Sunday, September 27, 2026
Sunday, September 27, 2026

Keelambi ತೋಟ ಹೊಲಗದ್ದೆಗಳ ಕೆಲಸಕ್ಕೆ ” RANCHER SUV 5.1 ” ಯಂತ್ರ ಲೋಕಾರ್ಪಣೆ : ಕೀಳಂಬಿ ಅಗ್ರಿಟೆಕ್ ಸಾಧನೆ

Date:

Keelambi ಕೃಷಿಕರು‌ ಈಗ ಆಧುನಿಕವಾಗಿ ಯೋಚಿಸುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಕೃಷಿಗೆ ಫೂರಕ ಯಂತ್ರೋಪಕರಣಗಳ ಅವಶ್ಯಕತೆಯಿದೆ. ಶಿವಮೊಗ್ಗದ
ಪ್ರತಿಷ್ಠಿತ ಕಂಪನಿ ಕೀಳಂಬಿ ಅಗ್ರಿಟೆಕ್ ಇಂಥದೊಂದು ಯಂತ್ರವನ್ನ
ಆವಿಷ್ಕರಿಸಿದೆ.

ಜಮೀನು,ಗದ್ದೆ ತೋಟಗಳಲ್ಲಿ ಮಣ್ಣು,ಗೊಬ್ಬರ, ಬೀಜ, ಕೃಷಿಯ ಸಣ್ಣಪುಟ್ಟ ಪರಿಕರಗಳ ಒಳಾಂಗಣ ಸಾಗಾಣೆ ಈಗ ಅಗತ್ಯವಾಗಿದೆ. ಈ ಶ್ರಮದಾಯಕ ಕೆಲಸಗಳನ್ನ ನಿರ್ವಹಿಸಲು ಕೀಳಂಬಿ ಅಗ್ರಿ ಟೆಕ್
ಒಂದು”ರೋಬೋ ಯಂತ್ರ”ವನ್ನ
ಮಾರುಕಟ್ಟೆಗೆ ಪರಿಚಯಿಸಿದೆ.

ವಿಶೇಷವೆಂದರೆ ಪೆಟ್ರೋಲ್ ಡಿಸೆಲ್ ತುಂಬಿಸಲು ಬಂಕ್ ಗಳಿಗೆ ಅಲೆದಾಡಬೇಕಿಲ್ಲ.. ಕೇವಲ ವಿದ್ಯುತ್ ನಿಂದ ಚಾರ್ಜ್ ಮಾಡುವ ಯಂತ್ರ.

ತಾ. 22 -6-26 ರ ಸೋಮವಾರ ಶಿವಮೊಗ್ಗ ಜಿಲ್ಲೆಯ ಸೂಗೂರಿನಲ್ಲಿ
ಯಂತ್ರದ ಅನಾವರಣ ಮತ್ತು ಪ್ರಾತ್ಯಕ್ಷಿಕೆಯ ನೇರ ಪ್ರಸಾರ
ನಡೆಯಿತು.

Keelambi ರೋಬೋಯಂತ್ರದ ಬಗ್ಗೆ ಕೀಳಂಬಿ ಅಗ್ರಿ ಟೆಕ್ ನ ವ್ಯವಸ್ಥಾಪಕ‌ನಿರ್ದೇಶಕ ರಾಜೇಶ್ ಕೀಳಂಬಿ ಅವರು ಮಾತನಾಡಿದರು.
“ಕೃಷಿಕರ ಅಗತ್ಯ ಮತ್ತು
ಮಾರುಕಟ್ಟೆಯ ಬೇಡಿಕೆ ಆಧರಿಸಿ
ಈ ಯಂತ್ರವನ್ನು
ಅಭಿವೃದ್ಧಿ ಪಡಿಸಲಾಗಿದೆ. ಕೃಷಿಕ್ಷೇತ್ರದ
ಕಾರ್ಯವನ್ನು ಮತ್ತಷ್ಟು ಸುಲಭ ಹಾಗೂ ಪರಿಣಾಮಕಾರಿಯಾಗಿಸುವ
ಸಲುವಾಗಿ ರೈತಸ್ನೇಹಿ‌ ಉತ್ಪನ್ನವನ್ನ ಅಭಿವೃದ್ಧಿಪಡಿಸಿದ್ದೇವೆ ‘ ಎಂದು ಹೇಳಿದರು.

ನಂತರ ಪ್ರಾತ್ಯಕ್ಷಿಕೆ-ಪ್ರದರ್ಶನ ನಡೆಸಲಾಯಿತು. ಈ ಯಂತ್ರದ ಬಹು-ವಿಶೇಷತೆಗಳಾದ ಭಾರಹೊರುವ ಸಾಮರ್ಥ್ಯ, ಬೆಳೆಗಳಿಗೆ ಔಷಧ ಸಿಂಪರಣೆ ಮತ್ತು ಕಳೆ ಕತ್ತರಿಸುವ ಯಂತ್ರಗಳನ್ನ ಜೋಡಿಸುವ ವಿಧಾನಗಳ ಬಗ್ಗೆ ಮಾಹಿತಿ ನೀಡಲಾಯಿತು.

ಸೂಗೂರು ಮತ್ತು ಸುತ್ತಮುತ್ತಲ ರೈತಬಾಂಧವರು ಈ ಯಂತ್ರದ ಕಾರ್ಯಕ್ಷಮತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಉತ್ಪನ್ನದ ಬೆಲೆ ಮತ್ತು ಇತರೆ ಮಾಹಿತಿಗಳನ್ನ ರೈತರಿಗೆ ತಿಳಿಸಲಾಯಿತು. ಅಷ್ಟೇ ಅಲ್ಲದೆ ಖರೀದಿಸುವವರಿಗೆ ವಿಶೇಷ ಆಫರ್ ಗಳನ್ನ ಘೋಷಿಸಲಾಯಿತು.

ಸೂಗೂರಿನಲ್ಲಿ ಇಂಥದೊಂದು ಕೃಷಿಗೆ ನೆರವಾಗುವ ಯಂತ್ರ ಮಾರುಕಟ್ಟೆಗೆ ಬಂದ ಬಗ್ಗೆ ರೈತವರ್ಗ ಅತ್ಯಂತ ಹರ್ಷ ವ್ಯಕ್ತಪಡಿಸಿತು..

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಮಾನವ ದೀರ್ಘಕಾಲ ಸಮತೋಲನದಿಂದ ಬದುಲು ಆಯುರ್ವೇದ ಸಹಕಾರಿ : ಬಿ.ವೈ.ರಾಘವೇಂದ್ರ

B.Y. Raghavendra ಆಯುರ್ವೇದ ಭಾರತದ ಅತ್ಯಂತ ಪ್ರಾಚೀನ ಮತ್ತು ಸಾಂಪ್ರದಾಯಿಕ ವೈದ್ಯಕೀಯ...

B.Y. Raghavendra ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯಕ್ಕೆ ಸಂಸದ ರಾಘವೇಂದ್ರ ಭೇಟಿ: ವಿದ್ಯಾರ್ಥಿಗಳೊಂದಿಗೆ ಸಂವಾದ

B.Y. Raghavendra ​ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ...

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ವಾರ್ಷಿಕ ಮಹಾಸಭೆ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಣೆ

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘದ...