Sunday, March 1, 2026
Sunday, March 1, 2026
Home Blog Page 301

Karnataka Rakshana Vedike ಜಿಲ್ಲಾ ಕರವೇ ಆಧ್ಯಕ್ಷರಾಗಿ ಮಂಜುನಾಥ್,ಸಹ-ಕಾರ್ಯದರ್ಶಿಯಾಗಿ ಎಸ್.ಮಧು ನೇಮಕ

0

Karnataka Rakshana Vedike ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರನ್ನಾಗಿ ಮಂಜುನಾಥ್, ರಾಜ್ಯ ಸಹ ಕಾರ್ಯದರ್ಶಿಯನ್ನಾಗಿ ಎಸ್. ಮಧು ಅವರನ್ನು ನೇಮಕ ಮಾಡಿ, ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ ಅವರು ಆದೇಶಿಸಿದ್ದಾರೆ. ಇವರಿಗೆ ಕಾರ್ಯಕಾರಿ ಮಂಡಳಿ ಅಭಿನಂದಿಸಿದೆ.

Minority Welfare Department ಶಿವಮೊಗ್ಗ ಜಿಲ್ಲೆಯ ಅಲ್ಪ ಸಂಖ್ಯಾತರ ಮೆಟ್ರಿಕ್ ಪೂರ್ವ ಬಾಲಕ/ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆಆನ್ ಲೈನ್ ಅರ್ಜಿ‌ ಆಹ್ವಾನ

0

Minority Welfare Department ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು 2025-26 ಸಾಲಿನಲ್ಲಿ ಮೆಟ್ರಿಕ್ ಪೂರ್ವ ಬಾಲಕ/ಬಾಲಕಿಯರ ವಿದ್ಯಾರ್ಥಿನಿಲಯದ ಪ್ರವೇಶಕ್ಕೆ ವಿದ್ಯಾರ್ಥಿಗಳಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ.
ಆಸಕ್ತರು ಅರ್ಜಿಯನ್ನು ರಾಜ್ಯ ವಿದ್ಯಾರ್ಥಿ ನಿಲಯದ ವೆಬ್‌ಸೈಟ್ https://shp.karnataka.gov.in ರಲ್ಲಿ ಜೂನ್ 25 ರೊಳಗಾಗಿ ಸಲ್ಲಿಸುವಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಧಿಕಾರಿಗಳ ಕಚೇರಿ, ಶಿವಮೊಗ್ಗ – 08182-220206, ಶಿವಮೊಗ್ಗ ವಿಸ್ತರಣಾಧಿಕಾರಿಗಳು- 9482711634, ಸಾಗರ ವಿಸ್ತರಣಾಧಿಕಾರಿಗಳು-9110278031, ಶಿವಮೊಗ್ಗ ಜಿಲ್ಲಾ ಮಾಹಿತಿ ಕೇಂದ್ರ-7676888388, ತಾಲೂಕು ಮಾಹಿತಿ ಕೇಂದ್ರಗಳಾದ ಭದ್ರಾವತಿ-9538853680, ತೀರ್ಥಹಳ್ಳಿ-8861982835, ಶಿಕಾರಿಪುರ-7829136724, ಸಾಗರ-7338222907, ಸೊರಬ-9513815513, ಹೊಸನಗರ-9008447029 ಗಳನ್ನು ಸಂಪರ್ಕಿಸುವುದು.

District Fisheries Department ಮೀನುಗಾರಿಕೆ ವಿವಿಧ ಘಟಕಗಳಿಗೆ ಸಹಾಯಧನಕ್ಕಾಗಿ‌ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

0

District Fisheries Department ಜಿಲ್ಲಾ ಮೀನುಗಾರಿಕೆ ಇಲಾಖೆಯು 2022-23 ರಿಂದ 2024-25 ಸಾಲಿನವರೆಗೆ ಮರು ಹಂಚಿಕೆಯಾಗಿರುವ ಪ್ರಧಾನ ಮಂತ್ರಿ ಮತ್ಯ್ಸಸಂಪದ ಮತ್ತು ನೀಲಿಕ್ರಾಂತಿ ಯೋಜನೆಯಡಿ ವಿವಿಧ ಘಟಕಗಳಿಗೆ ಸಹಾಯಧನಕ್ಕಾಗಿ ಆಸಕ್ತರಿಂದ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಮೇ 31ರವರೆಗೆ ವಿಸ್ತರಿಸಲಾಗಿದೆ.
ಮೀನು ಕೃಷಿಕೊಳಗಳ ನಿರ್ಮಾಣ, ಮೀನುಕೃಷಿ ಕೊಳ ನಿರ್ಮಾಣ ಮಾಡಿ ಮೀನುಕೃಷಿ ಕೈಗೊಂಡವರಿಗೆ ಹೂಡಿಕೆಗಳ ವೆಚ್ಚದ ಮೇಲೆ ಸಹಾಯ, ಯಾಂತ್ರೀಕೃತ ದೋಣಿ ಖರೀದಿಗೆ ಸಹಾಯ, ಮೀನುಮರಿ ಪಾಲನಾ ಘಟಕ ನಿರ್ಮಾಣದ ಬಗ್ಗೆ ಸಹಾಯ, ಸೈಕಲ್ ವಿತ್ ಐಸ್‌ಬಾಕ್ಸ್, ಮಧ್ಯಮ ವರ್ಗದ ಅಲಂಕಾರಿಕ ಸಾಕಾಣಿಕೆ ಘಟಕ (ಪ.ಜಾ) ಮತ್ತು ಹೊಸತಾದ ಮೀನುಮಾರಾಟದ ಕಿಯೋಸ್ಕ್ ನಿರ್ಮಾಣಕ್ಕಾಗಿ ಸಹಾಯ ಧನ ನೀಡಲಾಗುತ್ತಿದ್ದು, ಘಟಕಗಳ ಉಪಯೋಜನೆಗಳನ್ನು ಪಡೆಯಲು ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಶೇ. 40 ರಷ್ಟು ಹಾಗೂ ಪ.ಜಾ/ಪ.ಪಂ. ಮತ್ತು ಮಹಿಳಾ ಫಲಾನುಭವಿಗಳಿಗೆ ಶೇ. 60 ರಷ್ಟು ಸಹಾಯಧನ ನೀಡಲಾಗುವುದು.
District Fisheries Department ಆಸಕ್ತರು ನಿಗದಿತ ನಮೂನೆ ಅರ್ಜಿಯನ್ನು ಆಯಾ ತಾಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಪೂರ್ಣ ದಾಖಲೆಗಳೊಂದಿಗೆ ಮೇ 31 ರೊಳಗಾಗಿ ಸಲ್ಲಿಸುವಂತೆ ಮೀನುಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Vijay Tiranga Yatra Shimoga ಶಿವಮೊಗ್ಗ ಬಿಜೆಪಿಯ ವಿಜಯ ತಿರಂಗಾ ಯಾತ್ರೆಗೆ ಮಳೆರಾಯನ ಕೃಪೆ

0

Vijay Tiranga Yatra Shimoga ಶಿವಮೊಗ್ಗದಲ್ಲಿ ನಡೆಯುತ್ತಿರುವ ಜಿಜೆಪಿ ವಿಜಯ ತಿರಂಗ ಯಾತ್ರೆಯು ಶಿವಮೊಗ್ಗ ನಗರದ ರಮಣಶ್ರೇಷ್ಠಿ ಪಾರ್ಕ್ ನಿಂದ ಆರಂಭವಾಯಿತು. ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ೭೫೦ ಅಡಿಯ ತಿರಂಗವನ್ನು ಹೊತ್ತು ಜಯಘೋಷಗೈಯುತ್ತಾ ನೆಹರೂ‌ ಮಾರ್ಗದಲ್ಲಿ ಸಾಗಿ ಬಂದ ದೃಶ್ಯ‌ ಕಣ್ತುಂಬಿಕೊಳ್ಳುವಂತಿತ್ತು. ಮಳೆಯ ನಡುವೆಯೂ ತಿರಂಗ ಹಿಡಿದು ಯಾತ್ರೆಯಲ್ಲಿ ಹೊರಟ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ತಮ್ಮ ದೇಶಪ್ರೇಮ ಮೆರೆದರು.

Vijay Tiranga Yatra Shimoga ನಗರದ ಗಾಂಧಿಬಜಾರ್, ಬಿಹೆಚ್ ರಸ್ತೆ, ನೆಹರು ರಸ್ತೆ ಮೂಲಕ ಯಾತ್ರೆಯು ಗೋಪಿ ವೃತ್ತ ತಲುಪಿತು ಗೋಪಿ ವೃತ್ತದಲ್ಲಿ ಹಿಂದಿ ಹಾಡಿಗೆ ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು ಮಳೆರಾಯನನ್ನ ಲೆಕ್ಕಿಸಲೇ ಇಲ್ಲ. ಯಾತ್ರೆಯಲ್ಲಿ ಒಂದೇಸಮನೆ ಮಳೆ ಸುರುದರೂ ಸಾವಿರಾರು ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಜಾಥಾದಲ್ಲಿ ನಡೆದು‌ಬಂದರು. ಯಾತ್ರೆಯಲ್ಲಿ ಸಂಸದ ಬಿವೈ ರಾಘವೇಂದ್ರ, ಶಾಸಕ ಎಸ್ ಎನ್ ಚನ್ನಬಸಪ್ಪ, ಪರಿಷತ್ ಸದಸ್ಯರುಗಳಾದ ಡಿಎಸ್ ಅರುಣ್ ಹಾಗೂ ಡಾ. ಧನಂಜಯ ಸರ್ಜಿ ಪಾಲ್ಗೊಂಡಿದ್ದರು. ಸಂಸದ ಬಿವೈ ರಾಘವೇಂದ್ರ, ಶಾಸಕ ಚನ್ನಬಸಪ್ಪ, ಡಿ ಎಸ್ ಅರುಣ್ ಹಾಗೂ ಧನಂಜಯ ಸರ್ಜಿ ಅವರು
ದೇಶ ಭಕ್ತಿ ಗೀತೆಗಳಿಗೆ ಹೆಜ್ಜೆ ಹಾಕಿದ ಪರಿ ವಿಶೇಷವಾಗಿತ್ತು.

Shimoga News ಮೇ 25. ವಿದುರ- ವಿಧವೆ ಹಾಗೂ ಪರಿತ್ಯಕ್ತರ ಪುನರ್ವಿವಾಹ ಸಮಾಲೋಚನಾ ಸಭೆ

0

Shimoga News ಶಿವಮೊಗ್ಗ, ಮೇ-20 “ಮರಳಿ ಯತ್ನವ ಮಾಡು ಮರಳಿ ಯತ್ನವ ಮಾಡು” ಎಂಬ ತತ್ವಪದದಂತೆ ಶಿವಮೊಗ್ಗ ನಗರದ ಶ್ರೀ ಕಲಾ ಕೌಶಲ್ಯಾಭಿವೃದ್ಧಿ ಕೇಂದ್ರದಲ್ಲಿ ಇದೇ ಮೇ-25 ರಂದು ಭಾನುವಾರ ಸವ೯ ಜಾತಿ-ಜನಾಂಗಗಳಿಗೆ ಸೇರಿದ ವಿಧುರ-ವಿಧವೆ ಪುನರ್ವಿವಾಹ ಸಮಾಲೋಚನೆ ಸಭೆ ಏಪ೯ಡಿಸಲಾಗಿದೆ.
ಇದೊಂದು ಮಾನವೀಯ ಸಂಬಂಧ ಹಾಗು ಸಾಮಾಜಿಕ ಕಳಕಳಿಯ ಹೊಸ ದಿಕ್ಕಿನ ಕಡೆಗಿನ ಪ್ರಯತ್ನವಾಗಿದ್ದು ನಾಡಿನ ನಾನಾ ಕಡೆಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಅಂದು ಬೆಳಿಗ್ಗೆ 11=00 ಗಂಟೆಗೆ ವಿವಿಧೆಡೆಗಳಿಂದ ವಿಧುರ-ವಿಧವೆ ಹಾಗು ಪರಿತ್ಯಕ್ತರು ಭಾಗವಹಿಸಲಿದ್ದಾರೆ.
Shimoga News ಆಸಕ್ತರು ಆರ್.ಟಿ. ನಟರಾಜ್ ಶ್ರೀ ಕಲಾ ಕೌಶಲ್ಯಾಭಿವೃದ್ಧಿ ಕೇಂದ್ರ, ಒಂದನೆ ಮಹಡಿ, ಜಿಲ್ಲಾ ನಿವೃತ್ತ ನೌಕರರ ಸಂಘದ ಕಟ್ಟಡ, ಪ್ರೆಸ್ ಕ್ಲಬ್ ಎದುರು, ಆರ್.ಟಿ.ಒ. ಆಫೀಸ್ ರಸ್ತೆ, ಜಿಲ್ಲಾಧಿಕಾರಿಗಳ ಕಚೇರಿ ಆವರಣ, ಶಿವಮೊಗ್ಗ. ಮೊಬೈಲ್ : 9448143165/9449552635 ಇವರಲ್ಲಿ ಹೆಸರು ನೊಂದಾಯಿಸಿಕೊಂಡು ಪೋಸ್ಟ್ ಕಾಡ್೯ ಸೈಜ್ ಫೋಟೋ, ಆಧಾರ್ ಕಾಡ್೯, ಇತರೆ ಸಮಂಜಸ ದಾಖಲೆಗಳ ಸಹಿತ ಕಾಯ೯ಕ್ರಮದಲ್ಲಿ ಭಾಗವಹಿಸಬಹುದು.

BHARAVATHI NEWS ತಾಳೆಬೆಳೆ ಪ್ರದೇಶ ವಿಸ್ತರಣೆಗೆ ಅರ್ಜಿ ‌ಆಹ್ವಾನ. ಭದ್ರಾವತಿ ತೋಟಗಾರಿಕಾ ಕಚೇರಿ ಪ್ರಕಟಣೆ

0

BHARAVATHI NEWS ಭದ್ರಾವತಿ ತಾಲೂಕು ತೋಟಗಾರಿಕೆ ಇಲಾಖೆಯು 2025-26ನೇ ಸಾಲಿನ ಕೇಂದ್ರ ಪುರಸ್ಕೃತ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ – ತಾಳೆ ಬೆಳೆ ಯೋಜನೆಯಡಿ ಹೊಸದಾಗಿ ತಾಳೆ ಬೆಳೆಯನ್ನು ಬೆಳೆಯಲು ಇಚ್ಛಿಸುವ ರೈತರಿಗೆ ಉಚಿತವಾಗಿ ತಾಳೆ ಸಸಿಗಳನ್ನು ವಿತರಿಸಿ ಮುಂದಿನ 3 ವರ್ಷಗಳವರೆಗೆ ನೆಟ್ಟ ಸಸಿಗಳ ನಿರ್ವಹಣೆಗಾಗಿ ಸಹಾಯಧವನ್ನು ನೀಡುತ್ತಿದ್ದು, ಆಸಕ್ತ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತರಿಂದ ಅರ್ಜಿ ಆಹ್ವಾನಿಸಿದೆ.
ಆಸಕ್ತರು ನಿಗದಿತ ಅರ್ಜಿಯನ್ನು ಶಿಕಾರಿಪುರ ತಾಲೂಕು ತೋಟಗಾರಿಕೆ ಇಲಾಖೆಯ ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಸೂಕ್ತ ದಾಖಲೆಗಳೊಂದಿಗೆ ಮೇ 31ರೊಳಗಾಗಿ ಸಲ್ಲಿಸುವಂತೆ ಭದ್ರಾವತಿ ಹಿರಿಯ ಸಹಾಯ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
BHARAVATHI NEWS ಹೆಚ್ಚಿನ ಮಾಹಿತಿಗಾಗಿ ಭದ್ರಾವತಿ ಹಿರಿಯ ಸಹಾಯ ತೋಟಗಾರಿಕೆ ನಿರ್ದೇಶಕರ ಕಚೇರಿಯನ್ನು ಖುದ್ದಾಗಿ ಸಂಪರ್ಕಿಸುವುದು.

Shivamogga Police ಅಪರಿಚಿತ ಮೃತವ್ಯಕ್ತಿಯ ಪತ್ತೆಗೆ ಸಹಕರಿಸಲು ಶಿವಮೊಗ್ಗ ಪೊಲೀಸ್ಮನವಿ

0

Shivamogga Police ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಅಶೋಕ ಸರ್ಕಲ್ ಹತ್ತಿರದ ಕ್ರಿಶ್ಚಿಯನ್ ಸಮುದಾಯದ ಸ್ಮಶಾನ ಎದುರಿನ ರಸ್ತೆಯ ಪಕ್ಕ ಪ್ರಜ್ಞೆಯಿಲ್ಲದೆ ಮಲಗಿದ್ದ 35-38 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯನ್ನು ಸಾರ್ವಜನಿಕರ ಸಹಾಯದಿಂದ ಆಂಬ್ಯುಲೆನ್ಸ್ ಮೂಲಕ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೇ 15 ರಂದು ಮೃತಪಟ್ಟಿರುತ್ತಾನೆ.
ಮೃತ ವ್ಯಕ್ತಿಯ ಚಹರೆ 5.5 ಅಡಿ ಎತ್ತರ, ಉದ್ದನೆಯ ಮುಖ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ, ಮೃತನ ಎದೆಯ ಮಧ್ಯಭಾಗದಲ್ಲಿ ಕಪ್ಪು ಮಚ್ಚೆಯಿರುತ್ತದೆ. ಬಲಗೈನ ಮೇಲೆ ಮಂಜಮ್ಮ ಮತ್ತು ಎಡಗೈ ಮೇಲೆ ಜಯ ಹಾಗೂ ದಿನ ಎಂಬ ಹಚ್ಚೆ ಗುರುತು ಇರುತ್ತದೆ. ಎದೆಯ ಬಲಭಾಗದಲ್ಲಿ ಮತ್ತು ಹುಬ್ಬಿನ ಮೇಲೆ ಹಳೆಯ ಗಾಯದ ಗುರುರು ಇರುತ್ತದೆ. ಮೈಮೇಲೆ ಗ್ರೇ ಕಲರ್ ಟೀಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ.
Shivamogga Police ಈ ಮೃತ ವ್ಯಕ್ತಿಯ ವಾರಸುದಾರರು ಇದ್ದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ದೂ.ಸಂ.: 08182-261414 / 9916882544 ನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

MESCOM ಮೇ23. ಶಿವಮೊಗ್ಗ ಮೆಸ್ಕಾಂ ಉಪವಿಭಾಗ-2 ಕಛೇರಿಯಲ್ಲಿ ಜನಸಂಪರ್ಕ ಸಭೆ

0

MESCOM ಮೆಸ್ಕಾಂ ಶಿವಮೊಗ್ಗ ನಗರ ಉಪವಿಭಾಗ – 2 ಕಛೇರಿಯಲ್ಲಿ ಮೇ 23 . ರಂದು ಬೆಳಿಗ್ಗೆ 11.00 ರಿಂದ 01.00 ರವರೆಗೆ ಜನಸಂಪರ್ಕ ಸಭೆ ನಡೆಯಲಿದೆ. ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲ್ಲಿದು, ಈ ಸಭೆಯಲ್ಲಿ ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುವುದರಿಂದ ಈ ಅವಕಾಶವನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ ;9448289449.

Guarantee scheme ಜನ ಸಾಮಾನ್ಯರ ಬದುಕಿಗೆ ಗ್ಯಾರಂಟಿ ಯೋಜನೆಗಳು ಬೆಳಕಾಗಿವೆ

0

Guarantee scheme ಕರ್ನಾಟಕ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳು ನಾಡಿನ ಜನತೆಯ ಬದುಕಿಗೆ ಬೆಳಕಾಗಿವೆ. ಮಹಿಳೆಯರು ಮತ್ತು ಬಡ, ಹಿಂದುಳಿದ ಜನತೆಗೆ ಸ್ವಾವಲಂಬಿ ಬದುಕನ್ನು ಕಟ್ಟಿಕೊಡುವಲ್ಲಿ ಈ ಯೋಜನೆಗಳು ಯಶಸ್ವಿಯಾಗಿವೆ.
ಪ್ರಸ್ತುತ ರಾಜ್ಯ ಸರ್ಕಾರ ಜಾರಿಗೆ ಬಂದು ಮೇ ೨೦ ಕ್ಕೆ ಎರಡು ವರ್ಷ ತುಂಬುತ್ತಿರುವ ಹಿನ್ನೆಲೆ ಐತಿಹಾಸಿಕ ಗ್ಯಾರಂಟಿ ಯೋಜನೆಗಳ ಮೂಲಕ ಪ್ರಗತಿಯತ್ತ ಜಿಲ್ಲೆ, ರಾಜ್ಯ ಯಶಸ್ವಿಯಾಗಿ ಹೆಜ್ಜೆ ಇಡುತ್ತಿದ್ದು, ಈ ಹೆಜ್ಜೆ ಗುರುತುಗಳ ಮೇಲೆ ಬೆಳಕು ಚೆಲ್ಲುವ ಒಂದು ನುಡಿ ನೋಟ ಇದಾಗಿದೆ.
ರಾಜ್ಯದಲ್ಲಿ ಅತ್ಯಂತ ಯಶಸ್ಸು ಕಂಡಿರುವ ಮತ್ತು ಮಹಿಳೆಯರನ್ನು ಸ್ವಾವಲಂಬಿಗೊಳಿಸಿ ಅವರಲ್ಲಿ ಆತ್ಮ ವಿಶ್ವಾಸ ತುಂಬುತ್ತಿರುವ ಗೃಹಲಕ್ಷ್ಮಿ ಯೋಜನೆ ಹಸಿವು ಮುಕ್ತಗೊಳಿಸಿ, ನೆಮ್ಮದಿಯ ಬದುಕಿಗೆ ದಾರಿಮಾಡಿಕೊಟ್ಟಿರುವ ‘ಅನ್ನಭಾಗ್ಯ’, ದುಬಾರಿ ಯುಗದಲ್ಲಿ ಜನಸಾಮಾನ್ಯರ ಕೈಹಿಡಿದು ನಿಟ್ಟಿಸಿರುವ ಬಿಡುವಂತೆ ಮಾಡಿರುವ ‘ಗೃಹಜ್ಯೋತಿ’, ಮಹಿಳೆಯರು ಧೈರ್ಯವಾಗಿ, ನಿರಾತಂಕವಾಗಿ ರಾಜ್ಯಾದ್ಯಂತ ಪ್ರಯಾಣಿಸಲು ಅವಕಾಶವಿತ್ತಿರುವ ಮಹಿಳೆಯರ ನಿಜವಾದ ಬಲ ‘ಶಕ್ತಿ’ ಯೋಜನೆ ಹಾಗೂ ಯುವಕರ ಪಾಲಿನ ಆಶಾಕಿರಣವಾಗಿರುವ ‘ಯುವ ನಿಧಿ’ ರಾಜ್ಯದ ಪ್ರಗತಿಯಲ್ಲಿ ತಮ್ಮದೇ ಆದ ವಿಶಿಷ್ಟ ಕೊಡುಗೆಯನ್ನು ನೀಡಿರುವುದಕ್ಕೆ ಫಲಾನುಭವಿಗಳ ಅನುಭವವೇ ಸಾಕ್ಷಿಯಾಗಿದೆ. ರಾಜ್ಯಾದ್ಯಂತ ಪ್ರತಿ ತಿಂಗಳು ಕೋಟ್ಯಾಂತರ ಫಲಾನುಭವಿಗಳು ಈ ಯೋಜನೆಯ ಫಲ ಪಡೆದು ಆತ್ಮ ವಿಶ್ವಾಸದಿಂದ ಬದುಕು ಕಟ್ಟಿಕೊಳ್ಳುತ್ತಿದ್ದಾರೆ.
ಹಸಿವಿನ ಚಿಂತೆ ದೂರ ಮಾಡಿದ ‘ಅನ್ನಭಾಗ್ಯ’
Guarantee scheme ಬಡತನದ ಬೇಗೆಯಲ್ಲಿದ್ದ ನಮಗೆ ಅನ್ನಭಾಗ್ಯ ನಿಜಕ್ಕೂ ಅನ್ನದೇವರಾಗಿದೆ. ನನ್ನ ಗಂಡ ಅನಾರೋಗ್ಯದಿಂದಾಗಿ ಬಹಳ ಹಿಂದೆಯೇ ತೀರಿ ಹೋಗಿದ್ದು ಕೂಲಿ ಮಾಡಿ ಜೀವನ ನಡೆಸುತ್ತಿದ್ದೇನೆ. ಚಿಕ್ಕ ಚಿಕ್ಕ ಇಬ್ಬರು ಹೆಣ್ಣು ಮಕ್ಕಳನ್ನು ನೋಡಿಕೊಳ್ಳುವುದು ಬಹಳ ಕಷ್ಟವಾಗಿತ್ತು. ಇದೀಗ ಮಕ್ಕಳು ಡೊಡ್ಡವರಾಗುತ್ತಿದ್ದಾರೆ. ಒಬ್ಬ ಮಗಳು ಓದುತ್ತಿದ್ದಾಳೆ. ಮೊದಲೆಲ್ಲ ಕುಟುಂಬ ನಿರ್ವಹಣೆ ಬಗ್ಗೆ ತುಂಬಾ ಚಿಂತೆಯಾಗುತ್ತಿತ್ತು. ಅನ್ನಭಾಗ್ಯ ಯೋಜನೆ ಜಾರಿಯಾದಾಗಿನಿಂದ ಹಸಿವಿನ ಚಿಂತೆ ದೂರವಾಗಿ ನೆಮ್ಮದಿಯ ನಿಟ್ಟಿಸಿರುವ ಬಿಡುವಂತಾಗಿದೆ. ಇದರಿಂದ ನನ್ನ ಆರೋಗ್ಯ ಸ್ಥಿತಿ ಹಾಗೂ ಮನೆಯ ಪರಿಸ್ಥಿತಿ ಕೂಡ ಸುಧಾರಣೆಯಾಗಿದೆ. ಅನ್ನಭಾಗ್ಯ ನಿಜಕ್ಕೂ ನಮ್ಮಂತವರ ಮನೆಗಳ ಭಾಗ್ಯವಾಗಿದೆ. ಅದಕ್ಕೆ ನಾನು ಸರ್ಕಾರಕ್ಕೆ ಋಣಿಯಾಗಿದ್ದೇನೆ ಎಂದು ಫಲಾನುಭವಿ
ಗುತ್ಯಮ್ಮ, (ಕೊಮ್ಮನಾಳು, ಶಿವಮೊಗ್ಗ ತಾಲ್ಲೂಕು) ಹೇಳಿದ್ದಾರೆ.

Klive Special Article ಭಯೋತ್ಪಾದನೆ‌ ಜಾಗತಿಕ ಜಾಗೃತಿಗೆಸರ್ವಸಮ್ಮತ ಸರ್ವಪಕ್ಷ‌ ನಿಯೋಗ.

0

Klive Special Article ಪೆಹಲ್ಗಾಂ ದುರಂತದ ನಂತರ ನಡೆದ ಬೆಳವಣಿಗೆಗಳಲ್ಲಿ
ಮೂರು ಸಂಗತಿಗಳು ಸುದ್ದಿಮನೆಯನ್ನ ಬೆಚ್ಚಗೆ ಮತ್ತು ಹಿತಗೊಳಿಸುವಂತೆ ಮಾಡಿವೆ.
ಭಾರತೀಯ ಚಲನಚಿತ್ರರಂದ ಖ್ಯಾತ ಚಿತ್ರಸಾಹಿತಿ‌,ಕವಿ ಜಾವೇದ್ ಅಖ್ತರ್, ಸಂಸದ ಓವೈಸಿ ಮತ್ತು ಹಿರಿಯ ಸಂಸದ ಶಶಿ ತರೂರ್
ನೀಡಿರುವ ಹೇಳಿಕೆಗಳು ಮಾಧ್ಯಮದ ಹಣೆ‌ಮನ್ನಣೆಗೊಳಗಾಗಿವೆ.

ಕಾಶ್ಮೀರಿಗಳು ಭಾರತಕ್ಕೆ ನಿಷ್ಠರಾಗಿದ್ದು, ಪಾಕಿಸ್ತಾನ ಈಗಾಲಾದರೂ ಕಾಶ್ಮೀರ ಮತ್ತು ಕಾಶ್ಮೀರದ ನಿವಾಸಿಗಳನ್ನು ನೆಮ್ಮದಿಯಿಂದ ಇರಲು ಬಿಡಬೇಕು. ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ಮೂಲಕ ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನ ತನ್ನ ಮಾನ ಮರ್ಯಾದೆಯನ್ನು ಹರಾಜು ಹಾಕಿಕೊಂಡಿದೆ”
ಎಂದು ಜಾವೇದ್‌ ಅಖ್ತರ್‌ ಪಾಕ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಪಾಕಿಸ್ತಾನಕ್ಕೆ ಹೋಗುವೆಯೋ,? ನರಕಕ್ಕೆ ಹೋಗುವೆಯೋ‌? ಎಂಬ ಆಯ್ಕೆ ಕೇಳಿದರೆ ನಾನು ನರಕವನ್ನೇ ಆಯ್ಕೆ ಮಾಡಿಕೊಳ್ಳುವೆ ಎಂದು ಜಾವೇದಗ ಅಖ್ತರ್ ಹೇಳಿದ್ದಾರೆ.

ಇದು ಪತ್ರಿಕೆಯೊಂದರಲ್ಲಿ‌ ಪ್ರಮುಖವಾಗಿ ಕಂಡ ಸುದ್ದಿ.

ಮುಸ್ಲೀಂ ಸಮುದಾಯದ ಗಣ್ಯ ವ್ಯಕ್ತಿಯೋರ್ವರ ಹೇಳಿಕೆ ಗಮನಾರ್ಹವಾಗಿದೆ.
ಏಕೆಂದರೆ ಎಲ್ಲಾ ಮುಸ್ಲೀಮರೂ‌‌ ಪಾಕಿಸ್ತಾನ ಪರವಾದಿಗಳು ಎಂಬ
ನೆರೇಟಿವ್ ಗೆ ಇದು ವಿರುದ್ಧವಾಗಿದೆ.

ಬಹಳ ನಿಖರವಾಗಿ‌
ಮುಸ್ಲೀಂ ಪರವಾಗಿಯೇ ಮಾತನಾಡಿ ಇಡೀ ದೇಶದ ಗಮನ ಸೆಳೆದಿರುವ‌ ಸಂಸದ ಓವೈಸಿ ಅವರು‌ ಐಎಂಎಫ್ ,ಪಾಕಿಸ್ತಾಕ್ಕೆ ಸಾಲ ಮಂಜೂರು ಮಾಡಿದಾಗ‌ ಐಎಂಎಫ್ ಗೆ ” ಇಂಟರ್ ನ್ಯಾಷನಲ್‌ ಮಿಲಿಟೆಂಟ್ ಫಂಡ್ ” ಎಂಬುದಾಗಿ ಟೀಕಿಸಿದ್ದಾರೆ. ಅಂದರೆ ಸದ್ಯದಲ್ಲಿ ಉಗ್ರವಾದ‌ ಬೆಂಬಲಿಸುವ‌ ಪಾಕಿಸ್ತಾನದ ಜಾಯಮಾನಕ್ಕೆ ಓವೈಸಿ‌ ನೆಗೆಟಿವ್ ಆಗಿದ್ದಾರೆ.
ಓವೈಸಿ ಮತ್ತು‌ ಶಶಿ ತರೂರ್ ಅವರನ್ನ ‌ಕೇಂದ್ರ ಸರ್ಕಾರವು
ಯೋಜಿಸಿರುವ
ಐದು ರಾಷ್ಟ್ರಗಳಿಗೆ ತೆರಳಬೇಕಾದ ಸರ್ವಪಕ್ಷ ನಿಯೊಗದಲ್ಲಿ‌ ಸೇರ್ಪಡೆಮಾಡಿದೆ.
ಈರ್ವರೂ‌ ಖುಷಿಯಿಂದ ಒಪ್ಪಿಕೊಂಡಿದ್ದಾರೆ.
ಎಲ್ಲದಕ್ಕೂ ಕಾಲಬರಬೇಕು‌ ಎಂಬ ಮಾತನ್ನ ನಾವು ಭಾರತೀಯ‌ ಆಧ್ಯಾತ್ಮದಲ್ಲಿ ಕೇಳಿದ್ದೇವೆ. ಅದರಂತೆ ಪಸ್ತುತ ಪಾಕಿಸ್ತಾನ ತರಬೇತಿ‌ ನೀಡಿದ ಉಗ್ರರು ಮಾಡಿರುವ ಪೆಹಲ್ಗಾಂ ನರಬಲಿ ಪ್ರಕರಣವನ್ನು ಭಾರತೀಯ ಮುಸ್ಲೀಮರೂ ವಿರೋಧಿಸಿ ಮುಖ ಕಹಿ ಮಾಡುತ್ತಾರೆ.
ಇದು ಕಾಲ ನೀಡಿದ ಉತ್ತರವೇ ಆಗಿದೆ.

Klive Special Article  ಸಣ್ಣ ರಾಜಕೀಯ ಚುರುಮುರಿ ಎಂದರೆ
ಕಾಂಗ್ರೆಸ್ ತನ್ನ ಸದಸ್ಯರನ್ನ‌ ಸರ್ವಪಕ್ಷ‌ ನಿಯೋಗಕ್ಕೆ ಶಿಫಾರಸು ಮಾಡಿದಾಗ ಅದು ಶಶಿ ತರೂರ್ ಅವರ ಹೆಸರನ್ನ ನಮೂದಿಸಿಲ್ಲ.. ಕಾಂಗ್ರೆಸ್ ಪಕ್ಷದ ಒಳಗೆ ಮತ್ತು‌‌ ಹೊರಗೆ
ಇದೊಂದು‌ ದೊಡ್ಡ
‘ರಿಮಾರ್ಕ್ ‘ ಆಗಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ‌ ವ್ಯವಹರಿಸಬೇಕಾದ ಎಲ್ಲ‌ ನಾಜೂಕುಗಳನ್ನ
ಕತಲಾಮಲಕ ಮಾಡಿಕೊಂಡಿರುವ ಶಶಿ ತರೂರ್ ಬಗ್ಗೆ ಕಾಂಗ್ರೆಸ್ ತಾಳಿರುವ ನಿರ್ಲಕ್ಷ್ಯ
ಜಗಜ್ಜಾಹೀರಾಗಿದೆ.

ಪಕ್ಷದ ಅಧ್ಯಕ್ಷ. ಮಲ್ಲಿಕಾರ್ಜುನ ಖರ್ಗೆ ಮತ್ತು‌ “ಲೋವಿನಾ” ( LoP)
ರಾಹುಲ್ ಗಾಂಧಿ ಇಲ್ಲಿಯವರೆಗೂ ತುಟಿಬಿಚ್ಚಿಲ್ಲ. ಜಯರಾಂ ರಮೇಶ್ ಮಾತ್ರ ಪಕ್ಷದ ಪಟ್ಟಿಗೆ ಬೆಲೆ ನೀಡದ್ದಕ್ಕೆ ಒಂದಿಷ್ಟು ಅತೃಪ್ತಿ ಹೊರಹಾಕಿದ್ದಾರೆ.