಯ ಜ್ಯೋತಿಗೆ ಪೂಜೆಯನ್ನು ಸಲ್ಲಿಸಿದರು.

JCI Shivamogga ಜೆಸಿಐ ಇಂಡಿಯಾ ವಲಯ- 24 ರ ಅಧ್ಯಕ್ಷರಾಗಿ ಗೌರೀಶ್ ಭಾರ್ಗವ ಆಯ್ಕೆ

0

JCI Shivamogga ಜೆಸಿಐ ಇಂಡಿಯಾ ವಲಯ -24 ಅಧ್ಯಕ್ಷರಾಗಿ ಶ್ರೀ ಗೌರೀಶ್ ಭಾರ್ಗವ ಇವರು ಆಯ್ಕೆ: ಶಿವಮೊಗ್ಗ ಮಲ್ನಾಡ್ ಘಟಕದ ಪ್ರತಿನಿಧಿ ಚುನಾವಣೆಯಲ್ಲಿ ಸ್ಪರ್ದಿಸಿ, ಜೆಸಿ ವಲಯ -24 ಅಧ್ಯಕ್ಷರಾಗಿ ಜೆಸಿಐ ಸನೆಟರ್ ಶ್ರೀ ಗೌರೀಶ್ ಭಾರ್ಗವ ಆಯ್ಕೆ ಆಗಿದ್ದಾರೆ.ಉಪಾದ್ಯಕ್ಷರುಗಳಾಗಿ ಹೊಸಪೇಟೆ ಹೆರಿಟೇಜ್ ಘಟಕದ ಜೆಸಿ ತ್ಯಾಗರಾಜ್, ಜೆಸಿಐ ಶಿಕಾರಿಪುರ ಚಂದನ ಘಟಕದ ಜೆಸಿ ವಿನೂತ್, ಶಿವಮೊಗ್ಗ ಮೆಟ್ರೂ ಘಟಕದ ಜೆಸಿ. ಪ್ರಮೊದು ಶಾಸ್ತ್ರಿ ಮತ್ತು ಹೊಸನಗರ ಡೈಮಂಡ್ ಘಟಕದ ಜೆಸಿ. ಮದುಸೂದನ್ ನಾವಡ ಆಯ್ಕೆ ಆಗಿದ್ದಾರೆ. ಶಿವಮೊಗ್ಗದ ಈಡಿಗರ ಸಭಾ ಭವನದಲ್ಲಿ ಆಕ್ಟೊಬರ್ 5 ಮತ್ತು 6 ರಂದು ಶಿವಮೊಗ್ಗದಲ್ಲಿ ನೆಡೆದ ವಲಯ ಸಮ್ಮೇಳದಲ್ಲಿ ಈ ಆಯ್ಕೆ ಪ್ರಕ್ರಿಯೆ ನೆಡೆಯಿತು. ವಿಜೃಂಭಣೆಯಿಂದ ನೆಡೆದ ಈ ಸಮ್ಮೇಳನದ ಅಥಿತ್ಯ ಜೆಸಿಐ ಶಿವಮೊಗ್ಗ ಶರಾವತಿ ಘಟಕ ವಹಿಸಿತ್ತು.

JCI Shivamogga 2024ರ ವಲಯ ಅಧ್ಯಕ್ಷ ಜೆಸಿ. ಚನ್ನವೀರೇಶ್ ಸಮ್ಮೇಳನದ ಅದ್ಯಕ್ಷತೆ ವಹಿಸಿದ್ದರೂ. ಜೆಸಿಐ ಇಂಡಿಯಾದ ಆಡಳಿತಾತ್ಮಕ ಸಮಿತಿಯ ಸದಸ್ಯ ಜೆಸಿ ಸುಕುಮಾರ ಸಮ್ಮೇಳನವನ್ನು ಉದ್ಘಾಟಿಸಿದರು, ರಾಜ್ಯ ಕಾಂಗ್ರೆಸ್ ನಾಯಕ ಶ್ರಿ. ಶ್ರೀಕಾಂತ ಇವರು ಮುಖ್ಯ ಆಥಿತಿಗಳಾಗಿ ಭಾಗವಹಿಸಿದರು. ಜೆಸಿಐದ ಪ್ರತಿನಿಧಿಯಾಗಿ ಜೆ.ಎಫ್.ಐ. ಹರ್ಷವರ್ದನ್ ರೆಡ್ಡಿ ಉಪಸ್ಥಿತರಿದ್ದು ಸಮ್ಮೇಳನ ಯಶಸ್ವಿಗೊಳಿಸಿದರು.

Kittur Rani Chennamma ಕಿತ್ತೂರು ಉತ್ಸವ ಯಶಸ್ವಯಾಗಿ ನೆರವೇರಲಿ- ಎಸ್.ಎನ್.ಚನ್ನಬಸಪ್ಪ

0

Kittur Rani Chennamma ಈ ದೇಶದ ಸಂರಕ್ಷಣೆಗಾಗಿ ಹೋರಾಡಿದ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ ಅವರು ಬ್ರಿಟಿಷರ ವಿರುದ್ಧದ ವಿಜಯ ಸಾಧಿಸಿ 200 ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ಉತ್ಸವದ ಭಾಗವಾಗಿ ಹಮ್ಮಿಕೊಂಡಿರುವ “ಕಿತ್ತೂರು ವಿಜಯೋತ್ಸವ- ವಿಜಯ ಜ್ಯೋತಿ ಯಾತ್ರೆ”ಗೆ ಇಂದು ನಮ್ಮ ನಗರಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದ ಶಾಸಕರಾದ ಎಸ್ ಎನ್ ಚನ್ನಬಸಪ್ಪ ಅವರು ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಗೌರವ ಪೂರ್ವಕವಾಗಿ ಸ್ವಾಗತಿಸಿದರು.

Kittur Rani Chennamma ಕಿತ್ತೂರು ಸಂಸ್ಥಾನವು ಸ್ವಾತಂತ್ರ್ಯ ಹೋರಾಟ ಪ್ರಾರಂಭವಾಗುವ ಮೊದಲೇ ಬ್ರಿಟಿಷರ ವಿರುದ್ಧ ಯುದ್ಧ ಸಾರಿದ ಸಂಸ್ಥಾನ. ಆಂಗ್ಲರಿಗೆ ಕಪ್ಪ ಕೊಡಲು ಒಪ್ಪದೆ ಸ್ವಾಭಿಮಾನಕ್ಕಾಗಿ ಜೀವವನ್ನೇ ಪಣಕ್ಕಿಟ್ಟು ಹೋರಾಡಿದ ರಾಣಿ ಚೆನ್ನಮ್ಮ ಅವರ ಸಮರ್ಪಣೆ ಎಂದಿಗೂ ಮರೆಯಲಾಗದು. ಅವರಿಗೆ ಗೌರವ ಸಮರ್ಪಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಈ ಕಿತ್ತೂರು ಉತ್ಸವ ಯಶಸ್ವಿಯಾಗಿ ನೆರವೇರಲಿ ಎಂದು ಶುಭ ಹಾರೈಸಿದರು.

Navaratri Festival ನವರಾತ್ರಿ ಐದನೇ ದಿನ ದೇವಿಯ ಸ್ಕಂದಮಾತಾ ರೂಪದ ಆರಾಧನೆ ಲೇ: ಎನ್.ಜಯಭೀಮ ಜೊಯ್ಸ್.ಶಿವಮೊಗ್ಗ.

0

Navaratri Festival ” ಸಿಂಹಾಸನಗತಾ ನಿತ್ಯಂ
ಪದ್ಮಾಂಚಿತ ಕರಾದ್ವಯಾ/
ಶುಭದಾಸ್ತು ಸದಾ ದೇವಿ
ಸ್ಕಂದಮಾತಾ ಯಶಸ್ವಿನೀ//”

Navaratri Festival ನವರಾತ್ರಿ ಹಬ್ಬದ ಐದನೇ ದಿನವಾದ ಇಂದು
ಸ್ಕಂದಮಾತೆಯನ್ನು ಆರಾಧಿಸಿ ಪೂಜಿಸಲಾಗುತ್ತದೆ.
ಬುಧಗ್ರಹವನ್ನು ಪ್ರತಿನಿಧಿಸುವ ದುರ್ಗಾಮಾತೆಯ ಐದನೇ ಅವತಾರವಾದ ಸ್ಕಂದಮಾತೆ,ಸದಾ ತನ್ನ ಭಕ್ತರಮೇಲೆಸಹಾನುಭೂತಿತೋರುತ್ತಾಳೆ.ಪಾತಾಳಲೋಕದಲ್ಲಿದ್ದತಾರಕಾಸುರನೆಂಬ ರಾಕ್ಷಸನನ್ನು ಸಂಹರಿಸಲುತದೇವಿ ಸ್ಕಂದನಿಗೆ(ಸುಬ್ರಹ್ಮಣ್ಯ ಸ್ವಾಮಿ) ಜನ್ಮ ಕೊಡುತ್ತಾಳೆ.ಆದ್ದರಿಂದಈ ದೇವಿಯನ್ನು ಸ್ಕಂದಮಾತಾ ಎಂದು ಕರೆಯುತ್ತಾರೆ .ಸ್ಕಂದ ಮಾತಾದೇವಿಯ ವಾಹನಸಿಂಹವಾಗಿರುತ್ತದೆ. ನಾಲ್ಕುಭುಜಗಳನ್ನು ಹೊಂದಿದ್ದು,ಎರಡು ಕೈಗಳಲ್ಲಿ ಕಮಲವನ್ನು
ಹಿಡಿದಿರುತ್ತಾಳೆ.ದೇವಿಯು ಮಾತೃಸ್ವರೂಪಿಣಿಯಾಗಿ ಭಕ್ತಕೋಟಿಯನ್ನು ಹರಸುವಳು.
ಇಂತಹಮಾತೃಸ್ವರೂಪಿಣಿಯಾದಸ್ಕಂದಮಾತಾದೇವಿಯನ್ನು ಭಕ್ತಿಯಿಂದ ಆರಾಧಿಸಿ, ಪೂಜಿಸಿ ದೇವಿಯ ಅನುಗ್ರಹಕ್ಕೆಪಾತ್ರರಾಗೋಣ.

D Satya Prakash ಯಾವುದೇ ಸಿನಿಮಾ ಭಾವನೆಗಳ ಮೇಲಿ‌ನ ಆಟವಾಗಬಾರದು- ಡಿ.ಸತ್ಯಪ್ರಕಾಶ್

0

D. Satya Prakash ಸಿನಿಮಾ ಎನ್ನುವುದು ಭಾವನಾತ್ಮಕ ಜೊತೆಗೆ ವಿಚಿತ್ರವೂ ಹೌದು
ಖ್ಯಾತ ಚಲನ ಚಿತ್ರ ನಿರ್ದೇಶಕ ಡಿ. ಸತ್ಯಪ್ರಕಾಶ್ ಪ್ರತಿಪಾದನೆ
ಶಿವಮೊಗ್ಗಃ
ಸಿನಿಮಾ ಎನ್ನುವುದು ಮನರಂಜನೆಯ ಮೂಲಕ ಭಾವನೆಗಳ ಜೊತೆಗೆ ಆಟವಾಡುತ್ತಿದೆಯಾದರೂ, ಅದರಲ್ಲಿರುವ ವಿಚಿತ್ರವನ್ನು ಮರೆಯುವಂತಿಲ್ಲ ಎಂದು ಖ್ಯಾತ ಚಲನಚಿತ್ರ ನಿರ್ದೇಶಕ ಡಿ. ಸತ್ಯಪ್ರಕಾಶ್ ಹೇಳಿದರು.
ಶಿವಮೊಗ್ಗ ಮಹಾನಗರ ಪಾಲಿಕೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಶಿವಮೊಗ್ಗ ಬೆಳ್ಳಿಮಂಡಲ, ಸಿನಿಮೊಗೆ-ಶಿವಮೊಗ್ಗ ಚಿತ್ರ ಸಮಾಜಗಳ ವತಿಯಿಂದ ಆಯೋಜಿಸಲಾದ ದಸರಾ ಚಲನಚಿತ್ರೋತ್ಸವದ ಭಾಗವಾಗಿ ಆಯೋಜಿಸಲಾದ ಚಲನಚಿತ್ರ ರಸ ಗ್ರಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರತೀ ಚಲನಚಿತ್ರದಲ್ಲಿ ವೈe್ಞÁನಿಕ ಅಂಶಗಳು ಇರುವುದರಿಂದಲೇ ಅದು ಪ್ರೇಕ್ಷಕರನ್ನು ತಲುಪಲು ಸಾಧ್ಯವಾಗಿದೆ ಎಂದರು.
ಯಾವುದೇ ಸಿನಿಮಾ ಆಗಲಿ, ಅದು ಕೇವಲ ಭಾವನೆಗಳ ಮೇಲೆ ಆಟವಾಗಬಾರದು. ಅದರಲ್ಲಿ ವಿe್ಞÁನದ ಅಂಶಗಳ ಮೂಲಕ ಕಥೆಗಳನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡಲು ಸಾಧ್ಯ. ಹೀಗಾಗಿ ಪ್ರೇಕ್ಷಕರು ಕೂಡಾ ಈ ಮೂಲಕವೇ ಚಿತ್ರಗಳನ್ನು ಗ್ರಹಿಸಲು ಮುಂದಾಗಬೇಕು ಎಂದು ಆಶಿಸಿದ ಅವರು, ಈ ರೀತಿಯ ರಸಗ್ರಹಣ ಕಾರ್ಯಾಗಾರಗಳ ಮೂಲಕ ಚಲನಚಿತ್ರದ ವಿe್ಞÁನ ಅಂಶಗಳನ್ನು ಗುರುತಿಸಲು ಸಾಧ್ಯ ಎಂದರು.
ಇಂದು ಓದುವ ಸಂಸ್ಕೃತಿ ಮರೆಯಾಗುತ್ತಿದೆ. ಕಾದಂಬರಿಗಳನ್ನು ಓದುವ, ಆ ಮೂಲಕ ಕಾದಂಬರಿಕಾರರನ್ನು ಆರ್ಥ ಮಾಡಿಕೊಳ್ಳುವ ಪ್ರಯತ್ನ ನಡೆಸಬೇಕು. ಪ್ರತಿಯೊಂದು ಓದು ಕೂಡಾ, ವ್ಯಕ್ತಿಯ ಮನಸನ್ನು ವಿಕಸಿತಗೊಳಿಸುತ್ತದೆ. ಆ ಕಾದಂಬರಿ ಚಿತ್ರವಾಗಿ ತೆರೆಯ ಮೇಲೆ ಬಂದಾಗ, ಅದು ಇನ್ನಷ್ಟು ಆಪ್ತವಾಗುತ್ತದೆ ಎಂದ ಅವರು, ಇಂದು ಸಿನಿಮಾ ಕೇವಲ ಮನರಂಜನೆ ಮಾತ್ರವಲ್ಲ, ಅದೊಂದು ಅಧ್ಯಯನದ ವಸ್ತು ಎಂದರು.
D. Satya Prakash ಒಂದು ಸಿನಿಮಾ ತೆರೆಯ ಮೇಲೆ ಬರಬೇಕಾದರೆ, ಸಾಕಷ್ಟು ತಂತ್ರಜ್ಞರು, ಕಲಾವಿದರ ಶ್ರಮ ಅಡಗಿರುತ್ತದೆ. ಸಿನಿಮಾ ಕೇವಲ ನಿರ್ದೇಶಕನ ಸೊತ್ತಲ್ಲ. ಆತ ಅದನ್ನು ತೆರೆಯ ಮೇಲೆ ತರುವ ಸಾಧಕ ಮಾತ್ರ. ಹೀಗಾಗಿ ಕಥೆಗೆ ಧಕ್ಕೆಯಾಗದಂತೆ ಚಿತ್ರವನ್ನು ನಿರೂಪಿಸುವ ಗುರುತರವಾದ ಜವಾಬ್ದಾರಿಯನ್ನು ಹೊಂದಿರುವ ನಿರ್ದೇಶಕನಿಗೆ ತಂತ್ರಜ್ಞರ ಪರಿಣಾಮಕಾರಿಯಾದ ಸಾಥ್ ಸಿಕ್ಕಿದರೆ, ಅತ್ಯುತ್ತಮ ಚಿತ್ರ ಮೂಡಿಬರಲು ಸಾಧ್ಯ ಎಂದರು.
ಇAದು ಚಲನಚಿತ್ರ ಎನ್ನುವುದು ಉದ್ಯಮವಾಗಿದೆ. ಹೀಗಾಗಿ ಪ್ರತೀ ಸೆಕೆಂಡು ಕೂಡಾ ಹಣದ ಮೇಲೆ ಅವಲಂಬಿತವಾಗಿದೆ ಎಂದ ಅವರು, ನಿರ್ಮಾಪಕನಾದವನಿಗೆ ತಾನು ಹಾಕಿದ ಬಂಡವಾಳ ಲಾಭದೊಂದಿಗೆ ಹಿಂದಿರುಗಬೇಕು ಎಂಬ ಆಶಯ ಸಹಜ. ಆದರೆ, ಇದರಿಂದ ಸೃಜನಶೀಲತೆಗೆ ಧಕ್ಕೆಯಾಗುತ್ತಿದೆ. ಎಲ್ಲ ಕಾರಣಕ್ಕೂ ವ್ಯಾಪಾರೀಕರಣವೇ ಮುಖ್ಯವಾಗಬಾರದು ಎಂದರು.
ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಸಿನಿಮಾ ಬರುತ್ತಿಲ್ಲ ಎಂಬ ಆರೋಪ ಇದೆ. ಆದರೆ, ಇದು ಸರಿಯಲ್ಲ. ಈಗಲೂ ಕನ್ನಡದಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯುತ್ತಿವೆ. ಉತ್ತಮವಾದ ಚಿತ್ರಗಳು ಬರುತ್ತಿವೆ ಎಂದು ಹಲವು ಉದಾಹರಣೆಗಳನ್ನು ನೀಡಿದ ಅವರು, ಈ ಚಿತ್ರಗಳನ್ನು ತಮ್ಮದೆಂದು ಸ್ವೀಕರಿಸುವ ಮನಸ್ಥಿತಿ ಪ್ರತೀ ಪ್ರೇಕ್ಷಕನಿಗೆ ಬೇಕು ಎಂದರು.
ಬದಲಾವಣೆ ಜಗದ ನಿಯಮ. ಹೀಗಾಗಿ ಒಂದು ಪರದೆಯ ಚಿತ್ರಮಂದಿರಗಳ ಸ್ಥಾನದಲ್ಲಿ ಈಗ ಮಲ್ಟಿಪ್ಲೆಕ್ಸ್ಗಳು ಬಂದಿವೆ. ಈ ಬದಲಾವಣೆಗೆ ಪ್ರೇಕ್ಷಕ ಒಗ್ಗಿಕೊಳ್ಳಬೇಕು ಎಂದ ಅವರು, ಸಿನಿಮಾವನ್ನು ಸಿನಿಮಾ ಮಂದಿರಗಳಲ್ಲಿಯೇ ನೋಡುವ ಮಾನಸಿಕತೆ ಮುಖ್ಯ ಎಂದರು.
ಕಾರ್ಯಾಗಾರದಲ್ಲಿ ಚಲನಚಿತ್ರದ ಛಾಯಾಗ್ರಹಣ ಒಂದು ಅನುಸಂಧಾನ ಕುರಿತು ಪ್ರಸಿದ್ಧ ಚಲನಚಿತ್ರ ಛಾಯಾಗ್ರಾಹಕ ಶ್ರೀಶ ಕೂದುವಳ್ಳಿ, ಚಲನಚಿತ್ರ ಛಾಯಾಗ್ರಹಣ ಪರಂಪರೆ ಕುರಿತು ಗುರುಪ್ರಸಾದ ಕಾಶಿಯವರು ಮಾಹಿತಿ ಮಾರ್ಗದರ್ಶನ ನೀಡಿದರು.
ಕಾರ್ಯಾಗಾರವನ್ನು ಶಾಸಕ ಎಸ್. ಎನ್. ಚನ್ನಬಸಪ್ಪ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಡಿ. ಸತ್ಯಪ್ರಕಾಶ್, ಶ್ರೀಶ ಕೂದುವಳ್ಳಿ, ಗುರುಪ್ರಸಾದ ಕಾಶಿ ಹಾಗೂ ನಗರದ ಛಾಯಾಗ್ರಾಹಕರಾದ ಶಿವಮೊಗ್ಗ ನಾಗರಾಜ್, ಪ್ರದೀಪ್ ಕುಮಾರ್, ವಾಸುಕಿ ಕುಮಾರ್‌ರವರನ್ನು ಸನ್ಮಾನಿಸಲಾಯಿತು.
ಡಾ. ಹೆಚ್. ಎಸ್. ನಾಗಭೂಷಣರವರು ನಿರೂಪಿಸಿದ ಈ ಕಾರ್ಯಕ್ರಮದಲ್ಲಿ ಹೆಚ್. ಯು. ವೈದ್ಯನಾಥ್ ಉಪಸ್ಥಿತರಿದ್ದರು.

Press Distributors ಪತ್ರಿಕಾ ವಿತರಕರಿಗೆ ಸಂಕಷ್ಟದ ಸಮಯದಲ್ಲಿ ಸರ್ಕಾರದ ಸಹಕಾರ ಅಗತ್ಯ- ಜಿ.ಕೆ.ಹೆಬ್ಬಾರ್

0

Press Distributors ಶಿಕಾರಿಪುರ ನಿನ್ನೆ ಮಧ್ಯಾಹ್ನ ಹಠ ತ್ ಲಘು ಹೃದಯಘಾತವಾಗಿ ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಒಳಗಾಗಿರುವ ವಿತರಕ ಗಜೇಂದ್ರ ರವರ ಅರೋಗ್ಯವನ್ನು ಮಾಧ್ಯಮ ಮಿತ್ರ ಜಿ ಕೆ ಹೆಬ್ಬಾರ್ ಹಾಗೂ ಶಿವಮೊಗ್ಗ ಜಿಲ್ಲಾ ಪತ್ರಿಕಾ ವಿತರಕರ ಒಕ್ಕೂಟದ ಜಿಲ್ಲಾಧ್ಯಕ್ಷ ಮಾಲತೇಶ್ ವಿಚಾರಿಸಿ ಧೈರ್ಯ ತುಂಬಿದರು ಸಂಬಂದಿಸಿದ ಸಂಪರ್ಕಿಸಿ ಅರೋಗ್ಯ ವಿಚಾರಿಸಿ ಸೋಮವಾರ ಡಿಶ್ ಚಾರ್ಜ್ ಮಾಡುವ ವಿಚಾರ ತಿಳಿಸಿದರು. ಸರ್ಕಾರ ವಿತರಕ ಇಂತಹ ಸಂದೀಗ್ದ ಸಮಯದಲ್ಲಿ ಅವರಿಗೆ ಸಹಾಯದ ಸಹಕಾರ ನೀಡುವುದು ಅಗತ್ಯವಿದೆ ಇಂತಹ ಅವಘಡ ಸಂಭವಿಸಿದಾಗ ವಿತರಕರಿಗೆ ಸರ್ಕಾರ ಕೂಡಲೇ ಸ್ಪಂದಿಸುವುದು ಸೂಕ್ತ ಎಂದು ಅಭಿಪ್ರಾಯಸಿದರು.
Press Distributors ಅಧ್ಯಕ್ಷ ಮಾಲತೇಶ್ ಅವರು ವಿತರಕರಿಗೆ ಆರೋಗ್ಯ ವಿಮೆ ಸೌಲಭ್ಯಗಳ ಜೊತೆಗೆ ಇಂಥ ಸಂದರ್ಭದಲ್ಲಿ ತಕ್ಷಣಕ್ಕೆ ಅವರ ನೆರವಿಗೆ ಧಾವಿಸುವುದು ಸೂಕ್ತವೆಂದು ಅನಿಸಿಕೆ ವ್ಯಕ್ತಪಡಿಸಿದರು. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಕುಮಾರ್ ಅವರು ದೂರವಾಣಿ ಮೂಲಕ ಆರೋಗ್ಯ ವಿಚಾರಿಸಿ ನಂತರಕ್ಕೆ ಆಸ್ಪತ್ರೆಗೆ ಬರುವ ವಿಚಾರವನ್ನು ತಿಳಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಶಿವಮೊಗ್ಗ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮುಕ್ತರ್ ಅಹಮದ್ ನಜೀರ್ ಸಂಘಟನಾ ಕಾರ್ಯದರ್ಶಿ ಪರಶುರಾಮ್ ರಾವ್ ಭದ್ರಾವತಿ ಇತರರು ಉಪಸ್ಥಿತರಿದ್ದು ಮಿತೇರಕ ಗಜೇಂದ್ರ ಅವರು ಶೀಘ್ರ ಗುಣಮುಖ ಆಗಲೆಂದು ಹಾರೈಸಿದರು.

Dasara Shimoga 2024 ಸಿಎಂ ಕಪ್ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಶಿವಮೊಗ್ಗ ಮೀನಾಕ್ಷಿಗೆ ತೃತೀಯ ಸ್ಥಾನ

0

Dasara Shimoga 2024 ನಾಡಹಬ್ಬ ದಸರಾ ಪ್ರಯುಕ್ತ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕರ್ನಾಟಕ ಸರ್ಕಾರ ಮೈಸೂರಿನ ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ಅಕ್ಟೋಬರ್ 3ರಿಂದ 5 ರವರೆಗೆ ಆಯೋಜಿಸಿದ
ಸಿಎಂ ಕಪ್ ರಾಜ್ಯಮಟ್ಟದ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ
ಬೆಂಗಳೂರು ಗ್ರಾಮಾಂತರ ವಿಭಾಗದಿಂದ ರಾಜ್ಯಮಟ್ಟದ ದಸರಾ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದ
ಶಿವಮೊಗ್ಗದ ಹೆಮ್ಮೆಯ ಮಹಿಳಾ ಬಾಕ್ಸರ್ ಮತ್ತು ಶಿವಮೊಗ್ಗ ದ ಮೊದಲ ಮಹಿಳಾ ಎನ್ಐಎಸ್ ಕೋಚ್ ಆದ ಮೀನಾಕ್ಷಿ 60-63 ಕೆಜಿ ತೂಕದ ವಿಭಾಗದಲ್ಲಿ ಭಾಗವಹಿಸಿ
ತೃತೀಯ ಸ್ಥಾನ ಪಡೆದು
ಜಿಲ್ಲೆಗೆ ಕೀರ್ತಿ ತಂದಿದ್ದು
Dasara Shimoga 2024 ವಿಜೇತ ಕ್ರೀಡಾಪಟು ಕಳೆದ ಬಾರಿಯ ದಸರಾ ಪಂದ್ಯಾವಳಿ ಯಲ್ಲೂ ಜಿಲ್ಲೆಗೆ ಪದಕ ತಂದಿದ್ದು
ಇವರು ಶಿವಮೊಗ್ಗ ಜಿಲ್ಲಾ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿಯಾಗಿದ್ದು
ಸ್ವತಹ ಕೋಚ್ ಹಾಗೂ ಬಾಕ್ಸಿಂಗ್ ಸಂಸ್ಥೆ ಪದಾಧಿಕಾರಿಯಾಗಿದ್ದರು
ಕ್ರೀಡಾಪಟುವಾಗಿ ಮತ್ತಷ್ಟು ಸಾಧನೆ ಮಾಡುವ ಹಂಬಲ ಹೊಂದಿರುವ
ಮೀನಾಕ್ಷಿ ರವರಿಗೆ ಕರ್ನಾಟಕ ರಾಜ್ಯ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ಸಹ ಕಾರ್ಯದರ್ಶಿ ಹಾಗೂ ಶಿವಮೊಗ್ಗ ಜಿಲ್ಲಾ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ಅಧ್ಯಕ್ಷ ಶಿವಮೊಗ್ಗ ವಿನೋದ್ ಸೇರಿದಂತೆ
ಬಾಕ್ಸಿಂಗ್ ಸಂಸ್ಥೆಯ ಎಲ್ಲರೂ ಅಭಿನಂದನೆ ತಿಳಿಸಿದ್ದಾರೆ

Shimoga Dasara ಅಕ್ಟೋಬರ್ 8 & 9 ರಂದು ಅರಣ್ಯ ಇಲಾಖೆ ಸಿಬ್ಬಂದಿಗೆ ಬಾಳೆ ಹಣ್ಣು ತಿನ್ನುವ & ಅಮ್ಮ ಮಗನಿಗೆ ತಿನಿಸು ತಯಾರಿಕೆ ಸ್ಪರ್ಧೆ

0

Shimoga Dasara ಶಿವಮೊಗ್ಗ ಅಕ್ಟೋಬರ್ 05 ಶಿವಮೊಗ್ಗ ಮಹಾನಗರ ಪಾಲಿಕೆಯು ನಾಡ ದಸರಾ 2024ರ ಪ್ರಯುಕ್ತ ಆಹಾರ ದಸರಾ ಸಮಿತಿ ವತಿಯಿಂದ ನಗರದ ಸಾರ್ವಜನಿಕರಿಗೆ ವಿವಿಧ ಸ್ಥಳಗಳಲ್ಲಿ ವಿವಿಧ ದಿನಾಂಕಗಳAದು ಆಹಾರ ಮೇಳ, ಆಹಾರ ತಿನ್ನುವ ಸ್ಪರ್ಧೆ ಹಾಗೂ ಆಹಾರ ತಯಾರಿಸುವ ಸ್ಪರ್ಧೆಗಳನ್ನು ಏರ್ಪಡಿಸಿದೆ.
ಅ.08 ರಂದು ಸಂಜೆ 6.00 ಕ್ಕೆ ಫ್ರೀಡಂ ಪಾರ್ಕ್ನಲ್ಲಿ ಆಹಾರ ಮೇಳ ಏರ್ಪಡಿಸಲಾಗಿದ್ದು, ಸುಮಾರು 40 ಸ್ಟಾಲ್‌ಗಳನ್ನು ನಿರ್ಮಿಸಿ ಜಿಲ್ಲೆಯ ವಿವಿಧ ಖಾಧ್ಯಗಳ ಪ್ರದರ್ಶನ ಮತ್ತು ಮಾರಾಟ ಸ್ಟಾಲ್‌ಗಳನ್ನು ಆಯೋಜಿಸಲಾಗಿದೆ.
ಅ.09 ರಂದು ಬೆಳಗ್ಗೆ 10.30ರಿಂದ ಶಿವಪ್ಪ ನಾಯಕ ವೃತ್ತದಲ್ಲಿ ಆಹಾರ ತಿನ್ನುವ ಸ್ಪರ್ಧೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಯವರಿಗೆ Shimoga Dasara ಬಾಳೆಹಣ್ಣು ತಿನ್ನುವ ಸ್ಪರ್ಧೆ ಮತ್ತು ಸಾರ್ವಜನಿಕರಿಗೆ ಇಡ್ಲಿ, ಸಾಂಬಾರ್ ತಿನ್ನುವ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಅ.10 ರಂದು ಬೆಳಗ್ಗೆ 10.30ಕ್ಕೆ ನಿಜಲಿಂಗಪ್ಪ ಸಮುದಾಯ ಭವನದಲ್ಲಿ ಆಹಾರ ತಯಾರಿಸುವ ಸ್ಪರ್ಧೆಯಲ್ಲಿ ಅಮ್ಮ ಮಗ ಸೇರಿ ಹೆಸರುಕಾಳು ಉಪಯೋಗಿಸಿ ಆರೋಗ್ಯಕರ ತಿನಿಸನ್ನು ತಯಾಸುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಆಹಾರ ದಸರಾ ಸಮಿತಿ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಸ್ಪರ್ಧೆಗಳಲ್ಲಿ ಭಾಗವಹಿಸಲು ನೊಂದಣಿಗಾಗಿ ಮೊ.ಸಂ.: 9886033982/9902525752 ಗಳನ್ನು ಸಂಪರ್ಕಿಸುವುದು.