Navaratri Festival ” ಸಿಂಹಾಸನಗತಾ ನಿತ್ಯಂ
ಪದ್ಮಾಂಚಿತ ಕರಾದ್ವಯಾ/
ಶುಭದಾಸ್ತು ಸದಾ ದೇವಿ
ಸ್ಕಂದಮಾತಾ ಯಶಸ್ವಿನೀ//”
Navaratri Festival ನವರಾತ್ರಿ ಹಬ್ಬದ ಐದನೇ ದಿನವಾದ ಇಂದು
ಸ್ಕಂದಮಾತೆಯನ್ನು ಆರಾಧಿಸಿ ಪೂಜಿಸಲಾಗುತ್ತದೆ.
ಬುಧಗ್ರಹವನ್ನು ಪ್ರತಿನಿಧಿಸುವ ದುರ್ಗಾಮಾತೆಯ ಐದನೇ ಅವತಾರವಾದ ಸ್ಕಂದಮಾತೆ,ಸದಾ ತನ್ನ ಭಕ್ತರಮೇಲೆಸಹಾನುಭೂತಿತೋರುತ್ತಾಳೆ.ಪಾತಾಳಲೋಕದಲ್ಲಿದ್ದತಾರಕಾಸುರನೆಂಬ ರಾಕ್ಷಸನನ್ನು ಸಂಹರಿಸಲುತದೇವಿ ಸ್ಕಂದನಿಗೆ(ಸುಬ್ರಹ್ಮಣ್ಯ ಸ್ವಾಮಿ) ಜನ್ಮ ಕೊಡುತ್ತಾಳೆ.ಆದ್ದರಿಂದಈ ದೇವಿಯನ್ನು ಸ್ಕಂದಮಾತಾ ಎಂದು ಕರೆಯುತ್ತಾರೆ .ಸ್ಕಂದ ಮಾತಾದೇವಿಯ ವಾಹನಸಿಂಹವಾಗಿರುತ್ತದೆ. ನಾಲ್ಕುಭುಜಗಳನ್ನು ಹೊಂದಿದ್ದು,ಎರಡು ಕೈಗಳಲ್ಲಿ ಕಮಲವನ್ನು
ಹಿಡಿದಿರುತ್ತಾಳೆ.ದೇವಿಯು ಮಾತೃಸ್ವರೂಪಿಣಿಯಾಗಿ ಭಕ್ತಕೋಟಿಯನ್ನು ಹರಸುವಳು.
ಇಂತಹಮಾತೃಸ್ವರೂಪಿಣಿಯಾದಸ್ಕಂದಮಾತಾದೇವಿಯನ್ನು ಭಕ್ತಿಯಿಂದ ಆರಾಧಿಸಿ, ಪೂಜಿಸಿ ದೇವಿಯ ಅನುಗ್ರಹಕ್ಕೆಪಾತ್ರರಾಗೋಣ.
Navaratri Festival ನವರಾತ್ರಿ ಐದನೇ ದಿನ ದೇವಿಯ ಸ್ಕಂದಮಾತಾ ರೂಪದ ಆರಾಧನೆ ಲೇ: ಎನ್.ಜಯಭೀಮ ಜೊಯ್ಸ್.ಶಿವಮೊಗ್ಗ.
Date: