Sunday, September 27, 2026
Sunday, September 27, 2026

Shakti yojana ಸಾರಿಗೆ ಬಸ್” ಶಕ್ತಿ” ಯೋಜನೆ.ಪುರುಷ ಪ್ರಯಾಣಿಕರ ಸಂಖ್ಯೆಯಲ್ಲಿ ತೀವ್ರ ಇಳಿಕೆ.

Date:

Shakti yojana ಶಕ್ತಿ ಯೋಜನೆ ಜಾರಿಯಾದ ಬಳಿಕ ರಸ್ತೆ ಸಾರಿಗೆ ನಿಗಮ ಬಸ್​​ಗಳಲ್ಲಿ ಪುರುಷ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿರುವ ಅಂಶ ಬೆಳಕಿಗೆ ಬಂದಿದೆ.‌ ಇದರಿಂದ ಸಾರಿಗೆ ನಿಗಮಗಳ ದಿನನಿತ್ಯದ ಟಿಕೆಟ್ ಹಣದ ಹರಿವಿನಲ್ಲಿ ತೀವ್ರ ಕೊರತೆಯಾಗಿದೆ. ಇತ್ತ ಶಕ್ತಿ ಯೋಜನೆಗಾಗಿ ಸರ್ಕಾರದಿಂದ ಸಾರಿಗೆ ಸಂಸ್ಥೆಗಳಿಗೆ 5,172 ಕೋಟಿ ರೂ.‌ಬಾಕಿ ಉಳಿಸಿಕೊಂಡಿದೆ.

ಶಕ್ತಿ ಯೋಜನೆ ಮೂಲಕ ಮಹಿಳೆಯರು ಉಚಿತವಾಗಿ ಪ್ರಯಾಣ ಬೆಳೆಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರ ಸ್ವೀಕಾರ ಮಾಡಿದ ತಕ್ಷಣ ಅನುಷ್ಠಾನ ಮಾಡಿದ ಮೊದಲ ಮಹತ್ವದ ಗ್ಯಾರಂಟಿ ಯೋಜನೆ ಇದಾಗಿದೆ.‌ 11.06.2023ರಿಂದ ಜಾರಿಯಾದ ಮಹಿಳೆಯರಿಗೆ ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ ರಾಜ್ಯದೊಳಗೆ ಉಚಿತ ಪ್ರಯಾಣ ಕಲ್ಪಸುವ ಈ ಯೋಜನೆಯಡಿ ಈವರೆಗೆ 763 ಕೋಟಿ ಉಚಿತ ಟಿಕೆಟ್ ಕೊಡಲಾಗಿದೆ.‌ ಅಂದರೆ ಈವರೆಗೆ ಉಚಿತ ಟಿಕೆಟ್ ಮೌಲ್ಯದ ಮೊತ್ತ 20,047 ಕೋಟಿ ರೂ. ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Shakti yojana ಶುಕ್ರವಾರ ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಗ್ಯಾರಂಟಿ ಪರಿಶೀಲನಾ ಸಭೆಯಲ್ಲಿ ಶಕ್ತಿ ಯೋಜನೆಯ ಪರಿಶೀಲನೆ ನಡೆಸಲಾಯಿತು. ಈ ಸಭೆಯಲ್ಲಿ ಸಾರಿಗೆ ನಿಗಮಗಳ ಅಧಿಕಾರಿಗಳು ಶಕ್ತಿ ಯೋಜನೆಯ ಸ್ಥಿತಿಗತಿಯ ಅಂಕಿಅಂಶವನ್ನು ಸಿಎಂ ಮುಂದಿಟ್ಟಿದ್ದಾರೆ.‌ ಶಕ್ತಿ ಯೋಜನೆಯ ಪ್ರಯಾಣ ವೆಚ್ಚ, ಸರ್ಕಾರದಿಂದ ಬಾಕಿ ಹಣ, ಆದಾಯ ಕೊರತೆ, ಸವಾಲುಗಳ ಬಗ್ಗೆ ಅಂಕಿಅಂಶದೊಂದಿಗೆ ವಿವರಣೆ ನೀಡಿದ್ದಾರೆ.

ಪುರುಷ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಇಳಿಕೆ: ಅಧಿಕಾರಿಗಳು ಸಿಎಂ ಮುಂದೆ ಇಟ್ಟ ದಾಖಲೆಗಳಲ್ಲಿ ಶಕ್ತಿ ಯೋಜನೆ ಜಾರಿಯಾದ ಬಳಿಕ ಪುರುಷ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಕಡಿಮೆಯಾಗಿದೆ ಎಂಬ ಅಂಕಿಅಂಶವನ್ನು ಮುಂದಿಟ್ಟಿದ್ದಾರೆ. ಪುರುಷ ಪ್ರಯಾಣಿಕರ ಸಂಖ್ಯೆ 48% ದಿಂದ 36%ಗೆ ಇಳಿಕೆಯಾಗಿದೆ ಎಂದು ತಿಳಿಸಿದ್ದಾರೆ. ಆ ಮೂಲಕ ಸಾರಿಗೆ ಸಂಸ್ಥೆಗಳ ದೈನಂದಿನ ಕಾರ್ಯಾಚರಣೆಗೆ ನಗದು ಹರಿವಿನ ಕೊರತೆಯಾಗಿದೆ ಎಂದು ತಿಳಿಸಿದ್ದಾರೆ.

ಅಧಿಕಾರಿಗಳು ಸಭೆಯಲ್ಲಿ ನೀಡಿದ ಅಂಕಿಅಂಶದಂತೆ ಶಕ್ತಿ ಯೋಜನೆಯಡಿ 2023-24ರಲ್ಲಿ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು 183.07 ಕೋಟಿಯಾಗಿದೆ. ಅದೇ ಶಕ್ತಿಯೋಜನೇತರ ಪುರುಷ ಪ್ರಯಾಣಿಕರ ಸಂಖ್ಯೆ 167.42 ಕೋಟಿ ಆಗಿದೆ. ಒಟ್ಟು ಪ್ರಯಾಣಿಕರ ಸಂಖ್ಯೆಗೆ 47.77% ಆಗಿದೆ.

2024-25ರಲ್ಲಿ ಶಕ್ತಿ ಯೋಜನೆಯಡಿ 244.65 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದರು. ಅದೇ ಪುರುಷರು 174.97 ಕೋಟಿ ಪ್ರಯಾಣಿಸಿದ್ದಾರೆ. ಅಂದರೆ ಒಟ್ಟು ಪ್ರಯಾಣಿಕರ ಸಂಖ್ಯೆಗೆ 41.70%ಗೆ ಇಳಿಕೆಯಾಯಿತು ಎಂದು ಅಂಕಿಅಂಶ ನೀಡಿದ್ದಾರೆ.

2025-26ರಲ್ಲಿ ಶಕ್ತಿ ಯೋಜನೆಯಡಿ 275.71 ಕೋಟಿ ಮಹಿಳಾ ಪ್ರಯಾಣಿಕರು ಸಂಚರಿಸಿದ್ದಾರೆ. ಅದೇ ಶಕ್ತಿ ಯೋಜನೇತರ ಪುರುಷರು 167.25 ಕೋಟಿ ಪ್ರಯಾಣಿಸಿದ್ದು, ಒಟ್ಟು ಪ್ರಯಾಣಿಕರ ಸಂಖ್ಯೆಗೆ 37%ಗೆ ಇಳಿಕೆಯಾಗಿದೆ. ಪ್ರಸಕ್ತ ವರ್ಷದಲ್ಲಿ ಈವರೆಗೆ ಅದು 36% ಗೆ ಇಳಿಕೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಪುರುಷ ಟಿಕೆಟ್ ಆದಾಯದಲ್ಲಿ ಕೊರತೆ ಏನಿದೆ: ಅಧಿಕಾರಿಗಳು ಸಭೆಯಲ್ಲಿ ನೀಡಿದ ಅಂಕಿಅಂಶದಂತೆ ಶಕ್ತಿ ಯೋಜನೆಯಡಿ 2023-24ರಲ್ಲಿ ಶೂನ್ಯ ಟಿಕೆಟ್ ಮೊತ್ತ 4,380 ಕೋಟಿ ರೂ. ಒಟ್ಟು ಟಿಕೆಟ್ ಮೊತ್ತದ 45.07% ಆಗಿದೆ. ಅದೇ ಪುರುಷರ ಟಿಕೆಟ್ ಮೊತ್ತ 5,338 ಕೋಟಿ ರೂ. ಆಗಿದ್ದು, ಒಟ್ಟು ಟಿಕೆಟ್ ಮೊತ್ತದ 54.93% ಇತ್ತು ಎಂದು ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಮಾನವ ದೀರ್ಘಕಾಲ ಸಮತೋಲನದಿಂದ ಬದುಲು ಆಯುರ್ವೇದ ಸಹಕಾರಿ : ಬಿ.ವೈ.ರಾಘವೇಂದ್ರ

B.Y. Raghavendra ಆಯುರ್ವೇದ ಭಾರತದ ಅತ್ಯಂತ ಪ್ರಾಚೀನ ಮತ್ತು ಸಾಂಪ್ರದಾಯಿಕ ವೈದ್ಯಕೀಯ...

B.Y. Raghavendra ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯಕ್ಕೆ ಸಂಸದ ರಾಘವೇಂದ್ರ ಭೇಟಿ: ವಿದ್ಯಾರ್ಥಿಗಳೊಂದಿಗೆ ಸಂವಾದ

B.Y. Raghavendra ​ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ...

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ವಾರ್ಷಿಕ ಮಹಾಸಭೆ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಣೆ

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘದ...