Bhadravati Social Welfare Department ಭದ್ರಾವತಿ ತಾಲೂಕು ಸಮಾಜ ಕಲ್ಯಾಣ ಇಲಾಖೆಯಿಂದ 2025-26ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ., ಪಿಯುಸಿ, ಪದವತಿ, ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ನೀಡಲಾಗುವ ಪ್ರೋತ್ಸಾಹಧನ ಪಡೆಯಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಎಸ್.ಎಸ್.ಎಲ್.ಸಿ.ಯಲ್ಲಿ ಶೇ.60 ರಷ್ಟು ಅಂಕ ಗಳಿಸಿದವರಿಗೆ 7000/-, ಶೇ. 75 ಕ್ಕಿಂತ ಹೆಚ್ಚು ಅಂಕ ಗಳಿಸಿದವರಿಗೆ 15000/- ನೀಡಲಾಗುವುದು. ಪಿಯುಸಿ ವಿದ್ಯಾರ್ಥಿಗಳಿಗೆ 20000/-, ಪದವಿ ವಿದ್ಯಾರ್ಥಿಗಳಿಗೆ 25000/-, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ 30000/- ಹಾಗೂ ಕೃಷಿ ಎಂಜಿನಿಯರಿAಗ್, ಪಶು ವೈದ್ಯಕೀಯ ಮತ್ತು ವೈದ್ಯಕೀಯ ಪದವಿ ವಿದ್ಯಾರ್ಥಿಗಳಿಗೆ 35000/- ರೂ.ಗಳ Bhadravati Social Welfare Department ಪ್ರೋತ್ಸಾಹ ಧನ ನೀಡಲಾಗುತ್ತಿದ್ದು, ಅರ್ಹ ವಿದ್ಯಾರ್ಥಿಗಳು ಇಲಾಖೆಯ ವೆಬ್‌ಸೈಟ್ https://sw.karnataka.gov.in ಮೂಲಕ ಅರ್ಜಿ ಸಲ್ಲಿಸುವಂತೆ ಭದ್ರಾವತಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಭದ್ರಾವತಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸುವುದು.
Sri Jayachamarajendra Government ತೀರ್ಥಹಳ್ಳಿ ತಾಲ್ಲೂಕು ಆಸ್ಪತ್ರೆಗೆ ಅರಿವಳಿಕೆ ತಜ್ಞರ ನೇಮಕಾತಿಗೆ ನೇರ ಸಂದರ್ಶನ.
Sri Jayachamarajendra Government ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಶಿವಮೊಗ್ಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯ ವತಿಯಿಂದ ಪತ್ರಿಕಾ ಪ್ರಕಟಣೆಯೊಂದನ್ನು ಹೊರಡಿಸಲಾಗಿದೆ. ತೀರ್ಥಹಳ್ಳಿಯ ಶ್ರೀ ಜಯಚಾಮರಾಜೇಂದ್ರ ತಾಲೂಕು ಆಸ್ಪತ್ರೆಯಲ್ಲಿ ಖಾಲಿ ಇರುವ ಅರಿವಳಿಕೆ ತಜ್ಞ ವೈದ್ಯರ (Anaesthetist) ಹುದ್ದೆಯನ್ನು ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ನೇರ ಸಂದರ್ಶನವನ್ನು ಆಹ್ವಾನಿಸಲಾಗಿದೆ.
ಒಂದು ವರ್ಷ ಅವಧಿಗೆ ತಾತ್ಕಾಲಿಕ ಗುತ್ತಿಗೆ ಆಧಾರದ ಮೇಲೆ, ಮೆರಿಟ್ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲಾಗುವುದು. ತಜ್ಞರಿಗೆ ಸಂಭಾವನೆಯನ್ನು
ಎನ್‌ಹೆಚ್‌ಎಂ ಮಾರ್ಗಸೂಚಿಗಳನ್ವಯ ನೀಡಲಾಗುವುದು.
Sri Jayachamarajendra Government ಜೂನ್ 24 ರಂದು ಬೆಳಗ್ಗೆ 11:00 ಗಂಟೆಯಿಂದ ಮಧ್ಯಾಹ್ನ 1:00 ಗಂಟೆಯವರೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ, ಬಿ.ಹೆಚ್. ರಸ್ತೆ, ಶಿವಮೊಗ್ಗ ಇಲ್ಲಿ ನೇರ ಸಂದರ್ಶನ ನಡೆಯಲಿದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆ, ಹುಟ್ಟಿದ ದಿನಾಂಕ ಮತ್ತು ಮೀಸಲಾತಿಗೆ ಸಂಬಂಧಿಸಿದ ಎಲ್ಲಾ ಮೂಲ ದಾಖಲಾತಿಗಳು ಒಂದು ಸೆಟ್ ನಕಲು ಪ್ರತಿಗಳು ಹಾಗೂ ಇತ್ತೀಚಿನ ಎರಡು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಲು ಕೋರಲಾಗಿದೆ.
ಹೆಚ್ಚಿನ ವಿವರಗಳಿಗಾಗಿ ಕಚೇರಿ ವೇಳೆಯಲ್ಲಿ ಖುದ್ದಾಗಿ ಭೇಟಿ ನೀಡಬಹುದು ಅಥವಾ ದೂರವಾಣಿ ಸಂಖ್ಯೆ: 08182-222382 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕು.ಕ ಅಧಿಕಾರಿ ಡಾ.ನಟರಾಜ್ ಕೆ ಎಸ್ ತಿಳಿಸಿದ್ದಾರೆ.
S.N. Channabasappa ಅರ್ಹ ಬಡವರ ಬಿ.ಪಿ.ಎಲ್.ಕಾರ್ಡ್ ರದ್ದತಿಯಿಂದ ಜನಸಾಮಾನ್ಯರ ಬದುಕು ದುಸ್ತರ- ಎಸ್.ಎನ್.ಚನ್ನಬಸಪ್ಪ.
S.N. Channabasappa ಅರ್ಹ ಬಡವರ ಬಿಪಿಎಲ್ ಕಾರ್ಡ್ ರದ್ದತಿಯಿಂದ ಜನಸಾಮಾನ್ಯರ ಬದುಕು ದುಸ್ತರ; ತಕ್ಷಣವೇ ಮರುಪರಿಶೀಲಿಸಿ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಶಾಸಕ ಎಸ್.ಎನ್. ಚನ್ನಬಸಪ್ಪ ಕಡಕ್ ಸೂಚನೆ.
ಶಿವಮೊಗ್ಗ: “ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಅರ್ಹ ಬಡ ಕುಟುಂಬಗಳ ಹಲವಾರು ಬಿಪಿಎಲ್ (BPL) ಪಡಿತರ ಚೀಟಿಗಳು ಏಕಾಏಕಿ ರದ್ದಾಗುತ್ತಿರುವುದರಿಂದ ಜನಸಾಮಾನ್ಯರ ಜೀವನ ನಿರ್ವಹಣೆ ಅತ್ಯಂತ ಕಷ್ಟಕರವಾಗಿದೆ. ಬಡವರ ಹಿತ ಕಾಯಬೇಕಾದ ವ್ಯವಸ್ಥೆಯು ಅವರಿಗೆ ತೊಂದರೆ ಕೊಡುವುದನ್ನು ಸಹಿಸಲು ಸಾಧ್ಯವಿಲ್ಲ” ಎಂದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಸ್.ಎನ್. ಚನ್ನಬಸಪ್ಪ (ಚೆನ್ನಿ) ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೇಷನ್ ಕಾರ್ಡ್ ರದ್ದತಿಯಿಂದ ತೊಂದರೆಗೊಳಗಾದ ನೂರಾರು ನಾಗರೀಕರು ಸಾಲಾಗಿ ಶಾಸಕರ ಕಚೇರಿಗೆ ಭೇಟಿ ನೀಡಿ ಅಹವಾಲು ಸಲ್ಲಿಸಿದ ಹಿನ್ನೆಲೆಯಲ್ಲಿ, ಇಂದು ಶಾಸಕರು ತಮ್ಮ ಅಧಿಕೃತ ಕಾರ್ಯಾಲಯದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳ ತುರ್ತು ಸಭೆ ಕರೆದು ಪ್ರಗತಿ ಪರಿಶೀಲನೆ ನಡೆಸಿದರು.
S.N. Channabasappa ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ಯಾವುದೇ ತಪ್ಪುಗಳಿಲ್ಲದಿದ್ದರೂ ಅರ್ಹ ಬಡವರ ಪಡಿತರ ಚೀಟಿಗಳನ್ನು ರದ್ದುಪಡಿಸಿರುವುದು ಅತ್ಯಂತ ಬೇಜವಾಬ್ದಾರಿತನದ ಪರಮಾವಧಿಯಾಗಿದೆ. ನಿಯಮಾವಳಿಗಳ ಹೆಸರಿನಲ್ಲಿ ನೈಜ ಫಲಾನುಭವಿಗಳಿಗೆ ಅನ್ಯಾಯವಾಗದಂತೆ ಇಲಾಖೆಯು ಮುನ್ನೆಚ್ಚರಿಕೆ ವಹಿಸಬೇಕು ಎಂದು ಕಟ್ಟುನಿಟ್ಟಾಗಿ ತಿಳಿಸಿದರು. ನಗರದಲ್ಲಿ ರದ್ದಾಗಿರುವ ಬಿಪಿಎಲ್ ಕಾರ್ಡ್‌ನ ದೂರುಗಳ ಕುರಿತು ತಳಮಟ್ಟದಲ್ಲಿ ಸಮಗ್ರ ಮರುಪರಿಶೀಲನೆ ನಡೆಸಿ, ಅರ್ಹ ಕುಟುಂಬಗಳಿಗೆ ತಕ್ಷಣವೇ ಪಡಿತರ ಚೀಟಿಗಳನ್ನು ಮರುಸ್ಥಾಪಿಸಲು ಕ್ರಮ ಕೈಗೊಳ್ಳಬೇಕು ಮತ್ತು ಈ ಇಡೀ ಪ್ರಕ್ರಿಯೆಯ ಕುರಿತು ಕೈಗೊಂಡ ಕ್ರಮಗಳ ಸವಿಸ್ತಾರ ವರದಿಯನ್ನು ಶೀಘ್ರದಲ್ಲೇ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಶಾಸಕರು ನಿರ್ದೇಶನ ನೀಡಿದ್ದಾರೆ.
B.Y. Raghavendra ಶಿವಮೊಗ್ಗದಲ್ಲೇ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪಿಸಿ: ರಾಜ್ಯಪಾಲರಿಗೆ ಸಂಸದ ರಾಘವೇಂದ್ರ ಮನವಿ ಅರ್ಪಣೆ.
B.Y. Raghavendra ಹೈಕೋರ್ಟ್ ಸರ್ಕ್ಯೂಟ್ ಪೀಠಕ್ಕೆ ಶಿವಮೊಗ್ಗ ಎಲ್ಲ ರೀತಿಯಲ್ಲೂ ಅರ್ಹವಾಗಿದೆ; ರಾಜ್ಯಪಾಲರ ಮಧ್ಯಪ್ರವೇಶಕ್ಕೆ ಸಂಸದ ಬಿ.ವೈ.ರಾಘವೇಂದ್ರ ಒತ್ತಾಯ
ಶಿವಮೊಗ್ಗ ಸೇರಿದಂತೆ ಮಧ್ಯ ಕರ್ನಾಟಕದ ಜನರಿಗೆ ಸುಲಭ ನ್ಯಾಯ ಪ್ರಾಪ್ತಿಗೆ ಹೈಕೋರ್ಟ್ ಸರ್ಕ್ಯೂಟ್ ಪೀಠ ಅಗತ್ಯ; ಶಿವಮೊಗ್ಗದಲ್ಲಿ ಸರ್ಕ್ಯೂಟ್ ಪೀಠ ಸ್ಥಾಪನೆಯಾಗುವವರೆಗೆ ಶಿವಮೊಗ್ಗವನ್ನು ಬೆಂಗಳೂರಿನ ಪ್ರಧಾನ ಪೀಠದಡಿಯಲ್ಲಿ ಉಳಿಸಿಕೊಳ್ಳುವಂತೆ ಸಂಸದ ರಾಘವೇಂದ್ರ ಆಗ್ರಹ
ಶಿವಮೊಗ್ಗ, 23 ಜೂನ್ 2026: ಶಿವಮೊಗ್ಗದಲ್ಲಿ ಹೈಕೋರ್ಟ್ ಸರ್ಕ್ಯೂಟ್ ಪೀಠ ಸ್ಥಾಪನೆಗೆ ನಡೆಯುತ್ತಿರುವ ಹೋರಾಟಕ್ಕೆ ಮತ್ತಷ್ಟು ಶಕ್ತಿ ತುಂಬುವ ನಿಟ್ಟಿನಲ್ಲಿ, ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ವಿಶೇಷವಾಗಿ ಮಲೆನಾಡು ಮತ್ತು ಮಧ್ಯ ಕರ್ನಾಟಕದ ಜನರ ಪ್ರಯೋಜನಕ್ಕಾಗಿ ಶಿವಮೊಗ್ಗದಲ್ಲಿ ಹೈಕೋರ್ಟ್ ಸರ್ಕ್ಯೂಟ್ ಪೀಠ ಸ್ಥಾಪನೆ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಾರ್ಯಪ್ರವೃತ್ತವಾಗುವಂತೆ ತುರ್ತು ಸಲಹೆ ನೀಡುವಂತೆ ಕೋರಿ ಕರ್ನಾಟಕದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಔಪಚಾರಿಕ ಮನವಿ ಸಲ್ಲಿಸಿದ್ದಾರೆ.
ಸಂಸದ ರಾಘವೇಂದ್ರ ಅವರು ಇಂದು ಲೋಕ ಭವನದಲ್ಲಿ ಕರ್ನಾಟಕದ ರಾಜ್ಯಪಾಲರಾದ ಶ್ರೀ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ, ಶಿವಮೊಗ್ಗದಲ್ಲಿ ಹೈಕೋರ್ಟ್ ಸರ್ಕ್ಯೂಟ್ ಪೀಠ ಸ್ಥಾಪನೆಗೆ ಕೋರಿ ವಿವರವಾದ ಪ್ರಾತಿನಿಧ್ಯವನ್ನು ಸಲ್ಲಿಸಿದರು. ಭೇಟಿಯ ಸಂದರ್ಭದಲ್ಲಿ ಸಂಸದರು, ಶಿವಮೊಗ್ಗದ ಭೌಗೋಲಿಕ ಅನುಕೂಲ ಮತ್ತು ಮಧ್ಯ ಕರ್ನಾಟಕದ ಪ್ರಮುಖ ಆಡಳಿತ, ಶೈಕ್ಷಣಿಕ, ವಾಣಿಜ್ಯ ಮತ್ತು ಸಾರಿಗೆ ಕೇಂದ್ರವಾಗಿ ಜಿಲ್ಲೆ ಹೊರಹೊಮ್ಮಿರುವುದರ ಕಡೆಗೆ ರಾಜ್ಯಪಾಲರ ಗಮನ ಸೆಳೆದಿದ್ದಾರೆ. ಶಿವಮೊಗ್ಗದಲ್ಲಿ ಸರ್ಕ್ಯೂಟ್ ಪೀಠ ಸ್ಥಾಪನೆಯಿಂದ ಶಿವಮೊಗ್ಗ ಜಿಲ್ಲೆಯ ಜನರಿಗೆ ಮಾತ್ರವಲ್ಲದೆ ಚಿಕ್ಕಮಗಳೂರು, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳು ಸೇರಿದಂತೆ ಮಲೆನಾಡು ಮತ್ತು ಮಧ್ಯ ಕರ್ನಾಟಕ ಪ್ರದೇಶದ ಜನರಿಗೆ ಹಾಗೂ ನ್ಯಾಯಿಕ ವಲಯಕ್ಕೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅವರು ಒತ್ತಿ ತಿಳಿಸಿದ್ದಾರೆ, ಇದರಿಂದಾಗಿ ನ್ಯಾಯ ಪ್ರಾಪ್ತಿಯ ಜನರ ಹಕ್ಕು ಹೆಚ್ಚು ಸುಲಭವಾಗಿ, ಅನುಕೂಲಕರವಾಗಿ ಮತ್ತು ಪರಿಣಾಮಕಾರಿಯಾಗಿ ಸಾಧ್ಯವಾಗಲಿದೆ ಎಂದಿದ್ದಾರೆ. ಭೇಟಿಯ ಸಂದರ್ಭದಲ್ಲಿ ಬೆಂಗಳೂರಿನ ವಕೀಲರ ಸಂಘದ ಅಧ್ಯಕ್ಷರಾದ ವಿವೇಕ್ ಸುಬ್ಬಾರೆಡ್ಡಿ ಅವರು ಉಪಸ್ಥಿತರಿದ್ದರು ಮತ್ತು ಸಂಸದರ ಬೇಡಿಕೆಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು.
B.Y. Raghavendra ಶಿವಮೊಗ್ಗದಲ್ಲಿ ಹೈಕೋರ್ಟ್ ಸರ್ಕ್ಯೂಟ್ ಪೀಠ ಸ್ಥಾಪನೆಗೆ ನಡೆಯುತ್ತಿರುವ ಮಲೆನಾಡು ಮತ್ತು ಮಧ್ಯ ಕರ್ನಾಟಕದ ಜನರ ಹಕ್ಕೊತ್ತಾಯ, ಹೋರಾಟಗಳ ನಡುವೆ, ಸಂಸದ ರಾಘವೇಂದ್ರ ಅವರ ಈ ಭೇಟಿಯು ಪ್ರಾಮುಖ್ಯತೆ ಪಡೆದಿದೆ. ಜೊತೆಗೆ ಶಿವಮೊಗ್ಗದಲ್ಲಿ ಹೈಕೋರ್ಟ್ ಸರ್ಕ್ಯೂಟ್ ಪೀಠವನ್ನು ಸ್ಥಾಪಿಸಬೇಕೆಂದು ನಿರಂತರವಾಗಿ ಪ್ರತಿಪಾದಿಸುತ್ತಿರುವ ಕಾನೂನು ವಲಯ, ವಕೀಲರ ಸಂಘಗಳು ಮತ್ತು ವಿವಿಧ ನಾಗರಿಕ ಸಮಾಜ ಸಂಸ್ಥೆಗಳ ಸದಸ್ಯರ ಬೇಡಿಕೆಗೆ ಹೆಚ್ಚಿನ ಬಲ ಸಿಕ್ಕಂತಾಗಿದೆ.
ಸರ್ಕ್ಯೂಟ್ ಪೀಠ ಸ್ಥಾಪನೆಯಾಗುವವರೆಗೆ ಬೆಂಗಳೂರು ನ್ಯಾಯವ್ಯಾಪ್ತಿಯಡಿಯಲ್ಲಿಯೇ ಶಿವಮೊಗ್ಗ ಇರಲಿ: ಇದೇ ಸಂದರ್ಭದಲ್ಲಿ, ಶಿವಮೊಗ್ಗದಲ್ಲಿ ಪ್ರತ್ಯೇಕ ಸರ್ಕ್ಯೂಟ್ ಪೀಠವನ್ನು ಸ್ಥಾಪಿಸುವವರೆಗೆ ಶಿವಮೊಗ್ಗ ಜಿಲ್ಲೆ ಬೆಂಗಳೂರಿನ ಹೈಕೋರ್ಟ್‌ನ ಪ್ರಧಾನ ಪೀಠದ ವ್ಯಾಪ್ತಿಯಲ್ಲಿ ಮುಂದುವರಿಯಬೇಕೆಂದು ಸಂಸದರು ಹೇಳಿದ್ದಾರೆ. ವಕೀಲರು, ದಾವೆ ಹೂಡುವವರು ಮತ್ತು ಸಾರ್ವಜನಿಕರು ವ್ಯಕ್ತಪಡಿಸಿರುವ ಕಳವಳಗಳಿಗೆ ಧ್ವನಿಯಾಗಿ, ಬೆಂಗಳೂರು ಶಿವಮೊಗ್ಗದ ಜನರಿಗೆ ಅತ್ಯಂತ ಸುಲಭವಾಗಿ ತಲುಪಬಹುದಾದ ಕೇಂದ್ರವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಶಿವಮೊಗ್ಗವನ್ನು ಮಂಗಳೂರಿನಲ್ಲಿ ಪ್ರಸ್ತಾವಿತ ನ್ಯಾಯಪೀಠದ ವ್ಯಾಪ್ತಿಗೆ ತರುವುದರ ವಿರುದ್ಧ ಶಿವಮೊಗ್ಗದ ವಲಯದಿಂದ ವ್ಯಕ್ತವಾಗುತ್ತಿರುವ ಭಾವನೆಗಳನ್ನು ಮತ್ತು ಅದಕ್ಕೆ ಕಾರಣಗಳನ್ನು ಸಂಸದರು ರಾಜ್ಯಪಾಲರಿಗೆ ತಿಳಿಸಿಕೊಟ್ಟಿದ್ದಾರೆ. ಪ್ರಸ್ತಾಪಿತ ಮಂಗಳೂರು ಪೀಠದೊಂದಿಗೆ ಶಿವಮೊಗ್ಗವನ್ನು ಜೋಡಿಸುವುದರಿಂದ ಮಲೆನಾಡು ಮತ್ತು ಮಧ್ಯ ಕರ್ನಾಟಕದ ದಾವೆದಾರರ ಹಿತಾಸಕ್ತಿ ಮತ್ತು ಅನುಕೂಲವನ್ನು ಸಮರ್ಪಕವಾಗಿ ಪೂರೈಸುವುದು ಸಾಧ್ಯವಿಲ್ಲ ಎಂದು ರಾಘವೇಂದ್ರ ಹೇಳಿದ್ದಾರೆ.
“ಶಿವಮೊಗ್ಗದಲ್ಲಿ ಹೈಕೋರ್ಟ್ ಸರ್ಕ್ಯೂಟ್ ಪೀಠದ ಸ್ಥಾಪನೆಯು ಆ ಭಾಗದ ಜನರ ನ್ಯಾಯಪ್ರಾಪ್ತಿಯ ಹಕ್ಕಿಗೆ ಗಮನಾರ್ಹ ಬಲ ನೀಡುತ್ತದೆ, ದಾವೆದಾರರ ವೆಚ್ಚದ ಹೊರೆಯನ್ನು ಕಡಿಮೆ ಮಾಡುತ್ತದೆ ಮತ್ತು ಮಲೆನಾಡು ಮತ್ತು ಮಧ್ಯ ಕರ್ನಾಟಕದ ಜನರ ದೀರ್ಘಕಾಲದ ಆಕಾಂಕ್ಷೆಯನ್ನು ಈಡೇರಿಸುತ್ತದೆ” ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.
Drinking Water Supplier Shivamogga ಗಮನಿಸಿ.! ಶಿವಮೊಗ್ಗ ನಗರಕ್ಕೆ ಜೂನ್ 23 & 24 ರಂದು ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ.
Drinking Water Supplier Shivamogga ಗಾಜನೂರು ಮೂಲ ಸ್ಥಾವರಕ್ಕೆ ಮೆಸ್ಕಾಂ ಇಲಾಖೆಯ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿರುವ ಕಾರಣದಿಂದಾಗಿ ಜೂನ್ 23 ರಂದು ಮೆಸ್ಕಾಂ ವತಿಯಿಂದ ವಿದ್ಯುತ್ ನಿಲುಗಡೆ ಮಾಡಲಾಗುತ್ತಿದ್ದು, ಶಿವಮೊಗ್ಗ ನಗರದಲ್ಲಿ ಜೂನ್ 23 ಮತ್ತು 24 ರಂದು ದೈನಂದಿನ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಸಾರ್ವಜನಿಕರು ಈ ಪರಿಸ್ಥಿತಿಯನ್ನು ಅರಿತು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯೊAದಿಗೆ ಸಹಕರಿಸಬೇಕಾಗಿ ಶಿವಮೊಗ್ಗದ ಕನನೀಸ ಮತ್ತು ಒಳ ಮಂಡಳಿ ನಿರ್ವಹಣೆ ಮತ್ತು ಪಾಲನೆ ಉಪ-ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.
Keelambi ತೋಟ ಹೊಲಗದ್ದೆಗಳ ಕೆಲಸಕ್ಕೆ ” RANCHER SUV 5.1 ” ಯಂತ್ರ ಲೋಕಾರ್ಪಣೆ : ಕೀಳಂಬಿ ಅಗ್ರಿಟೆಕ್ ಸಾಧನೆ
Keelambi ಕೃಷಿಕರು ಈಗ ಆಧುನಿಕವಾಗಿ ಯೋಚಿಸುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಕೃಷಿಗೆ ಫೂರಕ ಯಂತ್ರೋಪಕರಣಗಳ ಅವಶ್ಯಕತೆಯಿದೆ. ಶಿವಮೊಗ್ಗದ
ಪ್ರತಿಷ್ಠಿತ ಕಂಪನಿ ಕೀಳಂಬಿ ಅಗ್ರಿಟೆಕ್ ಇಂಥದೊಂದು ಯಂತ್ರವನ್ನ
ಆವಿಷ್ಕರಿಸಿದೆ.
ಜಮೀನು,ಗದ್ದೆ ತೋಟಗಳಲ್ಲಿ ಮಣ್ಣು,ಗೊಬ್ಬರ, ಬೀಜ, ಕೃಷಿಯ ಸಣ್ಣಪುಟ್ಟ ಪರಿಕರಗಳ ಒಳಾಂಗಣ ಸಾಗಾಣೆ ಈಗ ಅಗತ್ಯವಾಗಿದೆ. ಈ ಶ್ರಮದಾಯಕ ಕೆಲಸಗಳನ್ನ ನಿರ್ವಹಿಸಲು ಕೀಳಂಬಿ ಅಗ್ರಿ ಟೆಕ್
ಒಂದು”ರೋಬೋ ಯಂತ್ರ”ವನ್ನ
ಮಾರುಕಟ್ಟೆಗೆ ಪರಿಚಯಿಸಿದೆ.
ವಿಶೇಷವೆಂದರೆ ಪೆಟ್ರೋಲ್ ಡಿಸೆಲ್ ತುಂಬಿಸಲು ಬಂಕ್ ಗಳಿಗೆ ಅಲೆದಾಡಬೇಕಿಲ್ಲ.. ಕೇವಲ ವಿದ್ಯುತ್ ನಿಂದ ಚಾರ್ಜ್ ಮಾಡುವ ಯಂತ್ರ.
ತಾ. 22 -6-26 ರ ಸೋಮವಾರ ಶಿವಮೊಗ್ಗ ಜಿಲ್ಲೆಯ ಸೂಗೂರಿನಲ್ಲಿ
ಯಂತ್ರದ ಅನಾವರಣ ಮತ್ತು ಪ್ರಾತ್ಯಕ್ಷಿಕೆಯ ನೇರ ಪ್ರಸಾರ
ನಡೆಯಿತು.
Keelambi ರೋಬೋಯಂತ್ರದ ಬಗ್ಗೆ ಕೀಳಂಬಿ ಅಗ್ರಿ ಟೆಕ್ ನ ವ್ಯವಸ್ಥಾಪಕನಿರ್ದೇಶಕ ರಾಜೇಶ್ ಕೀಳಂಬಿ ಅವರು ಮಾತನಾಡಿದರು.
“ಕೃಷಿಕರ ಅಗತ್ಯ ಮತ್ತು
ಮಾರುಕಟ್ಟೆಯ ಬೇಡಿಕೆ ಆಧರಿಸಿ
ಈ ಯಂತ್ರವನ್ನು
ಅಭಿವೃದ್ಧಿ ಪಡಿಸಲಾಗಿದೆ. ಕೃಷಿಕ್ಷೇತ್ರದ
ಕಾರ್ಯವನ್ನು ಮತ್ತಷ್ಟು ಸುಲಭ ಹಾಗೂ ಪರಿಣಾಮಕಾರಿಯಾಗಿಸುವ
ಸಲುವಾಗಿ ರೈತಸ್ನೇಹಿ ಉತ್ಪನ್ನವನ್ನ ಅಭಿವೃದ್ಧಿಪಡಿಸಿದ್ದೇವೆ ‘ ಎಂದು ಹೇಳಿದರು.
ನಂತರ ಪ್ರಾತ್ಯಕ್ಷಿಕೆ-ಪ್ರದರ್ಶನ ನಡೆಸಲಾಯಿತು. ಈ ಯಂತ್ರದ ಬಹು-ವಿಶೇಷತೆಗಳಾದ ಭಾರಹೊರುವ ಸಾಮರ್ಥ್ಯ, ಬೆಳೆಗಳಿಗೆ ಔಷಧ ಸಿಂಪರಣೆ ಮತ್ತು ಕಳೆ ಕತ್ತರಿಸುವ ಯಂತ್ರಗಳನ್ನ ಜೋಡಿಸುವ ವಿಧಾನಗಳ ಬಗ್ಗೆ ಮಾಹಿತಿ ನೀಡಲಾಯಿತು.
ಸೂಗೂರು ಮತ್ತು ಸುತ್ತಮುತ್ತಲ ರೈತಬಾಂಧವರು ಈ ಯಂತ್ರದ ಕಾರ್ಯಕ್ಷಮತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಉತ್ಪನ್ನದ ಬೆಲೆ ಮತ್ತು ಇತರೆ ಮಾಹಿತಿಗಳನ್ನ ರೈತರಿಗೆ ತಿಳಿಸಲಾಯಿತು. ಅಷ್ಟೇ ಅಲ್ಲದೆ ಖರೀದಿಸುವವರಿಗೆ ವಿಶೇಷ ಆಫರ್ ಗಳನ್ನ ಘೋಷಿಸಲಾಯಿತು.
ಸೂಗೂರಿನಲ್ಲಿ ಇಂಥದೊಂದು ಕೃಷಿಗೆ ನೆರವಾಗುವ ಯಂತ್ರ ಮಾರುಕಟ್ಟೆಗೆ ಬಂದ ಬಗ್ಗೆ ರೈತವರ್ಗ ಅತ್ಯಂತ ಹರ್ಷ ವ್ಯಕ್ತಪಡಿಸಿತು..
Shivamogga News ಸಂಘವನ್ನು ಮುನ್ನಡೆಸುತ್ತಿರುವುದು ಸಮಾಜವೆ.ಸಮಾಜವವನ್ನೇ ಸಂಘಟಿಸುವುದು ಸಂಘದ ಕೆಲಸ- ರಾಜೇಶ್ ಪದ್ಮಾರ್.
Shivamogga News ನಿಸ್ವಾರ್ಥ ಕೆಲಸಕ್ಕೆ ದೀರ್ಘಕಾಲ ಸಮರ್ಪಿಸಿಕೊಳ್ಳುವ ಮನೋಭಾವವುಳ್ಳ ವ್ಯಕ್ತಿಯೇ ಸ್ವಯಂಸೇವಕ. ಸ್ವಯಂಸೇವಕ ನಿರ್ಮಾಣಗೊಳ್ಳಲು ಇರುವ ಕಾರ್ಯಪದ್ಧತಿಯೇ ನಿತ್ಯಶಾಖೆ. ಪ್ರಸ್ತುತ ಸಂಘ ಸರ್ವಸ್ಪರ್ಶಿ, ಸರ್ವವ್ಯಾಪಿಯಾಗಿದೆ. ೧೯೪೦ರಲ್ಲಿ ದೇಶದ ಪ್ರಾಂತಗಳನ್ನು ತಲುಪಿತು. ೧೯೮೦ರ ದಶಕದಲ್ಲಿ ದೇಶದ ಎಲ್ಲಾ ಜಿಲ್ಲೆಗಳಿಗೆ ತಲುಪಿತು. ೧೯೯೬ರ ವೇಳಗೆ ಸಂಘ ಎಲ್ಲಾ ತಾಲೂಕು ತಲುಪಿ ೨೦೨೬ರಲ್ಲಿ ವಾರ್ಡ್ಗಳಿಗೆ ತಲುಪಿದೆ ಎಂದು ರಾಷ್ಟಿçÃಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖ್ ರಾಜೇಶ್ ಪದ್ಮಾರ್ ಹೇಳಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ರಾಷ್ಟಿçÃಯ ಸ್ವಯಂಸೇವಕ ಸಂಘದ ಶತಾಬ್ದಿ ವರ್ಷ ನಿಮಿತ್ತ ಆಯೋಜಿಸಿದ್ದ ಪ್ರಮುಖ ನಾಗರಿಕರ ಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿ, ಸಂಘವನ್ನು ಮುನ್ನಡೆಸುತ್ತಿರುವುದು ಸಮಾಜವೇ. ಸಂಘ ಸಮಾಜದಲ್ಲಿ ಒಂದು ಸಂಘಟನೆಯಲ್ಲ, ಸಮಾಜವನ್ನೇ ಸಂಘಟಿಸುವುದು ಸಂಘದ ಉz್ದೆÃಶ. ಹಾಗಾಗಿ ಸಂಘ ಸಮಾಜದ ಸಂಘಟನೆಯಾಗಿದೆ. ಮಾತೃಭೂಮಿ, ಹಿಂದುತ್ವ, ಹಿಂದೂ ರಾಷ್ಟçವೆಂಬ ಮೂಲ ವಿಚಾರ ಇಟ್ಟುಕೊಂಡು ರಾಷ್ಟç ಭಾವ ನಿರ್ಮಾಣವನ್ನು ಸಂಘ ಮಾಡುತ್ತಿದೆ ಎಂದರು.
ವ್ಯಕ್ತಿಯಲ್ಲಿ ಪ್ರಕಟಗೊಳ್ಳುವ ಲಕ್ಷಣವನ್ನು ವ್ಯಕ್ತಿತ್ವ, ನಾಯಕನ ಲಕ್ಷಣವನ್ನು ನಾಯಕತ್ವ, ನೇತಾರನ ಲಕ್ಷಣವನ್ನು ನೇತೃತ್ವ, ಮನುಷ್ಯನ ಸ್ವಭಾವವನ್ನು ಮನುಷ್ಯತ್ವ ಎನ್ನುತ್ತೇವೆ ಅಂತೆಯೇ ಹಿಂದುವಿನ ಜೀವನದಲ್ಲಿ ಅಭಿವ್ಯಕ್ತಗೊಳ್ಳುವ ಗುಣಲಕ್ಷಣಗಳ ಪ್ರಕಟೀಕರಣವೇ ಹಿಂದುತ್ವ. ವಿವೇಕಾನಂದರು ಬಳಸಿದ ಹಿಂದು ಶಬ್ದ ರಾಷ್ಟಿçÃಯ ಪದವಾಚಕ. ಹಾಗಾಗಿ ನಮ್ಮ ರಾಷ್ಟಿçÃಯತೆ ಹಿಂದುತ್ವ. ಭಾರತದಲ್ಲಿರುವ ಪ್ರತಿಯೊಬ್ಬರೂ ಹಿಂದುಗಳೇ ಎಂದರು.
ಸಮಾನ ಆಚಾರ, ಸಮಾನ ವಿಚಾರ, ಸಮಾನ ಸಂಸ್ಕೃತಿಯ ರಾಷ್ಟç ಜೀವನ ನಡೆಸುತ್ತಿz್ದÉÃವೆ. ಇಡೀ ದೇಶದಲ್ಲಿ ಸಾಂಸ್ಕೃತಿಕ ಏಕತೆಯಿದೆ. ಇವೆಲ್ಲವನ್ನು ಒಳಗೊಂಡ ರಾಷ್ಟಿçÃಯತೆಯೇ ಹಿಂದುತ್ವ. ಅದು ಪ್ರತಿಯೊಬ್ಬನಲ್ಲೂ ಪ್ರಕಟೀಕರಣಗೊಳ್ಳಬೇಕು. ಅದನ್ನೇ ಸಂಘ ಮಾಡುತ್ತಿದೆ ಎಂದÀÄ ಹೇಳಿದರು.
ಅನ್ಯದೇಶಗಳಿಗೆ ತುಲನೆ ಮಾಡಿದಾಗ ಭಾರತಕ್ಕೆ ಪಾರಂಪರಿಕ ಇತಿಹಾಸದ ಅವಲೋಕನ ಇದೆ. ಕಾಲಕಾಲಕ್ಕೆ ನಡೆದ ಆಕ್ರಮಣಗಳನ್ನು ಯಶಸ್ವಿಯಾಗಿ ಪ್ರತಿರೋಧಿಸಿದ ಪರಂಪರೆ ನಮ್ಮದು. ಬಹಳ ದೀರ್ಘಕಾಲ ಆಕ್ರಮಣಗಳನ್ನು ಎದುರಿಸಿದ ನಾಗರಿಕತೆ ನಮ್ಮದು. ಸುಮಾರು ೨೦೦೦ ವರ್ಷಗಳ ಸತತ ಆಕ್ರಮಣ ದೇಶದ ಮೇಲೆ ಆಗಿದೆ. ಅದನ್ನು ಅತ್ಯಂತ ಸಮರ್ಥವಾಗಿ ತಡೆದಿz್ದÉÃವೆ ಎಂದರು.
೧೮೯೩ರ ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣದ ನಂತರ ರಾಷ್ಟಿçÃಯ ಚಿಂತನೆಯ ಹೊಸ ಅಲೆ ದೇಶದಲ್ಲಿ ಮೊಳಗುತ್ತಾ ಬಂದಿತು. ಲೋಕಮಾನ್ಯ ತಿಲಕರ ನಿಧನದ ನಂತರ ಸ್ವಾತಂತ್ರ‍್ಯ ಹೋರಾಟಕ್ಕೆ ಹೊಸ ದಿಕ್ಕಿನಲ್ಲಿ ಬರುವ ಕುರುಹು ಕಂಡಿತು. ಸ್ವಾತಂತ್ರ‍್ಯ ಪ್ರಾಪ್ತಿಯ ಮುಂಚಿನ ಮತ್ತು ನಂತರದ ದಿನಗಳ ಬಗ್ಗೆ ಚಿಂತಿಸಿದವರಲ್ಲಿ ಕೇಶವ ಬಲಿರಾಮ ಹೆಡಗೇವಾರ್ ಓರ್ವರು. ೧೯೨೧ರಲ್ಲಿ ಕ್ರಾಂತಿಕಾರರಾಗಿ ಸ್ವಾತಂತ್ರ‍್ಯ ಹೋರಾಟದ ಕಾರ್ಯಕ್ರಮಗಳನ್ನು ಸಂಘಟಿಸಿದರು. ಅಸಹಕಾರ ಚಳವಳಿಯ ಸಂದರ್ಭದಲ್ಲಿ ಬಂಧನಕ್ಕೊಳಗಾದರು. ಸಶಕ್ತ, ಸರ್ವಾಂಗೀಣ ವಿಕಾಸ ಹಾಗೂ ಸುಭದ್ರ, ಸಂಘಟಿತ ಭಾರತದ ಕನಸು ಕಂಡರು ಎಂದರು.
ಬ್ರಿಟೀಷರನ್ನು ಭಾರತದಿಂದ ಓಡಿಸುವುದರ ಜೊತೆಗೆ ಸ್ವಾತಂತ್ರ‍್ಯ ನಂತರದ ಭಾರತವನ್ನು ಕಟ್ಟುವ ಜನಸಾಮಾನ್ಯರ ಆಂದೋಲನದ ಚಿಂತನೆ ಡಾಕ್ಟರ್ ಜೀ ಅವರಲ್ಲಿ ತಳೆದು ೧೯೨೫ರ ವಿಜಯದಶಮಿಯಂದು ಪ್ರಾರಂಭವಾಯಿತು. ಆರ್‌ಎಸ್‌ಎಸ್. ಪ್ರಸ್ತುತ ೧೦೦ ವರ್ಷ ಕ್ರಮಿಸಿ ಬಂದಿz್ದÉÃವೆ. ವ್ಯಂಗ್ಯ, ತತ್ಸಾರ, ವಿರೋಧ ಹಂತಗಳನ್ನು ಸಂಘ ಎದುರಿಸಿ ಸಮಾಜ ಸ್ವೀಕೃತಿಯ ಹಂತದಲ್ಲಿz್ದÉÃವೆ ಎಂದರು.
Shivamogga News ಮಹಿಳೆಯರು ರಾಷ್ಟçದ ವಿಕಾಸದ ಪ್ರಕ್ರಿಯೆಯಲ್ಲಿ ಹೆಗಲು ಜೋಡಿಸುವ ಉz್ದÉÃಶದಿಂದ ೧೯೩೬ರಲ್ಲಿ ರಾಷ್ಟಿçÃಯ ಸೇವಿಕಾ ಸಮಿತಿ, ವಿದ್ಯಾರ್ಥಿಗಳಲ್ಲಿ ರಾಷ್ಟಿçÃಯ ದೃಷ್ಟಿಕೋನ ಹಾಗೂ ಸಾಮಾಜಿಕ ಹೊಣೆಗಾರಿಕೆ ಬೆಳೆಸಲು ೧೯೪೯ರಲ್ಲಿ ಅಖಿಲ ಭಾರತೀಯ ಪರಿಷತ್, ಬುಡಕಟ್ಟು ಕಲ್ಯಾಣದ ಚಿಂತನೆಯಿAದ ೧೯೫೨ರಲ್ಲಿ ವನವಾಸಿ ಕಲ್ಯಾಣ, ಶ್ರಮಿಕರ ಒಗ್ಗೂಡಿಸಲು ೧೯೫೫ರಲ್ಲಿ ಭಾರತೀಯ ಮಜ್ದೂರ್ ಸಂಘ, ಕೃಷಿಕರಿಗೆ ಭಾರತೀಯ ಕಿಸಾನ್ ಸಂಘ, ಧಾರ್ಮಿಕ ಕ್ಷೇತ್ರದ ಏಕತೆಗಾಗಿ ೧೯೬೪ರಲ್ಲಿ ವಿಶ್ವ ಹಿಂದೂ ಪರಿಷತ್, ಕಲಾವಿದರ ಸಂಘಟನೆಗೆ ಸಂಸ್ಕಾರ ಭಾರತಿ, ಹಾಗೆಯೇ ಸಂಸ್ಕೃತ ಭಾರತಿ, ವಿಜ್ಞಾನ ಭಾರತಿ, ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನಂತಹ ವಿವಿಧ ಕ್ಷೇತ್ರಗಳ ಸಂಘಟನೆಗಳು ರಚನೆಗೊಂಡಿವೆ. ಸುಮಾರು ೫೦ ಸಂಘಟನೆ ಮೂಲಕ ಸಮಾಜ ಜಾಗರಣ ಕಾರ್ಯ ನಡೆಯುತ್ತಿದೆ ಎಂದÀÄ ಹೇಳಿದರು.
ಪ್ರಾಸ್ತಾವಿಕ ಮಾತನಾಡಿದ ಆರ್‌ಎಸ್‌ಎಸ್ ಶಿವಮೊಗ್ಗ ಜಿಲ್ಲಾ ಕಾರ್ಯವಾಹ ಚೇತನ, ಸಂಪೂರ್ಣ ಹಿಂದೂ ಸಮಾಜವನ್ನು ಸಂಘಟಿಸುವ ಉz್ದÉÃಶದಿಂದ ಸಂಘ ಪ್ರಾರಂಭವಾಗಿದೆ. ಶುದ್ಧ, ಸಾತ್ವಿಕ, ಪ್ರೇಮದಿಂದ ಸಮಾಜ ಸಂಘಟಿಸುವ ಕೆಲಸವನ್ನು ೧೦೦ ವರ್ಷದಿಂದ ಸಂಘ ಮಾಡುತ್ತಿದೆ. ಧರ್ಮ ಸಂರಕ್ಷಣೆಯ ಮೂಲಕ ಸಂಘಟಿತ ಕಾರ್ಯಶಕ್ತಿಯ ಮೂಲಕ ಈ ರಾಷ್ಟçವನ್ನು ಪರಮವೈಭವ ಸ್ಥಿತಿಗೆ ಕೊಂಡೊಯ್ಯಲು ಆರ್‌ಎಸ್‌ಎಸ್ ಕೆಲಸ ಮಾಡುತ್ತಿದೆ ಎಂದÀÄ ಹೇಳಿದರು.
ಈ ಸಂದರ್ಭದಲ್ಲಿ ಆರ್‌ಎಸ್‌ಎಸ್‌ನ ಶಿವಮೊಗ್ಗ ಜಿಲ್ಲಾ ಸಂಘಚಾಲಕ ಬಿ.ಎ.ರಂಗನಾಥ್, ದಕ್ಷಿಣ ಮಧ್ಯ ಕ್ಷೇತ್ರೀಯ ಸಹ ಬೌದ್ಧಿಕ್ ಪ್ರಮುಖ್ ಗೋವಿಂದ್ ಜೀ, ಪ್ರಾಂತ ಸಹ ಕಾರ್ಯವಾಹ ಪಟ್ಟಾಭಿರಾಮ್, ವಿಭಾಗ ಕಾರ್ಯವಾಹ ಗಿರೀಶ್ ಕಾರಂತ್, ವಿಭಾಗ ಸಹಕಾರ್ಯವಾಹ ಮಧುಕರ್, ವಿಭಾಗ ಪ್ರಚಾರಕ ಭರತ್‌ರಾಜ್, ವಿಭಾಗ ಪ್ರಚಾರ ಪ್ರಮುಖ್ ದುರ್ಗಾಪ್ರಸಾದ್ ಇನ್ನಿತರರಿದ್ದರು.
ಉತ್ತರಕ್ಕಾಗಿ ನಿತ್ಯಶಾಖೆಗೆ ಬನ್ನಿ…
ಸಂಘ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸುತ್ತದೆ. ಸಂಘದಲ್ಲಿ ಪ್ರಶ್ನೋತ್ತರ ಎಂಬುದು ಅವಿಭಾಜ್ಯ ಅಂಗ. ಸಂಘದ ನಿತ್ಯಶಾಖೆಗೆ ಬಂದರೆ ಉತ್ತರ ಕಂಡಿತ ದೊರಕುತ್ತದೆ. ಮಾಧ್ಯಮದ ಬಳಿ ಉತ್ತರ ಸಿಗಲ್ಲ. ಬ್ರಿಟೀಷರ ವಿರುದ್ಧ ಹೋರಾಡಿದ ತಂಡ ಸಂಘವನ್ನು ಪ್ರಾರಂಭಿಸಿದ್ದು. ಭಾರತದ ಸಂಪೂರ್ಣ ಸ್ವಾತಂತ್ರ‍್ಯ ಸಂಘದ ಧ್ಯೇಯೋz್ದÉÃಶಗಳಲ್ಲಿ ಒಂದಾಗಿತ್ತು, ಅದು ಸಂಘದ ಪ್ರಾರ್ಥನೆಯಲ್ಲಿತ್ತು. ಸ್ವಾತಂತ್ರ‍್ಯ ನಂತರ ರಾಷ್ಟçದ ಸರ್ವಾಂಗೀಣ ಉನ್ನತಿ ಸೇರಿದೆ. ದೇಶದಲ್ಲಿ ಪೂರ್ಣ ಸ್ವರಾಜ್ಯದ ಘೋಷಣೆಯದಾಗ ಸಂಘದ ಶಾಖೆಗಳಲ್ಲಿ ಆಚರಿಸಲಾಯಿತು.
ಸಂಘ ಸಂವಿಧಾನದತ್ತ, ಪಾರದರ್ಶಕ …
ಬ್ರಿಟೀಷರ ಕಾಲದಲ್ಲಿ ನೊಂದಣಿ ಚರ್ಚೆ ಇರಲಿಲ್ಲ, ೧೯೪೭ರಲ್ಲಿ ಸ್ವಾತಂತ್ರ‍್ಯ ಬಂದು ೧೯೫೦ರಲ್ಲಿ ಗಣರಾಜ್ಯ ದೇಶವಾಗಿ ರೂಪುಗೊಂಡು ನಮ್ಮದೇ ಸಂವಿಧಾನ ಅಸ್ತಿತ್ವಕ್ಕೆ ಬಂದಿತು. ಸಂವಿಧಾನದ ವಿಧಿ ೧೯ ಸ್ವಾತಂತ್ರ‍್ಯದ ಬಗ್ಗೆ ತಿಳಿಸುತ್ತದೆ. ಅದರ ಪರಿಚ್ಛೇದ ೧೯(೧)(ಎ) ಅಭಿವ್ಯಕ್ತಿ ಸ್ವಾತಂತ್ರ‍್ಯ, (ಬಿ) ಒಟ್ಟು ಸೇರುವುದು, (ಸಿ) ಒಕ್ಕೂಟ ರಚನೆಯ ಬಗ್ಗೆ ತಿಳಿಸುತ್ತದೆ. ೧೯(೧) (ಸಿ) ಒಕ್ಕೂಟ ರಚಿಸಬಹುದು ಎಂದು ತಿಳಿಸಿದೆ ಅದಕ್ಕೆ ನೊಂದಣಿ ಕಡ್ಡಾಯವೆಂದಿಲ್ಲ. ಹಾಗಾಗಿ ಅದರ ಆಧಾರದಲ್ಲಿ ಸಂಘ ನಡೆದುಕೊಂಡು ಬಂದಿದೆ. ಸಂವಿಧಾನದತ್ತ, ಪಾರದರ್ಶಕವಾಗಿ ಸಂಘವಿದೆ.
Yoga Day ಯೋಗ ಒಂದು ದಿನಕ್ಕೆ ಸೀಮಿತವಾಗಬಾರದು.ದೈನಂದಿನ ಬದುಕಿನ ಅವಿಭಾಜ್ಯ ಅಂಗವಾಗಬೇಕು- ಬಿ.ಹೆಚ್.ನಿರಂಜನಮೂರ್ತಿ.
Yoga Day ಯೋಗ ಒಂದು ದಿನಕ್ಕೆ ಸೀಮಿತವಾಗಬಾರದು ದೈನಂದಿನ ಬದುಕಿನ ಅವಿಭಾಜ್ಯ ಕಾರ್ಯವಾಗಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ ನಿವೃತ್ತ ದೈಹಿಕ ಶಿಕ್ಷಣ ಅಧಿಕಾರಿಗಳಾದ ಬಿ. ಹೆಚ್. ನಿರಂಜನ್ ಮೂರ್ತಿ ಅಭಿಪ್ರಾಯ ಪಟ್ಟರು.
ಅವರು ನಿನ್ನೆ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ (ರಿ) ಶಿವಮೊಗ್ಗ ಶಾಖೆಯ ಗುರುಪುರದ ಬಿಜಿಎಸ್ ಶಾಲಾ-ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರ ಆರೋಗ್ಯ ಚೆನ್ನಾಗಿದ್ದರೆ ಸದೃಢವಾದ ಮತ್ತು ಭವ್ಯ ಭಾರತವನ್ನು ಕಟ್ಟಬಹುದಾಗಿದೆ ಎಂದು ಹೇಳಿದರು.
ಪ್ರಸ್ತುತ ದಿನಮಾನಗಳಲ್ಲಿ ಶುದ್ದವಾದ ಗಾಳಿಗೂ ಕೂಡ ಪರಿತಪಿಸುವಂತಾಗಿದೆ.ಶ್ವಾಸ ನಿಶ್ವಾಸದ ಮೇಲೆ ನಮ್ಮ ಬದುಕು ನಿಂತಿದೆ. ಸರಿಯಾದ ಮಾರ್ಗದರ್ಶನದಲ್ಲಿ ನಾವುಗಳೂ ಯೋಗಾಭ್ಯಾಸ ಮಾಡಿದ್ದೇ ಆದರೆ ಯಾವುದೇ ಮದ್ದಿಲ್ಲದೇ ರೋಗವನ್ನು ಹೋಗಲಾಡಿಸಬಹುದಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಯೋಗದ ಅಭ್ಯಾಸವನ್ನು ಮಾಡಿಕೊಳ್ಳಬೇಕು ಎಂದರು.
ಬಿಜಿಎಸ್ ಗುರುಕುಲ ಶಾಲಾ ಕಾಲೇಜಿನ ಪ್ರಾಂಶುಪಾಲರಾದ ಸುರೇಶ್ ಎಸ್. ಎಚ್. ಮಾತನಾಡುತ್ತ, ಕೇವಲ ಭಾರತವಲ್ಲದೇ ಇಡೀ ವಿಶ್ವದಲ್ಲಿ ಯೋಗಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದರು.
Yoga Day ಮಾತನಾಡುತ್ತಾ,ಯೋಗದಿಂದ ನಮ್ಮ ಆರೋಗ್ಯ ಕಾಪಾಡುವ ಜೊತೆಗೆ ದೇಹ ಮತ್ತು ಮನಸ್ಸನ್ನು ಆರೋಗ್ಯ ವಾಗಿಟ್ಟುಕೊಂಡಾಗ ದಿನನಿತ್ಯದ ಕೆಲಸ-ಕಾರ್ಯಗಳನ್ನು ನಿರೀಕ್ಷೆಯಂತೆ ನಿರ್ವಹಿಸಲು, ಸದಾ ಲವ ಲವಿಕೆಯಿಂದಿರಲು ಸಾಧ್ಯವಾಗಲಿದೆ ಎಂದರು. ಈ ನಿಟ್ಟಿನಲ್ಲಿ ಎಲ್ಲರೂ ಯೋಗಭ್ಯಾಸವನ್ನು ನಿಯಮಿತವಾಗಿ ರೂಢಿಸಿಕೊಳ್ಳುವುದು ಉತ್ತಮ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕರಾದ ಮಾಲತೇಶ್, ಶ್ರೀಮತಿ ಅಶ್ವಿನಿ, ಹಾಗೂ ಶಿಕ್ಷಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Shakti yojana ಸಾರಿಗೆ ಬಸ್” ಶಕ್ತಿ” ಯೋಜನೆ.ಪುರುಷ ಪ್ರಯಾಣಿಕರ ಸಂಖ್ಯೆಯಲ್ಲಿ ತೀವ್ರ ಇಳಿಕೆ.
Shakti yojana ಶಕ್ತಿ ಯೋಜನೆ ಜಾರಿಯಾದ ಬಳಿಕ ರಸ್ತೆ ಸಾರಿಗೆ ನಿಗಮ ಬಸ್ಗಳಲ್ಲಿ ಪುರುಷ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿರುವ ಅಂಶ ಬೆಳಕಿಗೆ ಬಂದಿದೆ. ಇದರಿಂದ ಸಾರಿಗೆ ನಿಗಮಗಳ ದಿನನಿತ್ಯದ ಟಿಕೆಟ್ ಹಣದ ಹರಿವಿನಲ್ಲಿ ತೀವ್ರ ಕೊರತೆಯಾಗಿದೆ. ಇತ್ತ ಶಕ್ತಿ ಯೋಜನೆಗಾಗಿ ಸರ್ಕಾರದಿಂದ ಸಾರಿಗೆ ಸಂಸ್ಥೆಗಳಿಗೆ 5,172 ಕೋಟಿ ರೂ.ಬಾಕಿ ಉಳಿಸಿಕೊಂಡಿದೆ.
ಶಕ್ತಿ ಯೋಜನೆ ಮೂಲಕ ಮಹಿಳೆಯರು ಉಚಿತವಾಗಿ ಪ್ರಯಾಣ ಬೆಳೆಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರ ಸ್ವೀಕಾರ ಮಾಡಿದ ತಕ್ಷಣ ಅನುಷ್ಠಾನ ಮಾಡಿದ ಮೊದಲ ಮಹತ್ವದ ಗ್ಯಾರಂಟಿ ಯೋಜನೆ ಇದಾಗಿದೆ. 11.06.2023ರಿಂದ ಜಾರಿಯಾದ ಮಹಿಳೆಯರಿಗೆ ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ ರಾಜ್ಯದೊಳಗೆ ಉಚಿತ ಪ್ರಯಾಣ ಕಲ್ಪಸುವ ಈ ಯೋಜನೆಯಡಿ ಈವರೆಗೆ 763 ಕೋಟಿ ಉಚಿತ ಟಿಕೆಟ್ ಕೊಡಲಾಗಿದೆ. ಅಂದರೆ ಈವರೆಗೆ ಉಚಿತ ಟಿಕೆಟ್ ಮೌಲ್ಯದ ಮೊತ್ತ 20,047 ಕೋಟಿ ರೂ. ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Shakti yojana ಶುಕ್ರವಾರ ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಗ್ಯಾರಂಟಿ ಪರಿಶೀಲನಾ ಸಭೆಯಲ್ಲಿ ಶಕ್ತಿ ಯೋಜನೆಯ ಪರಿಶೀಲನೆ ನಡೆಸಲಾಯಿತು. ಈ ಸಭೆಯಲ್ಲಿ ಸಾರಿಗೆ ನಿಗಮಗಳ ಅಧಿಕಾರಿಗಳು ಶಕ್ತಿ ಯೋಜನೆಯ ಸ್ಥಿತಿಗತಿಯ ಅಂಕಿಅಂಶವನ್ನು ಸಿಎಂ ಮುಂದಿಟ್ಟಿದ್ದಾರೆ. ಶಕ್ತಿ ಯೋಜನೆಯ ಪ್ರಯಾಣ ವೆಚ್ಚ, ಸರ್ಕಾರದಿಂದ ಬಾಕಿ ಹಣ, ಆದಾಯ ಕೊರತೆ, ಸವಾಲುಗಳ ಬಗ್ಗೆ ಅಂಕಿಅಂಶದೊಂದಿಗೆ ವಿವರಣೆ ನೀಡಿದ್ದಾರೆ.
ಪುರುಷ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಇಳಿಕೆ: ಅಧಿಕಾರಿಗಳು ಸಿಎಂ ಮುಂದೆ ಇಟ್ಟ ದಾಖಲೆಗಳಲ್ಲಿ ಶಕ್ತಿ ಯೋಜನೆ ಜಾರಿಯಾದ ಬಳಿಕ ಪುರುಷ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಕಡಿಮೆಯಾಗಿದೆ ಎಂಬ ಅಂಕಿಅಂಶವನ್ನು ಮುಂದಿಟ್ಟಿದ್ದಾರೆ. ಪುರುಷ ಪ್ರಯಾಣಿಕರ ಸಂಖ್ಯೆ 48% ದಿಂದ 36%ಗೆ ಇಳಿಕೆಯಾಗಿದೆ ಎಂದು ತಿಳಿಸಿದ್ದಾರೆ. ಆ ಮೂಲಕ ಸಾರಿಗೆ ಸಂಸ್ಥೆಗಳ ದೈನಂದಿನ ಕಾರ್ಯಾಚರಣೆಗೆ ನಗದು ಹರಿವಿನ ಕೊರತೆಯಾಗಿದೆ ಎಂದು ತಿಳಿಸಿದ್ದಾರೆ.
ಅಧಿಕಾರಿಗಳು ಸಭೆಯಲ್ಲಿ ನೀಡಿದ ಅಂಕಿಅಂಶದಂತೆ ಶಕ್ತಿ ಯೋಜನೆಯಡಿ 2023-24ರಲ್ಲಿ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು 183.07 ಕೋಟಿಯಾಗಿದೆ. ಅದೇ ಶಕ್ತಿಯೋಜನೇತರ ಪುರುಷ ಪ್ರಯಾಣಿಕರ ಸಂಖ್ಯೆ 167.42 ಕೋಟಿ ಆಗಿದೆ. ಒಟ್ಟು ಪ್ರಯಾಣಿಕರ ಸಂಖ್ಯೆಗೆ 47.77% ಆಗಿದೆ.
2024-25ರಲ್ಲಿ ಶಕ್ತಿ ಯೋಜನೆಯಡಿ 244.65 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದರು. ಅದೇ ಪುರುಷರು 174.97 ಕೋಟಿ ಪ್ರಯಾಣಿಸಿದ್ದಾರೆ. ಅಂದರೆ ಒಟ್ಟು ಪ್ರಯಾಣಿಕರ ಸಂಖ್ಯೆಗೆ 41.70%ಗೆ ಇಳಿಕೆಯಾಯಿತು ಎಂದು ಅಂಕಿಅಂಶ ನೀಡಿದ್ದಾರೆ.
2025-26ರಲ್ಲಿ ಶಕ್ತಿ ಯೋಜನೆಯಡಿ 275.71 ಕೋಟಿ ಮಹಿಳಾ ಪ್ರಯಾಣಿಕರು ಸಂಚರಿಸಿದ್ದಾರೆ. ಅದೇ ಶಕ್ತಿ ಯೋಜನೇತರ ಪುರುಷರು 167.25 ಕೋಟಿ ಪ್ರಯಾಣಿಸಿದ್ದು, ಒಟ್ಟು ಪ್ರಯಾಣಿಕರ ಸಂಖ್ಯೆಗೆ 37%ಗೆ ಇಳಿಕೆಯಾಗಿದೆ. ಪ್ರಸಕ್ತ ವರ್ಷದಲ್ಲಿ ಈವರೆಗೆ ಅದು 36% ಗೆ ಇಳಿಕೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಪುರುಷ ಟಿಕೆಟ್ ಆದಾಯದಲ್ಲಿ ಕೊರತೆ ಏನಿದೆ: ಅಧಿಕಾರಿಗಳು ಸಭೆಯಲ್ಲಿ ನೀಡಿದ ಅಂಕಿಅಂಶದಂತೆ ಶಕ್ತಿ ಯೋಜನೆಯಡಿ 2023-24ರಲ್ಲಿ ಶೂನ್ಯ ಟಿಕೆಟ್ ಮೊತ್ತ 4,380 ಕೋಟಿ ರೂ. ಒಟ್ಟು ಟಿಕೆಟ್ ಮೊತ್ತದ 45.07% ಆಗಿದೆ. ಅದೇ ಪುರುಷರ ಟಿಕೆಟ್ ಮೊತ್ತ 5,338 ಕೋಟಿ ರೂ. ಆಗಿದ್ದು, ಒಟ್ಟು ಟಿಕೆಟ್ ಮೊತ್ತದ 54.93% ಇತ್ತು ಎಂದು ಮಾಹಿತಿ ನೀಡಿದ್ದಾರೆ.
Crop insurance schemes ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಗೆ ಅರ್ಜಿ ಆಹ್ವಾನ
Crop insurance schemes 2026-27ನೇ ಸಾಲಿನ ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯಡಿ ವಿಮೆ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಶಿಕಾರಿಪುರದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.
ಫಸಲು ಬಿಡುವಂತಹ ಅಡಿಕೆ, ಮಾವು, ಕಾಳುಮೆಣಸು ಮತ್ತು ನಾಟಿ ಮಾಡಿರುವಂತಹ ಶುಂಠಿ ಬೆಳೆಗಳಿಗೆ ರೈತರು ವಿಮೆ ಮಾಡಿಸಬಹುದಾಗಿದೆ. ಆಸಕ್ತ ರೈತರು ತಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರ ಗ್ರಾಮ ಒನ್ ಅಥವಾ ಬ್ಯಾಂಕುಗಳಲ್ಲಿ ದಿನಾಂಕ 31-07-2026 ರ ಒಳಗೆ ವಿಮೆ ಕಂತನ್ನು ಪಾವತಿಸಬೇಕಾಗಿ ವಿನಂತಿಸಲಾಗಿದೆ.
ಅಡಿಕೆ: ಪ್ರತಿ ಹೆಕ್ಟೇರ್‌ಗೆ ವಿಮಾ ಮೊತ್ತ ರೂ. 1,28,000 ಆಗಿದ್ದು, ರೈತರು ಪ್ರತಿ ಎಕರೆಗೆ ರೂ. 2560 ಅಥವಾ ಪ್ರತಿ ಗುಂಟೆಗೆ ರೂ. 64 ಪಾವತಿಸಬೇಕು.
Crop insurance schemes ಮಾವು: ಪ್ರತಿ ಹೆಕ್ಟೇರ್‌ಗೆ ವಿಮಾ ಮೊತ್ತ ರೂ. 80,000 ಆಗಿದ್ದು, ರೈತರು ಪ್ರತಿ ಎಕರೆಗೆ ರೂ. 3200 ಅಥವಾ ಪ್ರತಿ ಗುಂಟೆಗೆ ರೂ. 80 ಪಾವತಿಸಬೇಕು.
ಕಾಳುಮೆಣಸು: ಪ್ರತಿ ಹೆಕ್ಟೇರ್‌ಗೆ ವಿಮಾ ಮೊತ್ತ ರೂ. 47,000 ಆಗಿದ್ದು, ರೈತರು ಪ್ರತಿ ಎಕರೆಗೆ ರೂ. 1692 ಅಥವಾ ಪ್ರತಿ ಗುಂಟೆಗೆ ರೂ. 42.30 ಪಾವತಿಸಬೇಕು.
ಶುಂಠಿ: ಪ್ರತಿ ಹೆಕ್ಟೇರ್‌ಗೆ ವಿಮಾ ಮೊತ್ತ ರೂ. 1,30,000 ಆಗಿದ್ದು, ರೈತರು ಪ್ರತಿ ಎಕರೆಗೆ ರೂ. 2600 ಅಥವಾ ಪ್ರತಿ ಗುಂಟೆಗೆ ರೂ. 65 ಪಾವತಿಸಬೇಕು.
ಮೇಲ್ಕಂಡ ಬೆಳೆಗಳನ್ನು ಬೆಳೆದಿರುವ ತಾಲೂಕಿನ ರೈತರು ಈ ಯೋಜನೆಯ ಸದ್ಬಳಕೆ ಮಾಡಿಕೊಳ್ಳಬೇಕು. ವಿಮೆ ಪಾವತಿಸಲು ಜುಲೈ 31 ಕೊನೆಯ ದಿನಾಂಕವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಶಿಕಾರಿಪುರದ ತೋಟಗಾರಿಕೆ ಇಲಾಖೆ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.
